ನೀ ಅತ್ತರೆ ತಾಯಿ ಮತ್ತೆ ಮರಳಿ ಬಾರಳು… – Kannada Poetry on Mother – Kannada Kavanagalu About Amma

You are currently viewing ನೀ ಅತ್ತರೆ ತಾಯಿ ಮತ್ತೆ ಮರಳಿ ಬಾರಳು… – Kannada Poetry on Mother – Kannada Kavanagalu About Amma

ನನ್ನ ಜೀವನದಲ್ಲಿ ಸದ್ಯಕ್ಕೆ ಹೇಳಿಕೊಳ್ಳುವಂಥ ದೊಡ್ಡ ವಿಷಯಗಳೇನು ಆಗಿಲ್ಲ. ಆದರೆ ಆಗುತ್ತಿರುವುದೆಲ್ಲವು ವಿಶೇಷವಾಗಿವೆ. ನನಗೆ ನಿಮ್ಮಂತೆ ಹತ್ತಾರು ಜನ ಗೆಳೆಯರಿಲ್ಲ. ನನಗೆ ಇರುವುದು ಇಬ್ಬರೇ ಗೆಳೆಯರು. ಅವರಲ್ಲಿ ಒಂದು ನನ್ನ ಲೇಖನಿಯಾದರೆ, ಮತ್ತೊಂದು ಅವಳು. ಅವಳಿಗೂ ಅಷ್ಟೇ..! ಅವಳಿಗೆ ಅವಳ ಕ್ಯಾಮೆರಾವನ್ನು ಬಿಟ್ಟರೆ ನಾನೊಬ್ಬನೇ ಗೆಳೆಯ. ನಿನ್ನೆ ನಮ್ಮಿಬ್ಬರ ಕಣ್ಣಿಗೆ ಬಸ್ಸಲ್ಲಿ ಬಿಸಲೇರಿ ವಾಟರ್ ಬಾಟಲಗಳನ್ನು ಮಾರುತ್ತಿರುವ ೬೫ ವಯಸ್ಸಿನ ಒಬ್ಬಳು ಹಣ್ಣಾದ ಮುದುಕಿ ಕಾಣಿಸಿದಳು. ಅವಳನ್ನು ನೋಡಿದಾಗ ನನ್ನವಳ ಕಣ್ಣ೦ಚಲ್ಲಿ ಕಣ್ಣೀರು ಕಾಲು ಚಾಚಿತು.

ನೀ ಅತ್ತರೆ ತಾಯಿ ಮತ್ತೆ ಮರಳಿ ಬಾರಳು... - Kannada Poetry on Mother - Poems on Mother in Kannada

ಆ ಮುದುಕಿಗೆ ಮಗ, ಸೊಸೆ, ಮೊಮ್ಮಕ್ಕಳೆಲ್ಲರು ಇದ್ದಾರೆ. ಆದರೆ ಎಳ್ಳಷ್ಟು ಪ್ರಯೋಜನವಿಲ್ಲ. ಮಗ ಚೆನ್ನಾಗಿ ನೋಡಿಕೊಳ್ಳುತ್ತಿಲ್ಲ ಎಂಬ ಕಾರಣಕ್ಕೆ ಆ ಮಹಾತಾಯಿ ಕಷ್ಟ ಪಡುತ್ತಿರುವುದನ್ನು ನೋಡಿದರೆ ಎಂಥ ಕಟುಕನ ಕಲ್ಲು ಹೃದಯವಾದರೂ ಕರಗಿ ಕನಿಕರ ತೋರಿಸುತ್ತೆ. ಆದರೆ ಅವಳ ಮಗ ಮತ್ತು ಸೊಸೆಯ ಹೃದಯವೇಕೋ ಕಲ್ಲಾಗಿದೆ. ಅಂಥ ಪರಿಸ್ಥಿತಿ ಯಾವ ತಾಯಿಗೂ ಬರದಿರಲಿ ಎಂಬ ಕಳಕಳಿ ನನ್ನದು. “ತಾಯಿ ದೇವರಾಗಬಹುದು. ಆದರೆ ದೇವರು ಎಷ್ಟೇ ಪ್ರಯತ್ನಿಸಿದರೂ ಯಾವತ್ತು ತಾಯಿಯಾಗಲಾರ”. ಪ್ಲೀಸ್ ನಿಮ್ಮ ತಾಯಿಯನ್ನು ಚೆನ್ನಾಗಿ ನೋಡಿಕೊಳ್ಳಿ. ತಾಯಿ ತೀರಿ ಹೋದಾಗ ನೀವು ಅತ್ತರೆ,,, ತಾಯಿ ಮತ್ತೆ ಮರಳಿ ಬಾರಳು ಎಂಬುದು ನೆನಪಿರಲಿ… ನೀನು ಚಿಕ್ಕವನಿದ್ದಾಗ ನೀನು ಸ್ವಲ್ಪ ಅತ್ತರೆ ಸಾಕು ತಾಯಿ ಎಲ್ಲಿದ್ದರೂ ಓಡೋಡಿ ಬರುತ್ತಿದ್ದಳು. ಆದರೆ ಈಗ ನೀ ಬಿಕ್ಕಿಬಿಕ್ಕಿ ಅತ್ತರೂ ತಾಯಿ ಮರಳಿ ಬಾರಳು…

೧) ತಾಯಿ ಮತ್ತೆ ಮರಳಿ ಬಾರಳು…

ನೀ ಅತ್ತರೆ ತಾಯಿ ಮತ್ತೆ ಮರಳಿ ಬಾರಳು... - Kannada Poetry on Mother - Poems on Mother in Kannada

ಓದಿಸಿದಳು ನಿನ್ನ ಹಗಲಿರುಳು ದುಡಿದು
ಮರುಗಿದಳು ದಿನಾ ಸಂಕಷ್ಟಗಳಲ್ಲಿ ಮಡಿದು
ನಿನ್ನ ಏಳ್ಗೆಗೆ ತಾಯಿ ಪಟ್ಟ ನೋವಿದು
ಇಂಥ ಮಾತೆಗೆ ಯಾವ ಉಡುಗೊರೆ ನಿನ್ನದು?

ನಿನ್ನ ಪ್ರೀತಿಗೆ ತಾಯಿ ಕೊಟ್ಟಳು ಒಪ್ಪಿಗೆ
ಬಂದ ಸೊಸೆ ಕಾಡುತಿಹಳು ಯಾವ ತಪ್ಪಿಗೆ?
ಜೀವ ಬಿಗಿಹಿಡಿದವಳೆ ಮೊಮ್ಮಕ್ಕಳ ಆಸೆಗೆ

ನೀ ಅತ್ತರೆ ತಾಯಿ ಮತ್ತೆ ಮರಳಿ ಬಾರಳು... - Kannada Poetry on Mother - Poems on Mother in Kannada

ಮುದಿ ಮುದುಕಿ ಮೌನವಾಗಿರುವಳು
ನಿನ್ನ ಮುದ್ದಿನ ಮಡದಿಯ ಕಾಟಕ್ಕೆ.
ನೀನು ಹೋಗುವೆ ಖಂಡಿತ ನರಕಕ್ಕೆ…

ಸ್ವಾರ್ಥಿ ನಿನ್ನ ಹೆಂಡತಿ ತಾಯಿಯ ದೂಡಿದಳು
ಬೀದಿಲಿ ಬಿದ್ದ ತಾಯಿ ನಿನ್ನನ್ನೇ ಹರಸಿದಳು
ಕೊನೆಯುಸಿರೆಳೆದಳು ಸಿಗದೇ ಅನ್ನದಗಳು
ಈಗ ನೀ ಅತ್ತರೆ ತಾಯಿ ಮತ್ತೆ ಬಾರಳು…
ನೆನಪಿರಲಿ ತಾಯಿ ಮತ್ತೆ ಮರಳಿ ಬಾರಳು…

ನೀ ಅತ್ತರೆ ತಾಯಿ ಮತ್ತೆ ಮರಳಿ ಬಾರಳು... - Kannada Poetry on Mother - Poems on Mother in Kannada

೨) ಅತ್ತೆ v/s ಕತ್ತೆ

ಮದುವೆಯ ಮುಂಚೆ ಮಕ್ಕಳು
ಹೆತ್ತವರಿಗೆ ಸೊಂಪಾದ ನೆರಳು
ಮದುವೆಯ ನಂತರ ಮಕ್ಕಳು
ಹೆಂಡ್ತಿ ಮಾತಿಗೆ ಮರಳು…

ಸೊಸೆ ತರುವ ಕಪಟ ತಿರುಳು
ಕಳಚುತ್ತೆ ಸಂಸಾರದ ಸರಳು
ಹೆಂಡತಿಯ ಮಾತಿಗೆ ಮಗ
ನೀಡ್ತಾನೆ ತನ್ನ ಮುಗ್ಧ ಕೊರಳು..

ನೀ ಅತ್ತರೆ ತಾಯಿ ಮತ್ತೆ ಮರಳಿ ಬಾರಳು... - Kannada Poetry on Mother - Poems on Mother in Kannada

ಮಗನ ಅಗಲುವಿಕೆಯಿಂದ
ತತ್ತರಿಸುತ್ತೆ ಹೆತ್ತ ಕರಳು
ಇದು ಹೆಣ್ಣಿನ ದೌರ್ಭಾಗ್ಯದ ಉರುಳು
ತನ್ನ ಕಣ್ಣಲ್ಲೇ ಚುಚ್ಚಿಕೊಂಡ ಬೆರಳು…

ಹೆಣ್ಣಿಗೆ ಹೆಣ್ಣೆ ತಾನೆ ಶತ್ರುಳು?
ಹೆಣ್ಮಕ್ಕಳು ಒಂಥರಾ ಪಾಪಿ ದೇವತೆಗಳು.
ಏಕೆಂದರೆ ಈಗ ಅಳುತ್ತಿರುವ ಅತ್ತೆ,
ಒಂದು ಕಾಲದಲ್ಲಿ ಸೊಸೆಯಾಗಿ ಮೆರೆದ ಕತ್ತೆ…

ನೀ ಅತ್ತರೆ ತಾಯಿ ಮತ್ತೆ ಮರಳಿ ಬಾರಳು... - Kannada Poetry on Mother - Poems on Mother in Kannada

    ಈ ಅಂಕಣ (Article) ನಿಮಗೆ ಇಷ್ಟವಾಗಿದ್ದರೆ ನಿಮ್ಮೆಲ್ಲ ಗೆಳೆಯರೊಡನೆ ಮತ್ತು ನೀವಿರುವ ಎಲ್ಲ ಕನ್ನಡ ಫೇಸ್ಬುಕ್ ಗ್ರೂಪಗಳಲ್ಲಿ ಇದನ್ನು ತಪ್ಪದೇ ಶೇರ್ (Share) ಮಾಡಿ. ಜೊತೆಗೆ ಪ್ರತಿದಿನ ಹೊಸಹೊಸ ಅಂಕಣಗಳನ್ನು, ಪ್ರೇಮಕಥೆಗಳನ್ನು, ಕವನಗಳನ್ನು ಉಚಿತವಾಗಿ ಓದಲು ತಪ್ಪದೆ ನನ್ನ ಫೇಸ್ಬುಕ್ ಪೇಜನ್ನು https://www.facebook.com/Directorsatishkumar/ (Director Satishkumar) ಲೈಕ್ ಮಾಡಿ.

Follow Me On : Facebook | Instagram | YouTube | Twitter

My Books : Kannada Books | Hindi Books | English Books

⚠ STRICT WARNING ⚠

Content Rights :

ಈ ಅಂಕಣದ ಎಲ್ಲ ಹಕ್ಕುಗಳನ್ನು ಡೈರೆಕ್ಟರ್ ಸತೀಶಕುಮಾರ ಹಾಗೂ ರೋರಿಂಗ್ ಕ್ರಿಯೇಷನ್ಸ್ ಪ್ರೈವೇಟ್ ಲಿಮಿಟೆಡ್ ಕಂಪನಿ ವತಿಯಿಂದ ಸಂಪೂರ್ಣವಾಗಿ ಕಾಯ್ದಿರಿಸಲಾಗಿದೆ. ಡೈರೆಕ್ಟರ್ ಸತೀಶಕುಮಾರ ಅವರ ಅನುಮತಿಯಿಲ್ಲದೆ ಈ ಅಂಕಣದ ಯಾವುದೇ ಭಾಗವನ್ನು ಕಾಪಿ ಮಾಡುವಂತಿಲ್ಲ, ಬೇರೆ ಭಾಷೆಗಳಿಗೆ ಅನುವಾದಿಸುವಂತಿಲ್ಲ ಮತ್ತು ಇದನ್ನು ಬೇರೆಡೆಗೆ ಪ್ರಕಟಿಸುವಂತಿಲ್ಲ. ಯಾವುದೇ ಸಾಮಾಜಿಕ ಜಾಲತಾಣಗಳಲ್ಲಿ ಪೋಸ್ಟ್ ಮಾಡುವಂತಿಲ್ಲ. ಮುದ್ರಣ ಮಾಡುವಂತಿಲ್ಲ. ಒಂದು ವೇಳೆ ಯಾರಾದರೂ ಕಾಪಿ ರೈಟ್ಸ್ ನಿಯಮಗಳನ್ನು ಉಲ್ಲಂಘಿಸಿದರೆ ಅವರ ಮೇಲೆ ಸೂಕ್ತ ಕಾನೂನು ಕ್ರಮ ಕೈಗೊಳ್ಳಲಾಗುವುದು ಹಾಗೂ ಆಗಿರುವ ನಷ್ಟವನ್ನು ಅವರಿಂದಲೇ ವಸೂಲಿ ಮಾಡಲಾಗುವುದು.

All Rights of this article are fully reserved by Director Satishkumar and Roaring Creations Private Limited India. No part of this article can be copied, translated or re published anywhere without the written permission of Director Satishkumar. If such violation of copy rights found to us, then we legally punish to copy cats and recover our loss by them only.

© Director Satishkumar and Roaring Creations Private Limited, India.

Director Satishkumar

Satishkumar is a young multi language writer (English, Hindi, Marathi and Kannada), Motivational Speaker, Entrepreneur and independent filmmaker from India. And also he is the Co-founder and CEO of Roaring Creations Pvt Ltd India. Follow Me On : Facebook | Instagram | YouTube | Twitter My Books : Kannada Books | Hindi Books | English Books