1) ಬೆಳಿಗ್ಗೆ ಬೇಗನೆ ಎದ್ದೇಳುವುದೇನು ಮಹಾನ ಕಾರ್ಯವಲ್ಲ. ಆದರೆ ನೀವು ದಿನಾಲು ಬೆಳಿಗ್ಗೆ ಬೇಗನೆ ಎದ್ದರೆ ನಿಮ್ಮಿಂದ ಖಂಡಿತ ಮಹಾನ ಕಾರ್ಯಗಳಾಗುತ್ತವೆ…
2) ಸೂರ್ಯ ನಿಮ್ಮನ್ನು ಎಬ್ಬಿಸುವ ತನಕ ನೀವು ಮಲಗಿಕೊಂಡರೆ ನೀವು ಅಪಯಶಸ್ವಿಯಾಗುತ್ತೀರಿ. ನೀವು ಯಾವತ್ತಿನಿಂದ ಸೂರ್ಯನನ್ನು ಎಬ್ಬಿಸುತ್ತಿರೋ ಅವತ್ತಿನಿಂದ ನೀವು ಯಶಸ್ಸಿನೆಡೆಗೆ ಸಾಗುತ್ತೀರಿ…
3) ಇವತ್ತು ನೀವು ಏನು ಮಾಡುತ್ತೀರಿ ಎಂಬುದರ ಮೇಲೆ ನಿಮ್ಮ ನಾಳೆ ನಿರ್ಧಾರಿತವಾಗುತ್ತದೆ. ಅದಕ್ಕಾಗಿ ನಿಮ್ಮ ಇವತ್ತಿನ ದಿನವನ್ನು ಸರಿಯಾಗಿ ಬಳಸಿಕೊಳ್ಳಿ…
4) ಪ್ರತಿ ದಿನವನ್ನು ಹೊಸ ದಿನವೆಂದು ಪ್ರಾರಂಭಿಸಿ. ಹಳೆಯ ಕೆಟ್ಟ ಘಟನೆಗೆ ಕೊರಗದೆ, ಒಳ್ಳೆಯ ಘಟನೆಗೆ ಅಹಂಕಾರ ಪಡದೆ ಪ್ರತಿದಿನವನ್ನು ಹೊಸ ದಿನವಾಗಿ ಪ್ರಾರಂಭಿಸಿ. ಹೊಸಹೊಸ ಸಂಗತಿಗಳ ಮಜಾ ಅನುಭವಿಸುತ್ತಾ ಹ್ಯಾಪಿಯಾಗಿರಿ…
5) ನಗುವಿಗಿಂತ ದೊಡ್ಡ ಆಭರಣವಿಲ್ಲ, ಆತ್ಮವಿಶ್ವಾಸಕ್ಕಿಂತ ದೊಡ್ಡ ಆಯುಧವಿಲ್ಲ. ನಗು ಹಾಗೂ ಆತ್ಮವಿಶ್ವಾಸದೊಂದಿಗೆ ನಿಮ್ಮ ದಿನವನ್ನು ಪ್ರಾರಂಭಿಸಿ, ನಿಮ್ಮ ಗೆಲುವು ನಿಶ್ಚಿತ…
6) ಪ್ರಯತ್ನ ಯಾವತ್ತೂ ವ್ಯರ್ಥವಾಗಲ್ಲ. ನಿಮ್ಮ ಕೆಲಸವನ್ನು ನೀವು ಪ್ರಾಮಾಣಿಕವಾಗಿ ಮಾಡಿ ಪ್ರತಿಫಲ ತಾನಾಗಿಯೇ ನಿಮ್ಮನ್ನು ಹುಡುಕಿಕೊಂಡು ಬರುತ್ತದೆ…
7) ಯಾವುದೇ ಫಲಾಪೇಕ್ಷೆಯಿಲ್ಲದೆ ಎಲ್ಲರಿಗೂ ಒಳ್ಳೆಯದನ್ನ ಬಯಸಿ, ಸಾಧ್ಯವಾದಷ್ಟು ಒಳ್ಳೆಯದನ್ನ ಮಾಡಿ. ಏಕೆಂದರೆ ಹೂ ಮಾರುವವರ ಕೈಯಲ್ಲಿ ಯಾವಾಗಲೂ ಹೂವಿನ ಸುವಾಸನೆ ಇರುತ್ತದೆ.
8) ರೋಗ ಬರುವುದಕ್ಕಿಂತ ಮೊದಲು ಯೋಗ ಮಾಡಲು ಪ್ರಾರಂಭಿಸಿ. ಪ್ರತಿದಿನ ಎದ್ದ ಕೂಡಲೇ ತಪ್ಪದೇ ಯೋಗ ಮಾಡಿ ಫಿಟ್ ಆ್ಯಂಡ್ ಹೆಲ್ದಿಯಾಗಿರಿ. ನಿಮಗೆ ಆರೋಗ್ಯಭಾಗ್ಯದ ಜೊತೆಗೆ ರಾಜಯೋಗವೂ ಬರುತ್ತದೆ.
9) ನಿಮ್ಮ ಮನಸ್ಸನ್ನು ಯಾವಾಗಲೂ ಹೂದೋಟದಂತೆ ಇಡಿ, ಆಗ ಕಲರಫುಲ್ ಚಿಟ್ಟೆಗಳು ನಿಮ್ಮತ್ರ ಬರುತ್ತವೆ. ನಿಮ್ಮ ಮನಸ್ಸು ಗಲಿಜಾಗಿದ್ರೆ ಬರೀ ಸೊಳ್ಳೆಗಳಷ್ಟೇ ಬರುತ್ತವೆ.
10) ದಿನಾ ಬೆಳಗೆದ್ದು ನನ್ನತ್ರ ಅದಿಲ್ಲ ಇದಿಲ್ಲ ಅಂತಾ ಅಳಬೇಡಿ. ನಿಮ್ಮ ಸ್ಥಿತಿಗೆ ಆ ದೇವರನ್ನು ದೂರಬೇಡಿ. ಸದ್ಯಕ್ಕೆ ನಿಮ್ಮ ಬಳಿಯಿರುವುದಕ್ಕೆಲ್ಲ ದೇವರಿಗೆ ಧನ್ಯವಾದಗಳನ್ನು ಅರ್ಪಿಸಿ. ನಿಮ್ಮತ್ರ ಏನೇನಿದೆಯೋ ಮೊದಲು ಅದನ್ನೆಲ್ಲ ಸರಿಯಾಗಿ ಬಳಸಿಕೊಳ್ಳಿ. ಅದಕ್ಕಿಂತಲೂ ಹೆಚ್ಚಿನದ್ದು ನಿಮ್ಮನ್ನು ಹುಡುಕಿಕೊಂಡು ಬರುತ್ತದೆ. ಯಾರಿಗೆ ಗೊತ್ತು ದೇವರು ನಿಮ್ಮನ್ನು ಪರೀಕ್ಷಿಸುತ್ತಿರಬಹುದು, ಹತ್ತು ಸಾವಿರ ರೂಪಾಯಿಗಳನ್ನು ಸರಿಯಾಗಿ ಬಳಸಿಕೊಳ್ಳದವನಿಗೆ ಒಂದು ಕೋಟಿ ಹಣ ಕೊಟ್ಟೇನು ಪ್ರಯೋಜನ ಅಂತಾ…
11) ನೂರು ಮನಸ್ಸುಗಳನ್ನು ಮುರಿಯಲು ಒಂದು ಮಾತು ಸಾಕು. ನೂರು ಕನಸ್ಸುಗಳನ್ನು ನೂಚ್ಚು ನೂರು ಮಾಡಲು ಒಂದು ನೆಗೆಟಿವ ಆಲೋಚನೆ ಸಾಕು. ಸೋ ಯಾವುದೇ ಕಾರಣಕ್ಕೂ ನಿರಾಶರಾಗಬೇಡಿ, ನೆಗೆಟಿವ ಆಗಿ ಯೋಚಿಸಬೇಡಿ, ನೆಗೆಟಿವ ವ್ಯಕ್ತಿಗಳ ಜೊತೆಗೆ ಇರಬೇಡಿ. ನಿಮ್ಮ ಮೇಲೆ, ನಿಮ್ಮ ಕೆಲಸದ ಮೇಲೆ ನಂಬಿಕೆಯಿಟ್ಟು ಮುಂದೆ ಸಾಗಿ…
12) ನಾಳೆ ಎಂದವನ ಮನೆ ಹಾಳು ಎಂಬುದನ್ನು ಸದಾ ನೆನಪಲ್ಲಿಡಿ. ಕೆಲಸ ಮಾಡುವಾಗ ಮೈಮುರಿದು ಬೆವರು ಸುರಿಸಿ ಕೆಲಸ ಮಾಡಿ. ಹಿಡಿದ ಕೆಲಸವನ್ನು ಎಷ್ಟೇ ಕಷ್ಟವಾದರೂ ಮಾಡಿ ಮುಗಿಸಿ. ಆನಂತರ ಮನೆಯಲ್ಲಿ ರಾಜನ ತರ ವಿಶ್ರಾಂತಿ ಮಾಡಿ. ಮುಂಜಾನೆ ನಿಮ್ಮ ಕೆಲಸವನ್ನು ಪ್ರೀತಿಸಿ ಶ್ರದ್ಧೆಯಿಂದ ಕೆಲಸ ಮಾಡಿ, ಸಂಜೆ ಲಕ್ಷ್ಮಿ ದೇವಿ ನಿಮ್ಮ ಮನೆ ಬಾಗಿಲಿಗೆ ಬರುತ್ತಾಳೆ.
13) ಪ್ರತಿ ದಿನವನ್ನು ನಿಮ್ಮ ದಿನವಾಗಿ ಕಳೆಯಿರಿ. ನಿಮ್ಮೆಡೆಗೆ ಬರುತ್ತಿರುವ ಎಲ್ಲ ಅವಕಾಶಗಳನ್ನು ಎರಡು ತೋಳುಗಳನ್ನು ಚಾಚಿ ಬಾಚಿ ಅಪ್ಪಿಕೊಳ್ಳಿ. ಏಕೆಂದರೆ ಕೆಲವೊಂದಿಷ್ಟು ಅವಕಾಶಗಳು ಕೇವಲ ಒಂದೇ ಸಲ ಬರುತ್ತವೆ, ಪದೇಪದೇ ಬರುವುದಿಲ್ಲ.
14) ನೀವು ಯಾವತ್ತು ನಿಮ್ಮನ್ನು ನೀವು ಪ್ರೀತಿಸಲು ಪ್ರಾರಂಭಿಸುತ್ತಿರೋ, ಯಾವತ್ತು ನೀವು ನಿಮ್ಮನ್ನು ನೀವು ನಂಬಲು ಪ್ರಾರಂಭಿಸುತ್ತಿರೋ ಅವತ್ತಿನಿಂದ ನಿಮ್ಮ ಜೀವನದಲ್ಲಿ ಮಿರಾಕಲಗಳಾಗಲು ಶುರುವಾಗುತ್ತವೆ…
15) ನಿಮ್ಮ ಜೀವನದ ಎಲ್ಲ ಪ್ರಶ್ನೆಗಳಿಗೆ ಗೂಗಲನಲ್ಲಿ ಉತ್ತರ ಸಿಗಲು ಸಾಧ್ಯವಿಲ್ಲ. ನಿಮಗೆ ಬೇಕಾಗಿರುವುದನ್ನೆಲ್ಲ ಇಂಟರನೆಟನಿಂದ ಡೌನಲೋಡ ಮಾಡಿಕೊಳ್ಳಲು ಬರಲ್ಲ. ಸೋ ರಿಯಾಲಿಟಿಯನ್ನು ಅರ್ಥ ಮಾಡಿಕೊಳ್ಳಿ. ನಿಮಗೇನು ಬೇಕೋ ಅದನ್ನೇ ನೀವೇ ಕಷ್ಟಪಟ್ಟು ಬೆವರು ಸುರಿಸಿ ಪಡೆದುಕೊಳ್ಳಿ.
16) ನಿಮ್ಮ ಕಣ್ಣಿಗೆ ಕಾಣಿಸದ ಸಂಗತಿಗಳನ್ನು ನಿಜವೆಂದು ನಂಬುವ ಅವಕಾಶವನ್ನು ನಿಮ್ಮ ಕಿವಿಗಳಿಗೆ ಕೊಡಬೇಡಿ. ನಿಮ್ಮ ಮನಸ್ಸಲ್ಲಿರದ ಮಾತುಗಳನ್ನು ಆಡುವ ಅಧಿಕಾರವನ್ನು ನಿಮ್ಮ ನಾಲಿಗೆಗೆ ಕೊಡಬೇಡಿ. ಕೊಟ್ಟರೆ ಈ ಜಗತ್ತಿನಲ್ಲಿರುವ ನಕಲಿ ವ್ಯಕ್ತಿಗಳಲ್ಲಿ ನೀವು ಕೂಡ ಒಬ್ಬರಾಗುತ್ತೀರಿ.
17) ಮೂರು ದಿನದ ಬಾಳಲ್ಲಿ ನಗುನಗುತಾ ಬಾಳಿ, ನಗುವನ್ನು ಹಂಚುತ್ತಾ, ಖುಷಿಯನ್ನು ಚೆಲ್ಲುತ್ತಾ…
18) ನಿಮ್ಮ ಕಾಲೆಳೆದು ನಿಮ್ಮನ್ನು ಕೆಡವಲು ನೂರ ಜನ ಕಾಯ್ತಿದಾರೆ ಅಂತಾ ಭಯಪಡಬೇಡಿ. ನಿಮ್ಮನ್ನು ಕಾಪಾಡಲು ಮೇಲೆ ಕುಂತಿರುವವನು ಒಬ್ಬ ಸಾಕು. ಅವನ ಮೇಲೆ ನಂಬಿಕೆಯಿಟ್ಟು ಧೈರ್ಯದಿಂದ ಮುಂದೆ ಸಾಗಿ, ಆತ ಯಾವತ್ತೂ ನಿಮ್ಮ ಕೈಬಿಡಲ್ಲ…
19) ಮಾಡುವ ಮನಸ್ಸಿದ್ದವನು ಎಷ್ಟೇ ಕಷ್ಟವಾದರೂ ಹಿಡಿದ ಕೆಲಸವನ್ನು ಮಾಡೇ ಮಾಡುತ್ತಾನೆ. ಕೈಲಾಗದ ಹೇಡಿ ಮಾತ್ರ ಇಲ್ಲದ ನೆಪಗಳನ್ನು ಹೇಳುತ್ತಾನೆ. ಜನ ಏನೇ ಮಾತಾಡಲಿ ನೀವು ಏನಂತಾ ನಿಮಗೆ ಗೊತ್ತಿದ್ದರೆ ಸಾಕು…
20) ಪ್ರತಿದಿನವೂ ಒಂದು ಬೆಸ್ಟ ಗಿಫ್ಟಾಗಿದೆ. ಇದನ್ನು ಚೆನ್ನಾಗಿ ಬಳಸಿಕೊಳ್ಳಿ. ಸಣ್ಣಸಣ್ಣ ಸಂಗತಿಗಳಲ್ಲಿನ ದೊಡ್ಡ ಖುಷಿಯನ್ನು ಎಂಜಾಯ ಮಾಡಿ. ವಸ್ತುಗಳನ್ನು ಪ್ರೀತಿಸುವುದಕ್ಕಿಂತ ವ್ಯಕ್ತಿಗಳನ್ನ ಪ್ರೀತಿಸಿ. ವ್ಯಕ್ತಿಗಳನ್ನ ಬಳಸಿಕೊಳ್ಳುವುದಕ್ಕಿಂತ ವಸ್ತುಗಳನ್ನ ಬಳಸಿಕೊಳ್ಳಿ…
21) ನಿಮ್ಮ ಮುಖದಲ್ಲಿನ ಸೌಂದರ್ಯ ನೀವು ಮಾಡುವ ಕೆಲಸದಲ್ಲಿ ಕಾಣಿಸಿದರೆ ನಿಮ್ಮ ಯಶಸ್ಸನ್ನು ಕಿತ್ತುಕೊಳ್ಳಲು ಯಾರಿಂದಲೂ ಸಾಧ್ಯವಿಲ್ಲ…
22) ಪ್ರತಿಯೊಬ್ಬರಿಗೂ 24 ಗಂಟೆಗಳ ಸಮಯವಿದೆ. ಆದರೂ ಎಲ್ಲರೂ ಸಕ್ಸೆಸಫುಲ್ಲಾಗಲ್ಲ. ಏಕೆಂದರೆ ಎಲ್ಲರೂ ತಮ್ಮ ಸಮಯವನ್ನು ತಮ್ಮ ಏಳ್ಗೆಗಾಗಿ ಬಳಸಿಕೊಳ್ಳಲ್ಲ. ಬಹಳಷ್ಟು ಜನ ತಮ್ಮ ಸಮಯವನ್ನು ಬೇರೆಯವರ ಬಗ್ಗೆ ಬೇಡದಿರುವುದನ್ನು ಮಾತಾಡಲು, ಬೇರೆಯವರ ಬಗ್ಗೆ ಯೋಚಿಸುವಲ್ಲಿ ಕಳೆದು ಬಿಡುತ್ತಾರೆ. ತಮಗೆ ಸಿಕ್ಕ ಸಮಯವನ್ನು ಸಂಪೂರ್ಣವಾಗಿ ತಮಗಾಗಿ ಬಳಸಿಕೊಂಡವರು ಮಾತ್ರ ಸಕ್ಸೆಸಫುಲ್ಲಾಗುತ್ತಾರೆ…
23) ಕಷ್ಟನಷ್ಟಗಳಿಗೆ ಕಲ್ಲಾಗು,
ಚುಚ್ಚು ಮಾತುಗಳಿಗೆ ಮುಳ್ಳಾಗು,
ಏನಾದರೂ ಮುಖದ ಮೇಲಿರಲಿ ನಗು,
ನೀ ಧೈರ್ಯದಿ ಮುಂದೆ ಸಾಗು…
24) ಭೂಮಿಗಿರುವ ಸಹನಶೀಲತೆ,
ಸೂರ್ಯನಿಗಿರುವ ಸಮಯ ಪ್ರಜ್ಞೆ,
ಚಂದ್ರನಿಗಿರುವ ನಗು ಸದಾ ನಿನ್ನೊಂದಿಗಿರಲಿ…
25) ಯಾವತ್ತು ನೀವು ಬೆಳಿಗ್ಗೆ ಅಲಾರಾಮಯಿಲ್ಲದೆ ಎದ್ದೇಳುತ್ತಿರೋ ಅವತ್ತು ನೀವು ಅಲರ್ಟಾಗಿದ್ದಿರಿ ಎಂದರ್ಥ…
26) ಸೋಲಿನಲ್ಲೂ ನಗುವವನನ್ನ,
ನೋವಿನಲ್ಲೂ ನಗುವವನನ್ನ,
ಸೋಲಿಸಲು, ಅಳಿಸಲು ಯಾರಿಂದಲೂ ಸಾಧ್ಯವಿಲ್ಲ…
ಸೋಲಿನಲ್ಲೂ, ನೋವಿನಲ್ಲೂ ನಗುವುದನ್ನ ಕಲಿಯಿರಿ…
27) ನಕ್ಕರೆ ನಿಮ್ಮ ಆಯಸ್ಸು ಹೆಚ್ಚಾಗುತ್ತೆ, ನಿಮ್ಮೊಂದಿಗೆ ಬೇರೆಯವರನ್ನು ನಗಿಸಿದರೆ ನಿಮ್ಮ ಆಯಸ್ಸಿನೊಂದಿಗೆ ಅಂತಸ್ತು ಸಹ ಹೆಚ್ಚಾಗುತ್ತೆ…
28) ಪ್ರತಿದಿನವೂ ಒಂದು ಖಾಲಿ ಹಾಳೆಯಾಗಿದೆ. ನಿಮಗೆ ಹೇಗ ಬೇಕೋ ಹಾಗೆ ಅದನ್ನ ಬರೆದುಕೊಳ್ಳಿ. ನಿಮ್ಮ ಜೀವನವನ್ನು ನೀವೇ ರೂಪಿಸಿಕೊಳ್ಳಿ.
29) ಬೇರೆ ಯಾರೋ ಬಂದು ನಿಮ್ಮ ಬದುಕನ್ನು ಬದಲಾಯಿಸುತ್ತಾರೆ, ನಿಮ್ಮ ಕನಸುಗಳನ್ನೆಲ್ಲ ನನಸಾಗಿಸುತ್ತಾರೆ ಅಂತಾ ಕಾಯುತ್ತಾ ಕುಳಿತುಕೊಳ್ಳಬೇಡಿ. ಏಕೆಂದರೆ ಯಾರು ಬರಲ್ಲ. ನಿಮ್ಮ ಬದುಕನ್ನು ಬದಲಾಯಿಸುವ ವ್ಯಕ್ತಿ ನೀವೇ ಆಗಿರುವಿರಿ…
30) ಎಲ್ಲ ಪಾಠಗಳನ್ನು ಶಾಲೆಯಲ್ಲೇ ಕಲಿತಿರುವೆ ಎಂದು ಮೆರೆಯಬೇಡಿ. ಮುಖ್ಯವಾದ ಪಾಠಗಳನ್ನು ನಿಮಗೆ ಬದುಕು ಕಲಿಸುತ್ತದೆ. ಬದುಕು ನಿಮಗೆ ಪಾಠ ಕಲಿಯುವ ಮುಂಚೆಯೇ ಸುಧಾರಿಸಿಕೊಳ್ಳಿ. ಏಕೆಂದರೆ ಬದುಕಿನ ಪಾಠ ಒಂಥರಾ ಕ್ರೂರ ಶಿಕ್ಷೆಯಿದ್ದಂತೆ…
ಈ ಅಂಕಣ (Article) ನಿಮಗೆ ಇಷ್ಟವಾಗಿದ್ದರೆ ನಿಮ್ಮೆಲ್ಲ ಗೆಳೆಯರೊಡನೆ ಮತ್ತು ನೀವಿರುವ ಎಲ್ಲ ಕನ್ನಡ ಫೇಸ್ಬುಕ್ ಗ್ರೂಪಗಳಲ್ಲಿ ಇದನ್ನು ತಪ್ಪದೇ ಶೇರ್ (Share) ಮಾಡಿ. ಜೊತೆಗೆ ಪ್ರತಿದಿನ ಹೊಸಹೊಸ ಅಂಕಣಗಳನ್ನು, ಪ್ರೇಮಕಥೆಗಳನ್ನು, ಕವನಗಳನ್ನು ಉಚಿತವಾಗಿ ಓದಲು ತಪ್ಪದೆ ನನ್ನ ಫೇಸ್ಬುಕ್ ಪೇಜನ್ನು https://www.facebook.com/Directorsatishkumar/ (Director Satishkumar) ಲೈಕ್ ಮಾಡಿ.
Follow Me On : Facebook | Instagram | YouTube | Twitter
My Books : Kannada Books | Hindi Books | English Books
⚠ STRICT WARNING ⚠Content Rights :
ಈ ಅಂಕಣದ ಎಲ್ಲ ಹಕ್ಕುಗಳನ್ನು ಡೈರೆಕ್ಟರ್ ಸತೀಶಕುಮಾರ ಹಾಗೂ ರೋರಿಂಗ್ ಕ್ರಿಯೇಷನ್ಸ್ ಪ್ರೈವೇಟ್ ಲಿಮಿಟೆಡ್ ಕಂಪನಿ ವತಿಯಿಂದ ಸಂಪೂರ್ಣವಾಗಿ ಕಾಯ್ದಿರಿಸಲಾಗಿದೆ. ಡೈರೆಕ್ಟರ್ ಸತೀಶಕುಮಾರ ಅವರ ಅನುಮತಿಯಿಲ್ಲದೆ ಈ ಅಂಕಣದ ಯಾವುದೇ ಭಾಗವನ್ನು ಕಾಪಿ ಮಾಡುವಂತಿಲ್ಲ, ಬೇರೆ ಭಾಷೆಗಳಿಗೆ ಅನುವಾದಿಸುವಂತಿಲ್ಲ ಮತ್ತು ಇದನ್ನು ಬೇರೆಡೆಗೆ ಪ್ರಕಟಿಸುವಂತಿಲ್ಲ. ಯಾವುದೇ ಸಾಮಾಜಿಕ ಜಾಲತಾಣಗಳಲ್ಲಿ ಪೋಸ್ಟ್ ಮಾಡುವಂತಿಲ್ಲ. ಮುದ್ರಣ ಮಾಡುವಂತಿಲ್ಲ. ಒಂದು ವೇಳೆ ಯಾರಾದರೂ ಕಾಪಿ ರೈಟ್ಸ್ ನಿಯಮಗಳನ್ನು ಉಲ್ಲಂಘಿಸಿದರೆ ಅವರ ಮೇಲೆ ಸೂಕ್ತ ಕಾನೂನು ಕ್ರಮ ಕೈಗೊಳ್ಳಲಾಗುವುದು ಹಾಗೂ ಆಗಿರುವ ನಷ್ಟವನ್ನು ಅವರಿಂದಲೇ ವಸೂಲಿ ಮಾಡಲಾಗುವುದು.
All Rights of this article are fully reserved by Director Satishkumar and Roaring Creations Private Limited India. No part of this article can be copied, translated or re published anywhere without the written permission of Director Satishkumar. If such violation of copy rights found to us, then we legally punish to copy cats and recover our loss by them only.
© Director Satishkumar and Roaring Creations Private Limited, India.