ಜನಿಸಿದ ಮೇಲೆ ಸಾಧಿಸಲೇಬೇಕು ಎಂಬ ನಿಯಮವೇನಿಲ್ಲ. ಆದರೆ ಸತ್ತ ಮೇಲು ಬದುಕಿರಬೇಕೆಂದರೆ ಏನಾದರೂ ಒಂದನ್ನು ಸಾಧಿಸಲೇಬೇಕಲ್ಲ? ನಿಮ್ಮ ಯಶಸ್ಸು ನಿಮ್ಮ ದೃಢ ನಿರ್ಧಾರಗಳ ಮೇಲೆ ನಿಂತಿದೆ. ನಿಮ್ಮ ಬಳಿ ಗುರಿಯಿದ್ದರೆ ಗೆಳೆಯರು, ಗುರುಗಳು ನಿಮ್ಮನ್ನು ಬೆಂಬಲಿಸಿಬಹುದು. ಆದರೆ ನಿಮ್ಮ ಬಳಿ ಗುರಿಯೇ ಇಲ್ಲದಿದ್ದರೆ ಯಾರೇನು ಮಾಡಬಲ್ಲರು? ನಿಮ್ಮಿಂದ ಎಲ್ಲವೂ ಸಾಧ್ಯವಿದೆ. ನೀವು ಮನಸ್ಸು ಮಾಡಿ ಮುನ್ನಡೆದರೆ ಎಲ್ಲವೂ ನಿಮ್ಮ ಮುಂದೆ ತಲೆ ಬಾಗುತ್ತವೆ.
ಕೆಲವು ಸಂಗತಿಗಳು ಸುಲಭವಲ್ಲ. ಆದರೆ ಅವೇನು ಅಸಾಧ್ಯವಲ್ಲವಲ್ಲ? ಬದುಕಿದ್ದು ಸತ್ತಂತಿರುವುದರಲ್ಲಿ, ನಿಜವಾಗಿಯೂ ಸಾಯುವುದರಲ್ಲಿ ಯಾವುದೇ ವ್ಯತ್ಯಾಸವಿಲ್ಲ. ಸತ್ತ ಮೇಲು ಬದುಕಿರಬೇಕೆಂದರೆ ಏನಾದರೂ ಒಂದನ್ನು ಸಾಧಿಸಲೇಬೇಕು. ಸತ್ತ ಮೇಲು ಬದುಕಿರಬೇಕೆಂಬ ಆಸೆ ನಿಮಗಿದ್ದರೆ ಇವತ್ತೇ ಏನಾದರೂ ಒಂದನ್ನು ಸಾಧಿಸಿಯೇ ಸಾಯುತ್ತೇನೆ ಎಂಬ ಗುರಿಯನ್ನಿಟ್ಟುಕೊಳ್ಳಿ. ಏನಾದರೂ ಸಾಧಿಸದೇ ಸಾಯದಿರಿ. All the Best…