ಜೇಮ್ಸ ಕ್ಯಾಮರಾನರವರ ಜೀವನಕಥೆ – Life Story of James Cameron in Kannada

You are currently viewing ಜೇಮ್ಸ ಕ್ಯಾಮರಾನರವರ ಜೀವನಕಥೆ – Life Story of James Cameron in Kannada

ಹಾಯ್ ಗೆಳೆಯರೇ, ಬಹುಶಃ ನೀವು ಜೇಮ್ಸ ಕ್ಯಾಮರಾನರವರ (James Cameron) ಹೆಸರನ್ನು ಕೇಳಿರಲಕ್ಕಿಲ್ಲ. ಆದರೆ ಟೈಟಾನಿಕ್ ಸಿನಿಮಾದ ಹೆಸರನ್ನು ಖಂಡಿತ ಕೇಳಿರುತ್ತೀರಿ. ನೀವು ಟೈಟಾನಿಕ್ ಹಾಗೂ ಅವತಾರ ಸಿನಿಮಾಗಳನ್ನು ನೋಡಿರದಿದ್ದರೆ ಏನು ನೋಡಿಲ್ಲವೆಂದರ್ಥ. ಟೈಟಾನಿಕ್ ಹಾಗೂ ಅವತಾರ ಸಿನಿಮಾಗಳ ನಿರ್ದೇಶಕರೇ ಈ ಜೇಮ್ಸ ಕ್ಯಾಮರಾನ. ಇವರು ಬರೀ ಚಿತ್ರ ನಿರ್ದೇಶಕರಷ್ಟೇ ಅಲ್ಲ, ಇವರೊಬ್ಬ ಫಿಲ್ಮ್ ಎಡಿಟರ್ ಹಾಗೂ ಪ್ರೊಡ್ಯೂಜರ್ ಕೂಡ ಹೌದು. ಸಿನಿಮಾ ಹೊರತಾಗಿ ಜೇಮ್ಸ ಕ್ಯಾಮರಾನರಿಗೆ ಸೀ ಡೈವಿಂಗನಲ್ಲಿ ಅಪಾರ ಜ್ಞಾನವಿದೆ. ಇವರು ಪರಿಸರವಾದಿಯಾಗಿಯೂ ಹೆಸರುವಾಸಿಯಾಗಿದ್ದಾರೆ. ಹಾಯ್ ಕ್ವಾಲಿಟಿ ಸಿನಿಮ್ಯಾಟೋಗ್ರಾಫಿ ಹಾಗೂ ವಿಜ್ಯುವಲ್ ಎಫೆಕ್ಟ್ಸಗಳ ಮೂಲಕ ನಾವು ಕನಸಲ್ಲೂ ಕಾಣದ ದೃಶ್ಯಕಲೆಯನ್ನು ಸೀನಿ ಪರದೆಯ ಮೇಲೆ ನೈಜವೆಂತಂತೆ ತೋರಿಸಿದ ಖ್ಯಾತಿ ಜೇಮ್ಸ ಕ್ಯಾಮರಾನರಿಗೆ ಸಲ್ಲುತ್ತದೆ. ಒಬ್ಬ ಸಾಮಾನ್ಯ ಟ್ರಕ್ ಡ್ರೈವರ್ ಆಗಿದ್ದ ಇವರು ಹಾಲಿವುಡ್ ಡೈರೆಕ್ಟರ್ ಆದ ನೈಜಕಥೆ ಎಲ್ಲ ಯುವ ಪ್ರತಿಭೆಗಳಿಗೆ ದೊಡ್ಡ ಸ್ಪೂರ್ತಿ. ಬನ್ನಿ ಗೆಳೆಯರೇ ಇವತ್ತಿನ ಅಂಕಣದಲ್ಲಿ ಜೇಮ್ಸ ಕ್ಯಾಮರಾನರವರ ಜೀವನ ಕಥೆಯನ್ನು ತಿಳಿದುಕೊಳ್ಳೊಣಾ…

ಜೇಮ್ಸ ಕ್ಯಾಮರಾನರವರ ಜೀವನಕಥೆ - Life Story of James Cameron in Kannada

ಜೇಮ್ಸ ಕ್ಯಾಮರಾನ ಅವರ ಜನನ 1954ರಲ್ಲಿ ಕೆನಡಾ ದೇಶದ ಒಂಟಾರಿಯೋದ ಕಪುಸ್ಕೇಪಿಂಗ್ ನಗರದಲ್ಲಾಯಿತು. ಇವರ ತಾಯಿ ಶೆರ್ಲಿ ಓರ್ವ ನರ್ಸ್ ಹಾಗೂ ಕಲಾವಿದೆಯಾಗಿದ್ದರು. ಜೇಮ್ಸ ಕ್ಯಾಮರಾನ ಒಂಟಾರಿಯೋದ ಚಿಪ್ಪಾವಾದಲ್ಲಿ ಬೆಳೆದರು ಮತ್ತು ಒಂಟಾರಿಯೊದ ನಯಾಗರ ಫಾಲ್ಸನಲ್ಲಿರುವ ಸ್ಟ್ಯಾಮಫೋರ್ಡ ಕಾಲೇಜಿಯೆಟ್ ಶಾಲೆಯಲ್ಲಿ ಓದಿದರು. ಜೇಮ್ಸ ಕ್ಯಾಮರಾನ 17 ವರ್ಷದವರಿದ್ದಾಗ 1971ರಲ್ಲಿ ಅವರ ಕುಟುಂಬ ಕ್ಯಾಲಿಫೋರ್ನಿಯಾಗೆ ಸ್ಥಳಾಂತರವಾಯಿತು. ಜೇಮ್ಸ್ ಕ್ಯಾಮರಾನರಿಗೆ ಬಾಲ್ಯದಿಂದಲೂ ವಿಜ್ಞಾನ ಹಾಗೂ ಭೌತಶಾಸ್ತ್ರದಲ್ಲಿ ಅತೀವ ಆಸಕ್ತಿಯಿತ್ತು.

ಜೇಮ್ಸ ಕ್ಯಾಮರಾನರವರ ಜೀವನಕಥೆ - Life Story of James Cameron in Kannada

1973ರಲ್ಲಿ ಜೇಮ್ಸ ಕ್ಯಾಮರಾನ ಭೌತಶಾಸ್ತ್ರದಲ್ಲಿ ಉನ್ನತ ಅಧ್ಯಯನ ಮಾಡುವುದಕ್ಕಾಗಿ ಫುಲ್ಲಂಟನ್ ಕಾಲೇಜಿಗೆ ಸೇರಿದರು. ಆದರೆ ಎರಡು ವರ್ಷಗಳ ಅಧ್ಯಯನದ ನಂತರ ಸೆಮೆಸ್ಟರನಲ್ಲಿ ಫೇಲಾದಾಗ ಅವರು ಕಾಲೇಜಿಗೆ ಗುಡ್ ಬಾಯ್ ಹೇಳಿದರು. ಕಾಲೇಜ್ ಡ್ರಾಪೌಟ್ ಆದ ನಂತರ ಜೇಮ್ಸ ಕ್ಯಾಮರಾನ ಟ್ರಕ್ ಡ್ರೈವರ್ ಆಗಿ ಕೆಲಸ ಪ್ರಾರಂಭಿಸಿದರು. ಸಮಯ ಸಿಕ್ಕಾಗ ಕಥೆಗಳನ್ನು ಬರೆದರು. ಆದರೆ ಆ ಕಥೆಗಳನ್ನು ಖರೀದಿಸಲು ಯಾರು ಮುಂದಾಗುತ್ತಿರಲಿಲ್ಲ. ಕ್ಯಾಮರಾನ ಕ್ಯಾಲಿಫೋರ್ನಿಯಾ ಯುನಿವರ್ಸಿಟಿಯ ಲೈಬ್ರರಿಗೆ ಭೇಟಿ ನೀಡಿ ಸಾಯಿನ್ಸ ಫಿಕ್ಷನಗಳನ್ನು ಓದಲು ಪ್ರಾರಂಭಿಸಿದರು. ತಮಗೆ ಸಿಗುವ ಸಮಯದಲ್ಲಿ ಜೇಮ್ಸ ಕ್ಯಾಮರಾನ ಪುಸ್ತಕಗಳನ್ನು ಓದಿ ವಿಜ್ಯುವಲ್ ಎಫೆಕ್ಟ್ಸಗಳನ್ನು ಕಲಿತುಕೊಂಡರು. ಆಪ್ಟಿಕಲ್ ಪೇಂಟಿಂಗ್, ಸ್ಕ್ರೀನ್ ಪ್ರೋಜೆಕ್ಷನ್ ಹಾಗೂ ಫಿಲ್ಮ ಟೆಕ್ನಾಲಜಿಗೆ ಸಂಬಂಧಪಟ್ಟ ಪುಸ್ತಕಗಳನ್ನು, ಬರಹಗಳನ್ನು ಓದಿ ಅವುಗಳ ಬಗ್ಗೆ ಸವಿಸ್ತಾರವಾಗಿ ತಿಳಿದುಕೊಂಡರು.

ಜೇಮ್ಸ ಕ್ಯಾಮರಾನರವರ ಜೀವನಕಥೆ - Life Story of James Cameron in Kannada

1977ರಲ್ಲಿ ಜೇಮ್ಸ ಕ್ಯಾಮರಾನ ಸ್ಟಾರ್ ವಾರ್ಸ (Star Wars) ಸಿನಿಮಾ ನೋಡಿದ ನಂತರ ಅವರ ಯೋಚನೆಗಳು ಬದಲಾದವು. ಸ್ಟಾರ ವಾರ್ಸ ಸಿನಿಮಾದಿಂದ ಅವರು ಬಹಳಷ್ಟು ಪ್ರಭಾವಿತರಾದರು. ಕೂಡಲೇ ಟ್ರಕ್ ಡ್ರೈವಿಂಗಗೆ ಗುಡ್ ಬಾಯ್ ಹೇಳಿ ಫಿಲ್ಮ ಮೇಕಿಂಗಿಗೆ ಸಂಬಂಧಪಟ್ಟ ಪುಸ್ತಕಗಳನ್ನು ಓದಲು ಪ್ರಾರಂಭಿಸಿದರು. ಹೀಗೆ ಒಂದಿನ ಸೀಡ್ ಫೀಲ್ಡರವರು ಬರೆದ ಸ್ಕ್ರೀನ್ ಪ್ಲೇ (Screen Play) ಪುಸ್ತಕವನ್ನು ಓದುವಾಗ ಅವರಿಗೆ ವಿಜ್ಞಾನ ಹಾಗೂ ಕಲೆಯನ್ನು ಒಂದುಗೂಡಿಸಲು ಸಾಧ್ಯವಿದೆ ಎಂಬ ಸತ್ಯ ಅರ್ಥವಾಯಿತು. ಅವರು ಜೀನೋಜೆನೆಸಿಸ್ (Xenogenesis) ಎಂಬ ಸಾಯಿನ್ಸ ಫಿಕ್ಷನ್ ಶಾರ್ಟಫಿಲ್ಮನ್ನು ಬರೆದರು. ನಂತರ ಇಬ್ಬರು ಸ್ನೇಹಿತರ ಸಹಾಯ ಪಡೆದುಕೊಂಡು ಬಾಡಿಗೆ ಕ್ಯಾಮರಾ, ಬಾಡಿಗೆ ಲೆನ್ಸ್, ಬಾಡಿಗೆ ಸ್ಟುಡಿಯೋದಿಂದ ತಾವೇ ಬರೆದ ಶಾರ್ಟಫಿಲ್ಮನ್ನು ನಿರ್ದೇಶಿಸಿದರು. ಅವರಿಗೆ ಕ್ಯಾಮರಾ ಚಲಾವಣೆಯಲ್ಲಿ ಅಷ್ಟೊಂದು ಜ್ಞಾನವಿರಲಿಲ್ಲ. ಅದಕ್ಕಾಗಿ ಚಿತ್ರೀಕರಣದ ಅರ್ಧ ದಿನ ಕ್ಯಾಮರಾವನ್ನು ಹೇಗೆ ಆಪರೇಟ್ ಮಾಡಬೇಕು ಎಂಬುದನ್ನು ತಿಳಿದುಕೊಳ್ಳುವಲ್ಲೇ ಕಳೆದು ಹೋಗಿತ್ತು. ಕೊನೆಗೂ 1978ರಲ್ಲಿ ಜೇಮ್ಸ ಕ್ಯಾಮರಾನರ ಮೊದಲ ಕಿರುಚಿತ್ರ ಜೀನೋಜೆನೆಸಿಸ್ (Xenogenesis) ಯಶಸ್ವಿಯಾಗಿ ನಿರ್ಮಾಣವಾಗಿ ತೆರೆ ಕಂಡಿತು.

ಜೇಮ್ಸ ಕ್ಯಾಮರಾನರವರ ಜೀವನಕಥೆ - Life Story of James Cameron in Kannada

ತಮ್ಮ ಬಳಿ ದುಡ್ಡಿಲ್ಲದಿದ್ದರೂ ಜೇಮ್ಸ ಕ್ಯಾಮರಾನ ತಾವೇ ರೈಟರ್, ಡೈರೆಕ್ಟರ್, ಪ್ರೊಡ್ಯೂಸರ್ ಹಾಗೂ ಪ್ರೊಡಕ್ಷನ್ ಡಿಜೈನರ್ ಆಗಿ ಕೆಲಸ ಮಾಡಿ Xenogenesis ಶಾರ್ಟಫಿಲ್ಮನ್ನು ನಿರ್ಮಿಸಿದರು. ಇದು ಅವರಿಗೆ ಕಡಿಮೆ ಬಜೆಟ್ಟಿನಲ್ಲಿ ಜಾಸ್ತಿ ಎಫಿಸಿಯಂಟಾಗಿ, ಎಕ್ಸಲೆಂಟಾಗಿ ಕೆಲಸ ಮಾಡುವುದನ್ನು ಕಲಿಸಿತು. ಅನಂತರ ಜೇಮ್ಸ ಕ್ಯಾಮರಾನ ಕೆಲವೊಂದಿಷ್ಟು ಹಾಲಿವುಡ್ ಸಿನಿಮಾಗಳಿಗೆ ಪ್ರೊಡಕ್ಷನ್ ಅಸಿಸ್ಟಂಟಾಗಿ, ಆರ್ಟ ಡೈರೆಕ್ಟರಾಗಿ, ಸ್ಪೆಷಲ್ ಎಫೆಕ್ಟ್ಸ ಡಿಜೈನರಾಗಿ, ಪ್ರೊಡಕ್ಷನ್ ಡಿಜೈನರಾಗಿ ಕೆಲಸ ಮಾಡಿ ಫಿಲ್ಮ ಮೇಕಿಂಗನಲ್ಲಿ ತಮ್ಮ ಜ್ಞಾನವನ್ನು ಹೆಚ್ಚಿಸಿಕೊಂಡರು.

ಜೇಮ್ಸ ಕ್ಯಾಮರಾನರವರ ಜೀವನಕಥೆ - Life Story of James Cameron in Kannada

1982ರಲ್ಲಿ ಜೇಮ್ಸ ಕ್ಯಾಮರಾನರವರಿಗೆ ಫಿರಾನಾ-2 ಚಿತ್ರದಲ್ಲಿ ಸ್ಪೆಷಲ್ ಎಫೆಕ್ಟ ಡೈರೆಕ್ಟರ ಆಗಿ ಕೆಲಸ ಮಾಡುವ ಅವಕಾಶ ಸಿಕ್ಕಿತು. ಅದೃಷ್ಟವೆಂಬಂತೆ ಆ ಚಿತ್ರದ ಡೈರೆಕ್ಟರಗೂ, ಪ್ರೊಡ್ಯೂಸರಗೂ ಮನಸ್ತಾಪ ಬಂದು, ಆ ಡೈರೆಕ್ಟರ್ ಆ ಚಿತ್ರವನ್ನು ಅರ್ಧಕ್ಕೆ ನಿಲ್ಲಿಸಿ ಹೋದನು. ಆ ಚಿತ್ರವನ್ನು ನಿರ್ದೇಶಿಸಿ ಪೂರ್ಣಗೊಳಿಸುವ ಅವಕಾಶ ಜೇಮ್ಸ ಕ್ಯಾಮರಾನರಿಗೆ ಸಿಕ್ಕಿತು. ಆ ಸಮಯದಲ್ಲಿ ಫಿಲ್ಮ ಡೈರೆಕ್ಷನನಲ್ಲಿ ಅವರಿಗೆ ಅಷ್ಟೊಂದು ಅನುಭವವಿರಲಿಲ್ಲ. ಶೂಟಿಂಗನ ಮೊದಲ ದಿನ ಅವರಿಗೆ ಚಿತ್ರದ ಹೀರೋಯಿನ್ ಕರೋಲ್ ಡೇವಿಸರ ಕ್ಲೋಸ್ ಅಪ್ ಶಾಟ್ ತೆಗೆಯಬೇಕಿತ್ತು. ಆದರೆ ಲೋ ಲೈಟ್ ಕಂಡಿಷನನಿಂದಾಗಿ ಅವರಿಗೆ ಆ ಸೀನನ್ನು ಚಿತ್ರಿಕರಿಸಲಾಗಲಿಲ್ಲ. ಪ್ರೊಡ್ಯೂಸರ್ ಅವರನ್ನು ಬೈದು ಅವಮಾನಿಸಿದರು. ಆದರೂ ಹೇಗೋ ಸಹಿಸಿಕೊಂಡು ಕ್ಯಾಮರಾನ ಆ ಚಿತ್ರವನ್ನು ಪೂರ್ಣಗೊಳಿಸಿದರು.

ಜೇಮ್ಸ ಕ್ಯಾಮರಾನರವರ ಜೀವನಕಥೆ - Life Story of James Cameron in Kannada

ಫಿರಾನಾ-2 ಚಿತ್ರದ ಚಿತ್ರೀಕರಣದ ಸಂದರ್ಭದಲ್ಲಿ ಜೇಮ್ಸ ಕ್ಯಾಮರಾನರಿಗೆ ಫುಡ್ ಪಾಯಿಜನಿಂಗ್ ಆಗಿತ್ತು. ಆ ಸಮಯದಲ್ಲಿ ವಿಶ್ರಾಂತಿ ಪಡೆದುಕೊಳ್ಳುವಾಗ ಅವರಿಗೊಂದು ಕೆಟ್ಟ ಕನಸು ಬಿದ್ದಿತ್ತು. ಆ ಕನಸಿನಲ್ಲಿ ಭವಿಷ್ಯದಿಂದ ಕಳುಹಿಸಲ್ಪಟ್ಟ ಒಬ್ಬ ರೊಬೋಟ್ ಹಿಟಮ್ಯಾನ್ ಅವರನ್ನು ಕೊಲ್ಲಲು ಪ್ರಯತ್ನಿಸುತ್ತಿದ್ದನು. ಈ ಕನಸೇ ಅವರಿಗೆ “ದಿ ಟರ್ಮಿನೇಟರ್” (The Terminator) ಚಿತ್ರದ ಕಥೆ ಬರೆಯಲು ಪ್ರೇರಣೆ ನೀಡಿತು. ಜೇಮ್ಸ ಕ್ಯಾಮರಾನ ದಿ ಟರ್ಮಿನೇಟರ್ ಕಥೆಗೆ ಸ್ಕ್ರಿಪ್ಟ್ ಬರೆದು ಅದನ್ನು ತಾವೇ ನಿರ್ದೇಶಿಸಿದರು. ಅದು ಸೂಪರಹಿಟ್ ಸಿನಿಮಾವಾಗಿ ಹೊರ ಹೊಮ್ಮಿತು. ಈ ಸಿನಿಮಾ ಅವರ ವೃತ್ತಿ ಜೀವನದಲ್ಲೊಂದು ಮೈಲಿಗಲ್ಲಾಯಿತು. ಆದರೆ ಈ ಸಕ್ಸೆಸಿನ ಹಿಂದೆ ಒಂದು ನೋವಿನ ಕಥೆಯಿದೆ.

ಜೇಮ್ಸ ಕ್ಯಾಮರಾನರವರ ಜೀವನಕಥೆ - Life Story of James Cameron in Kannada

ಜೇಮ್ಸ ಕ್ಯಾಮರಾನ ದಿ ಟರ್ಮಿನೇಟರ ಸಿನಿಮಾದ ಸ್ಕ್ರೀಪ್ಟನ್ನು ಬರೆದುಕೊಂಡು ಹಲವಾರು ಪ್ರೊಡಕ್ಷನ್ ಕಂಪನಿಗಳಿಗೆ ಭೇಟಿ ನೀಡಿದರು. ಬಹಳಷ್ಟು ಕಂಪನಿಗಳಿಗೆ ಇವರ ಕಥೆ ಇಷ್ಟವಾಗಲಿಲ್ಲ. ಕೆಲವರಿಗೆ ಕಥೆ ಇಷ್ಟವಾದರೂ ಬಹಳಷ್ಟು ಅನುಭವವಿಲ್ಲದ ಜೇಮ್ಸ ಕ್ಯಾಮರಾನ ಡೈರೆಕ್ಟರ್ ಆಗುವುದು ಇಷ್ಟವಿರಲಿಲ್ಲ. ಕೊನೆಗೆ ಹೆಮಡೆಲ್ ಪಿಕ್ಚರ್ಸ ಅವರ ಕಥೆಯನ್ನು ಮೆಚ್ಚಿಕೊಂಡಿತು. ಆಗ ಅವರ ಹಳೇ ಫ್ರೆಂಡಾದ ಗೇಲ್ ಆ್ಯನ್ ಹರ್ಡ್ ಫೆಸಿಪಿಕ್ ವೇಸ್ಟರ್ನ ಪ್ರೊಡಕ್ಷನ್ಸ ಕಂಪನಿಯನ್ನು ಪ್ರಾರಂಭಿಸಿದ್ದಳು. ಇದು ಗೊತ್ತಾದ ನಂತರ ಜೇಮ್ಸ ಕ್ಯಾಮರಾನ ಅವಳನ್ನು ಸಂಪರ್ಕಿಸಿ ಕಥೆ ಹೇಳಿದರು. ಅವಳು ಅವರ ಕಥೆಯನ್ನು ಸಿನಿಮಾ ಮಾಡಲು ಒಪ್ಪಿದಳು. ಆದರೆ ಈ ಕಥೆಗಾಗಿ ಕೇವಲ ಒಂದು ಡಾಲರ್ (1$) ಸಂಭಾವನೆ ಕೊಡುವುದಾಗಿ ಹೇಳಿದಳು. ಸದ್ಯಕ್ಕೆ ಜೇಮ್ಸ ಕ್ಯಾಮರಾನ ಅವರಿಗೆ ಅವಕಾಶ ಬೇಕಿತ್ತು. ಅಲ್ಲದೆ ಸಿನಿಮಾ ಅವರ ಟ್ರೂ ಪ್ಯಾಷನ್ನಾಗಿತ್ತು. ಅದಕ್ಕಾಗಿ ಅವರು 1$ಗೆ ಆ ಸಿನಿಮಾ ಮಾಡಲು ಒಪ್ಪಿಕೊಂಡರು. ಜಬರದಸ್ತ ಕಥೆ, ಸ್ಟನ್ನಿಂಗ್ ವಿಜ್ಯುವಲ್ ಎಫೆಕ್ಟ್ಸ ಹಾಗೂ ಶಾರ್ಪ ಎಡಿಟಿಂಗನಿಂದಾಗಿ ದಿ ಟರ್ಮಿನೇಟರ್ ಚಿತ್ರ ಸೂಪರ್ ಹಿಟ್ ಆಯಿತು. 78 ಮಿಲಿಯನ್ ಡಾಲರಗಳಷ್ಟು ಬ್ಯುಸಿನೆಸ್ ಆಯಿತು. ಬಹಳಷ್ಟು ಜನ ಲೋ ಬಜೆಟ್ಟಿನಲ್ಲಿ ತಯಾರಾದ ಈ ಚಿತ್ರ ತುಂಬಾ ದಿನ ಓಡಲ್ಲ, ಫ್ಲಾಪ್ ಆಗುತ್ತೆ ಎಂದು ಭವಿಷ್ಯ ನುಡಿದಿದ್ದರು. ಆದರೆ ಚಿತ್ರ ಸೂಪರ ಹಿಟ್ ಆಯಿತು. ಈ ಚಿತ್ರದ ನಿರ್ಮಾಪಕಿ ಗೇಲ್ ಹರ್ಡ ಜೇಮ್ಸ ಕ್ಯಾಮರಾನರನ್ನು ಮದುವೆಯಾದಳು.

ಜೇಮ್ಸ ಕ್ಯಾಮರಾನರವರ ಜೀವನಕಥೆ - Life Story of James Cameron in Kannada

ದಿ ಟರ್ಮಿನೇಟರ್ ಚಿತ್ರದ ಸಕ್ಸೆಸಿನ ನಂತರ ಜೇಮ್ಸ ಕ್ಯಾಮರಾನ ಯಾವತ್ತೂ ತಮ್ಮ ಕರಿಯರನಲ್ಲಿ ತಿರುಗಿ ನೋಡಲಿಲ್ಲ. Aliens, The Abyss, Terminator-2 : The Judgement Day, True Liesಗಳಂಥ ಸಾಲುಸಾಲು ಸೂಪರ ಹಿಟ್ ಸಿನಿಮಾಗಳನ್ನು ನೀಡಿದರು. ಅವರು ತಮ್ಮ ಸಿನಿಮಾಗಳಿಗೆ ಬೇಕಾದ Vfxಗಳನ್ನು ತಾವೇ ಡೆವಲಪ್ ಮಾಡಿದರು. ಅವುಗಳಲ್ಲಿ ದಿ ಟರ್ಮಿನೇಟರ್ ಚಿತ್ರಕ್ಕಾಗಿ ತಯಾರಿಸಿದ ಲಿಕ್ವಿಡ್ ಮೆಟಲ್ ಎಫೆಕ್ಟ್ ಬಹಳಷ್ಟು ಪಾಪ್ಯುಲರ್ ಆಗಿತ್ತು.

ಜೇಮ್ಸ ಕ್ಯಾಮರಾನರವರ ಜೀವನಕಥೆ - Life Story of James Cameron in Kannada

ಜೇಮ್ಸ ಕ್ಯಾಮರಾನರಿಗೆ ಬಾಲ್ಯದಿಂದಲೂ ಸಾಗರಯಾನದಲ್ಲಿ ತುಂಬಾ ಆಸಕ್ತಿಯಿತ್ತು. ಅವರು ಸಕ್ಸೆಸಫುಲ್ ಡೈರೆಕ್ಟರ್ ಆದ ನಂತರ ಅವರು ತಮ್ಮದೇ ಖರ್ಚಿನಲ್ಲಿ ಹಲವಾರು ಸೀ ಡೈವಿಂಗಗಳನ್ನು ಮಾಡಿ ಅಂಡರ್ ವಾಟರ್ ವಿಡಿಯೋ ಶೂಟಗಳನ್ನು ಮಾಡಿದರು. ಅಂಟ್ಲಾಂಟಿಕ್ ಸಾಗರದ ತಳವನ್ನು ತಲುಪಿ ಟೈಟಾನಿಕ ಹಡಗಿನ ಅವಶೇಷಗಳನ್ನು ಕಣ್ಣಾರೆ ಕಂಡು ಅದನ್ನು ತಮ್ಮ ಕ್ಯಾಮರಾದಲ್ಲಿ ಸೆರೆ ಹಿಡಿದರು. 1912ರಲ್ಲಿ ಅಂಟ್ಲಾಂಟಿಕ್ ಮಹಾಸಾಗರದಲ್ಲಿ ಮುಳುಗಿದ ಜಗತ್ತಿನ ಅತಿದೊಡ್ಡ ಐಷಾರಾಮಿ ಹಡಗು ಟೈಟಾನಿಕನ ದುರಂತ ಕಥೆಯನ್ನು ಆಧಾರವಾಗಿಟ್ಟುಕೊಂಡು ಒಂದು ಚಿತ್ರಕಥೆಯನ್ನು ಬರೆದರು. ಆನಂತರ ಅದನ್ನೇ ಸಿನಿಮಾ ಮಾಡಿದರು. ಸುಮಾರು 200 ಮಿಲಿಯನ್ ಡಾಲರಗಳಲ್ಲಿ ತಯಾರಾದ ಈ ಟೈಟಾನಿಕ ಸಿನಿಮಾ 1.84 ಬಿಲಿಯನ್ ಡಾಲರಗಳಷ್ಟು ಬಿಜನೆಸ್ ಮಾಡಿತು. ಇದು ಆ ಕಾಲದ ಅತ್ಯಂತ ದುಬಾರಿ ವೆಚ್ಚದ ಸಿನಿಮಾವಾಗಿತ್ತು. ಟೈಟಾನಿಕ ಹಳೆಯ ಬಾಕ್ಸ ಆಫೀಸ್ ರೆಕಾರ್ಡಗಳನ್ನೆಲ್ಲ ಮುರಿದು ಹೊಸ ರೆಕಾರ್ಡನ್ನು ಬರೆಯಿತು. ಜಗತ್ತಿನಲ್ಲಿ ಅತೀ ಹೆಚ್ಚು ಹಣ ಗಳಿಸಿದ ಸಿನಿಮಾ ಎಂಬ ಹೆಗ್ಗಳಿಕೆಗೆ ಟೈಟಾನಿಕ ಪಾತ್ರವಾಯಿತು. ಅಲ್ಲದೆ ಬೆಸ್ಟ ಫಿಲ್ಮ ಡೈರೆಕ್ಟರ್, ಬೆಸ್ಟ ಫಿಲ್ಮ್ ಸೇರಿದಂತೆ 11 ಆಸ್ಕರ ಪ್ರಶಸ್ತಿಗಳನ್ನು ಈ ಸಿನಿಮಾ ಬಾಚಿಕೊಂಡಿತು.

ಜೇಮ್ಸ ಕ್ಯಾಮರಾನರವರ ಜೀವನಕಥೆ - Life Story of James Cameron in Kannada

ಈ ಟೈಟಾನಿಕ ಸಿನಿಮಾದ ಯಶಸ್ಸಿನ ಹಿಂದೆ ಜೇಮ್ಸ ಕ್ಯಾಮರಾನರ ಒಂದು ಕಲೆಯ ಕೈಚಳಕವಿದೆ. ಅವರು ತಮ್ಮ ಕನಸುಗಳನ್ನು ಪೇಂಟಿಂಗನಲ್ಲಿ ಬಿಡಿಸುತ್ತಿದ್ದರು. ಟೈಟಾನಿಕ ಚಿತ್ರದಲ್ಲಿ ನಿಮಗೆ ಕಂಡುಬರುವ ಟೈಟಾನಿಕ ಹೀರೋಯಿನಳ ಬೆತ್ತಲೆ ಪೇಂಟಿಂಗಗಳನ್ನು ಸ್ವತಃ ಜೇಮ್ಸ ಕ್ಯಾಮರಾನ ಬಿಡಿಸಿದ್ದಾರೆ. He painted the nude pictures of Titanic heroine with heart of ocean locket. ಜೇಮ್ಸ ಕ್ಯಾಮರಾನ ಬಣ್ಣದ ಕುಂಚದಿಂದ ತಮ್ಮ ಕನಸುಗಳಿಗೆ ಜೀವ ತುಂಬುತ್ತಿದ್ದರು. ನಂತರ VFx ಹಾಗೂ CGI ಮೂಲಕ ಅವುಗಳನ್ನು ಸ್ಕ್ರೀನ್ ಮೇಲೆ ಸೃಷ್ಟಿಸುತ್ತಿದ್ದರು.

ಜೇಮ್ಸ ಕ್ಯಾಮರಾನರವರ ಜೀವನಕಥೆ - Life Story of James Cameron in Kannada

ಟೈಟಾನಿಕ ಸಿನಿಮಾದಿಂದ ಸಿಕ್ಕ ದೊಡ್ಡ ಯಶಸ್ಸಿನ ನಂತರ ಜೇಮ್ಸ ಕ್ಯಾಮರಾನ ಸಿನಿಮಾದಿಂದ ಸ್ವಲ್ಪ ದೂರ ಉಳಿದರು. ಈ ಸಮಯದಲ್ಲಿ ಅವರು ಅಂಟ್ಲಾಂಟಿಕ್ ಹಾಗೂ ಫೆಸಿಪಿಕ್ ಸಾಗರದ ತಳಗಳಲ್ಲಿ ಲೈವ್ ಶೂಟಿಂಗ ಮಾಡಿ Ghost of Abyss ಹಾಗೂ Aliens of the Deep ಎಂಬ ಡಾಕ್ಯುಮೆಂಟರಿಗಳನ್ನು ಮಾಡಿದರು. ಅತ್ಯಂತ ಆಳವಾದ ಸಾಗರದ ತಳ ಮಾರಿಯಾನಾ ಟ್ರೆಂಚನ್ನು ತಲುಪಿದ ಮೊದಲ ವ್ಯಕ್ತಿ ಜೇಮ್ಸ ಕ್ಯಾಮರಾನ ಆಗಿದ್ದಾರೆ.

ಜೇಮ್ಸ ಕ್ಯಾಮರಾನರವರ ಜೀವನಕಥೆ - Life Story of James Cameron in Kannada

2005ರಲ್ಲಿ ಜೇಮ್ಸ ಕ್ಯಾಮರಾನ ತಾವು ಹೈಸ್ಕೂಲಿನಲ್ಲಿದ್ದಾಗ ಕಂಡ ಕನಸಿನ ಆಧಾರದ ಮೇಲೆ ಮತ್ತೊಂದು ಸಿನಿಮಾ ಮಾಡಲು ಮುಂದಾದರು. ಅದೇ ಅವತಾರ ಸಿನಿಮಾ. ಅವತಾರ ಸಿನಿಮಾದ ಸ್ಕ್ರೀಪ್ಟನ್ನು ಜೇಮ್ಸ ಕ್ಯಾಮರಾನ ಟೈಟಾನಿಕ ಸಿನಿಮಾ ರಿಲೀಸ್ ಆಗುವುದಕ್ಕಿಂತ ಮುಂಚೆಯೇ ಬರೆದಿದ್ದರು. ಆದರೆ ಅವರ ವಿಜನನ್ನು ತೆರೆ ಮೇಲೆ ತೋರಿಸುವಷ್ಟು ಟೆಕ್ನಾಲಜಿ ಆವಾಗಿನ ಕಾಲದಲ್ಲಿ ಇರಲಿಲ್ಲ. ಅದಕ್ಕಾಗಿ ಅವರು ಅವತಾರವನ್ನು ಲೇಟಾಗಿ ಕೈಗೆತ್ತಿಕೊಂಡರು. ಇವರು ಈ ಚಿತ್ರಕ್ಕಾಗಿ ಡಿಜಿಟಲ್ 3D ಫ್ಯುಜನ ಕ್ಯಾಮರಾವನ್ನು ಡೆವೆಲಪ ಮಾಡಿದರು. Computer Generated Animations ಹಾಗೂ 3D ಟೆಕ್ನಾಲಜಿಯ ಮೂಲಕ ತಯಾರಾದ ಈ ಸಿನಿಮಾ 2009ರಲ್ಲಿ ಜಗತ್ತಿನಾದ್ಯಂತ ಬಿಡುಗಡೆಯಾಗಿ ಬಾಕ್ಸ ಆಫೀಸಿನಲ್ಲಿ ಸೂಪರ್ ಹಿಟ್ ಆಯಿತು. ಸುಮಾರು 237 ಮಿಲಿಯನ್ ಡಾಲರಗಳ ವೆಚ್ಚದಲ್ಲಿ ತಯಾರಾದ ಅವತಾರ ಸಿನಿಮಾ 2.74 ಬಿಲಿಯನ್ ಡಾಲರ್ ಗಳಿಸುವ ಮೂಲಕ 2 ಬಿಲಿಯನ್ ಡಾಲರಗೂ ಅಧಿಕ ಬಿಜನೆಸ್ ಮಾಡಿದ ಜಗತ್ತಿನ ಮೊದಲ ಸಿನಿಮಾ ಎಂಬ ಹೆಗ್ಗಳಿಕೆಗೆ ಪಾತ್ರವಾಯಿತು. ಅತೀ ಹೆಚ್ಚು ಹಣಗಳಿಸಿದ ಸಿನಿಮಾ ಎಂಬ ಖ್ಯಾತಿಯೂ ಸಹ ಅವತಾರ ಸಿನಿಮಾಗಿದೆ.

ಜೇಮ್ಸ ಕ್ಯಾಮರಾನರವರ ಜೀವನಕಥೆ - Life Story of James Cameron in Kannada

ಸದ್ಯಕ್ಕೆ ಜೇಮ್ಸ್ ಕ್ಯಾಮರಾನ ಅವತಾರ-2 ಸಿನಿಮಾದ ಚಿತ್ರೀಕರಣದಲ್ಲಿ ತೊಡಗಿದ್ದಾರೆ. ಈ ಸಿನಿಮಾ 2020ರಲ್ಲಿ ತೆರೆ ಕಾಣಲಿದೆ. ಗೆಳೆಯರೇ, ಇದಿಷ್ಟು ಜೇಮ್ಸ ಕ್ಯಾಮರಾನರವರ ಲೈಫಸ್ಟೋರಿ. ಇನ್ನು ಅವರು ತಮ್ಮ ಜೀವನದಲ್ಲಿ ಏನೇನು ಸಾಧಿಸುತ್ತಾರೆ ಎಂಬುದನ್ನು ಊಹಿಸಲು ಕೂಡ ಸಾಧ್ಯವಿಲ್ಲ. ಟ್ರಕ್ ಡ್ರೈವರ್ ಆಗಿದ್ದ ಅವರು ಪುಸ್ತಕಗಳನ್ನು ಓದಿಕೊಂಡು VFx ಕಲಿತು, ಫಿಲ್ಮಮೇಕಿಂಗನ್ನು ಕಲಿತು ಟೈಟಾನಿಕ ಹಾಗೂ ಅವತಾರಗಳಂಥ ಅಮೇಜಿಂಗ್ ಸಿನಿಮಾಗಳನ್ನು ಮಾಡುತ್ತಾರೆಂದರೆ ಅದು ಸುಲಭದ ಮಾತಲ್ಲ. ಒಬ್ಬ ವ್ಯಕ್ತಿ ಆಸಕ್ತಿಯಿದ್ದರೆ, ಪ್ಯಾಷನಿದ್ದರೆ ಏನು ಬೇಕಾದರೂ ಸಾಧಿಸಬಹುದು, ಸೈಂಟಿಸ್ಟ ಕಮ್ ಫಿಲ್ಮ್ ಮೇಕರ್ ಆಗಬಹುದು ಎಂಬುದಕ್ಕೆ ಜೀವಂತ ಸಾಕ್ಷಿ ಜೇಮ್ಸ ಕ್ಯಾಮರಾನ.

ಜೇಮ್ಸ ಕ್ಯಾಮರಾನರವರ ಜೀವನಕಥೆ - Life Story of James Cameron in Kannada

ಜೇಮ್ಸ ಕ್ಯಾಮರಾನ ನನ್ನ ಪರ್ಸನಲ್ ಫೇವರೆಟ್ ಫಿಲ್ಮ ಮೇಕರ ಕೂಡ ಹೌದು. ಅವರ ಜೀವನದಿಂದ, ಅವರಿಂದ ಹಾಗೂ ಅವರ ಸಿನಿಮಾಗಳಿಂದ ಕಲಿಯುವುದು ಸಾಕಷ್ಟಿದೆ. ಸಾಧ್ಯವಾದರೆ ಅವರಿಂದ ಏನಾದರೂ ಒಂದನ್ನು ಕಲಿಯಿರಿ. ಏನಾದರೂ ಒಂದನ್ನು ಸಾಧಿಸಿ. All the Best and Thanks You…

ಜೇಮ್ಸ ಕ್ಯಾಮರಾನರವರ ಜೀವನಕಥೆ - Life Story of James Cameron in Kannada

Note : This article is fully based on James Cameron’s details available on Internet and his interviews.

    ಈ ಅಂಕಣ (Article) ನಿಮಗೆ ಇಷ್ಟವಾಗಿದ್ದರೆ ನಿಮ್ಮೆಲ್ಲ ಗೆಳೆಯರೊಡನೆ ಮತ್ತು ನೀವಿರುವ ಎಲ್ಲ ಕನ್ನಡ ಫೇಸ್ಬುಕ್ ಗ್ರೂಪಗಳಲ್ಲಿ ಇದನ್ನು ತಪ್ಪದೇ ಶೇರ್ (Share) ಮಾಡಿ. ಜೊತೆಗೆ ಪ್ರತಿದಿನ ಹೊಸಹೊಸ ಅಂಕಣಗಳನ್ನು, ಪ್ರೇಮಕಥೆಗಳನ್ನು, ಕವನಗಳನ್ನು ಉಚಿತವಾಗಿ ಓದಲು ತಪ್ಪದೆ ನನ್ನ ಫೇಸ್ಬುಕ್ ಪೇಜನ್ನು https://www.facebook.com/Directorsatishkumar/ (Director Satishkumar) ಲೈಕ್ ಮಾಡಿ.

Follow Me On : Facebook | Instagram | YouTube | Twitter

My Books : Kannada Books | Hindi Books | English Books

⚠ STRICT WARNING ⚠

Content Rights :

ಈ ಅಂಕಣದ ಎಲ್ಲ ಹಕ್ಕುಗಳನ್ನು ಡೈರೆಕ್ಟರ್ ಸತೀಶಕುಮಾರ ಹಾಗೂ ರೋರಿಂಗ್ ಕ್ರಿಯೇಷನ್ಸ್ ಪ್ರೈವೇಟ್ ಲಿಮಿಟೆಡ್ ಕಂಪನಿ ವತಿಯಿಂದ ಸಂಪೂರ್ಣವಾಗಿ ಕಾಯ್ದಿರಿಸಲಾಗಿದೆ. ಡೈರೆಕ್ಟರ್ ಸತೀಶಕುಮಾರ ಅವರ ಅನುಮತಿಯಿಲ್ಲದೆ ಈ ಅಂಕಣದ ಯಾವುದೇ ಭಾಗವನ್ನು ಕಾಪಿ ಮಾಡುವಂತಿಲ್ಲ, ಬೇರೆ ಭಾಷೆಗಳಿಗೆ ಅನುವಾದಿಸುವಂತಿಲ್ಲ ಮತ್ತು ಇದನ್ನು ಬೇರೆಡೆಗೆ ಪ್ರಕಟಿಸುವಂತಿಲ್ಲ. ಯಾವುದೇ ಸಾಮಾಜಿಕ ಜಾಲತಾಣಗಳಲ್ಲಿ ಪೋಸ್ಟ್ ಮಾಡುವಂತಿಲ್ಲ. ಮುದ್ರಣ ಮಾಡುವಂತಿಲ್ಲ. ಒಂದು ವೇಳೆ ಯಾರಾದರೂ ಕಾಪಿ ರೈಟ್ಸ್ ನಿಯಮಗಳನ್ನು ಉಲ್ಲಂಘಿಸಿದರೆ ಅವರ ಮೇಲೆ ಸೂಕ್ತ ಕಾನೂನು ಕ್ರಮ ಕೈಗೊಳ್ಳಲಾಗುವುದು ಹಾಗೂ ಆಗಿರುವ ನಷ್ಟವನ್ನು ಅವರಿಂದಲೇ ವಸೂಲಿ ಮಾಡಲಾಗುವುದು.

All Rights of this article are fully reserved by Director Satishkumar and Roaring Creations Private Limited India. No part of this article can be copied, translated or re published anywhere without the written permission of Director Satishkumar. If such violation of copy rights found to us, then we legally punish to copy cats and recover our loss by them only.

© Director Satishkumar and Roaring Creations Private Limited, India.

Director Satishkumar

Satishkumar is a young multi language writer (English, Hindi, Marathi and Kannada), Motivational Speaker, Entrepreneur and independent filmmaker from India. And also he is the Co-founder and CEO of Roaring Creations Pvt Ltd India. Follow Me On : Facebook | Instagram | YouTube | Twitter My Books : Kannada Books | Hindi Books | English Books