Business Lesson 12
ಹಾಯ್ ಗೆಳೆಯರೇ, ನಾನು ನಿಮ್ಮ ಸತೀಶಕುಮಾರ. ಇವತ್ತಿನ ಬಿಜನೆಸ್ ಲೆಸ್ಸನನಲ್ಲಿ ಬಿಜನೆಸ್ ಫಂಡಿಂಗ್ ಬಗ್ಗೆ ಡಿಸ್ಕಸ್ ಮಾಡೋಣಾ. ಬಿಜನೆಸ್ ಮಾಡಲು ಹಣವನ್ನು ಅರೇಂಜ ಮಾಡಲು ಇರುವ ಒಟ್ಟಾರೆ ದಾರಿಗಳ ಬಗ್ಗೆ ನೋಡೋಣಾ.
1) Self Funding and Boot Strapping :
ಯಾರೇ ಬಿಜನೆಸ್ ಸ್ಟಾರ್ಟ ಮಾಡಿದರೂ ಅದರ ಮೊದಲ ಇನ್ವೇಸ್ಟರ ಅವರೇ ಆಗಿರುತ್ತಾರೆ. ನೀವು ಹೊಸ ಬಿಜನೆಸ್ಸನ್ನು ಸ್ಟಾರ್ಟ ಮಾಡಬೇಕೆಂದರೆ ನೀವು ಮೊದಲು ನಿಮ್ಮ ಜೇಬಿನಿಂದಲೇ ಹಣ ತೆಗೆದು ಬಿಜನೆಸ್ಸನ್ನು ಸ್ಟಾರ್ಟ ಮಾಡಬೇಕಾಗುತ್ತದೆ. ನೀವು ಇಲ್ಲಿ ತನಕ ಗಳಿಸಿ ಕೂಡಿಟ್ಟ ಹಣವನ್ನೆಲ್ಲ ನಿಮ್ಮ ಬಿಜನೆಸ್ಸಲ್ಲಿ ಹೂಡಿಕೆ ಮಾಡಬೇಕಾಗುತ್ತದೆ. ನಿಮ್ಮ ಜೇಬು ಖಾಲಿಯಾದಾಗ ನಿಮ್ಮ ಮನೆಯವರಿಂದ, ಸ್ನೇಹಿತರಿಂದ, ಸಂಬಂಧಿಕರಿಂದ ಹಣ ಸಹಾಯ ಪಡೆದುಕೊಂಡು ಬಿಜನೆಸ್ ರನ್ ಮಾಡಬೇಕಾಗುತ್ತದೆ. ನೀವು ಬೂಟ ಸ್ಟ್ರ್ಯಾಪಿಂಗ ಮಾಡಲೇಬೇಕಾಗುತ್ತದೆ. ಇದನ್ನು ಬಿಟ್ಟು ಬೇರೆ ಆಪ್ಶನ್ ಇರಲ್ಲ. ಪ್ರತಿಯೊಬ್ಬ ಸಕ್ಸೆಸಫುಲ್ ಬಿಜನೆಸಮ್ಯಾನ ತನ್ನ ಆರಂಭಿಕ ದಿನಗಳಲ್ಲಿ ಬೂಟ ಸ್ಯ್ರ್ಯಾಪ ಮಾಡಿಯೇ ತನ್ನ ಬಿಜನೆಸ್ಸನ್ನು ಸ್ಟಾರ್ಟ ಮಾಡಿರುತ್ತಾನೆ. ಸೋ, ನಿಮ್ಮ ಬಿಜನೆಸನ ಮೊದಲ ಫಂಡಿಂಗ್ ಆಪ್ಶನ ನೀವೇ ಆಗಿರುತ್ತೀರಿ.
2) Crowd Funding :
ಬಿಜನೆಸ್ ಮಾಡಲು ಹಣ ಹೊಂದಿಸಲು ಕ್ರೌಡ್ ಫಂಡಿಂಗ ಕೂಡ ಒಂದು ಬೆಸ್ಟ ಆಪ್ಶನ್ ಆಗಿದೆ. ನಿಮಗೆ ಗೊತ್ತಿರುವ ಜನರತ್ರ ನೀವು ನಿಮ್ಮ ಬಿಜನೆಸಗೆ ಸ್ಪಾನ್ಸರಶೀಪಾಗಿ ಹಣ ಪಡೆಯಬಹುದು. ನಿಮಗೆ ಒಳ್ಳೆಯದನ್ನು ಬಯಸುವವರು, ನಿಮ್ಮನ್ನು ಪ್ರೀತಿಸುವವರು ನಿಮಗೆ ಹಣವನ್ನು ಗಿಫ್ಟಾಗಿ ಕೊಡುವ ಸಾಧ್ಯತೆ ತುಂಬಾನೇ ಇರುತ್ತದೆ. ನೀವು ಸೋಸಿಯಲ್ ಮಿಡಿಯಾಗಳಲ್ಲಿ ಸ್ವಲ್ಪ ಫೇಮಸ್ ಆಗಿದ್ದರೆ ನೀವು ನಿಮ್ಮ ಫ್ಯಾನ್ಸಗಳ ಕಡೆಯಿಂದಲೂ ಡೊನೇಶನನ್ನು ಪಡೆದುಕೊಂಡು ಬಿಜನೆಸ್ ರನ್ ಮಾಡಬಹುದು. ನಾನು ಕನ್ನಡದಲ್ಲಿ ವೆಬ ಸೇರಿಜ ಸ್ಟಾರ್ಟ ಮಾಡುವುದಕ್ಕಾಗಿ ಫೇಸ್ಬುಕ್ ಹಾಗೂ ಯುಟ್ಯೂಬಗಳಲ್ಲಿ ನನ್ನ ಫಾಲೋವರ್ಸಗಳಿಂದ ಮನಿ ಡೊನೇಶನ್ ಕೇಳಿದ್ದೆ. ಆದರೆ 20 ಲಕ್ಷ ಜನರಿಂದ ಬಂದ ಡೊನೇಶನ್ ಎಷ್ಟಪ್ಪ ಅಂದ್ರೆ ಬರೀ 832 ರೂಪಾಯಿ ಅಷ್ಟೇ. ಅದಕ್ಕೆ ನಾನು ಕನ್ನಡದಲ್ಲಿ ವೆಬ್ ಸೇರಿಜ ಆ್ಯಂಡ್ ಶಾರ್ಟಫಿಲ್ಮ ಮಾಡುವ ಐಡಿಯಾ ಡ್ರಾಪ ಮಾಡಿ ಮರಾಠಿ ಮತ್ತು ಹಿಂದಿಗೆ ಶಿಫ್ಟಾದೆ. ನನಗೆ ಕ್ರೌಡ ಫಂಡಿಂಗನಿಂದ ಹಣ ಬರದಿದ್ದರೂ ಯುಟ್ಯೂಬನಲ್ಲಿರುವ ನನ್ನ ಕ್ಲೋಸ್ ಫ್ರೆಂಡ್ಸಗಳಿಗೆ ಅವರ ಫಾಲೋವರ್ಸಗಳಿಗೆ ಲಕ್ಷಾಂತರ ಹಣ ಬಂದಿದೆ. ಸೋ, ನೀವು ಕ್ರೌಡ ಫಂಡಿಂಗನಿಂದ ಹಣ ಹೊಂದಿಸಲು ಟ್ರಾಯ ಮಾಡುವುದರಲ್ಲಿ ತಪ್ಪೇನಿಲ್ಲ.
3) Bank Loan
ಭಾರತದಲ್ಲಿ ಬಹಳಷ್ಟು ಜನ ಬ್ಯಾಂಕ್ ಲೋನನಿಂದಲೇ ಬಿಜನೆಸ್ ಸ್ಟಾರ್ಟ ಮಾಡಲು ಪ್ರಯತ್ನಿಸುತ್ತಾರೆ. ಆದರೆ ಬೇರೆ ಬೇರೆ ಕಾರಣಗಳಿಂದ ಎಲ್ಲರಿಗೂ ಬ್ಯಾಂಕ ಲೋನ ಸಿಗುವುದಿಲ್ಲ. ಆದರೆ ನಿಮ್ಮ ಸಿಬಿಲ್ ಸ್ಕೋರ್ ಹಾಗೂ ಪ್ರಾಪರ್ಟಿ ಪೇಪರ್ಸ ಚೆನ್ನಾಗಿದ್ರೆ ನಿಮಗೆ ಖಂಡಿತ ಬ್ಯಾಂಕ ಲೋನ ಸಿಗುತ್ತದೆ. ನಿಮ್ಮ ಸಿಬಿಲ್ ಸ್ಕೋರ್ ಹಾಗೂ ಹಿಂದಿನ ಎರಡ್ಮೂರು ವರ್ಷದ ಫೈನಾನ್ಸಿಯಲ್ ಟ್ರ್ಯಾಕ್ ರೆಕಾರ್ಡ ಚೆನ್ನಾಗಿದ್ರೆ ನಿಮಗೆ ಭಾರತ ಸರ್ಕಾರದ ಮುದ್ರಾ ಯೋಜನೆಯಡಿ ಕೋ-ಲ್ಯಾಟರಲ ಸೆಕ್ಯುರಿಟಿಯಿಲ್ಲದೇ ಲೋನ ಸಿಗುತ್ತದೆ.
4) Government Schemes and Grants :
ಭಾರತ ಸರ್ಕಾರ ಬಿಜನೆಸಗೆ ಉತ್ತೇಜನ ನೀಡುವುದಕ್ಕಾಗಿ ಹಲವಾರು ಯೋಜನೆಗಳನ್ನು ಪ್ರಾರಂಭಿಸಿದೆ. ಆದರೆ ಅವುಗಳಿಂದ ನಿಜವಾಗಿಯೂ ಬಿಜನೆಸ್ ಮಾಡುವವರಿಗೆ ಹೆಚ್ಚಿನ ಮಟ್ಟದಲ್ಲಿ ಬೆನಫಿಟ್ ಸಿಗುತ್ತಿಲ್ಲ.
ಉದಾಹರಣೆಗೆ : ಮುದ್ರಾ ಯೋಜನೆಯಿಂದ ಬಿಜನೆಸ್ ಮಾಡುವವರಿಗೆ ಲೋನ ಸಿಗದಿದ್ದರೂ ಪುಡಿ ರಾಜಕಾರಣಿಗಳಿಗೆ ಲೋನ ಸಿಕ್ಕಿದೆ. ಅವರು ಅದರಿಂದ ಮನೆ ಕಾರು ಖರೀದಿಸಿ ಶೋಕಿ ಮಾಡುತ್ತಾ ತಿರುಗುತ್ತಿದ್ದಾರೆ. ಇನ್ನು ಇದನ್ನು ಹೊರತು ಪಡಿಸಿ Startup India, Stand-up Indiaಗಳ ಕಥೆಯೂ ಅಷ್ಟೇ ಇದೆ. ಅದರಲ್ಲಿಯೂ ಸಹ ನಿಜವಾದ ಬಿಜನೆಸಮ್ಯಾನಗಳಿಗೆ ಫಂಡ್ ಸಿಗ್ತಿಲ್ಲ. ಸರ್ಕಾರದ ಚಮಚಾಗಿರಿ ಮಾಡಿ ಬಿಜನೆಸ್ ಹೆಸರಲ್ಲಿ ಬ್ಯಾಂಕ್ ಲೂಟಿ ಮಾಡಿಕೊಂಡು ಓಡಿ ಹೋಗುವವರಿಗೆ ಮಾತ್ರ ಸಾವಿರ ಕೋಟಿ ಲೋನ ಸಿಗ್ತಿದೆ. ಆದರೆ ನಿಯತ್ತಾಗಿ ಬಿಜನೆಸ್ ಮಾಡ್ತಿರೋ ನಮ್ಮಂಥವರು ಒಂದು ಕೋಟಿ ಲೋನ ಕೇಳಿದ್ರೆ ಇವರಿಗೆ ಸಾವಿರ ಶುರಿಟಿಗಳು ಬೇಕಾಗುತ್ತವೆ. ಈಗ ಗವರ್ನಮೆಂಟ ಎಲೆಕ್ಟ್ರಿಕ್ ಕಾರುಗಳ ಹಾಗೂ ಆರ್ಟಿಫಿಸಿಯಲ್ ಇಂಟಲಿಜೆನ್ಸಿ ಸ್ಟಾರ್ಟಪಗಳಿಗೆ ಗ್ರ್ಯಾಂಟಗಳನ್ನು ಕೊಡುವುದಾಗಿ ಹೇಳಿದೆ. ಆದರೆ ಇದರಲ್ಲೂ ರಾಜಕಾರಣಿಗಳ ಚೇಲಾಗಳಿಗೆ ಹಾಗೂ ಕ್ಲೋಸ್ ಫ್ರೆಂಡ್ಸಗಳಿಗೇನೆ ಟೆಂಡರ್ ಹಾಗೂ ಗ್ರ್ಯಾಂಟಗಳು ಸಿಗುತ್ತವೆಯೋ ಹೊರತು ಟ್ಯಾಲೆಂಟೆಡ್ ಬಿಜನೆಸಮ್ಯಾನಗಳಿಗಲ್ಲ. ಅದಕ್ಕಾಗಿ ನನಗೆ ಈ ಸರ್ಕಾರಿ ಸ್ಕೀಮಗಳ ಮೇಲೆ ಒಂಚೂರು ಭರವಸೆಯಿಲ್ಲ. ಏಕೆಂದರೆ ಆಲ ಮೋಸ್ಟ ಆಲ ಬಿಜನೆಸ್ ಫಂಡಿಂಗ್ ಸ್ಕೀಮಗಳು ವೋಟ ಬ್ಯಾಂಕಿಗಾಗಿ ಮಾಡಿದ ಸ್ಕ್ಯಾಮಗಳಾಗಿವೆ ಅಷ್ಟೇ.
5) Angel Investors :
ನೀವು ನಿಮ್ಮ ಜೇಬಿನಲ್ಲಿದ್ದ ಹಣದ ಜೊತೆಗೆ ಬಂದ ಪ್ರೋಫಿಟನ್ನೆಲ್ಲ ಮತ್ತೆ ನಿಮ್ಮ ಬಿಜನೆಸ್ಸಲ್ಲೇ ರಿಇನ್ವೇಸ್ಟ ಮಾಡಿ ಒಂದು ಪವರಫುಲ್ ಬಿಜನೆಸ್ಸನ್ನು ಮಾರ್ಕೆಟನಲ್ಲಿ ನಿಲ್ಲಿಸಿದರೆ ನೀವು ಬೇರೆಯವರ ಜೇಬಿನಿಂದ ಹಣ ತೆಗೆದು ಬಿಜನೆಸ್ ಗ್ರೋ ಮಾಡಬಹುದು. ಅಂದರೆ ನೀವು ಆ್ಯಂಜೆಲ್ ಇನ್ವೇಸ್ಟರಗಳಿಂದ ಫಂಡಿಂಗನ್ನು ಪಡೆದುಕೊಂಡು ನಿಮ್ಮ ಬಿಜನೆಸ್ಸನ್ನು ಬೇಕಾದಂತೆ ಗ್ರೋ ಮಾಡಬಹುದು, ನ್ಯಾಷನಲ್ ಇಂಟರನ್ಯಾಷನಲ್ ಲೆವಲಗೆ ತೆಗೆದುಕೊಂಡು ಹೋಗಬಹುದು. ಸಾಮಾನ್ಯವಾಗಿ ಈ ಆ್ಯಂಜೆಲ ಇನ್ವೇಸ್ಟರಗಳು ಬಿಜನೆಸಮ್ಯಾನ, ಕ್ರಿಕೆಟರ್, ಸೆಲೆಬ್ರಿಟಿಗಳಾಗಿರುತ್ತಾರೆ. ಅವರು ತಮ್ಮ ಬಳಿ ಕೊಳೆಯುತ್ತಿರುವ ಹಣವನ್ನು ಬೇರೆಯವರ ಬಿಜನೆಸನಲ್ಲಿ ಹೂಡಿಕೆ ಮಾಡುತ್ತಾರೆ. ಅದರ ಬದಲಾಗಿ ಆ ಕಂಪನಿಯ ಕೆಲವೊಂದಿಷ್ಟು ಶೇರುಗಳನ್ನು ತೆಗೆದುಕೊಳ್ಳುತ್ತಾರೆ. ಒಂದು ವೇಳೆ ನೀವು ಆ್ಯಂಜೆಲ ಇನ್ವೇಸ್ಟರಗಳಿಂದ ಫಂಡಿಂಗ್ ತೆಗೆದುಕೊಂಡರೆ ಅವರು ನಿಮ್ಮ ಕಂಪನಿಯ 30% ಶೇರುಗಳನ್ನು ತೆಗೆದುಕೊಳ್ಳಬಹುದು, ಅದಕ್ಕಿಂತಲೂ ಹೆಚ್ಚಿಗೂ ತೆಗೆದುಕೊಳ್ಳಬಹುದು. ಇದು ಅವರು ಹೂಡಿಕೆ ಮಾಡುವ ಹಣದ ಮೇಲೆ ಡಿಪೆಂಡಾಗುತ್ತದೆ. ಈ ಆ್ಯಂಜೆಲ ಇನ್ವೇಸ್ಟರಗಳು ನಿಮ್ಮ ಬಿಜನೆಸ್ ಮಾಡೆಲ ಹಾಗೂ ನಿಮ್ಮ ಕ್ಯಾಪಬಲಿಟಿ ನೋಡಿ ನಿಮ್ಮ ಬಿಜನೆಸ್ಸಲ್ಲಿ ದುಡ್ಡಾಕುತ್ತಾರೆ, ಪ್ರತಿ ಹಂತದಲ್ಲಿ ನಿಮಗೆ ಸಹಾಯ ಮಾಡುತ್ತಾರೆ, ನಿಮಗೆ ಗೈಡ ಮಾಡುತ್ತಾರೆ. ಆದರೆ ಅವರು ಯಾವುದೇ ಕೆಲಸವನ್ನು ಮಾಡುವುದಿಲ್ಲ. ಅವರು ದೂರದಿಂದಲೇ ಎಲ್ಲವನ್ನು ಕಂಟ್ರೋಲ್ ಮಾಡುತ್ತಾರೆ. ಎಲ್ಲ ಕೆಲಸವನ್ನು ನೀವೇ ಮಾಡಬೇಕಾಗುತ್ತದೆ. ಅವರು ಬರೀ ದುಡ್ಡಾಕಿ ತಮ್ಮ ಲೈಫಲ್ಲಿ ಬಿಜಿಯಾಗಿರುತ್ತಾರೆ. ನೀವು ಕೆಲಸ ಮಾಡಿ ಪ್ರೋಫಿಟ ಮಾಡಿ ಅವರ ಹಣವನ್ನು ರಿಟರ್ನ ಗಳಿಸಲು ಕೆಲಸ ಮಾಡಬೇಕು. ನಿಮಗೆ ನಿಮ್ಮ ಬಿಜನೆಸ್ಸನ್ನು ದೊಡ್ಡ ಲೆವೆಲಲ್ಲಿ ಗ್ರೋ ಮಾಡಬೇಕೆಂದರೆ ಆ್ಯಂಜೆಲ ಇನ್ವೇಸ್ಟರಗಳಿಂದ ಫಂಡಿಂಗ್ ತೆಗೆದುಕೊಳ್ಳುವುದು ನಿಮಗೆ ಬೆಸ್ಟ ಆಪ್ಶನ ಆಗಿದೆ.
6) Venture Capitalist (VC)
ಸಮಾನ ಮನಸ್ಥಿತಿಯುಳ್ಳ ಇನ್ವೇಸ್ಟರಗಳ ಗುಂಪಿಗೆ ನಾವು ವೆಂಚರ್ ಕ್ಯಾಪ್ಯಾಟಲಿಸ್ಟ ಎನ್ನುತ್ತೇವೆ. Venture Capitalist means group of equal minded investors. ಈ ಇನ್ವೇಸ್ಟರಗಳು ಸಾಮಾನ್ಯವಾಗಿ ದೊಡ್ಡ ದೊಡ್ಡ ಇನ್ವೇಸ್ಟಮೆಂಟ ಕಂಪನಿಗಳ ಹಾಗೂ ಮುಚ್ಯುವಲ ಫಂಡ್ಸ ಕಂಪನಿಗಳ CEO, ಮ್ಯಾನೇಜರಗಳಾಗಿರುತ್ತಾರೆ. ನೀವು ಇವರಿಂದಲೂ ಫಂಡಿಂಗನ್ನು ಪಡೆದುಕೊಂಡು ನಿಮ್ಮ ಬಿಜನೆಸ್ಸನ್ನು ಗ್ರೋ ಮಾಡಬಹುದು. ಆದರೆ ಇವರು ಆ್ಯಂಜೆಲ ಇನ್ವೇಸ್ಟರಗಳಂತೆ ಬಿಜನೆಸ್ ಐಡಿಯಾ ಮೇಲೆ ಹಣ ಹೂಡಿಕೆ ಮಾಡಲ್ಲ. ಇವರು ಸಕ್ಸೆಸಫುಲಿ ರನ ಆಗುತ್ತಿರುವ ಪ್ರೋಫಿಟ ಮೇಕಿಂಗ ಕಂಪನಿಗಳಲ್ಲಿ ಮಾತ್ರ ಹಣವನ್ನು ಹೂಡಿಕೆ ಮಾಡುತ್ತಾರೆ. ಅಂದರೆ ವೆಲ್ ಎಸ್ಟ್ಯಾಬ್ಲಿಷ್‌ಮೆಂಟ್ ಆದ ಕಂಪನಿಗಳಲ್ಲಿ ಹಣ ಹೂಡುತ್ತಾರೆ. ನೀವು ಇವರಿಂದ ಫಂಡಿಂಗನ್ನು ತೆಗೆದುಕೊಂಡರೆ ಇವರು ಇನಡೈರೆಕ್ಟಾಗಿ ನಿಮ್ಮ ಕಂಪನಿಯನ್ನು ಕಂಟ್ರೋಲ್ ಮಾಡುತ್ತಾರೆ. ನಿಮ್ಮ ಕಂಪನಿಯ ಈವ್ಯಾಲುವೇಷನನ್ನು ಹೆಚ್ಚಿಸಿ ತಮ್ಮ ಪಾಲಿನ ಶೇರುಗಳನ್ನು ಬೇರೆಯವರಿಗೆ ಮಾರಾಟ ಮಾಡಿ ಎಕ್ಸಿಟ ಆಗುತ್ತಾರೆ. ಇವರಿಗೆ ನಿಮ್ಮ ಕಂಪನಿಯ ಭವಿಷ್ಯದ ಬಗ್ಗೆ ಯಾವುದೇ ಕಾಳಜಿ ಇರುವುದಿಲ್ಲ. ಅವರಿಗೆ ಅವರು ಇನ್ವೇಸ್ಟ ಮಾಡಿದ ಹಣವನ್ನು 30 ಅಥವಾ 40ಪಟ್ಟು ಹೆಚ್ಚಿಸಿಕೊಂಡು ನಿಮ್ಮ ಕಂಪನಿಯಿಂದ ಬೇಗನೆ ಎಕ್ಸಿಟಾಗುವುದಷ್ಟೇ ಮುಖ್ಯವಾಗಿರುತ್ತದೆ. ನಿಮಗೆ ಇಂಟರೆಸ್ಟ್ ಇದ್ದರೆ ನೀವು VCಗಳಿಂದ ಫಂಡಿಂಗನ್ನು ತೆಗೆದುಕೊಳ್ಳಬಹುದು.
7) Share Market
ನೀವು ಶೇರ್ ಮಾರ್ಕೆಟನಿಂದಲೂ ನಿಮ್ಮ ಬಿಜನೆಸಗೆ ಹಣವನ್ನು ಪಡೆದುಕೊಳ್ಳಬಹುದು. ನೀವು ನಿಮ್ಮ ಕಂಪನಿಯ IPO ಅಂದರೆ Initial Public Offeringನ್ನು ಕ್ಯಾಲ್ಯುಲೇಟ ಮಾಡಿ ನಿಮ್ಮ ಕಂಪನಿಯ ಶೇರಗಳನ್ನು ಶೇರ್ ಮಾರ್ಕೆಟನಲ್ಲಿ ಲಿಸ್ಟಿಂಗ ಮಾಡಬಹುದು. ನಿಮ್ಮ ಕಂಪನಿಯ ಬ್ಯ್ರಾಂಡ್ ವ್ಯಾಲೂ ಚೆನ್ನಾಗಿದ್ದರೆ, ನಿಮ್ಮ ಕಂಪನಿಯ ಮೇಲೆ ಭರವಸೆ ಮೂಡಿದರೆ ಸಾಮಾನ್ಯ ನಾಗರಿಕರು ನಿಮ್ಮ ಕಂಪನಿಯ ಶೇರುಗಳನ್ನು ಖರೀದಿಸುತ್ತಾರೆ ಮತ್ತು ನಿಮ್ಮ ಬಿಜನೆಸ್ ಪಾರ್ಟನರ ಆಗುತ್ತಾರೆ. ನೀವು ಈ ಹಣದಿಂದ ನಿಮ್ಮ ಬಿಜನೆಸ್ಸನ್ನು ಗ್ರೋ ಮಾಡಬಹುದು.
ಗೆಳೆಯರೇ ಈ ರೀತಿ ನೀವು ಬೇರೆ ಬೇರೆ ದಾರಿಗಳಿಂದ ನಿಮ್ಮ ಬಿಜನೆಸ್ಸಗೆ ಹಣವನ್ನು ಹೊಂದಿಸಬಹುದು. ಅಂದರೆ 1) Self Funding and Boot Strapping, 2) Crowd Funding, 3) Bank Loan, 4) Government Schemes and Grants, 5) Angel Investors, 6) Venture Capitalist (VC), 7) Share Marketನಿಂದ ಹಣ ಹೊಂದಿಸಿ ನಿಮ್ಮ ಬಿಜನೆಸ್ಸನ್ನು ದೊಡ್ಡ ಲೆವೆಲಗೆ ತೆಗೆದುಕೊಂಡು ಹೋಗಬಹುದು. ಈ ವಿಡಿಯೋ ನಿಮಗೆ ಯುಜಫುಲ್ಲಾಗಿದ್ದರೆ ಈ ವಿಡಿಯೋಗೆ ಲೈಕ ಮಾಡಿ, ಕಮೆಂಟ ಮಾಡಿ, ಜೊತೆಗೆ ನನ್ನ ಫೇಸ್ಬುಕ್ ಪೇಜ ಲೈಕ ಹಾಗೂ ಯುಟ್ಯೂಬ ಚಾನೆಲಗೆ ಸಬಸ್ಕ್ರೈಬ್ ಮಾಡಿ. All the Best and Thanks You…