ಹಾಯ್ ಗೆಳೆಯರೇ, ಕನಸುಗಳಿಲ್ಲದ ವ್ಯಕ್ತಿ ಇದ್ದು ಸತ್ತಂತೆ. ನಿಮಗೆ ನಿಮ್ಮದೇ ಆದ ಕನಸುಗಳಿಲ್ಲದಿದ್ದರೆ ನೀವು ಜೀವಂತ ಶವ ಎಂದರ್ಥ. ಕನಸುಗಳು ಬಹಳಷ್ಟು ಶಕ್ತಿಯನ್ನು ಹೊಂದಿವೆ. ಕನಸುಗಳಿಗೆ ತಮ್ಮದೇ ಆದ ಪವರಯಿದೆ.
ಕನಸುಗಳು ನಮಗೆ ನಮ್ಮ ಲೈಫಲ್ಲಿ ಯಾವುದು ಬೇಕು? ಯಾವುದು ಬೇಡ? ಎಂಬುದನ್ನು ಪ್ರಯರಟೈಜ (Prioritize) ಮಾಡಲು ಹೆಲ್ಪ ಮಾಡುತ್ತವೆ.
ಕನಸುಗಳು ನಮ್ಮ ಫ್ಯುಚರ ಬಗ್ಗೆ ಹೊಸ ಹೋಪ್ಸಗಳನ್ನು ಹುಟ್ಟಾಕುತ್ತವೆ. ನಮ್ಮನ್ನು ನಾವು ಸರಿಯಾಗಿ ಅರ್ಥ ಮಾಡಿಕೊಳ್ಳಲು ನಮ್ಮ ಕನಸುಗಳು ಪ್ರೇರಣೆ ನೀಡುತ್ತವೆ.
ಕನಸುಗಳು ನಮ್ಮ ಕಾನ್ಸಿಯಸ್ & ಸಬ ಕಾನ್ಸಿಯಸ್ ಮೈಂಡಗಳ ನಡುವೆ ಕಮ್ಯುನಿಕೇಷನ್ ಮಾಡುತ್ತವೆ. ನಮ್ಮ ಅಸಲಿ ಶಕ್ತಿ ಸಾಮರ್ಥ್ಯವನ್ನು ಹೊರಗೆಳೆದು ಕೆಲಸ ಮಾಡಿಸುತ್ತವೆ.
ಕನಸುಗಳು ನಮಗೆ ಲೈಫಲ್ಲಿ ಮುಂದೆ ಸಾಗಲು ಫೋಕಸನ್ನು ನೀಡುತ್ತವೆ, ಸರಿಯಾದ ಡೈರೆಕ್ಷನನ್ನು ತೋರಿಸುತ್ತವೆ, ನಾವು ನಮ್ಮ ಗೋಲಗಳನ್ನು ರೀಚ್ ಆಗಲು ಗೈಡ ಮಾಡುತ್ತವೆ.
ಕನಸುಗಳಿಂದಾಗಿ ನಮ್ಮ ಲೈಫಲ್ಲಿ ಡಿಸಿಪ್ಲೇನ ಬರುತ್ತದೆ, ನಮ್ಮ ಲೈಫಿಗೆ ಒಂದು ಕ್ಲಿಯರ್ ಪರಪಜ ಸಿಗುತ್ತದೆ.
ಕನಸುಗಳು ನಮ್ಮ ವಿಲ್ ಪವರ್ ಹಾಗೂ ಕಾನ್ಫಿಡೆನ್ಸನ್ನು ಹೆಚ್ಚಿಸಿ ನಮಗೆ ರೈಟ ಆ್ಯಕ್ಷನ್ಸಗಳನ್ನು ತೆಗೆದುಕೊಳ್ಳಲು ಪುಷ್ (Push) ಮಾಡುತ್ತವೆ.
ನಮ್ಮ ಕನಸುಗಳು ನಮ್ಮ ಫ್ಯುಚರನ್ನು ಪ್ರೇಡಿಕ್ಟ ಮಾಡುತ್ತವೆ. ನಾವು ನಮ್ಮ ಗೋಲಗಳ ಬಗ್ಗೆ ಇಮ್ಯಾಜಿನೇಷನ್ ಮಾಡಿದಷ್ಟು ನಾವು ನಮ್ಮ ಗೋಲಗಳ ಹತ್ತಿರ ಹೋಗುತ್ತೇವೆ.
ನಮ್ಮ ಕನಸುಗಳು ನಮ್ಮನ್ನು ಸದಾಕಾಲ ಹ್ಯಾಪಿಯಾಗಿಡುತ್ತವೆ, ನಮ್ಮನ್ನು ಮೋಟಿವೇಟ ಮಾಡುತ್ತವೆ.
ನಮ್ಮ ಕನಸುಗಳಿಗೆ ನಮ್ಮ ಡಿಜೈರ ಹಾಗೂ ಗೋಲಗಳನ್ನು ರಿಯಾಲಿಟಿಯಾಗಿ ಬದಲಿಸುವ ಮಹಾನ ಶಕ್ತಿಯಿದೆ.
ನಮ್ಮ ಡ್ರೀಮಲೈಫ, ಡ್ರೀಮ ಲೈಫ್ ಪಾರ್ಟನರ್ & ಡ್ರೀಮ ಥಿಂಗ್ಸಗಳನ್ನು ಪಡೆಯಲು ನಮ್ಮ ಡ್ರೀಮಗಳು ನಮ್ಮನ್ನು ಮೋಟಿವೇಟ ಮಾಡುತ್ತವೆ. Only our dreams motivates us to get our Dream Life, Dream Life Partner and Dream things. So don’t hesitate to see dreams.
ಗೆಳೆಯರೇ ಈ ರೀತಿ ನಮ್ಮ ಡ್ರೀಮಗಳಿಗೆ ಅಂದರೆ ಕನಸುಗಳಿಗೆ ಬಹಳಷ್ಟು ಪವರ್ ಇದೆ. ನಾವು ಕನಸಲ್ಲಿ ಕಂಡಿರುವುದನ್ನೆಲ್ಲ ಖರೀದಿಸುವ ಸಾಮರ್ಥ್ಯ ನಮ್ಮಲ್ಲಿದೆ. ಆದರೆ ನಮ್ಮ ಪ್ರಾಬ್ಲಮ ಏನಪ್ಪ ಅಂದ್ರೆ ನಮ್ಮಲ್ಲಿ ಬಹಳಷ್ಟು ಜನರಿಗೆ ಕನಸುಗಳಿಲ್ಲ, ದೊಡ್ಡ ಕನಸುಗಳನ್ನು ಕಾಣುವಷ್ಟು ಧೈರ್ಯವಿಲ್ಲ.
ಗೆಳೆಯರೇ, ನಿಮಗೆ ನಿಮ್ಮದೇ ಆದ ಕನಸುಗಳಿದ್ದರೆ ನೀವು ನಿಮಗಾಗಿ ಕೆಲಸ ಮಾಡುತ್ತೀರಿ. ಇಲ್ಲದಿದ್ದರೆ ನೀವು ಬೇರೆಯವರ ಕನಸುಗಳಿಗಾಗಿ ಕೆಲಸ ಮಾಡುತ್ತೀರಿ. ಸೋ ಕನಸುಗಳನ್ನು ಕಾಣಲು ಸ್ಟಾರ್ಟ ಮಾಡಿ. ದೊಡ್ಡ ಕನಸುಗಳನ್ನು ಕಾಣುವ ಧೈರ್ಯ ಮಾಡಿ. At least dare to dream big. ಕನಸುಗಳಿಲ್ಲದ ವ್ಯಕ್ತಿ ಜೀವಂತ ಶವದಂತೆ. ಸೋ ಕನಸುಗಳನ್ನು ಕಾಣಿ. ಕನಸುಗಳನ್ನು ಕಾಣಲು ಯಾವುದೇ ಕರ ಕಟ್ಟಬೇಕಾಗಿಲ್ಲ, ಟ್ಯಾಕ್ಸ ಕಟ್ಟಬೇಕಾಗಿಲ್ಲ. ಕಣ್ಣಿಲ್ಲದವರು ಕನಸು ಕಾಣುತ್ತಿರುವಾಗ ಕಣ್ಣೀರುವ ನಿಮಗೇನಾಗಿದೆ? ಮಲಗಿ ನಿದ್ದೆ ಮಾಡುತ್ತಾ ಅಶ್ಲೀಲ ಕನಸುಗಳನ್ನು ಕಾಣಬೇಡಿ, ಎಚ್ಚರವಿದ್ದು ಗ್ರೇಟ ಕನಸುಗಳನ್ನು ಕಾಣಿ.
ಗೆಳೆಯರೇ, ನಿಮಗೆ ಲೈಫಲ್ಲಿ ಎರಡು ತರಹದ ಜನ ಸಿಗ್ತಾರೆ. ಒಂದು “ದೊಡ್ಡ ಕನಸುಗಳನ್ನು ಕಾಣಬೇಡ….” ಅನ್ನೋ ಲೂಜರಗಳು, ಇನ್ನೊಂದು “ದೊಡ್ಡ ಕನಸುಗಳನ್ನು ಕಾಣು….” ಅನ್ನೋ ವಿನ್ನರಗಳು. ಲೂಜರಗಳ ಮಾತನ್ನು ಯಾವುದೇ ಕಾರಣಕ್ಕೂ ಕೇಳಬೇಡಿ. ವಿನ್ನರಗಳ ಮಾತನ್ನು ಕೇಳಿ ನೀವು ಮುಂದೆ ವಿನ್ನರಗಳಾಗುತ್ತೀರಿ. ಕನಸುಗಳನ್ನು ಕಾಣಲು ಹೆದರಬೇಡಿ. ಧೈರ್ಯವಾಗಿ ದೊಡ್ಡ ಕನಸುಗಳನ್ನು ಕಾಣಿ. ಮಹಾನ ಕನಸುಗಾರರ ಎಲ್ಲ ಕನಸುಗಳು ಖಂಡಿತ ನನಸಾಗುತ್ತವೆ. ನೀವು ಸತ್ತ ಮೇಲೂ ನಿಮ್ಮ ಕನಸುಗಳು ನನಸಾಗುತ್ತವೆ.
ಉದಾಹರಣೆಗೆ : ಶೇಕ್ಸಪಿಯರ್ ಹಾಗೂ ಡಾ. ವಿಕ್ರಮ ಸಾರಾಭಾಯಿ. ಶೇಕ್ಸಪಿಯರ್ ಬದುಕಿದ್ದಾಗ ಅವನ ಒಂದು ನಾಟಕವೂ ಬುಕ್ ರೂಪದಲ್ಲಿ ಪ್ರಕಟವಾಗಲಿಲ್ಲ, ಅವನು ಸತ್ತು ಎಷ್ಟೋ ವರ್ಷಗಳ ನಂತರ ಅವನ ಎಲ್ಲ ನಾಟಕಗಳು ಪ್ರಕಟವಾದವು. ಅವನ ಕನಸು ಕೊನೆಗೂ ನನಸಾಯಿತು. ಅದೇ ರೀತಿ ಭಾರತದ ಮೊದಲ ಸ್ಯಾಟಲೈಟ್ ಆರ್ಯಭಟವನ್ನು ಗಗನಕ್ಕೇರಿಸುವುದು ಡಾ. ವಿಕ್ರಮ ಸಾರಾಭಾಯಿಯವರ ಕನಸಾಗಿತ್ತು. ಅದಕ್ಕಾಗಿ ಅವರು ನಾಲ್ಕೈದು ವರ್ಷಗಳಿಂದ ಕೆಲಸ ಮಾಡುತ್ತಿದ್ದರು. ಆದರೆ ಆರ್ಯಭಟ ಲಾಂಚ್ ಆಗುವ ಕೆಲವೇ ದಿನಗಳ ಮುಂಚೆ ಅವರ ನಿಧನವಾಯಿತು, ನಂತರ ಆರ್ಯಭಟ ಆರ್ಬಿಟಗೆ ಹಾರಿತು. ಅವರ ಕನಸು ನನಸಾಯಿತು. ನೋಡಿದ್ರಲ್ಲ ಮಹಾನ ಕನಸುಗಾರರ ಕನಸುಗಳು, ಪರಿಶ್ರಮ ಯಾವತ್ತೂ ವ್ಯರ್ಥವಾಗಲ್ಲ. ಅವರು ಸತ್ತ ಮೇಲೂ ಅವರ ಎಲ್ಲ ಕನಸುಗಳು ನನಸಾಗೇ ಆಗುತ್ತವೆ. ಲೇಟಾಗಬಹುದು, ಬಟ ಖಂಡಿತ ನನಸಾಗುತ್ತವೆ. ಸೋ ಗೆಳೆಯರೇ, ಕನಸುಗಳನ್ನು ಕಾಣಲು ಸ್ಟಾರ್ಟ ಮಾಡಿ. ನಿಮಗೆ ಮೋಟಿವೇಷನಲ ಸಪೋರ್ಟ್ ಬೇಕಿದ್ದರೆ ನನಗೆ ಇನ್ಸಸ್ಟಾಗ್ರಾಮಲ್ಲಿ ಮೆಸೆಜ ಮಾಡಿ. Dream Big and Do Big. All the best and Thanks You…
ಈ ಅಂಕಣ (Article) ನಿಮಗೆ ಇಷ್ಟವಾಗಿದ್ದರೆ ನಿಮ್ಮೆಲ್ಲ ಗೆಳೆಯರೊಡನೆ ಮತ್ತು ನೀವಿರುವ ಎಲ್ಲ ಕನ್ನಡ ಫೇಸ್ಬುಕ್ ಗ್ರೂಪಗಳಲ್ಲಿ ಇದನ್ನು ತಪ್ಪದೇ ಶೇರ್ (Share) ಮಾಡಿ. ಜೊತೆಗೆ ಪ್ರತಿದಿನ ಹೊಸಹೊಸ ಅಂಕಣಗಳನ್ನು, ಪ್ರೇಮಕಥೆಗಳನ್ನು, ಕವನಗಳನ್ನು ಉಚಿತವಾಗಿ ಓದಲು ತಪ್ಪದೆ ನನ್ನ ಫೇಸ್ಬುಕ್ ಪೇಜನ್ನು https://www.facebook.com/Directorsatishkumar/ (Director Satishkumar) ಲೈಕ್ ಮಾಡಿ.
Follow Me On : Facebook | Instagram | YouTube | Twitter
My Books : Kannada Books | Hindi Books | English Books
⚠ STRICT WARNING ⚠Content Rights :
ಈ ಅಂಕಣದ ಎಲ್ಲ ಹಕ್ಕುಗಳನ್ನು ಡೈರೆಕ್ಟರ್ ಸತೀಶಕುಮಾರ ಹಾಗೂ ರೋರಿಂಗ್ ಕ್ರಿಯೇಷನ್ಸ್ ಪ್ರೈವೇಟ್ ಲಿಮಿಟೆಡ್ ಕಂಪನಿ ವತಿಯಿಂದ ಸಂಪೂರ್ಣವಾಗಿ ಕಾಯ್ದಿರಿಸಲಾಗಿದೆ. ಡೈರೆಕ್ಟರ್ ಸತೀಶಕುಮಾರ ಅವರ ಅನುಮತಿಯಿಲ್ಲದೆ ಈ ಅಂಕಣದ ಯಾವುದೇ ಭಾಗವನ್ನು ಕಾಪಿ ಮಾಡುವಂತಿಲ್ಲ, ಬೇರೆ ಭಾಷೆಗಳಿಗೆ ಅನುವಾದಿಸುವಂತಿಲ್ಲ ಮತ್ತು ಇದನ್ನು ಬೇರೆಡೆಗೆ ಪ್ರಕಟಿಸುವಂತಿಲ್ಲ. ಯಾವುದೇ ಸಾಮಾಜಿಕ ಜಾಲತಾಣಗಳಲ್ಲಿ ಪೋಸ್ಟ್ ಮಾಡುವಂತಿಲ್ಲ. ಮುದ್ರಣ ಮಾಡುವಂತಿಲ್ಲ. ಒಂದು ವೇಳೆ ಯಾರಾದರೂ ಕಾಪಿ ರೈಟ್ಸ್ ನಿಯಮಗಳನ್ನು ಉಲ್ಲಂಘಿಸಿದರೆ ಅವರ ಮೇಲೆ ಸೂಕ್ತ ಕಾನೂನು ಕ್ರಮ ಕೈಗೊಳ್ಳಲಾಗುವುದು ಹಾಗೂ ಆಗಿರುವ ನಷ್ಟವನ್ನು ಅವರಿಂದಲೇ ವಸೂಲಿ ಮಾಡಲಾಗುವುದು.
All Rights of this article are fully reserved by Director Satishkumar and Roaring Creations Private Limited India. No part of this article can be copied, translated or re published anywhere without the written permission of Director Satishkumar. If such violation of copy rights found to us, then we legally punish to copy cats and recover our loss by them only.
© Director Satishkumar and Roaring Creations Private Limited, India.