EX ಲವರ್ ಮೇಲೆ ಸೇಡನ್ನು ತೀರಿಸಿಕೊಳ್ಳುವುದು ಹೇಗೆ? – How to take Revenge on Ex Lover in Kannada

You are currently viewing EX ಲವರ್ ಮೇಲೆ ಸೇಡನ್ನು ತೀರಿಸಿಕೊಳ್ಳುವುದು ಹೇಗೆ? – How to take Revenge on Ex Lover in Kannada

ಜೀವಕ್ಕಿಂತ ಹೆಚ್ಚಾಗಿ ಪ್ರೀತಿಸಿದ ಜೀವ ದೂರಾದಾಗ ಎಲ್ಲರಿಗೂ ಸಿಕ್ಕಾಪಟ್ಟೆ ನೋವಾಗುತ್ತೆ. ಸತ್ತೋಗ ಬಿಡೋಣ ಅನಿಸುತ್ತೆ, ಬಿಟ್ಟೋದವರನ್ನ ಸಾಯಿಸಿ ಬಿಡೋಣ ಅನಿಸುತ್ತೆ, ಸೇಡು ತೀರಿಸಿಕೊಳ್ಳಬೇಕು ಅನಿಸುತ್ತೆ. ಅದರಲ್ಲೇನು ತಪ್ಪಿಲ್ಲ. ಅದು ಮನುಷ್ಯನ ಸಹಜ ಸ್ವಭಾವ ಅಷ್ಟೇ. ಕಾರಣವಿಲ್ಲದೆ ಯಾರು ಯಾರಿಂದಲೂ ದೂರಾಗಲ್ಲ. ನೀವು ಸರಿಯಿಲ್ಲ, ನಿಮ್ಮ ನಡತೆ ಸರಿಯಿಲ್ಲ, ನಿಮ್ಮೊಂದಿಗೆ ಹೊಂದಾಣಿಕೆಯಾಗುತ್ತಿಲ್ಲ, ನಿಮ್ಮ ದುಶ್ಚಟಗಳನ್ನು ಸಹಿಸಲಾಗುತ್ತಿಲ್ಲ ಎಂದು ನಿಮ್ಮ ಲವರ್ ನಿಮ್ಮನ್ನು ಬಿಟ್ಟೊದ್ರೆ ಅದು ನಿಮ್ಮ ಕರ್ಮ. ಯಾರೇನು ಮಾಡೋಕ್ಕಾಗಲ್ಲ. ನೀವು ನಿಮ್ಮ ತಪ್ಪುಗಳನ್ನು ತಿದ್ದಿಕೊಂಡು ಬದಲಾಗಬೇಕು. ಬದಲಾಗದಿದ್ದರೆ ಜೀವನಪೂರ್ತಿ ಒಂಟಿಯಾಗಿ ಬಾಳಬೇಕಾಗುತ್ತದೆ. ಯಾರು ಸಹ ನಿಮ್ಮೊಂದಿಗೆ ಜೀವನ ನಡೆಸಲು ಇಷ್ಟಪಡಲ್ಲ.

EX ಲವರ್ ಮೇಲೆ ಸೇಡನ್ನು ತೀರಿಸಿಕೊಳ್ಳುವುದು ಹೇಗೆ? - How to take Revenge on Ex Lover in Kannada

ಒಂದು ವೇಳೆ ನಿಮ್ಮತ್ರ ಸಾಕಷ್ಟು ದುಡ್ಡಿಲ್ಲ, ಕಾರಿಲ್ಲ, ಇರೋಕೆ ದೊಡ್ಡ ಮನೆಯಿಲ್ಲ, ಬ್ಯಾಂಕ ಬ್ಯಾಲೆನ್ಸ ಚೆನ್ನಾಗಿಲ್ಲ ಅಂತಾ ನಿಮ್ಮ ಲವರ್ ನಿಮ್ಮನ್ನ ಬಿಟ್ಟೊದ್ರೆ ಇದಕ್ಕಿಂತಲೂ ಶೇಮಫುಲ್ಲಾದ ಸಂಗತಿ ಬೇರೊಂದಿಲ್ಲ. ನಿಮ್ನತ್ರ ಸಂಪತ್ತಿಲ್ಲ ಅಂತ ನಿಮ್ಮ ಲವರ್ ನಿಮ್ಮಿಂದ ದೂರಾದಾಗ ಅದು ಅವರ ತಪ್ಪಲ್ಲ. ಅದು ನಿಮ್ಮದೇ ತಪ್ಪು. ನಿಮ್ಮ ಬಳಿ ಕಾರಿಲ್ಲ, ದುಡ್ಡಿಲ್ಲ, ಮನೆಯಿಲ್ಲ ಅಂದ್ರೆ ಅದು ನಿಮ್ಮದೇ ತಪ್ಪು. ನೀವು ಜೀವನದಲ್ಲಿ ಮುಂದೆ ಬರೋಕೆ ಕಷ್ಟಪಟ್ಟಿಲ್ಲ ಎಂದರ್ಥ. ನಿಮಗೆ ನಿಮ್ಮ ಜೀವನದಲ್ಲಿ ಮುಂದೆ ಬರಬೇಕು, ಚೆನ್ನಾಗಿ ದುಡಿಬೇಕು, ಚೆನ್ನಾಗಿ ಸೆಟ್ಲಾಗಬೇಕು ಎಂಬ ಗುರಿ ಇಲ್ಲವೆಂದರ್ಥ. ಎಲ್ಲ ಹುಡುಗಿಯರು ಪರ್ಸ್ ನೋಡಲ್ಲ, ಎಲ್ಲ ಹುಡುಗರು ಫೇಸ್ ನೋಡಲ್ಲ ಎಂಬ ಮಾತು ನಿಜ. ಆದರೆ ದುಡ್ಡಿಲ್ಲದೆ ಅಂದುಕೊಂಡಂತೆ ಬದುಕಲು ಆಗಲ್ಲ. ಅದಕ್ಕಾಗಿ ಹುಡುಗಿಯರು ಸಂಪತ್ತನ್ನು ಹುಡುಕಿದರೆ, ಹುಡುಗರು ಸೌಂದರ್ಯವನ್ನು ಹುಡುಕುತ್ತಾರೆ. ಅನಸಕ್ಸೆಸಫುಲ್ ವ್ಯಕ್ತಿಗಳ ಜೊತೆಗೆ ಯಾರು ಫ್ರೆಂಡಶೀಪ ಬೆಳೆಸೋಕು ಮುಂದಾಗಲ್ಲ. ಹೀಗಿರುವಾಗ ಅನಸಕ್ಸೆಸಫುಲ್ ಸೋಮಾರಿ ಸಿದ್ಧರ ಜೊತೆಗೆ ಹುಡುಗಿಯರು ಲೈಫ ಶೇರ್ ಮಾಡೋಕೆ ಯಾಕ ಮುಂದಾಗತ್ತಾರೆ?.

EX ಲವರ್ ಮೇಲೆ ಸೇಡನ್ನು ತೀರಿಸಿಕೊಳ್ಳುವುದು ಹೇಗೆ? - How to take Revenge on Ex Lover in Kannada

ನಿಮ್ಮ ಲವರ್ ನಿಮ್ಮನ್ನು ಬಿಟ್ಟೊದಾಗ ನಿಮ್ಮನ್ನು ನೀವು ದ್ವೇಷಿಸಬೇಡಿ. ಮೊದಲು ನಿಮ್ಮನ್ನು ನೀವು ಪ್ರೀತಿಸಿ. ನಿಮ್ಮಲ್ಲಿರುವ ಟ್ಯಾಲೆಂಟನ್ನು ಪ್ರೀತಿಸಿ. ನಿಮ್ಮಲ್ಲಿರುವ ಕಲೆಯನ್ನು ಪ್ರೀತಿಸಿ. ಪ್ರತಿಯೊಬ್ಬ ಮನುಷ್ಯನಲ್ಲಿ ಒಂದಲ್ಲ ಒಂದು ರೀತಿಯ ವಿಶೇಷ ಕಲೆ ಇದ್ದೇ ಇರುತ್ತದೆ. ಮೊದಲು ನಿಮ್ಮಲ್ಲಿರುವ ಎಕ್ಸಟ್ರಾರ್ಡಿನರಿ ಸ್ಕೀಲನ್ನು ಪತ್ತೆ ಹಚ್ಚಿ. ನಿಮ್ಮ ಪ್ಯಾಷನನ್ನು ಪ್ರೊಫೇಷನ್ನಾಗಿ ಪರಿವರ್ತಿಸಿಕೊಂಡು ಬೇಗನೆ ಸೆಟ್ಲಾಗಿ, ಶ್ರೀಮಂತರಾಗಿ.

EX ಲವರ್ ಮೇಲೆ ಸೇಡನ್ನು ತೀರಿಸಿಕೊಳ್ಳುವುದು ಹೇಗೆ? - How to take Revenge on Ex Lover in Kannada

ನಿಮ್ಮ ಬಳಿ ಕಾರಿಲ್ಲ, ದೊಡ್ಡ ಮನೆಯಿಲ್ಲ, ಬ್ಯಾಂಕ ಬ್ಯಾಲನ್ಸ ಚೆನ್ನಾಗಿಲ್ಲ ಎಂದು ನಿಮ್ಮನ್ನು ಬಿಟ್ಟೊದ ನಿಮ್ಮ ಮಾಜಿ ಲವರ್ ನಿಮ್ಮನ್ನು ಕಳೆದುಕೊಂಡಿದ್ದಕ್ಕಾಗಿ ಜೀವನಪೂರ್ತಿ ಪಶ್ಚಾತ್ತಾಪ ಪಡಬೇಕು, ನಿಮ್ಮಿಂದ ದೂರಾದ ತಪ್ಪಿಗೆ ಒಮ್ಮೆಯಾದರೂ ಕಣ್ಣೀರಾಕಬೇಕು. ಆ ಮಟ್ಟಿಗೆ ನೀವು ಸಕ್ಸೆಸಫುಲ್ ಆಗಬೇಕು, ರೀಚ್ ಆಗಬೇಕು. ನಿಮ್ಮ ಸಕ್ಸೆಸನ ಮೂಲಕ ನಿಮ್ಮ X ಲವರ್ ಅಥವಾ X ಲೈಫ ಪಾರ್ಟನರ್ ಮೇಲೆ ಸೇಡನ್ನು ತೀರಿಸಿಕೊಳ್ಳಬೇಕು. ನಿಮಗೆ ಡೈವರ್ಸ ಕೊಟ್ಟೋದ ಗಂಡ ಅಥವಾ ಹೆಂಡತಿ ನಿಮ್ಮನ್ನು ಕಳೆದುಕೊಂಡ ತಪ್ಪಿಗೆ ಕೊರಗಬೇಕು, ಆ ರೀತಿ ನೀವು ನಿಮ್ಮ ಲೈಫಲ್ಲಿ ಸೆಟ್ಲಾಗಬೇಕು. ನಿಮ್ಮ ಖುಷಿಯನ್ನು ನೋಡಿ ನಿಮ್ಮ ಮಾಜಿ ಲವರ್, ಮಾಜಿ ಲೈಫ್ ಪಾರ್ಟನರ್ ಹೊಟ್ಟೆ ಉರಿದುಕೊಳ್ಳಬೇಕು. ಬ್ರೇಕಪ್ ಆದ ಎರಡ್ಮೂರು ವರ್ಷಗಳ ನಂತರವೂ ನಿಮ್ಮ ಮಾಜಿ ಲವರ್ ನಿಮ್ಮನ್ನು ಒಬ್ಬ ಅನಸಕ್ಸೆಸಫುಲ್ ವ್ಯಕ್ತಿಯೆಂದುಕೊಂಡರೆ ಇದಕ್ಕಿಂತಲೂ ನಾಚಿಕೆಗೇಡಿನ ವಿಷಯ ಮತ್ತೊಂದಿಲ್ಲ, ನಿಮ್ಮ ಜನ್ಮಕ್ಕೆ ಯಾವುದೇ ಅರ್ಥವಿಲ್ಲ. ಜೀವನದಲ್ಲಿ ಸಕ್ಸೆಸಫುಲ್ಲಾಗಲು ಲವ್ ಫೇಲ್ಯುವರಗಿಂತ ದೊಡ್ಡ ಕಾರಣ ಬೇಕಾಗಿಲ್ಲ. ಲವ್ವಲ್ಲಿ ಫೇಲಾದಾಗ ನಾವು ಲೈಫಲ್ಲಿ ಪಾಸಾಗಿ ತೋರಿಸಲೇಬೇಕು.

EX ಲವರ್ ಮೇಲೆ ಸೇಡನ್ನು ತೀರಿಸಿಕೊಳ್ಳುವುದು ಹೇಗೆ? - How to take Revenge on Ex Lover in Kannada

ಹಾರ್ವರ್ಡ್ ಯುನಿವರ್ಸಸಿಟಿಯಲ್ಲಿ ಓದುತ್ತಿದ್ದ ಒಬ್ಬ ಹುಡುಗ ಒಬ್ಬಳನ್ನು ಪ್ರೀತಿಸುತ್ತಿದ್ದನು. ಅವಳು ಸಹ ಅವನನ್ನು ಅಷ್ಟೇ ಪ್ರೀತಿಸುತ್ತಿದ್ದಳು. ಆದರೆ ಅವರ ಪ್ರೀತಿಯಲ್ಲಿ ಅನುಮಾನವೆಂಬ ಭೂತ ಆವರಿಸಿದ್ದರಿಂದ ಅವರಿಬ್ಬರ ಪ್ರೀತಿ ಚೂರಾಯಿತು. ಆಕೆ ಅವನನ್ನು ಬಾಯಿಗೆ ಬಂದಂತೆ ಬೈದು ಬ್ರೇಕಪ್ ಮಾಡಿಕೊಂಡಳು. ನಂತರ ಆ ಹುಡುಗ ‘ಲೈವ್ ಜರ್ನಲ್’ ಎಂಬ ಸೋಸಿಯಲ್ ಸೈಟಲ್ಲಿ ಅವಳನ್ನು ‘ಬೀಚ್’ ಎಂದು ಬೈದು ಅವಳ ಬಗ್ಗೆ ಕೇವಲವಾಗಿ ಬರೆದನು. ಆನಂತರ ಅವಳು ಅದನ್ನು ಓದಿ ಅವನನ್ನು ಎಲ್ಲ ಸೋಸಿಯಲ್ ಸೈಟಗಳಲ್ಲಿ ಬ್ಲಾಕ್ ಮಾಡಿದಳು. ನಂತರ ಆ ಹುಡುಗ ಕಾಲೇಜ್ ಡಾಟಾ ಬೇಸನ್ನು ಹ್ಯಾಕ್ ಮಾಡಿ ಹುಡುಗಿಯರ ಫೋಟೋಗಳನ್ನು ಕದ್ದು ಅವುಗಳನ್ನು ತಾನೇ ತಯಾರಿಸಿದ ಫೇಸ್ ಮ್ಯಾಶ್ (Face Mash) ಎಂಬ ಆನಲೈನ ಸೈಟಲ್ಲಿ ಹಾಕಿ “Hot or Not?” ಎಂಬ ಟೈಮಪಾಸ ಕಂಪ್ಯಾರಿಸನನ್ನು ಪ್ರಾರಂಭಿಸಿದನು. ಆ ಫೇಸ್ ಮ್ಯಾಶ್ ವೆಬಸೈಟ್ ಇವತ್ತು ಫೇಸ್ಬುಕ್ ಆಗಿ ನಿಮ್ಮ ಕಣ್ಮುಂದಿದೆ. ಆ ಹುಡುಗ ಬೇರೆ ಯಾರು ಅಲ್ಲ, ಫೇಸ್ಬುಕನ ಮಾಲೀಕ ಮಾರ್ಕ ಜುಕರಬರ್ಗ. ತನ್ನ X ಗರ್ಲಫ್ರೆಂಡಳಿಂದ ಎಲ್ಲ ಸೋಸಿಯಲ್ ಮೇಡಿಯಾಗಳಲ್ಲಿ ಬ್ಲಾಕ್ ಆದ ಹುಡುಗ ಜಗತ್ತಿನ ಅತೀ ದೊಡ್ಡ ಸೋಸಿಯಲ್ ಮೇಡಿಯಾ ಸೈಟಾದ ಫೇಸ್ಬುಕನ್ನು ಕಟ್ಟಿದನು. ಈಗ ಅವನ X ಗರ್ಲಫ್ರೆಂಡ್ ಕೂಡ ಫೇಸ್ಬುಕನ್ನು ಬಳಸುತ್ತಿರಬಹುದು. ಯಾರಿಗೆ ಗೊತ್ತು?

EX ಲವರ್ ಮೇಲೆ ಸೇಡನ್ನು ತೀರಿಸಿಕೊಳ್ಳುವುದು ಹೇಗೆ? - How to take Revenge on Ex Lover in Kannada

ಒಬ್ಬಳು ಸುಂದರವಾದ ಯುವ ಇಂಗ್ಲೀಷ ಶಿಕ್ಷಕಿ ಪೋರ್ಚುಗಲನ ಒಬ್ಬ ಜರ್ನಾಲಿಸ್ಟನನ್ನು ಮದುವೆಯಾಗಿದ್ದಳು. ಆದರೆ ಆತ ಡ್ರಗ್ ಅಡಿಕ್ಟ ಆಗಿದ್ದನು. ದಿನಾ ಕುಡಿದು ಬಂದು ಕಿರುಕುಳ ಕೊಡುತ್ತಿದ್ದನು. ಅವನ ಕಾಟಕ್ಕೆ ಬೇಸತ್ತು ಆಕೆ ಅವನಿಂದ ಡೈವೋರ್ಸ ಪಡೆದುಕೊಂಡು ತನ್ನ ಮಗಳೊಂದಿಗೆ ದೇಶ ಬಿಟ್ಟು ಬಂದಳು. ಆ ಸಮಯದಲ್ಲಿ ಆಕೆ ಆರ್ಥಿಕವಾಗಿ ದಿವಾಳಿಯಾಗಿದ್ದಳು. ಅವಳ ಕೃತಿ ಹ್ಯಾರಿ ಪಾಟರ್ (Harry Potter) ಮುದ್ರಣ ಯೋಗ್ಯವಲ್ಲವೆಂದು 23 ಪ್ರಕಾಶಕರಿಂದ ರಿಜೆಕ್ಟ ಆಗಿತ್ತು. ಆದರೂ ಆಕೆ ಛಲ ಬಿಡದೆ ಆಕೆ ತನ್ನ ಹ್ಯಾರಿ ಪಾಟರ್ ಪುಸ್ತಕ ಸರಣಿಯನ್ನು ಪ್ರಕಟಿಸಿದಳು. ನೋಡುನೋಡುತ್ತಿದ್ದಂತೆ ಆಕೆ ತನ್ನ ಬರವಣಿಗೆಯಿಂದಲೇ ಬಿಲೆನಿಯರ್ ಆದಳು. ಈಗಾಕೆ ಇಂಗ್ಲೆಂಡ್ ರಾಣಿಗಿಂತಲೂ ಶ್ರೀಮಂತಳಾಗಿದ್ದಾಳೆ. ಆ ಯುವತಿ ಬೇರೆ ಯಾರು ಅಲ್ಲ ವಿಶ್ವಪ್ರಸಿದ್ಧ ಲೇಖಕಿ ಜೆ.ಕೆ.ರೋಲಿಂಗ್…

EX ಲವರ್ ಮೇಲೆ ಸೇಡನ್ನು ತೀರಿಸಿಕೊಳ್ಳುವುದು ಹೇಗೆ? - How to take Revenge on Ex Lover in Kannada

ನಾನು ಕಾಲೇಜಿನಲ್ಲಿರುವಾಗ ನಮ್ಮ ಕ್ಲಾಸ್ ಟಾಪರಗೆ ಫೇಸ್ಬುಕಲ್ಲಿ ಫ್ರೆಂಡ್ ರಿಕ್ವೇಸ್ಟ ಕಳಿಸಿದ್ದೆ. ಅಲ್ಲಿ ತನಕ ನಾನು ಯಾವುದೇ ಹುಡುಗಿಗೂ ಫ್ರೆಂಡ್ ರಿಕ್ವೇಸ್ಟ ಕಳಿಸಿರಲಿಲ್ಲ. ನಾನಾಗಿಯೇ ಫ್ರೆಂಡ್ ರಿಕ್ವೇಸ್ಟ ಕಳಿಸಿದ ಮೊದಲ ಹುಡುಗಿ ಅವಳು. ಆದರೆ ಅವಳು ನನ್ನ ಫ್ರೆಂಡ್ ರಿಕ್ವೇಸ್ಟನ್ನು ಕ್ಲಾಸಲ್ಲಿ ಎಲ್ಲರಿಗೆ ತೋರಿಸಿ ಬಿಲ್ಡಪ್ ತೆಗೆದುಕೊಂಡಳು. ನಾನೇನು ಅವಳನ್ನು ಎದುರಾಳಿಯಂತೆ ನೋಡುತ್ತಿರಲಿಲ್ಲ. ಆದರೆ ಅವಳು ನನ್ನನ್ನು ಪಕ್ಕಾ ಕಾಂಪಿಟೆಟರ ಎಂದು ತಿಳಿದುಕೊಂಡಿದ್ದಳು. ಮೂರು ತಿಂಗಳುಗಳ ನಂತರ ಆಕೆ ನನ್ನ ಫ್ರೆಂಡ್ ರಿಕ್ವೇಸ್ಟನ್ನು ರಿಜೆಕ್ಟ ಮಾಡಿದಳು. ನನಗೂ ಸ್ವಲ್ಪ ಬೇಜಾರಾಯಿತು. ಆನಂತರ ನಾನು ಕೆಮಿಸ್ಟ್ರಿ ಸೆಮಿನಾರ ಮಾಡುವಾಗ Electron attraction and Repulsion ಬಗ್ಗೆ ಹೇಳುವಾಗ “ತುಂಬಾ ಬ್ಯೂಟಿ-ಫೂಲ್ ಆಗಿರುವವರು ಬುದ್ಧಿವಂತರ ಫ್ರೆಂಡ್ ರಿಕ್ವೇಸ್ಟ ಆ್ಯಕ್ಸೆಪ್ಟ ಮಾಡಲ್ಲ” ಅಂತಂದೆ. ನಾನು ಇದನ್ನು ಅವಳಿಗೇ ಹೇಳಿದ್ದು ಅಂತಾ ಅವಳು ಅರ್ಥಮಾಡಿಕೊಂಡಳು. ಅವತ್ತೇ ನನ್ನ ಫೇಸ್ಬುಕಲ್ಲಿ ಬ್ಲಾಕ್ ಮಾಡಿದಳು. ಆದರೆ ಈಗ ನನಗೆ ಅದೇ ಫೇಸ್ಬುಕಲ್ಲಿ ಹಿಂದಿ, ಇಂಗ್ಲೀಷ್, ಮರಾಠಿ ಹಾಗೂ ಕನ್ನಡ ಸೇರಿ ಲಕ್ಷಾಂತರ ಓದುಗರಿದ್ದಾರೆ. ಅವಳೀಗ 3 ವರ್ಷದ ನಂತರ ನನ್ನ ಪರ್ಸನಲ್ ಫೋನ್ ನಂಬರಗಾಗಿ ನಮ್ಮೆಲ್ಲ ಕ್ಲಾಸಮೇಟ್ಸಗಳತ್ರ ಕೇಳಿದ್ದಾಳೆ. ಸಿಗದಿದ್ದಾಗ ಎಷ್ಟೋ ಸಲ ನಮ್ಮ ಕಂಪನಿ ಈಮೇಲಗೆ ಮೇಲ್ ಮಾಡಿದ್ದಾಳೆ. ಅದಕ್ಕಾಗಿ ಹರ ಸಾಹಸ ಮಾಡುತ್ತಿದ್ದಾಳೆ. ಆದರೆ ಈಗಲೂ ಅವಳಿಗೆ ನನ್ನ ಪರ್ಸನಲ್ ಫೋನ್ ನಂಬರ ಸಿಕ್ಕಿಲ್ಲ…

EX ಲವರ್ ಮೇಲೆ ಸೇಡನ್ನು ತೀರಿಸಿಕೊಳ್ಳುವುದು ಹೇಗೆ? - How to take Revenge on Ex Lover in Kannada

ಗೆಳೆಯರೇ, ಪ್ರತಿಯೊಬ್ಬ ಸಕ್ಸೆಸಫುಲ್ ವ್ಯಕ್ತಿಯ ಎದೆಯಲ್ಲಿ ಒಂದಲ್ಲ ಒಂದು ನೋವು ಖಂಡಿತ ಇರುತ್ತದೆ. ಎದೆಯಲ್ಲಿ ಯಾವುದಾದರೂ ಒಂದು ನೋವಿದ್ರೇನೆ ಜೀವನದಲ್ಲಿ ಏನಾದರೂ ಒಂದನ್ನು ಸಾಧಿಸಬೇಕು ಎಂಬ ಛಲ ಹುಟ್ಟೋದು. ಲವ್ವಲ್ಲಿ ಫೇಲಾಗಿ ಲೈಫಲ್ಲಿ ಸಕ್ಸೆಸಫುಲ್ಲಾದ ಎಷ್ಟೋ ವ್ಯಕ್ತಿಗಳು ನಮ್ಮ ಕಣ್ಮುಂದೆ ಇದ್ದಾರೆ. ಲವ್ವಲ್ಲಿ ಫೇಲಾದರೆ ಏನಾಯ್ತು? ಲೈಫಲ್ಲಿ ಚೆನ್ನಾಗಿ ಸೆಟ್ಲಾಗಿ ಹಾಯಾಗಿರಿ. ಪ್ರೀತಿ ಗೀತಿ ಇತ್ಯಾದಿಗಳೆಲ್ಲ ಹಾಳಾಗೋದ್ರೆ ಏನಂತೆ ಮದುವೆ ಮಕ್ಕಳು ಇತ್ಯಾದಿಗಳನ್ನಾದ್ರೂ ಸರಿಯಾಗಿ ಮಾಡಿ. All the Best and Thanks You…

    ಈ ಅಂಕಣ (Article) ನಿಮಗೆ ಇಷ್ಟವಾಗಿದ್ದರೆ ನಿಮ್ಮೆಲ್ಲ ಗೆಳೆಯರೊಡನೆ ಮತ್ತು ನೀವಿರುವ ಎಲ್ಲ ಕನ್ನಡ ಫೇಸ್ಬುಕ್ ಗ್ರೂಪಗಳಲ್ಲಿ ಇದನ್ನು ತಪ್ಪದೇ ಶೇರ್ (Share) ಮಾಡಿ. ಜೊತೆಗೆ ಪ್ರತಿದಿನ ಹೊಸಹೊಸ ಅಂಕಣಗಳನ್ನು, ಪ್ರೇಮಕಥೆಗಳನ್ನು, ಕವನಗಳನ್ನು ಉಚಿತವಾಗಿ ಓದಲು ತಪ್ಪದೆ ನನ್ನ ಫೇಸ್ಬುಕ್ ಪೇಜನ್ನು https://www.facebook.com/Directorsatishkumar/ (Director Satishkumar) ಲೈಕ್ ಮಾಡಿ.

Follow Me On : Facebook | Instagram | YouTube | Twitter

My Books : Kannada Books | Hindi Books | English Books

⚠ STRICT WARNING ⚠

Content Rights :

ಈ ಅಂಕಣದ ಎಲ್ಲ ಹಕ್ಕುಗಳನ್ನು ಡೈರೆಕ್ಟರ್ ಸತೀಶಕುಮಾರ ಹಾಗೂ ರೋರಿಂಗ್ ಕ್ರಿಯೇಷನ್ಸ್ ಪ್ರೈವೇಟ್ ಲಿಮಿಟೆಡ್ ಕಂಪನಿ ವತಿಯಿಂದ ಸಂಪೂರ್ಣವಾಗಿ ಕಾಯ್ದಿರಿಸಲಾಗಿದೆ. ಡೈರೆಕ್ಟರ್ ಸತೀಶಕುಮಾರ ಅವರ ಅನುಮತಿಯಿಲ್ಲದೆ ಈ ಅಂಕಣದ ಯಾವುದೇ ಭಾಗವನ್ನು ಕಾಪಿ ಮಾಡುವಂತಿಲ್ಲ, ಬೇರೆ ಭಾಷೆಗಳಿಗೆ ಅನುವಾದಿಸುವಂತಿಲ್ಲ ಮತ್ತು ಇದನ್ನು ಬೇರೆಡೆಗೆ ಪ್ರಕಟಿಸುವಂತಿಲ್ಲ. ಯಾವುದೇ ಸಾಮಾಜಿಕ ಜಾಲತಾಣಗಳಲ್ಲಿ ಪೋಸ್ಟ್ ಮಾಡುವಂತಿಲ್ಲ. ಮುದ್ರಣ ಮಾಡುವಂತಿಲ್ಲ. ಒಂದು ವೇಳೆ ಯಾರಾದರೂ ಕಾಪಿ ರೈಟ್ಸ್ ನಿಯಮಗಳನ್ನು ಉಲ್ಲಂಘಿಸಿದರೆ ಅವರ ಮೇಲೆ ಸೂಕ್ತ ಕಾನೂನು ಕ್ರಮ ಕೈಗೊಳ್ಳಲಾಗುವುದು ಹಾಗೂ ಆಗಿರುವ ನಷ್ಟವನ್ನು ಅವರಿಂದಲೇ ವಸೂಲಿ ಮಾಡಲಾಗುವುದು.

All Rights of this article are fully reserved by Director Satishkumar and Roaring Creations Private Limited India. No part of this article can be copied, translated or re published anywhere without the written permission of Director Satishkumar. If such violation of copy rights found to us, then we legally punish to copy cats and recover our loss by them only.

© Director Satishkumar and Roaring Creations Private Limited, India.

Director Satishkumar

Satishkumar is a young multi language writer (English, Hindi, Marathi and Kannada), Motivational Speaker, Entrepreneur and independent filmmaker from India. And also he is the Co-founder and CEO of Roaring Creations Pvt Ltd India. Follow Me On : Facebook | Instagram | YouTube | Twitter My Books : Kannada Books | Hindi Books | English Books