ಸಾಮಾನ್ಯವಾಗಿ ನಾನು ಸಣ್ಣಪುಟ್ಟ ವಿಷಯಗಳಿಗೆಲ್ಲ ಬೇಜಾರು ಮಾಡಿಕೊಳ್ಳಲ್ಲ. ಆದರೆ ಸ್ವಾಭಿಮಾನದ ವಿಷಯ ಬಂದಾಗ ಬೇಜಾರು ಮಾಡಿಕೊಳ್ಳಲೇಬೇಕಾದ ಅನಿವಾರ್ಯತೆ ಎದುರಾಗುತ್ತದೆ. ನಿನ್ನೆ ನಾನೊಂದು ರೆಸ್ಟೋರೆಂಟನಲ್ಲಿ ನನ್ನ ಗೆಳೆಯನಿಗಾಗಿ ಕಾಯುತ್ತಾ ಕುಳಿತಿರುವಾಗ ಒಂದು ಕಣ್ತೆರೆಸುವ ಘಟನೆ ನಡೆಯಿತು. ಒಬ್ಬಂಟಿತನದ ಮುಜುಗುರದಿಂದ ತಪ್ಪಿಸಿಕೊಳ್ಳಲು ನಾನು ನನ್ನ ಪಾಡಿಗೆ ಮೊಬೈಲ್ನಲ್ಲಿ ತಲೆಹಾಕಿ ಕುಳಿತ್ತಿದ್ದೆ. ನನ್ನ ಹಿಂದಿನ ಸೀಟಿನಲ್ಲಿ ನಾಲ್ಕು ಜನ ಹುಡುಗಿಯರು ಡೀಪಾಗಿ ಡಿಸ್ಕಶನ್ ಮಾಡುತ್ತಾ ಕುಳಿತ್ತಿದ್ದರು. ಅವರಿಂದ ನನಗೇನು ತೊಂದರೆಯಾಗಲಿಲ್ಲ. ಆದರೆ ಅವರ ಪೋಲಿ ಡಿಸ್ಕಶನನಿಂದ ಸ್ವಾಭಿಮಾನಕ್ಕೆ ಸ್ವಲ್ಪ ಹರ್ಟಾಯಿತು. ಏಕೆಂದರೆ ಆ ಹುಡುಗಿಯರು ಹುಡುಗರ ಬಗ್ಗೆ ತುಂಬಾ ಕೇವಲವಾಗಿ ಮಾತಾಡುತ್ತಿದ್ದರು.
“ಹುಡುಗರೆಲ್ಲ ಜೊಲ್ಲು ಪಾರ್ಟಿಯಿದ್ದಂಗೆ. ಸುಮ್ನೆ ಒಂದು ಸ್ಮೈಲ್ ಬೀಸಾಕಿದ್ರೆ ಸಾಕು ನಾಯಿಥರಾ 24 hours ನಿಯತ್ತಾಗಿ ಫಾಲೋ ಮಾಡ್ತಾರೆ. ಹುಡುಗಿಯರ ಮುಂದೆ ಬಡಾಯಿ ಕೊಚ್ಚಿಕೊಳ್ಳುತ್ತಾರೆ. ಆದ್ರೆ ಕೆಲಸದಲ್ಲಿ ಏನು ಕಿಸಿಯಲ್ಲ. ಯಾವಾಗಲೂ ಹುಡುಗಿಯರಿಗಾಗಿ ಹಂಬಲಿಸುತ್ತಾರೆ. ಫೇಸ್ಬುಕಲ್ಲಿ ಕಂಡಕಂಡವರಿಗೆಲ್ಲ ಫ್ರೆಂಡ್ ರಿಕ್ವೆಸ್ಟ್ ಕಳುಹಿಸುತ್ತಾರೆ. ರಿಕ್ವೆಸ್ಟ್ accept ಮಾಡಿದ್ರೆ ಹಗಲುರಾತ್ರಿ ಮೆಸೇಜ ಮಾಡ್ತಾರೆ. Hi ಅಂತಾ ಕಳಿಸಿದ್ರೆ ಸಾಕು ಹನಿಮೂನ್ ತಯಾರಿ ಮಾಡಿಕೊಳ್ತಾರೆ. So ಹುಡುಗರನ್ನ use and throw ಮಾಡ್ಕೊಳೋದು ತುಂಬಾ easy ಕಣೇ….” ಎಂದೆಲ್ಲ ಮಾತಾಡಿ ಹುಡುಗರ ಮಾನ ಮರ್ಯಾದೆಯನ್ನು ಮೂರ್ ಕಾಸಿಗೆ ಹರಾಜು ಹಾಕುತ್ತಿದ್ದರು. ಅವರ ಮಾತುಗಳನ್ನು ಕೇಳಿ ನನಗೆ ಬೇಜಾರಾಯಿತು. ಆದರೆ ಅವರಿಗೆ ನಾನೇನು ಹೇಳುವ ಕೇಳುವ ಪರಿಸ್ಥಿತಿಯಲ್ಲಿ ಇರಲಿಲ್ಲ. ಏಕೆಂದರೆ ಅವರು ಹೇಳಿದ್ದರಲ್ಲಿ ಬಹುಪಾಲು ಸತ್ಯ ಅಡಗಿತ್ತು.
ನಾವು ಯುವಕರು ಮೂರೂ ಬಿಟ್ಟು ಹುಡುಗಿಯರ ಹಿಂದೆ ಸುತ್ತುತ್ತಿದ್ದೇವೆ. ಅವರಿಗೆ ಅನಾವಶ್ಯಕವಾಗಿ ಎಲ್ಲವನ್ನು ಮಾಡಿಕೊಟ್ಟು ಅವರ ಕಾಲ್ಕಸವಾಗುತ್ತಿದ್ದೇವೆ. ಅವರ ಗುಂಗಿನಲ್ಲಿ ನಾವು ನಮ್ಮನ್ನು ಮರೆತು ಬಿಡುತ್ತಿದ್ದೇವೆ. ನಾವು ನಮ್ಮ ಗೆಳೆಯನ ಫೋನಕಾಲಿಗಿಂತ ಗರ್ಲಫ್ರೆಂಡಗಳ ಫೋನಕಾಲಗಳಿಗೆ ಹೆಚ್ಚಿನ ಪ್ರಾಮುಖ್ಯತೆ ಕೊಡುತ್ತಿದ್ದೇವೆ. ಯೌವ್ವನದಲ್ಲಿ ಯಾರನ್ನಾದರೂ ಪ್ರೀತಿಸುವುದು ತಪ್ಪಲ್ಲ. ಆದರೆ ಪ್ರೀತಿಗಾಗಿ ಭಿಕ್ಷೆ ಬೇಡುತ್ತಾ ಹುಡುಗಿಯರ ಹಿಂದೆ ಅಲೆಯೋದು ಯಾಕೋ ಸರಿ ಅನಿಸಲ್ಲ. ಯಾಕಂದ್ರೆ ಹುಡುಗರಾದ ನಮಗೂ ಸ್ವಾಭಿಮಾನ ಅನ್ನೋದು ಇದೆ ಎಂಬುದನ್ನು ಬಹುಪಾಲು ಹುಡುಗಿಯರು ಮರೆತು ಬಿಟ್ಟಿದ್ದಾರೆ. ಅದಕ್ಕಾಗಿ ನಮ್ಮನ್ನು ಸೇಫ್ಟಿ ಪಿನ್ ಥರಾ ಬಳಸಿಕೊಂಡು ಬೇಡವಾದಾಗ ಬೀಸಾಕುತ್ತಿದ್ದಾರೆ. So ನಾವು ಬದಲಾಗಬೇಕು. ಇಲ್ಲಂದ್ರೆ ನಮಗೆ, ನಮ್ ಜನ್ಮಕ್ಕೆ ಮರ್ಯಾದೆ ಇರಲ್ಲ. ಇದು ಅರ್ಥವಾದ ಮೇಲೆ ಬದಲಾಗಬೇಕು ಅನ್ನೋ ಯುವಕರಿಗೆ ಕೆಲವು ಸಲಹೆಗಳು ಇಲ್ಲಿವೆ ;
೧) ಫ್ರೆಂಡ್, ನೀನು ಮೊದಲು ಅಸಲಿ ಮನುಜನಾಗಲು ಪ್ರಯತ್ನಿಸು. ನೀನು ದೈಹಿಕವಾಗಿ ಗಂಡಸು ಎಂಬುದು ಎಲ್ಲರಿಗೂ ಗೊತ್ತಿರುತ್ತೆ. ಆದರೆ ಮಾನಸಿಕವಾಗಿ ಹಾಗೂ ಬೌದ್ಧಿಕವಾಗಿ ನೀನೇನು ಎಂಬುದು ನಿನಗಷ್ಟೆ ಗೊತ್ತಿರುತ್ತದೆ. ಅದಕ್ಕಾಗಿ ಮಾನಸಿಕವಾಗಿ ಅಸಲಿ ಮನುಜನಾಗಲು ಪ್ರಯತ್ನಿಸು. ಒಬ್ಬ ಅಸಲಿ ಪುರುಷ ಬರೀ ತನ್ನ ಮಡದಿಯನ್ನು ಪ್ರೀತಿಸುವುದಿಲ್ಲ. ಅವನು ಹೆಣ್ಣನ್ನು ಹುಡುಕಿಕೊಂಡು ಹೋಗುವುದಿಲ್ಲ. ಅವನು ತನ್ನ ಕುಟುಂಬದ ಜೊತೆಗೆ ಈಡೀ ಸಮಾಜವನ್ನು ಪ್ರೀತಿಸುತ್ತಾನೆ. ಒಬ್ಬ ಚಿಕ್ಕ ಹುಡುಗ ಬರೀ ತನ್ನ ಬಗ್ಗೆ ಮಾತ್ರ ಚಿಂತಿಸುತ್ತಾನೆ. ಹರೆಯದ ಹುಡುಗ ಬರೀ ಹುಡುಗಿಯರ ಬಗ್ಗೆ ಚಿಂತಿಸುತ್ತಾನೆ. ಆದರೆ ಒಬ್ಬ ಅಸಲಿ ಪುರುಷ ಎಲ್ಲರ ಕ್ಷೇಮದ ಬಗ್ಗೆ ಚಿಂತಿಸುತ್ತಾನೆ. ಎಲ್ಲರ ಕಾಳಜಿವಹಿಸುತ್ತಾನೆ. ನಿನ್ನನ್ನು ನೀ ಕೇಳಿಕೋ “ನೀನು ಅಸಲಿ ಪುರುಷನಾ…?” ಎಂದು. ನಿನ್ನನ್ನು ಓದಿಸುವುದಕ್ಕಾಗಿ ನಿನ್ನ ತಂದೆತಾಯಿಗಳು ಬೆವರು ಸುರಿಸುತ್ತಿರಬೇಕಾದ್ರೆ, ನೀನು ಸಿಗದ ಹುಡುಗಿಗಾಗಿ ಕಣ್ಣಿರು ಸುರಿಸುತ್ತಿರುವೆಯಲ್ಲ, ಇದು ಸರೀನಾ? ಇದು ನಾಚಿಕೆಗೇಡಿನ ಸಂಗತಿಯಲ್ಲವೇ? ಸಾಧ್ಯವಾದರೆ ಸ್ವಲ್ಪ ಯೋಚಿಸು, ಬದಲಾಗು. ನಿನ್ನ ತಂದೆತಾಯಿಗಳಿಗೆ ಟಾರ್ಚರ್ ಮಾಡಬೇಡ. ನಿನ್ನ ಬಗ್ಗೆ ಅವರು ಎಲ್ಲ ಕಡೆ ಹೆಮ್ಮೆಯಿಂದ ಹೇಳಿಕೊಂಡು ತಿರುಗಾಡುವಂತೆ ನೀನಾಗು…
೨) ಫ್ರೆಂಡ್, ಓದೋ ಟೈಮಲ್ಲಿ ಚೆನ್ನಾಗಿ ಓದಿ ಬೇಗನೆ ಸೆಟ್ಲಾಗಿ ತಂದೆತಾಯಿಗಳ ಭಾರವನ್ನು ಕಡಿಮೆ ಮಾಡುವುದರ ಕಡೆಗೆ ಗಮನ ಹರಿಸು. ಅದನ್ನು ಬಿಟ್ಟು ಬಿಟ್ಟಿ ಗರ್ಲಫ್ರೆಂಡಗಾಗಿ ಊರ ತುಂಬೆಲ್ಲ ಸಾಲ ಮಾಡಿ ಬೀದಿಗೆ ಬರಬೇಡ. ಚೆನ್ನಾಗಿ ಓದಿ ಚೆನ್ನಾಗಿ ದುಡ್ಡ ಮಾಡಿ ಸೆಟ್ಲಾದ್ರೆ ಖಂಡಿತ ನಿನಗೆ ಚೆನ್ನಾಗಿರೋ ಹುಡುಗಿ ಸಿಕ್ಕೇ ಸಿಗ್ತಾಳೆ. ಯಾಕೀಷ್ಟು ಅವಸರ? ಮುಖದ ಮೇಲೆ ಮೀಸೆ ಬರೋಕ್ಕಿಂತ ಮುಂಚೆನೇ ಮಂಚದ ಆಸೆಯೇಕೆ? ಒಂದ್ಸಲ ಫ್ರೀಯಾಗಿದ್ದಾಗ ಶಾದಿ.ಕಾಮನಂಥ ವೆಬಸೈಟಗಳಿಗೆ ವಿಜೀಟ ಮಾಡಿ ನೋಡು. ಆಮೇಲೆ ನಿನ್ನ ಯೋಗ್ಯತೆ ಏನಂತಾ ನಿನಗೇ ಚೆನ್ನಾಗಿ ಗೊತ್ತಾಗುತ್ತೆ. ಅಲ್ಲಿ ಸುಂದರವಾಗಿರುವ ಹುಡುಗಿಯರು ಸುಂದರವಾಗಿರುವ ಹುಡುಗರಿಗಿಂತ, ಚೆನ್ನಾಗಿ ದುಡ್ಡ ಮಾಡಿ ಚೆನ್ನಾಗಿ ಸೆಟ್ಲಾಗಿರೋ ಹುಡುಗರಿಗೆ ಮೊದಲ ಪ್ರಾಮುಖ್ಯತೆ ಕೊಡುತ್ತಾರೆ. ಓದೋಕ್ಕಾದ್ರೆ ಚೆನ್ನಾಗಿ ಓದು. ಆಗದಿದ್ರೆ ಬುದ್ಧಿ ಉಪಯೋಗಿಸಿ ದುಡಿದು ಚೆನ್ನಾಗಿ ದುಡ್ಡ ಮಾಡಿ ಚೆನ್ನಾಗಿ ಸೆಟ್ಲಾಗು. ನೀನು ಹುಡುಗಿಯರ ಹಿಂದೆ ಅಲೆಯೋದಕ್ಕಿಂತ, ಹುಡುಗಿಯರೇ ನಿನ್ನ ಹಿಂದೆ ಅಲೆಯೋವಂತೆ ನೀ ಏನಾದ್ರು ಸಾಧಿಸಿ ಗುಡ್ಡೆ ಹಾಕು. ಒಟ್ನಲ್ಲಿ ನಿನಗೆ ಹುಡುಗಿ ಹುಡುಕೋವಾಗ ನಿನ್ನ ತಂದೆತಾಯಿಗಳಿಗೆ ತೊಂದರೆ ಆಗಬಾರದು. ಆ ರೀತಿ ನೀ ಸೆಟ್ಲಾಗು…
3) ಫ್ರೆಂಡ್, ನೀನು ಸಿಕ್ಸ್ ಪ್ಯಾಕ್ ಬೆಳೆಸು. ಅದರಲ್ಲೇನು ತಪ್ಪಿಲ್ಲ. ಅದರ ಜೊತೆಗೆ ಸ್ವಲ್ಪ ಸಿಕ್ಸ್ಥ ಸೆನ್ಸನ್ನು ಬೆಳೆಸು. ಮಾನಸಿಕವಾಗಿ ಮತ್ತು ದೈಹಿಕವಾಗಿ ಬಲಿಷ್ಟನಾಗು. ನಿನ್ನಿಂದ ಎಲ್ಲವನ್ನೂ ಕಿತ್ತುಕೊಂಡರೂ ನೀನು ಎದೆಗುಂದಬಾರದು. ನಿನ್ನಲ್ಲಿ ಮತ್ತೆ ಎಲ್ಲವನ್ನೂ ಸಂಪಾದಿಸುತ್ತೇನೆ ಎಂಬ ಆತ್ಮವಿಶ್ವಾಸವಿರಬೇಕು. ನಾಳೆಗಾಗಿ ಕಾಯದೇ ಇವತ್ತೇ ಕೆಲಸ ಪ್ರಾರಂಭಿಸುವ ಧ್ಯೇಯ ನಿನ್ನದಾಗಿರಬೇಕು. ನೀನು ನಿನ್ನ ಆತ್ಮವಿಶ್ವಾಸವನ್ನು ಯಾವತ್ತೂ ಕಳೆದುಕೊಳ್ಳಬೇಡ. ಯಾವುದೇ ಕಾರಣಕ್ಕೂ ಸ್ವಾಭಿಮಾನವನ್ನು ಬಿಟ್ಟು ಬದುಕಬೇಡ…
೪) ಫ್ರೆಂಡ್, ನಿನಗೆ ನೀನೇ ವಂಚಿಸಿಕೊಳ್ಳಬೇಡ. ಕೆಟ್ಟ ಉದ್ದೇಶವನ್ನಿಟ್ಟುಕೊಂಡು ಸುಳ್ಳೇಳಬೇಡ. ಸ್ವಾರ್ಥ ಸಾಧನೆಗಾಗಿ ನಾಟಕವಾಡಬೇಡ. ನೀನು ನೈಜವಾಗಿರು. ನೀನು ನೀನಾಗಿರು. ಒಳ್ಳೆಯವನಂತೆ ನಟಿಸುವ ಅವಶ್ಯಕತೆ ನಿನಗಿಲ್ಲ. ಅದಕ್ಕಾಗಿಯೇ ಹುಡುಗರಿಗಾಗಿ ಯಾವುದೇ ಕಂಪನಿ ಲಿಪಸ್ಟಿಕ್ ಇತ್ಯಾದಿಯೆಲ್ಲ ಇನ್ನೂ ತಯಾರಿಸಿಲ್ಲ. ನೀನು ನಿನ್ನಷ್ಟಕ್ಕೆ ನಿಯತ್ತಾಗಿರು. ಬೇರೆಯವರ ಅಂತೆಕಂತೆಗಳ ಚಿಂತೆ ನಿನಗೆ ಬೇಕಾಗಿಲ್ಲ…
೫) ಫ್ರೆಂಡ್, ನಿನ್ನ ಮೇಲೆ ಬರುವ ನಿಂದನೆಗಳಿಗೆ ನೀ ನಿದ್ದೆಗೇಡಬೇಡ. ನಿಂದನೆಗಳಿಗೆ ಬಾಯಿಯಿಂದ ಅಥವಾ ಕೈನಿಂದ ಉತ್ತರಿಸುವ ಮೂರ್ಖತನವನ್ನು ತಪ್ಪಿಯೂ ಮಾಡಬೇಡ. ನಿನ್ನ ಸಾಧನೆಯಿಂದ ನಿಂದಕರ ಬಾಯಿಗೆ ಬೀಗ ಜಡಿದು ಎದೆಯುಬ್ಬಿಸಿ ತಲೆಯೆತ್ತಿ ನಡೆದಾಡು. ನೂರು ಜನ ಹುಡುಗಿಯರ ಹಿಂದೆ ಓಡುವ ಬದಲು, ನಿನ್ನನ್ನು ಪ್ರೀತಿಸುವ ಒಬ್ಬಳ ನೆರಳನ್ನು ಹಿಂಬಾಲಿಸು. ಅವಳು ನಿನ್ನನ್ನು ಚೆನ್ನಾಗಿ ನೋಡಿಕೊಳ್ಳುತ್ತಾಳೆ. ನಿನ್ನವಳನ್ನು ಪ್ರೀತಿಸು. ಉಳಿದ ಹೆಣ್ಮಕ್ಕಳನ್ನು ಗೌರವಿಸು, ರಕ್ಷಿಸು…
ಹುಡುಗಿಯರನ್ನು ದ್ವೇಷಿಸಲು ಈ ಅಂಕಣವನ್ನು ನಾನು ಬರೆದಿಲ್ಲ. ಮಹಿಳಾ ಸಬಲೀಕರಣ ಎಷ್ಟು ಮುಖ್ಯವೋ, ಪುರುಷರ ಜಾಗೃತಿಕರಣವೂ ಸಹ ಅಷ್ಟೇ ಮುಖ್ಯವಾಗಿದೆ. ಈ ಸಲಹೆಗಳು ಯುವಕರಿಗಷ್ಟೇ ಮೀಸಲಾಗಿಲ್ಲ. ಯುವತಿಯರಿಗೂ ಅನ್ವಯಿಸುತ್ತವೆ. ಅಯೋಗ್ಯರನ್ನು ಪ್ರೀತಿಸಿ ತಂದೆತಾಯಿಗಳ ಹೊಟ್ಟೆಗೆ ಬೆಂಕಿಹಾಕಬೇಡಿ. ಗಂಡನ ದುಡ್ಡಲ್ಲಿ ದೀಪಾವಳಿ ಆಚರಿಸುವ ದುರಾಸೆಗಳನ್ನು ಬಿಟ್ಟು ನೀವು ಸಹ ಸ್ವಂತ ಕೆಲಸ ಹಿಡಿದು ಇಲ್ಲ ಸ್ವಂತ ಉದ್ಯೋಗ ಪ್ರಾರಂಭಿಸಿ ಚೆನ್ನಾಗಿ ದುಡ್ಡ ಮಾಡುವುದರ ಕಡೆಗೆ ಗಮನ ಹರಿಸಿ. ಈಗಾಗಲೇ ಬಹಳಷ್ಟು ಜನ ಸೋದರಿಯರು ಗಂಡನ ಸಂಪಾದನೆಯಿಲ್ಲದೆ ಜೀವನ ಸಾಗಿಸುವಷ್ಟು ದುಡ್ಡನ್ನು ಸಂಪಾದಿಸಿ ಸುಖವಾಗಿದ್ದಾರೆ. ಅವರಂತೆ ನೀವಾಗಿ. ಪ್ರತಿಯೊಂದಕ್ಕೂ ಗಂಡನ ಮೇಲೆ ಅವಲಂಬಿತಳಾಗಿ ಅವನಿಂದ ಶೋಷಣೆಗೆ ಒಳಗಾಗಬೇಡಿ. ಈ ಅಂಕಣ ನಿಮಗೆ ಇಷ್ಟವಾಗಿದ್ದರೆ ತಪ್ಪದೇ ಲೈಕ್ ಮತ್ತು ಶೇರ್ ಮಾಡಿ. ಜೊತೆಗೆ ನಿಮ್ಮ ಅಭಿಪ್ರಾಯವನ್ನು ಕಮೆಂಟ್ ಮಾಡಿ.
ಈ ಅಂಕಣ (Article) ನಿಮಗೆ ಇಷ್ಟವಾಗಿದ್ದರೆ ನಿಮ್ಮೆಲ್ಲ ಗೆಳೆಯರೊಡನೆ ಮತ್ತು ನೀವಿರುವ ಎಲ್ಲ ಕನ್ನಡ ಫೇಸ್ಬುಕ್ ಗ್ರೂಪಗಳಲ್ಲಿ ಇದನ್ನು ತಪ್ಪದೇ ಶೇರ್ (Share) ಮಾಡಿ. ಜೊತೆಗೆ ಪ್ರತಿದಿನ ಹೊಸಹೊಸ ಅಂಕಣಗಳನ್ನು, ಪ್ರೇಮಕಥೆಗಳನ್ನು, ಕವನಗಳನ್ನು ಉಚಿತವಾಗಿ ಓದಲು ತಪ್ಪದೆ ನನ್ನ ಫೇಸ್ಬುಕ್ ಪೇಜನ್ನು https://www.facebook.com/Directorsatishkumar/ (Director Satishkumar) ಲೈಕ್ ಮಾಡಿ.
Follow Me On : Facebook | Instagram | YouTube | Twitter
My Books : Kannada Books | Hindi Books | English Books
⚠ STRICT WARNING ⚠Content Rights :
ಈ ಅಂಕಣದ ಎಲ್ಲ ಹಕ್ಕುಗಳನ್ನು ಡೈರೆಕ್ಟರ್ ಸತೀಶಕುಮಾರ ಹಾಗೂ ರೋರಿಂಗ್ ಕ್ರಿಯೇಷನ್ಸ್ ಪ್ರೈವೇಟ್ ಲಿಮಿಟೆಡ್ ಕಂಪನಿ ವತಿಯಿಂದ ಸಂಪೂರ್ಣವಾಗಿ ಕಾಯ್ದಿರಿಸಲಾಗಿದೆ. ಡೈರೆಕ್ಟರ್ ಸತೀಶಕುಮಾರ ಅವರ ಅನುಮತಿಯಿಲ್ಲದೆ ಈ ಅಂಕಣದ ಯಾವುದೇ ಭಾಗವನ್ನು ಕಾಪಿ ಮಾಡುವಂತಿಲ್ಲ, ಬೇರೆ ಭಾಷೆಗಳಿಗೆ ಅನುವಾದಿಸುವಂತಿಲ್ಲ ಮತ್ತು ಇದನ್ನು ಬೇರೆಡೆಗೆ ಪ್ರಕಟಿಸುವಂತಿಲ್ಲ. ಯಾವುದೇ ಸಾಮಾಜಿಕ ಜಾಲತಾಣಗಳಲ್ಲಿ ಪೋಸ್ಟ್ ಮಾಡುವಂತಿಲ್ಲ. ಮುದ್ರಣ ಮಾಡುವಂತಿಲ್ಲ. ಒಂದು ವೇಳೆ ಯಾರಾದರೂ ಕಾಪಿ ರೈಟ್ಸ್ ನಿಯಮಗಳನ್ನು ಉಲ್ಲಂಘಿಸಿದರೆ ಅವರ ಮೇಲೆ ಸೂಕ್ತ ಕಾನೂನು ಕ್ರಮ ಕೈಗೊಳ್ಳಲಾಗುವುದು ಹಾಗೂ ಆಗಿರುವ ನಷ್ಟವನ್ನು ಅವರಿಂದಲೇ ವಸೂಲಿ ಮಾಡಲಾಗುವುದು.
All Rights of this article are fully reserved by Director Satishkumar and Roaring Creations Private Limited India. No part of this article can be copied, translated or re published anywhere without the written permission of Director Satishkumar. If such violation of copy rights found to us, then we legally punish to copy cats and recover our loss by them only.
© Director Satishkumar and Roaring Creations Private Limited, India.