ಹಾಯ್ ಗೆಳೆಯರೇ, ನಮ್ಮ ಮೈಂಡಿಗೆ ಅತ್ಯದ್ಭುತವಾದ ಪವರಯಿದೆ. ಆದರೆ ದುರಾದೃಷ್ಟ ಏನಪ್ಪ ಅಂದ್ರೆ ನಮ್ಮಲ್ಲಿ 99% ಜನರಿಗೆ ಈ ಮೈಂಡಿನ ಅಸಲಿ ಪವರ ಎಷ್ಟಿದೆ ಅಂತಾ ಗೊತ್ತಿಲ್ಲ. ಒಂದು ವೇಳೆ ಗೊತ್ತಾದರೆ ಅವರು ಈ ರೀತಿ ಆರ್ಡಿನರಿ ಲೈಫ, ಅನಹ್ಯಾಪಿ ಲೈಫ, ಅನಸಕ್ಸೆಸಫುಲ್ ಲೈಫನ್ನು ಲೀಡ ಮಾಡಲ್ಲ. ಗೇಮ ಬೇರೆನೆ ಆಗುತ್ತೆ. ಏಕೆಂದರೆ ಮೈಂಡಗೆ ಬಹಳಷ್ಟು ಪವರಯಿದೆ. ಇದನ್ನು ಎರಡು ಸಿಂಪಲ ಎಕ್ಸಾಮಪಲ ಮೂಲಕ ಎಕ್ಸಪ್ಲೇನ ಮಾಡುವೆ.
Example 1 : ಈಗಾಗಲೇ ಮೈಂಡ ಪವರ ಮೇಲೆ ಸಾಕಷ್ಟು ರಿಸರ್ಚಗಳಾಗಿವೆ, ಎಕ್ಸಪೆರಿಮೆಂಟಗಳಾಗಿವೆ. ಅವುಗಳಲ್ಲಿನ ಒಂದು ಎಕ್ಸಪೇರಿಮೆಂಟ ಇದಾಗಿದೆ. ಒಬ್ಬ ಖೈದಿಗೆ ಗಲ್ಲು ಶಿಕ್ಷೆ ಘೋಷಣೆಯಾಗಿತ್ತು. ಇನ್ನೆರಡು ದಿನಗಳಲ್ಲಿ ಅವನನ್ನು ಗಲ್ಲಿಗೇರಿಸುವವರಿದ್ದರು. ಆಗ ರಿಸರ್ಚ ಸೈಂಟಿಸ್ಟ ಅವನಿಗೆ ಒಂದು ಆಫರನ್ನು ಕೊಟ್ಟರು. ಆ ಆಫರ್ ಏನೆಂದರೆ “ನೋಡು ನಿನಗೆ ಹೇಗಿದ್ದರೂ ಗಲ್ಲು ಶಿಕ್ಷೆ ಘೋಷಣೆಯಾಗಿದೆ. ನಿನ್ನ ಸಾವು ಖಚಿತ. ಅದಕ್ಕೆ ಪರಿಹಾರವಿಲ್ಲ. ಆದರೆ ನೀನು ಒಪ್ಪಿಕೊಂಡರೆ ನಿನಗೆ ನೋವಾಗದಂತೆ ನಾವು ನಿನ್ನನ್ನು ಸಾಯಿಸುತ್ತೇವೆ. ನಿನ್ನನ್ನು ಗಲ್ಲಿಗೇರಿಸಿದರೆ ನೀನು ಒಂದು ನಿಮಿಷ ನರಳಾಡಿ ಒದ್ದಾಡಿ ಭಯಂಕರ ನೋವನ್ನು ಅನುಭವಿಸಿ ಸಾಯುವೆ. ಆದರೆ ನಾವು ನಿನಗೆ ಒಂದು ವಿಷಸರ್ಪದಿಂದ ಕಚ್ಚಿಸಿದರೆ ನೀನು ಯಾವುದೇ ನೋವಿಲ್ಲದೆ ಹತ್ತು ಸೆಕೆಂಡುಗಳಲ್ಲಿ ಆರಾಮಾಗಿ ಸಾಯುವೆ. ಒಂದು ಸಣ್ಣ ಸೂಜಿ ಚುಚ್ಚಿದಷ್ಟೇ ನೋವಾಗುತ್ತೆ. ನಿನಗೆ ಯಾವುದು ಬೇಕು?” ಎಂದು ಕೇಳಿದರು. ಆಗ ಗಲ್ಲು ಶಿಕ್ಷೆಗೆ ಗುರಿಯಾದ ಖೈದಿ “ನನ್ನನ್ನು ಹಾವಿನಿಂದ ಕಚ್ಚಿಸಿ ಸಾಯಿಸಿ ನಾನಿದಕ್ಕೆ ತಯಾರಾಗಿರುವೆ” ಎಂದೇಳಿ ಆಫರನ್ನು ಒಪ್ಪಿಕೊಂಡನು.
ಮರುದಿನ ಬೆಳಿಗ್ಗೆ ಶಾರ್ಪ 5 ಗಂಟೆಗೆ ಸೈಂಟಿಸ್ಟ ವಿಷಸರ್ಪದೊಂದಿಗೆ ಜೈಲಿನಲ್ಲಿ ಹಾಜರಿದ್ದರು. ಖೈದಿಯನ್ನು ಒಂದು ಚೇರ್ ಮೇಲೆ ಕೂಡಿಸಲಾಗಿತ್ತು. ಅವನಿಗೆ 20 ಫೀಟ್ ದೂರದಿಂದ ಹಾವನ್ನು ತೋರಿಸಿದರು. ಆತ ತಯಾರಾಗಿದಿನಿ ಎಂದಾಗ ಒಬ್ಬ ಅಸಿಸ್ಟೆಂಟ್ ಅವನ ಬಳಿ ಹಾವನ್ನು ತರತೊಡಗಿದನು. ಹಾವು ಅವನ ಬಳಿ ಬರುತ್ತಿದ್ದಂತೆಯೇ ಖೈದಿ ಕಣ್ಮುಚ್ಚಿದನು. ಆಗ ಸೈಂಟಿಸ್ಟ ಹಾವನ್ನು ತರುತ್ತಿದ್ದ ಅಸಿಸ್ಟೆಂಟಗೆ ಸನ್ನೆ ಮಾಡಿ ಹೋಗಲು ಹೇಳಿದರು. ಆತ ಇಮ್ಮಿಡಿಯಟಾಗಿ ಯಾವುದೇ ಸೌಂಡ ಮಾಡದೇ ಹಾವನ್ನು ತೆಗೆದುಕೊಂಡು ಹೊರ ಹೋದನು. ತಕ್ಷಣವೇ ಸೈಂಟಿಸ್ಟ ಅವನ ಕೈಗೆ ಸಣ್ಣ ಸೂಜಿಯಿಂದ ಲೈಟಾಗಿ ಚುಚ್ಚಿದರು. ಹತ್ತು ಸೆಕೆಂಡುಗಳ ಒಳಗೆ ಆ ಖೈದಿಯ ಪ್ರಾಣ ಹೋಯಿತು. ಆ ಖೈದಿ ಹಾವು ಕಚ್ಚಿತೆಂದು ಹೆದರಿ ಹಾರ್ಟ ಅಟ್ಯಾಕನಿಂದ ಸತ್ತಿದ್ದನು. ಆದರೆ ಅವನಿಗೆ ಹಾವು ಕಚ್ಚಿರಲಿಲ್ಲ. ಸೂಜಿ ಚುಚ್ಚಲಾಗಿತ್ತು. ಆದರೆ ಆತ ಕಣ್ಮುಚ್ಚಿ ಕುಳಿತಾಗ ಅವನ ಮೈಂಡ ಇಮ್ಯಾಜಿನೇಷನ್ ಮಾಡಿ ಅವನಿಗೆ ಹಾವು ಕಚ್ಚದಿದ್ದರೂ ಅವನ ಪ್ರಾಣವನ್ನು ತೆಗೆದಿತ್ತು. ಮೈಂಡನ ಪವರ ಇಷ್ಟಕ್ಕೆ ಮುಗಿಯಲ್ಲ. ನಂತರ ಆ ಸತ್ತ ಖೈದಿಯ ಪೋಸ್ಟ ಮಾರ್ಟಮ ರಿಪೋರ್ಟನಲ್ಲಿ ಅವನ ಸಾವು ಹಾವು ಕಚ್ಚಿ ಆಗಿದೆ ಎಂದಿತ್ತು. ಅಂದರೆ ಅವನ ಬಾಡಿ ವಿಷವನ್ನು ಜನರೇಟ ಮಾಡಿತ್ತು. ಇದು ಮೈಂಡನ ಗ್ರೇಟ ಪವರ. ಮೈಂಡ ಇಲ್ಲದ ಇಮ್ಯಾಜಿನೇಷನ್ ಮಾಡಿ ಬಾಡಿಗೆ ವಿಷ ಪ್ರೋಡ್ಯುಸ ಮಾಡಲು ಆರ್ಡರ್ ಮಾಡಿತ್ತು. ಅವನ ಮೈಂಡನಿಂದಲೇ ಅವನ ಸಾವಾಗಿತ್ತು.
Example 2 : ಮೊದಲ ಎಕ್ಸಪೇರಿಮೆಂಟ ಮಾಡಿದ ಸೈಂಟಿಸ್ಟ ಮತ್ತೊಂದು ಎಕ್ಸಪೇರಿಮೆಂಟ ಮಾಡಲು ಮತ್ತೊಂದು ಜೈಲಿಗೆ ಹೋದರು. ಮೊದಲ ಎಕ್ಸಪೇರಿಮೆಂಟಲ್ಲಿ ಅವರಿಗೆ ಮೈಂಡನ ನೆಗೆಟಿವ ಪವರ ಬಗ್ಗೆ ಗೊತ್ತಾಗಿತ್ತು. ಈಗವರು ಮೈಂಡನ ಪೋಜಿಟಿವ ಪವರ ತಿಳಿದುಕೊಳ್ಳಲು ಈ ಹೊಸ ಎಕ್ಸಪೇರಿಮೆಂಟ ಮಾಡಲು ಸ್ಟಾರ್ಟ ಮಾಡಿದರು.
ಅವರು ಜೈಲಲ್ಲಿನ 10 ರೋಗಿಷ್ಟ ಖೈದಿಗಳನ್ನು ಸೆಲೆಕ್ಟ ಮಾಡಿದರು. ಅವರನ್ನು ತಲಾ 5 ಜನರಂತೆ ಗ್ರುಪ್ – A & ಗ್ರುಪ್ – B ಅಂತಾ ಡಿವೈಡ ಮಾಡಿದರು. ಸೈಂಟಿಸ್ಟ ಪ್ರತಿ ದಿನ ಗ್ರುಪ್ – Aನ ರೋಗಿಗಳಿಗೆ ರಿಯಲ್ ಟ್ಯಾಬ್ಲೆಟನ್ನು ಕೊಡುತ್ತಿದ್ದರು. ಆದರೆ ಗ್ರುಪ್ – Bನ ರೋಗಿಗಳಿಗೆ ಗ್ಲುಕೋಸ ಟ್ಯಾಬ್ಲೆಟಗಳನ್ನು ಕೊಡುತ್ತಿದ್ದರು. ಅಂದರೆ ಸಕ್ಕರೆ ಪೌಡರನ್ನು ಕೊಡುತ್ತಿದ್ದರು. ಆದರೆ ಕೊಡುವಾಗ “ಈ ಟ್ಯಾಬ್ಲೆಟ್ ಬಹಳಷ್ಟು ಪವರಫುಲ್ಲಾಗಿದೆ, ಜಸ್ಟ ಒಂದೇ ವಾರದಲ್ಲಿ ನಿಮ್ಮ ರೋಗ ನಿವಾರಣೆಯಾಗುತ್ತದೆ” ಎಂದೇಳಿ ಕೊಡುತ್ತಿದ್ದರು. ಆದರೆ ಗ್ರುಪ್ – Aನ ರೋಗಿಗಳಿಗೆ ಏನನ್ನು ಹೇಳದೆ ಟ್ಯಾಬ್ಲೆಟನ್ನು ಕೊಡುತ್ತಿದ್ದರು. ಒಂದು ವಾರ ಇದೇ ರೀತಿ ಅವರಿಗೆ ಬೇರೆಬೇರೆ ಟ್ಯಾಬ್ಲೆಟನ್ನು ಕೊಟ್ಟರು.
ಒಂದು ವಾರದ ನಂತರ ಸೈಂಟಿಸ್ಟ ಎಲ್ಲ 10 ರೋಗಿಗಳನ್ನು ಟೆಸ್ಟ ಮಾಡಿದರು. ಗ್ರುಪ್ – Aನ ಐದು ರೋಗಿಗಳಲ್ಲಿ ಕೇವಲ 2 ರೋಗಿಗಳಷ್ಟೇ ವಾಸಿಯಾಗಿದ್ದರು. ಆದರೆ ಅಚ್ಚರಿಯೆಂದರೆ ಗ್ರುಪ್ – Bನ ಎಲ್ಲ 5 ರೋಗಿಗಳು ವಾಸಿಯಾಗಿದ್ದರು. ಗ್ರುಪ್ – Bನ ರೋಗಿಗಳು ಡಮ್ಮಿ ಟ್ಯಾಬ್ಲೆಟಗಳನ್ನು ತಿಂದರೂ ಸಹ ನೆಟ್ಟಗಾಗಿದ್ದರು. ಆದರೆ ಗ್ರುಪ್ – Aನ ರೋಗಿಗಳು ರಿಯಲ್ ಟ್ಯಾಬ್ಲೆಟ್ ತಿಂದರೂ ಸಹ ನೆಟ್ಟಗಾಗಿರಲಿಲ್ಲ. ಇಲ್ಲೇ ಇರೋದು ಮೈಂಡನ ಗ್ರೇಟ ಪವರ್. ಸೈಂಟಿಸ್ಟ ಗ್ರುಪ್ – Aನ ರೋಗಿಗಳಿಗೆ ಏನು ಹೇಳದೆ ರಿಯಲ್ ಟ್ಯಾಬ್ಲೆಟ್ ಕೊಟ್ಟಿದ್ದರು. ಆದರೆ ಗ್ರುಪ್ – Bನ ರೋಗಿಗಳಿಗೆ ಡಮ್ಮಿ ಟ್ಯಾಬ್ಲೆಟ್ ಕೊಟ್ಟರೂ ಸಹ ಅವರಿಗೆ “ಈ ಟ್ಯಾಬ್ಲೆಟ್ ಬಹಳಷ್ಟು ಪವರಫುಲ್ಲಾಗಿದೆ, ನೀವು ಒಂದು ವಾರದಲ್ಲಿ ವಾಸಿಯಾಗುವಿರಿ” ಎಂದೇಳಿ ಕೊಟ್ಟಿದ್ದರು. ಸೈಂಟಿಸ್ಟ ಹೇಳಿದ ಪೋಜಿಟಿವ ಡೈಲಾಗನ್ನು ಗ್ರುಪ್ – Bನ ರೋಗಿಗಳ ಮೈಂಡ ನಿಜ ಅಂತಾ ನಂಬಿ ಇಮ್ಯುನಿಟಿ ಹಾರ್ಮೋನಗಳನ್ನು ರೀಲಿಜ ಮಾಡಿ ಬಾಡಿಯನ್ನು ಕ್ಯೂರ ಮಾಡಿತ್ತು. ಹೀಗಾಗಿ ಅವರೆಲ್ಲ ಯಾವುದೇ ಟ್ಯಾಬ್ಲೆಟ್ ಇಲ್ಲದೇ ವಾಸಿಯಾಗಿದ್ದರು. ಆದರೆ ಗ್ರುಪ್ – Aನ ರೋಗಿಗಳಿಗೆ ಟ್ಯಾಬ್ಲೆಟ್ ಕೊಟ್ಟರೂ ಅವರಿಗೆ ಯಾವುದೇ Instruction ಕೊಟ್ಟಿರಲಿಲ್ಲ. ಹೀಗಾಗಿ ಅವರ ಮೈಂಡ ಕೆಲಸ ಮಾಡಿರಲಿಲ್ಲ. ಅವರ ರೋಗ ಇದೇ ಕಾರಣಕ್ಕಾಗಿ ವಾಸಿಯಾಗಿರಲಿಲ್ಲ. ಇದು ಮೈಂಡನ ಗ್ರೇಟ ಪವರ.
See my dear friends, our mind has immense power, unlimited power, great power. But tragedy is we don’t know how to use it. ನಮ್ಮ ಮೈಂಡಿಗೆ ಅನಂತ, ಅದ್ಭುತ, ಅನಲಿಮಿಟೆಡ್ ಪವರಿದೆ. ಆದರೆ ನಮಗೆ ಅದನ್ನು ಯುಜ ಮಾಡಿಕೊಳ್ಳುವುದು ಹೇಗಂತ ಗೊತ್ತಿಲ್ಲ. ಅದಕ್ಕೆ ನಾವು ಈ ರೀತಿ ಆರ್ಡಿನರಿಯಾಗಿದಿವಿ. ನಾವು ಅಮೃತವೆಂದುಕೊಂಡು ವಿಷ ಕುಡಿದರೂ ಸಹ ನಾವು ಸಾಯಲ್ಲ, ಆದರೆ ವಿಷವೆಂದುಕೊಂಡು ಅಮೃತವನ್ನು ಕುಡಿದರೆ ನಾವು ಖಂಡಿತ ಸಾಯುತ್ತೇವೆ. ಇದು ಎಲ್ಲದರಲ್ಲೂ ವರ್ಕಾಗುತ್ತದೆ. ಸೋ ಗೆಳೆಯರೇ, ನಿಮ್ಮ ಮೈಂಡಿಗೆ ನಿಮಗೆ ಏನು ಬೇಕೋ ಅದನ್ನಷ್ಟೇ ಹೇಳಿ, ಪೋಜಿಟಿವ ಆರ್ಡರ ಕೊಡಿ. ತಾನಾಗಿಯೇ ಪೋಜಿಟಿವ ರಿಜಲ್ಟಗಳು ಬರುತ್ತವೆ.
ಫ್ರೆಂಡ್ಸ, ನಮ್ಮ ಬಾಡಿ ಕೆಮಿಕಲ್ ಫ್ಯಾಕ್ಟರಿ ಆಗಿದೆ. ನಮ್ಮ ಮೈಂಡ ಇದರ ಡೈರೆಕ್ಟರ್ ಆಗಿದೆ, ಬಾಸ್ ಆಗಿದೆ. ನಮ್ಮ ಎಮೋಷನಗಳ ಆಧಾರದ ಮೇಲೆ ನಮ್ಮ ಮೈಂಡ ನಮ್ಮ ಬಾಡಿಗೆ ಕೆಮಿಕಲಗಳನ್ನು ಅಂದರೆ ಹಾರ್ಮೋನಗಳನ್ನು ಪ್ರೋಡ್ಯುಜ ಮಾಡಲು ಆರ್ಡರ ಮಾಡುತ್ತದೆ. ಫಾರ್ ಎಕ್ಸಾಮಪಲ್, ನಾವು ಸ್ಯಾಡ ಫೀಲ ಮಾಡಿದರೆ ಸ್ಟ್ರೇಸ ಹಾರ್ಮೋನುಗಳು ರೀಲಿಜಾಗುತ್ತವೆ, ನಮ್ಮ ಮೂಡ ಖರಾಬಾಗುತ್ತದೆ, ನಾವು ಯಾರ ಕಡೆಗಾದರೂ ಅಟ್ರ್ಯಾಕ್ಟಾದರೆ ಡೋಪಮಿನ ರೀಲಿಜಾಗುತ್ತದೆ, ಡೋಪಮಿನ ರೀಲಿಜಾದಾಗ ನಮಗೆ ಲವ್ ಆಗುತ್ತದೆ, ಅದೇ ರೀತಿ ನಾವು ಹಾರ್ನಿ ಫೀಲ್ ಮಾಡಿದಾಗ ಸೆಕ್ಸ ಹಾರ್ಮೋನಗಳು ರೀಜಿಲಾಗುತ್ತವೆ. ಬೇರೆ ಬೇರೆ ಫೀಲಿಂಗ್ಸಗಳಿಗೆ ಬೇರೆ ಬೇರೆ ತರಹದ ಹಾರ್ಮೋನ್ಸ ರಿಜಿಲಾಗಿ ಬೇರೆಬೇರೆ ಇನ್ಸಿಡೆಂಟಗಳಾಗುತ್ತವೆ. ಬೇರೆಬೇರೆ ರಿಯಾಕ್ಷನಗಳಾಗುತ್ತವೆ.
ಸೋ ಗೆಳೆಯರೇ, ನಾವು ನಮ್ಮ ಎಮೋಷನಗಳ ಮೇಲೆ ಕಂಟ್ರೋಲ ಸಾಧಿಸಿದರೆ ನಮ್ಮ ಹಾರ್ಮೋನಗಳ ಮೇಲೆ ಕಂಟ್ರೋಲ ಸಿಗುತ್ತದೆ. ನಾವು ಎಲ್ಲ ನೆಗೆಟಿವಿಟಿಗಳನ್ನು ದೂರವಿಟ್ಟು ಪೋಜಿಟಿವ ಆಗಿ ಯೋಚಿಸಿದರೆ ಎಲ್ಲ ಒಳ್ಳೆಯದೇ ಆಗುತ್ತದೆ, ನಾವು “ನಾನು ಹ್ಯಾಪಿಯಾಗಿರುವೆ, ಹೆಲ್ದಿಯಾಗಿರುವೆ” ಅಂತಾ ಫೀಲ್ ಮಾಡಿದರೆ ನಾವು ಹ್ಯಾಪಿಯಾಗಿರುತ್ತೇವೆ, ಹೆಲ್ದಿಯಾಗಿರುತ್ತೇವೆ. “ನಾನು ರೀಚ ಆಗುವೆ…” ಎಂದುಕೊಂಡರೆ ಒಂದಿನ ನಾವು ಖಂಡಿತ ರೀಚ್ ಆಗುತ್ತೇವೆ, “ನಾನು ಹಾಳಾಗುತ್ತೇನೆ…” ಎಂದರೆ ನಾವು ಖಂಡಿತ ಹಾಳಾಗುತ್ತೇವೆ. ಇದರಲ್ಲಿ ಅಂಥ ಮಹಾನ ಮಿರಾಕಲ ಏನಿಲ್ಲ, ಯಾವುದೇ ತರಹದ ಪವಾಡಗಳಿಲ್ಲ. ಇದು ನಮ್ಮ ಮೈಂಡಿನ ಪವರಾಗಿದೆ. ಸೋ ಗೆಳೆಯರೇ ನಿಮ್ಮ ಮೈಂಡಿಗಿರುವ ಪವರ ನಿಮಗೀಗ ಗೊತ್ತಾಗಿದೆ. ಈಗಲಾದರೂ ನಿಮ್ಮ ಮೈಂಡನ್ನು ಸರಿಯಾಗಿ ಯುಜ ಮಾಡಿಕೊಳ್ಳಿ, ಅದಕ್ಕೆ ಸರಿಯಾದ ಆರ್ಡರಗಳನ್ನು, ಸರಿಯಾದ ಡೈರೆಕ್ಷನನ್ನು ಕೊಡಿ. ಮುಂದಿನ ಎಪಿಸೋಡನಲ್ಲಿ ಮೈಂಡನ್ನು ಕಂಟ್ರೋಲ ಮಾಡುವುದು ಹೇಗೆ ಅಂತಾ ನೋಡೊಣಾ. All the Best and Thanks You…
ಈ ಅಂಕಣ (Article) ನಿಮಗೆ ಇಷ್ಟವಾಗಿದ್ದರೆ ನಿಮ್ಮೆಲ್ಲ ಗೆಳೆಯರೊಡನೆ ಮತ್ತು ನೀವಿರುವ ಎಲ್ಲ ಕನ್ನಡ ಫೇಸ್ಬುಕ್ ಗ್ರೂಪಗಳಲ್ಲಿ ಇದನ್ನು ತಪ್ಪದೇ ಶೇರ್ (Share) ಮಾಡಿ. ಜೊತೆಗೆ ಪ್ರತಿದಿನ ಹೊಸಹೊಸ ಅಂಕಣಗಳನ್ನು, ಪ್ರೇಮಕಥೆಗಳನ್ನು, ಕವನಗಳನ್ನು ಉಚಿತವಾಗಿ ಓದಲು ತಪ್ಪದೆ ನನ್ನ ಫೇಸ್ಬುಕ್ ಪೇಜನ್ನು https://www.facebook.com/Directorsatishkumar/ (Director Satishkumar) ಲೈಕ್ ಮಾಡಿ.
Follow Me On : Facebook | Instagram | YouTube | Twitter
My Books : Kannada Books | Hindi Books | English Books
⚠ STRICT WARNING ⚠Content Rights :
ಈ ಅಂಕಣದ ಎಲ್ಲ ಹಕ್ಕುಗಳನ್ನು ಡೈರೆಕ್ಟರ್ ಸತೀಶಕುಮಾರ ಹಾಗೂ ರೋರಿಂಗ್ ಕ್ರಿಯೇಷನ್ಸ್ ಪ್ರೈವೇಟ್ ಲಿಮಿಟೆಡ್ ಕಂಪನಿ ವತಿಯಿಂದ ಸಂಪೂರ್ಣವಾಗಿ ಕಾಯ್ದಿರಿಸಲಾಗಿದೆ. ಡೈರೆಕ್ಟರ್ ಸತೀಶಕುಮಾರ ಅವರ ಅನುಮತಿಯಿಲ್ಲದೆ ಈ ಅಂಕಣದ ಯಾವುದೇ ಭಾಗವನ್ನು ಕಾಪಿ ಮಾಡುವಂತಿಲ್ಲ, ಬೇರೆ ಭಾಷೆಗಳಿಗೆ ಅನುವಾದಿಸುವಂತಿಲ್ಲ ಮತ್ತು ಇದನ್ನು ಬೇರೆಡೆಗೆ ಪ್ರಕಟಿಸುವಂತಿಲ್ಲ. ಯಾವುದೇ ಸಾಮಾಜಿಕ ಜಾಲತಾಣಗಳಲ್ಲಿ ಪೋಸ್ಟ್ ಮಾಡುವಂತಿಲ್ಲ. ಮುದ್ರಣ ಮಾಡುವಂತಿಲ್ಲ. ಒಂದು ವೇಳೆ ಯಾರಾದರೂ ಕಾಪಿ ರೈಟ್ಸ್ ನಿಯಮಗಳನ್ನು ಉಲ್ಲಂಘಿಸಿದರೆ ಅವರ ಮೇಲೆ ಸೂಕ್ತ ಕಾನೂನು ಕ್ರಮ ಕೈಗೊಳ್ಳಲಾಗುವುದು ಹಾಗೂ ಆಗಿರುವ ನಷ್ಟವನ್ನು ಅವರಿಂದಲೇ ವಸೂಲಿ ಮಾಡಲಾಗುವುದು.
All Rights of this article are fully reserved by Director Satishkumar and Roaring Creations Private Limited India. No part of this article can be copied, translated or re published anywhere without the written permission of Director Satishkumar. If such violation of copy rights found to us, then we legally punish to copy cats and recover our loss by them only.
© Director Satishkumar and Roaring Creations Private Limited, India.