ಹಾಯ್ ಗೆಳೆಯರೇ, ನಾನು ನನ್ನ ಜೀವನದಲ್ಲಿ ಸಾಕಷ್ಟು ತಪ್ಪುಗಳನ್ನು ಮಾಡಿದ್ದೇನೆ. ನಂತರ ಅವುಗಳನ್ನು ತಿದ್ದಿಕೊಂಡಿದ್ದೇನೆ. ಆ ತಪ್ಪುಗಳೇ ನನಗೆ ಒಂದೊಳ್ಳೆ ಅನುಭವವನ್ನು ನೀಡಿವೆ. ಮುಂದೆ ಸರಿಯಾದ ದಾರಿಯಲ್ಲಿ ಸಾಗಲು ಸಹಕರಿಸಿವೆ. ನಾನು ಮನಸ್ಸಿಲ್ಲದ ಹುಡುಗಿಗೆ ಮನಸ್ಸು ಕೊಡುವ ತಪ್ಪು ಮಾಡಿರುವೆ, ಗೊಳ್ಳು ಗೆಳೆಯರನ್ನು ಅತಿಯಾಗಿ ನಂಬುವ ತಪ್ಪು ಮಾಡಿರುವೆ, ಬಿಜನೆಸ್ ಮಾಡುವಾಗ ಅತಿಯಾಗಿ ಎಮೋಷನಲ್ ಆಗುವ ತಪ್ಪು ಮಾಡಿರುವೆ, ಎಷ್ಟೋ ವಿಷಯಗಳನ್ನು ಪ್ರಯತ್ನಿಸದೆ ಬಿಡುವ ತಪ್ಪು ಮಾಡಿರುವೆ, ಅವಕಾಶಕ್ಕಾಗಿ ಕಾಯುತ್ತಾ ಕುಳಿತುಕೊಳ್ಳುವ ತಪ್ಪು ಮಾಡಿರುವೆ, ನನ್ನ ಫ್ಯುಚರ್ ಪ್ಲ್ಯಾನಗಳನ್ನು ಶೇರ್ ಮಾಡುವ ತಪ್ಪು ಮಾಡಿರುವೆ. ಇನ್ನೂ ಏನೇನೋ ತಪ್ಪುಗಳನ್ನು ಮಾಡಿರುವೆ, ಅವುಗಳಿಂದ ಸಾಕಷ್ಟು ಕಲಿತಿರುವೆ, ಸಾಕಷ್ಟು ಸುಧಾರಿಸಿಕೊಂಡಿರುವೆ. ಇದರ ಆಧಾರದ ಮೇಲೆಯೇ ನಾನೀ ಅಂಕಣವನ್ನು ಬರೆಯುತ್ತಿರುವೆ. ನಿಮಗೆ ನಿಮ್ಮ ಜೀವನದಲ್ಲಿ ಏನಾದರೂ ಒಂದನ್ನು ಸಾಧಿಸುವ ಆಸೆಯಿದ್ದರೆ ಈ ಕೆಳಗಿನ ವಿಷಯಗಳನ್ನು ಸರಿಯಾಗಿ ಅರ್ಥಮಾಡಿಕೊಳ್ಳಿ.
ಸಾಧಿಸುವ ಆಸೆಯಿದ್ದವರು ಈ 9 ವಿಷಯಗಳನ್ನು ಅರ್ಥ ಮಾಡಿಕೊಳ್ಳಿ – Kannada Life Changing Article
1) ನೀವು ನಿಮ್ಮ ಜೀವನದಲ್ಲಿ ಏನಾದರೂ ಒಂದನ್ನು ಸಾಧಿಸಲು ಹೊರಟಾಗ, ಹೊಸದನ್ನು ಮಾಡಲು ಹೊರಟಾಗ ಮೊದಲು ನಿಮ್ಮವರೇ ನಿಮ್ಮನ್ನು ತಡೆಯುವ ಪ್ರಯತ್ನ ಮಾಡುತ್ತಾರೆ. ನಿಮ್ಮನ್ನು ಡಿಸಕರೇಜ್ ಮಾಡುತ್ತಾರೆ. ನಿಮ್ಮ ಗೆಳೆಯರೇ ನಿಮ್ಮನ್ನು ನೋಡಿ ನಗುತ್ತಾರೆ. ನಿಮ್ಮ ಸಂಬಂಧಿಕರು ನಿಮ್ಮ ಮೇಲೆ ಉರಿದುಕೊಳ್ಳುತ್ತಾರೆ. ಜನ ನಿಮ್ಮನ್ನು ಹುಚ್ಚನೆಂದು ಕರೆಯುತ್ತಾರೆ. ನಿಮಗೆ ಶತ್ರುಗಳು ತಾನಾಗಿಯೇ ಹುಟ್ಟಿಕೊಳ್ಳುತ್ತಾರೆ. ಆದರೆ ಇವರಿಗೆ ನಿಮ್ಮನ್ನು ತಡೆಯುವ ಸಾಮರ್ಥ್ಯವಿಲ್ಲ. ಅವರೆಲ್ಲ ಬರೀ ಬೊಗಳುವ ನಾಯಿಗಳಷ್ಟೇ. ಅವರಿಗೆ ಹೆದರಿ ನೀವು ನಿಮ್ಮ ಗುರಿಯಿಂದ ಹಿಂದೆ ಸರಿಯಬೇಡಿ. ನಿಮ್ಮನ್ನು ಹಾಳು ಮಾಡುವ ಸಾಮರ್ಥ್ಯ ಬೇರೆಯವರಲ್ಲಿಲ್ಲ. ನಿಮ್ಮನ್ನು ಹಾಳು ಮಾಡುವ ಸಾಮರ್ಥ್ಯವಿರುವುದು ನಿಮಗೆ ಮಾತ್ರ. ಜನರಿಗೆ ಹೆದರಿ ನಿಮ್ಮ ಕನಸುಗಳಿಗೆ ನೀವೇ ಮೋಸ ಮಾಡಬೇಡಿ. ನಗುವವರು ನಗಲಿ, ಉರಿಯುವವರು ಉರಿಯಲಿ. ನಗುವವರು ನಾಶವಾಗುತ್ತಾರೆ, ಉರಿಯುವವರು ಸುಟ್ಟು ಬೂದಿಯಾಗುತ್ತಾರೆ. ನೀವು ನಿಮ್ಮ ಪಾಡಿಗೆ ನಿಮ್ಮ ಗುರಿಯೆಡೆಗೆ ಧೈರ್ಯದಿಂದ ಸಾಗಿ.
2) ಯಾವುದೇ ಕೆಲಸ ಮಾಡಲು ಪರಫೆಕ್ಟ ಟೈಮ ಅಂತಾ ಏನು ಇರಲ್ಲ. There is no any perfect time to do anything. ಎಲ್ಲ ಒಳ್ಳೇ ಕಾರ್ಯಗಳಿಗೆ ಎಲ್ಲ ಸಮಯ ಒಳ್ಳೆಯದೇ. ಕೆಟ್ಟ ಕಾಲ, ಒಳ್ಳೇ ಕಾಲ ಅಂತೇನು ಇಲ್ಲ. ಎಲ್ಲವೂ ಶುಭ ಸಮಯವೇ. ಅದಕ್ಕಾಗಿ ಸರಿಯಾದ ಸಮಯ ಬಂದಾಗ ಬಿಜನೆಸ್ ಸ್ಟಾರ್ಟ ಮಾಡ್ತೀನಿ, ಸರಿಯಾದ ಸಮಯ ಬಂದಾಗ ಕೆಲಸ ಮಾಡ್ತೀನಿ ಅಂತಾ ಸುಮ್ಮನೆ ಟೈಮ್ ವೇಸ್ಟ ಮಾಡಬೇಡಿ. ಈಗಲೇ ನಿಮ್ಮ ಕೆಲಸವನ್ನು ಪ್ರಾರಂಭಿಸಿ.
3) ಸಾಧನೆಯ ಹಾದಿ ಸುಲಭವಲ್ಲ. ಅದು ಕಲ್ಲು ಮುಳ್ಳುಗಳಿಗಿಂತ ಕಠಿಣವಾದ ಹಾದಿ. ಈ ಜಗತ್ತಿನಲ್ಲಿ ಸುಲಭವಾದದ್ದು ಯಾವುದು ಇಲ್ಲ, ಕಠಿಣವಾದದ್ದು ಯಾವುದು ಇಲ್ಲ. ಹುಟ್ಟೋದು ಸುಲಭವಲ್ಲ, ಸಾಯೋದು ಸುಲಭವಲ್ಲ, ಬದುಕೋದು ಸುಲಭವಲ್ಲ. ನಿಮ್ಮ ದಾರಿಯಲ್ಲಿ ಕಷ್ಟಗಳು ಬಂದಾಗ ಭಯ ಪಡಬೇಡಿ. ಎಲ್ಲ ಒಳ್ಳೇ ಕಾರ್ಯಗಳಿಗೆ ವಿಘ್ನಗಳು ಇದ್ದೇ ಇರುತ್ತವೆ. ಎಲ್ಲ ಕಾರ್ಯಗಳಿಗೆ ವಿರೋಧಗಳು, ನಿಂದನೆಗಳು ಇದ್ದೇ ಇರುತ್ತವೆ. ಅವುಗಳನ್ನು ಚಾಲೆಂಜಿಂಗಾಗಿ ತೆಗೆದುಕೊಳ್ಳಿ. ನೀವು ಸಾಗುತ್ತಿರುವ ದಾರಿಯಲ್ಲಿ ಸಂಕಷ್ಟಗಳು ಬರದಿದ್ದರೆ ನೀವು ತಪ್ಪಾದ ದಾರಿಯಲ್ಲಿ ಸಾಗುತ್ತಿದ್ದೀರಿ ಎಂದರ್ಥ. ಕಚ್ಚಾ ರಸ್ತೆಗಳು ಮಾತ್ರ ಉತ್ತಮವಾದ ಡ್ರೈವರನನ್ನು ರೂಪಿಸುತ್ತವೆ. ಕಠಿಣವಾದ ರಸ್ತೆಗಳು ಮಾತ್ರ ಸುಂದರವಾದ ಸ್ಥಳಕ್ಕೆ ಕರದೋಯ್ಯುತ್ತವೆ ಎಂಬುದನ್ನು ಸದಾ ನೆನಪಲ್ಲಿಡಿ.
4) ನಿಮ್ಮ ಕನಸುಗಳಿಗಾಗಿ, ನಿಮ್ಮ ಗುರಿಗಳಿಗಾಗಿ ಸ್ವಲ್ಪ ಸ್ವಾರ್ಥಿಗಳಾಗಿ. ನಿಮ್ಮ ಅಮೂಲ್ಯವಾದ ಸಮಯವನ್ನು ಹರಟೆ ಭಟ್ಟರಿಗೆ ಹಾಳು ಮಾಡಲು ಕೊಡಬೇಡಿ. ನಿಮ್ಮ ಗೋಲ್ಡನ್ ಟೈಮನ್ನು ಗೊಳ್ಳು ಗೆಳೆಯರಿಗೆ ಕೊಡಬೇಡಿ. ಸಮಯವೇ ಸಂಪತ್ತು. ಅದನ್ನು ಸರಿಯಾಗಿ ಉಪಯೋಗಿಸಿಕೊಳ್ಳಿ. ಬಿಟ್ಟಿ ಸಲಹೆ ಕೊಡಲು ಸಾವಿರ ಜನ ಬರ್ತಾರೆ, ಆದರೆ ಸಂಕಷ್ಟದಲ್ಲಿರುವಾಗ ಸಹಾಯ ಮಾಡಲು ಯಾರು ಬರಲ್ಲ. ಅದಕ್ಕಾಗಿ ನಿಮ್ಮ ಸಂಪೂರ್ಣ ಸಮಯವನ್ನು ನಿಮ್ಮ ಏಳ್ಗೆಗಾಗಿ ಬಳಸಿಕೊಳ್ಳಿ. ನಿಮಗಾಗಿ, ನಿಮ್ಮ ಗುರಿಗಾಗಿ ಹಣವನ್ನು ಕೂಡಿಡಿ.
5) ನಿಮ್ಮ ಗೆಳೆಯರನ್ನು ಮತ್ತು ಸಂಬಂಧಿಕರನ್ನು ಅತಿಯಾಗಿ ನಂಬದಿರಿ. ನಾವು ಯಾರನ್ನು ಅತಿಯಾಗಿ ನಂಬಿರುತ್ತೇವೆಯೋ ಅವರೇ ನಮಗೆ ಬೇಗನೆ ಮೋಸ ಮಾಡುತ್ತಾರೆ. ನಿಮ್ಮ ಗೆಳೆಯರನ್ನು ಅತಿಯಾಗಿ ನಂಬದಿರಿ. ಗೆಳೆಯರೆಲ್ಲ ಒಳ್ಳೆಯವರಲ್ಲ. ಗೆಳೆಯರು ಯಾವಾಗ ಯಾವ ಕಾರಣಕ್ಕಾಗಿ ಕೈ ಕೊಡ್ತಾರೆ ಎಂಬುದನ್ನು ಹೇಳೋಕ್ಕಾಗಲ್ಲ.
ಉದಾಹರಣೆಗಾಗಿ ; ನನ್ನ Bsc ಗ್ರ್ಯಾಜುಯೇಷನ್ ಮುಗಿದ ನಂತರ ನಾನು ಹಾಗೂ ನನ್ನ ಕ್ಲೋಸ್ ಕ್ಲಾಸಮೇಟ್ಸ ಗೆಳೆಯರಾದ ಅನ್ವರ, ವಿಶಾಲ ಹಾಗೂ ಸಂದೀಪ, ನಾಲ್ವರು ಸೇರಿ ಒಂದು ಬಿಜನೆಸ್ ಸ್ಟಾರ್ಟ ಮಾಡಲು ನಿರ್ಧರಿಸಿದ್ದೇವು. ಅದಕ್ಕಾಗಿ ಬೇಕಾಗುವ 5 ಲಕ್ಷ ಹಣವನ್ನು ಸೇರಿಸುವ ಮಾತುಕತೆಯೂ ಆಗಿತ್ತು. ನಾನು ಅವರ ಮಾತನ್ನು ನಂಬಿ ನಮ್ಮ ಸ್ಟಾರ್ಟಪಗೋಸ್ಕರ ಮಾರ್ಕೆಟ್ ಅನಾಲೈಸಿಸ್, ಪ್ರೋಜೆಕ್ಟ ರಿಪೋರ್ಟ್, ಲೋನ್ ಎಲ್ಲ ಮಾಡಿಕೊಂಡು ತಯಾರಾಗಿದ್ದೆ. ಆದರೆ ನನ್ನ ಗೆಳೆಯರು ಅವರವರ ಗರ್ಲಫ್ರೆಂಡಗಳ ಜೊತೆಗೆ ನನಗೆ ಒಂದು ಮಾತನ್ನು ಹೇಳದೆ ನನ್ನ ಫೋನ್ ನಂಬರನ್ನು ಬ್ಲಾಕ್ ಮಾಡಿ ಮಂಗಮಾಯವಾದರು. ನಾನು ಅವರನ್ನು ನಂಬಿಕೊಂಡು ಲಕ್ಷಾಂತರ ಸಾಲ ಮಾಡಿಕೊಂಡು ಮೋಸ ಹೋದೆ. ಅವರು ಮೊದಲೇ ಪೋಸ್ಟ ಗ್ರ್ಯಾಜುವೇಷನ್ ಮಾಡಲು ಎಲ್ಲ ತಯಾರಿ ಮಾಡಿಕೊಂಡಿದ್ದರು. ಈದಾದ ಒಂದು ವರ್ಷದ ನಂತರ ನನಗೆ ಆ ಮೂವರು ತಮ್ಮತಮ್ಮ ಗರ್ಲಫ್ರೆಂಡಗಳೊಂದಿಗೆ ರಾಣಿ ಚನ್ನಮ್ಮ ಯುನಿವರ್ಸಿಟಿಯಲ್ಲಿ Msc ಮಾಡುತ್ತಿದ್ದಾರೆ ಎಂದು ಗೊತ್ತಾಯಿತು. ಆದರೆ ಏನು ಪ್ರಯೋಜನ? ನಾನೀಗ ನನ್ನ ಲೈಫಲ್ಲಿ ಚೆನ್ನಾಗಿ ಸೆಟ್ಲಾಗಿದೀನಿ. ನನ್ನ ಕಂಪನಿ ಚೆನ್ನಾಗಿ ಸಾಗಿದೆ. ಹೀಗಿರುವಾಗ ನಾನವರ ಮುಖ ನೋಡೊಕು ಇಷ್ಟಪಡಲ್ಲ. ಅದಕ್ಕಾಗಿ ನಿಮ್ಮ ಗೆಳೆಯರನ್ನು ಅತಿಯಾಗಿ ನಂಬದಿರಿ. ಬಿಜನೆಸ್ ಮಾಡುವಾಗ ಜಾಸ್ತಿ ಎಮೋಷನಲ್ಲಾಗಿ ನಿರ್ಧಾರಗಳನ್ನು ತೆಗೆದುಕೊಳ್ಳಬೇಡಿ.
6) ನಿಮ್ಮ ಫ್ಯುಚರ್ ಪ್ಲ್ಯಾನಗಳನ್ನು ಅನಾವಶ್ಯಕವಾಗಿ ಬೇರೆಯವರೊಂದಿಗೆ ಶೇರ್ ಮಾಡಬೇಡಿ. ಏಕೆಂದರೆ ನಿಮ್ಮ ಕನಸುಗಳನ್ನು, ಗುರಿಗಳನ್ನು ನೋಡಿ ಹೊಟ್ಟೆ ಉರಿದುಕೊಂಡು ನಿಮ್ಮ ದಾರಿಗೆ ಕಲ್ಲಾಕುವ ಜನಗಳಿಗೇನು ಕೊರತೆಯಿಲ್ಲ. ನೀವು ನಿಮ್ಮ ಕನಸುಗಳನ್ನು ಹೇಳಿದಾಗ ಕೈಲಾಗದ ಜನ ನಿಮ್ಮನ್ನು ನೋಡಿ ಗೇಲಿ ಮಾಡಿಕೊಂಡು ನಗಲು ಪ್ರಾರಂಭಿಸುತ್ತಾರೆ. ಇದರಿಂದ ನಿಮ್ಮಲ್ಲಿ ಕೀಳರಿಮೆ ಹುಟ್ಟಿಕೊಳ್ಳುತ್ತದೆ. ನಿಮ್ಮ ಅಟೆನಷನ್ ಹಾಗೂ ಫೋಕಸ್ ಹಾಳಾಗುತ್ತದೆ. ನೀವು ಡಿಮೋಟಿವೇಟ್ ಆಗುವ ಸಾಧ್ಯತೆ ಹೆಚ್ಚಾಗಿರುತ್ತದೆ. ಒಂದು ವೇಳೆ ನೀವು ಬಿಜನೆಸ್ ಫೀಲ್ಡಲ್ಲಿದ್ದರೆ ನಿಮ್ಮ ಬಿಜನೆಸ್ ಪ್ಲ್ಯಾನಗಳನ್ನು ಜನ ಕಾಫಿ ಹೊಡೆದು ನಿಮಗಿಂತ ಮುಂಚೆಯೇ ಸಕ್ಸೆಸಫುಲ್ ಆಗುತ್ತಾರೆ. ಅದಕ್ಕಾಗಿ ನಿಮ್ಮ ಗುರಿಗಳನ್ನು ಅನಾವಶ್ಯಕವಾಗಿ ಬೇರೆ ಯಾರೊಂದಿಗೂ ಶೇರ್ ಮಾಡಬೇಡಿ. ಅದರ ಬದಲಾಗಿ ನೇರವಾಗಿ ನಿಮ್ಮ ರಿಸಲ್ಟಗಳನ್ನು ತೋರಿಸಿ. Don’t share your plans, show your results.
7) ಈ ಜಗತ್ತಿನಲ್ಲಿ ಯಾರು ಕೂಡ ನಿಮ್ಮ ಆಸೆಗಳನ್ನು ಈಡೇರಿಸಲು ಖಾಲಿ ಕುಂತಿಲ್ಲ. ನಿಮ್ಮ ಅವಕಾಶಗಳನ್ನು ನೀವೇ ಸೃಷ್ಟಿಸಿಕೊಳ್ಳಬೇಕು. ಅವಕಾಶಗಳು ನಿಮ್ಮನ್ನು ಹುಡುಕಿಕೊಂಡು ಬರುವುದಿಲ್ಲ. ನೀವೇ ಅವುಗಳನ್ನು ಸೃಷ್ಟಿಸಿಕೊಳ್ಳಬೇಕು. ಬೇರೆಯವರ ದಾರಿಯಲ್ಲಿ ಅಡ್ಡ ಸಾಗುವ ಬದಲು ನಿಮ್ಮದೇ ಆದಂತಹ ಒಂದು ವಿಭಿನ್ನ ದಾರಿಯನ್ನು ನಿರ್ಮಿಸಿ. ನಿಮ್ಮ ಅವಕಾಶಗಳನ್ನು ನೀವೇ ಸೃಷ್ಟಿಸಿಕೊಳ್ಳಿ. ನೀವು ಬಯಸಿದ್ದು ನಿಮಗೆ ಸಿಗಲ್ಲ. ನೀವು ಯಾವುದಕ್ಕಾಗಿ ಅರ್ಹರಾಗಿರುತ್ತೀರಿಯೋ ಅದೇ ನಿಮಗೆ ನಿಮಗೆ ಸಿಗುತ್ತದೆ. ಅದಕ್ಕಾಗಿ ನಿಮ್ಮ ಯೋಗ್ಯತೆಯನ್ನು ಹೆಚ್ಚಿಸಿಕೊಳ್ಳಿ.
8) ಈ ಜಗತ್ತಿನಲ್ಲಿ ಯಾರು ಕೂಡ 100% ಪರಫೇಕ್ಟಾಗಿಲ್ಲ. ತಪ್ಪುಗಳಾಗುವುದು ಸಹಜ. ನಿಮ್ಮಿಂದ ತಪ್ಪುಗಳಾದಾಗ ಅವುಗಳನ್ನು ಬೇಗನೆ ಸರಿಪಡಿಸಿಕೊಂಡು ಮುಂದೆ ಸಾಗಿ. ಪ್ರತಿದಿನ ನಿಮ್ಮನ್ನು ನೀವು ಇಂಪ್ರೂವ್ ಮಾಡಿಕೊಳ್ಳಿ. ದಿನಾಲು ಹೊಸದನ್ನು ಕಲಿಯಲು ಉತ್ಸುಕರಾಗಿ. ಹೊಸ ವಿಷಯಗಳನ್ನು ತಿಳಿದುಕೊಳ್ಳಿ. ಹೊಸ ಸಂಗತಿಗಳನ್ನು ಇನ್ನೋವೆಟ್ ಮಾಡಿ. ನಿಮ್ಮಿಂದ ತಪ್ಪುಗಳಾದಾಗ ಹೆದರಬೇಡಿ. ತಪ್ಪುಗಳನ್ನು ಮಾಡಿಯಾದರೂ ಕಲಿಯಿರಿ. ಕಲಿಯುವುದನ್ನು ನಿಲ್ಲಿಸದಿರಿ. ನೀವು ನಿಮ್ಮ ಜೀವನದಲ್ಲಿ ತಪ್ಪುಗಳನ್ನು ಮಾಡದಿದ್ದರೆ ನೀವು ಏನು ಹೊಸದನ್ನು ಮಾಡುತ್ತಿಲ್ಲವೆಂದರ್ಥ.
9) Success ಎಂಬ ಪದದಲ್ಲಿ U ಎಂಬ ಅಕ್ಷರ ಪ್ರಮುಖವಾದ ಪಾತ್ರವನ್ನು ವಹಿಸುತ್ತದೆ. ನಿಮ್ಮ ಸಕ್ಸೆಸನಲ್ಲಿ U ಅಂದರೆ ನೀವು ತುಂಬಾ ಮುಖ್ಯವಾಗುತ್ತೀರಿ. ನಿಮ್ಮ ಫ್ಯಾಮಿಲಿ ಬ್ಯಾಕಗ್ರೌಂಡ್ ಇತ್ಯಾದಿಯೆಲ್ಲ ಮುಖ್ಯವಲ್ಲ. ಅದಕ್ಕಾಗಿ ನೀವು ನೀವಾಗಿರಿ. ನಿಮ್ಮ ಸೋಲು, ಗೆಲುವು, ನೋವು, ನಲಿವು, ಇಷ್ಟ, ಕಷ್ಟ, ನಷ್ಟಗಳಿಗೆಲ್ಲ ನೀವೇ ಕಾರಣರು. ಅದಕ್ಕಾಗಿ ನೀವು ಮೊದಲು ನೀವಾಗಿರಿ. ಆಮೇಲೆ ಎಲ್ಲವೂ ಸರಿಯಾಗಿರುತ್ತದೆ.
ಗೆಳೆಯರೇ, ಇವಿಷ್ಟು ವಿಷಯಗಳನ್ನು ನಾನು ನನ್ನ ತಪ್ಪುಗಳಿಂದ ಕಲಿತಿರುವೆ. ಆದರೆ ನೀವು ತಪ್ಪು ಮಾಡಿ ಇವುಗಳನ್ನು ಕಲಿಯುವ ಅವಶ್ಯಕತೆಯಿಲ್ಲ. ನೀವು ಬೇರೆಯವರ ತಪ್ಪುಗಳಿಂದ ಕಲಿಯಬೇಕು. ಏಕೆಂದರೆ ಎಲ್ಲ ತಪ್ಪುಗಳನ್ನು ನೀವೇ ಮಾಡಿ ಕಲಿಯುವಷ್ಟು ದೊಡ್ಡ ಜೀವನ ನಿಮ್ಮ ಬಳಿಯಿಲ್ಲ. ಅದಕ್ಕಾಗಿ ಈ ವಿಷಯಗಳನ್ನು ಚೆನ್ನಾಗಿ ಅರ್ಥ ಮಾಡಿಕೊಳ್ಳಿ ಮತ್ತು ಸಕ್ಸೆಸಫುಲ್ ವ್ಯಕ್ತಿಗಳಾಗಿ. ನಿಮಗೆ ಯಾವುದೇ ವಿಷಯಗಳ ಮೇಲೆ ಅಂಕಣಗಳು ಬೇಕಿದ್ದರೆ ಇನ್ಟಾಗ್ರಾಮಲ್ಲಿ ನನ್ನನ್ನು ಫಾಲೋ ಮಾಡಿ ಡೈರೆಕ್ಟ ಮೆಸೇಜ್ ಮಾಡಿ. All the Best…
ಈ ಅಂಕಣ (Article) ನಿಮಗೆ ಇಷ್ಟವಾಗಿದ್ದರೆ ನಿಮ್ಮೆಲ್ಲ ಗೆಳೆಯರೊಡನೆ ಮತ್ತು ನೀವಿರುವ ಎಲ್ಲ ಕನ್ನಡ ಫೇಸ್ಬುಕ್ ಗ್ರೂಪಗಳಲ್ಲಿ ಇದನ್ನು ತಪ್ಪದೇ ಶೇರ್ (Share) ಮಾಡಿ. ಜೊತೆಗೆ ಪ್ರತಿದಿನ ಹೊಸಹೊಸ ಅಂಕಣಗಳನ್ನು, ಪ್ರೇಮಕಥೆಗಳನ್ನು, ಕವನಗಳನ್ನು ಉಚಿತವಾಗಿ ಓದಲು ತಪ್ಪದೆ ನನ್ನ ಫೇಸ್ಬುಕ್ ಪೇಜನ್ನು https://www.facebook.com/Directorsatishkumar/ (Director Satishkumar) ಲೈಕ್ ಮಾಡಿ.
Follow Me On : Facebook | Instagram | YouTube | Twitter
My Books : Kannada Books | Hindi Books | English Books
⚠ STRICT WARNING ⚠Content Rights :
ಈ ಅಂಕಣದ ಎಲ್ಲ ಹಕ್ಕುಗಳನ್ನು ಡೈರೆಕ್ಟರ್ ಸತೀಶಕುಮಾರ ಹಾಗೂ ರೋರಿಂಗ್ ಕ್ರಿಯೇಷನ್ಸ್ ಪ್ರೈವೇಟ್ ಲಿಮಿಟೆಡ್ ಕಂಪನಿ ವತಿಯಿಂದ ಸಂಪೂರ್ಣವಾಗಿ ಕಾಯ್ದಿರಿಸಲಾಗಿದೆ. ಡೈರೆಕ್ಟರ್ ಸತೀಶಕುಮಾರ ಅವರ ಅನುಮತಿಯಿಲ್ಲದೆ ಈ ಅಂಕಣದ ಯಾವುದೇ ಭಾಗವನ್ನು ಕಾಪಿ ಮಾಡುವಂತಿಲ್ಲ, ಬೇರೆ ಭಾಷೆಗಳಿಗೆ ಅನುವಾದಿಸುವಂತಿಲ್ಲ ಮತ್ತು ಇದನ್ನು ಬೇರೆಡೆಗೆ ಪ್ರಕಟಿಸುವಂತಿಲ್ಲ. ಯಾವುದೇ ಸಾಮಾಜಿಕ ಜಾಲತಾಣಗಳಲ್ಲಿ ಪೋಸ್ಟ್ ಮಾಡುವಂತಿಲ್ಲ. ಮುದ್ರಣ ಮಾಡುವಂತಿಲ್ಲ. ಒಂದು ವೇಳೆ ಯಾರಾದರೂ ಕಾಪಿ ರೈಟ್ಸ್ ನಿಯಮಗಳನ್ನು ಉಲ್ಲಂಘಿಸಿದರೆ ಅವರ ಮೇಲೆ ಸೂಕ್ತ ಕಾನೂನು ಕ್ರಮ ಕೈಗೊಳ್ಳಲಾಗುವುದು ಹಾಗೂ ಆಗಿರುವ ನಷ್ಟವನ್ನು ಅವರಿಂದಲೇ ವಸೂಲಿ ಮಾಡಲಾಗುವುದು.
All Rights of this article are fully reserved by Director Satishkumar and Roaring Creations Private Limited India. No part of this article can be copied, translated or re published anywhere without the written permission of Director Satishkumar. If such violation of copy rights found to us, then we legally punish to copy cats and recover our loss by them only.
© Director Satishkumar and Roaring Creations Private Limited, India.