ಬಿಜನೆಸ್ ಲೆಸನ್ -16
ಹಾಯ್ ಗೆಳೆಯರೇ, ನೀವೊಬ್ಬ ಬಿಜನೆಸಮ್ಯಾನ ಆಗಿದ್ದರೆ ನಿಮಗೆ ನಿಮ್ಮ ಬಿಜನೆಸ್ಸನ್ನು ಆನಲೈನಗೆ ತೆಗೆದುಕೊಂಡು ಹೋಗಬೇಕಾದ ಅವಶ್ಯಕತೆ ತುಂಬಾನೆ ಇದೆ. ಏಕೆಂದರೆ ಜಗತ್ತು ಡಿಜಿಟಲಿ ಅಪಡೇಟ ಆಗುತ್ತಿದೆ ಹಾಗೂ ಆನಲೈನ ಮೋಡಗೆ ಕನವರ್ಟ ಆಗುತ್ತಿದೆ. ಅದಕ್ಕಾಗಿ ನೀವು ನಿಮ್ಮ ಕಸ್ಟಮರಗಳನ್ನು ತಲುಪಲು ಆನಲೈನ ಪ್ರಜೆನ್ಸನ್ನು ಬಿಲ್ಡ ಮಾಡಲೇಬೇಕು. ಅಂದರೆ ನಿಮ್ಮ ಬಿಜನೆಸ್ಸನ್ನು ಆನಲೈನಗೆ ತೆಗೆದುಕೊಂಡು ಹೋಗಬೇಕು. ನಿಮ್ಮ ಕಸ್ಟಮರಗಳೆಲ್ಲ ಆನಲೈನನಲ್ಲಿರುವಾಗ ನೀವೇಕೆ ಆಫಲೈನನಲ್ಲಿರಬೇಕು? ಇದರಿಂದ ನಿಮಗೆ ತಾನೇ ನಷ್ಟ?
ನೀವು ನಿಮ್ಮ ಕಸ್ಟಮರ್ಸಗಳನ್ನು ಮೂರ್ಖರೆಂದು ತಿಳಿದಿದ್ದರೆ, ಅವರು ಮೂರ್ಖರಲ್ಲ ನೀವು ಮೂರ್ಖರೆಂಬುದನ್ನು ಅರ್ಥ ಮಾಡಿಕೊಳ್ಳಿ. ಏಕೆಂದರೆ ಕಸ್ಟಮರ ಈಗ ಪ್ರತಿದಿನ ಏವರೇಜಲಿ 5 ಗಂಟೆಗಳನ್ನು ಆನಲೈನನಲ್ಲಿ ಕಳೆಯುತ್ತಾನೆ. ಯಾವುದೇ ವಸ್ತುವನ್ನು ತೆಗೆದುಕೊಳ್ಳುವುದಕ್ಕಿಂತ ಅದರ ಬಗ್ಗೆ ಇಂಟರನೆಟ್ಟಲ್ಲಿ ರೀಸರ್ಚ ಮಾಡುತ್ತಾನೆ. ಆತ ಇಂಟರನೆಟ್ಟಲ್ಲಿ ಹುಡುಕಿದಾಗ ನಿಮ್ಮ ಪ್ರೋಡಕ್ಟ ಅಥವಾ ಸರ್ವಿಸ್ ಬಗ್ಗೆ ಅವನಿಗೆ ಯಾವುದೇ ಮಾಹಿತಿ ಕಾಣಿಸದಿದ್ದರೆ ಆತ ನಿಮ್ಮ ಪ್ರೊಡಕ್ಟನ್ನು ತೆಗೆದುಕೊಳ್ಳುವುದಿಲ್ಲ. ಏಕೆಂದರೆ ಅವನಿಗೆ ನಿಮ್ಮ ಮೇಲೆ ಭರವಸೆ ಮೂಡುವುದಿಲ್ಲ. ಹೀಗಾಗಿ ನಿಮ್ಮ ಬಿಜನೆಸ್ ಆಫಲೈನನಲ್ಲಿದ್ದರೂ ಲಾಸಗೆ ಹೋಗುತ್ತದೆ. ಅದಕ್ಕಾಗಿ ನೀವು ನಿಮ್ಮ ಬಿಜನೆಸ್ಸನ್ನು ಆನಲೈನಗೆ ಒಯ್ಯಲೆಬೇಕು. ನಿಮಗೆ ನಿಮ್ಮ ಬಿಜನೆಸ್ಸನ್ನು ದೊಡ್ಡ ಲೆವಲನಲ್ಲಿ ಗ್ರೋ ಮಾಡಿ ಹೆಚ್ಚು ಪ್ರೋಫಿಟನ್ನು ಗಳಿಸಬೇಕೆಂಬ ಆಸೆಯಿದ್ದರೆ ನೀವು ನಿಮ್ಮ ಬಿಜನೆಸ್ಸನ್ನು ಆನಲೈನ ಮಾಧ್ಯಮಕ್ಕೆ ತೆಗೆದುಕೊಂಡು ಹೋಗಲೇಬೇಕು. ಆನಲೈನನಲ್ಲಿ ನಿಮ್ಮ ಬಿಜನೆಸನ ಬ್ರ್ಯಾಂಡಿಂಗ್ ಮಾಡಲೇಬೇಕು. ಸೋ, ನಿಮ್ಮ ಬಿಜನೆಸ್ಸನ್ನು ಆನಲೈನಗೆ ತೆಗೆದುಕೊಂಡು ಹೋಗಲು ಬೆಸ್ಟ ಮೆಥಡ ಇಲ್ಲಿದೆ ;
ನೀವು ನಿಮ್ಮ ಬಿಜನೆಸ್ ಹೆಸರಲ್ಲಿ ಆನಲೈನ ಪ್ರಜೆನ್ಸನ್ನು ಬಿಲ್ಡ ಮಾಡುವುದರ ಮೂಲಕ ನಿಮ್ಮ ಬಿಜನೆಸ್ಸನ್ನು ಆನಲೈನಗೆ ತೆಗೆದುಕೊಂಡು ಹೋಗಬಹುದು. ನಿಮ್ಮ ಬಿಜನೆಸ್ ಹೆಸರಲ್ಲಿ ಒಂದು ಆಫೀಸಿಯಲ್ ವೆಬಸೈಟ ಹಾಗೂ ಸೋಸಿಯಲ್ ಮೀಡಿಯಾ ಪೇಜಗಳನ್ನೆಲ್ಲ ಕ್ರಿಯೆಟ ಮಾಡಿ ಅವುಗಳನ್ನೆಲ್ಲ ಇಂಟಿಗ್ರೆಟ ಮಾಡಿದರೆ ಸಾಕು ನಿಮ್ಮ ಬಿಜನೆಸ್ ಆನಲೈನನಲ್ಲಿ ಅಪಡೇಟ ಆದಂತೆ. ಇದನ್ನು 4 ಸ್ಟೆಪಗಳಲ್ಲಿ ಮಾಡಬಹುದು.
Step – 1 : Preparation
ನಿಮ್ಮ ಬಿಜನೆಸ್ಸನ್ನು ಆನಲೈನಗೆ ತೆಗೆದುಕೊಂಡು ಹೋಗುವ ಮುನ್ನ ನೀವು ಸ್ವಲ್ಪ ಪ್ರಿಪೇರ್ ಆಗಬೇಕು. ನಿಮ್ಮ ಬಿಜನೆಸ್ ಐಡಿಯಾಲಜಿ ಏನಿದೆ? ನೀವು ನಿಮ್ಮ ಕಸ್ಟಮರಗಳಿಗೆ ಯಾವ ಪ್ರೋಡಕ್ಟನ್ನು ಅಥವಾ ಸರ್ವಿಸನ್ನು ಕೊಡುವಿರಿ? ಮತ್ತು ಹೇಗೆ ಕೊಡುವಿರಿ? ಅದರ ಬೆಲೆಯೇನು? ಜೊತೆಗೆ ಯಾವುದಾದರೂ ಆಫರಗಳಿವೆಯಾ? ನಿಮ್ಮ ಬಿಜನೆಸನ ಸೇಲ್ಸ ಆ್ಯಂಡ್ ಮಾರ್ಕೆಟಿಂಗ್ ಸ್ಟ್ರ್ಯಾಟರ್ಜಿ ಏನು? ಅಡ್ವಟೈಜಿಂಗ್ ಸ್ಟ್ರ್ಯಾಟರ್ಜಿ ಏನು? ನಿಮ್ಮ ಬಿಜನೆಸ್ಸನ್ನು ಆನಲೈನನಲ್ಲಿ ಯಾವ ತರ ಪ್ರಜೆಂಟ ಮಾಡಿದ್ರೆ ನಿಮ್ಮ ಕಸ್ಟಮರಗಳಿಗೆ ಈಜಿಯಾಗಿ ಅರ್ಥವಾಗುತ್ತದೆ ಎಂಬಿತ್ಯಾದಿ ವಿಷಯಗಳ ಬಗ್ಗೆ ನೀವು ಫುಲ್ಲಿ ಕ್ಲಿಯರಾಗಿರಬೇಕು ಹಾಗೂ ಸರಿಯಾಗಿ ಪ್ರಿಪೇರ್ ಆಗಬೇಕು. ಅದನಂತರ ನಿಮ್ಮ ಅವಶ್ಯಕತೆಯನುಸಾರವಾಗಿ ನಿಮ್ಮ ಪ್ರೋಡಕ್ಟ ಅಥವಾ ಸರ್ವಿಸನ ಪ್ರೊಫೆಶನಲ ಫೋಟೋಶೂಟ ಹಾಗೂ ವಿಡಿಯೋಶೂಟನ್ನು ಮಾಡಿಸಬೇಕು. ಜಾಸ್ತಿ ಬಜೆಟ್ಟಿದ್ದರೆ ನೀವು ಆ್ಯಡಫಿಲ್ಮನ್ನು ಸಹ ಮಾಡಬಹುದು. ಅದಕ್ಕಾಗಿ ನೀವು ನಮ್ಮ ಕಂಪನಿಯನ್ನು ಹಾಯರ್ ಮಾಡಿ ನಾವು ಪ್ರೊಫೇಷನಲ Ad ಫಿಲ್ಮಗಳ ಜೊತೆಗೆ ನಿಮಗೆಲ್ಲವನ್ನು ಮಾಡಿ ಕೊಡುತ್ತೇವೆ. ಹೆಚ್ಚಿನ ಮಾಹಿತಿಗೆ www.Roaringcreations.com ವಿಸಿಟ್ ಮಾಡಿ.
Step 2 : Social Media Account Creation
ನಿಮ್ಮ ಬಿಜನೆಸನ ಇಮೇಜ್, ವಿಡಿಯೋಜ ಹಾಗೂ ಆ್ಯಡಫಿಲ್ಮಗಳು ರೆಡಿಯಾದ ತಕ್ಷಣ ನೀವು ಮಾಡಬೇಕಾದ ಕೆಲಸವೆಂದರೆ ಸೋಸಿಯಲ್ ಮೀಡಿಯಾ ಅಕೌಂಟ ಕ್ರಿಯೇಷನ್. ನೀವು ನಿಮ್ಮ ಬಿಜನೆಸನ ಹೆಸರಲ್ಲಿ ಎಲ್ಲ ಸೋಸಿಯಲ್ ಮೀಡಿಯಾಗಳಲ್ಲಿ ಒಂದು ಪ್ರೊಫೆಷನಲ್ ಅಕೌಂಟನ್ನು ಕ್ರಿಯೆಟ ಮಾಡಬೇಕು. ಅಂದರೆ ನಿಮ್ಮ ಬಿಜನೆಸ್ ಹೆಸರಲ್ಲಿ ಫೇಸ್ಬುಕ್ ಪೇಜ, ಇನಸ್ಟಾಗ್ರಾಮ, ಲಿಂಕ್ಡ ಇನ್, ಟ್ವಿಟರ್ ಅಕೌಂಟ ಹಾಗೂ ಯುಟ್ಯೂಬ ಚಾನೆಲನ್ನು ಕ್ರಿಯೆಟ ಮಾಡಬೇಕು. ನಂತರ ಆ ಅಕೌಂಟಗಳನ್ನೆಲ್ಲ ಸರಿಯಾಗಿ ಆಪ್ಟಿಮೈಜ ಮಾಡಬೇಕು. ನಿಮ್ಮ ಬಿಜನೆಸ್ ಹೆಸರು, ಬಿಜನೆಸ್ ಲೋಗೋ, ಟ್ರೆಡಮಾರ್ಕ, Contact Details, Email Id, Phone number ಇತ್ಯಾದಿಗಳನ್ನು ಸರಿಯಾಗಿ ಅಪಡೇಟ ಮಾಡಬೇಕು. ಜೊತೆಗೆ ನೀವು ರೆಡಿ ಮಾಡಿಕೊಂಡ ಇಮೇಜ, ವಿಡಿಯೋ ಹಾಗೂ ಆ್ಯಡಫಿಲ್ಮಗಳನ್ನು ಪೋಸ್ಟ ಮಾಡಬೇಕು.
Step – 3 : Development of Official Business Website
ನೀವು ನಿಮ್ಮ ಬಿಜನೆಸ್ ಹೆಸರಲ್ಲಿ ಎಲ್ಲ ಸೋಸಿಯಲ್ ಮೀಡಿಯಾ ಅಕೌಂಟಗಳನ್ನು ಕ್ರಿಯೆಟ ಮಾಡಿದ ನಂತರ ನೀವು ನಿಮ್ಮ ಬಿಜನೆಸ್ ಹೆಸರಲ್ಲಿ ಒಂದು ಆಫೀಸಿಯಲ್ ವೆಬಸೈಟನ್ನು ಕ್ರಿಯೆಟ ಮಾಡಬೇಕು. ನಿಮಗೆ ವೆಬ ಡಿಜೈನ ಬರ್ತಿದ್ರೆ ನೀವೇ ನಿಮ್ಮ ಬಿಜನೆಸ್ ವೆಬಸೈಟನ್ನು ಕ್ರಿಯೆಟ್ ಮಾಡಿ. ಬರದಿದ್ದರೆ ವೆಬ ಡಿನೈಜರಗಳನ್ನು ಹಾಯರ ಮಾಡಿ ಅವರು ನಿಮಗೆ ಕ್ರಿಯೆಟ ಮಾಡಿ ಕೊಡುತ್ತಾರೆ. ನಿಮಗೆ ಬೇರೆಯವರಿಂದ ನಿಮ್ಮ ವೆಬಸೈಟ ಡಿಜೈನ ಮಾಡಿಸಿಕೊಳ್ಳಲು ಇಷ್ಟವಿಲ್ಲದಿದ್ದರೆ ನೀವು ನಮ್ಮ ವೆಬ ಡಿಜೈನ ಕೋರ್ಸ್ಗೆ ಜಾಯಿನಾಗಿ 3 ತಿಂಗಳಲ್ಲಿ ವೆಬ ಡಿಜೈನನ್ನು ಸಂಪೂರ್ಣವಾಗಿ ಕಲಿಯಬಹುದು ಮತ್ತು ನಿಮ್ಮ ಬಿಜನೆಸ್ಸನ್ನು ಗ್ರೋ ಮಾಡಬಹುದು. ಇಂಟರೆಸ್ಟ್ ಇದ್ದವರು ವಿಡಿಯೋ ಡಿಸ್ಕ್ರಿಪ್ಷನನಲ್ಲಿರುವ ಫಾರ್ಮನ್ನು ಫಿಲ ಅಪ್ ಮಾಡಿ. ಓಕೆ, ನಿಮ್ಮ ಬಿಜನೆಸ್ ವೆಬಸೈಟ ಫುಲ್ಲಿ ಪ್ರೊಫೇಷನಲ್ ಆಗಿರಬೇಕು, ಫಾಸ್ಟ್ ಲೋಡಿಂಗ ಆಗಬೇಕು, ಅದರಲ್ಲಿ ನಿಮ್ಮ ಬಿಜನೆಸನ A to Z ಮಾಹಿತಿ ಇರಬೇಕು, ಆ ವೆಬಸೈಟ ಸೆಕ್ಯುರ ಆಗಿರಬೇಕು, ಅದರಲ್ಲಿ ಈಜಿ ನೇವಿಗೇಷನ ಇರಬೇಕು, ಸರಿಯಾದ Contact details, purchase option, booking cart ಇತ್ಯಾದಿಗಳೆಲ್ಲ ಕಸ್ಟಮರಗೆ ಈಜಿಯಾಗಿ ಅರ್ಥವಾಗಬೇಕು ಮತ್ತು ಈಜಿಯಾಗಿ ಸಿಗಬೇಕು. ಇಷ್ಟೆಲ್ಲ ಇದ್ರೆ ನಿಮ್ಮ ಬಿಜನೆಸ್ ವೆಬಸೈಟ ಪ್ರೊಫೆಷನಲ ಆಗಿದೆ ಎಂದರ್ಥ.
Step – 4 : Integration of Social Media Accounts and Official Website
ನಿಮ್ಮ ಬಿಜನೆಸ್ ಹೆಸರಲ್ಲಿ ಪ್ರೊಫೆಷನಲ್ ಸೋಸಿಯಲ್ ಮೀಡಿಯಾ ಪೇಜಗಳನ್ನು ಹಾಗೂ ಆಫೀಸಿಯಲ್ ವೆಬಸೈಟನ್ನು ಕ್ರಿಯೆಟ ಮಾಡಿದ ನಂತರ ನೀವು ಅವುಗಳನ್ನು ಇಂಟಿಗ್ರೇಟ್ ಮಾಡಬೇಕು. ಅಂದರೆ ಅವೆರಡನ್ನೂ ಕೂಡಿಸಬೇಕು. ನಿಮ್ಮ ವೆಬಸೈಟಗೆ ನಿಮ್ಮ ಸೋಸಿಯಲ್ ಮೀಡಿಯಾ ಪೇಜಗಳನ್ನು ಲಿಂಕ್ ಮಾಡಬೇಕು. ಜೊತೆಗೆ ಅವುಗಳ ಪಿಕ್ಸೆಲ್ಸ ಮತ್ತು ವಿಜಿಟರ್ ಟ್ರ್ಯಾಕಿಂಗ್ ಕೋಡಗಳನ್ನು ನಿಮ್ಮ ವೆಬಸೈಟನ ಕೊಡಿಂಗನಲ್ಲಿ ಇಂಟಿಗ್ರೇಟ ಮಾಡಬೇಕು. ಈಗ ನಿಮ್ಮ ಬಿಜನೆಸನ ಆಫೀಸಿಯಲ್ ವೆಬಸೈಟ ಒಂದು ಲೀಡ್ ಜನರೇಟಿಂಗ್ ವೆಬಸೈಟ ಆಗುತ್ತದೆ. ಇಷ್ಟಾದರೆ ನಿಮ್ಮ ಬಿಜನೆಸ್ ಆನಲೈನಗೆ ಬಂದಂತೆ. ಈ ವೆಬಸೈಟ ಮೂಲಕ ಕಸ್ಟಮರಗಳು ನಿಮ್ಮ ಪ್ರೊಡಕ್ಟನ್ನು ಖರೀದಿಸುತ್ತಾರೆ ಇಲ್ಲವೇ ನಿಮ್ಮ ಸರ್ವಿಸನ್ನು ಬುಕ್ ಮಾಡುತ್ತಾರೆ. ನೀವು ಈ ಎಂಟೈರ್ ಪ್ರೊಸೆಸನ್ನು ಅರ್ಥ ಮಾಡಿಕೊಳ್ಳುವುದಕ್ಕಾಗಿ www.Pailwanbuildcon.inಗೆ ವಿಜಿಟ ಮಾಡಿ ನಮ್ಮ ಕ್ಲೈಂಟ ಪೈಲವಾನ ಬಿಲ್ಡಕಾನ ಪ್ರೈವೇಟ್ ಲಿಮಿಟೆಡನ ವೆಬಸೈಟನ್ನು ನೋಡಬಹುದು. ಇಲ್ಲವೇ ಈ ಚಾರ್ಟನ್ನು ಸರಿಯಾಗಿ ಗಮನಿಸಿ ನಿಮಗೆಲ್ಲ ಅರ್ಥವಾಗುತ್ತದೆ.
ನಂಗೊತ್ತು, ಈ ಕಾನ್ಸೆಪ್ಟ ನಿಮಗೆ ಹೊಸದಾಗಿದೆ. ಒಂದೇ ಸಲಕ್ಕೆ ಸರಿಯಾಗಿ ಅರ್ಥವಾಗಲ್ಲ. ಎಕ್ಸಾಮಪಲಗಾಗಿ ನೀವು ನಿಮ್ಮ ಕಂಪನಿಯ ವೆಬಸೈಟ www.Roaringcreations.comಗೆ ಭೇಟಿ ನೀಡಿ ಅರ್ಥಮಾಡಿಕೊಳ್ಳಬಹುದು. ನಿಮಗೇನಾದರೂ ಅನುಮಾನಗಳಿದ್ದರೆ ಅವುಗಳನ್ನು ಕಮೆಂಟ ಮಾಡಿ. ವಿಡಿಯೋಗೆ ಲೈಕ ಮಾಡಿ ಮತ್ತು ಚಾನೆಲಗೆ ಸಬಸ್ಕ್ರೈಬ ಮಾಡಿ. All the Best and Thanks You…