1) ಸೌಂದರ್ಯದ ಶಾಪ : ಒಂದು ಸಣ್ಣ ಕಥೆ – Curse of Beauty – Short Stories in Kannada
“ಸೌಂದರ್ಯದ ಶಾಪ” ಇದು ಬಡ ಹುಡುಗಿಯೊಬ್ಬಳ ಮನ ಕಲುಕುವ ಕಥೆಯಾಗಿದೆ. ಅವಳು ಸುಂದರಿ ಎನ್ನುವುದರಲ್ಲಿ ಸಂದೇಹವಿರಲಿಲ್ಲ. ಸೌಂದರ್ಯ ಅವಳಿಗೆ ಸಿಕ್ಕ ವರವಾಗಿತ್ತು. ಆದರೆ ಅವಳ ಬಡತನ ಅವಳಿಗೆ ದೊಡ್ಡ ಶಾಪವಾಗಿತ್ತು. ಅವಳನ್ನು ಸಾಕುವ ಶಕ್ತಿ ಅವಳ ಹೆತ್ತವರಿಗೆ ಇರಲಿಲ್ಲ. ಅದಕ್ಕಾಗಿ ಅವರು ೫೦ ಸಾವಿರ ತೆಗೆದುಕೊಂಡು ಒಬ್ಬ ಸುಳ್ಳು ಶ್ರೀಮಂತನಿಗೆ ಅವಳನ್ನು ಮದುವೆ ಮಾಡಿಕೊಟ್ಟರು. ಆತ ಅವಳನ್ನು ಸರಿಯಾಗಿ ನೋಡಿಕೊಳ್ಳುವುದಿಲ್ಲ. ಆಗಾಕೆ ಹೊಟ್ಟೆಪಾಡಿಗಾಗಿ ಮೈಮಾರಿಕೊಳ್ಳಲು ಪ್ರಾರಂಭಿಸುತ್ತಾಳೆ. ಈಗಲೂ ಅವಳಿಗೆ ಅವಳ ಸೌಂದರ್ಯದ ಮೇಲೆ ಗರ್ವವಿತ್ತು. ಆದರೆ ಮುಂದೊಂದಿನ ಅವಳ ಸೌಂದರ್ಯವೇ ಅವಳಿಗೆ ಶಾಪವಾಗುತ್ತದೆ. ಅದು ಹೇಗೆ? ಅವಳ ಕಥೆಯೇನು? ಎಂಬುದನ್ನು ದಾರಿ ತಪ್ಪುವ ಯೋಚನೆ ಮಾಡುತ್ತಿರುವ ಪ್ರತಿಯೊಬ್ಬರು ಓದಲೇಬೇಕು…
ಈ ಪುಸ್ತಕವನ್ನು ಓದಲು ಕ್ಲಿಕ್ ಮಾಡಿ. Click
2) ಪರ್ಲಿಯ ಪ್ರೇಮಕಥೆ : Great Love Story of Mermaid Pearly
ಪರ್ಲಿ ಒಬ್ಬಳು ಸುಂದರವಾದ ಮತ್ಯ್ಸ ಕನ್ಯೆ. ಜೊತೆಗೆ ಆಕೆ ಸಾಗರದ ರಾಣಿ. ಅವಳಿಗೆ ಸಮುದ್ರ ಜೀವನ ಬೇಸರವಾಗಿ ಒಬ್ಬ ಮಾಂತ್ರಿಕನ ಸಹಾಯ ಪಡೆದುಕೊಂಡು ಆಕೆ ಮನುಜೆಯಾಗಿ ಭೂಮಿಗೆ ಬರುತ್ತಾಳೆ. ಆಕೆ ಭೂಮಿಗೆ ಬಂದು ಭೂಮಿಯ ಸೌಂದರ್ಯವನ್ನು ಸವಿಯುವಾಗ ಆಕೆಗೆ ಒಬ್ಬ ಸುಂದರವಾದ ರಾಜಕುಮಾರ ಕಾಣಿಸುತ್ತಾನೆ. ಆಕೆ ಅವನನ್ನು ಪ್ರೀತಿಸಲು ಪ್ರಾರಂಭಿಸುತ್ತಾಳೆ. ಆದರೆ ಅವಳ ರಾಜಕುಮಾರ ಈ ಮೊದಲೇ ಬೇರೆಯವಳನ್ನು ಪ್ರೀತಿಸುತ್ತಿರುತ್ತಾನೆ. ಅದಕ್ಕಾಗಿ ಆಕೆ ಅವನ ಪ್ರೇಯಸಿಯನ್ನು ಕೊಂದು ತಾನು ಅವನೊಂದಿಗೆ ಬಾಳಲು ನಿರ್ಧರಿಸುತ್ತಾಳೆ. ಪರ್ಲಿಗೆ ಅವಳು ಇಷ್ಟಪಟ್ಟ ರಾಜಕುಮಾರನ ಪ್ರೀತಿ ಸಿಗುತ್ತದೆಯೋ ಅಥವಾ ಇಲ್ಲವೋ ಎಂಬ ಪ್ರಶ್ನೆಗೆ ಉತ್ತರವೇ ಪರ್ಲಿಯ ಪ್ರೇಮಕಥೆ…
ಈ ಪುಸ್ತಕವನ್ನು ಓದಲು ಕ್ಲಿಕ್ ಮಾಡಿ. Click
3) ನೀಲಿ ಕಂಗಳ ಹುಡುಗಿ : ಒಂದು ಪತ್ತೆದಾರಿ ಕ್ರೈಂ ಸ್ಟೋರಿ – One Detective Crime Story in Kannada – Kannada Stories
“ನೀಲಿ ಕಂಗಳ ಹುಡುಗಿ” ಇದೊಂದು ಪತ್ತೆದಾರಿ ಕ್ರೈಂ ಸ್ಟೋರಿಯಾಗಿದೆ. ಈ ಕ್ರೈಂ ಸ್ಟೋರಿಯಲ್ಲಿ ಒಂದು ಸ್ಯಾಡ್ ಲವ್ ಸ್ಟೋರಿ ಇದೆ. ಈ ಕಥೆಯ ನಾಯಕಿ ನೀಲಿ ಕಂಗಳ ಹುಡುಗಿ ನಮ್ರತಾಳ ನಿಗೂಢ ಸಾವಿನ ಸುತ್ತ ಈ ಕಥೆ ಸುತ್ತುತ್ತದೆ. ಈ ಕಥೆಯ ನಾಯಕ ಇನ್ಸಪೆಕ್ಟರ ಸತ್ಯ ಹೇಗೆ ತನ್ನ ಮಾಜಿ ಪ್ರೇಯಸಿ ನಮ್ರತಾಳ ಕೊಲೆ ರಹಸ್ಯವನ್ನು ಭೇದಿಸುತ್ತಾನೆ ಎಂಬುದು ಈ ಕಥೆಯ ವಿಷಯವಾಗಿದೆ. ಇದು ಸಂಪೂರ್ಣವಾಗಿ ಕಮರ್ಷಿಯಲ್ ಕಥೆಯಾಗಿದ್ದು ಕ್ರೈಂ ಸ್ಟೋರಿಗಳಲ್ಲಿ ಆಸಕ್ತಿ ಇರುವವರು ಮಾತ್ರ ಓದಬಹುದು…
ಈ ಪುಸ್ತಕವನ್ನು ಓದಲು ಕ್ಲಿಕ್ ಮಾಡಿ. Click
4) ಡೆವಿಲ್ – ಒಂದು ಮುದ್ದಾದ ಪ್ರೇಮಕಥೆ – One Cute Love Story in Kannada
“ಡೆವಿಲ್” ಇದೊಂದು ಕಾಲೇಜ ಹುಡುಗನ ಮುದ್ದಾದ ಪ್ರೇಮಕಥೆಯಾಗಿದೆ. ಈ ಕಥೆಯ ಕಥಾ ನಾಯಕ ಡೆವಿಲ್ ತನ್ನ ಸಹಪಾಠಿ ರಾಜಿಯನ್ನು ಪ್ರೀತಿಸುತ್ತಿರುತ್ತಾನೆ. ಆದರೆ ಇದ್ದಕ್ಕಿಂದಂತೆ ಒಂದಿನ ರಾಜಿ ಅವನ ಜೀವನದಿಂದ ಕಣ್ಮರೆಯಾಗುತ್ತಾಳೆ. ಆಕೆ ಏನಾದಳು? ಎಲ್ಲಿಗೆ ಹೋದಳು? ಎಂಬುದು ಯಾರಿಗೂ ಗೊತ್ತಾಗುವುದಿಲ್ಲ. ಅವಳ ನೆನಪಲ್ಲಿ ಡೆವಿಲ್ ಡಿಪ್ರೆಶನ್ನಿಗೆ ಒಳಗಾಗುತ್ತಾನೆ. ನಂತರ ಒಂದು ವರ್ಷದ ನಂತರ ಸುಧಾರಿಸಿಕೊಂಡು ಆತ ಟ್ರಾವೆಲ್ ಫೋಟೋಗ್ರಾಫರ್ ಆಗಿ ಕಾಡು ಕಾಡು ಅಲೆಯುತ್ತಾನೆ. ವರ್ಲ್ಡ್ ಫೇಮಸ್ ಟ್ರಾವೆಲ್ ಫೋಟೋಗ್ರಾಫರ್ ಆಗುತ್ತಾನೆ. ಅವನನ್ನು ಒಂದು ಕ್ಯಾಮೆರಾ ಮ್ಯಾನುಫ್ಯಾಕ್ಟರಿಂಗ ಕಂಪನಿ ಅಮೇರಿಕಾಗೆ ಆಹ್ವಾನಿಸುತ್ತದೆ. ಆಗ ಆತ ಅಮೇರಿಕಾಗೆ ಹೋದಾಗ ಅವನಿಗೆ ಅಲ್ಲಿ ರಾಜಿ ಸಿಗುತ್ತಾಳೆ. ರಾಜಿ ಯಾಕೆ ಸದ್ದಿಲ್ಲದೇ ಕಣ್ಮರೆಯಾಗಿರುತ್ತಾಳೆ ಮತ್ತೆ ಮುಂದೆ ಅವರಿಬ್ಬರ ಮಧ್ಯೆ ಏನಾಗುತ್ತದೆ ಎಂಬುದೇ ಈ ಕಥೆಯ ಜೀವವಾಗಿದೆ…
ಈ ಪುಸ್ತಕವನ್ನು ಓದಲು ಕ್ಲಿಕ್ ಮಾಡಿ. Click
5) ಮಳೆ ಹುಡುಗಿ – ಒಂದು ಮುದ್ದು ಪ್ರೇಮಕಥೆ – One Cute Love Story in Kannada
“ಮಳೆ ಹುಡುಗಿ” ಇದು ನನ್ನ ಕಾಲೇಜು ಜೀವನದಲ್ಲಿ ಘಟಿಸಿದ ನೈಜ ಕಥೆಯಾಗಿದೆ. ಒಂದಿನ ನಾನು ಕಾಲೇಜಿನಿಂದ ಮರಳಿ ಬರುವಾಗ ಮಳೆಯಲ್ಲಿ ಸಿಲುಕಿಕೊಂಡೆ. ಆವಾಗ ಒಬ್ಬಳು ಸುಂದರವಾದ ಯುವತಿ ಆ ಮಳೆಯಲ್ಲಿ ಒಂದು ದೊಡ್ಡ ಮರದ ಕೆಳಗೆ ನನ್ನ ಜೊತೆಯಾದಳು. ಈ ಕಥೆ ನನ್ನ ಮತ್ತು ಅವಳ ನಡುವಿನ ಒಂದು ಮುದ್ದಾದ ಮೋಹಕ ಕಥೆಯಾಗಿದೆ. ಈ ಸಣ್ಣ ಕಥೆಯಲ್ಲಿ ಆ ಮಳೆ ಹುಡುಗಿ ನನ್ನೊಂದಿಗೆ ಕೋಪದಿಂದ ಹೇಗೆ ವರ್ತಿಸಿದಳು ಮತ್ತು ನನಗೆ ಅವಳ ತುಟಿಗಳಲ್ಲಿ ನಗುವನ್ನು ತರಲು ಹೇಗೆ ಸಾಧ್ಯವಾಯಿತು ಇತ್ಯಾದಿಗಳ ಬಗ್ಗೆ ವಿವರಿಸಿದ್ದೇನೆ. ಪೂರ್ಣ ಪ್ರೇಮಕಥೆಯನ್ನು ತಿಳಿಯಲು ನೀವು ಈ ಪುಸ್ತಕವನ್ನು ಒಮ್ಮೆ ಓದಬೇಕು. ಇದು ವೆರಿ ಶಾರ್ಟ್ ಮತ್ತು ಸ್ವೀಟ್ ಕಥೆಯಾಗಿದ್ದು, ಇದು ನನ್ನ ಕಾಲೇಜು ದಿನಗಳಲ್ಲಿ ನಿಜವಾಗಿಯೂ ನನ್ನ ಜೀವನದಲ್ಲಿ ಸಂಭವಿಸಿದೆ…
ಈ ಪುಸ್ತಕವನ್ನು ಓದಲು ಕ್ಲಿಕ್ ಮಾಡಿ. Click
6) ಒಂಟಿ ಹೆಣ್ಣಿನ ದಿಟ್ಟ ಹೆಜ್ಜೆಗಳು : ಒಂದು ಡೈವೋರ್ಸಿನ ಕಥೆ – One Divorce Story in Kannada
“ಒಂಟಿ ಹೆಣ್ಣಿನ ದಿಟ್ಟ ಹೆಜ್ಜೆಗಳು” ಇದೊಂದು ಡೈವೋರ್ಸ್ ಆದ ಒಬ್ಬ ಹುಡುಗಿಯ ಜೀವನ ಕಥೆಯಾಗಿದೆ. ಡೈವೋರ್ಸ್ ಆದ ಹೆಣ್ಣು ಮಗಳು ಏನೆಲ್ಲಾ ತೊಂದರೆಗೆ ಒಳಗಾಗುತ್ತಾಳೆ? ನೀಲಿ ಕಣ್ಣುಗಳುಳ್ಳ ಸಮಾಜ ಅವಳನ್ನು ಹೇಗೆ ನೋಡುತ್ತದೆ ಎಂಬಿತ್ಯಾದಿ ವಿಷಯಗಳ ಮೇಲೆ ಈ ಕಥೆ ಬೆಳಕು ಚೆಲ್ಲುತ್ತದೆ. ಡೈವೋರ್ಸ್ ಆದ ಸೋದರಿಯರಿಗೆ ಸ್ಫೂರ್ತಿ ತುಂಬುವ ಮೋಟಿವೇಶನಲ್ ಕಥೆ ಇದಾಗಿದೆ…
ಈ ಪುಸ್ತಕವನ್ನು ಓದಲು ಕ್ಲಿಕ್ ಮಾಡಿ. Click
7) ದಾರಿ ತಪ್ಪಿದ ಹೆಂಡತಿ – One Sad Love Story of The Cunning Wife in Kannada
“ದಾರಿ ತಪ್ಪಿದ ಹೆಂಡತಿ” ಇದೊಂದು ಕಾಲ್ಪನಿಕ ಕಥೆಯಾಗಿದ್ದು, ಯಾವುದೇ ರೀತಿಯಲ್ಲಿ ಯಾರಿಗೂ ಸಂಬಂಧ ಪಟ್ಟಿರುವುದಿಲ್ಲ. ಈ ಕಥೆಯನ್ನು ಸಾಮಾಜಿಕ ಜಾಗೃತಿಯ ದೃಷ್ಟಿಕೋನದಿಂದ ಹಾಗೂ ಕಮರ್ಷಿಯಲ್ ಉದ್ದೇಶಕ್ಕಾಗಿ ಬರೆಯಲಾಗಿದೆ. ಈ ಕಥೆಯ ನಾಯಕಿ ರೂಪಾ ತನ್ನ ಸಹೋದ್ಯೋಗಿ ಹರೀಶನನ್ನು ಮನಸಾರೆ ಪ್ರೀತಿಸುತ್ತಿದ್ದಳು. ಆದರೆ ಆತ ಅವಳನ್ನು ಬರೀ ದುಡ್ಡು ಹಾಗೂ ದೇಹಸುಖಕ್ಕಾಗಿ ಪ್ರೀತಿಸುತ್ತಿದ್ದನು. ಇದವಳಿಗೆ ಗೊತ್ತಿರಲಿಲ್ಲ. ರೂಪಾ ಹಾಗೂ ಹರೀಶನ ಮದುವೆಗೆ ಅವಳ ಮನೆಯವರು ಒಪ್ಪುವುದಿಲ್ಲ. ಜೊತೆಗೆ ಅವಳನ್ನು ಬ್ಲಾಕ್ಮೆಲ್ ಮಾಡಿ ಬೇರೆಯವನೊಂದಿಗೆ ಅವಳ ಮದುವೆ ಮಾಡಿಸುತ್ತಾರೆ. ಅವಳ ಗಂಡ ಒಳ್ಳೆಯವನಾಗಿರುತ್ತಾನೆ. ಆದರೆ ಅವಳೇ ಹರೀಶನಿಗಾಗಿ ಅವನಿಗೆ ಮೋಸ ಮಾಡುತ್ತಾಳೆ. ಅವನೊಂದಿಗೆ ಜಗಳವಾಡಿ ಹರೀಶನೊಂದಿಗೆ ಸೇರಿ ಎಲ್ಲ ಹದ್ದುಗಳನ್ನು ಮೀರುತ್ತಾಳೆ. ಕೊನೆಗೆ ತನ್ನ ಗಂಡನಿಗೆ ಡೈವೋರ್ಸ್ ಕೊಟ್ಟು ಹರೀಶನನ್ನು ಮದುವೆಯಾಗಲು ಮುಂದಾಗುತ್ತಾಳೆ. ಆಗ ಹರೀಶನ ಅಸಲಿ ಮುಖ ಅವಳಿಗೆ ಗೊತ್ತಾಗುತ್ತದೆ. ಆದರೆ ಅವಳು ಏನನ್ನೂ ಮಾಡುವ ಸ್ಥಿತಿಯಲ್ಲಿರಲಿಲ್ಲ. ಏಕೆಂದರೆ ಅವಳು ಈಗಾಗಲೇ ದಾರಿ ತಪ್ಪಿದ್ದಳು. ಅವಳು ಮುಂದೇನು ಮಾಡುತ್ತಾಳೆ? ಅವಳೊಂದಿಗೆ ಮತ್ತೇನಾಗುತ್ತೆ? ಎಂಬುದೇ ಈ ಪುಸ್ತಕದ ಕಥಾವಸ್ತುವಾಗಿದೆ.
ಈ ಪುಸ್ತಕವನ್ನು ಓದಲು ಕ್ಲಿಕ್ ಮಾಡಿ. Click
8) ಪರರ ಹೆಂಡತಿ ಪರಮ ಸುಂದರಿ – Romantic Life Story of Cute Couples in Kannada
“ಪರರ ಹೆಂಡತಿ ಪರಮ ಸುಂದರಿ” ಇದು ಎರಡು ಮುದ್ದಾದ ದಂಪತಿಗಳ ನಡುವೆ ನಡೆಯುವ ಒಂದು ರೋಮ್ಯಾಂಟಿಕ್ ಕಥೆಯಾಗಿದೆ. ಬಹಳಷ್ಟು ಜನರಿಗೆ ಪರರ ಹೆಂಡತಿ ಪರಮ ಸುಂದರಿಯಾಗಿ ಕಾಣುತ್ತಾಳೆ, ಪರರ ಗಂಡ ಪರಮಾಪ್ತನಂತೆ ಕಾಣುತ್ತಾನೆ. ಈ ವಿಷಯ ಈ ಕಥೆಯಲ್ಲಿ ಸೊಗಸಾಗಿ ಮೂಡಿ ಬಂದಿದೆ. ಒಂದೇ ಅಪಾರ್ಟಮೆಂಟಲ್ಲಿ ಎದುರು ಬದುರು ವಾಸವಾಗಿದ್ದ ಎರಡು ವಿವಾಹಿತ ದಂಪತಿಗಳು ಪರ ಹೆಂಡತಿ ಮತ್ತು ಪರ ಗಂಡನ ಮೇಲೆ ಆಕರ್ಷಿತರಾಗುತ್ತಾರೆ. ದಾರಿ ತಪ್ಪುವ ಹಂತಕ್ಕೆ ತಲುಪುತ್ತಾರೆ. ಮುಂದೇನಾಗುತ್ತೆ ಎಂಬುದನ್ನು ಕಥೆಯಲ್ಲಿ ಓದಿ…
ಈ ಪುಸ್ತಕವನ್ನು ಓದಲು ಕ್ಲಿಕ್ ಮಾಡಿ. Click
9) ಹುಚ್ಚಿ : ಪ್ರೀತಿಯ ದ್ವೇಷದ ಸುಳಿಯಲ್ಲಿ – Kannada Love Story
ಸತ್ಯ ಮತ್ತು ಸುಜಾತಾ ಇಬ್ಬರೂ ಒಳ್ಳೇ ಸ್ನೇಹಿತರಾಗಿರುತ್ತಾರೆ. ಆದರೆ ಸತ್ಯನಿಗೆ ಒಂದು ಬಲವಾದ ಕಾರಣದಿಂದಾಗಿ ಅವಳಿಂದ ದೂರಾಗಬೇಕಾದ ಅನಿವಾರ್ಯತೆ ಎದುರಾಗುತ್ತದೆ. ಆಗಾತ ಅವಳ ಜೊತೆ ಸ್ವಲ್ಪ ಕೆಟ್ಟದಾಗಿ ನಡೆದುಕೊಂಡು ಅವಳಿಂದ ದೂರಾಗುತ್ತಾನೆ. ಮುಂದೆ ಸತ್ಯ ಒಬ್ಬ ಫೇಮಸ ರೈಟರ ಆಗುತ್ತಾನೆ. ಸಾವಿರಾರು ಕೋಟಿಯ ಕಂಪನಿಯ ಮಾಲೀಕನಾಗುತ್ತಾನೆ. ಭಾರತದಲ್ಲಿ ರಾಜಕಾರಣಿಗಳ ಹಗರಣಗಳ ಬಗ್ಗೆ ಧೈರ್ಯವಾಗಿ ಬರೆಯುವ ಧೈರ್ಯ ಅವನಿಗಷ್ಟೇ ಇದೆ ಎಂಬುದು ಓದುಗರ ಮಾತಾಗುತ್ತದೆ. ಇದರ ಜೊತೆಗೆ ಆತ ಕ್ರೈಮಸ್ಟೋರಿಗಳನ್ನು, ರೊಮ್ಯಾಂಟಿಕ್ ಕಥೆಗಳನ್ನು ಬರೆಯುತ್ತಾನೆ. ಜನ ಅವುಗಳನ್ನು ಮೆಚ್ಚಿಕೊಳ್ಳುತ್ತಾರೆ. ಆದರೆ ಸುಜಾತಾ ಮಾತ್ರ ಅವನನ್ನು ದ್ವೇಷಿಸುತ್ತಲೇ ಇರುತ್ತಾಳೆ. ಒಂದಿನ ಅವಳಿಗೆ ಸತ್ಯ ಯಾಕೆ ತನ್ನಿಂದ ದೂರಾದ ಎಂಬುದಕ್ಕೆ ಒಂದು ಬಲವಾದ ಸರಿಯಾದ ಕಾರಣ ಗೊತ್ತಾಗುತ್ತದೆ. ಆಗ ಅವಳಿಗೆ ಸತ್ಯ ಒಳ್ಳೆಯವನಾ ಅಥವಾ ಕೆಟ್ಟವನಾ ಎಂಬ ಅನುಮಾನ ಶುರುವಾಗುತ್ತದೆ. ಅವಳು ಅವನನ್ನು ಪರೀಕ್ಷಿಸುವುದಕ್ಕಾಗಿ ಅವನನ್ನು ಹುಡುಕಿಕೊಂಡು ಅವನ ಆಫೀಸಿಗೆ ಹೋಗುತ್ತಾಳೆ, ಅವನೊಂದಿಗೆ ಮುಂಬೈಗೆ ಹೋಗುತ್ತಾಳೆ, ನಂತರ ರಾತ್ರಿ ಅವನ ಮನೆಗೆ ಹೋಗುತ್ತಾಳೆ, ಅವನ ಮುಂದೆ ಸೆರಗು ಜಾರಿಸಿ ಅವನನ್ನು ಪರೀಕ್ಷಿಸಲು ಹೋಗಿ ಹುಚ್ಚಿಯಂತಾಡುತ್ತಾಳೆ. ಅವಳ ಪರೀಕ್ಷೆಯಲ್ಲಿ ಸತ್ಯ ಗೆಲ್ಲುತ್ತಾನಾ? ಅಥವಾ ಇಲ್ವಾ? ಸುಜಾತಾ ಮುಂದೇನು ಮಾಡುತ್ತಾಳೆ? ಎಂಬುದನ್ನೆಲ್ಲ ಕಥೆಯಲ್ಲಿ ಓದಿ….
ಈ ಪುಸ್ತಕವನ್ನು ಓದಲು ಕ್ಲಿಕ್ ಮಾಡಿ. Click
10) ಪಂಚ ಪ್ರೇಯಸಿಯರು : ಒಂದು ಲೈಫಸ್ಟೋರಿ Love Life story of a Indian Boy in Kannada
ಸಿದ್ಧ ಓದು ಮುಗಿದ ನಂತರ ಸರ್ಕಾರಿ ನೌಕರಿಗೆ ತಯಾರಿ ಮಾಡಲು ವಿದ್ಯಾಕಾಶಿ ಧಾರವಾಡಕ್ಕೆ ಹೋದನು. ಆದರೆ ಅಲ್ಲಿ ಆತ ಓದುವುದನ್ನು ಬಿಟ್ಟು ಪ್ರೇಯಸಿಯರ ಸುಳಿಯಲ್ಲಿ ಸಿಲುಕಿ ಒದ್ದಾಡಿದನು. ಸಿದ್ಧ ಒಂದು ವರ್ಷದಲ್ಲಿ ಐವರು ಪ್ರೇಯಸಿಯರನ್ನು ಮಾಡಿಕೊಂಡು ಮಂಗನಾದನು. ಅವನ ಜೀವನದಲ್ಲಿ ಬರುವ ಐದು ವಿಭಿನ್ನ ಪ್ರಕಾರದ ಹುಡುಗಿಯರು ಸಿದ್ಧನಿಗೆ ಬದುಕಿನ ಐದು ಪಾಠಗಳನ್ನು ಕಲಿಸಿದರು. ಓದು ವಯಸ್ಸಿನಲ್ಲಿ ಪ್ರೀತಿ ಪ್ರೇಮ ಅಂತ ಅಲೆಯುವ ಹುಡುಗರು ಈ ಕಥೆಯನ್ನೊಮ್ಮೆ ಓದಿದರೆ ಹಾಳಾಗುವುದು ತಪ್ಪುತ್ತದೆ.
ಈ ಪುಸ್ತಕವನ್ನು ಓದಲು ಕ್ಲಿಕ್ ಮಾಡಿ. Click
11) ಅವನು ಮತ್ತು ಅಮಾಯಕಿ : True Sad Story of Lady Lecturer in Kannada
“ಅವನು ಮತ್ತು ಅಮಾಯಕಿ” ಇದೊಂದು ಕಾಲೇಜ ಲೇಡಿ ಲೆಕ್ಚರರ್ ಜೀವನದಲ್ಲಿ ನಡೆದ ಒಂದು ಕಾಲ್ಪನಿಕ ಕೆಟ್ಟ ಘಟನೆಯಾಗಿದ್ದು, ಕಾಮಕ್ಕೆ ಕಣ್ಣಿಲ್ಲ ಎಂಬುದನ್ನು ಇದು ಸಾಬೀತು ಪಡಿಸುತ್ತದೆ. ಕಲಿಯುವಾಗ ತನ್ನ ಕ್ಲಾಸ್ಮೆಟಗೆ ಮೈಯೊಪ್ಪಿಸಿ ಮೋಸ ಹೋದ ಹುಡುಗಿ ಮುಂದೆ ಲೆಕ್ಚರರ್ ಆಗಿ ಕಲಿಸುವಾಗ ತನ್ನ ಸ್ಟೂಡೆಂಟಗೆ ಮೈಯೊಪ್ಪಿಸಿ ಹೇಗೆ ಮತ್ತೆ ಮೋಸ ಹೋಗುತ್ತಾಳೆ ಎಂಬುದನ್ನು ಈ ಕಥೆ ವಿವರಿಸುತ್ತದೆ. ಈ ಕಥೆಯನ್ನು ನಿಜವೆಂದು ನಂಬಲು ಅಸಾಧ್ಯ. ಆದರೆ ಇಂಥ ಅದೆಷ್ಟೋ ಕೆಟ್ಟ ಘಟನೆಗಳು ನಡೆದಿವೆ. ಆದರೆ ಬೆಳಕಿಗೆ ಬಂದಿಲ್ಲ ಅಷ್ಟೇ. ಕೆಟ್ಟವರು ಅಮಾಯಕಿಯರನ್ನು ಹೇಗೆ ದುರ್ಬಳಕೆ ಮಾಡಿಕೊಳ್ಳುತ್ತಾರೆ ಎಂದು ಈ ಕಥೆ ವಿವರಿಸುತ್ತದೆ. ಈ ಕಥೆ ಕೆಲವು ನಿರ್ದಿಷ್ಟ ಓದುಗರಿಗೆ ಬರೆಯಲಾಗಿರುವುದರಿಂದ ಇದನ್ನು ಸಭ್ಯ ಓದುಗರು ಓದದೇ ಇರುವುದು ಉತ್ತಮ. ರೋಮ್ಯಾಂಟಿಕ್ ಕ್ರೈಂ ಕಥೆಗಳನ್ನು ಓದುವವರು ಇದನ್ನು ಧಾರಾಳವಾಗಿ ಓದಬಹುದು.
ಈ ಪುಸ್ತಕವನ್ನು ಓದಲು ಕ್ಲಿಕ್ ಮಾಡಿ. Click
12) ಪ್ರೇಮ ಪರೀಕ್ಷೆ : Husband and Beautiful Wife story in Kannada
ಸುಮಾಳಿಗೆ ತನ್ನ ಸೌಂದರ್ಯದ ಮೇಲೆ ಗರ್ವವಿತ್ತು. ಜೊತೆಗೆ ಸಿನಿಮಾ ಶೈಲಿಯಲ್ಲಿ ಮದುವೆಯಾಗಬೇಕು, ನನ್ನ ಗಂಡ ಸಿನಿಮಾ ಹೀರೋ ಥರ ಇರಬೇಕು, ಸಿಕ್ಸ ಪ್ಯಾಕ್ ಬಾಡಿ ಇರಬೇಕು ಎಂಬೆಲ್ಲ ಕನಸುಗಳಿದ್ದವು. ಇವೆಲ್ಲ ಅರೇಂಜ ಮ್ಯಾರೇಜನಿಂದ ಸಾಧ್ಯವಾಗಲ್ಲವೆಂದು ಅವಳು ಪ್ರೇಮದ ಸಂತೆಯಲ್ಲಿ ತನ್ನ ಕನಸಿನ ಹುಡುಗನನ್ನು ಹುಡುಕಲು ಪ್ರಾರಂಭಿಸಿದಳು. ಆದರೆ ಪ್ರೇಮದ ಸಂತೆಯಲ್ಲಿ ಅವಳ ಮನ ನೋಡುವ ಹುಡುಗರಿಗಿಂತ ಸ್ತನ ನೋಡುವ ಹುಡುಗರೇ ಹೆಚ್ಚಾಗಿದ್ದರು. ಅದಕ್ಕಾಗಿ ಆಕೆ ಎಲ್ಲ ಬಿಟ್ಟು ಅರೇಂಜ ಮ್ಯಾರೇಜ್ ಮಾಡಿಕೊಂಡಳು. ಅದೃಷ್ಟವೆಂಬಂತೆ ಅವಳಿಗೆ ಅವಳು ಬಯಸಿದಂತೆ ಗಂಡ ಸಿಕ್ಕಿದ್ದನು. ಎಲ್ಲವು ಸರಿಯಾಗಿ ಮುಂದೆ ಸಾಗಿತ್ತು. ಅವಳಿಗೆ ತನ್ನ ಗಂಡ ನನ್ನನ್ನು ಪ್ರೀತಿಸುತ್ತಿಲ್ಲ, ಬರೀ ನನ್ನ ಸೌಂದರ್ಯವನ್ನು ಪ್ರೀತಿಸುತ್ತಿದ್ದಾನೆ ಎಂಬುದು ಖಾತ್ರಿಯಾಯಿತು. ಅದಕ್ಕಾಗಿ ಆಕೆ ಅವನನ್ನು ಪರೀಕ್ಷಿಸುವುದಕ್ಕಾಗಿ ಒಂದು ಪ್ರೇಮ ಪರೀಕ್ಷೆಯನ್ನಿಟ್ಟಳು. ಅವಳ ಗಂಡ ಒಂದು ಯಡವಟ್ಟು ಮಾಡಿಕೊಂಡು ಸತ್ತನು. ಸುಮಾ ಗೆದ್ದು ಸೋತಳು. ಪೂರ್ತಿ ಕಥೆ ಓದಿದರೆ ಮಾತ್ರ ನಿಮಗೆ ವಿಷಯ ಏನಂತಾ ಅರ್ಥವಾಗುತ್ತದೆ….
ಈ ಪುಸ್ತಕವನ್ನು ಓದಲು ಕ್ಲಿಕ್ ಮಾಡಿ. Click
13) ನಿಶಬ್ದ ರಾತ್ರಿ : ಗಂಡಹೆಂಡತಿಯ ಕಥೆ – Romantic Love story of Husband and Wife in Kannada
“ನಿಶಬ್ದ ರಾತ್ರಿ” ಇದು ಹೊಸದಾಗಿ ಮದುವೆಯಾದ ಗಂಡ ಹೆಂಡತಿಯರ ರೋಮ್ಯಾಂಟಿಕ್ ಪ್ರೇಮಕಥೆಯಾಗಿದೆ. ಅವರ ಏಕಾಂತ, ಸರಸ, ಸಲ್ಲಾಪ, ಹುಸಿ ಮುನಿಸು, ಬಿಸಿ ಕನಸುಗಳು ಈ ಕಥೆಯಲ್ಲಿ ಸುಂದರವಾಗಿ ಮೂಡಿ ಬಂದಿವೆ. ಗಂಡನ ದುಶ್ಚಟಗಳು ಹೆಂಡತಿಯ ಮೂರನೇ ಕಣ್ಣಿಗೆ ಬಿದ್ದಾಗ ಏನಾಗುತ್ತದೆ ಎಂಬ ಜೀವನ ಪಾಠವೂ ಈ ರೋಮ್ಯಾಂಟಿಕ್ ಕಥೆಯಲ್ಲಿದೆ.
ಈ ಪುಸ್ತಕವನ್ನು ಓದಲು ಕ್ಲಿಕ್ ಮಾಡಿ. Click
14) ಹಸಿಬಿಸಿ ಕನಸುಗಳು : ಒಂದು ಲವ್ ಲೈಫ್ ಕಥೆ – Kannada Love Life Story
“ಹಸಿಬಿಸಿ” ಕನಸುಗಳು ಇದು ಯುವ ಜನಾಂಗವನ್ನುಸೆಳೆಯುವ ಒಂದು ಸುಂದರ ಲವ್ ಲೈಫ್ ಕಥೆಯಾಗಿದೆ. ಇದರಲ್ಲಿ ಯುವ ಮನಸ್ಸುಗಳ ಒದ್ದಾಟ, ಗುಪ್ತ ಬಯಕೆಗಳು ಗುಟ್ಟಾಗಿ ವ್ಯಕ್ತವಾಗಿವೆ. ಹೊಸದಾಗಿ ಮದುವೆಯಾಗುತ್ತಿರುವ ಯುವಕ ಯುವತಿಯರ ಆಸೆಗಳು, ಕನಸುಗಳು, ಜೊತೆಗೆ ಅವರಿಗೆ ಹಿರಿಯರಿಂದ ಸಿಗುವ ನೋವುಗಳು ಸಹ ಈ ಕಥೆಯಲ್ಲಿವೆ. ಈಗೀನ ಯುವಜೋಡಿಗಳಿಗೆ ಮದುವೆಗೂ ಮುಂಚೆ ಒಂದು ಪ್ರಿ ವೆಡ್ಡಿಂಗ್ ಫೋಟೋಶೂಟ್ ಮಾಡಿಸಿಕೊಳ್ಳಬೇಕು ಎಂಬ ಬಯಕೆಯಿದೆ, ಆದರೆ ದೊಡ್ಡವರಿಗೆ ಅದಕ್ಕೆ ಅಡ್ಡಗಾಲಾಕುವ ಬುದ್ಧಿಯಿದೆ. ಇಂಥದೇ ಇಕ್ಕಟ್ಟಿಗೆ ಸಿಲುಕಿ ಹೊರಬಂದ ಒಂದು ಜೋಡಿಯ ಸರಪ ಸಲ್ಲಾಪವೂ ಈ ಕಥೆಯಲ್ಲಿದೆ. ಓದಿದಾಗಲೇ ನಿಮಗೆ ಅರ್ಥವಾಗುವುದು, ಒಂದ್ಸಲ ಕಥೆಯನ್ನು ಓದಿ…
ಈ ಪುಸ್ತಕವನ್ನು ಓದಲು ಕ್ಲಿಕ್ ಮಾಡಿ. Click
15) ಗುಪ್ತ ಪ್ರೇಮಿ ; ಒಂದು ಅವ್ಯಕ್ತ ಪ್ರೇಮಕಥೆ – Kannada Moral Love Story
“ಗುಪ್ತ ಪ್ರೇಮಿ” ಇದೊಂದು ಅವ್ಯಕ್ತ ಪ್ರೇಮಕಥೆಯಾಗಿದೆ. ಸಂದೀಪ ತನ್ನ ಕಾಲೇಜು ಗೆಳತಿಯನ್ನು ಪ್ರೀತಿಸುತ್ತಿದ್ದನು. ಅವಳ ಜೊತೆ ಕಂಡಕಂಡ ಕಬ್ಬನ ಪಾರ್ಕಗಳನ್ನು ಸುತ್ತುತ್ತಿದ್ದನು, ಕದ್ದುಮುಚ್ಚಿ ಅವಳ ಕೆನ್ನೆ ಕಚ್ಚುತ್ತಿದ್ದನು. ಆದರೆ ಅವಳ ಮನೆಯವರಿಗೆ ಇದು ಗೊತ್ತಾಗಿ ಅವಳ ಮದುವೆ ಮಾಡಿಸಿ ಅವಳನ್ನು ಗಂಡನ ಮನೆಗೆ ಕಳುಹಿಸುತ್ತಾರೆ. ಆದರೆ ಸಂದೀಪ ಇಲ್ಲಿಗೆ ಸುಮ್ಮನಾಗದೆ ಅವಳ ಗಂಡನ ಊರಿಗೆ ಹೋಗುತ್ತಾನೆ, ಅವಳ ಮನೆ ಎದುರಿಗಿನ ಮನೆಯಲ್ಲಿ ಬಾಡಿಗೆಗಿದ್ದು ಅವಳೊಂದಿಗೆ ಅಕ್ರಮವಾಗಿ ಮುಂದುವರೆಯುತ್ತಾನೆ. ಮೊದಲು ಅವಳ ಕೆನ್ನೆ ಕಚ್ಚುತ್ತಿದ್ದವನು ಈಗವಳ ಸೀರೆ ಸೆಳೆಯುವಷ್ಟು ಸಬಲನಾಗುತ್ತಾನೆ. ಹೀಗೆಯೇ ಅವರ ಅಕ್ರಮ ಸಂಬಂಧ ಗುಪ್ತ ಪ್ರೇಮದ ಹೆಸರಲ್ಲಿ ಮುಂದುವರೆಯುತ್ತದೆ. ಮುಂದೆನಾಗುತ್ತೆ ಎಂಬುದನ್ನು ಕಥೆಯಲ್ಲಿ ನೋಡಿ…
ಈ ಪುಸ್ತಕವನ್ನು ಓದಲು ಕ್ಲಿಕ್ ಮಾಡಿ. Click
16) ಗುಪ್ತ ಪ್ರೇಯಸಿ : ಕನ್ನಡ ಗುಪ್ತ ಪ್ರೇಮಕಥೆ Kannada Sad Love Story
ಅವರಿಬ್ಬರದು ಇತಿಹಾಸದ ಪುಟ ಸೇರುವ ಸ್ನೇಹವಾಗಿತ್ತು. ಅವರಿಬ್ಬರು ಪ್ರೇಮಿಗಳಿಗಿಂತ ಹೆಚ್ಚು ಹತ್ತಿರವಾಗಿದ್ದರು. ಅವರಿಬ್ಬರ ಮಧ್ಯೆ ಯಾವುದೇ ಮುಚ್ಚುಮರೆಯಿರಲಿಲ್ಲ. ಅವನು ಅವಳನ್ನು ಬೆಸ್ಟ ಫ್ರೆಂಡ್ ಎಂದುಕೊಂಡಿದ್ದನು. ಅವನ ಮನಸ್ಸಲ್ಲಿ ಪ್ರೇಮ ಗೀಮವೇನು ಇರಲಿಲ್ಲ. ಆದರೆ ಅವಳ ಮನಸ್ಸಲ್ಲಿ ಅವನ ಮೇಲೆ ಪ್ರೇಮವಿರುತ್ತದೆ. ಆದರೆ ಆಕೆ ಅದನ್ನು ಅವನಿಗೆ ಹೇಳುವುದಿಲ್ಲ. ತರಾತುರಿಯಲ್ಲಿ ಅವಳ ಮದುವೆ ನಡೆದು ಹೋಗುತ್ತದೆ. ಮದುವೆಯಾದ ನಂತರ ಅವಳು ಅವನಿಗೆ ಮೆಸೇಜ್ ಮಾಡಿ “ನಾನು ನಿನ್ನನ್ನು ಪ್ರೀತಿಸುತ್ತಿದ್ದೆ…” ಎಂದೆಲ್ಲ ಹೇಳಿದಳು. ಇದಾದ ನಂತರ ಅವನ ಮನಸ್ಸಲ್ಲಿ ಇಲ್ಲದ ಪ್ರೀತಿ ಕಾಯಿಲೆ ಹುಟ್ಟಿಕೊಳ್ಳುತ್ತದೆ. ಮುಂದೆ ಅವರಿಬ್ಬರ ಜೀವನದಲ್ಲಿ ಏನಾಗುತ್ತದೆ ಎಂಬುದೇ ಈ “ಗುಪ್ತ ಪ್ರೇಯಸಿ” ಎಂಬ ಸಣ್ಣ ಪ್ರೇಮಕಥೆಯಾಗಿದೆ.
ಈ ಪುಸ್ತಕವನ್ನು ಓದಲು ಕ್ಲಿಕ್ ಮಾಡಿ. Click
17) ಹುಚ್ಚು ಹುಡುಗಿ : ಒಂದು ಲೈಫಕಥೆ – Kannada Life Love Story – Love Stories in Kannada
ಸುಮಾಳಿಗೆ ಯಾರನ್ನೋ ಮದುವೆಯಾಗಿ ಅಡುಗೆ ಮನೆಯಲ್ಲಿ ಕೊಳೆಯುವ ಬಯಕೆಯಿರಲಿಲ್ಲ. ಅವಳು ಪ್ರವಾಸ ಪ್ರೇಮಿಯಾಗಿದ್ದಳು. ಅವಳಿಗೆ ದಿನಾಲು ಒಂದೊಂದು ಹೊಸಹೊಸ ಸುಂದರ ತಾಣಗಳಿಗೆ ಹೋಗಬೇಕು ಎಂಬಾಸೆಯಿತ್ತು. ಈ ಜಗತ್ತನ್ನು ಸುತ್ತಬೇಕು ಎಂಬ ಕನಸಿತ್ತು. ಅದಕ್ಕಾಗಿ ಆಕೆ ಚೆನ್ನಾಗಿ ದುಡ್ಡಿರೋ ಒಬ್ಬ ದೊಡ್ಡ ಬಿಜನೆಸಮ್ಯಾನನನ್ನು ಮದುವೆಯಾಗಿ ತನ್ನ ಕನಸನ್ನು ನನಸಾಗಿಸಿಕೊಳ್ಳುವ ತಯಾರಿಯಲ್ಲಿದ್ದಳು. ಆದರೆ ಅವಳ ಮನೆಯವರು ಬಲವಂತವಾಗಿ ಅವಳನ್ನು ಒಬ್ಬ ಆರ್ಡಿನರಿ ಸರ್ಕಾರಿ ನೌಕರನಿಗೆ ಕೊಟ್ಟು ಮದುವೆ ಮಾಡಿದರು. ಆದರೆ ಅವಳು ಮದುವೆಯಾದ ನಂತರ ತನ್ನ ವಿಶ್ವ ಪರ್ಯಟನೆಯ ಕನಸನ್ನು ನನಸಾಗಿಸಿಕೊಳ್ಳುವುದಕ್ಕೆ ಗಂಡನ ಮನೆಯಿಂದ ಓಡಿ ಹೋಗುತ್ತಾಳೆ. ಅವಳ ಜೀವನದಲ್ಲಿ ಮುಂದೆನಾಗುತ್ತೇ ಎಂಬುದೇ ಈ “ಹುಚ್ಚು ಹುಡುಗಿ” ಕಥೆಯಾಗಿದೆ.
ಈ ಪುಸ್ತಕವನ್ನು ಓದಲು ಕ್ಲಿಕ್ ಮಾಡಿ. Click
18) ಗೋವಾ ಹುಡುಗಿಯ ಪ್ರೇಮಕಥೆ – Friendship love story in Kannada – Kannada Love Stories
ಇಂಜಿನಿಯರಗಳಷ್ಟು ಭಯಂಕರ ಸಿಂಗಲ್ ಪ್ರಾಣಿಗಳು ಬೇರೆ ಯಾರು ಇರುವುದಿಲ್ಲ ಎನ್ನುತ್ತಾ ನಿಖಿಲ್ ಪುಣೆಯ ಕಂಪನಿಯೊಂದರಲ್ಲಿ ಕೆಲಸ ಮಾಡುತ್ತಿರುತ್ತಾನೆ. ಒಂದಿನ ಆತ ಬಸ್ಸಲ್ಲಿ ಪ್ರಯಾಣಿಸುವಾಗ ಡ್ರೈವರ್ ಒಮ್ಮೆಲೇ ಬ್ರೇಕ್ ಹಾಕಿದಾಗ ಆಯತಪ್ಪಿ ಎದುರಿಗಿನ ಹುಡುಗಿಯ ಮೇಲೆ ಬೀಳುತ್ತಾನೆ. ಆಕೆ ಅವನನ್ನು ತರಾಟೆಗೆ ತೆಗೆದುಕೊಳ್ಳುತ್ತಾಳೆ. ಅವಳ ಹೆಸರು ಅನುಪಮಾ ಅಂತಾ. ಅವಳು ಗೋವಾದಿಂದ ಕೆಲಸಕ್ಕಾಗಿ ಪುಣೆಗೆ ಬಂದಿರುತ್ತಾಳೆ. ಅವಳು ಸಹ ಅವನ ಕಂಪನಿಯಲ್ಲೇ ಕೆಲಸ ಮಾಡುತ್ತಾಳೆ ಎಂಬುದು ಅವನಿಗೆ ಮರುದಿನ ಗೊತ್ತಾಗುತ್ತದೆ. ಆತ ಮಾಡಿದ ಒಂದು ಸಣ್ಣ ಕೆಲಸಕ್ಕೆ ಅವಳು ಅವನನ್ನು ಮೆಚ್ಚಿಕೊಂಡು ಅವನೊಂದಿಗೆ ಫ್ರೆಂಡಶಿಪ್ ಮಾಡುತ್ತಾಳೆ. ಅವಳ ಫ್ರೆಂಡಶಿಪ್ ಪರಿಶುದ್ಧವಾಗಿರುತ್ತದೆ. ಆದರೆ ನಿಖಿಲನ ಮನಸ್ಸು ಪ್ರೀತಿಗಾಗಿ ಹಾತೊರೆಯುತ್ತಿರುತ್ತದೆ. ಅವಳು ಅವನಿಗೆ ಒಳ್ಳೇ ಫ್ರೆಂಡಾಗಿರುತ್ತಾಳೆ, ಆದರೆ ಆತ ಅವಳ ಫ್ರೆಂಡಶಿಪ್ಪನ್ನು ಪ್ರೀತಿಯಾಗಿ ಪರಿವರ್ತಿಸಲು ಪ್ರಯತ್ನಿಸುತ್ತಾನೆ. ಒಮ್ಮೆ ಆಕೆ ಅವನನ್ನು ಗೋವಾದಲ್ಲಿರುವ ತನ್ನೂರಿಗೆ ಕರೆದುಕೊಂಡು ಹೋಗುತ್ತಾಳೆ. ಅಲ್ಲಿ ಆತ ಗೋವಾ ಹುಡುಗಿಯರನ್ನು ನೋಡಿ ಬಾಯಿ ಬಿಡುತ್ತಾನೆ. ಅನುಪಮಾಳನ್ನು ಸೀರೆಯಲ್ಲಿ ನೋಡಬೇಕು ಎಂದಾಸೆ ಪಡುತ್ತಾನೆ. ಅವಳಿಗೆ ತನ್ನ ಗುಪ್ತ ಪ್ರೀತಿಯನ್ನು ಹೇಳಬೇಕು ಎಂದು ಯೋಚಿಸುತ್ತಾನೆ. ಅವರಿಬ್ಬರೂ ಪ್ರೇಮಿಗಳಾಗುತ್ತಾರಾ ಅಥವಾ ಫ್ರೆಂಡ್ಸಾಗಿಯೇ ಉಳಿಯುತ್ತಾರಾ ಎಂಬುದು ಈ ಕಥೆಯ ವಿಷಯವಾಗಿದೆ…
ಈ ಪುಸ್ತಕವನ್ನು ಓದಲು ಕ್ಲಿಕ್ ಮಾಡಿ. Click
19) ಮಾಜಿ ಪ್ರೇಯಸಿಗೊಂದು ಪತ್ರ – A letter to X lover in Kannada
“ಮಾಜಿ ಪ್ರೇಯಸಿಗೊಂದು ಪತ್ರ” ಇದೊಂದು ಅತ್ಯುತ್ತಮ ಲವ್ ಬ್ರೇಕಪ್ ಮೋಟಿವೇಷನ್ ಬುಕ್ ಆಗಿದೆ. ತನ್ನನ್ನು ಜೀವಕ್ಕಿಂತ ಹೆಚ್ಚಾಗಿ ಪ್ರೀತಿಸುತ್ತಿದ್ದ ಒಬ್ಬ ಸುಂದರ ಹಾಗೂ ಯಶಸ್ವಿ ಹುಡುಗನಿಂದ ದೂರಾದ ಒಬ್ಬಳು ಅನಲಕ್ಕಿ ಹುಡುಗಿಯನ್ನು ಈ ಪುಸ್ತಕವು ಮೋಟಿವೇಟ್ ಮಾಡುತ್ತದೆ. ಟೀನೇಜಲ್ಲಿ ತಮ್ಮ ಹೃದಯಕ್ಕೆ ಗಾಯ ಮಾಡಿಕೊಂಡ ಎಲ್ಲ ಹರೆಯದ ಹುಡುಗಿಯರಿಗೆ ಜೀವನದಲ್ಲಿ ಸಕ್ಸೆಸಫುಲ್ಲಾಗಲು ಈ ಪುಸ್ತಕ ಪ್ರೇರೇಪಿಸುತ್ತದೆ. ಲವ್ವಲ್ಲಿ ಫೇಲಾದಾಗ ಲೈಫಲ್ಲಿ ಪಾಸಾಗಲು ಈ ಪುಸ್ತಕ ಉಪದೇಶಿಸುತ್ತದೆ. ಮನಸ್ಸು ಮುರಿದ ಹುಡುಗ ಅಥವಾ ಹುಡುಗಿ ಒಮ್ಮೆ ಓದಲೇಬೇಕಾದ ಪುಸ್ತಕವಿದು…
ಈ ಪುಸ್ತಕವನ್ನು ಓದಲು ಕ್ಲಿಕ್ ಮಾಡಿ. Click
20) ಹುಡುಗಿಯೊಬ್ಬಳ ವಿಚಿತ್ರ ಆಸೆ : ಒಂದು ಮೋಟಿವೇಶನಲ್ ಕಥೆ ಕಥೆ – One Motivational Story for Women in Kannada
ಆಶಾಳ ಆಸೆಗಳು ಆರ್ಡಿನರಿಯಾಗಿರಲಿಲ್ಲ. ಅವಳು ಎಲ್ಲ ಹುಡುಗಿಯರಂತೆ ಬೇಗನೆ ಮದುವೆಯಾಗಿ ಗಂಡನ ಗುಲಾಮಗಿರಿ ಮಾಡುತ್ತಾ ಬಿದ್ದಿರುವ ಸ್ವಭಾವದವಳಲ್ಲ. ಅವಳಿಗೆ ಅವಳದ್ದೇ ಆದ ಕನಸುಗಳಿದ್ದವು, ಗುರಿಗಳಿದ್ದವು. ಭಾರತದ ಅತಿ ದೊಡ್ಡ ಬಿಜನೆಸ್ ವುಮನ್ ಆಗಿ ಸ್ವಂತ ಕಾಲ ಮೇಲೆ ನಿಲ್ಲಬೇಕು ಎಂಬುದು ಅವಳ ಕನಸಾಗಿತ್ತು. ಆದರೆ ಅವಳ ಪ್ರಿಯಕರನಿಗೆ ಅವನು ಹೇಳಿದಂತೆ ಕೇಳಿಕೊಂಡು ಮನೇಲಿ ಬಿದ್ದಿರುವ ಮುಗ್ದ ಮಡದಿ ಬೇಕಿದ್ದಳು, ಅವನಿಗೆ ಬೇಕಾದಾಗ ಬಾಯ್ಮುಚ್ಚಿ ಸೆರಗು ಹಾಸುವ ಸುಂದರಿ ಬೇಕಿದ್ದಳು. ಆದರೆ ಆಶಾ ಅವನ ಆಸೆಗಳಿಗೆ ತದ್ವಿರುದ್ದವಾಗಿದ್ದಳು. ಅದಕ್ಕಾಗಿ ಅವರ ಪ್ರೇಮ ಮುರಿದು ಕಸದ ತೊಟ್ಟಿ ಸೇರುತ್ತದೆ. ಆದರೆ ಆಶಾ ಧೃತಿಗೆಡದೆ ಬಿಜನೆಸ್ಸ ಸ್ಟಾರ್ಟ್ ಮಾಡಿ ಅವಳ ಕನಸನ್ನು ನನಸಾಗಿಸಿಕೊಳ್ಳುತ್ತಾಳೆ. ಜೀವನದಲ್ಲಿ ಏನಾದರೂ ಒಂದನ್ನು ಸಾಧಿಸಿ ಸ್ವತಂತ್ರಳಾಗುತ್ತೇನೆ ಎಂದು ಕನಸು ಕಾಣುವ ಹುಡುಗಿಯರಿಗೆ ಈ ಕಥೆ ಮೋಟಿವೇಶನ ಆಗಿದೆ…
ಈ ಪುಸ್ತಕವನ್ನು ಓದಲು ಕ್ಲಿಕ್ ಮಾಡಿ. Click
21) ರೂಪಾಳ ಕೋಪ ; ಒಂದು ರೊಮ್ಯಾಂಟಿಕ್ ಕಥೆ – Kannada Romantic Love Stories
“ರೂಪಾಳ ಕೋಪ” ಇದೊಂದು ಗಂಡಹೆಂಡತಿಯರ ರೋಮ್ಯಾಂಟಿಕ್ ಪ್ರೇಮಕಥೆಯಾಗಿದೆ. ಒಂಚೂರು ರಸಿಕತೆಯಿಲ್ಲದ ಸದಾ ಕೋಪಿಸಿಕೊಂಡು ಸಿಡಿಯುವ ರೂಪಾಳನ್ನು ಮದುವೆಯಾದ ತಪ್ಪಿಗೆ ಪ್ರಶಾಂತ ರಸಿಕತೆಯಿಲ್ಲದ ನರಕದ ಜೀವನಕ್ಕೆ ಸಿಲುಕುತ್ತಾನೆ. ಆದರೆ ಆತ ಅವಳನ್ನು ದ್ವೇಷಿಸದೆ ಅವಳನ್ನು ತನ್ನ ಕವನಗಳಲ್ಲಿ ಪ್ರೀತಿಸುತ್ತಾನೆ. ಅವನ ಕವನಗಳಿಗೆ ರೂಪಾಳ ಕೋಪ ಕರಗಿ ಅವರ ಸಂಸಾರದಲ್ಲಿ ರಸಿಕತೆ ಬರುತ್ತದೆ. ಹೇಗೆ ಅನ್ನೋದನ್ನ ಕಥೆಯಲ್ಲಿ ನೋಡಿ…
ಈ ಪುಸ್ತಕವನ್ನು ಓದಲು ಕ್ಲಿಕ್ ಮಾಡಿ. Click
22) ಅಪ್ಸರಾ – ಮೊದಲ ಮುತ್ತಿನ ಕಥೆ – Kannada Romantic Love Story
“ಅಪ್ಸರಾ – ಮೊದಲ ಮುತ್ತಿನ ಕಥೆ” ಇದು ಒಬ್ಬ ವೆಡ್ಡಿಂಗ್ ಫಿಲಂ ಮೇಕರನ ಮೊದಲ ಮುತ್ತಿನ ಕಥೆಯಾಗಿದೆ. ಇದೊಂದು ರೋಮ್ಯಾಂಟಿಕ್ ಕಥೆಯಾಗಿದೆ. ಈ ಕಥೆಯ ನಾಯಕನಿಗೆ ಒಂದು ಮದುವೆಯಲ್ಲಿ ವೆಡ್ಡಿಂಗ್ ಇವೆಂಟ್ ಮ್ಯಾನೇಜರ್ ಆಗಿದ್ದ ಅಪ್ಸರಾ ಸಿಗುತ್ತಾಳೆ. ಅವರಿಬ್ಬರಿಗೂ ಪರಿಚಯ ಬೆಳೆಯುತ್ತೆ. ನಂತರ ಅವರು ಕೆಲಸದ ನೆಪದಲ್ಲಿ ಬಹಳಷ್ಟು ಸಮೀಪಕ್ಕೆ ಬರುತ್ತಾರೆ. ಅವರಿಬ್ಬರ ಪ್ರೀತಿ ಶುರುವಾಗುತ್ತೆ. ಆದರೆ ಅಚಾನಕ್ಕಾಗಿ ನಡೆದ ಒಂದು ಘಟನೆ ಅಪ್ಸರಾಳ ಮನಸ್ಸನ್ನು ಮುರಿದು ಬಿಡುತ್ತದೆ. ಕಥಾನಾಯಕನ ಮೊದಲ ಮುತ್ತಿನಿಂದ ಅವಳ ಮನಸ್ಸು ಮುರಿಯುತ್ತದೆ, ಅವಳು ಅವನಿಂದ ದೂರಾಗುತ್ತಾಳೆ. ಆ ಘಟನೆ ಯಾವುದು? ಏನ್ ಕಥೆ ಎಂಬುದನ್ನು ಈ ಪುಸ್ತಕದಲ್ಲಿ ಓದಿ.
ಈ ಪುಸ್ತಕವನ್ನು ಓದಲು ಕ್ಲಿಕ್ ಮಾಡಿ. Click
23) ಕೊನೆಯ ಪ್ರೇಯಸಿ – Last Lover – One Sad Love Story in Kannada
“ಕೊನೆಯ ಪ್ರೇಯಸಿ” ಇದೊಂದು ಸ್ಯಾಡ್ ಲವ್ ಸ್ಟೋರಿಯಾಗಿದೆ. ನಿಕ್ಕಿ ಜನಿಸಿದ ಮರುಕ್ಷಣವೇ ಅವಳತ್ತೆ, ನಿಕ್ಕಿ ನನ್ನ ಸೊಸೆಯೆಂದು ಘೋಷಿಸಿರುತ್ತಾರೆ. ಮುಂದೆ ದೊಡ್ಡವಳಾಗಿ, ಕಾಲೇಜ ಓದೆಲ್ಲಾ ಮುಗಿದ ಮೇಲೆ ನಿಕ್ಕಿ ಅವಳತ್ತೆ ಮನೆಗೆ ಬರುತ್ತಾಳೆ. ಏಕೆಂದರೆ ಅವಳು ಅವಳತ್ತೆ ಮಗ ರಾಜನನ್ನು ಅವನು ನನ್ನ ಜನ್ಮ ಸಿದ್ಧ ಹಕ್ಕು ಎಂದು ಪ್ರೀತಿಸುತ್ತಿರುತ್ತಾಳೆ. ಆದರೆ ಆತ ಅಮೃತಾ ಎಂಬುವವಳನ್ನು ಪ್ರೀತಿಸಿ ಮನಸ್ಸು ಮುರಿದುಕೊಂಡು ಕೊರಗುತ್ತಿರುತ್ತಾನೆ. ಮತ್ತೆ ಅಮೃತಾಳೊಂದಿಗೆ ಸೇರಲು ರಾಜ ಪ್ರಯತ್ನಿಸುತ್ತಿರುತ್ತಾನೆ. ಅಂಥ ಸಮಯದಲ್ಲಿ ನಿಕ್ಕಿ ರಾಜನನ್ನು ಹುಡುಕಿಕೊಂಡು ಬಂದಿರುತ್ತಾಳೆ. ಅವಳ ಪ್ರೀತಿಯನ್ನು ಹೇಳುತ್ತಾಳೆ, ನಮ್ಮ ಮದುವೆ ಯಾವಾಗ ಎಂದು ಕೇಳುತ್ತಾಳೆ. ಆದರೆ ರಾಜ ಅವಳನ್ನು ಅವೈಡ್ ಮಾಡುತ್ತಾನೆ. ತಾನು ಪ್ರೀತಿಸುವ ಅಮೃತಾಳಿಗಾಗಿ ರಾಜ ತನ್ನನ್ನು ಪ್ರೀತಿಸುವ ನಿಕ್ಕಿಯನ್ನು ದೂರ ಮಾಡಿಕೊಳ್ಳುತ್ತಾನೆ. ರಾಜನಿಗೆ ಅಮೃತಾ ಸಿಗುತ್ತಾಳಾ? ಅಥವಾ ನಿಕ್ಕಿಗೆ ರಾಜ ಸಿಗುತ್ತಾನಾ? ಎಂಬುದೇ ಈ ಕಥೆಯ ವಿಷಯವಾಗಿದೆ…
ಈ ಪುಸ್ತಕವನ್ನು ಓದಲು ಕ್ಲಿಕ್ ಮಾಡಿ. Click
24) ದುರಾಸೆಯ ಹೆಂಡತಿ : ಒಂದು ನೀತಿಕಥೆ – Kannada Moral Story
ಇನಕಮ್ ಟ್ಯಾಕ್ಸ್ ಡಿಪಾರ್ಟಮೆಂಟಲ್ಲಿ ಕೆಲಸ ಸಿಕ್ಕ ನಂತರ ಪ್ರವೀಣ ಯಾವುದೇ ದುರಾಸೆಗಳಿಲ್ಲದೆ ಸುಮಾ ಎಂಬ ಸುಂದರಿಯನ್ನು ಮದುವೆಯಾದನು. ಆದರೆ ಆಕೆ ದುರಾಸೆಗಳ ರಾಣಿಯಾಗಿದ್ದಳು. ಅವಳಿಗೆ ದೊಡ್ಡ ಮನೆಯಲ್ಲಿ ಐಷಾರಾಮಿ ಜೀವನ ನಡೆಸಬೇಕು, ಎಸಿ ಕಾರಲ್ಲಿ ಸುತ್ತಾಡಬೇಕು, ಮೈತುಂಬ ಬಂಗಾರ, ಬ್ರಾಂಡೆಂಡ್ ಬಟ್ಟೆಗಳನ್ನು ಹಾಕಿಕೊಂಡು ಬೇರೆಯವರ ಹೊಟ್ಟೆಯೂರಿಸಬೇಕು ಎಂಬೆಲ್ಲ ದುರಾಸೆಗಳಿದ್ದವು. ಅವಳ ದುರಾಸೆಗಳನ್ನು ಈಡೇರಿಸುವುದಕ್ಕಾಗಿ ಪ್ರವೀಣ ಭ್ರಷ್ಟನಾಗುತ್ತಾನೆ. ಮಡದಿಯ ಮಂಚಸುಖಕ್ಕಾಗಿ ಲಂಚ ಮುಟ್ಟುತ್ತಾನೆ. ಆದರೆ ಅವನು ಮಾಡಿದ ಕೆಟ್ಟ ಕರ್ಮಕ್ಕೆ ಅವನಿಗೆ ಕೊನೆಗೆ ಕೆಟ್ಟ ಫಲ ಸಿಗುತ್ತದೆ. ತಮ್ಮ ದುರಾಸೆಗಳನ್ನು ಈಡೇರಿಸಿಕೊಳ್ಳುವುದಕ್ಕಾಗಿ ಅಡ್ಡ ದಾರಿ ಹಿಡಿಯುವವರಿಗೆ ಈ ಕಥೆ ಜೀವನ ಪಾಠವಾಗಿದೆ…
ಈ ಪುಸ್ತಕವನ್ನು ಓದಲು ಕ್ಲಿಕ್ ಮಾಡಿ. Click
25) ಆತ್ಮವಂಚಕಿ : ಒಂದು ಗುಪ್ತ ಪ್ರೇಮಕಥೆ – Kannada Secret Love Story
ಅಕ್ಷತಾ ತನ್ನ ಕ್ಲಾಸ್ಮೇಟ ಅಮೀತನನ್ನು ಮನಸಾರೆ ಪ್ರೀತಿಸುತ್ತಿದ್ದಳು, ಅವನನ್ನು ನೋಡಿ ಸ್ಮೈಲ್ ಮಾಡುತ್ತಿದ್ದಳು. ಆದರೆ ತನ್ನ ಮನಸ್ಸಲ್ಲಿರುವ ಮಾತನ್ನು ಅವನಿಗೆ ಹೇಳಲು ಹೆದರುತ್ತಿದ್ದಳು. ಅವಳಿಗೆ ಹೇಳುವ ಧೈರ್ಯ ಬಂದಾಗ ಅವಳ ಗೆಳೆಯ ಅವಿನಾಶ ಮಾಡುವ ಕೀತಾಪತಿಯಿಂದ ಅಮೀತ ಬೇಡದ ತೊಂದರೆಯಲ್ಲಿ ಸಿಲುಕುತ್ತಾನೆ. ಇಷ್ಟಕ್ಕೆಲ್ಲಾ ಅಕ್ಷತಾಳ ಮೌನವೇ ಕಾರಣವಾಗಿರುತ್ತದೆ. ಅವಳ ಮಹಾ ಮೌನದಿಂದಾಗಿ ಆಕೆ ತನ್ನ ಪ್ರಿಯಕರ ಅಮೀತನನ್ನು ಕಳೆದುಕೊಂಡು ಕೊರಗುತ್ತಾಳೆ. ಇದೊಂದು ಗುಪ್ತಪ್ರೇಮವಾಗಿದ್ದು, ತಮ್ಮ ಪ್ರೀತಿಯನ್ನು ಹೇಳದೇ ತಡಮಾಡುವವರು ಒಮ್ಮೆ ಇದನ್ನು ಓದಲೇಬೇಕು.
ಈ ಪುಸ್ತಕವನ್ನು ಓದಲು ಕ್ಲಿಕ್ ಮಾಡಿ. Click
26) ಕಣ್ತೆರೆಸಿದ ಹುಡುಗಿ : ಒಂದು ನೀತಿ ಕಥೆ – Kannada Moral Life Changing Story
ಹ್ರದಯ ಸೆಕೆಂಡ ಪಿಯುಸಿ ಮುಗಿದ ನಂತರ ತನ್ನ ಊರಲ್ಲಿ ಒಳ್ಳೇ ಡಿಗ್ರಿ ಕಾಲೇಜಿದ್ದರೂ ಹಠ ಮಾಡಿ ಒಂದು ಪಟ್ಟಣದ ಕಾಲೇಜು ಸೇರಿದನು. ಇದರ ಹಿಂದೆ ಕಲಿಯುವ ಉದ್ದೇಶವಿರಲಿಲ್ಲ. ಇದರ ಹಿಂದೆ ಹಳ್ಳಿಯಲ್ಲಿ ಸಿಗದ ಹುಡುಗಿಯರನ್ನು ಪಟ್ಟಣದ ಕಾಲೇಜಿನಲ್ಲಿ ಪಟಾಯಿಸುವುದಾಗಿತ್ತು. ಸಿನಿಮಾಗಳಲ್ಲಿ ತೋರಿಸಿದಂತೆ ಸೀಟಿ ಕಾಲೇಜಿನಲ್ಲಿ ಹುಡುಗಿಯರು ಮಾಡರ್ನಾಗಿ ಬರುತ್ತಾರೆ, ಸುಲಭವಾಗಿ ಸರಸಕ್ಕೆಲ್ಲ ಸಿಗುತ್ತಾರೆ ಎಂದುಕೊಂಡಿದ್ದನು. ಆದರೆ ಅವನಿಗೆ ಸೀಟಿ ಕಾಲೇಜ ಸೇರಿದ ಮೇಲೆ ಎಲ್ಲೆಡೆಗೆ ಹುಡುಗಿಯರು ಸಭ್ಯವಾಗಿಯೇ ಇರುತ್ತಾರೆ, ಸಿನಿಮಾದ ಸನ್ನಿವೇಶಗಳು ಸುಳ್ಳು ಎಂದು ಗೊತ್ತಾಯಿತು. ಅವನಿಗೆ ಕಾಲೇಜ ಹುಡುಗಿಯರು ಬೀಳದಿದ್ದಾಗ ಆತ ತನ್ನ ರೂಮಿನ ಪಕ್ಕದಲ್ಲಿದ್ದ ಹೊಸದಾಗಿ ಮದುವೆಯಾಗಿದ್ದ ದಾರಿ ತಪ್ಪಿದ ಹೆಂಡತಿಯತ್ರ ಸೆ**ಗಾಗಿ ಹಿಂದೆ ಬೀಳುತ್ತಾನೆ. ಆಗವಳು ತನ್ನ ವರ್ತನೆಯ ಮೂಲಕ ಅವನ ಕಣ್ಣನ್ನು ತೆರೆಸಿ ಅವನನ್ನು ಸರಿದಾರಿಗೆ ತರುತ್ತಾಳೆ. ಇದೊಂದು ನೀತಿಕಥೆಯಾಗಿದ್ದು, ಕಾಲೇಜು ದಿನಗಳಲ್ಲಿ ಓದುವುದನ್ನು ಬಿಟ್ಟು ಪ್ರೇಮಕಾಮಗಳನ್ನು ಮಾಡಲು ಬಯಸುವವರಿಗೆ ಈ ಕಥೆ ಒಂದು ಪಾಠವಾಗಿದೆ.
ಈ ಪುಸ್ತಕವನ್ನು ಓದಲು ಕ್ಲಿಕ್ ಮಾಡಿ. Click
27) ಪಾಪಿಗಳ ಬೇಟೆ – ಒಂದು ಸಾಹಸ ಕಥೆ – Kannada Thriller Story – Kannada Crime Stories
ಕರಿಸಿದ್ದಪ್ಪ ತನ್ನ ತಂದೆ ಅಕ್ರಮವಾಗಿ ಸಂಪಾದಿಸಿದ ಕಪ್ಪು ಹಣವನ್ನೆಲ್ಲ ಎಲೆಕ್ಷನ್‌ನಲ್ಲಿ ಸುರಿದು MLA ಆದನು. ಅವನಿಗೆ ಹೆಣ್ಣಿನ ಹಂಬಲ ಅತಿಯಾಗಿತ್ತು. ಆತ ದಿನಕ್ಕೊಂದು ಅಮಾಯಕ ಹೆಣ್ಣನ್ನು ಬಲವಂತವಾಗಿ ಬಳಸಿಕೊಂಡು ತನಗಿರುವ ಹಣಬಲದಿಂದ, ಅಧಿಕಾರ ಬಲದಿಂದ ಮುಚ್ಚಾಕುತ್ತಿದ್ದನು. ಅವನೊಂದಿನ ಒಂದು ಹಾಲಿವುಡ್ ಸಿನಿಮಾ ನೋಡಿ ಹನಿಮೂನಿನ ಆಸೆಗಾಗಿ ರೂಪಶ್ರೀ ಎಂಬ ಸುಂದರ ಯುವತಿಯನ್ನು ಮದುವೆಯಾದನು. ಅವಳನ್ನು ಆ ಸಿನಿಮಾದಲ್ಲಿ ತೋರಿಸಿದಂತೆ ಅನುಭವಿಸಲು ಗೋವಾದ ಒಂದು ರಹಸ್ಯ ರೆಸಾರ್ಟಿಗೆ ಸೆಕ್ಯುರಿಟಿಯಿಲ್ಲದೆ ಒಂಟಿಯಾಗಿ ಹೋದನು. ಅವನಿಗೆ ಬೇರೆ ಹೆಣ್ಣು ಮತ್ತು ಹೆಂಡತಿ ನಡುವಿನ ವ್ಯತ್ಯಾಸವೂ ಗೊತ್ತಾಗುವುದಿಲ್ಲ. ಆತ ಅವಳನ್ನು ಬಲವಂತವಾಗಿ ಅನುಭವಿಸಿದನು. ಆದರೆ ಮರುದಿನ ಕರಿಸಿದ್ದಪ್ಪ ಅಲ್ಲಿಯೇ ರಹಸ್ಯವಾಗಿ ಕೊಲೆಯಾಗುತ್ತಾನೆ. ಆ ಸಮಯದಲ್ಲಿ ಅಲ್ಲಿ ರೂಪಶ್ರೀಯನ್ನು ಬಿಟ್ಟರೆ ಬೇರೆ ಯಾರು ಇರುವುದಿಲ್ಲ. ಹೀಗಾಗಿ ಪೊಲೀಸರು ಅವಳ ಮೇಲೆ ಅನುಮಾನಪಟ್ಟು ಅವಳನ್ನು ವಿಚಾರಿಸಿ ಅವಳಿಗೆ ಚಿತ್ರಹಿಂಸೆ ಕೊಡುತ್ತಾರೆ. ಆದರೆ ಅವನ ರಹಸ್ಯ ಕೊಲೆ ಹಿಂದೆ ಪಾಪಿಗಳನ್ನು ಸಾಲುಸಾಲಾಗಿ ಕೊಲ್ಲುತ್ತಿರುವ ಒಂದು ಸಾಹಸಿ ಯುವಕರ ಕೈಯಿರುತ್ತದೆ. ಮುಂದೆನಾಗುತ್ತೆ ಎಂಬುದನ್ನು ಕಥೆಯಲ್ಲಿ ಓದಿ…
ಈ ಪುಸ್ತಕವನ್ನು ಓದಲು ಕ್ಲಿಕ್ ಮಾಡಿ. Click
28) ನಿದ್ರೆ ಬಾರದ ರಾತ್ರಿಗಳು : Kannada Love Story
ಒಂದಿನ ರಾತ್ರಿ ಗೀತಾ ನಿದ್ರೆ ಬಾರದೆ ಒದ್ದಾಡುತ್ತಿದ್ದಳು. ಅವಳ ಕನಸುಗಳೇ ಅವಳಿಗೆ ಶತ್ರುವಾದಂತೆ ಕಾಣುತ್ತಿದ್ದವು. ಅಷ್ಟರಲ್ಲಿ ಪಕ್ಕದ ಮನೆಯ ನವವಿವಾಹಿತೆ ಹೆರಿಗೆ ನೋವಿನಿಂದ ಕೀರುಚಲು ಪ್ರಾರಂಭಿಸಿದಳು. ಯಾವ ಗಂಡನ ಸುಖಕ್ಕಾಗಿ ಸಮಯ ಸಂದರ್ಭವೆನ್ನದೆ ಆಕೆ ಮನೆಯ ಮೂಲೆಮೂಲೆಯಲ್ಲಿ ಬೆತ್ತಲಾಗಿದ್ದಳೋ ಆತ ಈಗ ಅವಳ ಬಳಿಯಿರಲಿಲ್ಲ. ಅವಳ ನೋವನ್ನು ನೋಡಿ ಅವಳನ್ನು ಆಸ್ಪತ್ರೆಗೆ ಕರೆದುಕೊಂಡೋಗಲು ಗೀತಾ ಮುಂದಾದಳು. ಸರ್ಕಾರಿ ಅಂಬ್ಯುಲೆನ್ಸ ಸಿಗದಿದ್ದರಿಂದ ಖಾಸಗಿ ಕಾರನ್ನು ಬುಕ್ ಮಾಡಿದಳು. ಆಗ ಬಂದ ಕಾರಿನ ಡ್ರೈವರ್ ರಾಜನ ಮೇಲೆ ಗೀತಾಳಿಗೆ ಪ್ರೀತಿಯಾಗುತ್ತದೆ. ಅವನ ಸೌಂದರ್ಯ, ಒಳ್ಳೆಯ ಗುಣ, ಸಹಾಯ ಗುಣ ಎಲ್ಲವನ್ನು ಮೆಚ್ಚಿಕೊಂಡು ಗೀತಾ ಅವನನ್ನು ಪ್ರೀತಿಸುತ್ತಾಳೆ. ತಾನು ಸ್ಕೂಲ್ ಟೀಚರ್ ಎಂಬ ಅಹಂನ್ನು ಬಿಟ್ಟು ಆಕೆ ಅವನನ್ನು ಇಷ್ಟಪಡುತ್ತಾಳೆ. ಆದರೆ ಅವರ ಪ್ರೀತಿ ಮುರಿದು ಬೀಳುತ್ತದೆ. ಯಾಕೆ, ಏನು ಕಥೆ ಎಂಬುದನ್ನು ಮುಂದೆ ಕಥೆಯಲ್ಲಿ ಓದಿ…
ಈ ಪುಸ್ತಕವನ್ನು ಓದಲು ಕ್ಲಿಕ್ ಮಾಡಿ. Click
29) ಕೀರ್ತಿಯ ಕೀತಾಪತಿ : ಒಂದು ರೊಮ್ಯಾಂಟಿಕ್ ಪ್ರೇಮಕಥೆ – Romantic Love Story in Kannada
ಕಿರಣ ತನ್ನ ಪಾಡಿಗೆ ತನ್ನ ಕೆಲಸ ಮಾಡಿಕೊಂಡಿದ್ದನು. ಆದರೆ ಕೀರ್ತಿ ಅವನಿಂದೆ ಬಿದ್ದು ಅವನನ್ನು ಒಲಿಸಿ ಅವನೊಂದಿಗೆ ಪ್ರೀತಿಪ್ರೇಮಗಳನ್ನೆಲ್ಲ ಮಾಡಿದಳು. ಆದರೆ ಇನ್ನೇನು ಮದುವೆಯಾಗಬೇಕು ಎನ್ನುವಷ್ಟರಲ್ಲಿ ಕಿರಣ ಮೇಲೆ ಒಂದು ಸುಳ್ಳು ಅಪವಾದ ಬಂದು ಅವನ ಹೆಸರಿಗೆ ಕಳಂಕ ಅಂಟಿಕೊಳ್ಳುತ್ತದೆ. ಕೀರ್ತಿಗೆ ಕಿರಣನಿಂದಾಗಿ ಅಪಕೀರ್ತಿ ಬೇಡವಾಗಿತ್ತು. ಅದಕ್ಕಾಗಿ ಆಕೆ ಕಿರಣನ ಪ್ರೇಮ ಸಂಬಂಧಕ್ಕೆ ಬಾಯ ಹೇಳಿ ಬೇರೆ ಹುಡುಗನೊಂದಿಗೆ ಮದುವೆಯಾಗಲು ಮುಂದಾಗುತ್ತಾಳೆ. ಆದರೆ ಅವಳ ಮದುವೆ ದಿನವೇ ಅವಳನ್ನು ಮದುವೆಯಾಗಲು ಬರುತ್ತಿದ್ದ ಹುಡುಗ ಆ್ಯಕ್ಸಿಡೆಂಟನಲ್ಲಿ ಸಾವನ್ನಪ್ಪುತ್ತಾನೆ. ಕೀರ್ತಿಯ ಕಾಲ್ಗುಣ ಸರಿಯಿಲ್ಲವೆಂದು ಊರೆಲ್ಲ ಸುದ್ದಿಯಾಗುತ್ತದೆ. ಅವಳನ್ನು ಮದುವೆಯಾಗಲು ಯಾರು ಮುಂದೆ ಬರುವುದಿಲ್ಲ. ಕೀರ್ತಿ ತಾನು ಮಾಡಿದ ಕೀತಾಪತಿಯಿಂದಾಗಿ ಫಜೀತಿ ಅನುಭವಿಸುತ್ತಾಳೆ. ಮುಂದೇನಾಗುತ್ತೆ ಎಂಬುದನ್ನು ಕಥೆಯಲ್ಲಿ ಓದಿ…
ಈ ಪುಸ್ತಕವನ್ನು ಓದಲು ಕ್ಲಿಕ್ ಮಾಡಿ. Click
30) ಹೆಂಡತಿಯ ಪರ್ಸನಲ್ ಡೈರಿ : ಒಂದು ಪ್ರೇಮತಂತ್ರದ ಕಥೆ Prem Tantra Story in Kannada
“ಹೆಂಡತಿಯ ಪರ್ಸನಲ್ ಡೈರಿ” ಇದೊಂದು ಪ್ರೇಮತಂತ್ರ ಕಥೆಯಾಗಿದೆ. ರಾಧಾ ರವಿಯನ್ನು ಪ್ರೀತಿಸುತ್ತಾಳೆ. ಆದರೆ ರವಿಗೆ ಅವಳಿಗಿಂತ ಅವನ ಬಿಜನೆಸ್ ಮುಖ್ಯವಾಗಿರುತ್ತದೆ. ಅವಳನ್ನು ಪ್ರೀತಿಸಿರುವೆ ಎಂಬ ಕಾರಣಕ್ಕೆ ಅವಳನ್ನು ಮದುವೆಯಾಗಿ ಸಮಯವನ್ನು ಹಾಳು ಮಾಡುವುದೇಕೆ ಎಂಬ ದುರಾಲೋಚನೆ ಅವನ ತಲೆಯೊಳಗೆ ಬರುತ್ತದೆ. ಅದಕ್ಕಾಗಿ ಆತ ಲಿವ್ ಇನ್ ರಿಲೇಶನಶಿಪ್ ಎಂಬ ದಾಳದಿಂದ ಅವಳನ್ನು ಬಳಸಿಕೊಂಡು ದೂರ ತಳ್ಳುವ ಪ್ರಯತ್ನ ಮಾಡುತ್ತಾನೆ. ಆದರೆ ಅವನಿಗೆ ಸಾಧ್ಯವಾಗದೆ ಅವಳನ್ನು ಮದುವೆಯಾಗುತ್ತಾನೆ. ಮದುವೆಯಾದ ನಂತರ ಅವನ ಬಿಜನೆಸ್ ಬೆಳೆಯುತ್ತಾ ಹೋಗುತ್ತದೆ. ಹಣ ಹೆಚ್ಚಾದಂತೆ ಆತ ಅವಳಿಗೆ ಹೆಚ್ಚೆಚ್ಚು ಕಿರುಕುಳ ಕೊಡಲು ಪ್ರಾರಂಭಿಸುತ್ತಾನೆ. ಪರಸ್ತ್ರೀಯರ ನಡುವೆ ಆವಳನ್ನು ನಿರ್ಲಕ್ಷಿಸುತ್ತಾನೆ. ಆಗ ರಾಧಾ ಪ್ರೇಮತಂತ್ರವನ್ನು ಉಪಯೋಗಿಸಿ ಹೇಗೆ ರವಿಯನ್ನು ಸರಿದಾರಿಗೆ ತರುತ್ತಾಳೆ ಎಂಬುದೇ ಈ ಕಥೆಯ ಮುಖ್ಯ ವಿಷಯವಾಗಿದೆ.
ಈ ಪುಸ್ತಕವನ್ನು ಓದಲು ಕ್ಲಿಕ್ ಮಾಡಿ. Click
31) ವಂಚಿಸುವ ಹೂಗಳು : ಕಳ್ಳ-ಕಳ್ಳಿಯ ಪ್ರೇಮಕಥೆ – Kannada Romantic Love Story
“ವಂಚಿಸುವ ಹೂಗಳು” ಇದು ಹೊಸದಾಗಿ ಮದುವೆಯಾದ ಗಂಡ ಹೆಂಡತಿಯ ರೋಮ್ಯಾಂಟಿಕ್ ಕಥೆಯಾಗಿದೆ. ಮದುವೆಗೂ ಮುಂಚೆ ವಿನಯ ಒಬ್ಬಳನ್ನು ಪ್ರೀತಿಸಿ ಮೋಸ ಹೋಗಿರುತ್ತಾನೆ. ಅದಕ್ಕಾಗಿ ಅವನಿಗೆ ‘ನಾನು ಮದುವೆಯಾಗುವ ಹುಡುಗಿ ಮುಂಚೆ ಯಾರನ್ನು ಪ್ರೀತಿಸಿರಬಾರದು. ಮೈಮನಸ್ಸಿನಿಂದ ಪವಿತ್ರಳಾಗಿರಬೇಕು’ ಎಂಬ ಬಯಕೆಯಿತ್ತು. ಅವನಂತೆಯೇ ಚಿತ್ರಾ ಸಹ ತನ್ನ ಮೊದಲ ಪ್ರೀತಿಯಲ್ಲಿ ಮೋಸ ಹೋಗಿರುತ್ತಾಳೆ. ಅದಕ್ಕಾಗಿ ಅವಳಿಗೂ ‘ತಾನು ಮದುವೆಯಾಗುವ ಹುಡುಗ ಬೇರೆ ಯಾವ ಹುಡುಗಿಯನ್ನು ಪ್ರೀತಿಸಿರಬಾರದು’ ಎಂಬಾಸೆಯಿತ್ತು. ಆದರೆ ಕಾಕತಾಳೀಯವೆಂಬತೆ ವಿನಯ ಹಾಗೂ ಚಿತ್ರ ತಮ್ಮತಮ್ಮ ಹಳೇ ಪ್ರೇಮಕಹಾನಿಗಳನ್ನು ಬಚ್ಚಿಟ್ಟು ಮದುವೆಯಾಗುತ್ತಾರೆ. ಮದುವೆಯಾದ ನಂತರ ಮೊದಲ ರಾತ್ರಿಯಲ್ಲೇ ಅವರ ಹಳೆ ಪ್ರೇಮ ಪುರಾಣಗಳು ಹೊರ ಬೀಳುತ್ತವೆ. ಅವರು ಸರಸ ಬಿಟ್ಟು ಕಿತ್ತಾಡಿ ವಿರಸ ಕಟ್ಟಿಕೊಳ್ಳುತ್ತಾರೆ. ಅವರಿಬ್ಬರು ಮುಂದೆ ಹೇಗೆ ಒಂದಾಗುತ್ತಾರೆ? ಅವರ ಲೈಫಲ್ಲಿ ಏನೆಲ್ಲಾ ಆಗುತ್ತೆ ಎಂಬುದನ್ನು ಈ ಕಥೆ ಸುಂದರವಾಗಿ ಕಣ್ಣಿಗೆ ಕಟ್ಟಿ ಕೊಡುತ್ತದೆ. ಮದುವೆಯಾಗಲು ಬಯಸುತ್ತಿರುವ ಮತ್ತು ಹೊಸದಾಗಿ ಮದುವೆಯಾದ ನವ ಯುವಕ ಯುವತಿಯರು ಒಮ್ಮೆ ಓದಲೇಬೇಕಾದ ಸುಂದರ ಕಥೆಯಿದು…
ಈ ಪುಸ್ತಕವನ್ನು ಓದಲು ಕ್ಲಿಕ್ ಮಾಡಿ. Click
32) 100 ಮುತ್ತುಗಳ ಕ್ಷಮೆ : Romantic Love Story in Kannada
ಒಂದಿನ ರಾತ್ರಿ ರಾಜ ಒಂದು ಇಂಗ್ಲೀಷ ಕಾದಂಬರಿಯನ್ನು ಓದುತ್ತಾ ಮಲಗಿದ್ದನು. ಆಗ ಅವನಿಗೆ ಒಂದು ಅಪರಿಚಿತ ನಂಬರನಿಂದ ಮಿಸ್ಕಾಲ್ ಬರುತ್ತದೆ. ಅದು ಒಂದು ಹುಡುಗಿಯ ನಂಬರ ಆಗಿರುತ್ತದೆ. ಅದು ಅವನಿಗೆ ಗೊತ್ತಾದಾಗ ಆತ ಆ ನಂಬರನ್ನು ಸೇವ್ ಮಾಡಿ ಅವಳಿಗೆ ವಾಟ್ಸಾಪಲ್ಲಿ ಮೆಸೇಜ್ ಕಳುಹಿಸುತ್ತಾನೆ. ಆದರೆ ಆ ಹುಡುಗಿ ತನ್ನ ಹೆಸರೇಳದೆ ಹುಚ್ಚು ಪ್ರೇಮ ಸಂದೇಶಗಳನ್ನು ಕಳುಹಿಸಿ ಅವನ ತಲೆಗೆ ಹುಳ ಬಿಡುತ್ತಾಳೆ. ರಾಜ ಅವಳ ಚಿಂತೆಯಲ್ಲಿ ತನ್ನ ಪ್ರೇಯಸಿ ರಾಣಿಯನ್ನು ನಿರ್ಲಕ್ಷಿಸುತ್ತಾನೆ. ಇದರಿಂದಾಗಿ ರಾಣಿ ಅವನ ಮೇಲೆ ಮುನಿಸಿಕೊಳ್ಳುತ್ತಾಳೆ. ಕಥೆಯ ಕೊನೆಗೆ ರಾಜನಿಗೆ ಆ ಅಪರಿಚಿತ ಹುಡುಗಿ ಯಾರಂತ ಗೊತ್ತಾಗುತ್ತದೆ. ರಾಣಿಯ 100 ಮುತ್ತುಗಳ ಕ್ಷಮೆಯಲ್ಲಿ ಈ ಮನಮೋಹಕ ಕಥೆ ಸುಖಾಂತ್ಯವಾಗುತ್ತದೆ.
ಈ ಪುಸ್ತಕವನ್ನು ಓದಲು ಕ್ಲಿಕ್ ಮಾಡಿ. Click
33) ಪಾಪದ ಹುಡುಗಿಯರು : ಒಂದು ಲೈಫಸ್ಟೋರಿ – Kannada Sad Life Love Story
ನಿಶಾ ತನ್ನ ಮದುವೆಯ ಬಗ್ಗೆ ಹಾಗೂ ಮದುವೆಯಾಗುವ ಹುಡುಗನ ಬಗ್ಗೆ ವಿಪರೀತ ಕನಸುಗಳನ್ನು ಕಟ್ಟಿಕೊಂಡಿದ್ದಳು. ತಾನು ಮದುವೆಯಾಗುವ ಹುಡುಗ ಸರ್ಕಾರಿ ನೌಕರನಾಗಿರಬೇಕು ಎಂಬುದು ಅವಳ ಕಂಡೀಷನ್ ಆಗಿತ್ತು. ಅವಳನ್ನು ಮದುವೆಯಾಗಲು ಸಾಕಷ್ಟು ಸುಂದರ ಹುಡುಗರು ಮುಂದೆ ಬಂದರು. ಆದರೆ ಆಕೆ ಅವರಿಗೆ ಸರ್ಕಾರಿ ನೌಕರಿಯಿಲ್ಲ ಎಂದು ಅವಮಾನಿಸಿ ಕಳುಹಿಸಿದಳು. ಅವಳ ಅಹಂಕಾರದಲ್ಲಿ ಅವಳಿಗೆ ವಯಸ್ಸು ೩೦ ವರ್ಷ ದಾಟಿತು. ಅವಳನ್ನು ಮದುವೆಯಾಗಲು ಈಗ ಯಾರು ಮುಂದಾಗಲಿಲ್ಲ. ಸಮಾಜ ಕೇಳುವ ಕೊಂಕು ಪ್ರಶ್ನೆಗಳಿಗೆ ಉತ್ತರಿಸಲಾಗದೆ ಅವಳು ೪೦ರ ಸೆಕೆಂಡ್ ಹ್ಯಾಂಡ್ ಗಂಡನನ್ನು ಕಟ್ಟಿಕೊಂಡು ಪಟ್ಟಣ ಸೇರುತ್ತಾಳೆ. ಅವಳ ಗಂಡನಿಗೆ ಅವಳಲ್ಲಿ ಯಾವುದೇ ಆಸಕ್ತಿ ಹುಟ್ಟಲಿಲ್ಲ. ಏಕೆಂದರೆ ಅವಳ ಸೌಂದರ್ಯ ಮಾಸಿತ್ತು. ಆಕೆ ಗಂಡನ ಬಳಿ ಹೋಗಲು ಪ್ರಯತ್ನಿಸುತ್ತಿರುತ್ತಾಳೆ. ಆಗ ಅವಳಿಗೆ ಪಕ್ಕದ ಮನೆಯ ರೂಪಾ ಪರಿಚಯವಾಗುತ್ತಾಳೆ. ಆಕೆ ಹೊಸದಾಗಿ ಮದುವೆಯಾದ ಯುವತಿಯಾಗಿರುತ್ತಾಳೆ. ಆಕೆ ತನ್ನ ಗಂಡನಿಂದ ದೂರ ಓಡುತ್ತಿರುತ್ತಾಳೆ. ನಿಶಾ ಮತ್ತು ರೂಪಾ ಎಂಬ ಇಬ್ಬರು ಪಾಪದ ಹುಡುಗಿಯರ ಮಧ್ಯೆ ಮಹಾದೇವ ಎಂಬ ಯುವಕ ಸಿಕ್ಕಿಹಾಕಿಕೊಳ್ಳುತ್ತಾಳೆ. ನಂತರ ಇವರ ಕಥೆ ವ್ಯಥೆಯ ಹಾದಿ ಹಿಡಿಯುತ್ತದೆ. ಮುಂದೇನಾಗುತ್ತೆ ಎಂಬುದನ್ನು ಕಥೆಯಲ್ಲಿ ಓದಿ…
ಈ ಪುಸ್ತಕವನ್ನು ಓದಲು ಕ್ಲಿಕ್ ಮಾಡಿ. Click
34) ರತಿ – ಒಂದು ರಹಸ್ಯ ಕೊಲೆ ಕಥೆ – Kannada Revenge Love Story
ರತಿ ಅವಳೂರಿನ ಹೆಮ್ಮೆಯ ಗಂಡು ರಾಜಪ್ಪ ಗೌಡರನ್ನು ಹೈಸ್ಕೂಲಿನಿಂದಲೇ ಪ್ರೀತಿಸುತ್ತಿರುತ್ತಾಳೆ. ಆದರೆ ಗೌಡ್ರನ್ನು ಅವಳ ಅತ್ತೆ ಮಗಳಾದ ಗೀತಾ ಪಟಾಯಿಸಿ ತನ್ನ ಪ್ರೇಮದ ಬಲೆಯಲ್ಲಿ ಬೀಳಿಸಿಕೊಂಡು ಬಿಡುತ್ತಾಳೆ. ಗೀತಾ ಹಾಗೂ ಗೌಡ್ರ ಪ್ರೇಮಕಥೆ ರತಿಗೆ ವ್ಯಥೆಯಾಗುತ್ತದೆ. ರತಿ ಯಾವುದೇ ಕಾರಣಕ್ಕೂ ಗೌಡ್ರನ್ನು ಕಳೆದುಕೊಳ್ಳಲು ತಯಾರಿರಲಿಲ್ಲ. ಅಷ್ಟರಲ್ಲಿ ಚುನಾವಣೆ ಸಮೀಸುತ್ತದೆ. ಎದುರಾಳಿಗಳು ಗೌಡ್ರ ಹೆಸರಿಗೆ ಮಸಿ ಬಳಿಯುವುದಕ್ಕಾಗಿ ರತಿಯನ್ನು ದಾಳವಾಗಿ ಬಳಸಿಕೊಳ್ಳುತ್ತಾರೆ. ರತಿ “ಗೌಡ್ರು ನನ್ನನ್ನು ಮಾನಭಂಗ ಮಾಡಲು ಪ್ರಯತ್ನಿಸಿದರು” ಎಂದು ಸುಳ್ಳೇಳಿ ಗೌಡ್ರನ್ನು ಮದುವೆಯಾದಳು. ಆದರೆ ಗೌಡ್ರು ಅವಳ ಮೋಸವನ್ನು ಕ್ಷಮಿಸದೇ ಅವಳನ್ನು ಮೈಮನಸ್ಸಿನಿಂದ ದೂರವಿಡುತ್ತಾರೆ. ಆಗ ದೇಹದ ಬಯಕೆ ತಾಳಲಾರದೇ ರತಿ ಗೌಡ್ರನ್ನು ಸೇರಲು ಚಿತ್ರವಿಚಿತ್ರ ರಂಗೀನಾಟಗಳನ್ನು ಮಾಡುತ್ತಾಳೆ, ಅಂಗ ಪ್ರದರ್ಶನೆ ಮಾಡಿ ಗೌಡ್ರನ್ನು ಮಂಗ ಮಾಡಲು ಪ್ರಯತ್ನಿಸುತ್ತಾಳೆ. ಆದರೆ ಒಂದಿನ ರಾತ್ರಿ ರಹಸ್ಯವಾಗಿಯೇ ಕೊಲೆಯಾಗುತ್ತಾಳೆ. ಅವಳ ಕೊಲೆಯ ರಹಸ್ಯವೇ ಈ ರೊಮ್ಯಾಂಟಿಕ್ ಕ್ರೈಂ ಕಥೆಯಾಗಿದೆ.
ಈ ಪುಸ್ತಕವನ್ನು ಓದಲು ಕ್ಲಿಕ್ ಮಾಡಿ. Click
35) ದಾರಿ ತಪ್ಪಿದ ಪ್ರೇಮಿಗಳು : ಒಂದು ನೀತಿ ಕಥೆ – Kannada Moral Story
“ದಾರಿ ತಪ್ಪಿದ ಪ್ರೇಮಿಗಳು” ಇದು ಎಲ್ಲ ಕಾಲೇಜ ವಿದ್ಯಾರ್ಥಿಗಳು, ಅವರ ಪಾಲಕರು, ಲೆಕ್ಚರರಗಳು ತಪ್ಪದೇ ಓದಲೇಬೇಕಾದ ಕಥೆಯಾಗಿದೆ. ಒಂದಿನ ತಮ್ಮ ಮಗಳು ರಾಣಿ ಬಸ್ ಮಿಸ್ಸಾಗಿ ಲೇಟಾಗಿ ಬಂದಿದ್ದಕ್ಕಾಗಿ ಅವರಮ್ಮ ಅವಳಿಗೆ ಮುಂದೆ ಏನಾದ್ರು ಸಮಸ್ಯೆಯಾದರೆ ಮನೆಗೆ ವಿಷಯ ತಿಳಿಸುವುದಕ್ಕಾಗಿ ಮೊಬೈಲ್ ಕೊಡಿಸಿದರು. ಆದರೆ ಅವಳು ಓದು ಬಿಟ್ಟು ಫೇಸ್ಬುಕ್ಕಲ್ಲಿ ಸೆಲ್ಫಿಗಳನ್ನು ಹಾಕುತ್ತಾ ಕುಳಿತಳು. ಅವಳ ಫೋಟೋಗಳಿಗೆ ಕಾಮೆಂಟ್ ಮಾಡಿ ಅವಳ ಕ್ಲಾಸ್ಮೇಟ್ ರವಿ ಅವಳೊಂದಿಗೆ ಸ್ನೇಹ ಬೆಳೆಸಿದನು. ರಾಣಿ ಒಂದಿನ ಕ್ಲಾಸಲ್ಲಿ ಅವನೊಂದಿಗೆ ಚಾಟಿಂಗ್ ಮಾಡುವಾಗ ಸುಮಾ ಮಿಸ್ ಕೈಗೆ ಸಿಕ್ಕಿ ಬಿದ್ದಳು. ಅವರು ಅವಳ ಮೊಬೈಲನ್ನು ಜಪ್ತಿ ಮಾಡಿದರು. ಅವರಿಗೆ ಅವಳ ಮೊಬೈಲನ್ನು ತೆಗೆದು ನೋಡಿದಾಗ ಅವಳು ದಾರಿ ತಪ್ಪಿದ್ದು ತಿಳಿಯಿತು. ಜೊತೆಗೆ ಯಾರ ಕ್ಲಾಸಿಗೂ ಸರಿಯಾಗಿ ಬರದ ಹುಡುಗರು ನನ್ನ ಕ್ಲಾಸಿಗೆ ಯಾಕೆ ತಪ್ಪದೆ ಬರುತ್ತಾರೆ? ಬಂದರೂ ಯಾಕೆ ಕಮ್ಮಿ ಅಂಕ ತೆಗೆದುಕೊಳ್ಳುತ್ತಾರೆ? ಯಾಕೆ ನನ್ನ ಶರೀರದ ಖಾಸಗಿ ಅಂಗಗಳನ್ನು ಗುರಾಯಿಸುತ್ತಾರೆ? ಎಂಬೆಲ್ಲ ಪ್ರಶ್ನೆಗಳಿಗೆ ಉತ್ತರ ಸಿಕ್ಕಿತು. ಬಿಗಡಾಯಿಸಿದ ಈ ವಿದ್ಯಾರ್ಥಿಗಳನ್ನು ಸುಮಾ ಮಿಸ್ ಹೇಗೆ ಬದಲಾಯಿಸುತ್ತಾರೆ ಎಂಬುದು ಈ ಕಥೆಯ ಇಂಟರೆಸ್ಟಿಂಗ್ ಭಾಗವಾಗಿದೆ…
ಈ ಪುಸ್ತಕವನ್ನು ಓದಲು ಕ್ಲಿಕ್ ಮಾಡಿ. Click
36) ಸಂಜೆರಾಣಿಯ ಮೊದಲ ರಾತ್ರಿ – ಒಂದು ರೊಮ್ಯಾಂಟಿಕ್ ಪ್ರೇಮಕಥೆ – One Romantic Love Story in Kannada
“ಸಂಜೆರಾಣಿಯ ಮೊದಲ ರಾತ್ರಿ” ಇದು ಸಂಜೆಗುರುಡುತನವನ್ನು ಹೊಂದಿದ ಸುಮಾ ಎಂಬ ಸುಂದರ ಯುವತಿಯ ರೊಮ್ಯಾಂಟಿಕ ಪ್ರೇಮಕಥೆಯಾಗಿದೆ. ಸುಮಾಳಿಗೆ ಸಂಜೆಗುರುಡುತನ ಇರುತ್ತದೆ. ಆಕೆ ಅದನ್ನು ಗುಟ್ಟಾಗಿಟ್ಟುಕೊಂಡು ಒಂದು ಶಾಲೆಯಲ್ಲಿ ಟೀಚರಾಗಿ ಕೆಲಸ ಮಾಡುತ್ತಿರುತ್ತಾಳೆ. ಆದರೆ ರಾಕೇಶ್ ಅವಳ ಗುಟ್ಟು ಗೊತ್ತಾದ ಮೇಲೂ ಅವಳನ್ನು ಇಷ್ಟಪಟ್ಟು ಪ್ರೀತಿಸಿ ಮದುವೆಯಾಗುತ್ತಾನೆ. ಸಂಜೆಯ ಸಮಯದಲ್ಲಿ ಕಣ್ಣು ಕಾಣಿಸದ ಯುವತಿ ಮದುವೆಯಾದ ನಂತರ ತನ್ನ ವೈವಾಹಿಕ ಜೀವನವನ್ನು ಹೇಗೆ ನಿಭಾಯಿಸುತ್ತಾಳೆ ಎಂಬುದನ್ನು ಈ ಕಥೆ ರೊಮ್ಯಾಂಟಿಕ್ಕಾಗಿ ವಿವರಿಸುತ್ತದೆ. ತನ್ನ ಮೊದಲ ರಾತ್ರಿಯ ಮಿಲನ ಮಹೋತ್ಸವದಲ್ಲಿ ಆಕೆ ತೆಗೆದುಕೊಂಡ ನಿರ್ಧಾರ ಅವಳ ಪೋಲಿ ಗಂಡನನ್ನು ಮತ್ತಷ್ಟು ಪೋಲಿಯಾಗಿಸುತ್ತದೆ. ಸಂಜೆ ಕಣ್ಣು ಕಾಣಿಸದ ಸುಂದರ ಪತ್ನಿಯೊಡನೆ ರಾಕೇಶ ರಸಿಕ ರಾತ್ರಿಗಳನ್ನು ಕಳೆಯುತ್ತಿರುತ್ತಾನೆ. ತನ್ನನ್ನು ಪ್ರೀತಿಸುತ್ತಾ ಪೋಲಿಯಾಟಗಳನ್ನು ಆಡುತ್ತಿರುವ ಪತಿಯ ಜೊತೆಯಲ್ಲಿ ಸುಮಾ ಸಂತೋಷವಾಗಿರುತ್ತಾಳೆ. ಆದರೆ ಅವಳ ಸೌಂದರ್ಯದ ಮೇಲೆ ಒಬ್ಬ ಕಾಮುಕನ ಕಣ್ಣು ಬೀಳುತ್ತದೆ. ಆತ ಅವಳ ಗಂಡನ ಅನುಪಸ್ಥಿತಿಯಲ್ಲಿ ಸಂಜೆ ಅವಳ ಮನೆಗೆ ನುಗ್ಗಿ ಅವಳನ್ನು ದುರ್ಬಳಕೆ ಮಾಡಿಕೊಳ್ಳಲು ಪ್ರಯತ್ನಿಸುತ್ತಾನೆ. ಅವಳ ಗಂಡನಂತೆ ನಟಿಸುತ್ತಾ ಅವಳ ಸೆರಗಿಗೆ ಕೈಹಾಕುತ್ತಾನೆ. ಸಂಜೆ ವೇಳೆ ಕಣ್ಣು ಕಾಣಿಸದ ಸುಮಾ ಆ ಕಾಮುಕನಿಂದ ಹೇಗೆ ತಪ್ಪಿಸಿಕೊಳ್ಳುತ್ತಾಳೆ ಹಾಗೂ ಮುಂದೆ ಹೇಗೆ ತನ್ನ ಜೀವನವನ್ನು ರೊಮ್ಯಾಂಟಿಕ್ಕಾಗಿ ಮುಂದುವರೆಸುತ್ತಾಳೆ ಎಂಬುದು ಈ ಕಥೆಯ ಜೀವವಾಗಿದೆ. ಇದು ಕ್ರೈಂ ಥ್ರಿಲ್ಲರನ ನೆರಳನ್ನು ಹೊಂದಿರುವ ವಿವಾಹಿತ ದಂಪತಿಗಳ ಶುದ್ಧ ಪ್ರಣಯ ಪ್ರೇಮಕಥೆಯಾಗಿದೆ. ರೋಮ್ಯಾಂಟಿಕ್ ಕಥೆಗಳನ್ನು ಒಳ್ಳೆ ಮನಸ್ಸಿನಿಂದ ಎಂಜಾಯ್ ಮಾಡುವವರು ಈ ಕಥೆಯನ್ನು ಓದಬಹುದು.
ಈ ಪುಸ್ತಕವನ್ನು ಓದಲು ಕ್ಲಿಕ್ ಮಾಡಿ. Click Here
37) ಬಿಳಿಕಾಗೆ : ಕಾಲೇಜ ಕಿರಾತಕಿಯ ಕಥೆ – Kannada Short Story – Kannada Moral Story
ಎಷ್ಟೋ ಜನ ಫೆಮಿನಿಸಮ್ ಪಂಡಿತೆಯರಿಗೆ ಫೆಮಿನಿಸಮ್ ಪದದ ನಿಜವಾದ ಅರ್ಥ ಹಾಗೂ ಉದ್ದೇಶ ಗೊತ್ತಿಲ್ಲ. ಅವರು ತಾವು ಮಾಡುವ ದುಶ್ಚಟಗಳಿಗೆ ಫೆಮಿನಿಸಮನ ಲೇಬಲ್ ಅಂಟಿಸಿ ಜಾರಿಕೊಳ್ಳುತ್ತಾರೆ. ಎಲ್ಲ ತರಹದ ದುಶ್ಚಟಗಳನ್ನು, ಅಶ್ಲೀಲತೆಗಳನ್ನು ಮಾಡಿ ದಾರಿ ತಪ್ಪಿ ಹಾಳಾಗುತ್ತಾರೆ. ಅಂಥವರಲ್ಲಿ ಈ ಕಥೆಯ ನಾಯಕಿ ಅನಿ ಕೂಡ ಒಬ್ಬಳು. ಹುಡುಗಿಯರು ಫೇಕ್ ಫೆಮಿನಿಸಮನಿಂದ ಹೇಗೆ ದಾರಿ ತಪ್ಪುತ್ತಾರೆ ಎಂಬುದಕ್ಕೆ ಈ ಕಥೆಯ ನಾಯಕಿ ಉತ್ತಮ ಉದಾಹರಣೆಯಾಗಿದ್ದಾಳೆ. ಹುಡುಗಿಯರ ಉನ್ನತಿಗಾಗಿ ಫೆಮಿನಿಸಮ್ ಬೇಕು. ಆದರೆ ಅದನ್ನು ದುರುಪಯೋಗಪಡಿಸಿಕೊಂಡರೆ ಅದರಿಂದಲೇ ಅವರು ಅವನತಿಯಾಗುತ್ತಾರೆ ಎಂಬುದನ್ನು ಈ ಕಥೆ ನಿರೂಪಿಸುತ್ತದೆ.
ಈ ಪುಸ್ತಕವನ್ನು ಓದಲು ಕ್ಲಿಕ್ ಮಾಡಿ. Click
38) ಒಂದು ಭಯಾನಕ ಕನಸು… One Dangerous Dream Kannada Social Message Story
ನಾನು ಡಿಗ್ರಿ ಸೆಕೆಂಡ್ ಇಯರನಲ್ಲಿ ಓದುತ್ತಿರುವಾಗ ಒಂದಿನ ಸೆಮಿನಾರ್ ಡೇ ಇತ್ತು. ಆವತ್ತು ನಮ್ಮ ಕ್ಲಾಸ್ ಟಾಪರ್ ರಾಜಿ ಒಳ್ಳೆ ಮದುವೆ ಹೆಣ್ಣಿಗಿಂತಲೂ ಹೆಚ್ಚಾಗಿ ಮೇಕಪ್ ಮಾಡಿಕೊಂಡು ಬಂದಿದ್ದಳು. ಸೆಮಿನಾರ್ ಮಾಡಬೇಕು ಅಂತಾ ಅಷ್ಟೊಂದು ಮೇಕಪ್ ಮಾಡಿಕೊಂಡು ಬಂದಿದ್ದಳೋ ಅಥವಾ ಯಾರನ್ನೋ ಇಂಪ್ರೆಸ್ ಮಾಡಬೇಕು ಅಂತಾ ಬಂದಿದ್ದಳೋ ಅದು ಅವಳಿಗೆ ಗೊತ್ತು. ಅವತ್ತು ಸೆಮಿನಾರ್ ನಡೆಯುತ್ತಿರುವಾಗ ಬೋರಾಗಿ ನಾನು ಬೆಂಚ್ ಮೇಲೆಯೇ ನಿದ್ರೆಗೆ ಜಾರಿದೆ. ನಿದ್ರೆಯಲ್ಲಿ ನಾನೊಂದು ಭಯಾನಕ ಕನಸನ್ನು ಕಂಡೆ. ಆ ಕನಸನ್ನೇ ಈ ಪುಸ್ತಕದಲ್ಲಿ ಯಥಾವತ್ತಾಗಿ ಬರೆದಿರುವೆ. ಇದು ಎಲ್ಲ ಪುಸ್ತಕಗಳಂತೆ ಪ್ರೇಮ ಕಥೆಯಲ್ಲ. ಇದರಲ್ಲಿ ಒಂದು ಸಾಮಾಜಿಕ ಸಂದೇಶವಿದೆ, ಭವಿಷ್ಯದ ಬಗ್ಗೆ ಕಾಳಜಿಯಿದೆ ಅಷ್ಟೇ.
ಈ ಪುಸ್ತಕವನ್ನು ಓದಲು ಕ್ಲಿಕ್ ಮಾಡಿ. Click
39) ರಾತ್ರಿರಾಣಿಯ ಹಗಲುಗನಸು – ಒಂದು ರೆಡಲೈಟ್ ಲವಸ್ಟೋರಿ – Love Story of a Red Light Girl in Kannada
“ರಾತ್ರಿರಾಣಿಯ ಹಗಲುಗನಸು” ಇದೊಂದು ರೆಡಲೈಟ್ ಹುಡುಗಿಯ ಲವ್ ಮತ್ತು ಲೈಫ್ ಸ್ಟೋರಿಯಾಗಿದೆ. ಓರ್ವ ಹುಡುಗಿ ಪ್ರೀತಿಯಲ್ಲಿ ಮೋಸ ಹೋದ ನಂತರ ಹೇಗೆ ರೆಡ್ ಲೈಟ್ ಕಾಲೋನಿ ಪಾಲಾಗುತ್ತಾಳೆ, ಅಲ್ಲಿ ಆಕೆ ಯಾವ್ಯಾವ ತೊಂದರೆಗಳನ್ನು ಅನುಭವಿಸುತ್ತಾಳೆ, ಹಣಕ್ಕಾಗಿ ಮೈ ಮಾರಿಕೊಳ್ಳುವ ಪ್ರತಿ ಹುಡುಗಿಯ ಹಿಂದೆ ಒಂದೊಂದು ಕಣ್ಣೀರ ಕಥೆಯಿರುತ್ತೆ, ರಾತ್ರಿರಾಣಿಯರ ಸಮಸ್ಯೆಗಳೇನು ಎಂಬಿತ್ಯಾದಿ ಗಂಭೀರ ವಿಷಯಗಳ ಮೇಲೆ ಈ ಕಥೆ ಬೆಳಕು ಚೆಲ್ಲುತ್ತದೆ. ಈ ಕಥೆಯ ನಾಯಕಿ ಪ್ರೀತಿಯಲ್ಲಿ ಮೋಸಹೋಗಿ ಇಷ್ಟವಿಲ್ಲದಿದ್ದರೂ ರಾತ್ರಿರಾಣಿಯಾಗುತ್ತಾಳೆ. ಅವಳ ಕನಸುಗಳೆಲ್ಲ ಕತ್ತಲ ಕೊನೆಯಲ್ಲಿ, ಅವಳ ಕಣ್ಣೀರಲ್ಲಿ ಕೊಚ್ಚಿಕೊಂಡು ಹೋಗುತ್ತವೆ. ಆದರೂ ಅವಳ ಬಳಿ ಕೇವಲ ಒಂದು ಕನಸು ಉಳಿದುಕೊಳ್ಳುತ್ತದೆ. ಆ ಕನಸು ಯಾವುದು? ಅದು ನನಸಾಗುತ್ತಾ? ಎಂಬುದನ್ನು ತಿಳಿಯಲು ನೀವು ಈ ಕಥೆಯನ್ನು ಓದಬೇಕು. ಯಾರನ್ನೋ ಪ್ರೀತಿಸಿ ಮನೆ ಬಿಟ್ಟು ಓಡೋಗುವ ಪ್ರತಿ ಹುಡುಗಿ ಓದಲೇಬೇಕಾದ ಕಥೆಯಿದು. ಅಯೋಗ್ಯರನ್ನು ಪ್ರೀತಿಸುವ ಪ್ರತಿ ಹುಡುಗಿಗೆ ಪಾಠವಾಗುವ ಕಥೆಯಿದು…
ಈ ಪುಸ್ತಕವನ್ನು ಓದಲು ಕ್ಲಿಕ್ ಮಾಡಿ. Click
40) ರೆಡಲೈಟ್ ಹುಡುಗಿಯ ಲೈಫಪಾಠ – Fictional Romance and Social Message Story in Kannada – Kannada Romantic Story
“ರೆಡಲೈಟ್ ಹುಡುಗಿಯ ಲೈಫಪಾಠ” ಇದು ಫಿಕ್ಷನಲ್ ರೋಮ್ಯಾನ್ಸ್ ಮತ್ತು ಸಾಮಾಜಿಕ ಸಂದೇಶವುಳ್ಳ ಸುಂದರ ಕಥೆಯಾಗಿದೆ. ಸಾರಾಯಿ ಕುಡಿದು ತಮ್ಮ ಬೆಡ್ರೂಮ್ ರಹಸ್ಯಗಳನ್ನು ಬೀದಿಗೆ ತಂದು ತಮ್ಮ ಹೆಂಡತಿಯರಿಗೆ ಕಿರುಕುಳ ಕೊಡುವ ಎಲ್ಲ ಗಂಡಂದಿರಿಗೆ ಇದು ಬದುಕು ಬದಲಾಯಿಸುವ ಕಥೆಯಾಗಿದೆ. ಹರಿ ಎಂಬ ದುಷ್ಟನ ಗೆಳೆತನ ಮಾಡಿ ತನ್ನ ಹೆಂಡತಿ ಲಕ್ಷ್ಮಿಗೆ ಕಿರುಕುಳ ಕೊಡುವ ಸಂತೋಷ ಈ ಕಥೆಯ ಮುಖ್ಯ ಪಾತ್ರದಾರಿಯಾಗಿದ್ದಾನೆ. ತನ್ನ ಗೆಳೆಯನ ಹೆಂಡತಿ ಲಕ್ಷ್ಮಿಯ ಮೇಲೆ ಕೆಟ್ಟ ಕಣ್ಣಿಟ್ಟಿರುವ ಹರಿ ಈ ಕಥೆಯ ವಿಲನ್ ಆಗಿದ್ದಾನೆ. ಹರಿ ಲಕ್ಷ್ಮಿಯನ್ನು ಪಡೆಯಲು ಅವಳಿಗೆ ಕಾಟ ಕೊಡುತ್ತಾನೆ. ಸಂತೋಷ ಮತ್ತು ಲಕ್ಷ್ಮಿಯ ಪರ್ಸನಲ್ ಜೀವನದಲ್ಲಿ ಮೂಗು ತೂರಿಸಿ ಅವರಿಬ್ಬರ ನಡುವೆ ತಡೆಗೋಡೆಯಾಗುತ್ತಾನೆ. ಆದರೆ ಓರ್ವ ರೆಡ್ ಲೈಟ್ ಹುಡುಗಿಯಿಂದಾಗಿ ಸಂತೋಷ ಸಂಪೂರ್ಣವಾಗಿ ಬದಲಾಗುತ್ತಾನೆ ಮತ್ತು ಲಕ್ಷ್ಮಿಯೊಡನೆ ಮತ್ತೆ ಒಂದಾಗುತ್ತಾನೆ. ಆ ರೆಡ್ ಲೈಟ್ ಹುಡುಗಿ ಯಾರು? ಅವಳ ಕಥೆಯೇನು? ಲಕ್ಷ್ಮಿ ಹರಿಯ ಸೊಕ್ಕನ್ನು ಹೇಗೆ ಮುರಿಯುತ್ತಾಳೆ? ಎಂಬೆಲ್ಲ ರೋಚಕ ವಿಷಯಗಳನ್ನು ತಿಳಿದುಕೊಳ್ಳಲು ಈ ರೋಮ್ಯಾಂಟಿಕ್ ಕಥೆಯನ್ನೊಮ್ಮೆ ಓದಿ.
ಈ ಪುಸ್ತಕವನ್ನು ಓದಲು ಕ್ಲಿಕ್ ಮಾಡಿ. Click
41) ಅಮೃತಾಳ ಅವಾಂತರ : ಒಂದು ಫೇಸ್ಬುಕ್ ಪ್ರೇಮಕಥೆ – Kannada Love Story – Love Stories in Kannada
ಅಮೃತಾ ತನ್ನ ಕ್ಲಾಸ್ಮೇಟ್ ವೀರೇಶನನ್ನು ಇಷ್ಟಪಡುತ್ತಿದ್ದಳು. ಏಕೆಂದರೆ ಆತ ಸಣ್ಣ ವಯಸ್ಸಿನಲ್ಲಿಯೇ ರೈಟರ್ ಆಗಿ ತುಂಬಾ ಫೇಮಸ್ ಆಗಿದ್ದನು. ಅವನ ಮೇಲೆ ಆಕೆ ಮೋಹಿತಳಾಗಿದ್ದಳು. ಆದರೆ ಆಕೆ ತನ್ನ ಮನಸ್ಸಿನ ಮಾತನ್ನು ಅವನಿಗೆ ನೇರವಾಗಿ ಹೇಳಲು ಹಿಂಜರಿದಳು. ಅದನ್ನು ತನ್ನ ಗೆಳೆಯ ಅವಿನಾಶನಿಗೆ ಹೇಳಿದಳು. ಆದರೆ ಅವನಿಗೆ ಅಮೃತಾ ವೀರೇಶನೊಂದಿಗೆ ಸೇರುವುದು ಇಷ್ಟವಿರಲಿಲ್ಲ. ಏಕೆಂದರೆ ಆತ ಅವಳನ್ನು ಬಯಸುತ್ತಿದ್ದನು. ಅವನಿಗೆ ಅವಳ ಸ್ನೇಹವೂ ಬೇಕಿರಲಿಲ್ಲ, ಪ್ರೀತಿಯೂ ಬೇಕಾಗಿರಲಿಲ್ಲ. ಅವನಿಗೆ ಬರೀ ಅವಳು ಬೇಕಾಗಿದ್ದಳು. ಅದಕ್ಕಾಗಿ ಆತ ವೀರೇಶನ ಹೆಸರಲ್ಲಿ ನಕಲಿ ಫೇಸ್ಬುಕ್ ಖಾತೆ ತೆರೆದು ಅಮೃತಾಳನ್ನು ವಂಚಿಸಿ ಅವಳ ಹಸಿಬಿಸಿ ಫೋಟೋಗಳನ್ನು ತೆಗೆದುಕೊಂಡು ಅವಳನ್ನು ಬ್ಲಾಕ್ಮೇಲ್ ಮಾಡುತ್ತಾನೆ. ಆದರೆ ಕೊನೆಗೆ ಅವಿನಾಶ ಮಾಡಿದ ಹಲ್ಕಾ ಕೆಲಸ ವೀರೇಶನ ಹೆಸರಿಗೆ ಅಂಟಿಕೊಳ್ಳುತ್ತದೆ. ಮುಂದೆ ವೀರೇಶನ ಜೀವನದಲ್ಲಿ ದೊಡ್ಡ ವಿವಾದವೇಳುತ್ತದೆ. ಆಗ ಅಮೃತಾ ಏನು ಮಾಡುತ್ತಾಳೆ? ವಿರೇಶ ಏನಾಗುತ್ತಾನೆ? ಎಂಬುದು ಈ ಕಥೆಯ ವ್ಯಥೆಯಾಗಿದೆ…
ಈ ಪುಸ್ತಕವನ್ನು ಓದಲು ಕ್ಲಿಕ್ ಮಾಡಿ. Click
42) ಪೋಲಿ ಪ್ರೇಮ ಕಥೆಗಳು – Kannada Short Love Stories
“ಪೋಲಿ ಪ್ರೇಮಕಥೆಗಳು” ಈ ಪುಸ್ತಕ ನನ್ನ ಕಾಲೇಜು ದಿನಗಳಲ್ಲಾದ ಸಣ್ಣಸಣ್ಣ ಗುಪ್ತ ಪ್ರೇಮ ಕಥೆಗಳ ಸಂಗ್ರಹವಾಗಿದೆ. ಈ ಕಥೆಗಳು ನಿಮ್ಮ ಕಾಲೇಜು ದಿನಗಳ ಕ್ರಶ್‌ಗಳನ್ನು, ಮಾಜಿ ಪ್ರೀತಿಪಾತ್ರರನ್ನು ನೆನಪಿಸುತ್ತವೆ. ಈ ಕಥೆಗಳು ನಿಮ್ಮನ್ನು ನಗಿಸುತ್ತವೆ, ಅಳಿಸುತ್ತವೆ ಮತ್ತು ಸ್ವಲ್ಪ ಸಮಯದವರೆಗೆ ಯೋಚಿಸುವಂತೆ ಮಾಡುತ್ತವೆ. ಇಂದಿನ 4ಜಿ ಯುಗದಲ್ಲಿ ಯಾರಿಗೂ ದೊಡ್ಡ ಕಥೆಗಳನ್ನು ಓದುವಷ್ಟು ಸಮಯವಿಲ್ಲ. ಹಾಗಾಗಿ ನಾನು ಈ ಸಣ್ಣ ಪ್ರೇಮಕಥೆಗಳ ಸಂಗ್ರಹವನ್ನು ಬರೆದಿದ್ದೇನೆ. ಇದು ನನ್ನ ಹೊಸ ಪ್ರಯತ್ನ. ದಯವಿಟ್ಟು ಈ ಪುಸ್ತಕವನ್ನು ಒಮ್ಮೆ ಓದಿ ಮತ್ತು ನಿಮ್ಮ ಪ್ರಾಮಾಣಿಕ ವಿಮರ್ಶೆಗಳನ್ನು ನೀಡಿ.
ಈ ಪುಸ್ತಕವನ್ನು ಓದಲು ಕ್ಲಿಕ್ ಮಾಡಿ. Click
43) ಹೀಗೊಂದು ಪ್ರೇಮಕಥೆ – One Beautiful Love Story a Parrot and Fish in Kannada
“ಹೀಗೊಂದು ಪ್ರೇಮಕಥೆ…” ಇದೊಂದು ಸರೋವರದ ಮೀನು ಮತ್ತು ಕಾಡಿನ ಗಿಳಿಗಳ ಮಧ್ಯೆ ನಡೆಯುವ ಸುಂದರವಾದ ಪ್ರೇಮಕಥೆಯಾಗಿದೆ. ಮೀನು ಹಾಗೂ ಗಿಳಿಗಳು ಪರಸ್ಪರ ಪ್ರೀತಿಸುತ್ತವೆ. ಆದರೆ ಅವುಗಳಿಗೆ ಅವುಗಳ ದೈಹಿಕ ದುರ್ಬಲತೆಗಳ ಕಾರಣಗಳಿಂದ ಜೊತೆಯಾಗಿ ಬಾಳಲಾಗುವುದಿಲ್ಲ. ಹೀಗಾಗಿ ಅವು ಬೇರೆ ಬೇರೆಯಾಗುತ್ತವೆ. ಯಾಕೆ ಈ ಕಥೆ ಅವರಿಬ್ಬರ ದುರಂತ ಸಾವುಗಳಲ್ಲಿ ಕೊನೆಯಾಗುತ್ತದೆ ಎಂಬುದೇ ಈ ಪ್ರೇಮಕಥೆಯ ರಹಸ್ಯ….
ಈ ಪುಸ್ತಕವನ್ನು ಓದಲು ಕ್ಲಿಕ್ ಮಾಡಿ. Click
44) ಛಾಯಾ ; ಸರಸ ಮತ್ತು ಸೇಡಿನ ಪ್ರೇಮಕಥೆ – Romance and Revenge Love Story in Kannada
“ಛಾಯಾ” ಇದೊಂದು ಸರಸ ಮತ್ತು ಸೇಡಿನ ಪ್ರೇಮಕಥೆಯಾಗಿದೆ. ಸಿಂಹಳದ ರಾಜ ಒಂದಿನ ಬೇಟೆಯಾಡಲು ಕಾಡಿಗೆ ಹೋಗಿದ್ದಾಗ ಓರ್ವ ಕಾಡು ಸುಂದರಿಗೆ ಮನಸೋಲುತ್ತಾನೆ. ಅವಳನ್ನೇ ಮದುವೆಯಾಗಿ ಅವಳನ್ನು ತನ್ನ ರಾಣಿ ಮಾಡುತ್ತಾನೆ. ಆದರೆ ಮುಂದೆ ಒಂದಿನ ಅವನ ಮೇಲೆ ಶತ್ರುಗಳು ದಾಳಿ ಮಾಡುತ್ತಾರೆ. ಆ ದಾಳಿಯಲ್ಲಿ ಶತ್ರುಗಳಿಂದ ರಾಜನನ್ನು ಕಾಪಾಡುವುದಕ್ಕಾಗಿ ರಾಣಿ ಮಧ್ಯೆ ಪ್ರವೇಶಿಸುತ್ತಾಳೆ. ರಾಜನಿಗೆ ತಾಗಬೇಕಿದ್ದ ಚೂರಿ ರಾಣಿಗೆ ತಾಗುತ್ತದೆ. ಆಕೆ ಬಂಜೆಯಾಗುತ್ತಾಳೆ. ಆಗ ರಾಜ ಅವಳ ಆಪ್ತ ಸಖಿ ಛಾಯಾಳನ್ನು ಬಲವಂತವಾಗಿ ಮದುವೆಯಾಗುತ್ತಾನೆ. ಛಾಯಾಳ ಸರಸದಲ್ಲಿ ರಾಜ ರಾಣಿಯನ್ನು ನಿರ್ಲಕ್ಷಿಸುತ್ತಾನೆ. ಇದರಿಂದ ರಾಣಿ ಛಾಯಾಳ ಮೇಲೆ ಸೇಡು ತೆಗೆದುಕೊಳ್ಳಲು ಮುಂದಾಗುತ್ತಾಳೆ. ರಾಣಿಯ ಸೇಡು ಗೆಲ್ಲುತ್ತಾ ಅಥವಾ ಛಾಯಾಳ ಸರಸ ಗೆಲ್ಲುತ್ತಾ ಎಂಬುದು ಈ ಕಥೆಯ ಕಥಾವಸ್ತುವಾಗಿದೆ.
ಈ ಪುಸ್ತಕವನ್ನು ಓದಲು ಕ್ಲಿಕ್ ಮಾಡಿ. Click
45) ಮುದ್ದು ಹುಡುಗಿಯ ಪೆದ್ದು ಪ್ರೇಮಕಥೆ – Kannada Sad Love Story
ಪೂಜಾಳಿಗೆ ಪ್ರಾಮಾಣಿಕತೆಯಿತ್ತು, ಸಮಾಜದ ಪರಿಜ್ಞಾನವಿತ್ತು, ಆದರೆ ಪ್ರೀತಿ ಪ್ರೇಮದಾಟದ ಇನ್ನೊಂದು ಮುಖದ ಪರಿಚಯವಿರಲಿಲ್ಲ. ಅದಕ್ಕಾಗಿ ಅವಳು ಮೋಸದ ಪ್ರೀತಿಗೆ ತನ್ನ ಮೈಯೊಪ್ಪಿಸಿ ಮೋಸ ಹೋದಳು. ಆಕೆ ಪ್ರೀತಿಸುತ್ತಿದ್ದ ಹುಡುಗ ವಿಶಾಲ ದೇಹದ ಬೇಡಿಕೆಯನ್ನು ಪೂರೈಸಿಕೊಳ್ಳಲು ಅಡ್ಡದಾರಿ ತುಳಿದನೆಂಬ ಕಾರಣಕ್ಕೆ ಆಕೆ ಅವನ ಹಾಸಿಗೆಯನ್ನು ಬೆಚ್ಚಗಾಗಿಸುತ್ತಾಳೆ. ನಂತರ ಆಕೆ ತನ್ನ ಮನೆಯವರಿಗೆ “ನಾನು ವಿಶಾಲ ಎಂಬ ಹುಡುಗನನ್ನು ಪ್ರೀತಿಸುತ್ತಿರುವೆ, ಅವನನ್ನೇ ಮದುವೆಯಾಗುತ್ತೇನೆ” ಎಂದೇಳಿ ಹಠ ಹಿಡಿಯುತ್ತಾಳೆ. ಅವಳ ಬೇಡಿಕೆಗೆ ಅವಳ ಮನೆಯವರು ಒಪ್ಪುತ್ತಾರೆ. ಆದರೆ ಅವಳನ್ನು ಮದುವೆಯಾಗಲು ಅವಳ ಪ್ರಿಯಕರ ವಿಶಾಲ ಒಪ್ಪುವುದಿಲ್ಲ. ಪ್ರೀತಿಯಲ್ಲಿ ಮೋಸ ಹೋದ ಪೆದ್ದು ಹುಡುಗಿ ಪೂಜಾ ಮುಂದೇನಾಗುತ್ತಾಳೆ ಎಂಬುದೇ ಈ ಕಥೆಯ ರಹಸ್ಯವಾಗಿದೆ…
ಈ ಪುಸ್ತಕವನ್ನು ಓದಲು ಕ್ಲಿಕ್ ಮಾಡಿ. Click
46) ಕಾಡಿನಲ್ಲೊಂದು ಕ್ರೈಮಸ್ಟೋರಿ – Crime Love Story in Kannada
“ಕಾಡಿನಲ್ಲೊಂದು ಕ್ರೈಮಸ್ಟೋರಿ” ಇದು ವಾರಾಂತ್ಯದಲ್ಲಿ ಪರಿಶುದ್ಧ ಏಕಾಂತವನ್ನು ಅರಸಿ ಒಂದು ಜನ ನಿಬಿಡ ಬೆಟ್ಟಕ್ಕೆ ಹೋದ ಯುವ ಪ್ರೇಮಿಗಳ ದುರಂತ ಕಥೆಯಾಗಿದೆ. ದುರದೃಷ್ಟವಶಾತ್ ಬೆಟ್ಟಕ್ಕೆ ಹೋದ ಆ ಕಾಲೇಜ ಪ್ರೇಮಿಗಳು, ಅಲ್ಲಿ ಈಗಾಗಲೇ ಬೇರೊಬ್ಬರಿಗಾಗಿ ಕಾಯುತ್ತಿದ್ದ ಗೂಂಡಾಗಳ ಬಲೆಯಲ್ಲಿ ಸಿಕ್ಕಿಹಾಕಿಕೊಳ್ಳುತ್ತಾರೆ. ಆ ಪ್ರೇಮಿಗಳಲ್ಲಿ, ಹುಡುಗನನ್ನು ಆ ಗೂಂಡಾಗಳು ಬೆಟ್ಟದಿಂದ ತಳ್ಳಿ ಸಾಯಿಸುತ್ತಾರೆ ಮತ್ತು ಹುಡುಗಿಯನ್ನು ತಮ್ಮ ಕಾಮದಾಹಕ್ಕೆ ಬಳಸಿಕೊಳ್ಳುತ್ತಾರೆ. ಕಮರ್ಷಿಯಲ್ ಬ್ಲೂ ಫಿಲಂ ತಯಾರಿಸುವುದಕ್ಕಾಗಿ ಅವಳನ್ನು ನಾನಾ ತರಹದಲ್ಲಿ ಹಿಂಸಿಸುತ್ತಾರೆ. ಅವಳ ಕೋಮಲ ದೇಹ ಕಾಮದ ಬೇಗೆಯಲ್ಲಿ ದಹಿಸಿ ಹೋದರೂ ಆ ಕಾಮುಕರ ದಾಹ ತೀರುವುದಿಲ್ಲ. ಆಕೆ ಅಲ್ಲಿಯೇ ಕಣ್ಮುಚ್ಚುತ್ತಾಳೆ. ಇಂತಹ ಅಪಾಯಕಾರಿ ಸ್ಥಳಗಳಿಗೆ ಡೇಟಿಂಗ್ ಮಾಡಲು ಹೋಗುವ ಯುವ ಪ್ರೇಮಿಗಳಿಗೆ ಈ ಕ್ರೈಂ ಸ್ಟೋರಿ ಒಂದು ಎಚ್ಚರಿಕೆಯ ಗಂಟೆಯಾಗಿದೆ.
ಈ ಪುಸ್ತಕವನ್ನು ಓದಲು ಕ್ಲಿಕ್ ಮಾಡಿ. Click
47) ವಿಷವಾದಳು ಅಮೃತಾ : ಒಂದು ಸೇಡಿನ ಪ್ರೇಮಕಥೆ – Revenge Love Story in Kannada
“ವಿಷವಾದಳು ಅಮ್ರತಾ” ಇದೊಂದು ನಗುವ ಹುಡುಗಿಯ ಸೇಡಿನ ಕಥೆಯಾಗಿದೆ. ಮೈಮನಸ್ಸಿನಿಂದ ಮೈಲಿಗೆಯಾದ ಅಮೃತಾ ಚರ್ಚಾಸ್ಪರ್ಧೆಯಲ್ಲಿ ತನ್ನನ್ನು ಸೋಲಿಸಿದ ರಾಜನ ಮೇಲೆ ಸೇಡು ತೀರಿಸಿಕೊಳ್ಳಲು ಅವನೊಂದಿಗೆ ಪ್ರೀತಿನಾಟಕವಾಡುತ್ತಾಳೆ, ಅವನ ಗುರಿ ತಪ್ಪಿಸುತ್ತಾಳೆ, ಅವನ ಕನಸುಗಳಿಗೆ ಬೆಂಕಿ ಹಚ್ಚಿ ಅವನ ಕಣ್ಣೀರಿನ ಈಜುಕೊಳದಲ್ಲಿ ಈಜಿ ಖುಷಿಪಡುತ್ತಾಳೆ. ಪ್ರೇಮದೇವತೆಯ ಮುಖವಾಡ ಧರಿಸಿ ಅಮೃತಾ ರಾಜನಿಗೆ ವಿಷವಾಗುತ್ತಾಳೆ. ಅವಳ ಸಂಚು ಮತ್ತು ಸೇಡಿನ ವಿಷದಿಂದ ಬದುಕುಳಿದು ರಾಜ ಹೇಗೆ ಜೀವನದಲ್ಲಿ ಯಶಸ್ವಿಯಾಗುತ್ತಾನೆ, ಅಮೃತಾ ತಾನು ಮಾಡಿದ ಕೆಟ್ಟ ಕೆಲಸಗಳಿಂದ ಹೇಗೆ ಬೀದಿಪಾಲಾಗುತ್ತಾಳೆ ಎಂಬುದನ್ನು ಈ ಕಥೆ ಕಣ್ಣಿಗೆ ಕಟ್ಟಿ ಕೊಡುತ್ತದೆ. ಪ್ರೀತಿಯಲ್ಲಿ ಮೋಸ ಮಾಡುವ ಮತ್ತು ಮೋಸ ಹೋಗುವ ಹುಡುಗ ಹುಡುಗಿಯರಿಗೆ ಈ ಕಥೆ ಒಂದು ಪಾಠವಾಗಿದೆ…
ಈ ಪುಸ್ತಕವನ್ನು ಓದಲು ಕ್ಲಿಕ್ ಮಾಡಿ. Click
48) ದಾರಿ ತಪ್ಪಿದ ಹುಡುಗಿ : ಒಂದು ಕಣ್ಣೀರ ಪ್ರೇಮಕಹಾನಿ – Kannada Sad Love Story
“ದಾರಿ ತಪ್ಪಿದ ಹುಡುಗಿ” ಇದು ಹಳ್ಳಿಯ ಮುಗ್ದ ಹುಡುಗಿಯೊಬ್ಬಳ ಕಣ್ಣೀರ ಪ್ರೇಮಕಥೆಯಾಗಿದೆ. ಒಂದು ಹಿಂದುಳಿದ ಹಳ್ಳಿಯ ಸುಂದರ ಹುಡುಗಿಯೊಬ್ಬಳು ಒಬ್ಬ ಹುಡುಗನನ್ನು ಪ್ರೀತಿಸುತ್ತಿರುತ್ತಾಳೆ. ಆದರೆ ಒಂದಿನ ಅವಳನ್ನು ಅವಳ ಗ್ರಾಮಸ್ಥರು ಅವಳ ಪ್ರಿಯಕರನೊಂದಿಗೆ ಹಿಡಿಯುತ್ತಾರೆ. ನಂತರ ಅವಳನ್ನು ಮತ್ತು ಅವಳ ಪ್ರಿಯಕರನನ್ನು ಬಹಳಷ್ಟು ಹೊಡೆಯುತ್ತಾರೆ. ಬೇರೆ ಬೇರೆ ಜಾತಿ ಎಂಬ ಕಾರಣಕ್ಕೆ ಅವರಿಬ್ಬರನ್ನು ಬೇರ್ಪಡಿಸುತ್ತಾರೆ. ನಂತರ ಆ ಹುಡುಗಿಯನ್ನು ಹೆಚ್ಚಿನ ಓದಿಗೆ ಪಟ್ಟಣಕ್ಕೆ ಕಳಿಸುತ್ತಾರೆ. ಆದರೆ ಅಲ್ಲಿ ಅವಳು ವಿದ್ಯಾಭ್ಯಾಸವನ್ನು ಬಿಟ್ಟು ಒಬ್ಬ ಶ್ರೀಮಂತ ಹುಡುಗನನ್ನು ಪ್ರೀತಿಸುತ್ತಾಳೆ. ಆತ ಅವಳನ್ನು ದೈಹಿಕವಾಗಿ ಬಳಸಿಕೊಂಡು ಬಿಟ್ಟು ಬಿಡುತ್ತಾನೆ. ಅಷ್ಟರಲ್ಲಿ ಅವಳ ಮನೆಯವರು ಅವಳ ಮದುವೆಯ ಸಿದ್ಧತೆಗಳನ್ನು ಮಾಡುತ್ತಾರೆ. ಆಕೆ ಮದುವೆಗೆ ಒಪ್ಪಿ ಮದುವೆಯಾಗುತ್ತಾಳೆ. ಆದರೆ ಮದುವೆಯಾಗಿ ಮೊದಲ ರಾತ್ರಿಯಾದ ನಂತರ ಅವಳ ಪತಿ ಅವಳನ್ನು ಮನೆಯಿಂದ ಓಡಿಸುತ್ತಾನೆ. ಆತ ಯಾಕೆ ಹೀಗೆ ಮಾಡುತ್ತಾನೆ? ಮುಂದೆ ಆ ದಾರಿ ತಪ್ಪಿದ ಹುಡುಗಿ ಏನಾಗುತ್ತಾಳೆ? ಎಂಬುದನ್ನು ತಿಳಿಯಲು ಈ ಸಣ್ಣ ಕಥೆಯನ್ನು ಒಮ್ಮೆ ಓದಿ.
ಈ ಪುಸ್ತಕವನ್ನು ಓದಲು ಕ್ಲಿಕ್ ಮಾಡಿ. Click
ದಾರಿ ತಪ್ಪಿದ ಹುಡುಗಿ : ಒಂದು ಕಣ್ಣೀರ ಪ್ರೇಮಕಹಾನಿ – Kannada Sad Love Story
49) ಒಂದು ದುರಂತ ಪ್ರೇಮಕಥೆ – Kannada Tragic Love Story
ಪಶ್ಚಿಮ ಘಟ್ಟಗಳ ಮಡಿಲಲ್ಲಿ ಶಿವಾಪುರ ಎಂಬ ಸುಂದರ ಹಳ್ಳಿಯಿರುತ್ತದೆ. ಆ ಹಳ್ಳಿಯ ಪೊಲೀಸ್ ಠಾಣೆಗೆ ರುದ್ರ ಎಂಬ ಪೋಲಿ ಸಬ್ ಇನ್ಸಪೇಕ್ಟರ್ ಇರುತ್ತಾನೆ. ಅವನ ಕೆಟ್ಟ ಕಣ್ಣು ಅದೇ ಊರಿನ ಸುಮಾಳ ಮೇಲೆ ಬೀಳುತ್ತದೆ. ರುದ್ರ ಅವಳಿಗೆ ತೊಂದರೆ ಕೊಡುತ್ತಾನೆ. ಅಲ್ಲದೇ ಆತ ಅವಳ ತಂದೆತಾಯಿಗಳ ಸಾವಿಗೆ ಕಾರಣನಾಗುತ್ತಾನೆ. ಆಗ ಸುಮಾ ರುದ್ರನನ್ನು ಚಾಕುವಿನಿಂದ ಇರಿದು ಸಾಯಿಸುತ್ತಾಳೆ. ಅವಳನ್ನು ಪಕ್ಕದ ಊರಿನ ಶಿವ ಎಂಬ ರೌಡಿ ಕಾಪಾಡುತ್ತಾನೆ ಮತ್ತು ಅವಳ ಬದಲಾಗಿ ಜೈಲಿಗೆ ಹೋಗುತ್ತಾನೆ. ಆತ ಹೊರಬಂದ ನಂತರ ಸುಮಾ ಶಿವನನ್ನು ಮದುವೆಯಾಗಿ ಹೊಸ ಜೀವನ ಪ್ರಾರಂಭಿಸುತ್ತಾಳೆ. ಆದರೆ ರುದ್ರನ ಆತ್ಮ ಪ್ರೇತಾತ್ಮವಾಗಿ ಅವಳ ಮನೆಗೆ ಕಾಲಿಡುತ್ತದೆ. ಮುಂದೇನಾಗುತ್ತೆ ಎಂಬುದನ್ನು ಕಥೆಯಲ್ಲಿ ಓದಿ.
ಈ ಪುಸ್ತಕವನ್ನು ಓದಲು ಕ್ಲಿಕ್ ಮಾಡಿ. Click
50) ಸುಂದರಿಯ ಗರ್ವಭಂಗ : Success Story of a Love Failured Boy – Kannada Inspirational Story
“ಸುಂದರಿಯ ಗರ್ವಭಂಗ” ಇದು ಮನಸ್ಸು ಮುರಿದ ಪ್ರೇಮಿಗಳಿಗೆ ಬೆಸ್ಟ್ ಮೋಟಿವೇಶನಲ್ ಕಥೆಯಾಗಿದೆ. ಪ್ರೇಮ ವೈಫಲ್ಯದಿಂದಾಗಿ ಜೀವನದಲ್ಲಿ ಹೀನಾಯವಾಗಿ ಸೋತ ಕುಮಾರ ಎಂಬ ಹುಡುಗನ ಯಶಸ್ಸಿನ ಕಥೆ ಇದು. ಕಾರು, ದೊಡ್ಡ ಮನೆ ಮತ್ತು ಬ್ಯಾಂಕ್ ಬ್ಯಾಲೆನ್ಸ್ ಹೊಂದಿರುವ ಶ್ರೀಮಂತ ಸರ್ಕಾರಿ ನೌಕರನನ್ನು ಮದುವೆಯಾಗಲು ಅವನ ಪ್ರೇಯಸಿ ಸುಂದರಿ ಅವನನ್ನು ಬಿಡುತ್ತಾಳೆ. ಅವನ ಬಡತನದಿಂದಾಗಿ ಅವಳು ಅವನನ್ನು ತಿರಸ್ಕರಿಸುತ್ತಾಳೆ. ಅದಕ್ಕಾಗಿ ಕುಮಾರ ತನ್ನ ಸಕ್ಸೆಸ ಮತ್ತು ಶ್ರೀಮಂತಿಕೆಯಿಂದ ಅವಳ ಮೇಲೆ ಸೇಡು ತೀರಿಸಿಕೊಳ್ಳಲು ಹಠಮಾರಿಯಾಗುತ್ತಾನೆ. ಅವನು ಅವಳ ಮೇಲೆ ಹೇಗೆ ಸೇಡು ತೀರಿಸಿಕೊಳ್ಳುತ್ತಾನೆ? ಮದುವೆಯ ನಂತರ ಸುಂದರಿಯ ಜೀವನದಲ್ಲಿ ಏನಾಗುತ್ತದೆ? ಎಂಬುದೇ ಈ ಕಥೆಯ ಜೀವವಾಗಿದೆ. ಪ್ರೀತಿಯಲ್ಲಿ ಮನಸ್ಸು ಮುರಿದುಕೊಂಡ ಎಲ್ಲ ಹುಡುಗ ಹುಡುಗಿಯರು ಓದಲೇಬೇಕಾದ ಬೆಸ್ಟ್ ಕಥೆಯಿದು.
ಈ ಪುಸ್ತಕವನ್ನು ಓದಲು ಕ್ಲಿಕ್ ಮಾಡಿ. Click
51) ಬುದ್ಧಿವಂತ ಪತ್ನಿ – One Husband Wife Love Story
“ಬುದ್ಧಿವಂತ ಪತ್ನಿ” ಇದು ಹೊಸದಾಗಿ ಮದುವೆಯಾದ ರಾಣಿ ಎಂಬ ಸುಂದರ ಪತ್ನಿಯ ಸುಂದರ ಸಣ್ಣ ಕಥೆಯಾಗಿದೆ. ಆಕೆ ರವಿ ಎಂಬ ಮಿಡಲ್ ಕ್ಲಾಸ್ ಇಂಜಿನಿಯರನನ್ನು ಮದುವೆಯಾಗಿರುತ್ತಾಳೆ. ಆದರೆ ಮದುವೆಯಾದ ಕೆಲವು ತಿಂಗಳುಗಳ ನಂತರ ರವಿ ಕೆಟ್ಟ ಸ್ನೇಹಿತರ ಸಹವಾಸ ದೋಷದಿಂದ ಮದ್ಯ ಮಾದಕ ವಸ್ತುಗಳ ದಾಸನಾಗುತ್ತಾನೆ ಮತ್ತು ತನ್ನ ಪತ್ನಿ ರಾಣಿಯನ್ನು ಕಾಡಲು ಪ್ರಾರಂಭಿಸುತ್ತಾನೆ. ಅವನನ್ನು ಹತೋಟಿಯಲ್ಲಿಡಲು ರಾಣಿ ಅವನೊಂದಿಗೆ ಹಾಸಿಗೆಯನ್ನು ಹಂಚಿಕೊಳ್ಳುವುದನ್ನು ನಿಲ್ಲಿಸುತ್ತಾಳೆ. ಆದರೆ ಆತ ಅವಳ ಬೆಡ್ರೂಮ್ ಬ್ರಹ್ಮಾಸ್ತ್ರಕ್ಕೆ ಬಗ್ಗುವುದಿಲ್ಲ. ಆಗ ಬುದ್ಧಿವಂತ ಪತ್ನಿ ರಾಣಿ ಒಂದು ಖತರ್ನಾಕ ಉಪಾಯ ಮಾಡಿ ತನ್ನ ಗಂಡನ ಚಟವನ್ನು ಬಿಡಿಸುತ್ತಾಳೆ. ಅವಳ ಖತರ್ನಾಕ ಉಪಾಯ, ಪ್ರೀತಿ ಮತ್ತು ಪ್ರಣಯದ ಕಥೆಯ ಮಜಾ ಅನುಭವಿಸಲು ಈ ಪುಸ್ತಕವನ್ನು ಓದಿ.
ಈ ಪುಸ್ತಕವನ್ನು ಓದಲು ಕ್ಲಿಕ್ ಮಾಡಿ. Click
52) True ಗರ್ಲಫ್ರೆಂಡ್ – One Friendship love story in Kannada
“True ಗರ್ಲಫ್ರೆಂಡ್” ಇದು ಹದಿಹರೆಯದ ಹುಡುಗ ಹುಡುಗಿಯರ ಕಣ್ಣು ತೆರೆಸುವ ಕಥೆಯಾಗಿದೆ. ಫೇಸ್ಬುಕ್ ಸ್ನೇಹವೇ ನಿಜವಾದ ಸ್ನೇಹವೆಂದು ಹೆಚ್ಚಿನ ಜನ ನಂಬಿದ್ದಾರೆ. ಆದರೆ ಅದು ನಿಜವಾದ ಸ್ನೇಹವಲ್ಲ. ನಕಲಿ ಫೇಸ್‌ಬುಕ್ ಸ್ನೇಹಿತರಿಗಿಂತ ಲೈಫ್‌ಬುಕ್ ಸ್ನೇಹಿತರು ಮುಖ್ಯ ಎಂದು ಈ ಕಥೆ ಸಾಬೀತುಪಡಿಸುತ್ತದೆ. ಫೇಸ್‌ಬುಕ್ ಮತ್ತು ಮೊಬೈಲ್ ಸ್ನೇಹಿತರು ನಿಜವಾದ ಸ್ನೇಹಿತರಾಗಿದ್ದಾರೆ ಹಾಗೂ ಅವರು ನಮ್ಮ ಸಂಕಷ್ಟದ ಸಮಯದಲ್ಲಿ ನಮಗೆ ಸಹಾಯ ಮಾಡಲು ಬರುತ್ತಾರೆ ಎಂದು ನಂಬಿದ್ದ ಇಬ್ಬರು ಒಡಹುಟ್ಟಿದವರ ಕಥೆ ಇದು. ಅವರು ಹೇಗೆ ನಕಲಿ ಸ್ನೇಹಿತರನ್ನು ಬಿಟ್ಟು ನಿಜವಾದ ಸ್ನೇಹಿತರನ್ನು ಕಂಡುಕೊಳ್ಳುತ್ತಾರೆ ಎಂಬುದು ಈ ಕಥೆಯ ಆತ್ಮವಾಗಿದೆ. ನಾನು ಈ ಕಥೆಯನ್ನು ಆರು ವರ್ಷಗಳ ಹಿಂದೆ ಬರೆದಿರುವೆ. ಆದರೆ ಇದು ಇಂದಿನ ಸಂದರ್ಭಗಳಿಗೆ ಹೆಚ್ಚು ಸೂಕ್ತವಾಗಿದೆ. ಫೇಸ್‌ಬುಕ್ ಸ್ನೇಹಿತರನ್ನು ನಿಜವಾದ ಸ್ನೇಹಿತರೆಂದು ನಂಬುವ, ಫೇಸ್‌ಬುಕ್‌ನಂತಹ ಸಾಮಾಜಿಕ ಮಾಧ್ಯಮಗಳಲ್ಲಿ ಹೆಚ್ಚಿನ ಸಮಯವನ್ನು ಕಳೆಯುವ ಜನರು ಈ ಸಣ್ಣ ಕಥೆಯನ್ನು ಒಮ್ಮೆ ಓದಬೇಕು.
ಈ ಪುಸ್ತಕವನ್ನು ಓದಲು ಕ್ಲಿಕ್ ಮಾಡಿ. Click
53) ಕಾದಿರುವೆ ನಿನಗಾಗಿ – One Dreamy Love Story of a Lonely lad in Kannada
“ಕಾದಿರುವೆ ನಿನಗಾಗಿ…” ಇದೊಂದು ಭಾರತದ ಒಂಟಿ ಹುಡುಗನ ಕನಸಿನ ಕನ್ಯೆಯ ಪ್ರೇಮಕಥೆ. ಯಾವುದೇ ಗರ್ಲಫ್ರೆಂಡಗಳಿಲ್ಲದ ಒಂಟಿ ಹುಡುಗ ಯಾವ ರೀತಿಯ ವ್ಯಥೆಯನ್ನು ಅನುಭವಿಸುತ್ತಾನೆ ಎಂಬುದರ ಮೇಲೆ ಈ ಕಥೆ ಬೆಳಕು ಚೆಲ್ಲುತ್ತದೆ. ಆ ಹುಡುಗನಿಗೆ ಕನಸ್ಸಲ್ಲೊಬ್ಬಳು ಅಪ್ಸರೆ ಸಿಗುತ್ತಾಳೆ. ಅವಳಿಗಾಗಿ ಆತ ಎಲ್ಲವನ್ನು ಮಾಡುತ್ತಾನೆ. ಆದರೆ ಆಕೆ ಅವನಿಂದ ದೂರಾಗುತ್ತಾಳೆ. ಅವನ ಕಾಯುವಿಕೆಯೊಂದಿಗೆ ಹೇಗೆ ಕಥೆ ಮುಗಿಯುತ್ತದೆ ಎಂಬುದಕ್ಕೆ ನೀವು ಪೂರ್ತಿ ಕಥೆಯನ್ನು ಓದಬೇಕು…
ಈ ಪುಸ್ತಕವನ್ನು ಓದಲು ಕ್ಲಿಕ್ ಮಾಡಿ. Click
54) ಪ್ರೇಯಸಿಯ ವಶೀಕರಣ : Mesmerism of Girlfriend – Kannada Thriller Crime story
“ಪ್ರೇಯಸಿಯ ವಶೀಕರಣ” ಇದೊಂದು ಕಾಲ್ಪನಿಕ ಕ್ರೈಂ ಥ್ರಿಲ್ಲರ್ ಕಥೆಯಾಗಿದೆ. ವಿಶಾಲ ಎಂಬ ಕೆಟ್ಟ ಹುಡುಗ ಲತಾ ಎಂಬ ಸುಂದರ ಹುಡುಗಿಯ ಸೌಂದರ್ಯದೆಡೆಗೆ ಆಕರ್ಷಿತನಾಗಿರುತ್ತಾನೆ. ಅವಳನ್ನು ಮೋಹಿಸಲು ಅವಳೊಂದಿಗೆ ಪ್ರೀತಿ ಪ್ರೇಮದ ನಾಟಕವನ್ನು ಆಡುತ್ತಾನೆ. ಆದರೆ ಅವಳು ಅವನನ್ನು ಮತ್ತು ಅವಳ ಹುಸಿ ಪ್ರೀತಿಯನ್ನು ನಿರಾಕರಿಸುತ್ತಾಳೆ. ಆಗ ವಿಶಾಲ ಒಬ್ಬ ಬಂಗಾಳಿ ಮಾಂತ್ರಿಕನ ಸಹಾಯದಿಂದ ಅವಳ ವಶೀಕರಣ ಮಾಡುತ್ತಾನೆ ಮತ್ತು ಅವಳನ್ನು ಅಪಹರಿಸಿಕೊಂಡು ಹೋಗುತ್ತಾನೆ. ಮುಂದೇನಾಗುತ್ತೆ ಎಂಬುದನ್ನು ತಿಳಿಯಲು ಈ ಪುಸ್ತಕವನ್ನು ಓದಿ…
ಈ ಪುಸ್ತಕವನ್ನು ಓದಲು ಕ್ಲಿಕ್ ಮಾಡಿ. Click
55) ಮೋಸಗಾರ ರಾಜ – The King Cheater – Kannada Sad Love Stories
“ಮೋಸಗಾರ ರಾಜ” ಇದು ರಾಜಕುಮಾರಿ ಅಮೃತಾ ಹಾಗೂ ಸಾಮಾನ್ಯ ಗುಮಾಸ್ತ ಅಗಸ್ತ್ಯನ ಕಾಲ್ಪನಿಕ ಪ್ರೇಮಕಥೆಯಾಗಿದೆ. ಅಮೃತಾಳ ತಂದೆ ಕ್ರೂರ ರಾಜ ಸುದರ್ಶನನೇ ಈ ಕಥೆಯ ಮೋಸಗಾರ ರಾಜ. ಅವನು ಕ್ರೂರ ರಾಜನಾಗಿದ್ದರೂ ತನ್ನ ಮಗಳನ್ನು ತುಂಬಾ ಪ್ರೀತಿಸುತ್ತಿದ್ದನು. ಆದರೆ ಕೊನೆಯಲ್ಲಿ ಆತ ಅಮೃತಾಳನ್ನು ಬರ್ಬರವಾಗಿ ಕೊಲ್ಲುತ್ತಾನೆ. ಆತ ಯಾಕೆ ಅವಳನ್ನು ಕೊಲ್ಲುತ್ತಾನೆ? ಹೇಗೆ ಕೊಲ್ಲುತ್ತಾನೆ? ಅಗಸ್ತ್ಯ ಏನಾಗುತ್ತಾನೆ? ಎಂಬುದೇ ಈ ಕಥೆಯ ಮುಖ್ಯ ಕಥಾವಸ್ತು. ಒಟ್ಟಿನಲ್ಲಿ ಇದು ಅಮೃತಾಳ ಪ್ರೀತಿ ಹಾಗೂ ಸುದರ್ಶನನ ದ್ವೇಷದ ರೋಚಕ ಕಥೆಯಾಗಿದೆ.
ಈ ಪುಸ್ತಕವನ್ನು ಓದಲು ಕ್ಲಿಕ್ ಮಾಡಿ. Click
56) ಪೊಲೀಸ್ ಲವ್ ಸ್ಟೋರಿ : Police Love Story – One Crime Story in Kannada
“ಪೊಲೀಸ್ ಲವ್ ಸ್ಟೋರಿ” ಇದು ಹಳ್ಳಿಯ ಅನಾಥ ಹುಡುಗಿಯೊಬ್ಬಳನ್ನು ಪ್ರೀತಿಸುವ ಪ್ರಾಮಾಣಿಕ ಪೊಲೀಸ್ ಅಧಿಕಾರಿಯ ಕಥೆಯಾಗಿದೆ. ವಾಸ್ತವವಾಗಿ ಇದು ಒಂದು ಕ್ರೈಂ ಸ್ಟೋರಿಯಾಗಿದೆ. ಇದರ ಪೋಸ್ಟರ್ ನೋಡುವ ಮೂಲಕ ನೀವು ಅದನ್ನುಊಹಿಸಬಹುದು. ಪ್ರಸ್ತುತ ಭಾರತೀಯ ಸಮಾಜವು ಪ್ರಾಮಾಣಿಕ ಪೊಲೀಸ್ ಅಧಿಕಾರಿಗಳಿಗೆ ಮತ್ತು ಮುಗ್ಧ ನಾಗರಿಕರಿಗೆ, ವಿಶೇಷವಾಗಿ ಮಹಿಳೆಯರಿಗೆ ಸುರಕ್ಷಿತವಲ್ಲ ಎಂಬುದನ್ನು ಈ ಕಥೆ ಸಾಬೀತುಪಡಿಸುತ್ತದೆ.
ಈ ಪುಸ್ತಕವನ್ನು ಓದಲು ಕ್ಲಿಕ್ ಮಾಡಿ. Click
57) ಮಡದಿಯ ಪ್ರೇಮ ಪಾಠ – Life Lesson of Wife – One Romantic Love Story in Kannada
“ಮಡದಿಯ ಪ್ರೇಮ ಪಾಠ” ಇದು ಹೊಸದಾಗಿ ಮದುವೆಯಾದ ಗಂಡ ಮತ್ತು ಹೆಂಡತಿಯರ ನಡುವೆ ನಡೆದ ಒಂದು ರೋಮ್ಯಾಂಟಿಕ್ ಪ್ರೇಮಕಥೆಯಾಗಿದೆ. ಜೀವನದಲ್ಲಿ ಯಾವುದೇ ದೊಡ್ಡ ಗುರಿಗಳನ್ನು ಹೊಂದಿರದ ಗಂಡ ಹಾಗೂ ಐಎಎಸ್ ಅಧಿಕಾರಿಯಾಗಲು ಬಯಸುವ ಹೆಂಡತಿಯ ಕಥೆ ಇದಾಗಿದೆ. ಒಂದು ಕಡೆ ಗಂಡ ಅವಳನ್ನು ದೈಹಿಕ ಸುಖಕ್ಕಾಗಿ ಬಲವಂತವಾಗಿ ಬಳಸಿಕೊಳ್ಳಲು ಮುಂದಾಗುತ್ತಾನೆ. ಮತ್ತೊಂದು ಕಡೆ ಅವನ ತಾಯಿ ಉದ್ದೇಶಪೂರ್ವಕವಾಗಿ ಅವನ ಹೆಂಡತಿಗೆ ಕಾಟ ಕೊಟ್ಟು ಹಿಂಸಿಸುತ್ತಾಳೆ. ಕಥೆ ಈ ರೀತಿ ಮುಂದುವರಿಯುತ್ತದೆ. ಕೊನೆಗೆ ಆ ಸೃಜನಶೀಲ ಹೆಂಡತಿಯ ಪ್ರೇಮಪಾಠದೊಂದಿಗೆ ಗಂಡನ ಮುಚ್ಚಿದ ಕಣ್ಣುಗಳು ತೆರೆಯುತ್ತವೆ, ಆತ ಬದಲಾಗುತ್ತಾನೆ. ಇಲ್ಲೊಂದು ರೋಚಕ ತಿರುವಿದೆ. ಅದನ್ನು ತಿಳಿಯಲು ಈ ಪುಸ್ತಕವನ್ನು ಓದಿ…
ಈ ಪುಸ್ತಕವನ್ನು ಓದಲು ಕ್ಲಿಕ್ ಮಾಡಿ. Click
58) ಒಂದು ಬಂಗಾರದ ಗುಲಾಬಿ – ಕಾಲೇಜ ಹುಡುಗಿಯ ಪ್ರೇಮಕಥೆ One Golden Rose – Love Story of Indian College Girl in Kannada
ರಶ್ಮಿ ಒಬ್ಬಳು ಭಾರತೀಯ ಕಾಲೇಜು ಹುಡುಗಿ. ಅವಳೇ ಕಾಲೇಜ ಟಾಪರ್. ಅವಳು ಕಾಲೇಜ್ ಟಾಪರ್ ಆಗಿದ್ದರೂ ಸಹ ಆಕೆ ಬಹು ಸುಂದರವಾಗಿದ್ದಳು. ಅವಳಂದಕ್ಕೆ ಜೊಲ್ಲು ಸುರಿಸಿ ನಾಲ್ಕಾರು ಶ್ರೀಮಂತ ಹುಡುಗರು ಅವಳ ಹಿಂದೆ ಸುತ್ತುತ್ತಿರುತ್ತಾರೆ. ಅವರಲ್ಲೊಬ್ಬ ಅವಳಿಗೆ ಬಂಗಾರದ ಗುಲಾಬಿಯನ್ನು ಗಿಫ್ಟಾಗಿ ಕೊಡುತ್ತಾನೆ. ಅವಳನ್ನು ಸೂರ್ಯ ಎಂಬ ಬಡ ಹುಡುಗ ಸಹ ಪ್ರೀತಿಸುತ್ತಿರುತ್ತಾನೆ. ರಶ್ಮಿ ಯಾರ ಪ್ರೀತಿಯನ್ನು ಒಪ್ಪಿಕೊಳ್ಳುತ್ತಾಳೆ ? ಮುಂದೆ ಏನು ಮಾಡುತ್ತಾಳೆ? ಎಂಬೆಲ್ಲ ಪ್ರಶ್ನೆಗಳಿಗೆ ಉತ್ತರವೇ “ಒಂದು ಬಂಗಾರದ ಗುಲಾಬಿ” ಎಂಬ ಪ್ರೇಮಕಥೆ…
ಈ ಪುಸ್ತಕವನ್ನು ಓದಲು ಕ್ಲಿಕ್ ಮಾಡಿ. Click
59) 5 ಕಾಲೇಜ ಪ್ರೇಮ ಕಥೆಗಳು – ಸಣ್ಣ ಪ್ರೇಮ ಕಥೆಗಳ ಸಂಗ್ರಹ College Love Stories – Collection Small Love Stories
“5 ಕಾಲೇಜ ಪ್ರೇಮ ಕಥೆಗಳು” ಇದು ನನ್ನ ಕಾಲೇಜ್ ಜೇವನದಲ್ಲಿ ಸಂಭವಿಸಿದ ಸಣ್ಣ ಪ್ರೇಮಕಥೆಗಳ ಸಂಗ್ರಹವಾಗಿದೆ. ಪ್ರತಿಯೊಬ್ಬರೂ ಈ ಕಥೆಗಳೊಂದಿಗೆ ತಮ್ಮನ್ನು ತಾವು ರಿಲೇಟ್ ಮಾಡಿಕೊಳ್ಳಬಹುದು. ಈ ಪುಸ್ತಕವು 5 ಸಣ್ಣ ಪ್ರೇಮ ಕಥೆಗಳನ್ನು ಒಳಗೊಂಡಿದೆ ;
1) ಆಕರ್ಷಣೆಯ ಪ್ರೀತಿ – One Friendship Story
2) ರಾಣಿ ಮಹಲ್ – One Cute Love Story
3) ವೈದ್ಯರ ಧರ್ಮ ಸಂಕಟ – One Love Story with Death
4) ಹೇಳದೆ ಉಳಿದ ಪ್ರೀತಿ – Story of Unexpressed Love
5) ಸಂದೀಪನ ಸಂದೇಹ – Love Story of Doubtful Boy
ಈ ಪುಸ್ತಕವನ್ನು ಓದಲು ಕ್ಲಿಕ್ ಮಾಡಿ. Click
ಈ ಪುಸ್ತಕ ಈ-ಬುಕ್ (eBook) ಫಾರ್ಮಾಟನಲ್ಲಿದೆ. ನೀವು ಈ ಪುಸ್ತಕವನ್ನು ಪರಚೇಸ್ ಮಾಡಿ ನಿಮ್ಮ ಮೊಬೈಲ್, ಲ್ಯಾಪಟಾಪ, ಕಂಪ್ಯೂಟರ್, ಟ್ಯಾಬ್ಲೆಟ್ ಯಾವುದರಲ್ಲಿ ಬೇಕಾದರೂ ಓದಬಹುದು. ಈ ಬುಕಗೆ ಲೈಫಟೈಮ ವ್ಯಾಲಿಡಿಟಿಯಿದೆ. ನೀವು ಒಮ್ಮೆ ಖರೀದಿಸಿ ಜೀವನಪೂರ್ತಿ ಈ ಪುಸ್ತಕವನ್ನು ಪದೇಪದೇ ಓದಬಹುದು.
ಈ ಅಂಕಣ (Article) ನಿಮಗೆ ಇಷ್ಟವಾಗಿದ್ದರೆ ನಿಮ್ಮೆಲ್ಲ ಗೆಳೆಯರೊಡನೆ ಮತ್ತು ನೀವಿರುವ ಎಲ್ಲ ಕನ್ನಡ ಫೇಸ್ಬುಕ್ ಗ್ರೂಪಗಳಲ್ಲಿ ಇದನ್ನು ತಪ್ಪದೇ ಶೇರ್ (Share) ಮಾಡಿ. ಜೊತೆಗೆ ಪ್ರತಿದಿನ ಹೊಸಹೊಸ ಅಂಕಣಗಳನ್ನು, ಪ್ರೇಮಕಥೆಗಳನ್ನು, ಕವನಗಳನ್ನು ಉಚಿತವಾಗಿ ಓದಲು ತಪ್ಪದೆ ನನ್ನ ಫೇಸ್ಬುಕ್ ಪೇಜನ್ನು https://www.facebook.com/Directorsatishkumar/ (Director Satishkumar) ಲೈಕ್ ಮಾಡಿ.
Follow Me On : Facebook | Instagram | YouTube | Twitter
My Books : Kannada Books | Hindi Books | English Books
⚠ STRICT WARNING ⚠Content Rights :
ಈ ಅಂಕಣದ ಎಲ್ಲ ಹಕ್ಕುಗಳನ್ನು ಡೈರೆಕ್ಟರ್ ಸತೀಶಕುಮಾರ ಹಾಗೂ ರೋರಿಂಗ್ ಕ್ರಿಯೇಷನ್ಸ್ ಪ್ರೈವೇಟ್ ಲಿಮಿಟೆಡ್ ಕಂಪನಿ ವತಿಯಿಂದ ಸಂಪೂರ್ಣವಾಗಿ ಕಾಯ್ದಿರಿಸಲಾಗಿದೆ. ಡೈರೆಕ್ಟರ್ ಸತೀಶಕುಮಾರ ಅವರ ಅನುಮತಿಯಿಲ್ಲದೆ ಈ ಅಂಕಣದ ಯಾವುದೇ ಭಾಗವನ್ನು ಕಾಪಿ ಮಾಡುವಂತಿಲ್ಲ, ಬೇರೆ ಭಾಷೆಗಳಿಗೆ ಅನುವಾದಿಸುವಂತಿಲ್ಲ ಮತ್ತು ಇದನ್ನು ಬೇರೆಡೆಗೆ ಪ್ರಕಟಿಸುವಂತಿಲ್ಲ. ಯಾವುದೇ ಸಾಮಾಜಿಕ ಜಾಲತಾಣಗಳಲ್ಲಿ ಪೋಸ್ಟ್ ಮಾಡುವಂತಿಲ್ಲ. ಮುದ್ರಣ ಮಾಡುವಂತಿಲ್ಲ. ಒಂದು ವೇಳೆ ಯಾರಾದರೂ ಕಾಪಿ ರೈಟ್ಸ್ ನಿಯಮಗಳನ್ನು ಉಲ್ಲಂಘಿಸಿದರೆ ಅವರ ಮೇಲೆ ಸೂಕ್ತ ಕಾನೂನು ಕ್ರಮ ಕೈಗೊಳ್ಳಲಾಗುವುದು ಹಾಗೂ ಆಗಿರುವ ನಷ್ಟವನ್ನು ಅವರಿಂದಲೇ ವಸೂಲಿ ಮಾಡಲಾಗುವುದು.
All Rights of this article are fully reserved by Director Satishkumar and Roaring Creations Private Limited India. No part of this article can be copied, translated or re published anywhere without the written permission of Director Satishkumar. If such violation of copy rights found to us, then we legally punish to copy cats and recover our loss by them only.
© Director Satishkumar and Roaring Creations Private Limited, India.