ನಿಜವಾದ ಪ್ರೀತಿ ಒಂದೇ ಸಲ ಆಗೋದು. ಮೊದಲ ಪ್ರೀತಿ ಒಂದು ಮರೆಯಲಾಗದ ಅನುಭವ. ಆದರೂ ಅದನ್ನು ಮರೆಯಲೇಬೇಕಾದ ಅನಿವಾರ್ಯತೆ ಎದುರಾಗುತ್ತದೆ. ಪ್ರೀತಿ ನಮ್ಮ ಹೃದಯಕ್ಕಾಗುವ ಒಂದು ಸುಂದರ ಮಾಯದ ಗಾಯ. ಪ್ರಾಯದಲ್ಲಿ ಈ ಗಾಯವಾಗುವುದು ಮಾಮೂಲು. ಎಲ್ಲರ ಜೀವನದಲ್ಲೂ ಮೊದಲ ಪ್ರೇಯಸಿ ಮಡದಿಯಾಗಿ ಬರುವುದಿಲ್ಲ. ನೂರಕ್ಕೆ 99%ರಷ್ಟು ಜನ ಮೊದಲ ಪ್ರೀತಿಯನ್ನು ಕಳೆದುಕೊಂಡಿರುತ್ತಾರೆ. ಇಲ್ಲವೇ ಮೋಸಹೋಗಿರುತ್ತಾರೆ. ಬಹುಸಂಖ್ಯಾತ ಜನರಿಗೆ ಎರಡನೆಯ ಪ್ರೇಯಸಿಯೇ ಬಾಳಸಂಗಾತಿಯಾಗುತ್ತಾಳೆ. ಮೊದಲ ಪ್ರೇಯಸಿ ಮರೆಯಲಾಗದ ನೆನಪಾಗಿ ಕಾಡುತ್ತಾಳೆ.
ಪ್ರೀತಿಯೆಂಬ ನಾಲ್ಕಕ್ಷರ ಕೊಟ್ಟ ಅನುಭವವನ್ನು ಮರೆಯಲು ನಾಲ್ಕು ಜನ್ಮಗಳು ಸಾಕಾಗುವುದಿಲ್ಲ. ಮುರಿದ ಮನಸ್ಸಿನಿಂದ ಸಂತೋಷವಾಗಿ ಜೀವನ ಸಾಗಿಸಲು ಸಾಧ್ಯವಿಲ್ಲ. ಕಾಗದದ ದೋಣಿ, ಮುರಿದ ಮನಸ್ಸು ಹೆಚ್ಚುಕಮ್ಮಿ ಎರಡೂ ಒಂದೇ. ಕತ್ತಲಲ್ಲಿ ಕುಂತು ಕವನ ಬರೆಯುವ ಕವಿಗಳು ಮಾತ್ರ ಮುರಿದ ಮನಸ್ಸಿನೊಂದಿಗೆ ಖುಷಿಯಾಗಿರಬಹುದು. ಮೊದಲ ಪ್ರೇಯಸಿ ಯಾವುದೋ ಕಾರಣಕ್ಕೆ ನಮ್ಮಿಂದ ಶಾಶ್ವತವಾಗಿ ದೂರಾದಾಗ, ಅವಳ ಮುದ್ದಾದ ನೆನಪುಗಳು ಹೃದಯಕ್ಕೆ ಮುಳ್ಳಾಗಿ ಚುಚ್ಚುತ್ತವೆ. ಮೊದಲ ಪ್ರೀತಿಯಲ್ಲಿ ಮೋಸಹೋದ ಹುಡುಗರು ಮೊದಲ ಪ್ರೇಯಸಿಯನ್ನು ಮರೆಯಲು ಭಗೀರಥ ಪ್ರಯತ್ನ ಮಾಡುತ್ತಾರೆ. ಮರಳಿ ಬರದವಳಿಗಾಗಿ ನಮ್ಮ ಬಂಗಾರದಂಥ ಜೀವನವನ್ನು ಕತ್ತಲಾಗಿಸಿಕೊಂಡು ಕೊನೆಯವರೆಗೂ ಕಾಯುವುದರಲ್ಲಿ ಯಾವುದೇ ಅರ್ಥವಿಲ್ಲ. ಬಿಟ್ಟು ಹೋದವಳಿಗೆ Thanks ಹೇಳಿ ಹೊಸ ಜೀವನ ಶುರುಮಾಡುವುದು ನಿಜವಾದ ಬುದ್ಧಿವಂತರ ಲಕ್ಷಣ.
ಮೊದಲ ಪ್ರೇಯಸಿಯನ್ನು ಸುಲಭವಾಗಿ ಮರೆಯುವ ಉಪಾಯಗಳು ಇಂತಿವೆ;
೧) ಮೊದಲು ಅವಳು ಕೊಟ್ಟ ಎಲ್ಲ ಉಡುಗೊರೆಗಳನ್ನು ಸಂಗ್ರಹಿಸಿ ಕಸದ ತೊಟ್ಟಿಗೆ ಬಿಸಾಕಿ. ಕೆಲಸಕ್ಕೆ ಬಾರದ ಉಡುಗೊರೆಗಳನ್ನು ನಿಮ್ಮ ಬಳಿಯಿಟ್ಟುಕೊಂಡು ಕೊರಗಬೇಡಿ.
೨) ಅವಳು ನಿಮಗೆ ಬರೆದ ಅಥವಾ ನೀವು ಅವಳಿಗೆ ಬರೆದ ಎಲ್ಲ ಪ್ರೇಮಪತ್ರಗಳನ್ನು, ಗಿಫ್ಟಕಾರ್ಡಗಳನ್ನು ಸುಟ್ಟಾಕಿ. ಅವಳನ್ನು ನೆನಪಿಸುವ ಯಾವುದೇ ವಸ್ತುಗಳನ್ನು ನಿಮ್ಮ ಬಳಿ ಯಾವುದೇ ಕಾರಣಕ್ಕೂ ಇಟ್ಟುಕೊಳ್ಳಬೇಡಿ.
೩) ನಿಮ್ಮ ದೇಹದ ಮೇಲೆ ಅವಳ ಹೆಸರನ್ನು ಅಚ್ಚೆ ಹಾಕಿಸಿಕೊಂಡಿದ್ದರೆ ಅದನ್ನು ತೆಗೆದು ಬಿಡಿ. ಬಂಧನವಾಗಿರುವ ಅವಳ ಪ್ರೇಮದ ಎಲ್ಲ ಬಂಧಗಳನ್ನು ಬಿಡಿಸಿಕೊಳ್ಳಿ.
೪) ಅವಳನ್ನು ನಿಮ್ಮ ತಲೆಯಿಂದ ಡಿಲೀಟ ಮಾಡಿ. ಅವಳ ಬಗ್ಗೆ ಅನಾವಶ್ಯಕವಾಗಿ ಚಿಂತಿಸುವುದನ್ನು ನಿಲ್ಲಿಸಿದರೆ ಅವಳು ನಿಮ್ಮ ತಲೆಯಿಂದ ಡಿಲೀಟ ಆದಂತೆ.
೫) ಪ್ರೀತಿಯಲ್ಲಿ ಸೋತಾಗ ಜಿಗುಪ್ಸೆಪಡದೆ ಜೀವನದಲ್ಲಿ ಗೆಲ್ಲಲೇಬೇಕೆಂಬ ಹಟತೊಡಿ. ಪ್ರೀತಿಯಲ್ಲಿ ಎಡವಿ ಬಿದ್ದಾಗ ಆದ ನೋವನ್ನು ಜೀವನವನ್ನು ಗೆದ್ದ ನಗುವಲ್ಲಿ ಮರೆತುಬಿಡಿ. ಸಾಧನೆಗಿಂತ ಸೂಕ್ತವಾದ ಸೇಡಿಲ್ಲ. ನಿಮ್ಮನ್ನು ಕಳೆದುಕೊಂಡಿದ್ದಕ್ಕಾಗಿ ಅವಳು ಪಶ್ಚಾತ್ತಾಪ ಪಡುವಂಥ ಸಾಧನೆ ಮಾಡುವುದರೊಂದಿಗೆ ನಿಯತ್ತಾಗಿ ಸಾಕಷ್ಟು ದುಡ್ಡನ್ನು ಸಂಪಾದಿಸಿ.
೬) ಸದಾ ಕ್ರಿಯಾಶೀಲರಾಗಿರಿ. ದೈಹಿಕವಾಗಿ ಮತ್ತು ಮಾನಸಿಕವಾಗಿ ಬಲಿಷ್ಟರಾಗಿ ನಿಮ್ಮ ಭವಿಷ್ಯವನ್ನು ರೂಪಿಸುವ ಕಡೆಗೆ ಹೆಚ್ಚಿನ ಗಮನ ಕೊಡಿ. ನಿಮ್ಮ ಸಂಪೂರ್ಣ ಗಮನ ನಿಮ್ಮ ಭವಿಷ್ಯದ ಮೇಲಿದ್ದಾಗ ನಿಮ್ಮ ಬಾಳಿಗೆ ಬೆಂಕಿಯಿಟ್ಟವಳ ನೆನಪು ಬರಲು ಸಾಧ್ಯವೇ ಇಲ್ಲ.
೭) ಪ್ರತಿದಿನ ಯೋಗ, ಪ್ರಾಣಾಯಾಮಗಳ ಜೊತೆಗೆ ಸಾಧ್ಯವಾದರೆ ಸ್ವಲ್ಪ ಧ್ಯಾನವನ್ನೂ ಮಾಡಿ. ಆಕರ್ಷಕ ಮೈಕಟ್ಟು ಬೆಳೆಸಿ. ಲೀಟರಗಟ್ಟಲೆ ಸಾರಾಯಿ ಕುಡಿದು ಡೊಳ್ಳು ಹೊಟ್ಟೆಯ ಜೊತೆಗೆ ಕಿಲೋಮೀಟರ್ ಗಡ್ಡ ಬಿಟ್ಟೇನು ಪ್ರಯೋಜನವಿಲ್ಲ. ನಿಮ್ಮ ದೇಹ ಸದೃಢವಾಗಿದ್ದರೆ ಮಾತ್ರ ನಿಮ್ಮ ಮನಸ್ಸು ಪ್ರಶಾಂತವಾಗಿರುತ್ತದೆ.
೮) ನಿಮ್ಮ ಸುತ್ತಮುತ್ತಲಿರುವ ಸುಂದರವಾದ ನೈಸರ್ಗಿಕ ತಾಣಗಳಿಗೆ ಭೇಟಿ ಕೊಡಿ. ಇದರಿಂದ ಹೊಸ ಗಾಳಿ, ಹೊಸ ವಾತಾವರಣ ಸಿಗುವುದರಿಂದ ನಿಮ್ಮ ಮೂಡ್ ಬದಲಾಗುತ್ತದೆ. ನಿಮ್ಮ ಮೂಡ್ ಬದಲಾದಾಗ ತಾನಾಗಿಯೇ ನಿಮ್ಮಲ್ಲಿ ಹೊಸಹೊಸ ಆಲೋಚನೆಗಳು ಹುಟ್ಟುತ್ತವೆ.
೯) ಸಾಧ್ಯವಾದರೆ ಇಲ್ಲವೇ ಅಭಿರುಚಿಯಿದ್ದರೆ ಕ್ರಿಯೇಟಿವ ಕಲೆಗಳಾದ ಸಿಂಗಿಂಗ್, ಡ್ಯಾನ್ಸಿಂಗ, ಆ್ಯಕ್ಟಿಂಗ್, ಡ್ರಾಯಿಂಗ್ ಮುಂತಾದವುಗಳಲ್ಲಿ ನಿಮ್ಮನ್ನು ತೊಡಗಿಸಿಕೊಳ್ಳಿ.
೧೦) ಅವಳು ನಿಮಗೆ ಕಳಿಸಿದ ಎಲ್ಲ ಪ್ರೇಮಸಂದೇಶಗಳನ್ನು ಡಿಲೀಟ ಮಾಡಿ. ಅವಳೊಂದಿಗೆ ಸಂಪೂರ್ಣವಾಗಿ ಸಂಪರ್ಕವನ್ನು ಕಡಿತಗೊಳಿಸಿ. ಯಾವುದೇ ರೀತಿಯಲ್ಲಿ ಅವಳನ್ನು ಸಂಪರ್ಕಿಸುವ ಪ್ರಯತ್ನ ಮಾಡಬೇಡಿ.
೧೧) ಒಂಟಿಯಾಗಿರಲು ಪ್ರಯತ್ನಿಸಬೇಡಿ. ಎಲ್ಲರೊಂದಿಗೆ ಫ್ರೆಂಡ್ಲಿಯಾಗಿರಿ. ಪ್ರೇಯಸಿಯ ಮೇಲಿನ ಕೋಪವನ್ನು ಫ್ರೆಂಡ್ಸ್ ಮತ್ತು ಫ್ಯಾಮಿಲಿ ಮೇಲೆ ತೋರಿಸಬೇಡಿ. ಅವಶ್ಯಕತೆ ಇದೆ ಅಂತ ಅನಿಸಿದರೆ ಹೊಸ ಸ್ನೇಹಿತರನ್ನು ಮಾಡಿಕೊಳ್ಳಿ. ಮನಸ್ಸಿಗೆ ಖುಷಿ ಕೊಡುವ ಹೊಸಹೊಸ ವಿಚಾರಗಳನ್ನು ಪರಸ್ಪರ ಹಂಚಿಕೊಳ್ಳಿ. ಆದರೆ ಅವರೊಂದಿಗೆ ನಿಮ್ಮ ನೋವುಗಳನ್ನು, ಗಾಯಗೊಂಡ ಭಾವನೆಗಳನ್ನು ಶೇರ್ ಮಾಡಬೇಡಿ. ಇದರಿಂದ ನಿಮಗೆ ಮತ್ತಷ್ಟು ನೋವಾಗುತ್ತದೆ.
೧೨) ಸದ್ಯದ ಪರಿಸ್ಥಿತಿಗೆ ತಕ್ಕಂತೆ ನಿಮ್ಮ ಲೈಫಸ್ಟೈಲನ್ನು ಬದಲಾಯಿಸಿಕೊಳ್ಳಿ. ಅವಶ್ಯಕವೆನಿಸಿದರೆ ನಿಮ್ಮ ಹವ್ಯಾಸಗಳನ್ನು ಬದಲಿಸಿ.
೧೩) ಜೀವನದಲ್ಲಿ ಸಾಧಿಸಲು ಕೆಲವು ಗುರಿಗಳನ್ನು ಗುರ್ತಿಸಿಕೊಳ್ಳಿ. ಆ ಗುರಿಗಳ ಈಡೇರಿಕೆಗಾಗಿ ಪ್ರಾಮಾಣಿಕವಾಗಿ ಪ್ರಯತ್ನಿಸಿ.
೧೪) ಪ್ರತಿಯೊಂದು ಹೆಜ್ಜೆಯಲ್ಲೂ ಕಾನ್ಫಿಡೆಂಟಾಗಿರಿ. ಸೋಲು, ನೋವು, ಅವಮಾನ, ಹತಾಶೆಗಳಿಗೆ ಹೆದರದೆ ಧೈರ್ಯವಾಗಿ ಮುಂದೆ ಸಾಗಿ.
೧೫) ಕುಡಿತ, ಸಿಗರೇಟ್, ಡ್ರಗ್ಸಗಳಿಗೆ ದಾಸರಾಗಬೇಡಿ. ಮರೆದುಹೋದ ನೆನಪುಗಳನ್ನು ಪುನ: ಕೆಣಕುವ ಪ್ಯಾಥೋಸಾಂಗಗಳಿಗೆ ಅಂಟಿಕೊಳ್ಳಬೇಡಿ.
೧೬) ಎಲ್ಲವನ್ನೂ ಕಳೆದುಕೊಂಡ ಹೇಡಿಯಂತೆ ಇಲ್ಲವೇ ಹುಚ್ಚರಂತೆ ವರ್ತಿಸಬೇಡಿ. ನಿಮ್ಮನ್ನು ನೀವು ಮೊದಲು ನಂಬಿ. ನಿಮ್ಮ ಸಾಮರ್ಥ್ಯವನ್ನು ಸರಿಯಾಗಿ ಉಪಯೋಗಿಸಿಕೊಂಡು ನಿಮ್ಮ ಭವಿಷ್ಯವನ್ನು ಉಜ್ವಲವಾಗಿಸಿಕೊಳ್ಳಿ.
೧೭) ನೀವು ನಿಮ್ಮ ಗುರಿ ಮುಟ್ಟಿದಾಗ ನಿಮ್ಮನ್ನು ನಿಜವಾಗಿ ಪ್ರೀತಿಸುವ ಹುಡುಗಿಯನ್ನು ಪ್ರೀತಿಸಿ. ಮೊದಲ ಪ್ರೀತಿಯಲ್ಲಿ ಮಾಡಿದ ತಪ್ಪುಗಳನ್ನು ಹೊಸ ಪ್ರೀತಿಯಲ್ಲಿ ಸರಿಯಾಗಿ ತಿದ್ದಿಕೊಳ್ಳಿ.
೧೮) ನಿಮ್ಮ ಹೊಸ ಪ್ರೇಯಸಿಯನ್ನೇ ಮದುವೆಯಾಗಿ ಸಂತೋಷವಾಗಿ ಜೀವನ ಸಾಗಿಸಿ.
Good Luck.
ಈ ಅಂಕಣ ಮೊದಲ ಪ್ರೀತಿಯನ್ನು ಮರೆಯಲಾಗದೆ ಒದ್ದಾಡುತ್ತಿರುವವರಿಗೆ ಉಪಯೋಗವಾಗಬಹುದು. ನಮ್ಮ ದೇಶದ ಯುವಶಕ್ತಿ ಪ್ರೀತಿ ಪ್ರೇಮದ ಮಾಯಾಜಾಲದಲ್ಲಿ ಸಿಕ್ಕಿ ಹೊರಬರಲಾಗದೆ ನರಳುತ್ತಿರುವುದಂತೂ ನಿಜ. ನಿಮ್ಮ ಸ್ನೇಹಿತರ ಗುಂಪಲ್ಲಿರೋ ವಿರಹಿಗಳಿಗೆ ಸಮಾಧಾನ ಮಾಡಿ ಧೈರ್ಯ ತುಂಬಿ. ಅವರಲ್ಲಿ ಹೊಸ ಸ್ಫೂರ್ತಿಯ ಚಿಲುಮೆಯನ್ನು ಉಕ್ಕಿಸಿ. ಯಾವುದೇ ಕಾರಣಕ್ಕೂ ಅವರು ಹಾಳಾಗಲು ಬಿಡಬೇಡಿ. ಒಬ್ಬ ಜವಾಬ್ದಾರಿಯುತ ಸ್ನೇಹಿತರಾಗಿ.
ಈ ಅಂಕಣ (Article) ನಿಮಗೆ ಇಷ್ಟವಾಗಿದ್ದರೆ ನಿಮ್ಮೆಲ್ಲ ಗೆಳೆಯರೊಡನೆ ಮತ್ತು ನೀವಿರುವ ಎಲ್ಲ ಕನ್ನಡ ಫೇಸ್ಬುಕ್ ಗ್ರೂಪಗಳಲ್ಲಿ ಇದನ್ನು ತಪ್ಪದೇ ಶೇರ್ (Share) ಮಾಡಿ. ಜೊತೆಗೆ ಪ್ರತಿದಿನ ಹೊಸಹೊಸ ಅಂಕಣಗಳನ್ನು, ಪ್ರೇಮಕಥೆಗಳನ್ನು, ಕವನಗಳನ್ನು ಉಚಿತವಾಗಿ ಓದಲು ತಪ್ಪದೆ ನನ್ನ ಫೇಸ್ಬುಕ್ ಪೇಜನ್ನು https://www.facebook.com/Directorsatishkumar/ (Director Satishkumar) ಲೈಕ್ ಮಾಡಿ.
Follow Me On : Facebook | Instagram | YouTube | Twitter
My Books : Kannada Books | Hindi Books | English Books
⚠ STRICT WARNING ⚠Content Rights :
ಈ ಅಂಕಣದ ಎಲ್ಲ ಹಕ್ಕುಗಳನ್ನು ಡೈರೆಕ್ಟರ್ ಸತೀಶಕುಮಾರ ಹಾಗೂ ರೋರಿಂಗ್ ಕ್ರಿಯೇಷನ್ಸ್ ಪ್ರೈವೇಟ್ ಲಿಮಿಟೆಡ್ ಕಂಪನಿ ವತಿಯಿಂದ ಸಂಪೂರ್ಣವಾಗಿ ಕಾಯ್ದಿರಿಸಲಾಗಿದೆ. ಡೈರೆಕ್ಟರ್ ಸತೀಶಕುಮಾರ ಅವರ ಅನುಮತಿಯಿಲ್ಲದೆ ಈ ಅಂಕಣದ ಯಾವುದೇ ಭಾಗವನ್ನು ಕಾಪಿ ಮಾಡುವಂತಿಲ್ಲ, ಬೇರೆ ಭಾಷೆಗಳಿಗೆ ಅನುವಾದಿಸುವಂತಿಲ್ಲ ಮತ್ತು ಇದನ್ನು ಬೇರೆಡೆಗೆ ಪ್ರಕಟಿಸುವಂತಿಲ್ಲ. ಯಾವುದೇ ಸಾಮಾಜಿಕ ಜಾಲತಾಣಗಳಲ್ಲಿ ಪೋಸ್ಟ್ ಮಾಡುವಂತಿಲ್ಲ. ಮುದ್ರಣ ಮಾಡುವಂತಿಲ್ಲ. ಒಂದು ವೇಳೆ ಯಾರಾದರೂ ಕಾಪಿ ರೈಟ್ಸ್ ನಿಯಮಗಳನ್ನು ಉಲ್ಲಂಘಿಸಿದರೆ ಅವರ ಮೇಲೆ ಸೂಕ್ತ ಕಾನೂನು ಕ್ರಮ ಕೈಗೊಳ್ಳಲಾಗುವುದು ಹಾಗೂ ಆಗಿರುವ ನಷ್ಟವನ್ನು ಅವರಿಂದಲೇ ವಸೂಲಿ ಮಾಡಲಾಗುವುದು.
All Rights of this article are fully reserved by Director Satishkumar and Roaring Creations Private Limited India. No part of this article can be copied, translated or re published anywhere without the written permission of Director Satishkumar. If such violation of copy rights found to us, then we legally punish to copy cats and recover our loss by them only.
© Director Satishkumar and Roaring Creations Private Limited, India.