ಬಿಜನೆಸ್ ಲೆಸನ್ 13
ಹಾಯ್ ಗೆಳೆಯರೇ, ನಾನು ನಿಮ್ಮ ಸತೀಶಕುಮಾರ. ಬಹಳಷ್ಟು ಜನ ಬಿಜನೆಸಮ್ಯಾನಗಳು ಅಡ್ವಟೈಜಿಂಗನ್ನು ಒಂದು ಎಕ್ಸಪೆನ್ಸ ಅಂತಾ ತಿಳಿದುಕೊಂಡಿದ್ದಾರೆ. ಆದರೆ ಅಡ್ವಟೈಜಿಂಗ್ ಎಕ್ಸಪೇನ್ಸಲ್ಲ, ಅದು ಬೆಸ್ಟ ಇನ್ವೇಸ್ಟಮೆಂಟ ಆಗಿದೆ. ನೀವು ನಿಮ್ಮ ಬಿಜನೆಸ್ಸನ್ನು ಸರಿಯಾಗಿ ಅಡ್ವಟೈಜ ಮಾಡದಿದ್ದರೆ ಕಸ್ಟಮರಗಳಿಗೆ ನಿಮ್ಮ ಬಿಜನೆಸ್ ಬಗ್ಗೆ, ಸರ್ವಿಸ್ ಬಗ್ಗೆ ಅಥವಾ ಪ್ರೋಡಕ್ಟಗಳ ಬಗ್ಗೆ ಹೇಗೆ ಗೊತ್ತಾಗುತ್ತೆ? ಅದಕ್ಕಾಗಿ ನೀವು ನಿಮ್ಮ ಬಿಜನೆಸ್ಸನ್ನು ಸರಿಯಾಗಿ ಅಡ್ವಟೈಜ ಮಾಡಲೇಬೇಕು. ಈ ಎಪಿಸೋಡನಲ್ಲಿ ನಾನು ಫ್ರೀ ಮತ್ತು ಪೇಡ್ ಅಡ್ವಟೈಜಿಂಗ್ ಮೆಥಡಗಳನ್ನು ಹೇಳುವೆ. ನಿಮ್ಮ ಬಳಿ ಅಡ್ವಟೈಜಿಂಗಾಗಿ ಬಜೆಟಯಿದ್ದರೆ ಡೈರೆಕ್ಟಾಗಿ ಪೇಡ್ ಅಡ್ವಟೈಜಿಂಗ ಮೆಥಡಗಳನ್ನು ಫಾಲೋ ಮಾಡಿ. ಒಂದು ವೇಳೆ ದುಡ್ಡಿಲ್ಲದಿದ್ದರೆ ಫ್ರೀ ಅಡ್ವಟೈಜಿಂಗ್ ಮೆಥಡಗಳನ್ನು ಫಾಲೋ ಮಾಡಿ.
ಮೊದಲನೆದಾಗಿ ಫ್ರೀ ಅಡ್ವಟೈಜಿಂಗ ಮೆಥಡಗಳನ್ನು ನೋಡೋಣಾ ;
1) ಗೂಗಲನಿಂದ ಫ್ರಿಯಾಗಿ ಸಿಗ್ತಿರೋ Google My Business ಮತ್ತು Local Business Listing ಆಪ್ಶನನ್ನು ಸರಿಯಾಗಿ ಬಳಸಿಕೊಳ್ಳಿ. ಅಂದರೆ ಗೂಗಲ ಮ್ಯಾಪನಲ್ಲಿ ನಿಮ್ಮ ಬಿಜನೆಸ್ ಅಡ್ರೆಸ ಹಾಗೂ ಎಲ್ಲ ಡಿಲೇಲ್ಸ ಹಾಕಿ ಗೂಗಲನಿಂದ ಅದನ್ನು ವೆರಿಫೈ ಮಾಡಿಕೊಳ್ಳಿ. ಗೂಗಲ ಮ್ಯಾಪನಲ್ಲಿ ನಿಮ್ಮ ಬಿಜನೆಸ್ಸನ್ನು ಲಿಸ್ಟಿಂಗ್ ಮಾಡುವಾಗ ನಿಮ್ಮ ಬಿಜನೆಸ್ ಹೆಸರು, ವಿಳಾಸ, ಫೋನ್ ನಂಬರ, ಈಮೇಲ ಐಡಿ, ವೆಬಸೈಟ ಲಿಂಕ್, ಅಟ್ರ್ಯಾಕ್ಟಿವ್ ಫೋಟೋಗ್ರಾಪ್ಸ, ವಿಡಿಯೋಜಗಳನ್ನು ಸರಿಯಾಗಿ ಅಪಡೇಟ ಮಾಡಿ. ಲೋಕಲ ಸರ್ಚ ರಿಸಲ್ಟ್ಸಗಳಲ್ಲಿ ನಿಮ್ಮ ಬಿಜನೆಸ್ ಸಿಗುವಂತೆ ಸರಿಯಾಗಿ ಆಪ್ಟಿಮೈಜ ಮಾಡಿ.
2) ಪಾಪುಲರ ಕಂಟೆಂಟ್ ಪಬ್ಲಿಶಿಂಗ ಸೈಟಗಳಲ್ಲಿ, ಬ್ಲಾಗಗಳಲ್ಲಿ ನಿಮ್ಮ ಬಿಜನೆಸ್ಸಗೆ ಸಂಬಂಧಪಟ್ಟಂತೆ ಫ್ರೀ ಗೆಸ್ಟ ಪೋಸ್ಟಗಳನ್ನು, ಆರ್ಟಿಕಲ್ಸಗಳನ್ನು ಬರೆಯಿರಿ ಇಲ್ಲವೇ ಬೇರೆಯವರಿಂದ ಬರೆಯಿಸಿ.
3) ಕೋರಾದಲ್ಲಿ (Quora) ನಿಮ್ಮ ಬಿಜನೆಸ್ ಫೀಲ್ಡಿಗೆ ಸಂಬಂಧಪಟ್ಟಂತೆ ಬಂದಿರುವ ಪ್ರಶ್ನೆಗಳಿಗೆಲ್ಲಾ ಸರಿಯಾಗಿ ಉತ್ತರಿಸಿ. ಕೊನೆಯಲ್ಲಿ ನಿಮ್ಮ ಹೆಸರಿನೊಂದಿಗೆ ನಿಮ್ಮ ಬಿಜನೆಸ್ ಡಿಟೇಲ್ಸ, ನಿಮ್ಮ ಕಂಪನಿ ಹೆಸರು, ವೆಬಸೈಟ ಇತ್ಯಾದಿಗಳನ್ನು ಹಾಕಿ.
4) ನಿಮ್ಮ ಬಿಜನೆಸ್ ಹೆಸರಲ್ಲಿ ಒಂದು ಲಿಂಕಡ್ ಇನ್ ಅಕೌಂಟ ಕ್ರಿಯೆಟ್ ಮಾಡಿ ಮತ್ತು ಅದನ್ನು ಪ್ರೊಫೇಷನಲಿ ಮೇಂಟೆನ ಮಾಡಿ. ಅದರಲ್ಲಿ ನಿಮ್ಮ ಬಿಜನೆಸ್ಸನ ಎಲ್ಲ ಮಾಹಿತಿಯನ್ನು ಸರಿಯಾಗಿ ಅಪಡೇಟ ಮಾಡಿ. ನಿಮ್ಮ ಸರಿಯಾದ ಕ್ವಾಂಟ್ಯಾಕ್ಟ ಡಿಟೇಲ್ಸನ್ನು ಫಿಲ್ ಮಾಡಿ.
5) ನಿಮ್ಮದೇ ಆದಂತಹ ಒಂದು ಬಿಜನೆಸ್ ನೆಟವರ್ಕನ್ನು ಬೆಳೆಸಿ. ಪಬ್ಲಿಕ್ ಬಿಜನೆಸ್ ಈವೆಂಟಗಳಿಗೆ, ಕಾನ್ಫರೆನ್ಸಗಳಿಗೆ ಅಟೆಂಡಾಗಿ ಮತ್ತು ನಿಮ್ಮ ಬಿಜನೆಸ್ ಬಗ್ಗೆ, ನಿಮ್ಮ ಸರ್ವಿಸ್ ಹಾಗೂ ಪ್ರೋಡಕ್ಟಗಳ ಬಗ್ಗೆ ಮಾತಾಡಿ. ಬಿಟ್ಟಿಯಾಗಿ ಸಿಗ್ತಿರೋ ಅವಕಾಶವನ್ನು ಚೆನ್ನಾಗಿ ಬಳಸಿಕೊಂಡು ನಿಮ್ಮ ಬಿಜನೆಸ್ಸನ್ನು ಸರಿಯಾಗಿ ಅಡ್ವಟೈಜ ಮಾಡಿ.
6) ಫೇಸ್ಬುಕ್ ಹಾಗೂ ಯುಟ್ಯೂಬನಂಥ ಸೋಸಿಯಲ್ ಮೀಡಿಯಾಗಳು ಬರೀ ಟೈಮಪಾಸಿಗಿವೆ ಅಂತಾ ತಿಳಿದುಕೊಳ್ಳಬೇಡಿ. ಬಹಳಷ್ಟು ಬಿಜನೆಸಮ್ಯಾನಗಳು ಈ ಸೋಸಿಯಲ್ ಮಿಡಿಯಾಗಳಲ್ಲಿ ತಮ್ಮ ಬಿಜನೆಸ್ಸನ್ನು ಅಡ್ವಟೈಜ ಮಾಡಿ ದಿನಾಲು ಕೋಟ್ಯಾಂತರ ರೂಪಾಯಿ ಹಣವನ್ನು ಗಳಿಸುತ್ತಿದ್ದಾರೆ. ಇವತ್ತೇ ನಿಮ್ಮ ಬಿಜನೆಸ್ ಹೆಸರಲ್ಲಿ ಒಂದು ಆಫೀಸಿಯಲ್ ಫೇಸ್ಬುಕ್ ಪೇಜ, ಇನಸ್ಟಾಗ್ರಾಮ, ಟ್ವೀಟರ್ ಅಕೌಂಟ ಹಾಗೂ ಯುಟ್ಯೂಬ ಚಾನೆಲಗಳನ್ನು ಕ್ರಿಯೆಟ ಮಾಡಿ. ಇವು 100% ಫ್ರಿಯಾಗಿವೆ. ಇವುಗಳಲ್ಲಿ ನಿಮ್ಮ ಬಿಜನೆಸನ ಸಂಪೂರ್ಣ ಮಾಹಿತಿಯನ್ನು ಫೋಟೋ ಹಾಗೂ ವಿಡಿಯೋಗಳ ರೂಪದಲ್ಲಿ ನಿಮ್ಮ ಗ್ರಾಹಕರಿಗೆ ತಿಳಿಸಿ. ಪ್ರತಿವಾರ ನಿಮ್ಮ ಬಿಜನೆಸಗೆ ಸಂಬಂಧಪಟ್ಟಂತೆ ಹೊಸ ಹೊಸ ವಿಡಿಯೋಗಳನ್ನು ಮಾಡಿ ಅವುಗಳನ್ನು ಫೇಸ್ಬುಕ್ ಹಾಗೂ ಯುಟ್ಯೂಬಗಳಲ್ಲಿ ಅಪಲೋಡ ಮಾಡುತ್ತಲೇ ಇರಿ.
7) ಸೋಸಿಯಲ್ ಮಿಡಿಯಾ ಇನಫ್ಲುಯನ್ಸರಗಳಿಗೆ ನಿಮ್ಮ ಪ್ರೋಡಕ್ಟಗಳನ್ನು ಫ್ರಿಯಾಗಿ ಕೊಡಿ ಮತ್ತು ಅವುಗಳ ಮೇಲೆ ರಿವ್ಯುವ ವಿಡಿಯೋಗಳನ್ನು ಮಾಡಲು ಹೇಳಿ. ಫ್ರಿಯಾಗಿ ಪ್ರೋಡಕ್ಟಗಳನ್ನು ಕೊಟ್ರೆ ರಿವ್ಯುವ ವಿಡಿಯೋಗಳನ್ನು ಮಾಡಲು ಬಹಳಷ್ಟು ಜನ ಯುಟ್ಯೂಬರಗಳು, ಫೇಸ್ಬುಕ್ ಕ್ರಿಯೆಟರಗಳು, ಟಿಕಟಾಕ ಹಾಗೂ ಇನಸ್ಟಾಗ್ರಾಮ ಆರ್ಟಿಸ್ಟಗಳು ರೆಡಿಯಿದಾರೆ. ಅವರಿಗೆ ನಿಮ್ಮ ಪ್ರೋಡಕ್ಟಗಳನ್ನು ಫ್ರಿಯಾಗಿ ಕೊಟ್ಟು ರಿವ್ಯುವ ಮಾಡಿಸಿ. ಅವರಿಗೆ ಫ್ರಿಯಾಗಿ ಮಾಡಲು ನಿರಾಕರಿಸಿದರೆ ಸ್ವಲ್ಪ ದುಡ್ಡನ್ನು ಆಫರ್ ಮಾಡಿ. ಪಾಪ ಅವರು ಹಣಕ್ಕಾಗಿಯೇ ಅಷ್ಟೆಲ್ಲ ಮಾಡ್ತಿರತ್ತಾರೆ. ಅವರಿಗೆ ದುಡ್ಡು ಕೊಟ್ಟು ನೀವು ದುಡ್ಡು ಮಾಡ್ಕೊಳ್ಳಿ.
8) ನಿಮ್ಮ ಬಿಜನೆಸ್ ಬಗ್ಗೆ ನಿಮ್ಮ ಕಸ್ಟಮರ್ಸಗಳಲ್ಲಿ ಅವೆರನೆಸ್ ಮೂಡಿಸುವುದಕ್ಕಾಗಿ ಫ್ರೀ ವರ್ಕಶಾಪಗಳನ್ನು, ವೆಬಿನಾರಗಳನ್ನು ಕಂಡಕ್ಟ ಮಾಡಿ.
9) ನಿಮ್ಮ ಈಮೇಲ ಸಿಗ್ನೆಚರನಲ್ಲಿ ನಿಮ್ಮ ಬಿಜನೆಸ್ಸನ್ನು ಮತ್ತು ಬ್ರ್ಯಾಂಡನ್ನು ಪ್ರೋಮೋಟ ಮಾಡಿ. ಪ್ಲೇ ಸ್ಟೋರನಿಂದ ವಾಟ್ಸಾಪ ಬಿಜನೆಸ್ ಆ್ಯಪನ್ನು ಡೌನಲೋಡ ಮಾಡಿಕೊಂಡು ಇನ್ಸ್ಟಾಲ ಮಾಡಿ ಮತ್ತು ಅದನ್ನು ನಿಮ್ಮ ಬಿಜನೆಸ್ ಪರಪಜಗಾಗಿ ಮಾತ್ರ ಬಳಸಿ. 24*7 ಎಲ್ಲ ಕಡೆಗಳಲ್ಲಿ ನಿಮ್ಮ ಕಸ್ಟಮರಗಳಿಗೆ ನಿಮ್ಮ ಬಿಜನೆಸ್ ಅಥವಾ ನಿಮ್ಮ ಪ್ರೋಡಕ್ಟ ಕಾಣಿಸಬೇಕು. ಆ ರೀತಿ ಅವರೊಂದಿಗೆ ಕಮ್ಯುನಿಕೇಟ ಮಾಡಿ.
10) ಜಸ್ಟಡೈಲ್, ಸುಲೇಖಾ, ಇಂಡಿಯಾ ಮಾರ್ಟ, ವೆಡ್ಡಿಂಗ ಪ್ಲ್ಯಾನರಗಳಂಥ ಫ್ರೀ ಬಿಜನೆಸ್ ಲಿಸ್ಟಿಂಗ್ ಸೈಟಗಳಲ್ಲಿ ನಿಮ್ಮ ಬಿಜನೆಸ್ಸನ್ನು ಲಿಸ್ಟ ಮಾಡಿ.
ಇವೀಷ್ಟು ಫ್ರೀ ಅಡ್ವಟೈಜಿಂಗ ಮೆಥಡಗಳಾದವು. ಈಗ ಪೇಡ್ ಅಡ್ವಟೈಜಿಂಗ್ ಮೆಥಡಗಳ ಬಗ್ಗೆ ನೋಡೋಣಾ.
1) ನಿಮ್ಮ ಬಿಜನೆಸ್ ಹೆಸರಲ್ಲಿ ಒಂದು ಆಫೀಸಿಯಲ್ ವೆಬಸೈಟನ್ನು ಕ್ರಿಯೆಟ ಮಾಡಿ. ಅದರಲ್ಲಿ ನಿಮ್ಮ ಬಿಜನೆಸನ ಸಂಪೂರ್ಣ ಮಾಹಿತಿಯನ್ನು ಈಜಿ ವರ್ಡಗಳಲ್ಲಿ ಹಾಗೂ ಅಟ್ರ್ಯಾಕ್ಟಿವ್ ಗ್ರಾಫಿಕ್ಸಗಳಲ್ಲಿ ಅಪಡೇಟ ಮಾಡಿ. ಜೊತೆಗೆ ಒಂದು ಸೇಪರೆಟ ಲ್ಯಾಂಡಿಂಗ್ ಪೇಜನ್ನು ಡಿಜೈನ ಮಾಡಿಕೊಳ್ಳುವುದನ್ನು ಮರೆಯದಿರಿ.
2) ಪೇಡ್ ಸೋಸಿಯಲ್ ಮೀಡಿಯಾ ಆ್ಯಡ ಕ್ಯಾಂಪೇನಗಳನ್ನು ರನ್ ಮಾಡಿ. ಅಂದರೆ ನಿಮ್ಮ ಬಿಜನೆಸ್ ಹೆಸರಲ್ಲಿ ಆಫೀಸಿಯಲ್ ಫೇಸ್ಬುಕ್, ಇನಸ್ಟಾಗ್ರಾಮ ಪೇಜಗಳನ್ನು ಹಾಗೂ ಯುಟ್ಯೂಬ ಚಾನೆಲನ್ನು ಕ್ರಿಯೆಟ ಮಾಡಿ. ನಂತರ ಅಟ್ರ್ಯಾಕ್ಟಿವ ಗ್ರಾಫಿಕ್ಸ, ಮೋಷನ ಪೋಸ್ಟರ್ ಹಾಗೂ ಆ್ಯಡಫಿಲ್ಮಗಳನ್ನು ಮಾಡಿ ಅವುಗಳನ್ನು ಎಲ್ಲ ಸೋಸಿಯಲ್ ಮೀಡಿಯಾಗಳಲ್ಲಿ ಹಣ ಕೊಟ್ಟು ಅಡ್ವಟೈಜ ಮಾಡಿ.
ಇನ್ನೂ ಬಹಳಷ್ಟು ತರಹದ ಪೇಡ್ ಅಡ್ವಟೈಜಿಂಗ್ ಮೆಥಡಗಳಿವೆ. ಅವುಗಳನ್ನು ಡಿಜಿಟಲ್ ಮಾರ್ಕೆಟಿಂಗ್ ಎಪಿಸೋಡನಲ್ಲಿ ಡಿಟೇಲಾಗಿ ನೋಡೋಣಾ. ಸದ್ಯಕ್ಕೆ ಫ್ರೀ ಅಡ್ವಟೈಜಿಂಗ ಮೆಥಡಗಳನ್ನು ಎಫೆಕ್ಟಿವ ಆಗಿ ಬಳಸಿ. ಪೇಡ್ ಅಡ್ವಟೈಜಿಂಗ್ ಮೆಥಡಗಳ ಹೆಸರನ್ನು ನೆನಪಿಡಿ ಸಾಕು. ನಾನು ಅವುಗಳ ಬಗ್ಗೆ ಡೆಡಿಕೆಟೆಡ್ ಬಿಜನೆಸ್ ಲೆಸನಗಳನ್ನು ಮಾಡುವೆ. ಆಗ ನಿಮಗೆ ಎಲ್ಲವೂ ಈಜಿಯಾಗಿ ಅರ್ಥವಾಗುತ್ತದೆ. ಈ ವಿಡಿಯೋ ನಿಮಗೆ ಯುಜಫುಲ್ ಅನಿಸಿದ್ರೆ ಈ ವಿಡಿಯೋಗೆ ಲೈಕ ಮಾಡಿ, ಕಮೆಂಟ ಮಾಡಿ. ಜೊತೆಗೆ ಚಾನೆಲಗೆ ಸಬಸ್ಕ್ರೈಬ ಮಾಡಿ, ಬೆಲ್ ಐಕಾನನ್ನು ಒತ್ತಿ. All the best and Thanks You…