ಬಿಜನೆಸ್ ಲೆಸನ್ – 20
ಹಾಯ್ ಗೆಳೆಯರೇ, ಇವತ್ತಿನ ಬಿಜನೆಸ್ ಲೆಸ್ಸನನಲ್ಲಿ ನಾವು ಫನೆಲ್ ಮಾರ್ಕೆಟಿಂಗ್ ಬಗ್ಗೆ ಡಿಸ್ಕಸ್ ಮಾಡೋಣಾ. ಫನೆಲ್ ಮಾರ್ಕೆಟಿಂಗ್ ಒಂದು ಬೆಸ್ಟ ಡಿಜಿಟಲ್ ಮಾರ್ಕೆಟಿಂಗ್ ಸ್ಟ್ರ್ಯಾಟರ್ಜಿಯಾಗಿದೆ. ಈ ಸ್ಟ್ರ್ಯಾಟರ್ಜಿಯನ್ನು ಕಲಿತುಕೊಂಡರೆ ನೀವು ಈಬುಕ್ಸ, ವಿಡಿಯೋ ಕೋರ್ಸ, ಆಡಿಯೋ ಬುಕ್ಸ, ಸಾಫ್ಟವೇರಗಳಂಥ ಡಿಜಿಟಲ ಪ್ರೋಡಕ್ಟಗಳನ್ನು, ನಿಮ್ಮ ಯಾವುದೇ ಸರ್ವಿಸನ್ನು, ಪ್ರೊಡಕ್ಟನ್ನು ಈಜಿಯಾಗಿ ಮಾರಾಟ ಮಾಡಬಹುದು. ಒಂದು ಲಾರ್ಜ ಡೊಮೇನನಿಂದ ನಿಮ್ಮ ಆ್ಯಕುರೇಟ ಕಸ್ಟಮರಗಳನ್ನು ಫನೆಲ ಮಾಡಿ ಅಂದರೆ ಜಾಲಿಸಿ, ಬರೀ ಅವರಿಗಷ್ಟೇ ನಿಮ್ಮ ಆ್ಯಡಗಳನ್ನು ತೋರಿಸಿ ನಿಮ್ಮ ಪ್ರೋಡಕ್ಟಗಳನ್ನು ಈಜಿಯಾಗಿ ಮಾರಬಹುದು. ಉದಾಹರಣೆಗೆ :
Example 1 : ನಿಮಗೆ ನಿಮ್ಮ ಈಬುಕ್ಸಗಳನ್ನು ಮಾರುವುದಿದೆ ಎಂದುಕೊಳ್ಳಿ. ಕರ್ನಾಟಕದಲ್ಲಿ ಸುಮಾರು 2 ಕೋಟಿ ಜನರಿಗೆ ರೀಡಿಂಗನಲ್ಲಿ ಆಸಕ್ತಿಯಿದೆ. ಅವರೆಲ್ಲರಿಗು ನೀವು ಆ್ಯಡಗಳನ್ನು ತೋರಿಸಿದರೆ ನಿಮ್ಮ ಪ್ರೋಫಿಟೆಲ್ಲ ಅಡ್ವಟೈಜ ಮಾಡುವಲ್ಲೇ ಕಳೆದುಹೋಗುತ್ತದೆ. ಆಗ ನಾವು ಫನೆಲ್ ಮಾರ್ಕೆಟಿಂಗ್ ಸ್ಟ್ರ್ಯಾಟರ್ಜಿ ಯುಜ ಮಾಡಿಕೊಂಡು ಈ 2 ಕೋಟಿ ಜನರಲ್ಲಿ ಪುಕ್ಸಟ್ಟೆ ಸಿಕ್ಕಾಗ ಓದುವವರನ್ನು ನೆಗ್ಲೆಕ್ಟ ಮಾಡಿ ಬರೀ ದುಡ್ಡು ಕೊಟ್ಟು ಓದುವ ಆಸಕ್ತಿಯಿದ್ದವರನ್ನಷ್ಟೇ ಟಾರ್ಗೆಟ್ ಮಾಡುವುದರ ಮೂಲಕ ನಮ್ಮ ಈಬುಕ್ಸಗಳನ್ನು ಸೇಲ್ ಮಾಡಬಹುದು. ನೀವು ಈಬುಕ್ಸಗಳಂತೆ ನಿಮ್ಮ ಆಡಿಯೋ ಬುಕ್ಸ, ವಿಡಿಯೋ ಕೋರ್ಸ ಇತ್ಯಾದಿಗಳನ್ನು ಈ ಫನೆಲ್ ಮಾರ್ಕೆಟಿಂಗನಿಂದ ಈಜಿಯಾಗಿ ಸೇಲ್ ಮಾಡಬಹುದು.
Example 2 : ನಿಮ್ಮದು ವೆಡ್ಡಿಂಗ್ ಫಿಲ್ಮಮೇಕಿಂಗ್ ಕಂಪನಿಯಿದೆ ಎಂದುಕೊಳ್ಳಿ. ಭಾರತದಲ್ಲಿ ಪ್ರತಿ ವರ್ಷ ಲಕ್ಷಾಂತರ ಜನ ಮದುವೆಯಾಗುತ್ತಾರೆ. ಇವರೆಲ್ಲರಿಗೂ ನೀವು ನಿಮ್ಮ ಆ್ಯಡಗಳನ್ನು ತೋರಿಸಿದರೆ ನೆಗೆಟಿವ್ ಕ್ಯಾಶ ಫ್ಲೋ ಆಗುತ್ತದೆ. ನಿಮ್ಮ ಅಡ್ವಟೈಜಿಂಗ್ ಕ್ಯಾಂಪೇನ ಫೇಲ್ ಆಗುತ್ತದೆ. ಆದರೆ ನೀವು ಇಂಥ ಸಂದರ್ಭದಲ್ಲಿ ಫನೆಲ್ ಮಾರ್ಕೆಟಿಂಗ್ ಸ್ಟ್ರ್ಯಾಟರ್ಜಿ ಯುಜ ಮಾಡಿಕೊಂಡು ನಿಮ್ಮ ಆ್ಯಕುರೇಟ್ ಕಸ್ಟಮರಗಳನ್ನು ಟಾರ್ಗೆಟ್ ಮಾಡಬಹುದು. ನಿಮ್ಮ ಆ್ಯಕುರೇಟ ಕಸ್ಟಮರಗಳನ್ನು ಟಾರ್ಗೆಟ ಮಾಡಿ ನಿಮ್ಮ ಪ್ರೀವೆಡ್ಡಿಂಗ ಫೋಟೋಶೂಟ್, ವಿಡಿಯೋ ಶೂಟ, ಸಿನಿಮ್ಯಾಟಿಕ ವೆಡ್ಡಿಂಗ್ ಫಿಲ್ಮ ಇತ್ಯಾದಿ ಸರ್ವಿಸಗಳನ್ನು ಈಜಿಯಾಗಿ ಸೆಲ್ ಮಾಡಬಹುದು.
ಒಂದು ನಿಮಿಷ ಆರ್ಟಿಕಲ್ ಪಾಜ ಮಾಡಿ ಈ ಪಿಕ್ಚರನ್ನು ಕೇರಫುಲ್ಲಾಗಿ ಗಮನಿಸಿ, ನಿಮಗೆ ಫನೆಲ್ ಮಾರ್ಕೆಟಿಂಗ್ ಬಗ್ಗೆ ಒಂದು ಐಡಿಯಾ ಬರುತ್ತದೆ.
ಮೇಲಿನ ಗ್ರಾಫನಲ್ಲಿ ತೋರಿಸಿದಂತೆ ಫನೆಲ್ ಮಾರ್ಕೆಟಿಂಗ್ 5 ಸ್ಟೆಪಗಳನ್ನು ಒಳಗೊಂಡಿದೆ. ಈ 5 ಸ್ಟೆಪಗಳನ್ನು ಅರ್ಥಮಾಡಿಕೊಂಡರೆ ನಾವು ಸಕ್ಸೆಸಫುಲ್ಲಾಗಿ ಫನೆಲ್ ಮಾರ್ಕೆಟಿಂಗ್ ಮಾಡಬಹುದು. ಸೋ, ಈ ಸ್ಟೆಪಗಳನ್ನು ಒಂದೊಂದಾಗಿ ನೋಡೋಣಾ.
Step – 1 : Awareness Creation :
ನೀವು ಯಾವುದೇ ಒಂದು ವಸ್ತುವನ್ನು ಅಥವಾ ಸರ್ವಿಸನ್ನು ಸೇಲ್ ಮಾಡಬೇಕೆಂದರೆ ಮೊದಲು ಮಾರ್ಕೆಟನಲ್ಲಿ ಅದರ ಬಗ್ಗೆ ಅವೆರನೆಸ್ ಹುಟ್ಟಿಸಬೇಕು, ಕಸ್ಟಮರಗಳಿಗೆ ಅದರ ಬಗ್ಗೆ ಗೊತ್ತಾಗುವಂತೆ ಮಾಡಬೇಕು. ಇದೇ ಫನೆಲ್ ಮಾರ್ಕೆಟಿಂಗನ ಫಸ್ಟ ಸ್ಟೆಪ್ಪಾಗಿದೆ. ನೀವು ಆರ್ಟಿಕಲ್ಸ, ಬ್ಲಾಗ್ಸ, ಈಬುಕ್ಸ, ವಿಡಿಯೋಜ, ಸೋಸಿಯಲ್ ಮೀಡಿಯಾ ಅಡ್ವಟೈಜಮೆಂಟ್ಸ, ವೆಬಿನಾರ್ಸ ಆ್ಯಂಡ್ ಪೇಡ್ ಆ್ಯಡಗಳ ಮೂಲಕ ಅವೆರನೆಸ್ಸನ್ನು ಕ್ರಿಯೆಟ್ ಮಾಡಬಹುದು.
Step – 2 : Interest Identification
ನೀವು ಆನಲೈನ ಮಾರ್ಕೆಟನಲ್ಲಿ ನಿಮ್ಮ ಪ್ರೋಡಕ್ಟ ಅಥವಾ ಸರ್ವಿಸ್ ಬಗ್ಗೆ ಅವೆರನೆಸ್ಸನ್ನು ಕ್ರಿಯೆಟ್ ಮಾಡಿದಾಗ ಕಸ್ಟಮರಗಳು ನಿಮ್ಮ ಅಡ್ವಟೈಜಿಂಗ್ ಕ್ಯಾಂಪೇನ ಅಥವಾ ಫ್ರಿ ಕಂಟೆಂಟಗಳೊಂದಿಗೆ ಇಂಟರ್ಯಾಕ್ಟ ಮಾಡುತ್ತಾರೆ. ಆಗ ನೀವು ಅವರ ಇಂಟರೆಸ್ಟನ್ನು ಸರಿಯಾಗಿ ಐಡೆಂಟಿಫಾಯ ಮಾಡಿಕೊಳ್ಳಬೇಕು. ಅವರು ನಿಮ್ಮ ಆ್ಯಡ ಕ್ಯಾಂಪೇನಗಳಿಗೆ, ಪೋಸ್ಟಗಳಿಗೆ, ವಿಡಿಯೋಗಳಿಗೆ ಲೈಕ್, ಕಮೆಂಟ್, ಡಿಸಲೈಕ, ಸಗೇಸ್ಟ, ಶೇರ್ ಇತ್ಯಾದಿಗಳನ್ನು ಮಾಡಿ ಫೀಡಬ್ಯಾಕನ್ನು ಕೊಡುತ್ತಾರೆ. ಅದನ್ನು ನೀವು ಮಿಸ್ ಮಾಡದೇ ಕ್ಯಾಚ್ ಮಾಡಿಕೊಳ್ಳಬೇಕು ಮತ್ತು ಅವರ ಇಂಟರೆಸ್ಟನ್ನು ಸರಿಯಾಗಿ ಐಡೆಂಡಿಫೈ ಮಾಡಬೇಕು. ಸಾಧ್ಯವಾದರೆ ಅವರ ಕ್ಯಾಂಟ್ಯಾಕ್ಟ ಡಿಟೇಲ್ಸ, ಫೋನ ನಂಬರ, ಈಮೇಲ ಐಡಿಗಳನ್ನು ಕಲೆಕ್ಟ ಮಾಡಿಕೊಳ್ಳಬೇಕು. ಯಾರು ನಿಮ್ಮ ಕಂಟೆಂಟನೊಂದಿಗೆ ಮತ್ತು ಅಡ್ವಟೈಜಮೆಂಟನೊಂದಿಗೆ ಇಂಟರ್ಯಾಕ್ಟ ಮಾಡುತ್ತಾರೋ ಅವರಿಗೆ ನಿಮ್ಮ ಪ್ರೊಡಕ್ಟ ಅಥವಾ ಸರ್ವಿಸನಲ್ಲಿ ಇಂಟರೆಸ್ಟ ಇದೆ ಎಂದರ್ಥ.
Step – 3 : Desire Creation and Evaluation
ನಿಮ್ಮ ಪ್ರೊಡಕ್ಟ ಅಥವಾ ಸರ್ವಿಸಲ್ಲಿ ಇಂಟರೆಸ್ಟ ಹೊಂದಿರುವ ಕಸ್ಟಮರಗಳನ್ನು ಐಡೆಂಟಿಫೈ ಮಾಡಿದ ನಂತರ ನೀವು ಅವರಿಗೆ ನಿಮ್ಮ ಪ್ರೊಡಕ್ಟ ಬಗ್ಗೆ ಸರಿಯಾದ ಮಾಹಿತಿ ನೀಡಬೇಕು. ನಿಮ್ಮ ಸರ್ವಿಸ ಯಾವ ರೀತಿ ಇರುತ್ತೆ ಎಂಬುದರ ಬಗ್ಗೆ ಕಲ್ಪನೆ ಮೂಡಿಸಬೇಕು. ಅವರಿಗೆ ಮತ್ತಷ್ಟು ವಿಡಿಯೋಗಳನ್ನು ಹಾಗೂ ಅಡ್ವಟೈಜಮೆಂಟಗಳನ್ನು ತೋರಿಸಬೇಕು. ಪರ್ಸನಲೈಜ್ಡ ಈಮೇಲಗಳನ್ನು ಕಳುಹಿಸಬೇಕು. ಅವರಿಗೆ ನಿಮ್ಮ ಪ್ರೋಡಕ್ಟ ಅಥವಾ ಸರ್ವಿಸನ್ನು ತೆಗೆದುಕೊಳ್ಳಲು ಮತ್ತಷ್ಟು ಆಸಕ್ತಿ ಹುಟ್ಟುವಂತೆ ಮಾಡಬೇಕು. ಇವರಲ್ಲಿ ಯಾರು ನಿಮ್ಮ ಆ್ಯಕುರೇಟ್ ಕಸ್ಟಮರ ಎಂಬುದನ್ನು ಈವ್ಯಾಲುವೇಟ ಮಾಡಿ ಮುಂದುವರೆಯಬೇಕು.
Step – 4 : Commitment & Call Action to Purchase
ನಿಮಗೆ ಯಾರು ನಿಮ್ಮ ಆ್ಯಕುರೇಟ್ ಕಸ್ಟಮರ ಎಂಬುದು ಗೊತ್ತಾದಾಗ ನೀವು ಅವರಿಗೆ ನಿಮ್ಮ ಕಡೆಯಿಂದ ಕಮ್ಮಿಟಮೆಂಟ ಕೊಡಬೇಕಾಗುತ್ತದೆ. ಒಂದು ವೇಳೆ ಅವರು ನಿಮ್ಮ ಪ್ರೋಡಕ್ಟ ಅಥವಾ ಸರ್ವಿಸನ್ನು ಖರೀದೀಸಿದರೆ ನಿಮ್ಮ ಕಡೆಯಿಂದ ಅವರಿಗೆ ಯಾವಯಾವ ಬೆನಫಿಟಗಳಾಗುತ್ತವೆ, ಯಾವಯಾವ ಸ್ಪೆಷಲ್ ಆಫರಗಳು ಸಿಗುತ್ತವೆ, ಬೇಗನೆ ಖರೀದಿಸಿದರೆ ಎಷ್ಟು ಡಿಸ್ಕೌಂಟ ಸಿಗುತ್ತದೆ, ಒಂದು ವೇಳೆ ಪ್ರೊಡಕ್ಟ ಇಷ್ಟವಾಗದಿದ್ದರೆ ರಿಫಂಡ್ ಆಪ್ಶನ ಇದೆಯಾ ಎಂಬುದನ್ನೆಲ್ಲ ಕ್ಲಿಯರಾಗಿ ಹೇಳಿ ಅವರಿಗೆ ನಿಮ್ಮ ಕಡೆಯಿಂದ ಕಮ್ಮಿಟಮೆಂಟನ್ನು ಕೊಡಬೇಕಾಗುತ್ತದೆ. ಅವರಿಗೆ ನಿಮ್ಮ ಮೇಲೆ ಭರವಸೆ ಹುಟ್ಟುವಂತೆ ಮಾಡಿ ಅವರಿಗೆ ನಿಮ್ಮ ಪ್ರೋಡಕ್ಟ ಅಥವಾ ಸರ್ವಿಸನ್ನು ಪರಚೇಸ್ ಮಾಡಲು ಡೈರೆಕ್ಟ ಕಾಲ್ ಟು ಆ್ಯಕ್ಷನ ಕೊಡಬೇಕಾಗುತ್ತದೆ.
Step 5 : Direct Sell
ನೀವು ನಿಮ್ಮ ಆ್ಯಕುರೇಟ ಕಸ್ಟಮರಗಳಿಗೆ ನಿಮ್ಮ ಕಮ್ಮಿಟಮೆಂಟನ ಜೊತೆಗೆ ನಿಮ್ಮ ಪ್ರೊಡಕ್ಟನ್ನು ಖರೀದಿಸಲು ಡೈರೆಕ್ಟ್ ಕಾಲ ಟು ಆ್ಯಕ್ಷನ ಕೊಟ್ಟಾಗ ಅವರು ನಿಮ್ಮ ಪ್ರೋಡಕ್ಟನ್ನು ಖರೀದಿಸಲು ರೆಡಿಯಾಗಿರುತ್ತಾರೆ. ಆಗ ನೀವು ತಡ ಮಾಡದೇ ಅವರಿಗೆ ಈಜಿ ಆ್ಯಂಡ್ ಸೆಕ್ಯುರ್ ಆದ ಪೇಮೆಂಟ್ ಲಿಂಕನ್ನು ಸೆಂಡ ಮಾಡಿ ಪೇಮೆಂಟ್ ಮಾಡಿಸಿಕೊಂಡು ಅವರಿಗೆ ಪ್ರೊಡಕ್ಟನ್ನು ಡೆಲಿವರಿ ಮಾಡಿದರೆ ಮುಗಿತು. ನಿಮ್ಮ ಲೀಡ ಜನರೇಟ ಆದಾಗ ಅಂದರೆ ನಿಮ್ಮ ಪ್ರೋಡಕ್ಟ ಸೇಲ್ ಆದಾಗ ಅವರಿಗೆ ಪರಚೇಜ ಕನಫರ್ಮಮೇಷನ ಈಮೇಲನ್ನು ಕಳುಹಿಸುವುದನ್ನು ಮರೆಯಬಾರದು. ಆ ಈಮೇಲನಲ್ಲಿ ಅವರ ಎಂಟೈರ್ ಪರಚೇಸ್ ಡಿಟೇಲ್ಸನ ಜೊತೆಗೆ ಅವರಿಗೆ ಫೀಡಬ್ಯಾಕ ಫಾರ್ಮನ್ನು ಪ್ರೊವೈಡ ಮಾಡಬೇಕು. ಜೊತೆಗೆ ಏನಾದರೂ ಪ್ರಾಬ್ಲಮ ಆದರೆ ನಿಮ್ಮನ್ನು ಕ್ಯಾಂಟ್ಯಾಕ್ಟ ಮಾಡಲು ಒಂದು ಡೆಡಿಕೆಟೆಡ್ ಕ್ಯಾಂಟ್ಯಾಕ್ಟ ಆಪ್ಶನ್ ಕೊಡಬೇಕು.
ಗೆಳೆಯರೇ, ಇವಿಷ್ಟು ಫನೆಲ್ ಮಾರ್ಕೆಟಿಂಗನ 5 ಇಂಪಾರಟಂಟ ಸ್ಟೆಪಗಳು. ಬೇರೆ ಬೇರೆ ಬಿಜನೆಸಗಳಿಗೆ, ಪ್ರೊಡಕ್ಟಗಳಿಗೆ ಬೇರೆ ಬೇರೆ ತರಹದ ಫನೆಲ್ ಮಾರ್ಕೆಟಿಂಗ್ ಸ್ಟ್ರ್ಯಾಟರ್ಜಿ ಯುಜ ಮಾಡಬೇಕಾಗುತ್ತದೆ. ಆದರೆ ಸ್ಟೆಪ್ಸ ಹಾಗೂ ಐಡಿಯಾಲಜಿ ಎಲ್ಲ ಕಡೆಗೆ ಸೇಮ್ ಟು ಸೇಮ್ ಆಗಿರುತ್ತದೆ, ಇದೇ ಆಗಿರುತ್ತದೆ.
ಗೆಳೆಯರೇ, ಇದು ಫನೆಲ್ ಮಾರ್ಕೆಟಿಂಗಗೆ ಒಂದು ಚಿಕ್ಕ ಥಿಯರಿ ಕ್ಲಾಸ್ ಅಷ್ಟೇ. ಬರೀ ಥಿಯರಿ ತಿಳಿದುಕೊಂಡು ಏನು ಪ್ರಯೋಜನವಿಲ್ಲ. ಯಾವಾಗ ನೀವಿದನ್ನು ಪ್ರ್ಯಾಕ್ಟಿಕಲ್ಲಾಗಿ ಕಲಿತು ಅದನ್ನು ನಿಮ್ಮ ಬಿಜನೆಸ್ಸನಲ್ಲಿ ಅಪ್ಲಾಯ ಮಾಡಿಕೊಳ್ಳುತ್ತಿರೋ ಅವತ್ತು ನಿಮಗೆ ಇದರಿಂದ ಪ್ರೋಫಿಟಾಗುತ್ತದೆ. ಒಂದು ವೇಳೆ ನಿಮಗೆ ಫನೆಲ್ ಮಾರ್ಕೆಟಿಂಗನ್ನು ಪ್ರ್ರ್ಯಾಕ್ಟಿಕಲ್ಲಾಗಿ ಕಲಿತು ನಿಮ್ಮ ಬಿಜನೆಸ್ಸನ್ನು ಗ್ರೋ ಮಾಡುವ ಆಸೆಯಿದ್ದರೆ ವಿಡಿಯೋ ಡಿಸ್ಕ್ರಿಕ್ಷನನಲ್ಲಿ ಕೊಟ್ಟಿರುವ ಫಾರ್ಮನ್ನು ಫಿಲ ಮಾಡಿ. All the best and Thanks You…
Funnel Marketing Course Notification Form : https://www.roaringcreations.com/funnel-marketing-course-notification-form/