ಹಾಯ್ ಗೆಳೆಯರೇ, ಇನ್ಸಸ್ಟಾಗ್ರಾಮಲ್ಲಿ ವಿಡಿಯೋ ಎಡಿಟಿಂಗಗೆ ಸಂಬಂಧಪಟ್ಟಂತೆ ಕೆಲವೊಂದಿಷ್ಟು ಪ್ರಶ್ನೆಗಳು ಬಂದಿವೆ. “ಸರ್ ನೀವು ವಿಡಿಯೋ ಎಡಿಟಿಂಗಗೆ ಯಾವ ಸಾಫ್ಟ್ವೇರ್ ಬಳಸುತ್ತಿರಾ? ಯಾವ ಸಾಫ್ಟ್ವೇರ್ ಬೆಸ್ಟಾಗಿದೆ?” ಎಂಬಿತ್ಯಾದಿ ಪ್ರಶ್ನೆಗಳು ಬಂದಿವೆ. ಸೋ ಇವತ್ತಿನ ಎಪಿಸೋಡನಲ್ಲಿ ವಿಡಿಯೋ ಎಡಿಟಿಂಗ್ ಸಾಫ್ಟ್ವೇರಗಳ ಬಗ್ಗೆ ಶಾರ್ಟ ಆ್ಯಂಡ್ ಸ್ವೀಟಾಗಿ ನೋಡೋಣಾ.
ಮೊದಲು ಪ್ರೊಫೆಷನಲ್ ಸಾಫ್ಟ್ವೇರಗಳ ಬಗ್ಗೆ ನೋಡೋಣಾ, ಆಮೇಲೆ ಕೊನೆಯಲ್ಲಿ ಮೊಬೈಲ್ ಸಾಫ್ಟ್ವೇರಗಳ ಬಗ್ಗೆ ನೋಡೋಣಾ.
ಬರೀ ಒಂದೇ ಒಂದು ಸಾಫ್ಟ್ವೇರ್ ಇಟ್ಟುಕೊಂಡು ಕ್ವಾಲಿಟಿ ವಿಡಿಯೋ ಮಾಡಲು ಸಾಧ್ಯವಿಲ್ಲ. ಅದಕ್ಕೆ ಎರಡ್ಮೂರು ಪ್ರೊಫೆಷನಲ್ ವಿಡಿಯೋ ಎಡಿಟಿಂಗ್ ಸಾಫ್ಟ್ವೇರಗಳು ಬೇಕಾಗುತ್ತವೆ. ನಾವು ನಮ್ಮ ವಿಡಿಯೋ ಪ್ರೋಡಕ್ಷನ, ಆ್ಯಡಫಿಲ್ಮ್ಸ, ಮುಜಿಕ ವಿಡಿಯೋಜ, ಶಾರ್ಟಫಿಲ್ಮಗಳನ್ನು ಎಡಿಟ ಮಾಡಲು ಟೊಟಲಾಗಿ ನಾಲ್ಕು ಸಾಫ್ಟ್ವೇರಗಳನ್ನು ಬಳಸುತ್ತೇವೆ. ಅವೆಂದರೆ
1) Adobe Premier Pro
2) Adobe After Effects
3) Adobe Audition. ಇವು ವಿಂಡೋಸ್ ಸಿಸ್ಟಮಗೆ ಸೂಟಾಗುವ ಸಾಫ್ಟ್ವೇರಗಳಾದವು. ಇನ್ನೂ ಕೆಲವೊಂದಿಷ್ಟು ಸಲ ಐಮ್ಯಾಕ ಸಿಸ್ಟಮನಲ್ಲಿ ಎಡಿಟ ಮಾಡುತ್ತೇವೆ. ಆವಾಗ ನಾವು Final Cut Proವನ್ನು ಯುಜ ಮಾಡುತ್ತೇವೆ. Adobe Premier Pro ಹಾಗೂ Final Cut Pro ಹೆಚ್ಚುಕಮ್ಮಿ ಸೇಮ ಕೆಲಸ ಮಾಡುತ್ತವೆ. ನಿಮಗೆ ಯಾವುದೇ ಕನ್ವಿನೆಂಟಾಗುತ್ತೋ ಅದನ್ನು ಯುಜ ಮಾಡಿ.
* Adobe Premier Proನಿಂದ ನೀವು ಯಾವುದೇ ವಿಡಿಯೋವನ್ನು ಫುಲ್ ಎಡಿಟ್, ಲೀನಿಯರ್ ಎಡಿಟ ಮಾಡಬಹುದು. ಕಲರ ಕರೆಕ್ಷನ, ವಿಡಿಯೋ ಸ್ಪೀಡ್, ವಿಡಿಯೋ ಟ್ರಾಂಜಿಷನ್ಸ, ಆಡಿಯೋ ವಿಡಿಯೋ ಅಡಜಸ್ಟಮೆಂಟಗಳನ್ನೆಲ್ಲ ಮಾಡಬಹುದು.
* Adobe After Effectsನಲ್ಲಿ ನೀವು ಕೀ ಫ್ರೇಮ ಆ್ಯನಿಮೇಷನಗಳನ್ನು ಮಾಡಬಹುದು, ನಿಮಗೆ ಬೇಕಾದಂತೆ ವಿಡಿಯೋ ಎಫೆಕ್ಟ್ಸಗಳನ್ನು ರೆಡಿ ಮಾಡಿಕೊಳ್ಳಬಹುದು. ವಿಡಿಯೋ ಇಂಟ್ರೋ, ಲೋಗೋ, ಟೈಪಿಂಗ್ ಎಫೆಕ್ಟ್, ಟೈಟಲ್ ಎಫೆಕ್ಟ್, ಜೂಮ-ಇನ್, ಜೂಮ ಔಟ ಎಫೆಕ್ಟಗಳಂಥ ಸಾವಿರಾರು ಎಫೆಕ್ಟ್ಸಗಳನ್ನು ರೆಡಿಮಾಡಿಕೊಳ್ಳಬಹುದು.
* ಇನ್ನೂ Adobe Auditionನಲ್ಲಿ ನೀವು ಹಾಯ ಕ್ವಾಲಿಟಿ ಆಡಿಯೋ ರೆಕಾರ್ಡಿಂಗ್, ಆಡಿಯೋ ಎಡಿಟಿಂಗ್, ನಾಯಿಜ ರೀಮೂವಲ್, ಸೌಂಡ ಡಿಜೈನ ಇತ್ಯಾದಿಗಳನ್ನು ಮಾಡಬಹುದು.
ಗೆಳೆಯರೇ, ಈ ಮೂರು ಸಾಪ್ಟವೇರಗಳನ್ನು ಆಪರೇಟ ಮಾಡುವುದನ್ನು ಕಲಿತರೆ ನೀವು ವಿಡಿಯೋ ಎಡಿಟಿಂಗನಲ್ಲಿ ಎಕ್ಸಪರ್ಟಾಗುತ್ತೀರಿ. ಈ ಮೂರು ಎಡಿಟಿಂಗ್ ಸಾಫ್ಟ್ವೇರಗಳಿಂದ ನಾವು ಯುಟ್ಯೂಬ ವಿಡಿಯೋದಿಂದ ಹಿಡಿದು ಮುಜಿಕ ವಿಡಿಯೋ, ಟ್ರಾವೆಲ್ ವಿಡಿಯೋ, ಆ್ಯಡ ಫಿಲ್ಮ, ಶಾರ್ಟಫಿಲ್ಮ, ವೆಬ ಸೀರಿಜ ಅಷ್ಟೇ ಅಲ್ಲ ಫಿಲ್ಮನ್ನೇ ಎಡಿಟ ಮಾಡಬಹುದು. ಫಿಲ್ಮಮೇಕರಗಳು ಸಹ ಈ ಸಾಫ್ಟ್ವೇರಗಳನ್ನೇ ಬಳಸುತ್ತಾರೆ. ಇವುಗಳನ್ನು ಬಿಟ್ಟರೆ ಬೇರೆ ಯಾವುದೇ ಬೆಸ್ಟ ಸಾಫ್ಟ್ವೇರಗಳಿಲ್ಲ. ಇವೇ ಅಲ್ಟಿಮೇಟ್ ಆ್ಯಂಡ್ ಬೆಸ್ಟ ಸಾಫ್ಟ್ವೇರಗಳಾಗಿವೆ.
ಇನ್ನು ನೀವು ಮೊಬೈಲಲ್ಲಿ ಫನಗಾಗಿ ವಿಡಿಯೋ ಮಾಡುವವರಿದ್ದರೆ ನೀವು Filmora ಹಾಗೂ Kinemasterಗಳಂಥ ಬೇಸಿಕ ಎಡಿಟಿಂಗ್ ಆ್ಯಪಗಳನ್ನು ಯುಜ ಮಾಡಬಹುದು. ಇವು ಲ್ಯಾಪಟಾಪಗೂ ಸಹ ಸಪೋರ್ಟ್ ಆಗುತ್ತವೆ. ಎಲ್ಲ ಸಾಫ್ಟ್ವೇರಗಳ ಲಿಂಕನ್ನು ಡಿಸ್ಕ್ರಿಪ್ಷನನಲ್ಲಿ ಕೊಡಲಾಗಿದೆ, ಚೆಕ ಮಾಡಿಕೊಳ್ಳಿ.
ಗೆಳೆಯರೇ, ವಿಡಿಯೋ ಎಡಿಟಿಂಗನ್ನು ಕಲಿಯುವ ಆಸೆಯಿದ್ದರೆ ಫುಲ್ಲಿ ಪ್ರೊಫೇಷನಲ್ಲಾಗಿ ಹಾಗೂ ಕ್ರಿಯೆಟಿವ ಆಗಿ ಕಲಿಯಿರಿ. ಯಾವಾಗ ನಿಮ್ಮ ಎಡಿಟಿಂಗ್ ಆಡಿಯನ್ಸಗಳೊಂದಿಗೆ ಎಮೋಷನಲಿ ಕನೇಕ್ಟಾಗುತ್ತೋ ಆವಾಗ ಮಾತ್ರ ನಿಮಗೆ ಕೆಲಸ ಸಿಗುತ್ತದೆ. ಇಲ್ಲವಾದರೆ ಬರೀ ನೀವು ಮಷಿನ್ ಆಪರೇಟರ ಆಗಿ ಸ್ಟ್ರಗಲ ಮಾಡಬೇಕಾಗುತ್ತದೆ. ಅದಕ್ಕಾಗಿ ನಿಮ್ಮ ಮೇಲೆ ಇನ್ವೇಸ್ಟ ಮಾಡಿ. ಅದನ್ನು ಸರಿಯಾಗಿ ಕಲಿಯಿರಿ. ಕಲಿಯಲು ವಯಸ್ಸಿನ ಭೇದವಿಲ್ಲ, ಗಂಡು ಹೆಣ್ಣು ಭೇದವಿಲ್ಲ. ಯಾರು ಬೇಕಾದರೂ ವಿಡಿಯೋ ಎಡಿಟಿಂಗ್ ಕಲಿಯಬಹುದು. ಒಂದು ವೇಳೆ ನಿಮಗೆ ವಿಡಿಯೋ ಎಡಿಟಿಂಗನ್ನು ಪರಫೇಕ್ಟಾಗಿ ಕಲಿಯುವ ಆಸೆಯಿದ್ದರೆ ಡಿಸ್ಕ್ರಿಪ್ಷನನಲ್ಲಿ ಕೊಟ್ಟಿರೋ ಫಾರ್ಮನ್ನು ಫಿಲ್ ಮಾಡಿ, ನಿಮಗೆ ನಮ್ಮ ಕೋರ್ಸ ರಿಲಿಜಾದಾಗ ನೊಟಿಫಿಕೆಷನ ಬರುತ್ತದೆ.
ನಮ್ಮ ಕಂಪನಿಯಲ್ಲಿ ಟೊಟಲಾಗಿ ನಾಲ್ಕು ಜನ ವಿಡಿಯೋ ಎಡಿಟರಗಳು ಕೆಲಸ ಮಾಡುತ್ತಾರೆ. ಅವರಲ್ಲಿ ಒಬ್ಬರು ಬರೀ ಯುಟ್ಯೂಬ ವಿಡಿಯೋಗಳನ್ನು, ಎಜುಕೇಶನಲ ಕೋರ್ಸ ವಿಡಿಯೋಗಳನ್ನು ಎಡಿಟ ಮಾಡುತ್ತಾರೆ. ಮತ್ತೊಬ್ಬರು ಬರೀ ಮುಜಿಕ ವಿಡಿಯೊ ಹಾಗೂ ಶಾರ್ಟ ಫಿಲ್ಮಗಳನ್ನು ಎಡಿಟ ಮಾಡುತ್ತಾರೆ. ಇನ್ನೂ ಮಿಕ್ಕ ಇಬ್ಬರು ಆ್ಯಡ ಫಿಲ್ಮಗಳನ್ನು ಎಡಿಟ ಮಾಡುತ್ತಾರೆ. ಈ ನಾಲ್ವರು ಸೇರಿ ನಿಮಗೆ ವಿಡಿಯೋ ಎಡಿಟಿಂಗನ್ನು ಬೇಸಿಕನಿಂದ ಹಿಡಿದು ಪ್ರೊಫೆಷನಲ್ ಲೆವೆಲ ತನಕ ಕಲಿಸುತ್ತಾರೆ. ಕೊನೆಯಲ್ಲಿ ನಾನು ಈ ವಿಡಿಯೋ ಎಡಿಟಿಂಗ್ ಕಲಿತು ಬಿಜನೆಸ್ ಹೇಗೆ ಮಾಡುವುದು ಎಂಬುದನ್ನು ಹೇಳುವೆ. ಈ ಕೋರ್ಸ ಆನಲೈನ ಆಫಲೈನ ಎರಡರಲ್ಲೂ ಅವೇಲೆಬಲಾಗುತ್ತದೆ. ಅದಕ್ಕಾಗಿ ಫಾರ್ಮನ್ನು ಫಿಲಪ ಮಾಡಿ. ಕೋರ್ಸ್ ಸ್ಟಾರ್ಟಾದಾಗ ನಿಮಗೆ ನೋಟಿಫಿಕೇಶನ್ ಬರುತ್ತದೆ. All the Best and Thanks You….
Video Editing Course Notification Form : https://www.roaringcreations.com/video-editing-course-notification-form/