ಬಿಜನೆಸ್ ಲೆಸನ್ – 01
ಹಾಯ್ ಗೆಳೆಯರೇ, ನಮಸ್ಕಾರ. ನಾನು ನಿಮ್ಮ ಸತೀಶಕುಮಾರ. ಬಿಜನೆಸ್ ಲೆಸನ ಸೀರಿಜನ ಮೊದಲನೇ ಎಪಿಸೋಡಗೆ ನಿಮಗೆ ಸ್ವಾಗತ. ಇವತ್ತಿನ ಎಪಿಸೋಡನಲ್ಲಿ ನಾವು ಜಾಬ್ V/S ಬಿಜನೆಸ್ ಬಗ್ಗೆ ಡಿಸ್ಕಸ್ ಮಾಡೋಣಾ. ಎರಡರಲ್ಲಿ ಯಾವುದು ಬೆಸ್ಟಾಗಿದೆ? ಯಾವುದನ್ನು ಮಾಡಬೇಕು? ಎಂಬಿತ್ಯಾದಿ ವಿಷಯಗಳ ಬಗ್ಗೆ ಡಿಸ್ಕಸ್ ಮಾಡೋಣಾ.
ಜಾಬ್ ಮಾಡಬೇಕಾ ಅಥವಾ ಬಿಜನೆಸ್ ಸ್ಟಾರ್ಟ ಮಾಡಬೇಕಾ? ಎಂಬುದು ಕಾಲೇಜ ವಿದ್ಯಾರ್ಥಿಗಳ ಅತಿದೊಡ್ಡ ಕನಫ್ಯುಜನ್ ಆಗಿದೆ. ಬಹಳಷ್ಟು ಜನರಿಗೆ ಜಾಬ್ ಮತ್ತು ಬಿಜನೆಸ್ ಎರಡರ ಬಗ್ಗೆಯೂ ತಪ್ಪು ಕಲ್ಪನೆಗಳಿವೆ. ಅದಕ್ಕಾಗಿ ಜಾಬ್ ಮತ್ತು ಬಿಜನೆಸ್ ಎರಡನ್ನೂ ಕಂಪೇರ ಮಾಡಿ ಆ ತಪ್ಪು ನಂಬಿಕೆಗಳನ್ನು ಕ್ಲಿಯರ್ ಮಾಡಿಕೊಳ್ಳೊಣಾ.
–
ಜಾಬ್ V/S ಬಿಜನೆಸ್ – Job V/S Business
1) ರಿಸ್ಕ : ಜನರಲ್ಲಾಗಿ ಜಾಬನಲ್ಲಿ ಯಾವುದೇ ತರಹದ ರಿಸ್ಕಗಳಿಲ್ಲ. ಆದರೆ ಬಿಜನೆಸನಲ್ಲಿ ಎಲ್ಲ ತರಹದ ರಿಸ್ಕಗಳಿವೆ. ಸಾಕಷ್ಟು ಜವಾಬ್ದಾರಿಗಳಿರುತ್ತವೆ.
2) ಗ್ರೋಥ ರೇಷೋ : ಜಾಬನಲ್ಲಿ ಫಾಸ್ಟೆಸ್ಟ ಗ್ರೋಥಯಿಲ್ಲ. ಹೆಚ್ಚಿಗೆ ಕೆಲಸ ಮಾಡಿದರೆ ಹೆಚ್ಚಿಗೆ ಸಂಬಳ ಸಿಗಲ್ಲ. ಆದರೆ ಬಿಜನೆಸ್ಸಲ್ಲಿ ಫಾಸ್ಟೆಸ್ಟ ಗ್ರೋಥಯಿದೆ. ಹೆಚ್ಚಿಗೆ ಕೆಲಸ ಮಾಡಿದಷ್ಟು ಹೆಚ್ಚಿಗೆ ಹಣ ಹರಿದು ಬರುತ್ತದೆ. ಪ್ರತಿ ಸೆಕೆಂಡ್ ಪ್ರೊಡಕ್ಟಿವ್ ಆಗಿದೆ, ಪ್ರತಿ ಸೆಕೆಂಡ್ ಪ್ರೊಫಿಟೇಬಲ್ ಆಗಿದೆ.
3) ಜಾಬನಲ್ಲಿ ಒಂದು ಫಿಕ್ಸ್ಡ ವರ್ಕಿಂಗ್ ರೂಲನಂತೆ ಕೆಲಸ ಮಾಡಬೇಕಾಗುತ್ತದೆ. ಇಲ್ಲಿ ನಿಮ್ಮ ಪ್ಯಾಷನಗೆ ಅಥವಾ ಕಲೆಗೆ ಬೆಲೆ ಸಿಗೋದು ಅನುಮಾನವೇ. ಆದರೆ ಬಿಜನೆಸ್ಸಲ್ಲಿ ವರ್ಕಿಂಗ್ ರೂಲ್ ಟ್ರೆಂಡಗೆ ತಕ್ಕಂತೆ ಬದಲಾಗುತ್ತಿರುತ್ತದೆ. ಬಿಜನೆಸ್ಸಲ್ಲಿ ನಿಮ್ಮ ಟ್ಯಾಲೆಂಟಗೆ, ಕಲೆಗೆ ಹಾಗೂ ಪ್ಯಾಷನಗೆ ಬೆಲೆ ಸಿಕ್ಕೇ ಸಿಗುತ್ತದೆ.
4) ನೀವು ಜಾಬ್ ಮಾಡ್ತೀನಿ ಅಂದಾಗ ಮನೆಯಲ್ಲಿ, ಸೊಸೈಟಿಯಲ್ಲಿ ಎಲ್ಲರೂ ನಿಮ್ಮನ್ನು ಹಾಡಿ ಹೊಗಳುತ್ತಾರೆ ಹಾಗೂ ಬೆನ್ತಟ್ಟಿ ಸಪೋರ್ಟ್ ಮಾಡುತ್ತಾರೆ. ಆದರೆ ಅದೇ ನೀವು ಬಿಜನೆಸ್ ಸ್ಟಾರ್ಟ ಮಾಡ್ತೀನಿ ಅಂದ್ರೆ ಸಾಕು ಎಲ್ಲರೂ ನಿಮ್ಮನ್ನು ದುಷ್ಮನ ನೋಡಿದಂತೆ ನೋಡುತ್ತಾರೆ. ಏಕೆಂದರೆ ನಿಮ್ಮ ಏಳ್ಗೆಯನ್ನು ಅವರಿಂದ ಸುಲಭವಾಗಿ ಅರಗಿಸಿಕೊಳ್ಳಲು ಸಾಧ್ಯವಿಲ್ಲ. ಏಕೆಂದರೆ ಅವರು ಕಂಫರ್ಟ್ ಝೋನ್ನಲ್ಲಿ ಬಿದ್ದು ಕೊಳೆಯುತ್ತಿರುತ್ತಾರೆ.
5) ಜಾಬನಲ್ಲಿ ನಿಮಗೆ ಫ್ರಿಡಂ ಆಫ್ ವರ್ಕ ಲಿಮಿಟೆಡ್ ಆಗಿರುತ್ತದೆ. ನಿಮಗೆ ಡಿಸಿಜನ ತೆಗೆದುಕೊಳ್ಳುವ ಅಧಿಕಾರ ಲಿಮಿಟೆಡ್ ಆಗಿರುತ್ತದೆ. ಆದರೆ ಬಿಜನೆಸಲ್ಲಿ ನಿಮಗೆ ವರ್ಕ ಮಾಡಲು ಜಾಸ್ತಿ ಫ್ರಿಡಂ ಇರುತ್ತದೆ. ಡಿಸಿಜನ ತೆಗೆದುಕೊಳ್ಳುವ ಅಧಿಕಾರ ಸಂಪೂರ್ಣವಾಗಿ ನಿಮ್ಮ ಕೈಯಲ್ಲಿರುತ್ತದೆ.
6) ಜಾಬ್ ಒಂದು ಕಂಫರ್ಟ ಝೋನಾಗಿದೆ ಮತ್ತು ಜಾಸ್ತಿ ಸೆಕ್ಯುರಾಗಿದೆ. ಆದರೆ ಬಿಜನೆಸ್ಸಲ್ಲಿ ನಿಮಗೆ ಯಾವುದೇ ಕಂಫರ್ಟ ಝೋನ್ ಸಿಗುವುದಿಲ್ಲ ಹಾಗೂ ಬಿಜನೆಸ್ ಯಾವಾಗಲೂ ಇನಸೆಕ್ಯುರ ಆಗಿರುತ್ತದೆ.
7) ಹೆಚ್ಚಿನ ಸಂದರ್ಭಗಳಲ್ಲಿ ಜಾಬ್ ಪರ್ಮನೆಂಟಾಗಿರುತ್ತದೆ ಹಾಗೂ ಸ್ಟೇಬಲ್ ಆಗಿರುತ್ತದೆ. ಆದರೆ ಸರಿಯಾಗಿ ಕೆಲಸ ಮಾಡಿದರೆ ಬಿಜನೆಸ್ ಸ್ಟೇಬಲ ಆಗಬಹುದು, ಪರ್ಮನೆಂಟಾಗಲ್ಲ. ಹಾಗ ನೋಡಿದ್ರೆ ಜಾಬ್ ಮತ್ತು ಬಿಜನೆಸ್ ಎರಡೂ ಪರ್ಮನೆಂಟಲ್ಲ. ನಿಮ್ಮ ಜಾಬ್ ಯಾವಾಗ ಬೇಕಾದರೂ ಹೋಗಬಹುದು. ನಿಮ್ಮ ಬಿಜನೆಸ್ ಯಾವಾಗ ಬೇಕಾದರೂ ಮುಳುಗಬಹುದು.
8) ಜಾಬ್ ಸಿಂಗಲ್ ಸೌರ್ಸ ಆಫ್ ಇನಕಮ ಆಗಿದೆ. ಆ್ಯಕ್ಟಿವ್ ಇನಕಮ ಆಗಿದೆ. ಆದರೆ ಬಿಜನೆಸ್ ಮಲ್ಟಿಪಲ ಸೌರ್ಸ ಆಫ್ ಇನಕಮ್ ಆಗಿದೆ. ಪ್ಯಾಸಿವ್ ಇನಕಮ ಆಗಿದೆ.
9) ನೀವು ಜಾಬನಲ್ಲಿ ನ್ಯಾರೋ ಮೈಂಡೆಡ ಆಗಿದ್ದರೆ, ಮೈಗಳ್ಳತನ ಮಾಡಿದ್ರೆ ನಡೆಯಬಹುದು. ಆದರೆ ಬಿಜನೆಸ್ಸಲ್ಲಿ ನೀವು ಬ್ರಾಡ್ ಮೈಡೆಂಡ್ ಆಗಬೇಕಾಗುತ್ತದೆ. ಓಪನ್ ಮೈಡೆಂಡ್ ಆಗಬೇಕಾಗುತ್ತದೆ. ಮೈಗಳ್ಳತನ ಮಾಡಿದ್ರೆ ಬಿಜನೆಸ್ಸಲ್ಲಿ ನೀವು ಜಾಸ್ತಿ ದಿನ ಉಳಿಯಲ್ಲ. ಜಾಬನಲ್ಲಿ ನಿಮಗೆ ದೊಡ್ಡ ಕಮ್ಮಿಟಮೆಂಟ ಏನಿರಲ್ಲ. ಆದರೆ ಬಿಜನೆಸ್ಸಲ್ಲಿ ನಿಮಗೆ ಕಮ್ಮಿಟಮೆಂಟ ಹಾಗೂ ರಿಸ್ಪಾನ್ಸಿಬಿಲಿಟಿ ಎರಡೂ ಇರುತ್ತವೆ.
10) ಜಾಬ್ ಮಾಡಿದ್ರೆ ಖಂಡಿತವಾಗಿಯೂ ನಿಮ್ಮ ಲೈಫ್ ಸೂಪರಾಗಿರುತ್ತದೆ, ಬೆಟರ್ ಆಗಿರುತ್ತದೆ. ಇದರಲ್ಲಿ ಯಾವುದೇ ಅನುಮಾನವಿಲ್ಲ. ಆದರೆ ನಿಮಗೆ ರಾಯಲ್ ಲೈಫ ಬೇಕಂದ್ರೆ, ಸೆಲೆಬ್ರಿಟಿ ಲೈಫ ಬೇಕಂದ್ರೆ, ಹೋದಲೆಲ್ಲ ರಾಜ ಮರ್ಯಾದೆ ಇತ್ಯಾದಿಯೆಲ್ಲ ಬೇಕಂದ್ರೆ ನೀವು ಬಿಜನೆಸ್ ಫಿಲ್ಡಿಗೆ ಬರಬೇಕಾಗುತ್ತದೆ.
11) ಜಾಬ್ ಮಾಡಿಕೊಂಡು ಲೈಫ ಮಾಡ್ತೀನಿ ಅಂದರೆ ಸ್ವಲ್ಪ ಕಷ್ಟವಾಗುತ್ತದೆ. ಏಕೆಂದರೆ ಜೀವನಪೂರ್ತಿ ಬರೀ ಅಡ್ಜಸ್ಟಮೆಂಟ ಮತ್ತು ಲೋನನಲ್ಲೇ ಬದುಕಬೇಕಾಗುತ್ತದೆ. ಒಂದು ಕಂಟ್ರೋಲ್ಡ ಲೈಫ ನಿಮ್ಮದಾಗಿರುತ್ತದೆ. ಆದರೆ ಬಿಜನೆಸನಿಂದ ನಿಮಗೆ ಕೆಲವು ವರ್ಷಗಳ ನಂತರ ಫುಲ್ಲಿ ಫ್ರಿ ಲೈಫ ಸಿಗಬಹುದು. ಜಾಬನಲ್ಲಿ ಲೈಫಲಾಂಗ್ ಸ್ಟ್ರಗಲಯಿದೆ. ಆದರೆ ಬಿಜನೆಸನಲ್ಲಿ ಒಂದು ಹಂತದ ತನಕ ಮಾತ್ರ ಸ್ಟ್ರಗಲಿದೆ. ಅಂದರೆ ಇನಿಷಿಯಲ್ ಸ್ಟ್ರಗಲಿದೆ ಅಷ್ಟೇ.
12) ಜಾಬ್ 9-5 ಆಗಿದೆ. ಆದರೆ ಬಿಜನೆಸ್ 24*7 ಆಗಿದೆ. ನೋ ವಿಕೆಂಡ್ ಪಾರ್ಟಿ and ಆಲ್.
13) ಜಾಬಗಾಗಿ ನಿಮಗೆ ಹೆಚ್ಚಿನ ಸ್ಕೀಲಗಳ ಅವಶ್ಯಕತೆಯಿಲ್ಲ. ಆದರೆ ಬಿಜನೆಸ್ಸಲ್ಲಿ ನಿಮಗೆ ಹೆಚ್ಚಿನ ಸ್ಕೀಲಗಳು ಹಾಗೂ ಹೆಚ್ಚು ತಾಳ್ಮೆ ಬೇಕಾಗುತ್ತದೆ.
14) ನೀವು ಗವರ್ನಮೆಂಟ್ ಜಾಬ್ ಮಾಡುತ್ತಿದ್ದರೆ ನಿಮಗೆ ಬೇಗನೆ ಸುಂದರವಾಗಿರುವ ಹೆಂಡತಿ ಸಿಗುತ್ತಾಳೆ. ಆದರೆ ನೀವು ಬಿಜನೆಸ್ ಮಾಡುತ್ತಿದ್ದರೆ ನಿಮ್ಮ ಸಂಬಂಧಿಕರಲ್ಲೇ ನಿಮ್ಮನ್ನು ಮದುವೆಯಾಗಲು ಯಾರು ಮುಂದೆ ಬರುವುದಿಲ್ಲ. ಆದರೆ ನಿಮ್ಮ ಬಿಜನೆಸ್ ಬೂಮನಲ್ಲಿರುವಾಗ ಎಲ್ಲರು ನಿಮ್ಮನ್ನು ಮದುವೆಯಾಗಲು ಮುಂದೆ ಬರುತ್ತಾರೆ. ಆದ್ರೆ ಆಗ್ ನಿಮಗೆ ಮದುವೆಯಾಗುವ ಇಂಟರೆಸ್ಟ್ ಇರುವುದಿಲ್ಲ.
ಒಟ್ಟಾರೆಯಾಗಿ ಹೇಳಬೇಕೆಂದರೆ ಜಾಬ್ ಒಂಥರಾ ಸೇವಿಂಗ್ ಬ್ಯಾಂಕ್ ಅಕೌಂಟಯಿದ್ದಂಗೆ. ಅದರಲ್ಲಿ ಹೆಚ್ಚಿಗೆ ರಿಸ್ಕ ಇಲ್ಲ. ಹೆಚ್ಚಿಗೆ ಪ್ರೋಫಿಟ ಕೂಡ ಇಲ್ಲ. ಬಿಜನೆಸ್ ಒಂಥರಾ ಶೇರ್ ಮಾರ್ಕೆಟ್ ಇದ್ದಂಗೆ. ಇದರಲ್ಲಿ ಹೆಚ್ಚು ರಿಸ್ಕಿದೆ. ಜೊತೆಗೆ ಹೆಚ್ಚು ಪ್ರೋಫಿಟ ಕೂಡ ಇದೆ.
ಗೆಳೆಯರೇ, ಇವಿಷ್ಟು ಜಾಬಗೆ ಮತ್ತೆ ಬಿಜನೆಸಗೆ ಇರುವ ಪ್ರಮುಖ ವ್ಯತ್ಯಾಸಗಳು. ನನ್ನ ಪ್ರಕಾರ ಜಾಬ್ ಮತ್ತು ಬಿಜನೆಸ್ ಎರಡು ಬೆಸ್ಟ ಆಗಿವೆ. ನಿಮಗೆ ಯಾವುದು ಸರಿಯೆನಿಸುತ್ತೆ ಅದನ್ನು ಮಾಡಿ. ಏಕೆಂದರೆ ನಿಮ್ಮ ಲೈಫ ನಿಮ್ಮಿಷ್ಟ. ಜಾಬ್ ಮಾಡ್ತೀನಿ ಅನ್ನೋರು ಗೂಗಲ್ ಸಿಈಓ ಸುಂದರ ಪಿಚೈಯವರನ್ನು ರೋಲ್ ಮಾಡಲ್ ಆಗಿ ತೆಗೆದುಕೊಳ್ಳಬಹುದು. ಏಕೆಂದರೆ ಅವರ ಒಂದು ದಿನದ ಸ್ಯಾಲರಿ ಸರಾಸರಿ 3 ಕೋಟಿಯಿದೆ. ಬಿಜನೆಸ್ ಮಾಡ್ತೀನಿ ಅನ್ನೋರು ಎಲ್ಲರಿಂದ ಸ್ಪೂರ್ತಿಯನ್ನು ಪಡೆದುಕೊಳ್ಳಿ. ಆದರೆ ಯಾರನ್ನು ಬ್ಲೈಂಡ್ಲಿ ಫಾಲೋ ಮಾಡಬೇಡಿ. ನಿಮಗೆ ನೀವೇ ರೋಲ್ ಮಾಡೆಲ್ ಆಗಿ. ನಿಮ್ಮ ದಾರಿಯನ್ನು ನೀವೇ ನಿರ್ಮಿಸಿಕೊಂಡು ಮುನ್ನುಗ್ಗಿ.
ಒಂದು ವೇಳೆ ಜಾಬ್ ಮತ್ತು ಬಿಜನೆಸ್ ಎರಡರಲ್ಲಿ ನೀವು ಯಾವುದನ್ನು ರಿಕಮೆಂಡ ಮಾಡ್ತೀರಾ ಅಂತಾ ನನ್ನ ನೀವು ಕೇಳಿದ್ರೆ ನಾನು ಕಣ್ಮುಚ್ಚಿ ಬಿಜನೆಸನ್ನು ರೆಕಮೆಂಡ್ ಮಾಡುವೆ. ಯಾಕೆ ಅಂತಾ ನೆಕ್ಸ್ಟ ಎಪಿಸೋಡಲ್ಲಿ ಹೇಳುವೆ. ಅಲ್ಲಿ ತನಕ ಈ ಚಾನೆಲ್ಗೆ ಸಬಸ್ಕ್ರೈಬ ಮಾಡಿ, ಬೆಲ್ ಐಕಾನನ್ನು ಒತ್ತಿ ರೆಡಿಯಾಗಿರಿ. Thanks You..