ದಿ‌ ಮ್ಯಾಜಿಕ್ ಆಫ್ ಥಿಂಕಿಂಗ ಬಿಗ – The Magic of Thinking Big Book Summary in Kannada – Magic of Thinking Big

You are currently viewing ದಿ‌ ಮ್ಯಾಜಿಕ್ ಆಫ್ ಥಿಂಕಿಂಗ ಬಿಗ – The Magic of Thinking Big Book Summary in Kannada – Magic of Thinking Big

ಹಾಯ್ ಗೆಳೆಯರೇ, ನಾನು ಇವತ್ತಿನ ಎಪಿಸೋಡನಲ್ಲಿ David Schwartzರವರು ಬರೆದ The Magic of Thinking Big ಬುಕನಲ್ಲಿನ ಕೆಲವೊಂದಿಷ್ಟು ಇಂಪಾರಟಂಟ & ಇಂಟರೆಸ್ಟಿಂಗ ವಿಷಯಗಳನ್ನು ಶೇರ್‌ ಮಾಡುತ್ತಿರುವೆ. ಲೆಟ್ಸ ಬಿಗಿನ…

Friends, there is a magic in thinking big. ದೊಡ್ಡದಾಗಿ ಯೋಚಿಸುವುದರಲ್ಲಿ ಒಂದು ಮ್ಯಾಜಿಕ್ಕಿದೆ. ಏಕೆಂದರೆ ನೀವು ನಿಮ್ಮ ಯೋಚನೆಯಿರುವ ತನಕವಷ್ಟೇ ಹೋಗುತ್ತೀರಿ‌. ನೀವು ನಿಮ್ಮ ಯೋಚನೆಯನ್ನು ಮೀರಿ ಹೋಗಲು ಸಾಧ್ಯವಿಲ್ಲ. ನಿಮ್ಮ ಯೋಚನೆ ಎಷ್ಟಿರುತ್ತೋ ನಿಮ್ಮ ಹ್ಯಾಪಿನೆಸ, ವೆಲ್ಥ, ಹೆಲ್ಥ ಕೂಡ ಅಷ್ಟೇ ಇರುತ್ತದೆ. ಎಲ್ಲರೂ ದೊಡ್ಡದಾಗಿ ಯೋಚಿಸಲ್ಲ. ಹೀಗಾಗಿ ಎಲ್ಲರೂ ದೊಡ್ಡ ಮಟ್ಟಕ್ಕೆ ಬೆಳೆಯಲ್ಲ. ನೀವು ಸಣ್ಣದಾಗಿ ಯೋಚಿಸಿದರೆ ನೀವು ಸಣ್ಣವರಾಗೇ ಉಳಿಯುತ್ತೀರಿ, ದೊಡ್ಡದಾಗಿ ಯೋಚಿಸಿದರೆ ದೊಡ್ಡ ಮಟ್ಟಕ್ಕೆ ಬೆಳೆಯುತ್ತೀರಿ. ಸೋ, ದೊಡ್ಡದಾಗಿ ಯೋಚಿಸಿ. ಥಿಂಕ ಬಿಗ್. ಇದೇ ಮ್ಯಾಜಿಕ್ಕಾಗಿದೆ. The magic of Thinking Big ಬುಕನಿಂದ ನಾನು ಕಲಿತ ಲೆಸನಗಳು ಇಂತಿವೆ.

Book Link : Click HereThe Magic of Thinking Big Book Summary in Kannada

ಲೆಸನ – 1 : ನಿಮಗೆ ಸಾಧ್ಯವಿದೆ ಎಂದು ನೀವು ನಂಬಿದರೆ ನಿಮಗದು ಸಾಧ್ಯವಾಗುತ್ತದೆ. (Believe you can succeed and you will)

ನಿಮ್ಮನ್ನು ನೀವು ನಂಬುವುದು ಸಕ್ಸೆಸನ ಮೊದಲ ಸ್ಟೇಪ ಆಗಿದೆ.‌ ಪ್ರತಿಯೊಬ್ಬರು ಶ್ರೀಮಂತರಾಗಲು ಬಯಸುತ್ತಾರೆ, ಸಕ್ಸೆಸಫುಲ್ಲಾಗಲು ಬಯಸುತ್ತಾರೆ, ದೊಡ್ಡ ಮನೆ ಕಾರು ತೆಗೆದುಕೊಳ್ಳುವ ಕನಸು ಕಾಣುತ್ತಾರೆ. ಆದರೆ ನಾವು ಬಯಸಿದ್ದು ನಮಗೆ ಒಂದಲ್ಲ ಒಂದಿನ ಸಿಕ್ಕೇ ಸಿಗುತ್ತೆ ಎಂಬ ನಂಬಿಕೆ ಅವರಿಗೆ ಇರುವುದಿಲ್ಲ. ನೀವು ಸಕ್ಸೆಸಫುಲ್ಲಾಗುತ್ತೀರಿ ಎಂದು ನೀವು ನಂಬಿದರೆ ಮಾತ್ರ ನೀವು ಸಕ್ಸೆಸಫುಲ್ಲಾಗುತ್ತೀರಿ. ನಂಬಿಕೆ ಬಹಳಷ್ಟು ಮುಖ್ಯವಾಗಿದೆ. ನಂಬಿಕೆ ‌ನಿಮಗೆ ನೀವು ಸಕ್ಸೆಸಫುಲ್ಲಾಗಲು ಬೇಕಾದ ಪವರ್, ಸ್ಕೀಲ ಹಾಗೂ ಎನರ್ಜಿಯನ್ನು ಕೊಡುತ್ತದೆ. ನಿಮಗೆ ನಂಬಿಕೆಯಿದ್ದರೆ ನಿಮಗೆ ಎಲ್ಲವೂ ಸಾಧ್ಯ, ನಂಬಿಕೆ ‌ಇರದಿದ್ದರೆ ಏನು ಸಾಧ್ಯವಿಲ್ಲ. ನೀವು ಡೌಟಗೆ ಒಳಗಾದರೆ ನಿಮ್ಮ ಮೈಂಡ ನಿಮ್ಮ ಡೌಟಗೆ ಸಂಬಂಧಿಸಿದಂತೆ ನೆಪಗಳನ್ನು ಹುಡುಕುತ್ತದೆ. ನೀವು ಫೇಲಾಗುತ್ತೀರಿ. ಡೌಟ ಪಟ್ರೆ ನೀವು ಸೋಲುತ್ತೀರಿ, ವಿಕ್ಟರಿ ಬಗ್ಗೆ ಯೋಚಿಸಿದರೆ ಸಕ್ಸೆಸಫುಲ್ಲಾಗುತ್ತೀರಿ. ನಿಮ್ಮನ್ನು ನೀವು ನಂಬಿದಾಗ ನಿಮ್ಮ ಲೈಫಲ್ಲಿ ಒಳ್ಳೇ ಸಂಗತಿಗಳಾಗಲು ಸ್ಟಾರ್ಟಾಗುತ್ತವೆ.‌ ಒಳ್ಳೆದಾಗುತ್ತೆ ಅಂತಾ ಕೆಲಸ ಮಾಡಿದರೆ ಎಲ್ಲ ಒಳ್ಳೆಯದೇ ಆಗುತ್ತದೆ. ಕೆಟ್ಟದಾಗುತ್ತೆ ಅಂತಾ ಕೊರಗುತ್ತಾ ಕುಂತರೆ ಕೆಟ್ಟದ್ದೇ ಆಗುತ್ತೆ…

ಲೆಸನ್ – 2 : ನಂಬಿಕೆಯನ್ನು ಬೆಳೆಸಿಕೊಳ್ಳುವುದು ಹೇಗೆ? How to develop the power of belief?

ನೀವು ನೀವೆಂದುಕೊಂಡ ಕೆಲಸ‌ ಆಗುತ್ತೆ ಅಂತಾ ನಂಬಿದರೆ ‌ನಿಮ್ಮ‌ ಮೈಂಡ ಆ ಕೆಲಸವನ್ನು ಮಾಡಲು ದಾರಿ ಹುಡುಕುತ್ತದೆ. ಪ್ರಾಬ್ಲಮ ಬಂದಾಗ ಫೇಲಿವರ ಬಗ್ಗೆ ಥಿಂಕ ಮಾಡಬೇಡಿ, ಸಕ್ಸೆಸ ಬಗ್ಗೆ ಥಿಂಕ ಮಾಡಿ. ನಾನು ಸೋಲುವೆ ಎಂದು ಯೋಚಿಸುವ ಬದಲು ನಾನು ಗೆಲ್ಲಬಲ್ಲೆ, ಗೆದ್ದೆ ಗೆಲ್ಲುವೆ ಎಂದುಕೊಳ್ಳಿ. ನಾನು ಬೆಟರ ಆಗಿರುವೆ ಎಂದು ನಿಮಗೆ ನೀವೇ ಪದೇಪದೇ‌ ರಿಮೈಂಡ ಮಾಡಿಕೊಳ್ಳಿ‌. ನಿಮ್ಮ ‌ಸಕ್ಸೆಸನ ಸೈಜ ನಿಮ್ಮ ನಂಬಿಕೆಯ ಸೈಜ ಮೇಲೆ ಡಿಸೈಡಾಗುತ್ತದೆ.‌ ಸೋ‌ ದೊಡ್ಡದಾಗಿ ಥಿಂಕ ಮಾಡಿ. Big Ideas, Big Plans and Big Success ಈ ಫಾರ್ಮುಲಾವನ್ನು ನೆನಪಿಡಿ.

ಲೆಸನ – 3 : ಫೇಲಿವರನ ರೋಗವನ್ನು ಗುಣಪಡಿಸಿಕೊಳ್ಳಿ (Cure Yourself the Disease of Failure)

ಪ್ರತಿ ರೋಗಕ್ಕೆ ಒಂದು ಕಾರಣವಿರುವಂತೆ ಪ್ರತಿ ವೈಫಲ್ಯಕ್ಕೂ ಒಂದು ಕಾರಣವಿರುತ್ತದೆ. ಅನಸಕ್ಸೆಸಫುಲ ಜನರ ಬಳಿ ಪ್ರಾಬ್ಲಮ ಕ್ರಿಯೆಟಿಂಗ ಮೈಂಡ ಇರುತ್ತದೆ. ಅದು ಬರೀ ನೆಪಗಳನ್ನು ಹೇಳುತ್ತದೆ. ಆದರೆ ಸಕ್ಸೆಸಫುಲ ಜನರತ್ರ ಪ್ರಾಬ್ಲಮ ಸಾಲ್ವಿಂಗ ಮೈಂಡ ಇರುತ್ತದೆ. ಇದು ನೆಪಗಳನ್ನು ಹೇಳಲ್ಲ. ನೀವು ಸಕ್ಸೆಸಫುಲ್ಲಾಗಬೇಕೆಂದರೆ ಈ ನೆಪ ಹೇಳುವ ರೋಗದಿಂದ ಹೊರಬರಬೇಕು. ನೆಪಗಳನ್ನು ಹೇಳುವುದನ್ನು ನಿಲ್ಲಿಸಬೇಕು‌.

ಒಂದ್ಸಲ ನೆಪ ಹೇಳಲು ಸ್ಟಾರ್ಟ ಮಾಡಿದರೆ ಅದು ಚಟವಾಗುತ್ತದೆ. ಆ ಚಟವೇ ನಿಮ್ಮನ್ನು ಹಾಳು ಮಾಡುತ್ತದೆ. ಹೆಲ್ತ ಸರಿಯಿಲ್ಲ, ಎಜ್ಯುಕೇಷನ ಇಲ್ಲ, ಬಹಳಷ್ಟು ವಯಸ್ಸಾಗಿದೆ, ಇಲ್ಲ ಸಣ್ಣ ವಯಸ್ಸಿದೆ ಎಂಬ ನೆಪಗಳನ್ನು ಬಿಟ್ಟು ಬಿಡಿ. ನೆಪ ಹೇಳಿ ಜಾರಿಕೊಳ್ಳುವುದು ಒಂದು ರೋಗವಾಗಿದೆ‌‌. ಈ ರೋಗವನ್ನು ಸರಿಪಡಿಸಿಕೊಳ್ಳಿ. ನೀವು ಹೇಳಿದ ನೆಪ ನಿಮ್ಮ ಸಬಕಾನ್ಸಿಯಸ್ ಮೈಂಡಲ್ಲಿ ಫೀಡಾಗುತ್ತದೆ. ಮುಂದೊಂದು ದಿನ ಅದೇ ನಿಜವಾಗುತ್ತದೆ. ಉದಾಹರಣೆಗೆ ; ನನ್ನ ಮೂಡ ಸರಿಯಿಲ್ಲ, ನನಗೆ ಹುಷಾರಿಲ್ಲ, ನನಗೆ ಒಳ್ಳೆ ಮೈಂಡಿಲ್ಲ, ನನಗೆ ಟ್ಯಾಲೆಂಟಿಲ್ಲ, ನನ್ನ ಕಥೆ ಬೇರೆಯಿದೆ, ನನಗೆ ಲಕ್ ಇಲ್ಲ ಅಂತೆಲ್ಲ ನೀವು ಹೇಳಿದರೆ ಮುಂದೊಂದು ದಿನ ಇದೇ ನಿಜವಾಗುತ್ತದೆ.

ಈ ನೆಪ ಹೇಳುವ ಚಟವನ್ನು ಸಾಯಿಸಿ. ನಿಮ್ಮ ಬ್ರೇನ ಪವರನ್ನು ಅಂಡರೆಸ್ಟಿಮೇಟ ಮಾಡಿ ಬೇರೆಯವರ ಪವರನ್ನು ಓವರೆಸ್ಟಿಮೇಟ ಮಾಡಬೇಡಿ. ನಿಮ್ಮನ್ನು ನೀವು ಅಂಡರೆಸ್ಟಿಮೇಟ ಮಾಡಿಕೊಳ್ಳಬೇಡಿ. ಗುಡ್ ಎಫರ್ಟ್ಸ ಹಾಕಿದರೆ ಗುಡ್ ರಿಜಲ್ಟಗಳು ಬರುತ್ತವೆ. ಸೋ ಕಾನ್ಫಿಡೆನ್ಸನ್ನು ಬೆಳೆಸಿಕೊಳ್ಳಿ, ಭಯವನ್ನು ಸಾಯಿಸಿ. ನೆಪ ಹೇಳುವ ರೋಗದಿಂದ ಹೊರಬನ್ನಿ…

ಲೆಸನ – 4 : ದೊಡ್ಡದಾಗಿ ಯೋಚಿಸುವುದೇಗೆ? How to think big?

ನಮ್ಮ ಮೈಂಡ ಚಿತ್ರಗಳಲ್ಲಿ ಯೋಚಿಸುತ್ತದೆ, ಶಬ್ದಗಳಲ್ಲಲ್ಲ.‌ ಸೋ ನಾವು ದೊಡ್ಡದಾಗಿ ಯೋಚಿಸಬೇಕೆಂದರೆ ನಾವು ನಮ್ಮ ಮೈಂಡಲ್ಲಿ ಪೋಜಿಟಿವ, ಫಾರವರ್ಡ ಲೂಕ್ಕಿಂಗ, ಆಪ್ಟಿಮಿಸ್ಟಿಕ ಚಿತ್ರಗಳನ್ನು ಕ್ರಿಯೆಟ ಮಾಡಬೇಕು. ದೊಡ್ಡದಾಗಿ ಯೋಚಿಸಬೇಕೆಂದರೆ ನಾವು ಯಾವಾಗಲೂ ಪೋಜಿಟಿವ ಮೆಂಟಲ ಇಮೇಜಸಗಳನ್ನು ಕ್ರಿಯೆಟ ಮಾಡಬಲ್ಲ ಮಾತುಗಳನ್ನು ಆಡಬೇಕು.

ಉದಾಹರಣೆಗೆ ; ನಾನು ಸಂಪೂರ್ಣವಾಗಿ ಸೋತಿಲ್ಲ, ಇನ್ನೂ ಚಾನ್ಸಿದೆ, ಟ್ರಾಯ ಮಾಡುವೆ, ಬಿಜನೆಸ್ಸಲ್ಲಿ ಲಾಸ ಆಗೋದು ಕಾಮನ, ಮುಂದೆ ಲಾಭ ಬರುತ್ತದೆ, ಇನ್ನೂ ಬಹಳಷ್ಟು ಅಪಾರ್ಚುನಿಟಿಗಳಿವೆ, ನನಗೆ ಗುಡ್ ಟ್ಯಾಲೆಂಟ್‌ ಹಾಗೂ ಸ್ಕೀಲ್ಸಗಳಿವೆ, ಎಲ್ಲವೂ ಒಳ್ಳೆಯದೇ ಆಗುತ್ತದೆ ಇತ್ಯಾದಿ.

ಈ ರೀತಿಯ ಪೋಜಿಟಿವ ಮಾತುಗಳು ನಮ್ಮ ಮೈಂಡಲ್ಲಿ ಪೋಜಿಟಿವ ಇಮೇಜಗಳನ್ನ ಕ್ರಿಯೆಟ ಮಾಡುತ್ತವೆ. ನಂತರ ಮೈಂಡ ಇದನ್ನು ನಮ್ಮ ಸಬಕಾನ್ಸಿಯಸ ಮೈಂಡಗೆ ಸೆಂಡ ಮಾಡುತ್ತದೆ‌. ಆಗ ನಾವು ದೊಡ್ಡದಾಗಿ ಯೋಚಿಸುತ್ತೇವೆ‌. ಯಾರಾದರೂ ನಿಮಗೆ ಹೇಗಿದ್ದೀರಿ ಅಂತಾ ಕೇಳಿದರೆ ಗ್ರೇಟ ಸೂಪರ ಫೈನ ಅಂತಾ ಹೇಳಿ‌‌. ನಿಮ್ಮ ‌ಪೋಜಿಟಿವ ಪಾಯಿಂಟ್ಸಗಳನ್ನು ಲಿಸ್ಟ ಔಟ ಮಾಡಿ. ಪೋಜಿಟಿವ ಆ್ಯಟಿಟ್ಯೂಡನ್ನು ಬೆಳೆಸಿಕೊಳ್ಳಿ. ಎಲ್ಲ ಸಿಚ್ಯುವೇಷನಗಳನ್ನು ಪೋಜಿಟಿವ ಆಗಿ ಹ್ಯಾಂಡಲ ಮಾಡಿ. ನೀವು ಯೋಚಿಸುವುದಕ್ಕಿಂತ ನೀವು ಬೆಟರ ಆಗಿರುವಿರಿ. ಬಿಗ್, ಬ್ರೈಟ, ಚೀಯರಫುಲ ವರ್ಡ್ಸಗಳನ್ನು ಯುಜ ಮಾಡಿ. ನಿಮಗೆ ಖುಷಿ, ಗೆಲುವು, ಭರವಸೆ ತಂದು ಕೊಡುವ ಶಬ್ದಗಳನ್ನು ಬಳಸಿ. ನಿಮ್ಮ ವಿಜನನ್ನು ವಿಶಾಲವಾಗಿಸಿ. ಬೇರೆಯವರ ಲೈಫಲ್ಲಿ ವ್ಯಾಲೂ ಆ್ಯಡ ಮಾಡಿ, ನಿಮ್ಮ ಲೈಫಿಗೂ ವ್ಯಾಲೂ ಆ್ಯಡ ಮಾಡಿ. ದೊಡ್ಡದಾಗಿ ಯೋಚಿಸಿ ದೊಡ್ಡ ಮಟ್ಟಕ್ಕೆ ಬೆಳೆಯಿರಿ.

ಲೆಸನ – 5 : ಕ್ರಿಯೆಟಿವ್ವಾಗಿ ಯೋಚಿಸುವುದು ಹೇಗೆ? How to think and Dream creatively?

ನೀವು ಮಾಡುತ್ತೀರುವ ಕೆಲಸ ನಿಮಗೆ ಸಾಧ್ಯವಿದೆ ಅಂತಾ ನಂಬಿ‌. ನೀವು ನಿಜವಾಗಿಯೂ ನಂಬಿದಾಗ ನಿಮ್ಮ ಮೈಂಡ ಅದನ್ನು ಮಾಡಲು ದಾರಿಗಳನ್ನು ಹುಡುಕುತ್ತದೆ. ನೀವು ಇಮಪಾಸಿವಲ ಎಂದುಕೊಂಡರೆ ನಿಮ್ಮ ಮೈಂಡ ಅದನ್ನು ಪ್ರೂವ ಮಾಡಲು ನೆಪಗಳನ್ನು ಹುಡುಕುತ್ತದೆ. ಅದೇ ನೀವು ಪಾಸಿಬಲ್ ಎಂದುಕೊಂಡರೆ ನಿಮ್ಮ ಮೈಂಡ ಅದನ್ನು ನಿಜವಾಗಿಸಲು ದಾರಿಗಳನ್ನು ಹುಡುಕುತ್ತದೆ. ಸೋ ಹೊಸ ಐಡಿಯಾಗಳನ್ನು ಹುಡುಕಿ. ನನ್ನನ್ನು ನಾನು ಹೇಗೆ ಇಂಪ್ರೂವ ಮಾಡಿಕೊಳ್ಳಬಹುದು ಎಂದು ಯೋಚಿಸಿ. ಕ್ರಿಯೆಟಿವ್ವಾಗಿ ಯೋಚಿಸಿ, ಅದ್ಭುತ ರಿಜಲ್ಟಗಳು ನಿಮಗೆ ಸಿಗುತ್ತವೆ.

ಲೆಸನ – 6 : ನೀವು ಯೋಚಿಸಿದಂತೆ ನೀವಾಗುತ್ತೀರಿ : You are what you think you are.

ನಿಮ್ಮ ಥಿಂಕಿಂಗ ನಿಮ್ಮ ಆ್ಯಟಿಟ್ಯೂಡ ಹಾಗೂ ಪರ್ಸನಾಲಿಟಿಯನ್ನು ಡಿಸೈಡ ಮಾಡುತ್ತದೆ. ನಿಮ್ಮನ್ನು ನೀವು ವೀಕ್ ಎಂದುಕೊಂಡರೆ ನೀವು ವೀಕಾಗುತ್ತೀರಿ, ಸ್ಟ್ರಾಂಗ ಎಂದುಕೊಂಡರೆ ನೀವು ಸ್ಟ್ರಾಂಗಾಗುತ್ತೀರಿ. ನೀವು ನಿಮ್ಮೊಂದಿಗೆ ಹೇಗೆ ವರ್ತಿಸುತ್ತೀರಿ ಎಂಬುದರ ಮೇಲೆ ಬೇರೆಯವರು ನಿಮ್ಮೊಂದಿಗೆ ಹೇಗೆ ವರ್ತಿಸುತ್ತಾರೆ ಎಂಬುದು ಡಿಸೈಡಾಗುತ್ತದೆ.

ಉದಾಹರಣೆಗೆ ; ನಿಮಗೆ ಬೇರೆಯವರಿಂದ ರೆಸ್ಪೆಕ್ಟ ಬೇಕಾಗಿದ್ದರೆ ನಿಮಗೆ ನೀವು ರೆಸ್ಪೆಕ್ಟ ಕೊಡಲು ಸ್ಟಾರ್ಟ ಮಾಡಿ. ನಿಮ್ಮ ಸಮಯದ ಜೊತೆಗೆ ಬೇರೆಯವರ ಸಮಯಕ್ಕೂ ಮಹತ್ವ ಕೊಡಿ. ಎಷ್ಟು ಅವಶ್ಯಕತೆ ಇದೆಯೋ ಅಷ್ಟೇ ಮಾತನಾಡಿ. ಯುಜಲೆಸ ವಿಷಯಗಳನ್ನು ಇಗ್ನೋರ ಮಾಡಿ. ಬೇರೆಯವರಿಗೆ ಬಹಳಷ್ಟು ಅವೇಲೆಬಲ ಆಗಬೇಡಿ, ಬಹಳಷ್ಟು ಅಟೆನಷನ ಕೊಡಬೇಡಿ. ನಿಮಗೆ ನಿಮ್ಮ ‌ಕೆಲಸ‌ ಮುಖ್ಯ ಎಂಬುದನ್ನು ನೆನಪಿಡಿ. ನಿಮ್ಮ ‌ಥಿಂಕಿಂಗನ್ನು ಅಪಗ್ರೇಡ ಮಾಡಿ.‌

ಲೆಸನ 7 : ನಿಮ್ಮ ವಾತಾವರಣವನ್ನು ಮ್ಯಾನೇಜ ಮಾಡಿ, ಫಸ್ಟ ಕ್ಲಾಸ ಆಯ್ಕೆ ಮಾಡಿ. Manage your Environment Go first class

ಹೇಗೆ ನೀವು ಏನು ತಿನ್ನುತ್ತೀರಿ ಎಂಬುದು ನಿಮ್ಮ ಬಾಡಿ ಮೇಲೆ‌ ಎಫೆಕ್ಟ ಮಾಡುತ್ತದೆಯೋ ಅದೇ ರೀತಿ ನೀವು ಯಾವ ವಾತಾವರಣದಲ್ಲಿ ಇರುತ್ತೀರಿ ಎಂಬುದು ನಿಮ್ಮ ಮೈಂಡ ಮೇಲೆ ಎಫೆಕ್ಟ ಮಾಡುತ್ತದೆ. ಸೋ ನಿಮ್ಮ ವಾತಾವರಣವನ್ನು ಸರಿಯಾಗಿ ‌ಮ್ಯಾನೇಜ ಮಾಡಿ. ಒಳ್ಳೇ ಜನರೊಂದಿಗೆ, ಸಕ್ಸೆಸಫುಲ್ ಜನರೊಂದಿಗೆ ಫ್ರೆಂಡಶೀಪ‌ ಮಾಡಿ, ಅವರಿಂದ‌ ಅಡ್ವೈಜಗಳನ್ನು ತೆಗೆದುಕೊಳ್ಳಿ. ನಿಮ್ಮ ವಾತಾವರಣ ನಿಮಗೆ ಅನುಕೂಲವಾಗಿ ವರ್ತಿಸಬೇಕು, ಪ್ರತಿಕೂಲವಾಗಿ ಅಲ್ಲ. ಸಿಲ್ಲಿ ಜನರ ಸಿಲ್ಲಿ ವಿಚಾರಗಳು ನಿಮ್ಮ ಗ್ರೇಟ ಥಿಂಕಿಗ ಮೇಲೆ ಕೆಟ್ಟ‌ ಪ್ರಭಾವ ಬೀರದಂತೆ ನೋಡಿಕೊಳ್ಳಿ. ಯಾವಾಗಲೂ ಫಸ್ಟ ಕ್ಲಾಸ ಜನರನ್ನು, ಫಸ್ಟ ಕ್ಲಾಸ ವಸ್ತುಗಳನ್ನು ಆಯ್ಕೆ‌‌ ಮಾಡಿ.

ಲೆಸನ – 8 : ಸೋಲನ್ನು ಗೆಲುವಾಗಿ ಪರಿವರ್ತಿಸುವುದು ಹೇಗೆ? How to convert Defeat into Victory?

ಸೋತಾಗ ಸೋಲಿನಿಂದ ಪಾಠ ಕಲಿಯಿರಿ. ಮುಂದಿನ ಗೆಲುವಿನ ತಯಾರಿ ಸ್ಟಾರ್ಟ ಮಾಡಿ. ಧೈರ್ಯವನ್ನು ಕಳೆದುಕೊಳ್ಳಬೇಡಿ. ನಿಮ್ಮ ತಪ್ಪುಗಳನ್ನು, ವೀಕನೆಸಗಳನ್ನು ನೀವೇ ಪತ್ತೆ ಹಚ್ಚಿ ಮತ್ತು ಅವುಗಳನ್ನು ಕರೆಕ್ಟ ಮಾಡಿಕೊಳ್ಳಿ. ನಿಮ್ಮ ಸೋಲಿಗೆ ಬೇರೆಯವರನ್ನು ಇಲ್ಲವೇ ಲಕ್ಕನ್ನು ಬ್ಲೇಮ ಮಾಡಬೇಡಿ.‌ ನಿಮ್ಮ ಗೋಲಗಳೊಂದಿಗೆ ನೀವಿರಿ, ಗೋಲಗಳನ್ನು ‌ಬಿಟ್ಟು ದೂರ ಓಡಬೇಡಿ. ಸೋಲು ಅಂತ್ಯವಲ್ಲ, ಇದು ಗೆಲುವಿನ ಪಯಣದ ಆರಂಭ ಎಂಬುದನ್ನು ಸದಾ ನೆನಪಿಡಿ. ನಿಮ್ಮ ಗೋಲಗಳನ್ನು ಬಳಸಿಕೊಂಡು ಲೈಫಲ್ಲಿ ಗ್ರೋ ಆಗಿ. ಪ್ರತಿ ಕೆಟ್ಟ ಪರಿಸ್ಥಿತಿಗೆ ಎರಡು ಸೈಡಗಳಿರುತ್ತವೆ. ಒಂದು ಗುಡ್ ಸೈಡಾದರೆ ಮತ್ತೊಂದು ಬ್ಯಾಡ ಸೈಡ‌. ಗುಡ್ ಸೈಡನ್ನು ಎಫೆಕ್ಟಿವ್ವಾಗಿ ಯುಜ ಮಾಡಿ ಬ್ಯಾಡ ಸೈಡನ್ನು ಇಗ್ನೋರ ಮಾಡಿ. ಹೊಸ ಹೋಪನೊಂದಿಗೆ ಹೊಸ ದಿಶೆಯಲ್ಲಿ ಟ್ರಾಯ ಮಾಡಿ.

ಲೆಸನ – 9 : ಜೀವನದಲ್ಲಿ ಮ್ಯಾಜಿಕ ಆಫ್ ಥಿಂಕಿಂಗ ಬಿಗನ್ನು ಬಳಸಿಕೊಳ್ಳುವುದು ಹೇಗೆ? How to use the magic of Thinking big in life?

ಯಾವಾಗ ಸಿಲ್ಲಿ ಜನರು ನಿಮ್ಮ ಕಾಲೆಳೆದು ನಿಮ್ಮನ್ನು ಕೆಳಗೆ ಬೀಳಿಸಲು ಟ್ರಾಯ ಮಾಡುತ್ತಾರೋ ಆಗ ನೀವು ಬಿಗ್ ಥಿಂಕ ಮಾಡಿ, ಅವರ ಪ್ರಯತ್ನವನ್ನು ಫೇಲ ಮಾಡಿ. ನೀವು ಸಿಲ್ಲಿ ಜನರೊಂದಿಗೆ ಫೈಟ ಮಾಡಲು ರಿಫ್ಯುಜ ಮಾಡಿದಾಗ ಗೆದ್ದು ಬಿಡುತ್ತೀರಿ, ಎದುರುಗಡೆಯಿರುವ ಜನ ಸೋತು ಬಿಡುತ್ತಾರೆ. ಸಿಲ್ಲಿ ಜನರೊಂದಿಗೆ ವಾದಿಸಿದಾಗ ನಿಮ್ಮ ಸ್ಟೇಟಸ ಕಮ್ಮಿಯಾಗುತ್ತದೆ. ಸೋ ಸ್ಟೇ ಬಿಗ್. ನಿಮಗೆ ಸೋತಂತೆ ಫೀಲಾಗತೊಡಗಿದರೆ ಥಿಂಕ ಬಿಗ. ನಿಮಗೆ ಎಷ್ಟೇ ಕಷ್ಟಗಳು ಬಂದರೂ, ಏನೇ ಬ್ಯಾಡ ಇನ್ಸಿಡೆಂಟಾದರೂ ಥಿಂಕ್ ಬಿಗ್.

ಓಕೆ ಗೆಳೆಯರೇ, ಇದೀಷ್ಟು ಲೆಸನಗಳನ್ನು ನಾನು “ದಿ ಮ್ಯಾಜಿಕ ಆಫ್ ಥಿಂಕಿಂಗ ಬಿಗ್” ಬುಕನಿಂದ‌ ಕಲಿತಿರುವೆ. ನೀವು ಒಂದ್ಸಲ ಈ ಬುಕನ್ನು ಓದಿ. ಖಂಡಿತ ನಿಮ್ಮ ಥಿಂಕಿಂಗ ಚೇಂಜ್ ಆಗುತ್ತದೆ. ಬುಕ್ ಲಿಂಕ ಇಂತಿದೆ Link Click Here to Open Book – All the best and Thanks You…

    ಈ ಅಂಕಣ (Article) ನಿಮಗೆ ಇಷ್ಟವಾಗಿದ್ದರೆ ನಿಮ್ಮೆಲ್ಲ ಗೆಳೆಯರೊಡನೆ ಮತ್ತು ನೀವಿರುವ ಎಲ್ಲ ಕನ್ನಡ ಫೇಸ್ಬುಕ್ ಗ್ರೂಪಗಳಲ್ಲಿ ಇದನ್ನು ತಪ್ಪದೇ ಶೇರ್ (Share) ಮಾಡಿ. ಜೊತೆಗೆ ಪ್ರತಿದಿನ ಹೊಸಹೊಸ ಅಂಕಣಗಳನ್ನು, ಪ್ರೇಮಕಥೆಗಳನ್ನು, ಕವನಗಳನ್ನು ಉಚಿತವಾಗಿ ಓದಲು ತಪ್ಪದೆ ನನ್ನ ಫೇಸ್ಬುಕ್ ಪೇಜನ್ನು https://www.facebook.com/Directorsatishkumar/ (Director Satishkumar) ಲೈಕ್ ಮಾಡಿ.

Follow Me On : Facebook | Instagram | YouTube | Twitter

My Books : Kannada Books | Hindi Books | English Books

⚠ STRICT WARNING ⚠

Content Rights :

ಈ ಅಂಕಣದ ಎಲ್ಲ ಹಕ್ಕುಗಳನ್ನು ಡೈರೆಕ್ಟರ್ ಸತೀಶಕುಮಾರ ಹಾಗೂ ರೋರಿಂಗ್ ಕ್ರಿಯೇಷನ್ಸ್ ಪ್ರೈವೇಟ್ ಲಿಮಿಟೆಡ್ ಕಂಪನಿ ವತಿಯಿಂದ ಸಂಪೂರ್ಣವಾಗಿ ಕಾಯ್ದಿರಿಸಲಾಗಿದೆ. ಡೈರೆಕ್ಟರ್ ಸತೀಶಕುಮಾರ ಅವರ ಅನುಮತಿಯಿಲ್ಲದೆ ಈ ಅಂಕಣದ ಯಾವುದೇ ಭಾಗವನ್ನು ಕಾಪಿ ಮಾಡುವಂತಿಲ್ಲ, ಬೇರೆ ಭಾಷೆಗಳಿಗೆ ಅನುವಾದಿಸುವಂತಿಲ್ಲ ಮತ್ತು ಇದನ್ನು ಬೇರೆಡೆಗೆ ಪ್ರಕಟಿಸುವಂತಿಲ್ಲ. ಯಾವುದೇ ಸಾಮಾಜಿಕ ಜಾಲತಾಣಗಳಲ್ಲಿ ಪೋಸ್ಟ್ ಮಾಡುವಂತಿಲ್ಲ. ಮುದ್ರಣ ಮಾಡುವಂತಿಲ್ಲ. ಒಂದು ವೇಳೆ ಯಾರಾದರೂ ಕಾಪಿ ರೈಟ್ಸ್ ನಿಯಮಗಳನ್ನು ಉಲ್ಲಂಘಿಸಿದರೆ ಅವರ ಮೇಲೆ ಸೂಕ್ತ ಕಾನೂನು ಕ್ರಮ ಕೈಗೊಳ್ಳಲಾಗುವುದು ಹಾಗೂ ಆಗಿರುವ ನಷ್ಟವನ್ನು ಅವರಿಂದಲೇ ವಸೂಲಿ ಮಾಡಲಾಗುವುದು.

All Rights of this article are fully reserved by Director Satishkumar and Roaring Creations Private Limited India. No part of this article can be copied, translated or re published anywhere without the written permission of Director Satishkumar. If such violation of copy rights found to us, then we legally punish to copy cats and recover our loss by them only.

© Director Satishkumar and Roaring Creations Private Limited, India.

Director Satishkumar

Satishkumar is a young multi language writer (English, Hindi, Marathi and Kannada), Motivational Speaker, Entrepreneur and independent filmmaker from India. And also he is the Co-founder and CEO of Roaring Creations Pvt Ltd India. Follow Me On : Facebook | Instagram | YouTube | Twitter My Books : Kannada Books | Hindi Books | English Books