ಬಿಜನೆಸ್ ಲೆಸನ 21
ಹಾಯ್ ಗೆಳೆಯರೇ, ನಿಮ್ಮಲ್ಲಿ ಬಹಳಷ್ಟು ಜನ “ಬಿಜನೆಸ್ಸಲ್ಲಿ ಕಾಂಪಿಟೇಷನ್ ಮಾಡಬೇಕಾ ಅಥವಾ ಬೇಡ್ವಾ?” ಅಂತಾ ಕೇಳಿದ್ದೀರಿ. ಸೋ ಇವತ್ತಿನ ಬಿಜನೆಸ್ ಲೆಸ್ಸನನಲ್ಲಿ “ಬಿಜನೆಸ್ಸಲ್ಲಿ ಕಾಂಪಿಟೇಷನ್ ಮಾಡಬೇಕಾ ಅಥವಾ ಬೇಡ್ವಾ?” ಎಂಬುದನ್ನು ನೋಡೋಣಾ. ಲೆಟ್ಸ್ ಬಿಗಿನ್…
ಗೆಳೆಯರೇ, ನನ್ನ ಪ್ರಕಾರ ಬಿಜನೆಸ್ಸಲ್ಲಿ ಕಾಂಪಿಟೇಷನ್ ಮಾಡೋದು ಅಷ್ಟೊಂದು ಸರಿ ಅಂತಾ ಅನಿಸಲ್ಲ. ಏಕೆಂದರೆ ಭಾರತದ ಮಾರುಕಟ್ಟೆ ವಿಶಾಲವಾಗಿದೆ, ಸಿಕ್ಕಾಪಟ್ಟೆ ದೊಡ್ಡದಾಗಿದೆ. ನಾವಿಲ್ಲಿ ಸರಿಯಾಗಿ ಸರ್ವಿಸ್ ಕೊಟ್ರೆ, ಸರಿಯಾದ ಕ್ವಾಲಿಟಿ ಪ್ರೊಡಕ್ಟನ್ನು ಕೊಟ್ಟು ಸರಿಯಾಗಿ ಬಿಜನೆಸ್ ಮಾಡಿದ್ರೆ ನಾವು ಕನಸಲ್ಲೂ ಊಹಿಸಿರದಷ್ಟು ಹಣ ಗಳಿಸಬಹುದು. ಆದರೆ ನಮ್ಮಲ್ಲಿ ಮಿಸ್ಟೇಕ್ ಏನಾಗುತ್ತಿದೆ ಅಂದ್ರೆ ನಾವು ನಮ್ಮನಮ್ಮಲ್ಲೇ ಕಚ್ಚಾಡಿಕೊಂಡು ಪರದೇಶದ ಕಂಪನಿಗಳಿಗೆ ಲಾಭ ಮಾಡಿಕೊಡುತ್ತಿದ್ದೇವೆ. ಇಬ್ಬರ ಜಗಳದಲ್ಲಿ ಮೂರನೇಯವರಿಗೆ ಲಾಭವಾಗುತ್ತಿದೆ. ಪರದೇಶದ ಕಂಪನಿಗಳು ನಮ್ಮಲ್ಲಿ ಬಂದು ಬ್ರಿಟಿಷರಂತೆ ನಮ್ಮನಮ್ಮಲ್ಲಿ ಜಗಳ ತಂದಿಕ್ಕಿ ಡಿವೈಡ್ and ರೂಲ್ ಆಟವಾಡಿಸಿ ತಾವು ಲಾಭ ಮಾಡಿಕೊಳ್ಳುತ್ತಿವೆ. ನಮ್ಮ ದೇಶದ ಸಂಪತ್ತು ಹಾಡುಹಗಲೇ ವಿದೇಶಗಳಿಗೆ ಹರಿದು ಹೋಗುತ್ತಿದೆ. ಆ ಹಣ ಚೀನಾದಂಥ ದರಿದ್ರ ರಾಷ್ಟ್ರಗಳ ಕೈಸೇರಿ ಬಾರ್ಡರನಲ್ಲಿ ನಮಗೇನೇ ತಲೆನೋವಾಗ್ತಿದೆ. ಸೋ ನನಗೆ ಭಾರತದ ಕಂಪನಿಗಳು ಅಥವಾ ಬಿಜನೆಸಮ್ಯಾನಗಳು ನಮ್ಮನಮ್ಮಲ್ಲೇ ಕಾಂಪಿಟೇಶನ ಮಾಡೋದು ಅಷ್ಟೊಂದು ಸರಿಯೆನಿಸಲ್ಲ.
ನಾವು ಬೇರೆಯವರೊಂದಿಗೆ ಕಾಂಪಿಟೇಷನ್ ಮಾಡಿದ್ರೆ ನಾವು ನಂಬರ-1 ಆಗಬಹುದು. ಆದರೆ ನಾವು ಬರೀ ನಮ್ಮೊಂದಿಗೆ ಮಾತ್ರ ಕಾಂಪಿಟೇಷನ್ ಮಾಡಿದರೆ ನಾವು ಒನ್ಲಿ-1 ಆಗುತ್ತೇವೆ. ನಾವು ನಮ್ಮೊಂದಿಗೆ ಕಾಂಪಿಟೇಷನ್ ಮಾಡಿ ನಮ್ಮ ಪ್ರೊಡಕ್ಟ ಅಥವಾ ಸರ್ವಿಸನ ಕ್ವಾಲಿಟಿಯನ್ನು ದಿನದಿಂದ ದಿನಕ್ಕೆ ಇಂಪ್ರೂವ ಮಾಡಿಕೊಳ್ಳುತ್ತಾ ಹೋದರೆ ನಾವು ಬೇಗನೆ ಟಾಪ ಲೆವೆಲಗೆ ಹೋಗುತ್ತೇವೆ. ಬೇರೆಯವರು ನಿಮ್ಮೊಂದಿಗೆ ಕಾಂಪಿಟೇಷನ್ ಮಾಡಲಿ, ಅದು ಅವರಿಷ್ಟ. ಆದರೆ ಅವರ ಬಗ್ಗೆ ನೀವು ಜಾಸ್ತಿ ತಲೆಕೆಡಿಸಿಕೊಳ್ಳಬೇಡಿ. ನೀವು ಅವರಂತೆ ಮಾಡಿ ನಿಮ್ಮ ಟೈಮ, ಟ್ಯಾಲೆಂಟ್ ಹಾಗೂ ಎನರ್ಜಿಯನ್ನು ವೇಸ್ಟ ಮಾಡಬೇಡಿ, ದುಡ್ಡನ್ನು ವೇಸ್ಟ ಮಾಡಬೇಡಿ. ಕಾಂಪಿಟೇಷನಲ್ಲಿ ವೆಸ್ಟ್ ಮಾಡುವ ಹಣವನ್ನು ನಿಮ್ಮ ಬಿಜನೆಸನ್ನು ಗ್ರೋ ಮಾಡುವುದಕ್ಕಾಗಿ ಯುಜ್ ಮಾಡಿ.
ಬೇರೆಯವರು ಕಡಿಮೆ ರೇಟಲ್ಲಿ ಕೊಡ್ತಿದಾರೆ ಅಂತಾ ನೀವು ಸಹ ಕಡಿಮೆ ರೇಟಲ್ಲಿ ಕೊಟ್ಟು ಮಾರ್ಜಿನ ಕಳೆದುಕೊಂಡು ಲಾಸಲ್ಲಿ ಬಿಜನೆಸ್ ನಡೆಸಬೇಡಿ, ಅವರನ್ನು ನೋಡಿ ಅನಾವಶ್ಯಕ ಆಫರಗಳನ್ನು ಕೊಟ್ಟು ಲಾಸಲ್ಲಿ ಬಿಜನೆಸ್ ಮಾಡಬೇಡಿ. ಬೇರೆಯವರು ಕಡಿಮೆ ರೇಟಿಗೆ ಕೊಡ್ತಿದ್ರೆ ಕೊಡಲಿ, ನೀವು ನಿಮ್ಮ ಕ್ವಾಲಿಟಿಯನ್ನು ಇಂಪ್ರೂವ್ ಮಾಡಿ. ಕಸ್ಟಮರ ತಾನಾಗಿಯೇ ನಿಮ್ಮ ಬಳಿ ಬಂದು ನೀವು ಹೇಳಿದ ರೇಟಿಗೆ ಪ್ರೊಡಕ್ಟ ತೆಗೆದುಕೊಂಡು ಹೋಗ್ತಾನೆ. ನೀವು ಜಸ್ಟ ಕ್ವಾಲಿಟಿ ಇಂಪ್ರೂವ ಮಾಡಿ. ಬೇರೆಯವರು ಕಡಿಮೆ ರೇಟಿಗೆ ಕೊಡ್ತಿದಾರೆ ಅಂದರೆ ಕ್ವಾಲಿಟಿ ಡ್ರಾಪ ಆಗಿರುತ್ತೆ ಇಲ್ಲ ಏನೋ ಒಂದು ಗೋಲಮಾಲ ಇರುತ್ತೆ. ಆಗ ನೀವು ನಿಮ್ಮ ಪ್ರೊಡಕ್ಟನ ಕ್ವಾಲಿಟಿ ಇಂಪ್ರೂವ ಮಾಡಿ ಸಾಕು. ಆಗ ಬೇರೆಯವರು ಪುಕ್ಸಟ್ಟೆ ಕೊಡ್ತಿನಿ ಅಂದ್ರು ಕಸ್ಟಮರ ನಿಮ್ಮತ್ರ ಬಂದು ಪ್ರೊಡಕ್ಟ ತಗೋತಾನೆ. ಅದಕ್ಕಾಗಿ ಕಾಂಪಿಟೇಷನ್ ಮಾಡೋದ ಬಿಟ್ಟು ನಿಮ್ಮ ಪ್ರೊಡಕ್ಟನ ಕ್ವಾಲಿಟಿ ಮೇಲೆ ಜಾಸ್ತಿ ಫೋಕಸ ಮಾಡಿ.
ಉದಾಹರಣೆಗೆ : ಐಪೋನನ್ನು ತೆಗೆದುಕೊಳ್ಳಿ. ಯಾವ ರೀತಿಯ ಕ್ವಾಲಿಟಿ ಹಾಗೂ ಬ್ರ್ಯಾಂಡಿಂಗ ಇದೆ ಅಂತಾ ನೋಡಿ. ಬೇರೆ ಚೈನೀಸ್ ಕಂಪನಿಗಳು ಐದು ಸಾವಿರಕ್ಕೆ, ಹತ್ತು ಸಾವಿರಕ್ಕೆ, ಹದಿನೈದು ಸಾವಿರಕ್ಕೆ, ಇಪ್ಪತ್ತು ಸಾವಿರಕ್ಕೆ ಮೊಬೈಲಗಳನ್ನು ಮಾರುತ್ತವೆ. ಆದರೆ ಆ್ಯಪಲ ಕಂಪನಿ ಲಕ್ಷಕ್ಕಿಂತಲೂ ಅಧಿಕ ಬೆಲೆಗೆ ತನ್ನ ಐಫೋನಗಳನ್ನು ಮಾರುತ್ತದೆ. ಐಫೋನಗೆ ಹಾಗೂ ಮಿಕ್ಕ ಥರ್ಡಕ್ಲಾಸ ಚೈನಿಸ್ ಮೊಬೈಲ ಕಂಪನಿಗಳ ನಡುವೆ ಕ್ಲಿಯರ್ ಕಟ್ ಡಿಫರೆನ್ಸಿಯೇಷನಯಿದೆ. ಬೇರೆ ಕಂಪನಿಗಳು 20 ಮೊಬೈಲಗಳನ್ನು ಮಾರಿದರೂ ಗಳಿಸದ ಲಾಭವನ್ನು ಆ್ಯಪಲ ಕಂಪನಿ ಒಂದೇ ಒಂದು ಮೊಬೈಲನ್ನು ಮಾರಿ ಗಳಿಸುತ್ತದೆ. ಏಕೆಂದರೆ ಕ್ವಾಲಿಟಿ ಪ್ರೊಡಕ್ಟ ಹಾಗೂ ಗುಡ್ ಬ್ರ್ಯಾಂಡಿಂಗ್. ಸೋ ನೀವು ಐಫೋನ ಆಗಲು ಟ್ರಾಯ ಮಾಡಿ. ಥರ್ಡಕ್ಲಾಸ್ ಚೈನಿಸ್ ಫೋನ ಆಗಬೇಡಿ.
ನಿಮ್ಮಂತೆ ಬೇರೆ ಬಿಜನೆಸಮ್ಯಾನಗಳಿಗೆ, ಕಂಪನಿ ಮಾಲಿಕರಿಗೆ ಒಂದು ಕ್ಯೂಟ್ ಫ್ಯಾಮಿಲಿ ಇರುತ್ತದೆ. ನೀವು ನಿಮ್ಮ ವಿಚಿತ್ರ ಸ್ವಾರ್ಥಕ್ಕಾಗಿ ಅವರನ್ನು ಸಾಯಿಸಿದರೆ ನೀವು ಮನುಷ್ಯರೇ ಅಲ್ಲ. ಮೋರಲ್ಸ ಇಲ್ಲದೆ ಬಿಜನೆಸ ಮಾಡಿದ್ರೆ ನೀವು ಬಹಳಷ್ಟು ಕೆಟ್ಟ ರೀತಿಯಲ್ಲಿ ಬರ್ಬಾದ ಆಗುತ್ತೀರಾ. ಅದಕ್ಕಾಗಿ ಎಲ್ಲ ಸ್ವಾರ್ಥ ಬಿಟ್ಟು ಸರಿಯಾಗಿ ಬಿಜನೆಸ್ ಮಾಡಿ. ಭಾರತದ ಮಾರುಕಟ್ಟೆ ವಿಶಾಲವಾಗಿದೆ. ಸಾವಿರಾರು ಕಂಪನಿಗಳು ಬಂದರೂ ಅವುಗಳನ್ನು ಬದುಕಿಸುವ ಶಕ್ತಿ ಭಾರತದ ಮಾರುಕಟ್ಟೆಗೆ ಇದೆ. ಸೋ ನೀವು ಬದುಕಿ, ಬೇರೆಯವರಿಗೂ ಬದುಕಲು ಬಿಡಿ. ಯಾವತ್ತೂ ನಿಮ್ಮ ತಲೆಯಲ್ಲಿ “ನಾನು ಬದುಕುವೆ ಬೇರೆಯವರಿಗೂ ಬದುಕಲು ಬಿಡುವೆ, ನಾನು ಬೆಳೆಯುವೆ, ಬೇರೆಯವರಿಗೂ ಬೆಳೆಯಲು ಬಿಡುವೆ” ಎಂಬ ಭಾವನೆ ಬರುತ್ತೋ ಅವತ್ತು ನೀವು ರತನ ಟಾಟಾರಂತೆ ದೊಡ್ಡ ಲೆವೆಲ ಬಿಜನೆಸಮ್ಯಾನ ಆಗ್ತಿರಾ, ಗ್ರೇಟ್ ಆಗ್ತಿರಾ, ದೇಶದ ಆಸ್ತಿ ಆಗ್ತಿರಾ. ಅದನ್ನು ಬಿಟ್ಟು ಚಿಲ್ರೆ ವಿಷಯಗಳಿಗೆಲ್ಲ ಕಾಂಪಿಟೇಷನ್ ಮಾಡ್ತೀನಿ, ಬೇರೆಯವರ ಹೆಸರಿಗೆ, ಅವರ ಬಿಜನೆಸ್ ಹೆಸರಿಗೆ ಮಸಿ ಬಳಿತಿನಿ, ಆತ ನನಗಿಂತ ಮುಂದೆ ಹೊರಟಿದಾನೆ ಅವನ ಕಾಲ ಎಳಿತಿನಿ ಅಂತೆಲ್ಲ ಕುತಂತ್ರಗಳನ್ನು ಮಾಡ್ತಾ ಕುಂತ್ರೆ ನೀವು ಬಿಜನೆಸ್ಸಲ್ಲಿ ಯಾವತ್ತೂ ಮುಂದೆ ಹೋಗಲ್ಲ. ನೀವು ಬೇರೆಯವರ ಕಾಲೆಳೆಯಲು ಹೋಗಿ ನೀವು ಕಾಲ ಜಾರಿ ಬಿದ್ದು ಬರ್ಬಾದ ಆಗ್ತಿರಾ. ಅದಕ್ಕಾಗಿ ಅನಹೆಲ್ದಿ ಕಾಂಪಿಟೇಷನ್ ಬಿಡಿ. ಎಲ್ಲರೊಂದಿಗೆ ಫ್ರೆಂಡ್ಲಿ ರಿಲೇಷನಶೀಪನ್ನು ಬೆಳೆಸಿ.
ಬೇರೆಯವರು ಏನಾದರೂ ಮಾಡಿಕೊಂಡು ಹಾಳಾಗೋಗ್ಲಿ, ನೀವು ಜಸ್ಟ ಕಸ್ಟಮರ ಫ್ರೆಂಡ್ಲಿ ಕ್ವಾಲಿಟಿ ಪ್ರೋಡಕ್ಟ, ಕ್ವಾಲಿಟಿ ಸರ್ವಿಸ್ ಕೊಡುವುದರ ಕಡೆಗೆ ಮಾತ್ರ ಗಮನ ಹರಿಸಿ. ಬೇರೆಯವರು ಕಾಂಪಿಟೇಷನ್ ಅನ್ನೋವಾಗ ನೀವು ಬರೀ ಕ್ವಾಲಿಟಿ ಕ್ವಾಲಿಟಿ ಕ್ವಾಲಿಟಿ ಮಂತ್ರ ಜಪ ಮಾಡಿ. ನಿಮ್ಮ ಒಳ್ಳೆತನವನ್ನು ಜಗತ್ತಿಗೆ ತೋರಿಸಿ ನಿಮ್ಮ ಬ್ರ್ಯಾಂಡ ವ್ಯಾಲೂವನ್ನು ಹೆಚ್ಚಿಸಿಕೊಳ್ಳಿ. ಒಳ್ಳೇ ಮಿತ್ರರನ್ನು ಸಂಪಾದಿಸಿ. ಇದು ನಮ್ಮ ಕಂಪನಿಯ ಪರ್ಸನಲ್ ಬಿಜನೆಸ್ ಸಿದ್ದಾಂತ. ಈ ಸಿದ್ದಾಂತದಿಂದಲೇ ನಾವು ಕಾಲು ಕೆರೆದುಕೊಂಡು ಬಂದ ಎಷ್ಟೋ ಜನರನ್ನು ಸೈಲೆಂಟಾಗಿ ಖತಮ ಮಾಡಿದ್ದೇವೆ. ಈ ಸಿದ್ದಾಂತದಿಂದಲೇ ಭಾರತ ಪಾಕಿಸ್ತಾನವನ್ನು ಸೈಲೆಂಟಾಗಿ ಫಿನಿಶ ಮಾಡಿದೆ. ಈಗ ಚೀನಾವನ್ನು ಇದೇ ಸಿದ್ದಾಂತದಿಂದ ಭೀಕಾರಿ ರಾಷ್ಟ್ರ ಮಾಡುತ್ತೆ ನೋಡ್ತಾಯಿರಿ, ಇದರಲ್ಲಿ ಯಾವುದೇ ಅನುಮಾನವಿಲ್ಲ. ನೀವು ದೇಶದ ಸಿದ್ದಾಂತವನ್ನು ನಿಮ್ಮ ಬಿಜನೆಸಗೆ ಅಳವಡಿಸಿಕೊಳ್ಳಿ, ನಿಮ್ಮನ್ನು ಕೆಣಕಿದವರು ಸೈಲೆಂಟಾಗಿ ಮಣ್ಣಾಗುತ್ತಾರೆ. All the best and Thanks You….