ಹಾಯ್ ಗೆಳೆಯರೇ, ನಾನು ನಿಮ್ಮ ಸತೀಶಕುಮಾರ. ನಾನು ಇವತ್ತಿನ ಎಪಿಸೋಡನಲ್ಲಿ ಯಾವುದೇ ಸಿರಿಯಸ್ ಟಾಪಿಕ ಡಿಸ್ಕಸ್ ಮಾಡ್ತಿಲ್ಲ. ಎರಡು ಮಾಂತ್ರಿಕ ಶಬ್ದಗಳ ಬಗ್ಗೆ ಡಿಸ್ಕಸ್ ಮಾಡ್ತಿರುವೆ. Sorry and Thanks ಇವೇ ಆ ಎರಡು ಮಾಂತ್ರಿಕ ಶಬ್ದಗಳು. Sorry & Thanks ಅದರಲ್ಲೇನೂ ವಿಶೇಷತೆಯಿದೆ, ಅವೆರಡು ಆರ್ಡಿನರಿ ಶಬ್ದಗಳಷ್ಟೇ ಅಂತಾ ನೀವು ಅನ್ಕೊಬಹುದು. ಆದರೆ ಅವೆರಡು ಆರ್ಡಿನರಿ ಶಬ್ದಗಳಲ್ಲ. ಅವುಗಳಿಗೆ ಬಹಳಷ್ಟು ಪವರ್ ಇದೆ. ನೀವು Sorry and Thanks ಇವೆರಡು ಪದಗಳನ್ನು ಬಳಸುವುದನ್ನು ಕಲಿತರೆ ನಿಮ್ಮ ಲೈಫಲ್ಲಿ ಒಂದು ಹ್ಯಾಪಿನೆಸ್ ತಾನಾಗಿಯೇ ಬರುತ್ತದೆ. ನಿಮ್ಮ ಸ್ನೇಹ ಸಂಬಂಧಗಳು, ಪ್ರೇಮ ಸಂಬಂಧಗಳೆಲ್ಲವು ಮತ್ತಷ್ಟು ಗಟ್ಟಿಯಾಗುತ್ತವೆ. ಸೋ, Sorry and Thanks ಎಂಬ ಎರಡು ಪದಗಳನ್ನು ಬಳಸುವುದನ್ನು ಕಲಿಯಿರಿ.
ನಮಗೆ ಏನಾದರೂ ಸಮಸ್ಯೆಯಾದಾಗ ನಾವು ಎಲ್ಲರನ್ನು ದೂರುತ್ತೇವೆ, ಎಲ್ಲರನ್ನು ತೆಗಳುತ್ತೇವೆ. ಆದರೆ ಆ ಸಮಸ್ಯೆ ಸಾಲ್ವ ಆದಾಗ ನಾವು ಯಾರಿಗೂ ಥ್ಯಾಂಕ್ಸ್ ಹೇಳುವುದಿಲ್ಲ.
ಉದಾಹರಣೆಗಾಗಿ : ರಾಜಕಾರಣಿಗಳು ಕೆಲಸ ಮಾಡದಿದ್ದಾಗ ನಾವು ಅವರನ್ನು ತೆಗಳುತ್ತೇವೆ. ಆದರೆ ಅವರು ಒಳ್ಳೇ ಕೆಲಸ ಮಾಡಿದಾಗ ನಾವು ಅವರಿಗೆ Thanks ಹೇಳುವುದಿಲ್ಲ. ಟ್ರಾಫಿಕ ಜಾಮ ಆದಾಗ ನಾವು ಪೋಲೀಸರಿಗೆ ಬೈಯ್ಯುತ್ತೇವೆ. ಆದರೆ ಅವರು ಎಲ್ಲವನ್ನೂ ಕಂಟ್ರೋಲ್ ಮಾಡಿ ನಮಗೆ ರಕ್ಷಣೆ ಕೊಟ್ಟಾಗ ನಾವು ಅವರಿಗೆ Thanks ಹೇಳಲ್ಲ. ಸರ್ಕಾರಿ ಅಧಿಕಾರಿಗಳು ನಮ್ಮ ಕೆಲಸ ಮಾಡದಿದ್ದರೆ ನಾವು ಅವರ ಮೇಲೆ ಕೂಗಾಡುತ್ತೇವೆ. ಆದರೆ ಅವರು ಬೇಗನೆ ಕೆಲಸ ಮಾಡಿ ಕೊಟ್ಟಾಗ ನಾವು ಅವರಿಗೆ Thanks ಹೇಳಲ್ಲ. ನಮಗೆ ಹುಷಾರಿಲ್ಲದಿದ್ದಾಗ ನಾವು ಡಾಕ್ಟರತ್ರ ಹೋಗ್ತೀವಿ, ಟ್ರಿಟಮೆಂಟ ತೆಗೆದುಕೊಂಡು ಮನೆಗೆ ಬರ್ತಿವಿ. ಆದರೆ ನಾವು ಹುಷಾರಾದ ಮೇಲೆ ಅವರಿಗೆ ಭೇಟಿಯಾಗಲ್ಲ, ಅವರಿಗೆ ಥ್ಯಾಂಕ್ಸ್ ಹೇಳಲ್ಲ. ಅದಕ್ಕಾಗಿಯೇ ಅವರು ಜನರನ್ನು ಕಂಡಾಗ ಮೂಗು ಮುರಿಯುತ್ತಾರೆ.
ಮೊದಲು ನನಗೂ ಸಹ Thanks ಪದದ ಪವರ್ ಗೊತ್ತಿರಲಿಲ್ಲ. ಮೂರು ವರ್ಷದ ಹಿಂದಿನ ಘಟನೆ. ನಾನು ಪುಣೆಗೆ ಹೊಸದಾಗಿ ಬಂದಾಗ ನೀರ ಚೇಂಜ್ ಆಗಿ ನೆಗಡಿ ಜ್ವರ ಬಂದು ನನ್ನ ಆರೋಗ್ಯ ಸ್ವಲ್ಪ ಕೆಟ್ಟಿತ್ತು. ನಾನು ಒಬ್ಬ ಡಾಕ್ಟರತ್ರ ಹೋಗಿ ಟ್ರಿಟಮೆಂಟ್ ತಗೊಂಡೆ. ಒಂದು ವಾರದ ನಂತ್ರ ನಾನು ಕಂಪ್ಲಿಟಾಗಿ ಹುಷಾರಾದೆ. ಹುಷಾರಾದ ನಂತರ ನಾನು ಆ ಡಾಕ್ಟ್ರಿಗೆ ಕಾಲ ಮಾಡಿ “Sir, I am OK now and Thanks for your good treatment” ಅಂತಾ ಹೇಳಿದೆ. ಅದಕ್ಕೆ ಅವರು “ನಾನು ಕರಿಯರ್ ಸ್ಟಾರ್ಟ ಮಾಡಿ ನಾಲ್ಕು ವರ್ಷವಾಯ್ತು. ಹುಷಾರಾದ ಮೇಲೆ ಕಾಲ ಮಾಡಿ ಇನಫಾರ್ಮ ಮಾಡಿದ ಮೊದಲ ಪೇಶಂಟ ನೀನು” ಅಂತದ್ರು. ಅಲ್ಲಿಂದ ನಾವು ಒಳ್ಳೇ ಫ್ರೆಂಡ್ಸಾದ್ವಿ. ಆಗ ನನಗೆ ಈ Thanksನ ಪವರ್ ಗೊತ್ತಾಯಿತು. ಆವತ್ತಿನಿಂದ ನಾನು ನನಗೆ ಸಹಾಯ ಮಾಡಿದ ಎಲ್ಲರಿಗೂ ತಪ್ಪದೆ Thanks ಹೇಳುತ್ತಿರುವೆ. ಇದರಿಂದ ನನಗೆ ಎಷ್ಟೋ ಜನ ಹೊಸ ಫ್ರೆಂಡ್ಸ್ ಸಿಕ್ಕಿದಾರೆ. ಈ Thanks ಪದ ಹೇಳುವುದರಿಂದ ನನ್ನ ಫ್ರೆಂಡಶಿಪ ಆ್ಯಂಡ್ ಬಿಜನೆಸ್ ರಿಲೆಶನಶಿಪಗಳೆಲ್ಲವು ಮತ್ತಷ್ಟು ಸ್ಟ್ರಾಂಗ್ ಆಗಿವೆ.
Sorry ಕೇಳುವುದರಿಂದ ಮುರಿದು ಬಿದ್ದ ಪ್ರೇಮ ಸಂಬಂಧಗಳು, ಸ್ನೇಹ ಸಂಬಂಧಗಳು ಮತ್ತೆ ಸ್ಟಾರ್ಟ ಆಗುತ್ತವೆ ಎಂಬುದು ನಮಗೆಲ್ಲರಿಗೂ ಗೊತ್ತಿರುವ ವಿಚಾರ. ಆದರೆ ನಾವು ತಪ್ಪು ಮಾಡಿದಾಗ Sorry ಕೇಳಲ್ಲ. ಏಕೆಂದರೆ ನಮ್ಮ ಈಗೋ ಅಡ್ಡ ಬರುತ್ತದೆ. ಇದರಿಂದ ನಾವು ನಮ್ಮ ಸಂಬಂಧಗಳನ್ನು ಕಳೆದುಕೊಂಡು ಬಿಡುತ್ತೇವೆ. ಅದಕ್ಕಾಗಿ ಏನಾದರೂ ತಪ್ಪು ಮಾಡಿದಾಗ ಯೋಚನೆ ಮಾಡದೇ ನಿಮ್ಮ ಈಗೋವನ್ನು ಪಕ್ಕಕ್ಕಿಟ್ಟು Sorry ಕೇಳಿಬಿಡಿ. ಎಲ್ಲವು ಬೇಗನೆ ಸರಿ ಹೋಗುತ್ತದೆ. ಆದರೆ ಕೆಲವು ಸಲ ನಮ್ಮದೇನು ತಪ್ಪಿಲ್ಲದಿದ್ದರೂ Sorry ಕೇಳುವುದು ಒಳ್ಳೆಯದು. ಏಕೆಂದರೆ ಇದರಿಂದ ನಮ್ಮ ಸ್ನೇಹ ಪ್ರೇಮ ಸಂಬಂಧಗಳು ಹಾಳಾಗುವುದು ತಪ್ಪುತ್ತವೆ.
ಪ್ರೀತಿಯಲ್ಲಿ ನಮ್ಮದೇನು ತಪ್ಪಿಲ್ಲದಿದ್ದರೂ Sorry ಕೇಳುವುದರಿಂದ ನಮ್ಮ ಪ್ರೀತಿ ಮತ್ತಷ್ಟು ಗಟ್ಟಿಯಾಗುತ್ತದೆ. ಕೆಲವು ಸಲ Misunderstandingನಿಂದಾಗಿ ನಮ್ಮ ಸಂಗಾತಿ ಕೋಪಿಸಿಕೊಂಡಿರುತ್ತಾಳೆ. ಆಗ ನಾವು ಸುಮ್ಮನೆ ಸ್ವಾರಿ ಕೇಳಿದರೆ ಸಾಕು ಅವಳು ಶಾಂತವಾಗುತ್ತಾಳೆ. ಅದಕ್ಕಾಗಿ ಕೆಲವು ಸಲ ಏನು ತಪ್ಪಿಲ್ಲದಿದ್ದರೂ ಸಹ ಸ್ವಾರಿ ಕೇಳಿ. ಅದನ್ನು ಬಿಟ್ಟು ಮಾತಿಗೆ ಮಾತು ಬೆಳೆಸಿ ಇರೋ ಸಂಬಂಧಗಳನ್ನು ಕೆಡಿಸಿಕೊಳ್ಳಬೇಡಿ. ಒಂದು ಸ್ವಾರಿ ಕೇಳಿದರೆ ನೀವೇನು ಸಣ್ಣವರಾಗಲ್ಲ. ಈಗ ಎಷ್ಟೋ ಜನ ಎಲ್ಲವನ್ನು ಕಳೆದುಕೊಂಡು ಸ್ವಾರಿ ಕೇಳಲು ತಯಾರಾಗಿದ್ದಾರೆ. ಆದರೆ ಅದನ್ನು ಕೇಳಿಸಿಕೊಳ್ಳುವವರು ಅವರ ಬಳಿಯಿಲ್ಲ. ನೀವು ಅವರಂತಾಗಬೇಡಿ ಅಷ್ಟೇ.
ಓಕೆ ಫ್ರೆಂಡ್ಸ್, ನಿಮಗೆ Sorry and Thanks ಹೇಳುವ ಅಭ್ಯಾಸ ಇದ್ರೆ ತುಂಬಾ ಒಳ್ಳೆಯದು. ಇಲದಿದ್ರೆ ಅದನ್ನು ಬೆಳೆಸಿಕೊಳ್ಳಿ. Sorry and Thanks ಹೇಳುವುದರಿಂದ ನಿಮ್ಮ ಎಲ್ಲ ರಿಲೆಶನಶಿಪಗಳು ಸ್ಟ್ರಾಂಗ್ ಆಗುತ್ತವೆ. ಜೊತೆಗೆ ಹೊಸ ರಿಲೆಶನಶಿಪಗಳು ಸ್ಟಾರ್ಟಾಗುತ್ತವೆ. ಇವತ್ತಿಂದಲೇ Sorry and Thanks ಪದಗಳನ್ನು ಬಳಸಲು ಪ್ರಾರಂಭಿಸಿ. ನಿಮ್ಮ ಜೀವನದಲ್ಲಿ ಒಂದು ಪೋಜಿಟಿವ ಬದಲಾವಣೆ ಬಂದೇ ಬರುತ್ತದೆ. ಸದ್ಯಕ್ಕೆ ಈ ವಿಡಿಯೋವನ್ನು ಲೈಕ್ ಮಾಡಿ ಮತ್ತು ಈ ಚಾನೆಲಗೆ ಸಬ್ಸ್ಕ್ರೈಬ್ ಮಾಡಿ. All the best and Take care…
ಈ ಅಂಕಣ (Article) ನಿಮಗೆ ಇಷ್ಟವಾಗಿದ್ದರೆ ನಿಮ್ಮೆಲ್ಲ ಗೆಳೆಯರೊಡನೆ ಮತ್ತು ನೀವಿರುವ ಎಲ್ಲ ಕನ್ನಡ ಫೇಸ್ಬುಕ್ ಗ್ರೂಪಗಳಲ್ಲಿ ಇದನ್ನು ತಪ್ಪದೇ ಶೇರ್ (Share) ಮಾಡಿ. ಜೊತೆಗೆ ಪ್ರತಿದಿನ ಹೊಸಹೊಸ ಅಂಕಣಗಳನ್ನು, ಪ್ರೇಮಕಥೆಗಳನ್ನು, ಕವನಗಳನ್ನು ಉಚಿತವಾಗಿ ಓದಲು ತಪ್ಪದೆ ನನ್ನ ಫೇಸ್ಬುಕ್ ಪೇಜನ್ನು https://www.facebook.com/Directorsatishkumar/ (Director Satishkumar) ಲೈಕ್ ಮಾಡಿ.
Follow Me On : Facebook | Instagram | YouTube | Twitter
My Books : Kannada Books | Hindi Books | English Books
⚠ STRICT WARNING ⚠Content Rights :
ಈ ಅಂಕಣದ ಎಲ್ಲ ಹಕ್ಕುಗಳನ್ನು ಡೈರೆಕ್ಟರ್ ಸತೀಶಕುಮಾರ ಹಾಗೂ ರೋರಿಂಗ್ ಕ್ರಿಯೇಷನ್ಸ್ ಪ್ರೈವೇಟ್ ಲಿಮಿಟೆಡ್ ಕಂಪನಿ ವತಿಯಿಂದ ಸಂಪೂರ್ಣವಾಗಿ ಕಾಯ್ದಿರಿಸಲಾಗಿದೆ. ಡೈರೆಕ್ಟರ್ ಸತೀಶಕುಮಾರ ಅವರ ಅನುಮತಿಯಿಲ್ಲದೆ ಈ ಅಂಕಣದ ಯಾವುದೇ ಭಾಗವನ್ನು ಕಾಪಿ ಮಾಡುವಂತಿಲ್ಲ, ಬೇರೆ ಭಾಷೆಗಳಿಗೆ ಅನುವಾದಿಸುವಂತಿಲ್ಲ ಮತ್ತು ಇದನ್ನು ಬೇರೆಡೆಗೆ ಪ್ರಕಟಿಸುವಂತಿಲ್ಲ. ಯಾವುದೇ ಸಾಮಾಜಿಕ ಜಾಲತಾಣಗಳಲ್ಲಿ ಪೋಸ್ಟ್ ಮಾಡುವಂತಿಲ್ಲ. ಮುದ್ರಣ ಮಾಡುವಂತಿಲ್ಲ. ಒಂದು ವೇಳೆ ಯಾರಾದರೂ ಕಾಪಿ ರೈಟ್ಸ್ ನಿಯಮಗಳನ್ನು ಉಲ್ಲಂಘಿಸಿದರೆ ಅವರ ಮೇಲೆ ಸೂಕ್ತ ಕಾನೂನು ಕ್ರಮ ಕೈಗೊಳ್ಳಲಾಗುವುದು ಹಾಗೂ ಆಗಿರುವ ನಷ್ಟವನ್ನು ಅವರಿಂದಲೇ ವಸೂಲಿ ಮಾಡಲಾಗುವುದು.
All Rights of this article are fully reserved by Director Satishkumar and Roaring Creations Private Limited India. No part of this article can be copied, translated or re published anywhere without the written permission of Director Satishkumar. If such violation of copy rights found to us, then we legally punish to copy cats and recover our loss by them only.
© Director Satishkumar and Roaring Creations Private Limited, India.