೧) ಮನುಷ್ಯನಿಗೆ ಜೀವನದಲ್ಲಿ ಬಹಳಷ್ಟು ಸಂಕಷ್ಟಗಳು ಬೇಕಾಗುತ್ತವೆ. ಏಕೆಂದರೆ ಯಶಸ್ಸನ್ನು ಸಂಭ್ರಮಿಸಲು ಅವು ಬೇಕಾಗುತ್ತವೆ…
೨) ವೈಫಲ್ಯ ಎಂಬ ರೋಗವನ್ನು ಕೊಲ್ಲಲು ಆತ್ಮ ವಿಶ್ವಾಸ ಮತ್ತು ಕಠಿಣ ಕೆಲಸಗಳು ಅತ್ಯುತ್ತಮ ಔಷಧಿಗಳಾಗಿವೆ.
೩) ನಿಮ್ಮ ಜೀವನದಲ್ಲಿ ಏನೇ ಏರುಪೇರಾದರೂ ಆಲೋಚನೆಯೇ ನಿಮ್ಮ ಮೂಲ ಬಂಡವಾಳ ಮತ್ತು ಆಸ್ತಿಯಾಗಿರಬೇಕು.
೪) ಯಶಸ್ವಿಯಾಗುತ್ತೇನೆ ಎಂಬ ನಿರ್ಧಾರ ನಿಮ್ಮಲ್ಲಿ ಪ್ರಬಲವಾಗಿದ್ದರೆ ಸೋಲು ಎಂದಿಗೂ ನಿಮ್ಮನ್ನು ಹಿಮ್ಮೆಟ್ಟಿಸುವುದಿಲ್ಲ…
೫) ನೀವು ವಿಫಲರಾದರೆ ಯಾವುದೇ ಕಾರಣಕ್ಕೂ ವಿಚಲಿತರಾಗಬೇಡಿ. ಏಕೆಂದರೆ Fail ಎಂದರೆ First Attempt in Learning ಎಂದರ್ಥ. End ಎಂದರೆ Effort Never Dies ಎಂದರ್ಥ. No ಎಂದರೆ Next Opportunity ಎಂದರ್ಥ.
೬) ಸೋಲು ಯಶಸ್ಸಿನ ಮೊದಲ ಮೆಟ್ಟಿಲು.
೭) ನೀವು ನಿಮ್ಮ ಗುರಿ ತಲುಪಬೇಕಾದರೆ ನೀವು ಒಂದೇ ಮನಸ್ಥಿತಿಯಿಂದ ನಿರಂತರವಾಗಿ ಪ್ರಯತ್ನಿಸಬೇಕು.
೮) ನಿಮ್ಮ ಮೊದಲ ಗೆಲುವಿನ ನಂತರ ವಿಶ್ರಾಂತಿ ತೆಗೆದುಕೊಳ್ಳಬೇಡಿ. ಏಕೆಂದರೆ ನೀವು ಎರಡನೇ ಪ್ರಯತ್ನದಲ್ಲಿ ವಿಫಲರಾದರೆ ನಿಮ್ಮ ಮೊದಲ ಗೆಲುವು ಕೇವಲ ಅದೃಷ್ಟವೆಂದು ಹೀಯಾಳಿಸಲು ಬಹಳಷ್ಟು ತುಟಿಗಳು ಕಾಯುತ್ತಿರುತ್ತವೆ.
೯) ಸಾಧಿಸೆ ಸಾಧಿಸುತ್ತೇನೆ ಎಂಬ ಕಿಚ್ಚಿನ ಮನಸ್ಸಿನ ಮುಂದೆ ಯಾವುದೇ ಅಡೆತಡೆ ನಿಲ್ಲಲಾರದು…
೧೦) ಕ್ರಿಯಾಶೀಲತೆ ಯಶಸ್ಸಿನ ಕೀಲಿ ಕೈಯಾಗಿದೆ…
೧೧) ನಾವು ಎಲ್ಲ ತರಹದಿಂದ ಸ್ವತಂತ್ರರಾಗಿರದಿದ್ದರೆ ಯಾರು ನಮ್ಮನ್ನು ಗೌರವಿಸುವುದಿಲ್ಲ…
೧೨) ಮಹಾನ ಕನಸುಗಾರರ ಕನಸುಗಳು ಯಾವಾಗಲೂ ನನಸಾಗುತ್ತವೆ…
೧೩) ಯಾವುದೇ ಸಮಸ್ಯೆಗೂ ಯುದ್ಧ ಶಾಶ್ವತವಾದ ಪರಿಹಾರವಲ್ಲ…
೧೪) ಅತಿಯಾದ ಸಂತಸದಿಂದ ಇಲ್ಲವೇ ಆಳವಾದ ದುಃಖದಿಂದ ಮಾತ್ರ ಕವನ ಕುಡಿಯೊಡೆಯುತ್ತದೆ…
೧೫) ಸಣ್ಣ ಗುರಿಯನ್ನು ಹೊಂದುವುದು ಅಪರಾಧವಾಗಿದೆ. ಆದ್ದರಿಂದ ದೊಡ್ಡ ದೊಡ್ಡ ಗುರಿಗಳನ್ನು ಇಟ್ಟುಕೊಳ್ಳಿ…
೧೬) ಸಮಸ್ಯೆಗೆ ನಿಮ್ಮನ್ನು ಸೋಲಿಸುವ ಅವಕಾಶವನ್ನು ಯಾವುದೇ ಕಾರಣಕ್ಕೂ ಕೊಡಬೇಡಿ…
೧೭) ಸೂರ್ಯನಂತೆ ಹೊಳೆಯುವ ಆಸೆ ನಿಮಗಿದ್ದರೆ ಮೊದಲು ಸೂರ್ಯನಂತೆ ಹೊತ್ತಿ ಉರಿಯುವುದನ್ನು ಕಲಿಯಿರಿ…
೧೮) ಆಕಾಶದೆಡೆಗೆ ನೋಡಿ, ಯಾರು ಒಂಟಿಯಾಗಿಲ್ಲ. ಇಡೀ ವಿಶ್ವವು ನಮಗೆ ಸ್ನೇಹಪರವಾಗಿದೆ. ಕನಸು ಕಂಡು ಕೆಲಸ ಮಾಡುವವರಿಗೆ ಬಯಸಿದ್ದೆಲ್ಲವೂ ಸಿಕ್ಕೇ ಸಿಗುತ್ತದೆ…
೧೯) ದೊಡ್ಡ ಗುರಿಯನ್ನು ಹೊಂದುವುದು, ನಿರಂತರವಾಗಿ ಜ್ಞಾನವನ್ನು ಪಡೆದುಕೊಳ್ಳುವುದು, ಪರಿಶ್ರಮ ಪಡುವುದು, ತಾಳ್ಮೆಯಿಂದಿರುವುದು ಈ ನಾಲ್ಕು ವಿಷಯಗಳನ್ನು ಅನುಸರಿಸಿದರೆ ನೀವು ಏನನ್ನಾದರೂ ಸಾಧಿಸಬಹುದು…
೨೦) ಎಕ್ಸಲೆನ್ಸ್ ಒಂದು ನಿರಂತರ ಪ್ರಕ್ರಿಯೆ. ನೀವು ಪರಫೆಕ್ಟ್ ಆಗಬೇಕಾದರೆ ನಿರಂತರವಾಗಿ ಪ್ರಯತ್ನಿಸಬೇಕು…
೨೧) ಸದಾಕಾಲ ಕ್ರಿಯಾಶೀಲರಾಗಿರಿ. ನಿಮ್ಮ ಜವಾಬ್ದಾರಿಗಳನ್ನು ನೀವೇ ಹೊತ್ತುಕೊಳ್ಳಿ. ನಿಮ್ಮ ಕನಸುಗಳಿಗಾಗಿ ಕೆಲಸ ಮಾಡಿ. ಇಲ್ಲವಾದರೆ ನೀವು ನಿಮ್ಮ ಅದೃಷ್ಟವನ್ನು ಬೇರೆಯವರಿಗೆ ಶರಣಾಗಿಸುತ್ತೀರಿ…
೨೨) ಚಿಂತನೆ ನಿಮ್ಮ ಮೂಲ ಬಂಡವಾಳವಾಗಿದೆ . ನಿಮ್ಮ ಎಲ್ಲ ಸಮಸ್ಯೆಗಳ ಪರಿಹಾರ ನಿಮ್ಮ ಹಾರ್ಡ್ ವರ್ಕನಲ್ಲಿದೆ…
೨೩) ನಿಮ್ಮ ಪ್ರಯತ್ನವಿಲ್ಲದೆ ನೀವು ಯಶಸ್ವಿಗಳಾಗಲು ಸಾಧ್ಯವಿಲ್ಲ. ನಿಮ್ಮ ಸಂಪೂರ್ಣ ಪ್ರಯತ್ನ ನಿಮ್ಮ ಕೆಲಸದಲ್ಲಿದ್ದರೆ ನೀವು ವಿಫಲರಾಗಲು ಸಾಧ್ಯವಿಲ್ಲ…
೨೪) ಶ್ರೇಷ್ಠ ವ್ಯಕ್ತಿಗಳಿಗೆ ಧರ್ಮವು ಸ್ನೇಹಿತರನ್ನು ಸಂಪಾದಿಸುವ ಮಾರ್ಗವಾಗಿದೆ. ಆದರೆ ಚಿಲ್ಲರೆ ವ್ಯಕ್ತಿಗಳಿಗೆ ಧರ್ಮ ಕಲಹವನ್ನು ಸೃಷ್ಟಿಸುವ ಅಸ್ತ್ರವಾಗಿದೆ…
೨೫) ಡ್ರೀಮ್, ಡ್ರೀಮ್, ಡ್ರೀಮ್. ನಿರಂತರವಾಗಿ ಕನಸು ಕಾಣಿ. ನಿಮ್ಮೆಲ್ಲ ಕನಸುಗಳು ನಿಮ್ಮ ಯೋಚನೆಗಳಾಗಿ ಒಂದಲ್ಲ ಒಂದಿನ ನನಸಾಗುತ್ತವೆ…
೨೬) ಮಳೆ ಬೀಳುವಾಗ ಎಲ್ಲ ಪಕ್ಷಿಗಳು ಮರದ ಆಸರೆಯನ್ನು ಪಡೆಯುತ್ತವೆ. ಆದರೆ ಹದ್ದುಗಳು ಮೋಡಗಳ ಮೇಲಿಂದ ಹಾರಾಡುವ ಸಾಹಸ ಮಾಡಿ ಮಳೆಯಿಂದ ತಪ್ಪಿಸಿಕೊಳ್ಳುತ್ತವೆ…
೨೭) ಯಾವಾಗ ನಿಮ್ಮ ಸಹಿ ಅಟೋಗ್ರಾಫಾಗಿ ಬದಲಾಗುತ್ತದೆಯೋ ಅವತ್ತೇ ನೀವು ಸಕ್ಸೆಸಫುಲ್ ವ್ಯಕ್ತಿಯಾದಂತೆ…
೨೮) ಬರೀ ಯಶಸ್ಸಿನ ಕಥೆಗಳನ್ನಷ್ಟೇ ಓದಬೇಡಿ. ಯಶಸ್ಸಿನ ಕಥೆಗಳಿಂದ ನಿಮಗೆ ಸಂದೇಶಗಳಷ್ಟೇ ಸಿಗುತ್ತವೆ. ಸೋಲಿನ ಕಥೆಗಳನ್ನು ಓದಿ. ನಿಮಗೆ ಯಶಸ್ವಿಯಾಗಲು ಕೆಲವು ಉತ್ತಮ ಐಡಿಯಾಗಳು ಸಿಗುತ್ತವೆ…
೨೯) ದೇಶದ ಬುದ್ಧಿವಂತ ಬ್ರೆನಗಳು ಕ್ಲಾಸ್ ರೂಮಿನ ಕೊನೆಯ ಬೆಂಚಿನ ಮೇಲೆ ಕಂಡು ಬರುತ್ತವೆ.
೩೦) ನಿಮ್ಮ ಕೆಲಸವನ್ನು ಪ್ರೀತಿಸಿ. ಆದರೆ ನಿಮ್ಮ ಕಂಪನಿಯನ್ನು ಅತಿಯಾಗಿ ಪ್ರೀತಿಸಬೇಡಿ. ಏಕೆಂದರೆ ಯಾವಾಗ ನಿಮ್ಮ ಕಂಪನಿ ನಿಮ್ಮನ್ನು ಪ್ರೀತಿಸುವುದನ್ನು ನಿಲ್ಲಿಸುತ್ತದೆ ಎಂಬುದು ಯಾರಿಗೆ ಗೊತ್ತು…??
೩೧) ಯಾರನ್ನಾದರೂ ಸೋಲಿಸುವುದು ಸುಲಭ. ಆದರೆ ಗೆಲುವುದು ತುಂಬಾ ಕಷ್ಟ…
೩೨) ನಿಮ್ಮ ಭವಿಷ್ಯವನ್ನು ಬದಲಾಯಿಸಲು ಸಾಧ್ಯವಿಲ್ಲ. ಆದರೆ ನಿಮ್ಮಿಂದ ನಿಮ್ಮ ಹವ್ಯಾಸಗಳನ್ನು ಬದಲಿಸಲು ಸಾಧ್ಯವಿದೆ. ನಿಮ್ಮ ಹವ್ಯಾಸಗಳು ನಿಮ್ಮ ಭವಿಷ್ಯವನ್ನು ಖಂಡಿತ ಬದಲಾಯಿಸುತ್ತವೆ.
೩೩) ನೀವು ನಿದ್ರೆ ಮಾಡುವಾಗ ಕಾಣುವುದು ಕನಸಲ್ಲ. ಯಾವ ಕನಸು ನಿಮ್ಮನ್ನು ನಿದ್ರಿಸಲು ಬಿಡುವುದಿಲ್ಲವೋ ಅದೇ ನಿಜವಾದ ಕನಸು…
೩೪) ಈ ಜಗತ್ತಿನಲ್ಲಿ ಭಯಕ್ಕೆ ಜಾಗವಿಲ್ಲ. ಕೇವಲ ಶಕ್ತಿಯು ಶಕ್ತಿಯನ್ನು ಗೌರವಿಸುತ್ತದೆ…
೩೫) ಸಕ್ಸೆಸ್ ಸಿಗಬೇಕೆಂದರೆ ಸಂಕಷ್ಟಗಳನ್ನು ಎದುರಿಸಲೇಬೇಕು. ಸಂಕಷ್ಟಗಳು ಯಶಸ್ಸಿನ ಮುಖ್ಯ ಭಾಗವಾಗಿವೆ…
೩೬) ಕಠಿಣವಾದ ಕೆಲಸಗಳು ಅಸಾಧ್ಯವೆಂದಲ್ಲ. ಕಠಿಣವಾದ ಕೆಲಸಗಳಿಗೆ ಹೆಚ್ಚಿಗೆ ಕಷ್ಟಪಡಬೇಕಾಗುತ್ತದೆ…
೩೭) ನೆಗೆಟಿವ ಪರಿಸ್ಥಿತಿಗಳಲ್ಲಿಯೂ ನೀವು ಪಾಸಿಟಿವ್ ಆಗಿದ್ದರೆ ನೀವು ಪ್ರತಿ ಬಾರಿಯೂ ಗೆಲ್ಲುತ್ತೀರಿ…
೩೮) ನಿಮ್ಮನ್ನು ದ್ವೇಷಿಸುವವರನ್ನು ನೀವು ಯಾವತ್ತೂ ದ್ವೇಷಿಸಬೇಡಿ. ಏಕೆಂದರೆ ನೀವು ಅವರಿಗಿಂತ ಉತ್ತಮರೆಂದು ಅವರಷ್ಟೇ ಯೋಚಿಸುತ್ತಾರೆ…
೩೯) ನೀವು ಕೋಪಿಸಿಕೊಳ್ಳುವ ಪ್ರತಿ ನಿಮಿಷವೂ ನೀವು ೬೦ ಸೆಕೆಂಡುಗಳ ಸಂತೋಷವನ್ನು ಕಳೆದುಕೊಳ್ಳುತ್ತೀರಿ…
೪೦) ಕಷ್ಟಗಳು ಬಂದಿವೆ ಎಂದು ಇಷ್ಟಪಟ್ಟಿದ್ದನ್ನು ಬಿಡಬೇಡಿ. ಇವತ್ತಿನ ದಿನ ಕಷ್ಟಕರವಾಗಿರಬಹುದು. ನಾಳೆ ಅದಕ್ಕಿಂತ ಕೆಟ್ಟದಿರಬಹುದು. ಆದರೆ ಮುಂದೊಂದು ದಿನ ಎಲ್ಲವು ಸಂತೋಷವಾಗಿರುತ್ತದೆ…
೪೧) ನೀವು ತಪ್ಪು ಮಾಡಿದಾಗ ಅದನ್ನು ಮುಜುಗುರವಿಲ್ಲದೆ ಒಪ್ಪಿಕೊಂಡು ಸರಿಯಾದ ದಾರಿಯಲ್ಲಿ ನಡೆಯಿರಿ…
೪೨) ಹಾರ್ಡ್ ವರ್ಕ್ ಎಂಬ ಚಕ್ರ ಮತ್ತು ಆತ್ಮ ವಿಶ್ವಾಸ ಎಂಬ ಇಂಧನದ ಮೇಲೆ ಸಕ್ಸೆಸ್ ಎಂಬ ವಾಹನ ಚಲಿಸುತ್ತದೆ…
೪೩) ಬೇರೆಯವರ ಸಲುಯಾಗಿ ನಿಮ್ಮ ಸ್ವಂತಿಕೆಯನ್ನು ಎಂದಿಗೂ ಬದಲಾಯಿಸಬೇಡಿ. ಏಕೆಂದರೆ ನಿಮ್ಮ ಪಾತ್ರವನ್ನು ನಿಮ್ಮಷ್ಟು ಉತ್ತಮವಾಗಿ ಬೇರೆಯವರಿಂದ ನಿಭಾಯಿಸಲು ಸಾಧ್ಯವಿಲ್ಲ…
೪೪) ಒಳ್ಳೆಯ ಜನರು ನಿಮಗೆ ಸಂತೋಷವನ್ನು ಕೊಟ್ಟರೆ, ಕೆಟ್ಟ ಜನ ನಿಮಗೆ ಅನುಭವವನ್ನು ಕೊಡುತ್ತಾರೆ ಎಂಬುದನ್ನು ಯಾವಾಗಲೂ ನೆನಪಿಡಿ…
೪೫) ನಿಮ್ಮ ಕೊನೆಯ ತಪ್ಪು ನಿಮ್ಮ ಉತ್ತಮ ಶಿಕ್ಷಕನಿದ್ದಂತೆ…
೪೬) ನಾನು ಸುಂದರವಾದ ಹುಡುಗನಲ್ಲ. ಆದರೆ ಸಹಾಯಕ್ಕಾಗಿ ಯಾರಾದರೂ ಕೈಚಾಚಿದರೆ ನಾನು ಸಹಾಯ ಮಾಡಬಲ್ಲೆ. ಸೌಂದರ್ಯ ಮನಸ್ಸಲ್ಲಿದೇ ಹೊರತು ಮುಖದಲ್ಲಿಲ್ಲ…
೪೭) ಈ ೩ ಕಾರಣಗಳಿಗಾಗಿ ಜನ ನಿಮ್ಮ ಬೆನ್ನ ಹಿಂದೆ ಮಾತಾಡುತ್ತಾರೆ. ಅವರು ನಿಮ್ಮ ಮಟ್ಟವನ್ನು ತಲುಪಲು ಸಾಧ್ಯವಾಗದಿದ್ದಾಗ, ನಿಮ್ಮ ಬಳಿ ಇರುವುದು ಅವರ ಬಳಿ ಇರದಿರುವಾಗ, ಅವರು ನಿಮ್ಮ ಜೀವನ ಶೈಲಿಯನ್ನು ನಕಲಿಸಲು ಪ್ರಯತ್ನಿಸಿ ಸೋತಾಗ…
೪೮) ಅದೃಷ್ಟದಲ್ಲಿ ನಂಬಿಕೆ ಇಡಬೇಡಿ. ಹಾರ್ಡ್ ವರ್ಕನಲ್ಲಿ ನಂಬಿಕೆಯಿಡಿ…
೪೯) ಒಂದು ಅತ್ಯುತ್ತಮ ಪುಸ್ತಕವು ನೂರು ಸ್ನೇಹಿತರಿಗೆ ಸಮಾನವಾದರೆ; ಒಬ್ಬ ಉತ್ತಮ ಸ್ನೇಹಿತನು ಗ್ರಂಥಾಲಯಕ್ಕೆ ಸಮವಾಗುತ್ತಾನೆ…
೫೦) ಕಪ್ಪು ಬಣ್ಣವು ಭಾವನಾತ್ಮಕವಾಗಿ ಕೆಟ್ಟದು. ಆದರೆ ಪ್ರತಿಯೊಂದು ಕಪ್ಪು ಬೋರ್ಡ್ ವಿದ್ಯಾರ್ಥಿಯ ಜೀವನವನ್ನು ಪ್ರಕಾಶಮಾನಗೊಳಿಸುತ್ತದೆ…
ಈ ಅಂಕಣ (Article) ನಿಮಗೆ ಇಷ್ಟವಾಗಿದ್ದರೆ ನಿಮ್ಮೆಲ್ಲ ಗೆಳೆಯರೊಡನೆ ಮತ್ತು ನೀವಿರುವ ಎಲ್ಲ ಕನ್ನಡ ಫೇಸ್ಬುಕ್ ಗ್ರೂಪಗಳಲ್ಲಿ ಇದನ್ನು ತಪ್ಪದೇ ಶೇರ್ (Share) ಮಾಡಿ. ಜೊತೆಗೆ ಪ್ರತಿದಿನ ಹೊಸಹೊಸ ಅಂಕಣಗಳನ್ನು, ಪ್ರೇಮಕಥೆಗಳನ್ನು, ಕವನಗಳನ್ನು ಉಚಿತವಾಗಿ ಓದಲು ತಪ್ಪದೆ ನನ್ನ ಫೇಸ್ಬುಕ್ ಪೇಜನ್ನು https://www.facebook.com/Directorsatishkumar/ (Director Satishkumar) ಲೈಕ್ ಮಾಡಿ.
Follow Me On : Facebook | Instagram | YouTube | Twitter
My Books : Kannada Books | Hindi Books | English Books
⚠ STRICT WARNING ⚠Content Rights :
ಈ ಅಂಕಣದ ಎಲ್ಲ ಹಕ್ಕುಗಳನ್ನು ಡೈರೆಕ್ಟರ್ ಸತೀಶಕುಮಾರ ಹಾಗೂ ರೋರಿಂಗ್ ಕ್ರಿಯೇಷನ್ಸ್ ಪ್ರೈವೇಟ್ ಲಿಮಿಟೆಡ್ ಕಂಪನಿ ವತಿಯಿಂದ ಸಂಪೂರ್ಣವಾಗಿ ಕಾಯ್ದಿರಿಸಲಾಗಿದೆ. ಡೈರೆಕ್ಟರ್ ಸತೀಶಕುಮಾರ ಅವರ ಅನುಮತಿಯಿಲ್ಲದೆ ಈ ಅಂಕಣದ ಯಾವುದೇ ಭಾಗವನ್ನು ಕಾಪಿ ಮಾಡುವಂತಿಲ್ಲ, ಬೇರೆ ಭಾಷೆಗಳಿಗೆ ಅನುವಾದಿಸುವಂತಿಲ್ಲ ಮತ್ತು ಇದನ್ನು ಬೇರೆಡೆಗೆ ಪ್ರಕಟಿಸುವಂತಿಲ್ಲ. ಯಾವುದೇ ಸಾಮಾಜಿಕ ಜಾಲತಾಣಗಳಲ್ಲಿ ಪೋಸ್ಟ್ ಮಾಡುವಂತಿಲ್ಲ. ಮುದ್ರಣ ಮಾಡುವಂತಿಲ್ಲ. ಒಂದು ವೇಳೆ ಯಾರಾದರೂ ಕಾಪಿ ರೈಟ್ಸ್ ನಿಯಮಗಳನ್ನು ಉಲ್ಲಂಘಿಸಿದರೆ ಅವರ ಮೇಲೆ ಸೂಕ್ತ ಕಾನೂನು ಕ್ರಮ ಕೈಗೊಳ್ಳಲಾಗುವುದು ಹಾಗೂ ಆಗಿರುವ ನಷ್ಟವನ್ನು ಅವರಿಂದಲೇ ವಸೂಲಿ ಮಾಡಲಾಗುವುದು.
All Rights of this article are fully reserved by Director Satishkumar and Roaring Creations Private Limited India. No part of this article can be copied, translated or re published anywhere without the written permission of Director Satishkumar. If such violation of copy rights found to us, then we legally punish to copy cats and recover our loss by them only.
© Director Satishkumar and Roaring Creations Private Limited, India.