ಹಾಯ್ ಗೆಳೆಯರೇ, ಸ್ಟೂಡೆಂಟ್ಸಗಳಿಂದ ಕೆಲವೊಂದಿಷ್ಟು ಪ್ರಶ್ನೆಗಳು ಬಂದಿವೆ. ಅವರು ದೇಶದ ದೊಡ್ಡ ಆಸ್ತಿ. ಅದಕ್ಕಾಗಿ ಇವತ್ತಿನ ಎಪಿಸೋಡನಲ್ಲಿ ಅವರ ಪ್ರಶ್ನೆಗಳ ಮೇಲೆ ಸ್ವಲ್ಪ ಗಮನ ಹರಿಸುವೆ. ಅವರ ಪ್ರಶ್ನೆಗಳು ಇಂತಿವೆ ;
1) ಕಾಂಪಿಟೇಟಿವ್ ಎಕ್ಸಾಮನಲ್ಲಿ ಸಕ್ಸಿಡ್ ಆಗುವುದರ ಬಗ್ಗೆ ವಿಡಿಯೋ ಮಾಡಿ.
2 How to study for class 10?
3) Please make a video on Study Motivation?
4) Effective study tips for class 10?
5) Study Motivation ಮೇಲೆ ವಿಡಿಯೋ ಮಾಡಿ… ಇತ್ಯಾದಿ.
ಓಕೆ ಫೈನ್, ಯಾವುದೇ ಕಾಂಪಿಟೇಟಿವ್ ಎಕ್ಸಾಮನಲ್ಲಿ ಟಾಪ್ ಮಾಡುವುದು ಹೇಗೆ? ಎಫೆಕ್ಟಿವ್ ಆಗಿ ಸ್ಟಡಿ ಮಾಡುವುದು ಹೇಗೆ? ಎಂಬುದರ ಮೇಲೆ ನಾಳೆಯ ಎಪಿಸೋಡನಲ್ಲಿ ಡಿಟೇಲಾಗಿ ಡಿಸ್ಕಸ್ ಮಾಡುವೆ. ಇವತ್ತಿನ ಎಪಿಸೋಡನಲ್ಲಿ ಸ್ಟಡಿ ಮೋಟಿವೇಷನ್ ಬಗ್ಗೆ ಮಾತ್ರ ನೋಡೋಣಾ.
ಯಾರಯಾರಿಗೆ ಸ್ಟಡಿ ಮಾಡಲು ಮೋಟಿವೇಷನ ಬೇಕಾಗಿದೆಯೋ ಅವರೆಲ್ಲ ಈಗಲೇ ನಿಮ್ಮ ಸ್ಕೂಲ್ ಮತ್ತು ಕಾಲೇಜಗಳನ್ನು ಬಿಟ್ಟು ನಿಮಗೆ ಯಾವ ಕೆಲಸ ಸಿಗುತ್ತೋ ಅದನ್ನು ಮಾಡಿ. ಸುಮ್ನೆ ನಿಮ್ಮ ಪೇರೆಂಟ್ಸಗಳ ಹಣವನ್ನು ವೇಸ್ಟ ಮಾಡಬೇಡಿ. ಇಂಟರೆಸ್ಟ ಇಲ್ದೇ ಓದಿ ಏನೇನು ಪ್ರಯೋಜನವಿಲ್ಲ. ಸ್ಟಡಿ ಮಾಡೋಕೆ ನಿಮಗೆ ಮೋಟಿವೇಷನಲ್ ವಿಡಿಯೋಗಳು ಬೇಕಂದ್ರೆ ನಿಮಗೆ ನಿಮ್ಮ ಮನೆಯಲ್ಲಿ ಯಾವುದೇ ಕೊರತೆಯಿಲ್ಲ ಅಂತರ್ಥ. ಸರಿ ತಾನೇ?
ಎಷ್ಟೋ ಜನ ವಿದ್ಯಾರ್ಥಿಗಳು ಓದೋಕೆ ಸ್ವಲ್ಪ ಟೈಮ ಸಿಕ್ರೆ ಸಾಕು, ಒಳ್ಳೇ ಕಾಲೇಜ ಸಿಕ್ರೆ ಸಾಕು, ಒಳ್ಳೇ ಗುರು ಸಿಕ್ರೆ ಸಾಕು ಅಂತಾ ಒದ್ದಾಡುತ್ತಿದ್ದಾರೆ. ಎಷ್ಟೋ ಜನ ಪಾರ್ಟಟೈಮ ಜಾಬ ಮಾಡಿ ಓದ್ತಿದಾರೆ. ಆದ್ರೆ ನಿಮಗೆ ಎಲ್ಲ ಕೊಟ್ರುನು ಮತ್ತೆ ನಿಮಗೆ ಮೋಟಿವೇಷನ ಬೇಕಂದ್ರೆ ನೀವು ಓದಿ ಮುಂದೆ ಬರೋದು ಅಷ್ಟ್ರಲ್ಲೇ ಇದೆ. ನೀವು ಓದು ಬಿಟ್ಟು ಕೆಲ್ಸಕ್ಕೆ ಹೋಗಿ, ಅದೇ ನಿಮಗೆ ಬೆಸ್ಟ. ಬೇರೆಯವರ ಫೋರ್ಸನಿಂದ ಸ್ಟಡಿ ಮಾಡಿ ಏನು ಪ್ರಯೋಜನವಿಲ್ಲ. ಇಷ್ಟಪಟ್ಟು ಓದಿದವರಿಗೆ ಮಾತ್ರ ತಾವು ಇಷ್ಟಪಟ್ಟ ಬದುಕು ಸಿಗುತ್ತೆ. ಕಾಟಾಚಾರಕ್ಕೆ ಓದಿದವರಿಗೆ ಏನ ಮಣ್ಣು ಸಿಗಲ್ಲ. ಅಬ್ಬಬ್ಬ ಅಂದ್ರೆ ಒಂದು ಆರ್ಡಿನರಿ ಜಾಬ ಸಿಗುತ್ತೆ ಅಷ್ಟೇ. ಇಂಟರೆಸ್ಟ ಇಲ್ಲದೆ ಕಾಟಾಚಾರಕ್ಕೆ ಓದಿ ಈಗ ಕೆಲಸವಿಲ್ಲದೆ ಅಲೆಯುತ್ತಿರುವವರು ತುಂಬಾ ಜನ ಇದಾರೆ. ನೀವು ಅಂಥವರಲ್ಲಿ ಒಬ್ಬರಾಗುವುದಕ್ಕಿಂತ ಈಗಲೇ ಕಾಲೇಜ ಬಿಟ್ಟು ಕೆಲಸ ಮಾಡಿ, ಅದೇ ಬೆಟರ್.
ಸ್ಟಡಿ ಮೋಟಿವೇಷನ ಹೊರಗಿನಿಂದಲ್ಲ ನಿಮ್ಮ ಒಳ ಮನಸ್ಸಿನಿಂದ ಬರಬೇಕು. ನಿಮ್ಮ ಬಡತನ, ನಿಮ್ಮ ತಂದೆತಾಯಿಗಳು ಪಡುತ್ತಿರುವ ಕಷ್ಟ, ನಿಮಗಾದ ಅವಮಾನ, ನಿಮಗಾದ ಅನ್ಯಾಯ, ನಿಮಗೆ ಸಿಕ್ಕ ತಿರಸ್ಕಾರ ಇವೇ ನಿಮಗೆ ನಿಜವಾದ ಮೋಟಿವೇಷನಗಳಾಗಿವೆ.
ಉದಾಹರಣೆಗೆ ; ರನ್ನನಿಗಾದ ಅನ್ಯಾಯದಿಂದಾಗಿ ಆತ ಓದಿ ಕವಿ ಚಕ್ರವರ್ತಿಯಾದ. ತಮಗಾದ ಅವಮಾನಕ್ಕೆ ತಕ್ಕ ಪ್ರತ್ಯುತ್ತರ ನೀಡಲು ಡಾ. ಬಿ. ಆರ್. ಅಂಬೇಡ್ಕರ್ ಹಗಲುರಾತ್ರಿ ಸ್ಟಡಿ ಮಾಡಿ ಸಂವಿಧಾನ ಶಿಲ್ಪಿಯಾದರು. ಸಮಾಜದ ಕಟ್ಟುಪಾಡುಗಳನ್ನು ಮುರಿದು ಮಹಿಳೆಯರಿಗೆ ಶಿಕ್ಷಣ ಒದಗಿಸಲು ಸಾವಿತ್ರಿಬಾಯಿ ಫುಲೆಯವರು ಓದಿ ಸಶಕ್ತರಾದರು. ಈಗ ಪ್ರತಿವರ್ಷ ಎಷ್ಟೋ ಜನ IAS, IPS ಎಕ್ಸಾಮ ಕ್ರ್ಯಾಕ ಮಾಡ್ತಾರೆ. ಅವರಲ್ಲಿ ಮೊಸ್ಟ ಆಫ್ ದ ಜನ ಹಳ್ಳಿಯವರೇ ಆಗಿರತ್ತಾರೆ, ಯಾಕ ಗೊತ್ತಾ? ಅವರು ತಮಗಾದ ನೋವನ್ನು, ಅನ್ಯಾಯವನ್ನು, ಅವಮಾನವನ್ನು, ಬಡತನವನ್ನು ಮಟ್ಟ ಹಾಕಲು ಸ್ಟಡಿ ಮಾಡಿ ಆ ಮಟ್ಟಕ್ಕೆ ಏರಿರುತ್ತಾರೆ. ಅವರಿಗೆ ಅವರು ಫೇಸ್ ಮಾಡಿದ ಪ್ರಾಬ್ಲಮ್ಸಗಳೇ ಮೋಟಿವೇಷನ ಎಂಬುದು ಗೊತ್ತಾಗಿರುತ್ತದೆ.
ನಿಮ್ಮ ಬಡತನ, ನಿಮ್ಮ ಕಷ್ಟ, ನಿಮಗಾದ ಅನ್ಯಾಯ, ಅವಮಾನ, ನಿಮಗೆ ಸಿಕ್ಕ ತಿರಸ್ಕಾರದಿಂದ ನೀವು ಮೋಟಿವೇಟ ಆಗಿ “ನಾನು ಚೆನ್ನಾಗಿ ಓದುವೆ, ಓದಿ ಏನಾದರೂ ಸಾಧಿಸುವೆ, ಅಭಿವೃದ್ಧಿ ಕಾಣದ ನನ್ನ ಹಳ್ಳಿಗೆ ಬೆಳಕಾಗುವೆ, ನನ್ನ ಜಿಲ್ಲೆಗೆ ಏನಾದರೂ ಕೊಡುಗೆ ಕೊಡುವೆ, ದೇಶದ ಆಸ್ತಿಯಾಗುವೆ…” ಎಂಬ ಛಲ ಮೂಡದಿದ್ದರೆ ನಿಮಗೆ ಇಂಟರೆಸ್ಟ ಮೂಡಲು ಸಾಧ್ಯವಿಲ್ಲ. ಜೀವನದಲ್ಲಿ ಗೋಲ ಇರದಿದ್ದರೆ, ಪರಪಜ ಇಲ್ಲದಿದ್ದರೆ ಓದಬೇಕು ಅಂತಾ ಅನಿಸಲ್ಲ. ಮೊದಲು ಗೋಲ ಸೆಟ್ ಮಾಡಿಕೊಳ್ಳಿ, ಆಮೇಲೆ ಓದಲು ಇಂಟರೆಸ್ಟ ತಾನಾಗಿಯೇ ಬರುತ್ತದೆ.
ನನ್ನ ಫ್ರೆಂಡ್ಸ ಸರ್ಕಲನಲ್ಲಿ ಸದ್ಯಕ್ಕೆ ಒಬ್ಬರು ಸಿಕ್ಕಾಪಟ್ಟೆ ಸ್ಟಡಿ ಮಾಡಿ ಇಂಟಲಿಜೆನ್ಸ್ ಡಿಪಾರ್ಟಮೆಂಟ ಸೇರಿದ್ದಾರೆ, ಮೂವರು IAS ಎಕ್ಸಾಮ ಕ್ರ್ಯಾಕ ಮಾಡಿದ್ದಾರೆ. ಇನ್ನು ಒಬ್ಬರು IPS ಎಕ್ಸಾಮ ಕ್ಲಿಯರ್ ಮಾಡೋದ್ರಲ್ಲಿ ಜಸ್ಟ ಮಿಸ್ ಮಾಡ್ಕೊಂಡಿದಾರೆ. ನೆಕ್ಸ್ಟ್ ಇಯರ್ ಗ್ಯಾರಂಟಿ ಕ್ಲಿಯರ್ ಮಾಡ್ತಾರೆ. ಇನ್ನೂ ಮಿಕ್ಕವರೆಲ್ಲ ಬಿಜನೆಸಮ್ಯಾನಗಳಿದ್ದಾರೆ. ಇವರು ತಮ್ಮ ಲೈಫಲ್ಲಿ ಎಷ್ಟೊಂದು ಸ್ಟ್ರಗಲ ಮಾಡಿದ್ದಾರೆ ಅಂದ್ರೆ ಪ್ರತಿಯೊಬ್ಬರ ಮೇಲೆ ಫಿಲ್ಮ ಮಾಡಬಹುದು, ಅಷ್ಟೊಂದು ಕಷ್ಟ ಪಟ್ಟಿದ್ದಾರೆ. ಸಿಕ್ಕಾಪಟ್ಟೆ ಸ್ಟಡಿ ಮಾಡಿದ್ದಾರೆ. ಪಾರ್ಟಟೈಮ ಜಾಬ ಮಾಡಿ ಸ್ಟಡಿ ಮಾಡಿದ್ದಾರೆ. ಅದಕ್ಕೇನೆ ಇವತ್ತು ಅಂಥ ಟಾಪ ಪೋಜಿಷನಗಳಲ್ಲಿದ್ದಾರೆ. ದೇಶವನ್ನು, ಜಿಲ್ಲೆಗಳನ್ನು ಕಂಟ್ರೋಲ್ ಮಾಡುತ್ತಿದ್ದಾರೆ. ಸೋ ನೀವು ಸಹ ನಿಮ್ಮ ಸ್ಟ್ರಗಲ ಸ್ಟೋರಿಯನ್ನು ಸಕ್ಸೆಸ್ ಸ್ಟೋರಿಯನ್ನಾಗಿ ಬದಲಾಯಿಸಬೇಕೆಂದರೆ ನೀವು ಸ್ಟಡಿ ಮಾಡಲೇಬೇಕು. ಬರೀ ಜಾಬಗಾಗಿ ಸ್ಟಡಿ ಮಾಡಬೇಡಿ. ನಾಲೇಡ್ಜಗಾಗಿ ಸ್ಟಡಿ ಮಾಡಿ. ನೀವು ಯಾವುದಕ್ಕಾಗಿ ಸ್ಟಡಿ ಮಾಡಬೇಕು ಎಂಬುದನ್ನು ಈಗಲೇ ಡಿಸೈಡ ಮಾಡಿ ಮತ್ತು ಓದಲು ಸ್ಟಾರ್ಟ ಮಾಡಿ. ನೀವು ಬಿಜನೆಸ ಮಾಡಲು ಸ್ಟಡಿ ಮಾಡ್ತಿರಾ, ಗವರ್ನಮೆಂಟ ಜಾಬ ಮಾಡಲು ಸ್ಟಡಿ ಮಾಡ್ತಿರಾ ಅಥವಾ ಕಾರ್ಪೊರೇಟ್ ಜಾಬ ಮಾಡಲು ಸ್ಟಡಿ ಮಾಡ್ತಿರಾ ಎಂಬುದನ್ನು ಡಿಸೈಡ ಮಾಡಿ. ನಂತರ ಗೋಲ ಸೆಟ ಮಾಡಿ ಓದಲು ಸ್ಟಾರ್ಟ ಮಾಡಿ.
ನಿಮ್ಮ ಕೆಟ್ಟ ಪರಿಸ್ಥಿತಿಯೇ ನಿಮಗೆ ಮೋಟಿವೇಷನ,
ನಿಮ್ಮ ಕೆಟ್ಟ ಪರಿಸ್ಥಿತಿಯೇ ನಿಮಗೆ ಗುರು.
ಕೆಟ್ಟ ಪರಿಸ್ಥಿತಿಗಳಿಂದ ಮೋಟಿವೇಟ ಆಗಿ, ಓದಿನಲ್ಲಿ ಇಂಟರೆಸ್ಟ ಬೆಳೆಸಿಕೊಂಡು ಓದಲು ಪ್ರಾರಂಭಿಸಿ. ನಿಮಗೆ ಇಷ್ಟೆಲ್ಲ ಹೇಳಿದರೂ ನಿಮಗೆ ಓದಿನಲ್ಲಿ ಇಂಟರೆಸ್ಟ ಮೂಡದಿದ್ದರೆ ಕಾಲೇಜ್ ಬಿಟ್ಟು ಕೆಲಸ ಮಾಡಲು ಸ್ಟಾರ್ಟ ಮಾಡಿ. ಸುಮ್ಮನೆ ಟೈಮ ಹಾಗೂ ದುಡ್ಡನ್ನು ವೇಸ್ಟ ಮಾಡಬೇಡಿ. ಮುಂದಿನ ಎಪಿಸೋಡನಲ್ಲಿ ಯಾವುದೇ ಎಕ್ಸಾಮಲ್ಲಿ ಟಾಪ ಮಾಡುವುದು ಹೇಗೆ ಅಂತಾ ನೋಡೊಣಾ. All the Best and Thanks You…
ಈ ಅಂಕಣ (Article) ನಿಮಗೆ ಇಷ್ಟವಾಗಿದ್ದರೆ ನಿಮ್ಮೆಲ್ಲ ಗೆಳೆಯರೊಡನೆ ಮತ್ತು ನೀವಿರುವ ಎಲ್ಲ ಕನ್ನಡ ಫೇಸ್ಬುಕ್ ಗ್ರೂಪಗಳಲ್ಲಿ ಇದನ್ನು ತಪ್ಪದೇ ಶೇರ್ (Share) ಮಾಡಿ. ಜೊತೆಗೆ ಪ್ರತಿದಿನ ಹೊಸಹೊಸ ಅಂಕಣಗಳನ್ನು, ಪ್ರೇಮಕಥೆಗಳನ್ನು, ಕವನಗಳನ್ನು ಉಚಿತವಾಗಿ ಓದಲು ತಪ್ಪದೆ ನನ್ನ ಫೇಸ್ಬುಕ್ ಪೇಜನ್ನು https://www.facebook.com/Directorsatishkumar/ (Director Satishkumar) ಲೈಕ್ ಮಾಡಿ.
Follow Me On : Facebook | Instagram | YouTube | Twitter
My Books : Kannada Books | Hindi Books | English Books
⚠ STRICT WARNING ⚠Content Rights :
ಈ ಅಂಕಣದ ಎಲ್ಲ ಹಕ್ಕುಗಳನ್ನು ಡೈರೆಕ್ಟರ್ ಸತೀಶಕುಮಾರ ಹಾಗೂ ರೋರಿಂಗ್ ಕ್ರಿಯೇಷನ್ಸ್ ಪ್ರೈವೇಟ್ ಲಿಮಿಟೆಡ್ ಕಂಪನಿ ವತಿಯಿಂದ ಸಂಪೂರ್ಣವಾಗಿ ಕಾಯ್ದಿರಿಸಲಾಗಿದೆ. ಡೈರೆಕ್ಟರ್ ಸತೀಶಕುಮಾರ ಅವರ ಅನುಮತಿಯಿಲ್ಲದೆ ಈ ಅಂಕಣದ ಯಾವುದೇ ಭಾಗವನ್ನು ಕಾಪಿ ಮಾಡುವಂತಿಲ್ಲ, ಬೇರೆ ಭಾಷೆಗಳಿಗೆ ಅನುವಾದಿಸುವಂತಿಲ್ಲ ಮತ್ತು ಇದನ್ನು ಬೇರೆಡೆಗೆ ಪ್ರಕಟಿಸುವಂತಿಲ್ಲ. ಯಾವುದೇ ಸಾಮಾಜಿಕ ಜಾಲತಾಣಗಳಲ್ಲಿ ಪೋಸ್ಟ್ ಮಾಡುವಂತಿಲ್ಲ. ಮುದ್ರಣ ಮಾಡುವಂತಿಲ್ಲ. ಒಂದು ವೇಳೆ ಯಾರಾದರೂ ಕಾಪಿ ರೈಟ್ಸ್ ನಿಯಮಗಳನ್ನು ಉಲ್ಲಂಘಿಸಿದರೆ ಅವರ ಮೇಲೆ ಸೂಕ್ತ ಕಾನೂನು ಕ್ರಮ ಕೈಗೊಳ್ಳಲಾಗುವುದು ಹಾಗೂ ಆಗಿರುವ ನಷ್ಟವನ್ನು ಅವರಿಂದಲೇ ವಸೂಲಿ ಮಾಡಲಾಗುವುದು.
All Rights of this article are fully reserved by Director Satishkumar and Roaring Creations Private Limited India. No part of this article can be copied, translated or re published anywhere without the written permission of Director Satishkumar. If such violation of copy rights found to us, then we legally punish to copy cats and recover our loss by them only.
© Director Satishkumar and Roaring Creations Private Limited, India.