ಹಾಯ್ ಗೆಳೆಯರೇ, ನಾನು ನಿಮ್ಮ ಸತೀಶಕುಮಾರ. ಪ್ರತಿದಿನ ನಾನು ಏರಪೋರ್ಟ್ನಲ್ಲಿ, ಬಸ್ಸಲ್ಲಿ, ಮೆಟ್ರೊನಲ್ಲಿ ಇಲ್ಲ ಲೋಕಲ ಟ್ರೇನನಲ್ಲಿ ನೂರಾರು ಹೊಸಹೊಸ ಜನರನ್ನು ನೋಡುತ್ತೇನೆ. ಆದರೆ ಅವರಲ್ಲಿ ಹಾರ್ಡಲಿ ನಾಲ್ಕೈದು ಜನ ಮಾತ್ರ ಹ್ಯಾಪಿಯಾಗಿರುವಂತೆ ಕಾಣುತ್ತಾರೆ. ಮಿಕ್ಕವರೆಲ್ಲ ತೋರಿಕೆಗೆ ನಗುತ್ತಿರುತ್ತಾರೆ. ನೀವು ಕೂಡ ಅಂಥವರಲ್ಲಿ ಒಬ್ಬರಾಗಿದ್ದರೆ ನೀವು ಈ ವಿಡಿಯೋವನ್ನು ಕೊನೆತನಕ ಮಿಸ್ ಮಾಡದೇ ನೋಡಲೇಬೇಕು. ನೀವು ಮೊದಲು ರೂಟನ್ನು ಸರಿಪಡಿಸಿದರೆ ಸಾಕು ಫ್ರುಟ್ ತಾನಾಗಿಯೇ ಸರಿಹೋಗುತ್ತದೆ. ನಿಮಗೆ ಯಾವ ಕಾರಣಗಳಿಂದಾಗಿ ದು:ಖವಾಗುತ್ತಿದೆ ಎಂಬುದು ಗೊತ್ತಾದರೆ ನೀವು ಅವುಗಳನ್ನು ಸರಿಪಡಿಸಿಕೊಂಡು ನೆಮ್ಮದಿಯಾಗಿರಬಹುದು. ಓಕೆ ನಾನು ಗಮನಿಸಿದಂತೆ ಈ ಕಾರಣಗಳಿಂದಾಗಿ ಬಹಳಷ್ಟು ಜನರಿಗೆ ಪದೇಪದೇ ದು:ಖವಾಗ್ತಿದೆ.
Reason – 1 : Unwanted thinking about unwanted people : ಬೇಡದಿರುವ ವ್ಯಕ್ತಿಗಳ ಬಗ್ಗೆ ಬೇಡದ ವಿಷಯಗಳನ್ನು ಚಿಂತಿಸುವುದು.
ಬಹಳಷ್ಟು ಜನ ಈ ತಪ್ಪನ್ನು ಮಾಡಿ ಪದೇಪದೇ ದು:ಖಿತರಾಗುತ್ತಾರೆ. ತಮಗೆ ಸಂಬಂಧಪಡದ ವಿಷಯಗಳಲ್ಲಿ ಮೂಗು ತೂರಿಸಿ ಬೀದಿಯಲ್ಲಿನ ಮಾರಿಯನ್ನು ಮನೆಗೆ ಕರೆದುಕೊಂಡು ಬಂದು ತೊಂದರೆಗೆ ಈಡಾಗುತ್ತಾರೆ. ತಮಗೆ ಸಂಬಂಧಪಡದ ವ್ಯಕ್ತಿಗಳ ಬಗ್ಗೆ ಯೋಚಿಸಿ ಅನಾವಶ್ಯಕವಾಗಿ ತಮ್ಮ ಮಾನಸಿಕ ಶಾಂತಿಯನ್ನು ಹಾಳು ಮಾಡಿಕೊಳ್ಳುತ್ತಾರೆ. ಮೂರ್ಖ ಜನರೊಂದಿಗೆ ಪ್ರಯೋಜನವಿಲ್ಲದ ರಾಜಕೀಯ, ಧಾರ್ಮಿಕ ಹಾಗೂ ಸಿನಿಮಾ ಚರ್ಚೆಗಳನ್ನು ಮಾಡಿ ವೈರತ್ವವನ್ನು ಸಂಪಾದಿಸುತ್ತಾರೆ. ಸೋ ಗೆಳೆಯರೇ, ನೀವು ಈ ತಪ್ಪನ್ನು ಮಾಡುತ್ತಿದ್ದರೆ ಇವತ್ತೇ ಅದನ್ನು ಕಟ್ ಮಾಡಿ. ಅನಾವಶ್ಯಕ ವ್ಯಕ್ತಿಗಳ ಬಗ್ಗೆ, ವಿಷಯಗಳ ಬಗ್ಗೆ ಚಿಂತಿಸುವುದನ್ನು ಬಿಟ್ಟು ಬಿಡಿ, ಹ್ಯಾಪಿಯಾಗಿರಿ.
Reason – 2 : Lot of Unwanted Expectations : ಅನಾವಶ್ಯಕ ನಿರೀಕ್ಷೆಗಳು
ಬಹಳಷ್ಟು ಜನ ಯಾವಾಗಲೂ ಬೇರೆಯವರಿಂದ ಏನಾದರೂ ಒಂದನ್ನು ಬಯಸುತ್ತಲೇ ಇರುತ್ತಾರೆ. ಅದಕ್ಕಾಗಿಯೇ ಅವರು ಯಾವಾಗಲೂ ದು:ಖಿಯಾಗಿರುತ್ತಾರೆ. ಉದಾಹರಣೆಗೆ : ಫೇಸ್ಬುಕಲ್ಲಿ ನನ್ನ ಪೋಸ್ಟಗೆ ಜಾಸ್ತಿ ಲೈಕಗಳು ಬರಬೇಕು, ಜನ ನನಗೆ ಜೈಕಾರ ಹಾಕಬೇಕು, ನನ್ನ ಗೆಳೆಯರು ನನಗೆ ಆವಾಗಾವಾಗ ಟ್ರೀಟ ಕೊಡಬೇಕು, ಪಾರ್ಟಿ ಮಾಡಿಸಬೇಕು, ಆಫೀಸನಲ್ಲಿ ಬಾಸ್ ನನಗೆ ಜಾಸ್ತಿ ಸಂಬಳ ಕೊಡಬೇಕು, ನನ್ನ ಬರ್ಥಡೇಗೆ ಎಲ್ಲರೂ ಕಾಸ್ಟ್ಲಿ ಗಿಫ್ಟಗಳನ್ನು ಕೊಡಬೇಕು, ನನಗೆ ರಾತ್ರೋರಾತ್ರಿ ಸಕ್ಸೆಸ್ ಸಿಗಬೇಕು, ನನಗೆ ಬಂಪರ ಲಾಟರಿ ಹೊಡೀಬೇಕು ಇಲ್ಲ ಚಿನ್ನದ ಖಜಾನೆ ಸಿಗಬೇಕು, ಎಲ್ಲರೂ ನನಗೆ ಸಿಕ್ಕಾಪಟ್ಟೆ ಗೌರವ ಕೊಡಬೇಕು, ಎಲ್ಲವೂ ನಾನೆಂದುಕೊಂಡಂತೆಯೇ ಆಗಬೇಕು ಎಂದೆಲ್ಲ ಬಯಸುತ್ತಿರುತ್ತಾರೆ. ಅವರ ಬಯಕೆಗಳಲ್ಲಿ ನೀತಿ ನಿಯತ್ತು ಇರುವುದಿಲ್ಲ. ಅದಕ್ಕಾಗಿ ಅವರ ಬಯಕೆಗಳೇ ಅವರಿಗೆ ಸಾಕಷ್ಟು ದು:ಖವನ್ನು ತಂದು ಕೊಡುತ್ತವೆ. ಅದಕ್ಕಾಗಿ ಗೆಳೆಯರೇ, ನೀವು ಸದಾಕಾಲ ಸಂತೋಷವಾಗಿರಬೇಕೆಂದರೆ ಯಾರಿಂದಲೂ ಏನನ್ನು ಬಯಸಬೇಡಿ ಮತ್ತು ಯಾರ ಮೇಲೂ ಅತಿಯಾದ ನೀರಿಕ್ಷೆಗಳನ್ನು ಇಟ್ಟುಕೊಳ್ಳಬೇಡಿ.
Reason – 3 : Thinking what others’ think about me – ಬೇರೆಯವರು ನನ್ನ ಬಗ್ಗೆ ಏನೆಂದುಕೊಳ್ಳುತ್ತಾರೆ ಎಂದು ಯೋಚಿಸುವುದು.
ಬಹಳಷ್ಟು ಜನ ಬೇರೆಯವರು ನಮ್ಮ ಬಗ್ಗೆ ಏನೆಂದುಕೊಳ್ಳುತ್ತಾರೆ ಎಂದು ಯೋಚನೆ ಮಾಡಿಮಾಡಿ ಭಯದಲ್ಲೇ ಬದುಕುತ್ತಾರೆ ಮತ್ತು ಡಿಪ್ರೆಶನಗೆ ತುತ್ತಾಗುತ್ತಾರೆ. ಜನ ನೀವು ಏನೇ ಮಾಡಿದ್ರು ನಿಮ್ಮ ಬಗ್ಗೆ ಮಾತನಾಡುತ್ತಾರೆ. ಅದಕ್ಕಾಗಿ ಅವರ ಬಗ್ಗೆ ಜಾಸ್ತಿ ತಲೆಕೆಡಿಸಿಕೊಳ್ಳುವ ಅವಶ್ಯಕತೆಯಿಲ್ಲ. ಬೀದಿಯಲ್ಲಿ ಬೊಗಳೊ ಪ್ರತಿ ನಾಯಿಗೆ ಕಲ್ಲೆಸೆಯುತ್ತಾ ನಿಂತರೆ ನೀವು ನಿಮ್ಮ ಗುರಿ ತಲುಪಲು ಸಾಧ್ಯವಿಲ್ಲ. ಜನರ ಅಭಿಪ್ರಾಯಗಳಿಂದ ನಿಮಗೆ ಲಾಭವು ಇಲ್ಲ, ನಷ್ಟವೂ ಇಲ್ಲ. ಜನ ನಿಮ್ಮ ಬಗ್ಗೆ ಒಳ್ಳೆಯದನ್ನು ಮಾತನಾಡಿದರೆ ನಿಮ್ಮ ಬ್ಯಾಂಕ ಅಕೌಂಟನಲ್ಲಿ ದುಡ್ಡೇನು ಬಂದು ಬೀಳುವುದಿಲ್ಲ, ಇದೇ ಜನ ನಿಮ್ಮ ಬಗ್ಗೆ ಕೆಟ್ಟದಾಗಿ ಮಾತನಾಡಿದ್ರೆ ನಿಮ್ಮ ಬ್ಯಾಂಕ ಅಕೌಂಟನಿಂದ ದುಡ್ಡೇನು ಡಿಡಕ್ಟ ಆಗುವುದಿಲ್ಲ. ಹೀಗಿರುವಾಗ ಯಾಕ ಸುಮ್ಮನೆ ಜನರ ಅಭಿಪ್ರಾಯಗಳಿಗೆ ಅಷ್ಟೊಂದು ಇಂಪಾರಟನ್ಸ ಕೊಟ್ಟು ನೋವನ್ನು ಅನುಭವಿಸುತ್ತಿರಾ? ಜನರ ಆಸೆಗಳಂತೆ ಬದುಕಲು ಹೋದ್ರೆ ನೀವು ಸ್ವರ್ಗದಲ್ಲೂ ಸುಖವಾಗಿರಲ್ಲ. ಅದಕ್ಕಾಗಿ ಜನ ನಿಮ್ಮ ಬಗ್ಗೆ ಏನೆಂದುಕೊಳ್ಳುತ್ತಾರೆ ಎಂಬ ಚಿಂತೆ ಬಿಡಿ, ಹ್ಯಾಪಿಯಾಗಿರಿ.
Reason – 4 : Giving your Remote of Happiness in others’ hand : ತಮ್ಮ ಸಂತೋಷದ ಕೀಲಿ ಕೈಯನ್ನು ಬೇರೆಯವರ ಕೈಗೆ ಕೋಡೊದು.
ಬಹಳಷ್ಟು ಜನ ತಮ್ಮ ಸಂತೋಷದ ಕೀಲಿ ಕೈಯನ್ನು ಬೇರೆಯವರ ಕೈಗೆ ಕೊಟ್ಟಿದ್ದಾರೆ. ತಮ್ಮನ್ನು ಕಂಟ್ರೋಲ್ ಮಾಡುವ ರಿಮೋಟನ್ನು ಬೇರೆಯವರಿಗೆ ಕೊಟ್ಟಿದ್ದಾರೆ. ಅದಕ್ಕಾಗಿಯೇ ಅವರು ದು:ಖಿಯಾಗಿದ್ದಾರೆ. ಅವರು ತಮ್ಮ ಸಂತೋಷಕ್ಕಾಗಿ ಬೇರೆ ವಸ್ತು ಮತ್ತು ವ್ಯಕ್ತಿಗಳ ಮೇಲೆ ಡಿಪೆಂಡಾಗಿದ್ದಾರೆ. ಅವರಿಗೆ ಅಸಲಿ ಖುಷಿ ಎಲ್ಲಿದೆ ಎಂಬುದೇ ಗೊತ್ತಿಲ್ಲ. ಅವರು ಕಾರು, ಬಂಗಲೆ, ಬೈಕ, ಬಂಗಾರ, ಹಣ, ಆಸ್ತಿ, ಅಂತಸ್ತು, ಸೆ** ಇತ್ಯಾದಿಗಳಲ್ಲಿ ಖುಷಿಯಿದೆ ಎಂದುಕೊಂಡು ಒದ್ದಾಡುತ್ತಿದ್ದಾರೆ. ಆದರೆ ನಿಜವಾದ ಖುಷಿ ಸೆಲ್ಫ ಸ್ಯಾಟಿಸಫ್ಯಾಕ್ಷನನಲ್ಲಿದೆ, ಬೇಡದಿರುವ ವಸ್ತುಗಳನ್ನು ಸ್ಯಾಕ್ರಿಫೈಸ ಮಾಡುವುದರಲ್ಲಿದೆ ಎಂಬುದು ಅವರಿಗೆ ಗೊತ್ತಿಲ್ಲ. ಸೋ ಗೆಳೆಯರೇ, ನೀವು ಸದಾಕಾಲ ಹ್ಯಾಪಿಯಾಗಿರಬೇಕೆಂದರೆ ನಿಮ್ಮ ಸಂತೋಷದ ಕೀಲಿ ಕೈಯನ್ನು ನಿಮ್ಮ ಬಳಿಯೇ ಇಟ್ಟುಕೊಳ್ಳಿ. ಬೇರೆ ಯಾರನ್ನೋ ಪ್ರೀತಿಸುವ ಮೊದಲು ನಿಮ್ಮನ್ನು ಪ್ರೀತಿಸಿ. ಇರೋದನ್ನು ಮೊದಲು ಎಂಜಾಯ ಮಾಡಿ. ಇರೋದಕ್ಕೆ ಮೊದಲು ಗೌರವ ಕೊಡಿ. ಇದಕ್ಕಿಂತಲೂ ಹೆಚ್ಚಿನದ್ದು ಹಂತಹಂತವಾಗಿ ಬರುತ್ತದೆ.
Reason – 5 : Being too good for others – ಬೇರೆಯವರಿಗೆ ಬಹಳಷ್ಟು ಒಳ್ಳೆಯವರಾಗಿರುವುದು.
ಗೆಳೆಯರೇ, ಈ ಜಗತ್ತು ನಿಮ್ಮಷ್ಟು ಒಳ್ಳೆಯದಾಗಿಲ್ಲ ಮತ್ತು ನಿಮ್ಮಷ್ಟು ಸುಂದರವಾಗಿಲ್ಲ. ಜನ ಎಲ್ಲರನ್ನೂ ಮೆಡಿಸಿನ್ ತರಹ ಬಳಸುತ್ತಾರೆ. ಕಷ್ಟ ಬಂದಾಗ ಬೇಕೇಬೇಕು ಅಂತಾರೆ ಆದ್ರೆ ಸುಖ ಬಂದಾಗ ಬೇಡ ಅಂತಾ ಬೀಸಾಕುತ್ತಾರೆ. ನೀವು ಅವಶ್ಯಕತೆಗಿಂತ ಅಧಿಕವಾಗಿ ಒಳ್ಳೆಯವರಾದ್ರೆ ಜನ ನಿಮ್ಮನ್ನು ಮಿಸಯುಜ ಮಾಡಿಕೊಳ್ತಾರೆ. ನಿಮ್ಮನ್ನು ಚೆನ್ನಾಗಿ ಬಳಸಿಕೊಂಡು ಬೀದಿಗೆ ಬೀಸಾಕುತ್ತಾರೆ. ಆವಾಗ ನಿಮಗೆ ಪದೇಪದೇ ದು:ಖವಾಗುತ್ತದೆ. ಅದಕ್ಕಾಗಿ ಗೆಳೆಯರೇ, ನೀವು ಹ್ಯಾಪಿಯಾಗಿರಬೇಕೇಂದರೆ ಕೆಲವೊಂದಿಷ್ಟು ಜನರೊಂದಿಗೆ ಬಹಳಷ್ಟು ಒಳ್ಳೆಯವರಾಗಿರಬೇಡಿ, ಅವಶ್ಯಕತೆಗಿಂತ ಅಧಿಕವಾಗಿ ಯಾರಿಗೂ ಅವೇಲೇಬಲ ಆಗಬೇಡಿ. ಅವಶ್ಯಕತೆ ಇದ್ದಷ್ಟೇ ಮಾತನಾಡಿ ಮತ್ತು ಅವಶ್ಯಕತೆ ಇದ್ದಷ್ಟೇ ಸಹಾಯ ಮಾಡಿ. ಸೋ ನೈಸ ಪರ್ಸನನಾಗಲು ಹೋಗಿ ಸ್ಯಾಡ್ ಪರ್ಸನ ಆಗಬೇಡಿ.
Reason -6 : Loneliness – ಒಂಟಿತನ
ಸದ್ಯಕ್ಕೆ ಕ್ವಾಲಿಟಿ ರಿಲೇಷನಶೀಪಗಳ ಕೊರತೆಯಿಂದಾಗಿ ಬಹಳಷ್ಟು ಜನ ಒಂಟಿತನದಿಂದ ನರಳುತ್ತಿದ್ದಾರೆ. ಒಂಟಿಯಾಗಿರುವ ಮನುಷ್ಯನ ಮನಸ್ಸು ದೆವ್ವದ ಮನೆಯಿದ್ದಂತೆ. ಒಂಟಿಯಾಗಿದ್ದಾಗ ಅವನ ಮನಸ್ಸಲ್ಲಿ ಏನೇನೋ ಕೆಟ್ಟ ವಿಚಾರಗಳು ಬರುತ್ತವೆ. ಹಳೆಯ ಕಹಿ ನೆನಪುಗಳು ಮತ್ತೆ ನೆನಪಿಗೆ ಬಂದು ಕಾಡುತ್ತವೆ. ಅದಕ್ಕಾಗಿ ಒಂಟಿಯಾಗಿರುವವರು ಏನೇನೋ ಯೋಚಿಸಿ ಪದೇಪದೇ ದು:ಖವನ್ನು ಅನುಭವಿಸುತ್ತಾರೆ. ಸೋ ನೀವು ಒಂಟಿಯಾಗಿದ್ದರೆ ಮೊದಲು ಒಂಟಿತನದಿಂದ ಹೊರಬನ್ನಿ ಮತ್ತು ಹ್ಯಾಪಿಯಾಗಿರಿ.
Reason – 7 : Comparing Yourself with Others – ನಿಮ್ಮನ್ನು ಬೇರೆಯವರೊಂದಿಗೆ ಹೋಲಿಕೆ ಮಾಡಿಕೊಳ್ಳುವುದು.
ಬಹಳಷ್ಟು ಜನ ಅನಾವಶ್ಯಕವಾಗಿ ತಮ್ಮನ್ನು ಬೇರೆಯವರೊಂದಿಗೆ ಕಂಪೇರ ಮಾಡಿಕೊಂಡು ಕೊರಗುತ್ತಾರೆ. ಬೇರೆಯವರೊಂದಿಗೆ ಕಂಪೇರ್ ಮಾಡಿಕೊಂಡು ನಾನು ಸುಂದರವಾಗಿಲ್ಲ, ಕಪ್ಪಗಿದೀನಿ, ದಪ್ಪಗೀದಿನಿ ಅಂತೆಲ್ಲ ಕೊರಗುತ್ತಾರೆ. ನಿಜವಾದ ಬ್ಯೂಟಿ ಮನಸ್ಸಲ್ಲಿದೆ, ನಾವು ಮಾಡುವ ಕೆಲಸದಲ್ಲಿದೆ ಎಂಬುದು ಅವರಿಗೆ ಗೊತ್ತಾಗೋದೆ ಇಲ್ಲ. ಇನ್ನು ಕೆಲವೊಂದಿಷ್ಟು ಜನ ನನ್ನತ್ರ ಕಾರಿಲ್ಲ, ಸಿಕ್ಕಾಪಟ್ಟೆ ಹಣವಿಲ್ಲ, ದೊಡ್ಡ ಮನೆಯಿಲ್ಲ, ಆದರೆ ಅವನತ್ರ ಎಲ್ಲ ಇದೆ ಅಂತಾ ಕೊರಗುತ್ತಾರೆ. ಕಾರಿಲ್ಲದಿದ್ದರೆ, ಮನೆಯಿಲ್ಲದಿದ್ದರೆ, ಸಾಕಷ್ಟು ದುಡ್ಡಿಲ್ಲದಿದ್ದರೆ ನೋ ಪ್ರಾಬ್ಲಮ್. ಕೆಲಸ ಮಾಡಿ, ಕಷ್ಟ ಪಡಿ. ಕಾರ ತಗೋಳಿ, ಮನೆ ತಗೋಳಿ. ಅದರಲ್ಲಿ ಕೊರಗೋವಂಥದ್ದು ಏನಿದೆ? Who is stopping you? ಗೆಳೆಯರೇ, ನೀವು ಬೇರೆಯವರೊಂದಿಗೆ ನಿಮ್ಮನ್ನು ಕಂಪೇರ್ ಮಾಡಿಕೊಂಡಷ್ಟು ನಿಮಗೆ ದು:ಖವಾಗುತ್ತದೆ. ಅದಕ್ಕಾಗಿ ನಿಮ್ಮನ್ನು ಬೇರೆ ಯಾರೊಂದಿಗೂ ಕಂಪೇರ್ ಮಾಡಿಕೊಳ್ಳಬೇಡಿ. ನೀವು ಯುನಿಕ್ ಎಂಬುದನ್ನು ನೆನಪಲ್ಲಿಟ್ಟುಕೊಳ್ಳಿ ಮತ್ತು ಹ್ಯಾಪಿಯಾಗಿರಿ.
Reason – 8 : Searching for perfection – ಪರಿಪೂರ್ಣತೆಯನ್ನು ಹುಡುಕುವುದು.
ಕೆಲವೊಂದಿಷ್ಟು ಜನ ಎಲ್ಲದರಲ್ಲಿಯೂ ಪರಫೇಕ್ಷನನ್ನು ಹುಡುಕುತ್ತಾರೆ ಮತ್ತು ವಿನಾಕಾರಣ ನೋವನ್ನು ಅನುಭವಿಸುತ್ತಾರೆ. ಇನ್ನು ಕೆಲವೊಂದಿಷ್ಟು ಜನ ಪರಫೆಕ್ಟ ಲವರ್ ಅಥವಾ ಪರಫೆಕ್ಟ ಲೈಫ ಪಾರ್ಟನರ ಹುಡುಕಾಟದಲ್ಲಿ ಮುದುಕರಾಗುತ್ತಾರೆ. ಸೋ ಗೆಳೆಯರೇ, ನೀವು ಹ್ಯಾಪಿಯಾಗಿರಬೇಕೆಂದರೆ ಎಲ್ಲದರಲ್ಲೂ ಪರಫೆಕ್ಷನನ್ನು ಹುಡುಕುವುದನ್ನು ಬಿಟ್ಟು ಬಿಡಿ. ಏಕೆಂದರೆ 100% ಪರಫೆಕ್ಟ ವ್ಯಕ್ತಿ ಅಥವಾ ಪರಫೆಕ್ಟ ವಸ್ತು ಇರಲು ಸಾಧ್ಯವಿಲ್ಲ.
Reason – 9 : Bad Addictions – ಕೆಟ್ಟ ಚಟಗಳು :
ಬಹಳಷ್ಟು ಜನ ಸೋಸಿಯಲ್ ಮೀಡಿಯಾಗಳಿಗೆ, ದುಶ್ಚಟಗಳಿಗೆ, ದುಷ್ಟ ವ್ಯಕ್ತಿಗಳೊಂದಿಗೆ ಅಂಟಿಕೊಂಡು ಅದರಿಂದ ಹೊರಬರಲಾಗದೆ ನರಳುತ್ತಿದ್ದಾರೆ. ತಮ್ಮ ಆರೋಗ್ಯವನ್ನು ಹದಗೆಡಿಸಿಕೊಂಡು ನರಳುತ್ತಿದ್ದಾರೆ. ಇನ್ನು ಕೆಲವೊಂದಿಷ್ಟು ಜನ ಇಷ್ಟವಿಲ್ಲದ ವ್ಯಕ್ತಿಗಳೊಂದಿಗೆ ಇಷ್ಟವಿಲ್ಲದ ಮದುವೆ ಮಾಡಿಕೊಂಡು ಇಲ್ಲವೇ ಬ್ಯಾಡ ರಿಲೇಷನಗೆ ಸಿಲುಕಿ ಕಣ್ಣೀರಲ್ಲಿ ಕೈ ತೊಳೆಯುತ್ತಿದ್ದಾರೆ. ಸೋ ಗೆಳೆಯರೇ, ನಿಮಗೆ ಇಂಥ ಸ್ಥಿತಿ ಬರಬಾರದೆಂದರೆ ದುಶ್ಚಟಗಳಿಂದ ದೂರವಿರಿ. ಇಷ್ಟವಿಲ್ಲದ ಸಂಬಂಧಗಳಲ್ಲಿ ಸಿಲುಕಬೇಡಿ.
ಓಕೆ ಗೆಳೆಯರೇ, ಇವಿಷ್ಟು ಕಾರಣಗಳಿಂದಾಗಿ ನಿಮಗೆ ಪದೇಪದೇ ದು:ಖವಾಗುತ್ತಿದೆ. ಇವುಗಳನ್ನು ಅರ್ಥಮಾಡಿಕೊಳ್ಳಿ, ಇವುಗಳನ್ನು ಅವೈಡ ಮಾಡಿ ಮತ್ತು ಹ್ಯಾಪಿಯಾಗಿರಿ. ನೀವು ಸದಾಕಾಲ ಸಂತೋಷವಾಗಿರಬೇಕೆಂದರೆ ನಿಮಗೆ ಯಾವ ಕೆಲಸ ಇಷ್ಟಾನೋ ಅದನ್ನೇ ಮಾಡಿ. Just do what you love. All the best and Thanks you…
ಈ ಅಂಕಣ (Article) ನಿಮಗೆ ಇಷ್ಟವಾಗಿದ್ದರೆ ನಿಮ್ಮೆಲ್ಲ ಗೆಳೆಯರೊಡನೆ ಮತ್ತು ನೀವಿರುವ ಎಲ್ಲ ಕನ್ನಡ ಫೇಸ್ಬುಕ್ ಗ್ರೂಪಗಳಲ್ಲಿ ಇದನ್ನು ತಪ್ಪದೇ ಶೇರ್ (Share) ಮಾಡಿ. ಜೊತೆಗೆ ಪ್ರತಿದಿನ ಹೊಸಹೊಸ ಅಂಕಣಗಳನ್ನು, ಪ್ರೇಮಕಥೆಗಳನ್ನು, ಕವನಗಳನ್ನು ಉಚಿತವಾಗಿ ಓದಲು ತಪ್ಪದೆ ನನ್ನ ಫೇಸ್ಬುಕ್ ಪೇಜನ್ನು https://www.facebook.com/Directorsatishkumar/ (Director Satishkumar) ಲೈಕ್ ಮಾಡಿ.
Follow Me On : Facebook | Instagram | YouTube | Twitter
My Books : Kannada Books | Hindi Books | English Books
⚠ STRICT WARNING ⚠Content Rights :
ಈ ಅಂಕಣದ ಎಲ್ಲ ಹಕ್ಕುಗಳನ್ನು ಡೈರೆಕ್ಟರ್ ಸತೀಶಕುಮಾರ ಹಾಗೂ ರೋರಿಂಗ್ ಕ್ರಿಯೇಷನ್ಸ್ ಪ್ರೈವೇಟ್ ಲಿಮಿಟೆಡ್ ಕಂಪನಿ ವತಿಯಿಂದ ಸಂಪೂರ್ಣವಾಗಿ ಕಾಯ್ದಿರಿಸಲಾಗಿದೆ. ಡೈರೆಕ್ಟರ್ ಸತೀಶಕುಮಾರ ಅವರ ಅನುಮತಿಯಿಲ್ಲದೆ ಈ ಅಂಕಣದ ಯಾವುದೇ ಭಾಗವನ್ನು ಕಾಪಿ ಮಾಡುವಂತಿಲ್ಲ, ಬೇರೆ ಭಾಷೆಗಳಿಗೆ ಅನುವಾದಿಸುವಂತಿಲ್ಲ ಮತ್ತು ಇದನ್ನು ಬೇರೆಡೆಗೆ ಪ್ರಕಟಿಸುವಂತಿಲ್ಲ. ಯಾವುದೇ ಸಾಮಾಜಿಕ ಜಾಲತಾಣಗಳಲ್ಲಿ ಪೋಸ್ಟ್ ಮಾಡುವಂತಿಲ್ಲ. ಮುದ್ರಣ ಮಾಡುವಂತಿಲ್ಲ. ಒಂದು ವೇಳೆ ಯಾರಾದರೂ ಕಾಪಿ ರೈಟ್ಸ್ ನಿಯಮಗಳನ್ನು ಉಲ್ಲಂಘಿಸಿದರೆ ಅವರ ಮೇಲೆ ಸೂಕ್ತ ಕಾನೂನು ಕ್ರಮ ಕೈಗೊಳ್ಳಲಾಗುವುದು ಹಾಗೂ ಆಗಿರುವ ನಷ್ಟವನ್ನು ಅವರಿಂದಲೇ ವಸೂಲಿ ಮಾಡಲಾಗುವುದು.
All Rights of this article are fully reserved by Director Satishkumar and Roaring Creations Private Limited India. No part of this article can be copied, translated or re published anywhere without the written permission of Director Satishkumar. If such violation of copy rights found to us, then we legally punish to copy cats and recover our loss by them only.
© Director Satishkumar and Roaring Creations Private Limited, India.