ಹಾಯ್ ಗೆಳೆಯರೇ, ನಮಸ್ಕಾರ. ನಾನು ನಿಮ್ಮ ಸತೀಶಕುಮಾರ. ದೇಶದಲ್ಲಿ ಕರೋನಾ ಎಂಬ ವೈರಸ್ ಎಂಟ್ರಿಯಾಗಿ ಏನೆಲ್ಲ ಆಗ್ತಿದೆ ಎಂಬುದು ನಿಮಗೆಲ್ಲ ಈಗಾಗಲೇ ಚೆನ್ನಾಗಿ ಗೊತ್ತಿದೆ. ನಿಮಗೆ ಏನು ಮಾಡಬೇಕು? ಏನು ಮಾಡಬಾರದು? ಎಂಬುದನ್ನು ಈಗಾಗಲೇ ಟಿವಿ ಮಾಧ್ಯಮದವರು, ಪ್ರಧಾನಿಗಳು ನಿಮಗೆ ಚೆನ್ನಾಗಿ ಹೇಳಿದ್ದಾರೆ. ದಯವಿಟ್ಟು ಅವರು ಹೇಳಿದನ್ನು ಕೇಳಿ. ಅದರಂತೆ ನಡೆದುಕೊಳ್ಳಿ. ಏಕೆಂದರೆ ಕರೋನಾ ಎಂಬ ಮಹಾಮಾರಿಯಿಂದ ನಿಮ್ಮನ್ನು ಕಾಪಾಡಲು ನಿಮಗೆ ಮಾತ್ರ ಸಾಧ್ಯ.
ಒಂದು ವೇಳೆ ಈ ಕರೋನಾ ಮಾರಿ ದೇಶದ ತುಂಬೆಲ್ಲ ಸ್ಪ್ರೇಡ್ ಆದರೆ ನಿಮ್ಮನ್ನು ಈ ಕರೋನಾದಿಂದ ಕಾಪಾಡಲು ಯಾವ ವೈದ್ಯರಿಗೂ ಸಾಧ್ಯವಿಲ್ಲ, ನಿಮ್ಮ ದೇವರುಗಳಿಗೂ ಸಾಧ್ಯವಿಲ್ಲ. ಏಕೆಂದರೆ ಭಾರತದಲ್ಲಿ ಅಷ್ಟೊಂದು ದೊಡ್ಡ ಮಟ್ಟದಲ್ಲಿ ವೈದ್ಯಕೀಯ ಸೌಲಭ್ಯಗಳನ್ನು ಸೃಷ್ಟಿ ಮಾಡಲು ಸಾಧ್ಯವಿಲ್ಲ, ಲಕ್ಷಾಂತರ ವೆಂಟಿಲೆಂಟರಗಳನ್ನು ಒಮ್ಮೆಲೇ ತರಲು ಸಾಧ್ಯವಿಲ್ಲ, 10 ದಿನದಲ್ಲಿ ದೊಡ್ಡದೊಡ್ಡ ಆಸ್ಪತ್ರೆಗಳನ್ನು ಕಟ್ಟುವಷ್ಟು ಟೆಕ್ನಾಲಜಿ ಮತ್ತು ಹಣ ಎರಡು ನಮ್ಮ ಬಳಿಯಿಲ್ಲ. ಈಗಾಗಲೇ ಕುಸಿದು ಬಿದ್ದ GDP ಮತ್ತು ಎಕಾನಮಿಯಿಂದಾಗಿ ದೇಶದ ಅರ್ಥವ್ಯವಸ್ಥೆ ತತ್ತರಿಸಿ ಹೋಗಿದೆ. ಇಂಥ ಪರಿಸ್ಥಿತಿಯಲ್ಲಿ ಸಾಲ ಮಾಡಿ ನಿಮ್ಮೆಲ್ಲರನ್ನು ಕಾಪಾಡಲು ನಮ್ಮ ದೇಶದ ಸರ್ಕಾರಕ್ಕೆ ಎಷ್ಟೊಂದು ಕಷ್ಟ ಆಗುತ್ತೆ ಎಂಬುದನ್ನು ಅರ್ಥ ಮಾಡಿಕೊಳ್ಳಿ. ಅದಕ್ಕಾಗಿ ನೀವು ನಿಮ್ಮ ಮನೆಯಲ್ಲೇ ಇರಿ. ನಿಮ್ಮ ಮನೆಯೇ ನಿಮಗೆ ಸೇಫ್.
ಸೀಟಿಯಲ್ಲಿರುವವರು ನೀವು ಎಲ್ಲಿದಿರೋ ಅಲ್ಲೇ ಇರಿ. ಕುಂಟು ನೆಪಗಳನ್ನು ಹೇಳಿ ನಿಮ್ಮ ಹಳ್ಳಿಗಳಿಗೆ ಗೂಳೆ ಹೋಗಬೇಡಿ. ನಿಮ್ಮ ಮನೆಯವರ ಮೇಲೆ ನಿಮಗೆ ನಿಜವಾದ ಪ್ರೀತಿಯಿದ್ರೆ ನೀವು ಎಲ್ಲಿದಿರೋ ಅಲ್ಲೇ ಇರಿ. ಎಲ್ಲಿಗೂ ಗೂಳೆ ಹೋಗಬೇಡಿ. ಅನಾವಶ್ಯಕವಾಗಿ ಮನೆಯಿಂದ ಹೊರಗಡೆ ಬರಬೇಡಿ. ಎಲ್ಲೆಡೆಗೆ Social Distanceನ್ನು ಮೇಂಟೆನ ಮಾಡಿ. ನಿಮ್ಮ ಮನೆಯಲ್ಲಿಯು ಸಹ Social distance ಮೆಂಟೆನ್ ಮಾಡಿ. ಮತ್ತೊಂದ ಸಲ ಹೇಳ್ತೀನಿ ಕರೋನಾದಿಂದ ನಿಮ್ಮನ್ನು ಕಾಪಾಡಲು ನಿಮಗೆ ಮಾತ್ರ ಸಾಧ್ಯ. ಅದಕ್ಕಾಗಿ ದಯವಿಟ್ಟು ಮನೆಯಲ್ಲೇ ಇರಿ.
ಒಂದು ವಾರದ ಹಿಂದೆ ನಾವು ನಮ್ಮನ್ನು ಮನೆಯಲ್ಲಿ ಲಾಕಡೌನ ಮಾಡಿಕೊಂಡಿದ್ದರೆ ಇವತ್ತು ದೇಶವನ್ನು ಲಾಕಡೌನ ಮಾಡುವ ಕೆಟ್ಟ ಪರಿಸ್ಥಿತಿ ಬರ್ತಿರಲಿಲ್ಲ. ಅದಕ್ಕಾಗಿ ಮನೆಯಲ್ಲಿ ಆರಾಮಾಗಿರಿ. ಈ ಕರೋನಾ ವೈರಸದಿಂದ ಎಷ್ಟು ಜನ ಸಾಯ್ತಾರೋ ಅದಕ್ಕಿಂತಲೂ ಸಾವಿರ ಪಟ್ಟು ಜನ ಅದರ ಸೈಡ ಎಫೆಕ್ಟನಿಂದ ಸಾಯ್ತಾರೆ. ಅಂದರೆ ದೇಶ ಲಾಕಡೌನ ಆಗಿರುವುದರಿಂದ ಲಕ್ಷಾಂತರ ಕೂಲಿ ಕಾರ್ಮಿಕರ ಜೀವನ ಬೀದಿಗೆ ಬರುತ್ತದೆ. ಆಲ ಮೊಸ್ಟ ಆಲ್ ಹೊಸ ಬಿಜನೆಸಗಳು ದಿವಾಳಿಯಾಗುವ ಹಂತಕ್ಕೆ ಬರುತ್ತವೆ. ಪ್ರೈವೇಟ ಕಂಪನಿಗಳಲ್ಲಿ ಕೆಲಸ ಮಾಡುವ ಎಷ್ಟೋ ಜನ ಜಾಬ್ ಕಳೆದುಕೊಳ್ತಾರೆ. ಶೇರ್ ಮಾರ್ಕೆಟ್ ಕುಸಿದು ಬೀಳುತ್ತದೆ. ದೇಶದ GDP ಮತ್ತು ಎಕಾನಮಿಗೆ ಭಾರಿ ದೊಡ್ಡ ಹೊಡೆತ ಬೀಳುತ್ತದೆ.
ದೇಶವನ್ನು ಆದಷ್ಟು ಬೇಗನೆ ಮೊದಲಿನ ಸ್ಥಿತಿಗೆ ತರಲು ನಿಮ್ಮಿಂದ ಮಾತ್ರ ಸಾಧ್ಯ. ದೇಶವನ್ನು ಲಾಕಡೌನನಿಂದ ಬಿಡಿಸಬೇಕೆಂದರೆ ಕರೋನಾವನ್ನು ಕಂಟ್ರೋಲ್ ಮಾಡಬೇಕು. ಕರೋನಾಗಂತು ವ್ಯಾಕ್ಸಿನ್ ಇಲ್ಲ. ವ್ಯಾಕ್ಸಿನ ಸಿಗಬೇಕೆಂದರೆ ಮಿನಿಮಮ್ ಒಂದು ವರ್ಷವಾದರೂ ಸಮಯ ಬೇಕೇಬೇಕು. ಸದ್ಯಕ್ಕೆ ನಮ್ಮ ಬಳಿಯಿರುವ ವ್ಯಾಕ್ಸಿನ ಅಂದರೆ ನೀವಷ್ಟೇ. ನೀವು ಸ್ವಲ್ಪ ದಿನ ನಮ್ಮ ಸರ್ಕಾರ ಹೇಳಿದಂತೆ ಮನೆಯಲ್ಲಿದ್ದರೆ ಸಾಕು ಎಲ್ಲವೂ ಆದಷ್ಟು ಬೇಗನೆ ನಿಯಂತ್ರಣಕ್ಕೆ ಬರುತ್ತದೆ. ಈ ವರ್ಷ ಹಬ್ಬ ಹೋದ್ರೆ ಮುಂದಿನ ವರ್ಷ ಹಬ್ಬ ಮಾಡಬಹುದು, ಈ ವರ್ಷ ಜಾತ್ರೆ ಹೋದ್ರೆ ಮುಂದಿನ ವರ್ಷ ಜಾತ್ರೆ ಮಾಡಬಹುದು. ನೀವೇ ಹೋದ್ರೆ ಏನ ಹಬ್ಬ ಮಾಡ್ತೀರಾ? ಅದಕ್ಕಾಗಿ ಸ್ವಲ್ಪ ಅಡಜ್ಟ ಮಾಡಿಕೊಳ್ಳಿ. ಮನೆಯಲ್ಲೇ ಇರಿ.
ಈ ಕರೋನಾ ಮಾರಿ ಹೋದ ನಂತರ ನಮ್ಮ ದೇಶಕ್ಕೆ ದೊಡ್ಡ ಆರ್ಥಿಕ ಸಂಕಟ ಎದುರಾಗುತ್ತದೆ. ಅದಕ್ಕೆ ನಾವು ಸಜ್ಜಾಗಬೇಕು. ಬಹಳಷ್ಟು ಬಿಜನೆಸಗಳು ದಿವಾಳಿಯಾಗುವ ಹಂತಕ್ಕೆ ತಲುಪುತ್ತವೆ. ಅದಕ್ಕಾಗಿ ನೀವು ಬಿಜನೆಸಮ್ಯಾನ ಆಗಿದ್ದರೆ ನಿಮ್ಮ ಕಂಪನಿಗೆ ರಜಾ ಕೊಡಿ. ಒಂದು ವಾರದ ಹಿಂದೆಯೇ ನಾವು ನಮ್ಮ ಕಂಪನಿಗೆ ರಜಾ ಕೊಟ್ಟಿದ್ದೇವೆ. ಏಕೆಂದರೆ ದೇಶದ ಜನರು ಜೀವಂತವಾಗಿದ್ರೆ ಮಾತ್ರ ನಮ್ಮ ಬಿಜನೆಸ್. ಅವರೇ ಇರದಿದ್ರೆ ನಮ್ಮ ಬಿಜನೆಸ್ ಹೇಗೆ ನಡೆಯುತ್ತೆ? ನೀವು ನಿಮ್ಮ ಕಂಪನಿಗಳಿಗೆ ರಜೆ ಕೊಡಿ. ನೀವು ಮನೆಯಿದ್ದುಕೊಂಡು ನಿಮ್ಮ ಬಿಜನೆಸಗೆ ಮುಂದೆ ಬರಬಹುದಾದ ಆರ್ಥಿಕ ಸಂಕಟಕ್ಕೆ ಸಜ್ಜಾಗಿ. ಮನೆಯಲ್ಲಿ ಕುಳಿತುಕೊಂಡು ನಿಮ್ಮ ಬಿಜನೆಸ್ ಗ್ರೋಥಗೆ ಫ್ರೆಮವರ್ಕಗಳನ್ನು, ಸ್ಟ್ರ್ಯಾಟರ್ಜಿಗಳನ್ನು ತಯಾರು ಮಾಡಿ. ಏನು ಮಾಡಲು ಇಷ್ಟವಿಲ್ಲದಿದ್ದರೂ ಮನೆಯಲ್ಲೇ ಇರಿ. ನಿಮ್ಮ influence use ಮಾಡಿಕೊಂಡು ಹೊರಗಡೆ ಸುತ್ತಾಡಬೇಡಿ.
ಇನ್ನೂ ಯಾರ್ಯಾರು ಪ್ರೈವೇಟ ಕಂಪನಿಗಳಲ್ಲಿ ಜಾಬ್ ಮಾಡುತ್ತಿದ್ದೀರೋ ಅವರು ನಿಮ್ಮ ಸ್ಕೀಲಸೆಟಗಳನ್ನು ಇಂಪ್ರೂವ್ ಮಾಡಿಕೊಳ್ಳಿ. ಮನೆಯಲ್ಲಿ ಆರಾಮಾಗಿ ಕುಳಿತುಕೊಂಡು ಹೊಸಹೊಸ ಟೆಕ್ನಿಕಗಳನ್ನು ಕಲಿಯಿರಿ. ನಿಮ್ಮ ನಾಲೇಡ್ಜನ್ನು ಹೆಚ್ಚಿಸಿಕೊಳ್ಳಿ. ನಿಮಗೆ ಸಿಕ್ಕಿರುವ ಈ ಸಮಯಾವಕಾಶವನ್ನು ಸರಿಯಾಗಿ ಬಳಸಿಕೊಳ್ಳಿ. ಏಕೆಂದರೆ ನಿಮ್ಮ ಜಾಬ್ ಡೆಂಜರ ಝೋನನಲ್ಲಿದೆ. ನೀವು ಕೆಲಸ ಮಾಡುತ್ತಿರುವ ಕಂಪನಿ ಮುಂದೆ ಬರಬಹುದಾದ ಆರ್ಥಿಕ ಸಂಕಟವನ್ನು ಎದುರಿಸುವಲ್ಲಿ ವಿಫಲವಾದರೆ ನಿಮ್ಮ ಜಾಬ್ 100% ಹೋಗುತ್ತೆ. ಅದಕ್ಕಾಗಿ ನಿಮ್ಮ ತಯಾರಿಯಲ್ಲಿ ನೀವಿರಿ. ಮನೆಯಲ್ಲಿ ತೆಪ್ಪಗೆ ಕುಳಿತುಕೊಂಡು ನಿಮ್ಮ ಸ್ಕೀಲ ಸೆಟನ್ನು ಇಂಪ್ರೂವ್ ಮಾಡಿಕೊಳ್ಳಿ.
ಇನ್ನೂ ಸ್ಟೂಡೆಂಟಗಳು ಅಷ್ಟೇ. ಸುಮ್ಮನೆ ಮನೆಯಲ್ಲಿ ಕುಳಿತುಕೊಂಡು ನೆಕ್ಸ್ಟ ಇಯರಗೆ ಪ್ರೀಪೇರಾಗಿ. ನಿಮ್ಮತ್ರ ಸ್ಟಡಿ ಮಟಿರಿಯಲ್ ಇಲ್ಲದಿದ್ರೆ ಇಂಟರನೆಟನಿಂದ ಡೌನಲೋಡ ಮಾಡಿಕೊಂಡು ಸ್ಟಡಿ ಮಾಡಿ. ಗೂಗಲನ್ನು ನಿಮ್ಮ ಗುರು ಮಾಡಿಕೊಳ್ಳಿ. ಯಾವುದೇ ಕಾರಣಕ್ಕೂ ಹೊರಗೆ ಸುತ್ತಾಡಬೇಡಿ. ಗ್ಯಾಪಲ್ಲಿ ಆಟವಾಡೋಕೆ ಹೋಗೋ ಪ್ಲ್ಯಾನಗಳನ್ನು ಮಾಡಬೇಡಿ. ಎಲ್ಲ ಪ್ಲ್ಯಾನಗಳನ್ನು ಕ್ಯಾನ್ಸಲ್ ಮಾಡಿ.
ಇನ್ನೂ ಮಾಡೋಕೆ ಏನು ಕೆಲಸ ಇಲ್ಲದವರು ಮನೆಯಲ್ಲಿ ಆರಾಮಾಗಿ ಕುಳಿತುಕೊಂಡು ಟಿವಿ ನೋಡಿ. ಮೂವಿಗಳನ್ನು ನೋಡಿ, ಬ್ಲಾಗಗಳನ್ನು ಓದಿ, ಬುಕ್ಸಗಳನ್ನು ಓದಿ. ಇಲ್ಲದಿದ್ರೆ ಚೆನ್ನಾಗಿ ನಿದ್ರೆ ಮಾಡಿ. ಆದ್ರೆ ಹೊರಗಡೆ ಏನ ಸಮಾಚಾರ ಅಂತಾ ನೋಡೋಕೆ ಮನೆಯಿಂದ ಹೊರ ಬರಬೇಡಿ. ಕರೋನಾದಿಂದ ನಿಮ್ಮನ್ನು ಕಾಪಾಡಲು ನಿಮಗೆ ಮಾತ್ರ ಸಾಧ್ಯ. ನಮ್ಮ ದೇಶವನ್ನು ಆದಷ್ಟು ಬೇಗನೆ ಲಾಕಡೌನನಿಂದ ಬಿಡಿಸಲು ನಿಮ್ಮಿಂದ ಮಾತ್ರ ಸಾಧ್ಯ.
ಈ ಅಂಕಣಕ್ಕೆ ಲೈಕ ಮಾಡಿ, ಕಮೆಂಟ ಮಾಡಿ ನಿಮ್ಮ ಟೈಮ ಮತ್ತು ಎನರ್ಜಿಯನ್ನು ವೇಸ್ಟ ಮಾಡಬೇಡಿ. ನೀವು ನಿಮ್ಮ ಮನೆಯಲ್ಲಿ ಕೆಲವು ದಿನಗಳ ಕಾಲ ಸುಮ್ಮನಿದ್ರೆ ನನಗಷ್ಟೇ ಸಾಕು. ಏಕೆಂದರೆ ದೇಶ ಬೇಗನೆ ಮೊದಲಿನಂತಾಗಬೇಕಿದೆ. ಸದ್ಯಕ್ಕೆ ಎಲ್ಲರಂತೆ ನನ್ನ ಬಿಜನೆಸ್ ಕೂಡ Zero Working Modeನಲ್ಲಿದೆ. ಎಲ್ಲರೂ ಮನೆಯಲ್ಲಿರಿ ಮತ್ತು ಸೇಫಾಗಿರಿ. ಕೊನೆಗೆ ಒಂದು ಸಣ್ಣ ರಿಕ್ವೇಸ್ಟ. ನಮಗಾಗಿ ಹಗಲು ರಾತ್ರಿ ಕೆಲಸ ಮಾಡ್ತಿರೋ ನಮ್ಮ ದೇಶದ ಎಲ್ಲ ವೈದ್ಯಕೀಯ ಸಿಬ್ಬಂದಿಗಳಿಗೆ, ಪೊಲೀಸ್ ಇಲಾಖೆಗೆ, ನ್ಯೂಜ ಚಾನೆಲಗಳಿಗೆ ಮತ್ತು ಸರ್ಕಾರಕ್ಕೆ ನೀವೆಲ್ಲರೂ ಮನೆಯಲ್ಲೇ ಇರುವ ಮೂಲಕ ತಪ್ಪದೆ ಒಂದು ಥ್ಯಾಂಕ್ಸ್ ಹೇಳಿ. ಧನ್ಯವಾದಗಳು and Take care.