1) ವಿದ್ಯೆ ಕಲಿಸದ ತಂದೆ, ಬುದ್ಧಿ ಹೇಳದ ಗುರು, ಬಿದ್ದಿರಲು ಬಂದು ನೋಡದ ತಾಯಿ ಶುದ್ಧ ವೈರಿಗಳು ಸರ್ವಜ್ಞ…
2) ನಡೆವುದೊಂದೇ ಭೂಮಿ, ಕುಡಿವುದೊಂದೇ ನೀರು, ಸುಡುವಗ್ನಿಯೊಂದೆ ಇರುತಿರಲು ಕುಲಗೋತ್ರ ನಡುವೆ ಎತ್ತಣದು ಸರ್ವಜ್ಞ…
3) ಸರ್ವಜ್ಞನೆಂಬವನು ಗರ್ವದಿಂದಾದವನೆ ಸರ್ವರೊಳೊಂದೊಂದು ನುಡಿಗಲಿತು ವಿದ್ಯೆಯ ಪರ್ವತವೇ ಆದ ಸರ್ವಜ್ಞ…
4) ಕೋಟಿ ವಿದ್ಯೆಗಳಲ್ಲಿ ಮೇಟಿ ವಿದ್ಯೆಯೆ ಮೇಲು, ಮೇಟಿಯಿಂದ ರಾಟಿ ನಡೆದುದಲ್ಲದೆ ದೇಶ ದಾಟವೇ ಕೆಡಗು ಸರ್ವಜ್ಞ…
5) ಕಾಡೆಲ್ಲ ಕಸುಗಾಯಿ, ನಾಡೆಲ್ಲ ಹೆಗ್ಗಿಡವು, ಆಡಿದ ಮಾತು ನಿಜವಿಲ್ಲ ಮಲೆನಾಡ ಕಾಡು ಸಾಕೆಂದ ಸರ್ವಜ್ಞ…
6) ಬೆಚ್ಚನಾ ಮನೆಯಾಗೆ ವೆಚ್ಚಕ್ಕೆ ಹೊನ್ನಾಗಿ, ಇಚ್ಛೆಯನ್ನರಿವ ಸತಿಯಾಗಿ ಸ್ವರ್ಗಕ್ಕೆ ಕಿಚ್ಚು ಹಚ್ಚೆಂದ ಸರ್ವಜ್ಞ…
7) ಅನ್ನವನು ನೀಡುವುದು, ನನ್ನಿಯನು ನುಡಿಯುವುದು, ತನ್ನಂತೆ ಪರರ ಬಗೆದಡೆ ಕೈಲಾಸ ಬಿನ್ನಾವಣಕ್ಕು ಸರ್ವಜ್ಞ…
8) ಕಳ್ಳರಿಗೆ ಸುಳ್ಳರಿಗೆ ಡೊಳ್ಳರಿಗೆ ಡೊಂಬರಿಗೆ ಸುಳ್ಳು ಗೊರವರಿಗೆ ಕೊಡುವವರು ಧರ್ಮಕ್ಕೆ ಎಳ್ಳಷ್ಟು ಕೊಡರು ಸರ್ವಜ್ಞ…
9) ಉಳ್ಳಲ್ಲಿ ಉಣ್ಣಲಿಲ್ಲ, ಉಳ್ಳಲ್ಲಿ ಉಡಲಿಲ್ಲ, ಉಣ್ಣಲ್ಲಿ ದಾನ ಕೊಡಲೊಲ್ಲದವನೊಡವೆ ಕಳ್ಳಗೆ ನೃಪಗೆ ಸರ್ವಜ್ಞ…
10) ಬೇವು ಫಲವಾಗಲದು ಸೇವಿಸಲು ಯೋಗ್ಯವೇ? ಗಾವಿಲನ ಧನವು ಘನವಾಗಿ ಬಯ್ದಿಟ್ಟ ಠಾವಿಲೇಪೋಕು ಸರ್ವಜ್ಞ…
11) ಮಾನವರ ದುರ್ಗುಣವನೇನೆಂದು ಬಣ್ಣಿಪೆನು, ದಾನಗೆಯ್ಯನಲು ಕನಲುವರು, ದಂಡವನು ಮೌನದೀಯಿವರು ಸರ್ವಜ್ಞ…
12) ದಾನವೆಂದರೆ ತಲೆಯ ಚಾನದಲಿ ಕಡಿದಂತೆ, ತಾನೊಂದ ತಪ್ಪು ಮಾಡಿ ನೂರಾರನು ಮೌನದಿಂ ಕೊಡುವ ಸರ್ವಜ್ಞ…
13) ಕಂಡವರ ದಂಡಿಸುತ, ಕೊಂಡವರ ಒಡವೆಗಳ ನುಂಡುಂಡು ಮಲಗಿ ಮಡಿದ ಮೆಲುವೆಗೆ ಯಮದಂಡ ತಪ್ಪುವುದೇ ಸರ್ವಜ್ಞ…
14) ಹೊಲಸು ಮಾಂಸದ ಹುತ್ತ, ಎಲುವಿನ ಹಂದರವು ಹೊಲೆಬಲಿದ ತನುವಿನೊಳಗಿರ್ದುಮದರೊಳಗೆ ಕುಲವನರಸುವರೆ ಸರ್ವಜ್ಞ…
15) ಕೋಪವೆಂಬುದು ತಾನು ಪಾಪದ ನೆಲೆಗಟ್ಟು, ಆಪತ್ತು ಸುಖವು ಸರಿಯೆಂದು ಪೋಪಗೆ ಪಾಪವೆಲ್ಲಿಹುದು ಸರ್ವಜ್ಞ…
16) ಕಿಚ್ಚಿಂಗೆ ತಣಿವಿಲ್ಲ, ಮೊಚ್ಚೆಗೆ ಹೊಲೆಯಿಲ್ಲ, ಚುಚ್ಚಿ ಕೊಡುವಂಗೆ ಗತಿಯಿಲ್ಲ, ಯೋಗಿಗೆ ಇಚ್ಛೆಗಳಿಲ್ಲ ಸರ್ವಜ್ಞ…
17) ಹೊಲೆಯಿಲ್ಲ ಅರಿದಂಗೆ, ಬಲವಿಲ್ಲ ಬಡವಂಗೆ, ತೊಲೆ ಕಂಬವಿಲ್ಲ ಗಗನಕ್ಕೆ, ಯೋಗಿಗೆ ಕುಲವೆಂಬುದಿಲ್ಲ ಸರ್ವಜ್ಞ…
18) ಹಸಿವ ಕೊಂದಾತಂಗೆ, ಪಶುವಧೆಯ ಮಾಡದವಗೆ, ಹುಸಿ ಕರ್ಮ ಕಾಮವಳಿಂದಗೆ ಇಹಪರದಿ ಶಶಿಧರನೊಲಿವ ಸರ್ವಜ್ಞ…
19) ಹಮ್ಮು ಎಂಬುವ ಕಿಚ್ಚು ಒಮ್ಮೆಲೇ ನಂದುವುದೆ? ಬೊಮ್ಮ ಹರಿ ಬೆಂದು ಜಗಬೆಂದು ದಾಕಿಚ್ಚ ಗುಮ್ಮಿಹನೆ ಯೋಗಿ ಸರ್ವಜ್ಞ…
20) ಒಸೆದೆಂಟು ದಿಕ್ಕಿನಲ್ಲಿ ಮಿಸುನ್ನಿ ಗಿಣ್ಣಿಲುಗಿಂಡಿ ಹಸಿದು ಮಾಡುವನ ಪೂಜೆಯದು ಬೋಗಾರ ಪಸರವಿಟ್ಟಂತೇ ಸರ್ವಜ್ಞ…
21) ಒಪ್ಪಾದ ನುಡಿಯೇಕೆ? ಪುಷ್ಪವೇರಿಸಲೇಕೆ? ಅರ್ಪಿತದ ಗೊಡವ ತನಗೇಕೆ? ಲಿಂಗದಾ ನೆಪ್ಪನರಿಯದವಗೆ ಸರ್ವಜ್ಞ…
22) ಬತ್ತಿಹೆತ್ತುಪ್ಪವನು ಹತ್ತಿಸಿದ ಫಲವೇನು? ನಿತ್ಯ ನೆಲೆಗೊಳದೆ ಭಜಿಸುವಾ ಪೂಜೆ ತಾ ಹತ್ತಿಗೆಡೆಂತ ಸರ್ವಜ್ಞ…
23) ಕೊಲುವ ಕೈಯೊಳು ಪೂಜೆ, ಮೆಲುವ ಬಾಯೊಳ ಮಂತ್ರ, ಸಲೆ ಪಾಪವೆರೆದ ಮನದೊಳಗೆ ಪೂಜಿಪನೆ ಹೊಲೆಯ ಕಾಣಯ್ಯ ಸರ್ವಜ್ಞ…
24) ಇಂಗಿನೊಳು ನಾತವನು, ತೆಂಗಿನೊಳಗೆಳೆನೀರು, ಭೃಂಗ ಕೋಗಿಲೆಯ ಕಂಠದೊಳು ಗಾಯನವ ತುಂಬಿದವರಾರು ಸರ್ವಜ್ಞ…
25) ಭಕ್ತರೊಡಗೂಡುವುದು, ಭಕ್ತರೊಡನಾಡುವದು, ಭಕ್ತರೊಳು ಭಕ್ತವೆರಿಸಿಪ್ಪ ಭಕ್ತನೇ ಮುಕ್ತನಾಗಿಹನು ಸರ್ವಜ್ಞ…
26) ಹಲವು ಸಂಗದ ತಾಯಿ ಹೊಲಸು ನಾರುವ ಬಾಯಿ, ಸಲೆ ಸ್ಮರಹರನ ನೆನೆಯದಾ ಬಾಯಿ ನಾಯ್ ಮಲವ ಮೆದ್ದಂತೆ ಸರ್ವಜ್ಞ…
27) ಎರೆಯನ್ನು ಉಳುವಂಗೆ ದೊರೆಯನ್ನು ಪಿಡಿದಂಗೆ, ಉರಗ ಭೂಷಣನ ನೆನೆವಂಗೆ ಭಾಗ್ಯವು ಅರಿದಲ್ಲವೆಂದ ಸರ್ವಜ್ಞ…
28) ಇಂದುವಿನೊಳುರಿಯುಂಟೇ? ಸಿಂಧುವಿನೊಳರಬುಂಟೇ? ಸಂದ ವೀರನೊಳು ಭಯವುಂಟೇ? ಭಕ್ತಗೆ ಸಂದೇಹವುಂಟೆ ಸರ್ವಜ್ಞ…
29) ಜಂಗಮನು ಭಕ್ತ ತಾಲಿಂಗದಂತಿರಬೇಕು, ಭಂಗಸಿ ಪರರನಳಿವ ಜಂಗಮನೊಂದು ಮಂಗನೆಂದರಿಗು ಸರ್ವಜ್ಞ…
30) ಧ್ಯಾನದಾ ಹೊಸಬತ್ತಿ, ಮೌನದಾ ತಿಳಿದುಪ್ಪ, ಸ್ವಾನುಭವವೆಂಬ ಬೆಳಗಿನಾ ಜ್ಯೋತಿಯ ಜ್ಞಾನವಂ ಸುಡುಗು ಸರ್ವಜ್ಞ…
31) ಧರೆಯ ತೇರನು ಮಾಡಿ, ಅಜನ ಸಾರಥಿ ಮಾಡಿ, ಹರಿಯು ಶರವಮಾಡಿ, ತ್ರಿಪುರವನು ಆಳಿದಂತೆ ಸರಿಯಾರು ಹೇಳಿ ಸರ್ವಜ್ಞ..
32) ಶ್ವಾನನಾನೆಯ ಬೊಗಳಲಾನೆ ತಾ ಬೊಗಳುವದೇ? ಜ್ಞಾನಿ ತಾ ಶ್ವಾನನಂದದಿ ಬೊಗಳಲಭಿ ಮಾನವಗಿಹುದೇ ಸರ್ವಜ್ಞ…
33) ಲಿಂಗದಾ ಗುಡಿ ಲೇಸು, ಗಂಗೆಯಾ ತಡಿ ಲೇಸು, ಲಿಂಗ ಸಂಗಿಗಳ ನುಡಿ ಲೇಸು, ಭಕ್ತರಾ ಸಂಗವೇ ಲೇಸು ಸರ್ವಜ್ಞ…
34) ತೆಪ್ಪವನು ನಂಬಿದಡೆ ತಪ್ಪದಲೆ ತಡಿಗಬಹುದು, ಸರ್ಪಭೂಷಣನ ನಂಬಿದಡೆ ಭವಪಾಶ ತಪ್ಪಿ ಹೋಗುವದು ಸರ್ವಜ್ಞ…
35) ಕೊಟ್ಟಿದ್ದು ಉಳಿಯುವದೇ? ಕಟ್ಟಿದ್ದು ನಿಲ್ಲುವದೇ? ಕೆಟ್ಟ ವಿಷಯವನು, ಹೆಂಗಳನು ಬಿಡದಿರೆ ಕೆಟ್ಟಹುದು ತಪವು ಸರ್ವಜ್ಞ…
36) ಮಾತಿನಾ ಬೊಮ್ಮವೂ, ತೂತಿನಾ ಮಡಿಕೆಯೂ, ಪಾತಕನ ನೆರೆಯೂ, ಈ ಮೂರು ಲೋಕದೊಳ ಗೇತಕ್ಕು ಬೇಡ ಸರ್ವಜ್ಞ…
37) ವೇದಶಾಸ್ತ್ರಾಗಮನ ನೋಡಿದೊಡೆ ಫಲವೇನು? ವೇದಿಸುವ ಚಿತ್ತಸಮರಸವು ಇಲ್ಲದೊಡೆ ಬೂದಿಯಲಿ ಹೋಮ ಸರ್ವಜ್ಞ…
38) ಪರ್ವತನೇರಿದೊಡೆ ಗರ್ವ ತನಗೇಕಯ್ಯ? ಸರ್ವಾಂತರ್ಯಾಮಿ ಶಿವನಿರಲು ತನ್ನೊಳಗೆ ಗರ್ವವಿಹುದೇಕೆ ಸರ್ವಜ್ಞ…
39) ಕೋಟಿ ಗೀತವನೊದಿ ಪಾಠಯಿಸಿ ಫಲವೇನು? ಕೂಟಸ್ಥನಲ್ಲದವನೋದು ಗಿಳಿಕಲಿತ ಪಾಠದಂತಕ್ಕು ಸರ್ವಜ್ಞ…
40) ಕಣಿಕವಿಲ್ಲದ ಊಟ, ವಿನಿತೆಯಿಲ್ಲದ ಬಾಳ್ವೆ, ಎಣಿಕೆಯಿಲ್ಲದವಳ ಮನೆವಾರ್ತೆ, ಹೊಳೆಯೊಳಗೆ ಮುಣುಗಿ ಹೋದಂತೆ ಸರ್ವಜ್ಞ…
41) ಮೊಸರು ಇಲ್ಲದ ಊಟ, ಕೆಸರು ಇಲ್ಲದ ಗದ್ದೆ, ಹಸನವಿಲ್ಲದವಳ ಮನೆವಾರ್ತೆ ತಿಪ್ಪೆಯ ಕಸದಂತೆ ಸರ್ವಜ್ಞ…
42) ಹೆಣ್ಣಿನಿಂದಲೇ ಇಹವು, ಹೆಣ್ಣಿನಿಂದಲೇ ಪರವು, ಹೆಣ್ಣಿನಿಂದಲೇ ಸಕಲ ಸಂಪದವು, ಹೆಣ್ಣಿಲ್ಲ ದಣ್ಣಗಳು ಎಲ್ಲಿ ಸರ್ವಜ್ಞ…
43) ಸುಣ್ಣವೀಲ್ಯದ ವೀಳ್ಯೆ, ಬಣ್ಣವಿಲ್ಲದಾ ಮದುವೆ, ಹೆಣ್ಣಿಲ್ಲದವನ ಸಂಸಾರ, ಮಳಲೊಳಗೆ ಎಣ್ಣೆ ಹೊಯ್ದಂತೆ ಸರ್ವಜ್ಞ…
44) ಮಕ್ಕಳಿಲ್ಲದ ಮನೆಯು ಪಕ್ಷಿ ಇಲ್ಲದ ವನವು, ದಿಕ್ಕಿಲ್ಲದವನ ಸಂಸಾರ ಕಳ್ಳನು ಮನೆ ಹೊಕ್ಕು ಹೋದಂತೆ ಸರ್ವಜ್ಞ…
45) ಷಟಸ್ಥಲದ ಮರ್ಮವನು ಸ್ಫುಟವಾಗಿ ತಾನರಿದು, ದಿಟವಾಗಿ ನಂಬಿ ನಡೆದಿಹರೆ ಇಹದಲ್ಲಿ ಘಟಿಸುವುದು ಮುಕ್ತಿ ಸರ್ವಜ್ಞ…
ಈ ಅಂಕಣ (Article) ನಿಮಗೆ ಇಷ್ಟವಾಗಿದ್ದರೆ ನಿಮ್ಮೆಲ್ಲ ಗೆಳೆಯರೊಡನೆ ಮತ್ತು ನೀವಿರುವ ಎಲ್ಲ ಕನ್ನಡ ಫೇಸ್ಬುಕ್ ಗ್ರೂಪಗಳಲ್ಲಿ ಇದನ್ನು ತಪ್ಪದೇ ಶೇರ್ (Share) ಮಾಡಿ. ಜೊತೆಗೆ ಪ್ರತಿದಿನ ಹೊಸಹೊಸ ಅಂಕಣಗಳನ್ನು, ಪ್ರೇಮಕಥೆಗಳನ್ನು, ಕವನಗಳನ್ನು ಉಚಿತವಾಗಿ ಓದಲು ತಪ್ಪದೆ ನನ್ನ ಫೇಸ್ಬುಕ್ ಪೇಜನ್ನು https://www.facebook.com/Directorsatishkumar/ (Director Satishkumar) ಲೈಕ್ ಮಾಡಿ.
Follow Me On : Facebook | Instagram | YouTube | Twitter
My Books : Kannada Books | Hindi Books | English Books
⚠ STRICT WARNING ⚠Content Rights :
ಈ ಅಂಕಣದ ಎಲ್ಲ ಹಕ್ಕುಗಳನ್ನು ಡೈರೆಕ್ಟರ್ ಸತೀಶಕುಮಾರ ಹಾಗೂ ರೋರಿಂಗ್ ಕ್ರಿಯೇಷನ್ಸ್ ಪ್ರೈವೇಟ್ ಲಿಮಿಟೆಡ್ ಕಂಪನಿ ವತಿಯಿಂದ ಸಂಪೂರ್ಣವಾಗಿ ಕಾಯ್ದಿರಿಸಲಾಗಿದೆ. ಡೈರೆಕ್ಟರ್ ಸತೀಶಕುಮಾರ ಅವರ ಅನುಮತಿಯಿಲ್ಲದೆ ಈ ಅಂಕಣದ ಯಾವುದೇ ಭಾಗವನ್ನು ಕಾಪಿ ಮಾಡುವಂತಿಲ್ಲ, ಬೇರೆ ಭಾಷೆಗಳಿಗೆ ಅನುವಾದಿಸುವಂತಿಲ್ಲ ಮತ್ತು ಇದನ್ನು ಬೇರೆಡೆಗೆ ಪ್ರಕಟಿಸುವಂತಿಲ್ಲ. ಯಾವುದೇ ಸಾಮಾಜಿಕ ಜಾಲತಾಣಗಳಲ್ಲಿ ಪೋಸ್ಟ್ ಮಾಡುವಂತಿಲ್ಲ. ಮುದ್ರಣ ಮಾಡುವಂತಿಲ್ಲ. ಒಂದು ವೇಳೆ ಯಾರಾದರೂ ಕಾಪಿ ರೈಟ್ಸ್ ನಿಯಮಗಳನ್ನು ಉಲ್ಲಂಘಿಸಿದರೆ ಅವರ ಮೇಲೆ ಸೂಕ್ತ ಕಾನೂನು ಕ್ರಮ ಕೈಗೊಳ್ಳಲಾಗುವುದು ಹಾಗೂ ಆಗಿರುವ ನಷ್ಟವನ್ನು ಅವರಿಂದಲೇ ವಸೂಲಿ ಮಾಡಲಾಗುವುದು.
All Rights of this article are fully reserved by Director Satishkumar and Roaring Creations Private Limited India. No part of this article can be copied, translated or re published anywhere without the written permission of Director Satishkumar. If such violation of copy rights found to us, then we legally punish to copy cats and recover our loss by them only.
© Director Satishkumar and Roaring Creations Private Limited, India.