ಬಿಜನೆಸ್ ಲೆಸನ್ – 00
ಹಾಯ್ ಗೆಳೆಯರೇ, ನಮಸ್ಕಾರ. ನಾನು ನಿಮ್ಮ ಸತೀಶಕುಮಾರ. ನಾನು ಕೆಲವು ದಿನಗಳ ಹಿಂದೆ ಬಿಜನೆಸ್ ಲೆಸ್ಸನಗಳ ಸೀರಿಜ ಮಾಡುವೆ ಎಂದೇಳಿದ್ದೆ. ಆದರೆ ಅದು ಕಾರಣಾಂತರಗಳಿಂದ ಲೇಟಾಯ್ತು, ಅದಕ್ಕಾಗಿ ಕ್ಷಮೆಯಿರಲಿ. ಇವತ್ತಿನಿಂದ ರೆಗ್ಯೂಲರಾಗಿ ಒಂದು ತಿಂಗಳ ತನಕ ಬಿಜನೆಸ್ ಲೆಸನಗಳ ಎಪಿಸೋಡಗಳು ಬರುತ್ತವೆ. ನಾನು ನನ್ನ 3 ವರ್ಷದ ಬಿಜನೆಸ್ ಎಕ್ಸಪಿರಿಯನ್ಸನ್ನು ಈ ಎಪಿಸೋಡಗಳಲ್ಲಿ ಶೇರ್ ಮಾಡುತ್ತಿರುವೆ. ಅದಕ್ಕಾಗಿ ಇವೆಲ್ಲ ಎಪಿಸೋಡಗಳನ್ನು ಮಿಸ್ ಮಾಡದೇ ನೋಡಿ. ಕೊನೆಯಲ್ಲಿ ಒಂದು ಅನೌನ್ಸಮೆಂಟ ಕೂಡ ಇದೆ. ಇವತ್ತಿನ ಬಿಜನೆಸ್ ಲೆಸನನಲ್ಲಿ “ನಾನೇಕೆ ಗವರ್ನಮೆಂಟ ಜಾಬ್ ಬಿಟ್ಟು ಬಿಜನೆಸ್ ಸ್ಟಾರ್ಟ ಮಾಡಿದೆ?” ಎಂಬುದನ್ನು ನೋಡೋಣಾ.
ನಾನು ಬಿಜನೆಸ್ ಸ್ಟಾರ್ಟ ಮಾಡಿದಾಗ ನನ್ನ ಕ್ಲಾಸಮೆಟ್ಸಗಳು, ಲೆಕ್ಚರರಗಳು, ಹಿತಶತ್ರುಗಳು ಅಂದರೆ ಸಂಬಂಧಿಕರೆಲ್ಲ ನನಗೆ “ನೀನೇಕೆ ಸಿಕ್ಕಿರೋ ಗವರ್ನಮೆಂಟ ಜಾಬನ್ನ ಬಿಟ್ಟು ಬಿಜನೆಸ್ ಸ್ಟಾರ್ಟ ಮಾಡಿದೆ? ಇದು ನಿನಗೆ ಬೇಕಿತ್ತಾ? ಸುಮ್ನೆ ಜಾಬ್ ಮಾಡಿಕೊಂಡು ಬಿದ್ದಿರೋದ ಬಿಟ್ಟು ಬಿಜನೆಸ್ ಯಾಕ ಬೇಕಿತ್ತು? ಒಂದಲ್ಲ ಒಂದಿನ ಬೀದಿಗೆ ಬರ್ತಿಯಾ…” ಎಂದೆಲ್ಲ ಹೇಳ್ತಾ ಇದ್ರು. ಆದರೆ ಈಗ ಅವರಿಗೆ ನನ್ನ ಬಗ್ಗೆ ಮಾತನಾಡುವಷ್ಟು ಗಟ್ಸ ಇಲ್ಲ. ಏಕೆಂದರೆ ನಾನೀಗ ಅವರಿಗಿಂತಲೂ ಮುಂದೆ ಬಂದಿದೀನಿ.
ನಾನು ಗವರ್ನಮೆಂಟ ಜಾಬ್ ಬಿಟ್ಟು ಬಿಜನೆಸ್ ಸ್ಟಾರ್ಟ ಮಾಡಲು 4 ಕಾರಣಗಳಿವೆ.
1) ದುಡ್ಡಿನ ಕೊರತೆ ಮತ್ತು ಅವಮಾನ : ನನಗೆ ಚಿಕ್ಕ ವಯಸ್ಸಿನಿಂದಲೂ ಚೆನ್ನಾಗಿ ಓದಬೇಕು, ಚೆನ್ನಾಗಿ ಸೆಟ್ಲಾಗಬೇಕು ಎಂಬಾಸೆಯಿತ್ತು. ಅದಕ್ಕಾಗಿ ನಾನು ಚೆನ್ನಾಗಿ ಓದ್ತಾಯಿದ್ದೆ. ಆದರೆ ದುಡ್ಡಿನ ಕೊರತೆ ನನ್ನ ಪ್ರತಿಯೊಂದು ಕನಸಿಗೂ ತಣ್ಣೀರನ್ನು ಎರಚುತ್ತಿತ್ತು. ಪ್ರತಿವರ್ಷ ಬುಕ್ಸ್, ಸ್ಕೂಲ ಬ್ಯಾಗ ಮತ್ತು ಹೊಸ ಬಟ್ಟೆ ವಿಚಾರದಲ್ಲಂತು ನನ್ನ ಮರ್ಯಾದೆ ಮಣ್ಣು ಪಾಲಾಗುತ್ತಿತ್ತು. ದುಡ್ಡಿಲ್ಲ ಎಂಬ ಕಾರಣಕ್ಕೆ ನನಗೆ ಪ್ರತಿಸಲ ನೋವು, ನಿರಾಸೆ, ಅವಮಾನವಾಗುತ್ತಿತ್ತು. ಅದಕ್ಕಾಗಿ ನಾನು ಫೈನಾನ್ಸಿಯಲ್ ಫ್ರಿಡಂನ್ನು ಸಾಧಿಸಲು ಬಿಜನೆಸ್ ಫಿಲ್ಡಿಗೆ ಬಂದೆ. ಭಾರತದಲ್ಲಿ ಮಿಡಲ್ ಕ್ಲಾಸ್ ಜನರೊಂದಿಗೆ ಹೆಚ್ಚಿಗೆ ಅನ್ಯಾಯವಾಗುತ್ತಿದೆ. ಕೆಲವೊಂದಿಷ್ಟು ಶಕ್ತಿಗಳು ಯಾವಾಗಲೂ ನಮ್ಮನ್ನು ತುಳಿಯಲು ಸಂಚು ರೂಪಿಸುತ್ತವೆ. ನನ್ನನ್ನು ಯಾರು ತುಳಿಯಬಾರದೆಂದರೆ ನಾನು ಆರ್ಥಿಕವಾಗಿ ಸಬಲನಾಗಬೇಕಿತ್ತು. ಅದಕ್ಕಾಗಿ ನನಗೆ ಬಿಜನೆಸ್ ಬೆಸ್ಟ್ ಆಪ್ಷನ್ ಆಗಿತ್ತು. ದುಡ್ಡಿನ ಕೊರತೆ ಮತ್ತು ಹೆಚ್ಚಿನ ಮಟ್ಟದ ದುಡ್ಡಿನ ಅವಶ್ಯಕತೆಗಳಿಂದಾಗಿ ನಾನು ಬಿಜನೆಸ್ ಫಿಲ್ಡಿಗೆ ಬರಲೇಬೇಕಾಯಿತು. ಬರೀ ಗವರ್ನಮೆಂಟ ಜಾಬ್ ಮಾಡುವುದರಿಂದ ನನ್ನ ದುಡ್ಡಿನ ಅವಶ್ಯಕತೆ ಬಗೆಹರಿಯಲು ಸಾಧ್ಯವಿರಲಿಲ್ಲ. ಅದಕ್ಕಾಗಿ ನಾನು ಸಿಕ್ಕಿರೋ ಗವರ್ನಮೆಂಟ ಜಾಬನ್ನು ರಿಜೆಕ್ಟ ಮಾಡಿ ಬಿಜನೆಸ್ ಸ್ಟಾರ್ಟ ಮಾಡಿದೆ. ಜಾಬ್ ಮಾಡುವುದರಿಂದ ನಾನು ಮಾತ್ರ ಬದುಕಬಲ್ಲೆ. ಆದರೆ ಬಿಜನೆಸ್ ಮಾಡಿದರೆ ಬಹಳಷ್ಟು ಜನರನ್ನು ಬದುಕಿಸಬಹುದು ಎಂಬುದು ನನ್ನ ಉದ್ದೇಶವಾಗಿತ್ತು.
2) ನಾನು ಬಿಜನೆಸ್ ಸ್ಟಾರ್ಟ ಮಾಡಲು ಎರಡನೇ ಕಾರಣ ಏನಪ್ಪ ಅಂದ್ರೆ ನನ್ನತ್ರ ಕಳೆದುಕೊಳ್ಳಲು ಏನು ಇರಲಿಲ್ಲ. I have nothing to lose. ನಾನು ಸೆಕೆಂಡ ಪಿಯುಸಿಯಲ್ಲಿರುವ ನನ್ನ ಜೀವನದಲ್ಲಿ ಒಂದು ಅತಿದೊಡ್ಡ ಬ್ಯಾಡ ಇನ್ಸಿಡೆಂಟಾಯಿತು. ನಾನು ಇದರಿಂದ ಎಲ್ಲವನ್ನು ಕಳೆದುಕೊಂಡೆ. ನಾನು ಬ000ದುಕ್ಕಿದ್ದು ಸತ್ತಂತಾದೆ. ನಂತರ ನಾನು ನನ್ನ ಡಿಗ್ರಿ ಕಂಪ್ಲಿಟ ಮಾಡಿದ ನಂತರ ಒಂದು ದೊಡ್ಡ ಆ್ಯಕ್ಸಿಡೆಂಟಾಯಿತು. ನಾನು ನಿಜವಾಗಿಯೂ ಸತ್ತು ಬದುಕಿದೆ. ಈ ಎರಡು ಕೆಟ್ಟ ಘಟನೆಗಳಿಂದಾಗಿ ನನಗೆ ನನ್ನ ನಿಜವಾದ ಶಕ್ತಿ ಸಾಮರ್ಥ್ಯ, ನನ್ನ ಟ್ಯಾಲೆಂಟ, ನನ್ನ ನಿಜವಾದ ಗೆಳೆಯರು, ನನ್ನ ನಿಜವಾದ ಗುರುಗಳು ಯಾರು ಎಂದೆಲ್ಲ ಚೆನ್ನಾಗಿ ಗೊತ್ತಾಯಿತು. ನನಗೆ ನನ್ಮೇಲೆ ಕಾನ್ಫಿಡೆನ್ಸ ಮೂಡಿತು. ನಾನು ಧೈರ್ಯವಾಗಿ ಬಿಜನೆಸ್ ಫಿಲ್ಡಿಗೆ ಬಂದೆ. ಏಕೆಂದರೆ ನನಗೆ ಏನನ್ನೂ ಕಳೆದುಕೊಳ್ಳುವ ಭಯವಿರಲಿಲ್ಲ. ಏಕೆಂದರೆ ನಾನು ಈಗಾಗಲೇ ಫ್ಯಾಮಿಲಿ ಸಪೋರ್ಟ್, ಫ್ರೆಂಡ್ಸ್, ಟೀಚರ್ಸ್, ರಿಲೇಟಿವ್ಸ್, ಬ್ಯಾಂಕ್ ಬ್ಯಾಲೆನ್ಸ್ ಎಲ್ಲವನ್ನೂ ಕಳೆದುಕೊಂಡಿದ್ದೆ. ಆಗ ನನಗೆ ಕಳೆದುಕೊಂಡಿದ್ದನ್ನೆಲ್ಲ ಮತ್ತೆ ಸಂಪಾದಿಸಲು ಕಾಣಿಸಿದ ಏಕೈಕ ದಾರಿಯೆಂದರೆ ಬಿಜನೆಸ್. “Achieve something by nothing” ಎಂಬುದು ನನಗೆ ಬಹಳಷ್ಟು ಸಲ ಗೆಲುವನ್ನು ತಂದುಕೊಟ್ಟಿದೆ. ಈಗಲೂ ಇದು ನನಗೆ ಗೆಲುವನ್ನು ತಂದು ಕೊಡುತ್ತೆ ಎಂಬ ವಿಶ್ವಾಸವಿತ್ತು. ಅದಕ್ಕೆ ನಾನು ಬಿಜನೆಸ್ ಸ್ಟಾರ್ಟ ಮಾಡಿದೆ. ನಿಮ್ಮತ್ರ ಏನು ಇಲ್ಲ ಅಂದ್ರೆ ಬಿಜನೆಸ್ ಸ್ಟಾರ್ಟ ಮಾಡಲು ಅದೇ ಬೆಸ್ಟ ಸಮಯ ಅನ್ನೋದು ನನ್ನ ಬಲವಾದ ನಂಬಿಕೆಯಾಗಿದೆ. ನಿಮಗೆ ಹುಷಾರಿಲ್ಲದಿದ್ದಾಗ ನೀವು ಡಾಕ್ಟರ್ ಬಳಿ ಹೋಗ್ತಿರಾ ತಾನೇ? ಅದೇ ರೀತಿ ನಿಮ್ಮ ಬಳಿ ದುಡ್ಡಿಲ್ಲ ಅಂದ್ರೆ ನೀವು ದುಡ್ಡನ್ನು ಸಂಪಾದಿಸುವುದಕ್ಕಾಗಿ ಒಂದು ಬೆಸ್ಟ ಬಿಜನೆಸನ್ನು ಪ್ರಾರಂಭಿಸಬೇಕು.
3) ನಾನು ಬಿಜನೆಸ್ ಸ್ಟಾರ್ಟ ಮಾಡಲು ಮತ್ತೊಂದು ದೊಡ್ಡ ಕಾರಣ ಏನಪ್ಪ ಅಂದ್ರೆ ನನ್ನ ಮೇಲೆ ಯಾವುದೇ ತರಹದ ಸೀರಿಯಸ್ ಜವಾಬ್ದಾರಿಗಳಿಲ್ಲದಿರುವುದು. ನನಗೆ ಇವತ್ತಿಗೂ ಸಹ ನಮ್ಮನೇಲಿ ಯಾವುದೇ ತರಹದ ಸೀರಿಯಸ್ ಜವಾಬ್ದಾರಿಗಳಿಲ್ಲ. ಯಾವುದೇ ತರಹದ ಒತ್ತಡಗಳಿಲ್ಲ. ಇದನ್ನು ಮಾಡು, ಇದನ್ನು ಮಾಡಬೇಡ ಎಂಬ ಒತ್ತಾಯಗಳಿಲ್ಲ. ನಮ್ಮನೇಲಿ ನನಗೆ ಎಲ್ಲ ತರಹದ ಸ್ವಾತಂತ್ರ್ಯವನ್ನು ಕೊಟ್ಟಿದ್ದಾರೆ. ನಾನು ಬಿಜನೆಸ್ ಸ್ಟಾರ್ಟ ಮಾಡ್ತೀನಿ ಅಂದಾಗ ಫುಲ್ ಸಪೋರ್ಟ್ ಮಾಡಿದ್ದಾರೆ. ಹೀಗಾಗಿ ನಾನು ಯಾವುದೇ ಟೆನ್ಶನಗಳಿಲ್ಲದೇ ಬಿಜನೆಸ್ ಸ್ಟಾರ್ಟ ಮಾಡಿದೆ. ಈಗಲೂ ನನಗೆ ಬಿಜನೆಸ್ ಬಿಟ್ಟರೆ ಬೇರೆ ಯಾವ ಜವಾಬ್ದಾರಿಯೂ ಇಲ್ಲ. ಮುಂದೇಯು ಸಹ ಬಿಜನೆಸ್ ಬಿಟ್ಟು ಬೇರೆ ಯಾವ ಜವಾಬ್ದಾರಿಯೂ ಇರುವುದಿಲ್ಲ. ಏಕೆಂದರೆ ಪ್ರೀತಿ, ಗೀತಿ, ಮದುವೆ, ಮಡದಿ, ಮಕ್ಕಳು ಇತ್ಯಾದಿಗಳಲ್ಲಿ ನನಗೆ ಇಂಟರೆಸ್ಟ್ ಇಲ್ಲ. ಮನೆ ಆಸ್ತಿಯಾಗುವ ಆಸೆಯಂತೂ ಇಲ್ಲ. ದೇಶದ ಆಸ್ತಿಯಾಗುವ ಹುಚ್ಚಿದೆ. ಏನಾಗುತ್ತೋ ಗೊತ್ತಿಲ್ಲ.
4) ನಾನು ಬಿಜನೆಸ್ ಸ್ಟಾರ್ಟ ಮಾಡಲು ಕಾರಣವಾದ ಮತ್ತೊಂದು ಬಲವಾದ ಕಾರಣ ಏನೆಂದರೆ ನನಗೆ ನನ್ನಲ್ಲಿರುವ ಕಲೆಯನ್ನು ಕೊಲೆ ಮಾಡಲು ಇಷ್ಟವಿರಲಿಲ್ಲ. I don’t wanted to kill my talent. ಕಾಲೇಜಿನಲ್ಲಿರುವಾಗ ನಾನು ಪಾರ್ಟಟೈಮ ಕೆಲಸದಲ್ಲಿ ಕಳೆದೋಗುತ್ತಿದ್ದೆ. ಆಗ ನಾನು ಕೆಲಸದ ಒತ್ತಡದಿಂದಾಗಿ ನನ್ನಲ್ಲಿರುವ ಕಲೆಯನ್ನು ನಾನೇ ಕೊಲೆ ಮಾಡುತ್ತಿದ್ದೆ. ಆದರೆ ನನಗೆ ಜೀವನಪೂರ್ತಿ ಈ ತಪ್ಪನ್ನು ಮಾಡುವಷ್ಟು ಧೈರ್ಯವಿರಲಿಲ್ಲ. ಬಿಜನೆಸ್ ಫೇಲ್ ಆದ್ರೆ ಅದು ನಿನ್ನನ್ನು ಕೊಲ್ಲುತ್ತೆ ಅಂತಾ ಎಲ್ರೂ ಹೇಳ್ತಿದ್ರು. ಆದ್ರೆ ನಾನು ಯಾವ ಸ್ಥಿತಿಯಲ್ಲಿದ್ದೆ ಅಂದ್ರೆ ಬಿಜನೆಸ್ ಸ್ಟಾರ್ಟ ಮಾಡದಿದ್ರೆ ನಾನು ಸತ್ತೋಗತ್ತಿದ್ದೆ. ನನ್ನ ಕಲೆಯನ್ನು ಉಳಿಸಿ, ಬೆಳೆಸುವುದಕ್ಕಾಗಿ ನಾನು ಬಿಜನೆಸ್ ಸ್ಟಾರ್ಟ ಮಾಡಿದೆ.
ಓಕೆ ಗೆಳೆಯರೇ ಫೈನ್, ಇವಿಷ್ಟು ಕಾರಣಗಳಿಂದಾಗಿ ನಾನು ಗವರ್ನಮೆಂಟ ಜಾಬ್ ಬಿಟ್ಟು ಬಿಜನೆಸ್ ಸ್ಟಾರ್ಟ ಮಾಡಿದೆ. ನಿಮ್ಮ WHY ಪವರಫುಲ ಆಗಿದಷ್ಟು ನಿಮ್ಮ HOW ಕ್ಲಿಯರಾಗಿರುತ್ತದೆ. ನಿಮ್ಮ HOW ಕ್ಲಿಯರಾಗಿದಷ್ಟು ಬೇಗನೆ ನಿಮಗೆ ಸಕ್ಸೆಸ್ ಸಿಗುತ್ತದೆ. ಅದಕ್ಕಾಗಿ ಮೊದಲು ನಿಮ್ಮ WHY ಕ್ಲಿಯರ್ ಮಾಡಿಕೊಳ್ಳಿ. ಆಮೇಲೆ ನಿಮ್ಮ ಬಿಜನೆಸ್ಸನ್ನು ಪ್ರಾರಂಭಿಸಿ. All the best and Thanks you….