ಆನಲೈನನಲ್ಲಿ ಸೇಫಾಗಿರುವುದು ಹೇಗೆ? – How to be Safe in Online? – Cyber Security Tips in Kannada

You are currently viewing ಆನಲೈನನಲ್ಲಿ ಸೇಫಾಗಿರುವುದು ಹೇಗೆ? – How to be Safe in Online? – Cyber Security Tips in Kannada

ಹಾಯ್ ಗೆಳೆಯರೇ, ಸದ್ಯಕ್ಕೆ ಭಾರತದಲ್ಲಿ ಮೊಬೈಲ್ ಹಾಗೂ ಇಂಟರನೆಟ್ ಕ್ರಾಂತಿಯಾಗಿದೆ. ಎಲ್ಲ ಬಿಜನೆಸಗಳು ಆನಲೈನಗೆ ಶಿಫ್ಟ ಆಗುತ್ತಿವೆ. ಜನ ಕ್ಯಾಷಲೆಸ್ ವ್ಯವಹಾರಗಳನ್ನು ಮಾಡುತ್ತಿದ್ದಾರೆ. ಇವೆಲ್ಲ ಖುಷಿಯ ವಿಚಾರಗಳಾದರೂ ಇವುಗಳ ಜೊತೆಗೆ ಕೆಲವು ದು:ಖದ ವಿಚಾರಗಳು ಸಹ ಸೇರಿಕೊಂಡಿವೆ. ಟೆಕ್ನಾಲಜಿ ಬೆಳೆದಂತೆ ಸೈಬರ ಕ್ರೈಮಗಳು ಸಹ ಹೆಚ್ಚಾಗುತ್ತಿವೆ. ATM Card ಹಾಗೂ UPI Transaction ಫ್ರಾಡಗಳಾಗಿ ಎಷ್ಟೋ ಜನ ದುಡ್ಡನ್ನು ಕಳೆದುಕೊಂಡಿದ್ದಾರೆ, ಎಷ್ಟೋ ಜನರ ಮೊಬೈಲಗಳು, ಕಂಪ್ಯೂಟರಗಳು ಹ್ಯಾಕ್ ಆಗಿವೆ, ವೆಬಸೈಟ್ ಮತ್ತು ಸೋಸಿಯಲ್ ಮಿಡಿಯಾ ಅಕೌಂಟಗಳು ಹ್ಯಾಕ್ ಆಗಿವೆ. ಅದಕ್ಕಾಗಿ ನೀವೆಲ್ಲರೂ ಆನಲೈನನಲ್ಲಿ ಬಹಳಷ್ಟು ಜಾಗೃತರಾಗಿರಬೇಕು. Indian Computer Emergency Response Team (CERT-IN)ನ ಈ ರಿಪೋರ್ಟನ್ನು ಗಮನಿಸಿ ನಿಮಗೆ ಸೈಬರ ಸೆಕ್ಯುರಿಟಿಯ ಅವಶ್ಯಕತೆ ಎಷ್ಟಿದೆ ಎಂಬುದು ಅರಿವಾಗುತ್ತದೆ, ಯಾಕೆ ನೀವೆಲ್ಲರೂ ಆನಲೈನನಲ್ಲಿ ಬಹಳಷ್ಟು ಸೇಫಾಗಿರಬೇಕು ಎಂಬುದು ಗೊತ್ತಾಗುತ್ತದೆ.

ಆನಲೈನನಲ್ಲಿ ಸೇಫಾಗಿರುವುದು ಹೇಗೆ? - How to be Safe in Online? - Cyber Security Tips in Kannada

ನಾವೆಲ್ಲರೂ ಅಲರ್ಟ ಆದರೆ ಈ ಸೈಬರ ಕ್ರೈಮಗಳನ್ನು ಸಾಧ್ಯವಾದಷ್ಟು ತಡೆಗಟ್ಟಬಹುದು. ಲಾಸ್ ಆದ್ಮೇಲೆ ಬಾಯಬಾಯ ಬಡ್ಕೋಳೋದಕ್ಕಿಂತ ಮುಂಚೆಯೇ ಅಲರ್ಟ ಆಗಿರುವುದು ಜಾಣರ ಲಕ್ಷಣ. ಈ ಟಿಪ್ಸಗಳನ್ನು ತಪ್ಪದೆ ಫಾಲೋ ಮಾಡಿ ಮತ್ತು ಆಲನೈನನಲ್ಲಿ ಸುರಕ್ಷಿತವಾಗಿರಿ.

1) ನಿಮ್ಮ ನೆಟ್ ಬ್ಯಾಂಕಿಂಗ್, ಮೊಬೈಲ್ ಪೇ apps, ಸೋಸಿಯಲ್ ಮಿಡಿಯಾ ಪೇಜ, ವೆಬಸೈಟ್, ಯುಟ್ಯೂಬ ಚಾನೆಲಗಳಿಗೆ Strong & Unique ಪಾಸವರ್ಡಗಳನ್ನು ಬಳಸಿ. ಈ ಪಾಸವರ್ಡಗಳನ್ನು ಪಿರಿಯಾಡಿಕಲಿ ಚೇಂಜ್ ಮಾಡ್ತೀರಿ. ನಿಮ್ಮ ಹೆಸರು, ಲವರ ಹೆಸರು, ಡೇಟ್ ಆಫ್ ಬರ್ಥ್, 143 ಇತ್ಯಾದಿಗಳನ್ನು ಪಾಸವರ್ಡಾಗಿ ಇಡಬೇಡಿ. ನಿಮ್ಮ ಪಾಸವರ್ಡ ಲಾಂಗ ಆಗಿದಷ್ಟು, ಅದರಲ್ಲಿ ನಂಬರ್ಸ ಮತ್ತು ಸ್ಪೆಷಲ್ ಕ್ಯಾರೆಕ್ಟರಗಳಿದ್ದಷ್ಟು ನಿಮ್ಮ ಪಾಸವರ್ಡ ಸ್ಟ್ರಾಂಗ ಆಗುತ್ತದೆ. Alphanumeric ಮತ್ತು Special Charactersಗಳನ್ನು ಹೊಂದಿದ ಪಾಸವರ್ಡಗಳನ್ನು ಕ್ರ್ಯಾಕ್ ಮಾಡುವುದು ಸುಲಭವಲ್ಲ. ಅದಕ್ಕಾಗಿ ಲಾಂಗ್ & ಸ್ಟ್ರಾಂಗ್ ಪಾಸವರ್ಡಗಳನ್ನು ಸೆಟ್ ಮಾಡಿ. Strong & Unique ಪಾಸವರ್ಡಗಳನ್ನು ಬಳಸುವುದರ ಜೊತೆಗೆ Two Step Verificationನ್ನು ಮರೆಯದೇ ಆನ್ ಮಾಡಿಕೊಳ್ಳಿ.

ಆನಲೈನನಲ್ಲಿ ಸೇಫಾಗಿರುವುದು ಹೇಗೆ? - How to be Safe in Online? - Cyber Security Tips in Kannada

2) ಫ್ರಿ ಥಿಂಗ್ಸಗಳ ಹಿಂದೆ ಬಿದ್ದು ಫಜೀತಿ ಅನುಭವಿಸಬೇಡಿ. ಫ್ರಿ ಮತ್ತು ಚಿಪ್ ಥಿಂಗ್ಸಗಳನ್ನು ಅವೈಡ್ ಮಾಡಿ. ಪುಕ್ಸಟ್ಟೆ ಹಾಸ್ಟಿಂಗ್ ಸಿಗ್ತಿದೆ, ಡೊಮೇನ ಸಿಗ್ತಿದೆ, ಥರ್ಡ್ ಪಾರ್ಟಿ Plugins & Extensions ಸಿಗ್ತಿವೆ, ಬುಕ್ ಸಿಗ್ತಿದೆ, ಮೂವಿ ಡೌನಲೋಡಗೆ ಸಿಗ್ತಿದೆ ಅಂತಾ ಫ್ರಾಡ ವೆಬಸೈಟಗೆ ವಿಸಿಟ ಮಾಡಿ ನಿಮ್ಮ ದುಡ್ಡನ್ನು ಮತ್ತು ಪರ್ಸನಲ್ ಡಾಟಾವನ್ನು ಕಳೆದುಕೊಳ್ಳಬೇಡಿ. ಇಂಟರನೆಟಲ್ಲಿ ಫ್ರೀಯಾಗಿ ಸಿಗ್ತಿರೋ ಎಲ್ಲ ಪೈರೆಟೆಡ ವಸ್ತುಗಳಿಗೆ ಬಾಯ್ ಹೇಳಿ. ಫ್ರೀ ವೈಫೈಯನ್ನು ಬಳಸುವುದನ್ನು ಬಿಟ್ಟು ಬಿಡಿ. ನೀವು ಫ್ರೀ ಆಫರಗಳ ಹಿಂದೆ ಅಥವಾ ಫ್ರೀ ವಸ್ತುಗಳ ಹಿಂದೆ ಹೋಗದಿದ್ರೆ ನಿಮಗೆ ಯಾವುದೇ ತರಹದ ಹಾನಿಗಳು ಎದುರಾಗುವುದಿಲ್ಲ.

3) ಯಾವಾಗಲೂ ನಿಮ್ಮ ಸೋಸಿಯಲ್ ಮಿಡಿಯಾಗಳಿಗಾಗಿ ಅಂದರೆ ಫೇಸ್ಬುಕ್, ಟ್ವಿಟರ್, ಇನ್ಟಾಗ್ರಾಮ, ಯುಟ್ಯೂಬಗಳಿಗಾಗಿ ಮತ್ತು ಬ್ಯಾಂಕಿಂಗಗಾಗಿ ಬೇರೆಬೇರೆ ಈಮೇಲ್ ಐಡಿಗಳನ್ನು ಬಳಸಿ. ನೀವು ಟೈಮಪಾಸಗಾಗಿ ಮತ್ತು ಫೈನಾನ್ಸಗಾಗಿ ಬೇರೆಬೇರೆ ನಂಬರ ಮತ್ತು ಈಮೇಲ್ ಐಡಿಗಳನ್ನು ಬಳಸಿದರೆ ನಿಮಗೆ ಬರುತ್ತಿರುವ ಸೈಬರ ಥ್ರೇಟ್ ಅಂದರೆ ಹ್ಯಾಕಿಂಗ್ ಅಟೆಂಪ್ಟ ಇಲ್ಲೇ ತಡೆಗಟ್ಟಲ್ಪಡುತ್ತದೆ.

ಆನಲೈನನಲ್ಲಿ ಸೇಫಾಗಿರುವುದು ಹೇಗೆ? - How to be Safe in Online? - Cyber Security Tips in Kannada

4) ನಿಮ್ಮ ಮೊಬೈಲ್ ಮತ್ತು ಲ್ಯಾಪಟಾಪನಿಂದ ಎಲ್ಲ ಯುಜಲೆಸ ಆ್ಯಪ್ಸಗಳನ್ನು ಮತ್ತು ಸಾಫ್ಟವೇರಗಳನ್ನು ಈಗಲೇ Uninstall ಮಾಡಿ. ನಿಮ್ಮ ಲ್ಯಾಪಟಾಪ ಮತ್ತು ಮೊಬೈಲನಲ್ಲಿರುವ ಎಲ್ಲ ಪೈರೆಟೆಡ ಸಾಫ್ಟವೇರಗಳನ್ನು Uninstall ಮಾಡಿ. ಅನಾವಶ್ಯಕ ಡೆಟಿಂಗ್ ಆ್ಯಪ್ಸಗಳನ್ನು, ಗೇಮಿಂಗ ಆ್ಯಪ್ಸಗಳನ್ನು Un-trusted Sourcesಗಳಿಂದ ಡೌನಲೋಡ ಮಾಡಬೇಡಿ. ಪೈರೆಟೆಡ ಗೇಮ್ಸ, ಬುಕ್ಸ್, ಮೂವಿಸ್ ಮತ್ತು ಸಾಫ್ಟವೇರಗಳನ್ನು ಡೌನಲೋಡ ಅಥವಾ ಇನ್ಟ್ಸಾಲ ಮಾಡಬೇಡಿ. ಯಾವುದೇ ಆ್ಯಪ ಅಥವಾ ಸಾಫ್ಟವೇರನ್ನು Install ಮಾಡುವುದಕ್ಕಿಂತ ಮುಂಚೆ ಅದರ ಬಗ್ಗೆ ಸರಿಯಾಗಿ ತಿಳಿದುಕೊಳ್ಳಿ. Original and Updated ಸಾಫ್ಟವೇರಗಳನ್ನು ಮಾತ್ರ ಬಳಸಿ. ನಿಮ್ಮ ಮೊಬೈಲ್ ಆ್ಯಪ್ಸ ಮತ್ತು ಕಂಪ್ಯೂಟರ್ ಸಾಫ್ಟವೇರಗಳನ್ನು ಟೈಮ ಟು ಟೈಮ್ ರೆಗ್ಯುಲರಾಗಿ ಅಪಡೇಟ್ ಮಾಡಿಕೊಳ್ಳಿ.

ಆನಲೈನನಲ್ಲಿ ಸೇಫಾಗಿರುವುದು ಹೇಗೆ? - How to be Safe in Online? - Cyber Security Tips in Kannada

5) ನಿಮ್ಮ ಮೊಬೈಲಗೆ ಮತ್ತು ಲ್ಯಾಪಟಾಪಗೆ ಪೇಡ್ ಆ್ಯಂಟಿವೈರಸ ಸಾಫ್ಟವೇರಗಳನ್ನು ಹಾಕಿ. ಫ್ರೀ ಸಾಫ್ಟವೇರಗಳಿಂದ ಯಾವುದೇ ತರಹದ ಪ್ರೊಟೆಕ್ಷನ ಸಿಗುವುದಿಲ್ಲ. ಅದಕ್ಕಾಗಿ ಪೇಡ್ ಆ್ಯಂಟಿವೈರಸಗಳನ್ನು ಮಾತ್ರ ಬಳಸಿ. ನೀವೋಬ್ಬ ಬಿಜನೆಸಮ್ಯಾನ ಅಥವಾ ವರ್ಕಿಂಗ್ ಪ್ರೋಫೆಷನಲ ಆಗಿದ್ದರೆ ನೀವು ಹೆಚ್ಚಿನ ಗಮನವನ್ನು ಹರಿಸಲೇಬೇಕು. ಸಾವಿರ ರೂಪಾಯಿ ಉಳಿಸಲು ಹೋಗಿ ಲಕ್ಷಾಂತರ ರೂಪಾಯಿಯ ನಷ್ಟವನ್ನು ಮಾಡಿಕೊಳ್ಳಬೇಡಿ. ಸೈಬರ ಸೆಕ್ಯುರಿಟಿ ವಿಷಯದಲ್ಲಿ ಯಾವುದೇ ತರಹದ ರಾಜಿ ಒಳ್ಳೆಯದಲ್ಲ. ಈಗಲೇ ನಿಮ್ಮ ಮೊಬೈಲಗೆ ಹಾಗೂ ಲ್ಯಾಪಟಾಪಗೆ ಆ್ಯಂಟಿವೈರಸ ಸಾಫ್ಟವೇರಗಳನ್ನು ಹಾಕಿ.

ಲ್ಯಾಪಟಾಪಗಳಿಗೆ NP AV ಬೆಸ್ಟಾಗಿದೆ ಹಾಗೂ ಮೊಬೈಲಗಳಿಗೆ KyasperSky ಬೆಸ್ಟಾಗಿದೆ. ಅವುಗಳ ಪರಚೇಸ್ ಲಿಂಕನ್ನು ಡಿಸ್ಕ್ರಿಪ್ಷನ ಹಾಗೂ ಕಮೆಂಟ್ ಸೆಕ್ಷನನಲ್ಲಿ ಕೊಡಲಾಗಿದೆ. ಒಂದ್ಸಲ ಚೆಕೌಟ ಮಾಡಿ.

* NP AV ಲಿಂಕ್ – https://amzn.to/2WKV6fx

* KyasperSky ಲಿಂಕ್ – https://amzn.to/2UuMFlo

ಆನಲೈನನಲ್ಲಿ ಸೇಫಾಗಿರುವುದು ಹೇಗೆ? - How to be Safe in Online? - Cyber Security Tips in Kannada

6) Suspicious Links ಮತ್ತು Spam Linkಗಳ ಮೇಲೆ ಕ್ಲಿಕ್ ಮಾಡಬೇಡಿ. ಯಾವುದೇ ತರಹದ Unknown attachments ಮತ್ತು ಫೈಲಗಳನ್ನು ಡೌನಲೋಡ ಮಾಡಬೇಡ.

7) ಯಾವುದೇ ಕಾರಣಕ್ಕೂ Phishing ಮೇಲಗಳಿಗೆ ರಿಪ್ಲೆ ಮಾಡಬೇಡಿ. ಅವುಗಳನ್ನು ಜಸ್ಟ ಈಗ್ನೋರ್ ಮಾಡಿ ಮತ್ತು ಅವುಗಳನ್ನು ರಿಪೋರ್ಟ್ ಮಾಡಿ. ಫ್ರಿ ಟ್ರಾವೆಲ್ ಆಫರ್, ಲಾಟರಿ, ಲಕ್ಕಿ ಡ್ರಾ, ಮನಿ ಡಬಲ್ ಆಫರ್, ಫೇಕ್ ಬಿಜನೆಸ್ ಆಫರ ಇರುವ ಮೇಲಗಳೆಲ್ಲವು ಫಿಶಿಂಗ್ ಮೇಲಗಳಾಗಿರುತ್ತವೆ. ಫೇಕ್ ಈಮೇಲ ಐಡಿ, ಸ್ಪೆಲ್ಲಿಂಗ್ ಮತ್ತು ಗ್ರಾಮರ್ ಮಿಸ್ಟೇಕಗಳ ಆಧಾರದ ಮೇಲೆ ನೀವು ಫಿಶಿಂಗ್ ಮೇಲಗಳನ್ನು, ಮೆಸೇಜಗಳನ್ನು ಸುಲಭವಾಗಿ ಗುರ್ತಿಸಬಹುದು.

ಉದಾ : [email protected] ಅಂತಾ ಇರೋ ಬದಲು [email protected] ಅಂತಾ ಇದ್ರೆ ಅದು ಫಿಶಿಂಗ್ ಮೇಲ ಆಗಿರುತ್ತದೆ. ಅದಕ್ಕಾಗಿ ಯಾವುದೇ ಈಮೇಲಗೆ ರಿಪ್ಲೆ ಮಾಡುವುದಕ್ಕಿಂತ ಮುಂಚೆ ಒಂದ್ಸಲ ಈಮೇಲ ಅಡ್ರೆಸ್ಸನ್ನು ಸರಿಯಾಗಿ ಗಮನಿಸಿ.

ಆನಲೈನನಲ್ಲಿ ಸೇಫಾಗಿರುವುದು ಹೇಗೆ? - How to be Safe in Online? - Cyber Security Tips in Kannada

8) ನಿಮ್ಮ ಕ್ರೆಡಿಟ್ ಕಾರ್ಡ, ಡೆಬಿಟ ಕಾರ್ಡ ಮತ್ತು ಬ್ಯಾಂಕಿಂಗ್ ಡಿಟೇಲ್ಸನ್ನು ಆನಲೈನನಲ್ಲಿ ಅನಾವಶ್ಯಕವಾಗಿ ಶೇರ್ ಮಾಡಬೇಡಿ. ಅವುಗಳ ಫೋಟೋ ತೆಗೆದು ಫೇಸ್ಬುಕ್ ವಾಟ್ಸಾಪ ಸ್ಟೇಟಸಗಳಲ್ಲಿ ಇಡಬೇಡಿ. ನಿಮ್ಮ ಆನಲೈನ ಬ್ಯಾಂಕ್ ಅಕೌಂಟ್ ಡಿಟೇಲ್ಸ, ಪಾಸವರ್ಡ, ಕಾರ್ಡ ನಂಬರ, CVV ನಂಬರ, ಎಕ್ಸಪೈರಿ ಡೇಟ್, PIN, OTP ಇತ್ಯಾದಿಗಳನ್ನು ಫೋನನಲ್ಲಿ ಯಾರಿಗೂ ಹೇಳಬೇಡಿ. ಬ್ಯಾಂಕನವರು ಯಾವುದೇ ಕಾರಣಕ್ಕೂ ಈ ಮಾಹಿತಿಗಳನ್ನು ನಿಮಗೆ ಫೋನ್ ಮಾಡಿ ಕೇಳುವುದಿಲ್ಲ. ಫ್ರಾಡ ಕರೆಗಳಿಗೆ ಉತ್ತರಿಸಿ ದುಡ್ಡನ್ನು ಕಳೆದುಕೊಳ್ಳಬೇಡಿ. ಒಂದು ವೇಳೆ ಏನಾದರೂ ಯಡವಟ್ಟಾದರೆ ತಕ್ಷಣವೇ ಬ್ಯಾಂಕಿಗೆ ರಿಪೋರ್ಟ್ ಮಾಡಿ ನಿಮ್ಮ ಕಾರ್ಡನ್ನು ಬ್ಲಾಕ್ ಮಾಡಿಸಿ. ನಂತರ ಸೈಬರ ಕ್ರೈಂ ಕಂಪ್ಲೇಂಟನ್ನು ದಾಖಲಿಸಿ. ನಿಮಗೆ ಇನ್ನೊಂದು ಇಂಪಾರಟಂಟ ವಿಷಯ ಹೇಳಬೇಕು. ಬ್ಯಾಂಕಿನ ನೆಗ್ಲಿಜೆನ್ಸಿ ಅಥವಾ ಸೆಕ್ಯುರಿಟಿ ಲ್ಯಾಪ್ಸನಿಂದ ನೀವು ಹಣ ಕಳೆದುಕೊಂಡಿದ್ರೆ ಮಾತ್ರ ಬ್ಯಾಂಕ ನಿಮ್ಮ ನಷ್ಟವನ್ನು ತುಂಬಿಕೊಡುತ್ತದೆ. ಆದರೆ ನೀವೇ ಫ್ರಾಡ ಕರೆಗಳಿಗೆ OTP ಕೊಟ್ಟು ನಾಮ ಹಾಕಿಸಿಕೊಂಡ್ರೆ ಅದಕ್ಕೆ ಬ್ಯಾಂಕ್ ಯಾವುದೇ ಜವಾಬ್ದಾರಿ ತೆಗೆದುಕೊಳ್ಳಲ್ಲ.

ಆನಲೈನನಲ್ಲಿ ಸೇಫಾಗಿರುವುದು ಹೇಗೆ? - How to be Safe in Online? - Cyber Security Tips in Kannada

9) ನೀವು ಟ್ರಾವೆಲ ಮಾಡದೇ ಇರುವಾಗ ಲೋಕೆಷನ್ ಸರ್ವಿಸನ್ನು ಆಫ್ ಮಾಡಿ. ನೀವು ನಿಮ್ಮ ಲ್ಯಾಪಟಾಪ ಅಥವಾ ಮೊಬೈಲನಲ್ಲಿ ಅಥವಾ ವಾಟ್ಸಾಪಲ್ಲಿ Auto Download ಆಪ್ಷನನ್ನು ಆನ್ ಮಾಡಿದ್ದರೆ ಮೊದಲು ಅದನ್ನು ಆಫ್ ಮಾಡಿ. ಜಗತ್ತಿನ ಅತಿದೊಡ್ಡ ಶ್ರೀಮಂತ ವ್ಯಕ್ತಿ, ಅಮೆಜಾನ್ ಕಂಪನಿಯ ಮಾಲೀಕ ಜೆಫ್ ಬೆಝೋಸ ಅವರ ಫೋನ್ ಈ ವಾಟ್ಸಾಪನಿಂದ ಹ್ಯಾಕ್ ಆಗಿತ್ತು ಎಂಬುದನ್ನು ಮರೆಯಬೇಡಿ. ಅದಕ್ಕಾಗಿ ನಿಮ್ಮ ಬ್ರೌಜರ ಸೆಟ್ಟಿಂಗ್ಸಗೆ ಹೋಗಿ Auto Download, Auto Fill, Auto Password Save ಆಪ್ಷನ್ಸಗಳನ್ನು ಮೊದಲು ಆಫ್ ಮಾಡಿ.

10) ಕೂಡಲೇ ನಿಮ್ಮ ಎಲ್ಲ ಸೋಸಿಯಲ್ ಮೀಡಿಯಾ ಅಕೌಂಟಗಳಿಗೆ ಲಾಗಿನ ಆಗಿ Privacy Settingsಗಳನ್ನು ಅಪಡೇಟ ಮಾಡಿ. ಫೇಸ್ಬುಕ್, ಟ್ವೀಟರ್, ಇನ್ಸಟಾಗ್ರಾಮಗಳಲ್ಲಿ Privacy Settings Update ಮಾಡಿ.

* ನಿಮ್ಮ ಮೊಬೈಲ್ ನಂಬರ್ ಮತ್ತು ಈಮೇಲ ಐಡಿಯನ್ನು ಪ್ರವೇಟಾಗಿಡಿ. ಅಂದ್ರೆ Only Me ಆಪ್ಷನ ಸೆಲೆಕ್ಟ ಮಾಡಿ.

* ನಿಮ್ಮ ಫೇಸ್ಬುಕ್ ಪ್ರೋಫೈಲಗೆ Profile Guard ಸೆಟ್ ಮಾಡಿ.

* ನಿಮ್ಮ ಫ್ರೆಂಡಲಿಸ್ಟ ಮತ್ತು ಫಾಲೋ ಲಿಸ್ಟಲ್ಲಿರುವ ಎಲ್ಲ Unknown ವ್ಯಕ್ತಿಗಳನ್ನು ಅನಫ್ರೆಂಡ್ ಮಾಡಿ ಇಲ್ಲವೇ ಸೀದಾ ಬ್ಲಾಕ್ ಮಾಡಿಬಿಡಿ.

* ನಿಮ್ಮ ಎಲ್ಲ ಇನಫಾರ್ಮೆಷನನ್ನು ಬರೀ ನಿಮ್ಮ ಫ್ರೆಂಡ್ಸಗಳಿಗೆ ಮಾತ್ರ ಅವೇಲೆಬಲ್ ಮಾಡಿ. ಪಬ್ಲಿಕಗೆ ಇಡಬೇಡಿ.

* ಸೋಸಿಯಲ್ ಮಿಡಿಯಾಗಳಲ್ಲಿ ಯಾವುದೇ ತರಹದ ಸೆನ್ಸಿಟಿವ್ ಡಾಟಾವನ್ನು ಶೇರ್ ಮಾಡಬೇಡಿ.

ಆನಲೈನನಲ್ಲಿ ಸೇಫಾಗಿರುವುದು ಹೇಗೆ? - How to be Safe in Online? - Cyber Security Tips in Kannada

11) ಯಾವುದೇ ವೆಬಸೈಟಗೆ ವಿಸಿಟ ಮಾಡುವ ಮುಂಚೆ ಅದರ URLನ್ನು ಸರಿಯಾಗಿ ಗಮನಿಸಿ. HTTPS ಮತ್ತು Security Lock Signನ್ನು ಗಮನಿಸಿ. ಒಂದು ವೇಳೆ ಆ ವೆಬಸೈಟಲ್ಲಿ HTTPS ಮತ್ತು Security Sign ಇಲ್ಲದಿದ್ದರೆ ಆ ವೆಬಸೈಟಿಗೆ ಲಾಗಿನ ಆಗಬೇಡಿ ಮತ್ತು ಯಾವುದೇ ತರಹದ ಪೇಮೆಂಟಗಳನ್ನು ಮಾಡಬೇಡಿ.

ಆನಲೈನನಲ್ಲಿ ಸೇಫಾಗಿರುವುದು ಹೇಗೆ? - How to be Safe in Online? - Cyber Security Tips in Kannada

12) ಬೇರೆಯವರು ಬರೆದ ಕವನಗಳನ್ನು, ಕಥೆಗಳನ್ನು, ಬೇರೆಯವರ ವಿಡಿಯೋಗಳನ್ನು, ಮ್ಯುಜಿಕನ್ನು, ಫೋಟೋಗ್ರಾಫಗಳನ್ನು, ಸಾಫ್ಟವೇರಗಳನ್ನು ಆಯಾ ಕ್ರಿಯೆಟರಗಳ ಅನುಮತಿಯಿಲ್ಲದೆ ಡೌನಲೋಡ್ ಅಥವಾ ಅಪಲೋಡ್ ಮಾಡಬೇಡಿ. ಒಂದು ವೇಳೆ ನೀವು ಈ ರೀತಿ ಮಾಡಿ ಸಿಕ್ಕಾಕೊಂಡ್ರೆ Copyrights Violation ಕೇಸ್ ಆಗುತ್ತೆ ಮತ್ತು ನಿಮಗೆ ಭಾರೀ ಮೊತ್ತದ ಹಣವನ್ನು ಫೈನಾಗಿ ಕಟ್ಟಬೇಕಾಗುತ್ತದೆ. ನಿಮಗೆ ಫೈನ್ ಕಟ್ಟಕ್ಕಾಗದಿದ್ರೆ ನಿಮ್ಮ ಪ್ರಾಪರ್ಟಿ ಜಪ್ತಿಯಾಗುತ್ತದೆ. ಜೊತೆಗೆ ನಿಮಗೆ ಜೈಲು ಶಿಕ್ಷೆಯಾಗುವ ಸಾಧ್ಯತೆಯೂ ಅಧಿಕವಾಗಿದೆ. ಅದಕ್ಕಾಗಿ ಬೇರೆಯವರ ಕಂಟೆಂಟನ್ನು ಕದ್ದು ಪಬ್ಲಿಷ ಮಾಡೋವಾಗ ಹುಷಾರಾಗಿರಿ.

ಆನಲೈನನಲ್ಲಿ ಸೇಫಾಗಿರುವುದು ಹೇಗೆ? - How to be Safe in Online? - Cyber Security Tips in Kannada

13) ಫೇಸ್ಬುಕಲ್ಲಿರೋ ಫೇಕ್ ವ್ಯಕ್ತಿಗಳಿಂದ ದೂರವಿರಿ. ಕೆಲವೊಂದಿಷ್ಟು ಜನ ಹುಡುಗಿಯರ ಹೆಸರಲ್ಲಿ ಯಾವುದೋ ಹುಡುಗಿಯ ಫೋಟೋ ಹಾಕಿ ಫೇಕ್ ಅಕೌಂಟಗಳನ್ನು ಕ್ರಿಯೇಟ ಮಾಡಿ ಅಮಾಯಕರ ಜೀವನದ ಜೊತೆಗೆ ಆಟವಾಡುತ್ತಿದ್ದಾರೆ. ಎಷ್ಟೋ ಹುಡುಗಿಯರ ಲೈಫನ್ನು ಹಾಳು ಮಾಡಿದ್ದಾರೆ. ಒಂದು ವೇಳೆ ಯಾರಾದರೂ ನಿಮ್ಮ ಹೆಸರಲ್ಲಿ ಫೇಕ್ ಫೇಸ್ಬುಕ್ ಐಡಿ ಕ್ರಿಯೆಟ್ ಮಾಡಿದ್ದರೆ ಅಥವಾ ನಿಮ್ಮ ಫೋಟೋವನ್ನು ಮಿಸಯುಜ ಮಾಡುತ್ತಿದ್ದರೆ ಅಂಥವರನ್ನು ಸುಮ್ಮನೆ ಬಿಡಬೇಡಿ. ಮೊದಲು ಅದರ ಸ್ಕ್ರೀನ್ ಶಾಟ ತೆಗೆದಿಟ್ಟುಕೊಳ್ಳಿ. ನಂತರ ಫೇಸ್ಬುಕ್ಕಿಗೆ ಆ ಪ್ರೋಫೈಲನ್ನು ರಿಪೋರ್ಟ್ ಮಾಡಿ. ಫೇಸ್ಬುಕ್ ನಿಮಗೆ ಸಹಾಯ ಮಾಡದಿದ್ದರೆ ಭಾರತದ ಸೈಬರ ಕ್ರೈಂ ಪೋರ್ಟಲ Cybercrime.gov.in ನಲ್ಲಿ ಒಂದು ಆನಲೈನ ಕಂಪ್ಲೆಂಟನ್ನು ದಾಖಲಿಸಿ. ನಿಮಗೆ ಪ್ರೊಟೆಕ್ಷನ ಸಿಕ್ಕೇ ಸಿಗುತ್ತದೆ.

ಆನಲೈನನಲ್ಲಿ ಸೇಫಾಗಿರುವುದು ಹೇಗೆ? - How to be Safe in Online? - Cyber Security Tips in Kannada

14) ಸೈಬರ್ ಬುಲ್ಲಿಂಗನಿಂದ ಹುಷಾರಾಗಿರಿ. ಸೋಸಿಯಲ್ ಮೀಡಿಯಾಗಳಲ್ಲಿ ಯಾರಿಗೂ ಕೆಟ್ಟ ಕಮೆಂಟಗಳಿಂದ, ಕೆಟ್ಟ ಮೆಸೇಜಗಳಿಂದ ಮಾನಸಿಕ ಹಿಂಸೆ ಕೊಡಬೇಡಿ. ಒಂದು ವೇಳೆ ಎದುರಗಡೆಯಿರುವ ವ್ಯಕ್ತಿ ಸೈಬರ ಕ್ರೈಂ ಕೇಸ ದಾಖಲಿಸಿದರೆ ನಿಮ್ಮ ಪರಿಸ್ಥಿತಿ ಗಂಭೀರವಾಗುತ್ತದೆ. ಯಾರಾದರೂ ನಿಮಗೆ ಮಾನಸಿಕ ಹಿಂಸೆ ಕೊಡುತ್ತಿದ್ದರೆ ಅಂದರೆ ಸೈಬರ ಬುಲ್ಲಿಂಗ್ ಮಾಡುತ್ತಿದ್ದರೆ ಅವರನ್ನು ನೇರವಾಗಿ ಬ್ಲಾಕ್ ಮಾಡಿ. ಮತ್ತೆ ಬೇರೆ ಐಡಿ ಕ್ರಿಯೆಟ್ ಮಾಡಿ ಮತ್ತೆ ಕಾಡಲು ಪ್ರಾರಂಭಿಸಿದರೆ ಅವರನ್ನು ಸುಮ್ಮನೆ ಬಿಡಬೇಡಿ. ನೀವು ಒಳ್ಳೆಯವರು ಸುಮ್ಮನೆ ಇದೀರಿ ಅಂತಾನೆ ಕೆಟ್ಟವರಿಗೆ ಶಕ್ತಿ ಬರ್ತಿರೋದು.

* ನಿನಗೆ ಆಫಲೈನನಲ್ಲಿ ವೈಯುಕ್ತಿಕವಾಗಿ ಗೊತ್ತಿರೊನ್ನ ಮಾತ್ರ ಆನಲೈನನಲ್ಲಿ ಆ್ಯಡ್ ಮಾಡಕೊಳ್ಳಿ. ಅದಕ್ಕಿಂತ ಮುಂಚೆ ಅದು ಫೇಕ್ ಐಡಿನಾ ಅಥವಾ ನಿಜಾನಾ ಅಂತಾ ಚೆಕ್ ಮಾಡ್ಕೋಳಿ.

* ಅಪರಿಚಿತ ವ್ಯಕ್ತಿಗಳಿಂದ ಬರುತ್ತಿರುವ ಪ್ರೈವೇಟ್ ಮೆಸೆಜಗಳಿಗೆ ಉತ್ತರಿಸಬೇಡಿ.

* ಅಪರಿಚಿತ ವ್ಯಕ್ತಿಗಳ ಫ್ರೆಂಡ್ ರಿಕ್ವೇಸ್ಟ ಮತ್ತು ಫಾಲೋ ರಿಕ್ವೆಸ್ಟಗಳನ್ನು ಆ್ಯಕ್ಸೆಪ್ಟ ಮಾಡಿಕೊಳ್ಳಬೇಡಿ.

* ನಿಮ್ಮ ಪರ್ಸನಲ ಡಿಟೆಲ್ಸನ್ನು ಇಲ್ಲವೇ ಫೋಟೋಗಳನ್ನು ಅಪರಿಚಿತರೊಂದಿಗೆ ಶೇರ್ ಮಾಡಬೇಡಿ.

* ತಲೆ ತಿನ್ನೊ ಗಿರಾಕಿಗಳು ಸಿಕ್ರೆ ಕೂಡಲೇ ಬ್ಲಾಕ್ ಮಾಡಿ ನೆಮ್ಮದಿಯಾಗಿರಿ.

ಆನಲೈನನಲ್ಲಿ ಸೇಫಾಗಿರುವುದು ಹೇಗೆ? - How to be Safe in Online? - Cyber Security Tips in Kannada

15) ಆನಲೈನ ಜಾಬ್ ಫ್ರಾಡಗಳ ಬಗ್ಗೆ ಎಚ್ಚರವಾಗಿರಿ. ಮನೆಯಲ್ಲಿ ಕುಳಿತು ತಿಂಗಳಿಗೆ 30,000 ಗಳಿಸಿ ಎಂಬ ಆ್ಯಡಗಳನ್ನು ನಂಬಿ ಮೋಸ ಹೋಗಬೇಡಿ. ಯಾವುದೇ ಕಂಪನಿ ಕೆಲಸಕ್ಕೆ ಜಾಯಿನ ಮಾಡಿಸಿಕೊಳ್ಳಲು ದುಡ್ಡನ್ನು ಕೇಳುವುದಿಲ್ಲ. ಕೇಳಿದರೆ ಅದು ಕಂಪನಿಯೇ ಅಲ್ಲ. ಕೆಲಸ ಸಿಗುತ್ತೆ ಅಂತ ಅಡ್ವಾನ್ಸ್‌ಡಾಗಿ ಯಾರಿಗೂ ಹಣ ಕೊಡಬೇಡಿ. ಕಂಪನಿಯವರು ನಿಮಗೆ ಹಣ ಕೊಡಬೇಕು. ನೀವು ಕಂಪನಿಗೆ ಕೊಡೋದಲ್ಲ. ನೀವು ಆನಲೈನನಲ್ಲಿ ಜಾಬ್ ಹುಡುಕುತ್ತಿದ್ದರೆ ಬರೀ ಗವರ್ನಮೆಂಟ ವೆಬಸೈಟಗಳನ್ನು ಮತ್ತು ಟ್ರಸ್ಟೆಡ ಫೇಮಸ ನ್ಯೂಜ ಪೋರ್ಟಲಗಳನ್ನು ಮಾತ್ರ ನಂಬಿ. ಫೇಕ್ ನ್ಯೂಜ ಪೋರ್ಟಲಗಳನ್ನು, ಫೇಕ್ ಜಾಬ್ ಪೋರ್ಟಲಗಳನ್ನು ನಂಬಿ ಮೋಸ ಹೋಗಬೇಡಿ.

ಆನಲೈನನಲ್ಲಿ ಸೇಫಾಗಿರುವುದು ಹೇಗೆ? - How to be Safe in Online? - Cyber Security Tips in Kannada

16) ನೀವೊಬ್ಬ ಬಿಜನೆಸಮ್ಯಾನ ಆಗಿದ್ದರೆ ತಪ್ಪದೆ ನಿಮ್ಮ ಕಂಪನಿಯಲ್ಲಿ ಒಂದು Cyber Crime Awareness Workshopನ್ನು ಕಂಡಕ್ಟ ಮಾಡಿ. ನಿಮ್ಮ ಫ್ರೆಂಡ್ಸ್ ಸರ್ಕಲನಲ್ಲಿರೋ ಇಂಟರನೆಟ್ ಎಕ್ಸಪರ್ಟಗಳ ಸಹಾಯ ಮತ್ತು ಸಲಹೆ ತೆಗೆದುಕೊಳ್ಳಿ. ನಿಮ್ಮ ಎಂಪ್ಲಾಯರಗಳನ್ನು ಎಜುಕೇಟ ಮಾಡಿ. ನಿಮ್ಮ ಬಿಜನೆಸ್ಸನ್ನು ಸೇಫಾಗಿಟ್ಟುಕೊಳ್ಳಿ.

ಓಕೆ ಗೆಳೆಯರೇ, ಇವಿಷ್ಟು ಟಿಪ್ಸಗಳನ್ನು ಫಾಲೋ ಮಾಡಿ ಮತ್ತು ಆನಲೈನನಲ್ಲಿ ಸೇಫಾಗಿರಿ. ಈಗಾಗಲೇ ನಮ್ಮ ಕೇಂದ್ರ ಸರ್ಕಾರ, ಐಟಿ ಡಿಪಾರ್ಟಮೆಂಟಗಳು ಇದರ ಬಗ್ಗೆ ಅವೆರನೆಸ್ಸನ್ನು ಮೂಡಿಸುತ್ತಿವೆ. ನಮ್ಮ ಕಂಪನಿಯ ವತಿಯಿಂದಲೂ ನಾವು ನಮ್ಮ ಕಸ್ಟಮರಗಳಲ್ಲಿ ಅವೆರನೆಸ್ಸನ್ನು ಮೂಡಿಸುತ್ತಿದ್ದೇವೆ. ನೀವು ಸೇಫಾಗಿರಿ ಮತ್ತು ನಿಮ್ಮ ಆತ್ಮೀಯರಿಗೂ ಸೇಫಾಗಿರಲು ಹೇಳಿ. ಈ ಅಂಕಣವನ್ನು ನಿಮ್ಮ ಫ್ರೆಂಡ್ಸ್ ಆ್ಯಂಡ್ ಫ್ಯಾಮಿಲಿ ಮೆಂಬರಗಳೊಂದಿಗೆ ತಪ್ಪದೆ ಶೇರ್ ಮಾಡಿ. ಧನ್ಯವಾದಗಳು.

    ಈ ಅಂಕಣ (Article) ನಿಮಗೆ ಇಷ್ಟವಾಗಿದ್ದರೆ ನಿಮ್ಮೆಲ್ಲ ಗೆಳೆಯರೊಡನೆ ಮತ್ತು ನೀವಿರುವ ಎಲ್ಲ ಕನ್ನಡ ಫೇಸ್ಬುಕ್ ಗ್ರೂಪಗಳಲ್ಲಿ ಇದನ್ನು ತಪ್ಪದೇ ಶೇರ್ (Share) ಮಾಡಿ. ಜೊತೆಗೆ ಪ್ರತಿದಿನ ಹೊಸಹೊಸ ಅಂಕಣಗಳನ್ನು, ಪ್ರೇಮಕಥೆಗಳನ್ನು, ಕವನಗಳನ್ನು ಉಚಿತವಾಗಿ ಓದಲು ತಪ್ಪದೆ ನನ್ನ ಫೇಸ್ಬುಕ್ ಪೇಜನ್ನು https://www.facebook.com/Directorsatishkumar/ (Director Satishkumar) ಲೈಕ್ ಮಾಡಿ.

Follow Me On : Facebook | Instagram | YouTube | Twitter

My Books : Kannada Books | Hindi Books | English Books

⚠ STRICT WARNING ⚠

Content Rights :

ಈ ಅಂಕಣದ ಎಲ್ಲ ಹಕ್ಕುಗಳನ್ನು ಡೈರೆಕ್ಟರ್ ಸತೀಶಕುಮಾರ ಹಾಗೂ ರೋರಿಂಗ್ ಕ್ರಿಯೇಷನ್ಸ್ ಪ್ರೈವೇಟ್ ಲಿಮಿಟೆಡ್ ಕಂಪನಿ ವತಿಯಿಂದ ಸಂಪೂರ್ಣವಾಗಿ ಕಾಯ್ದಿರಿಸಲಾಗಿದೆ. ಡೈರೆಕ್ಟರ್ ಸತೀಶಕುಮಾರ ಅವರ ಅನುಮತಿಯಿಲ್ಲದೆ ಈ ಅಂಕಣದ ಯಾವುದೇ ಭಾಗವನ್ನು ಕಾಪಿ ಮಾಡುವಂತಿಲ್ಲ, ಬೇರೆ ಭಾಷೆಗಳಿಗೆ ಅನುವಾದಿಸುವಂತಿಲ್ಲ ಮತ್ತು ಇದನ್ನು ಬೇರೆಡೆಗೆ ಪ್ರಕಟಿಸುವಂತಿಲ್ಲ. ಯಾವುದೇ ಸಾಮಾಜಿಕ ಜಾಲತಾಣಗಳಲ್ಲಿ ಪೋಸ್ಟ್ ಮಾಡುವಂತಿಲ್ಲ. ಮುದ್ರಣ ಮಾಡುವಂತಿಲ್ಲ. ಒಂದು ವೇಳೆ ಯಾರಾದರೂ ಕಾಪಿ ರೈಟ್ಸ್ ನಿಯಮಗಳನ್ನು ಉಲ್ಲಂಘಿಸಿದರೆ ಅವರ ಮೇಲೆ ಸೂಕ್ತ ಕಾನೂನು ಕ್ರಮ ಕೈಗೊಳ್ಳಲಾಗುವುದು ಹಾಗೂ ಆಗಿರುವ ನಷ್ಟವನ್ನು ಅವರಿಂದಲೇ ವಸೂಲಿ ಮಾಡಲಾಗುವುದು.

All Rights of this article are fully reserved by Director Satishkumar and Roaring Creations Private Limited India. No part of this article can be copied, translated or re published anywhere without the written permission of Director Satishkumar. If such violation of copy rights found to us, then we legally punish to copy cats and recover our loss by them only.

© Director Satishkumar and Roaring Creations Private Limited, India.

Director Satishkumar

Satishkumar is a young multi language writer (English, Hindi, Marathi and Kannada), Motivational Speaker, Entrepreneur and independent filmmaker from India. And also he is the Co-founder and CEO of Roaring Creations Pvt Ltd India. Follow Me On : Facebook | Instagram | YouTube | Twitter My Books : Kannada Books | Hindi Books | English Books