ಹಾಯ್ ಗೆಳೆಯರೇ, ನಮಸ್ಕಾರ ನಾನು ನಿಮ್ಮ ಸತೀಶಕುಮಾರ. ಇವತ್ತಿನ ಎಪಿಸೋಡಗೆ ಸೆಲೆಕ್ಟಾದ ಪ್ರಶ್ನೆ ಇಂತಿದೆ ;
ಪ್ರಶ್ನೆ : ನಾನು ಸಹಾಯ ಮಾಡಿದ ವ್ಯಕ್ತಿಗಳು ನನ್ನ ಕಷ್ಟದ ಸಮಯದಲ್ಲಿ ಸಹಾಯ ಮಾಡುವುದಿಲ್ಲ, ಸಹಕಾರ ಕೊಡುವುದಿಲ್ಲ. ಇದಕ್ಕೆ ಸಂಬಂಧಪಟ್ಟ ವಿಡಿಯೋ ಮಾಡಿ ಸರ್ ಪ್ಲೀಜ…
ಓಕೆ ವೆಲ್. ಇದೊಂದು ತರಹದ ಮಾನಸಿಕ ಮೋಸವಾಗಿದೆ. ಎಮೋಷನಲ್ ಚೀಟಿಂಗ ಆಗಿದೆ. ನಿಮಗೆ ಜನ ಯಾಕೆ ಮೋಸ ಮಾಡುತ್ತಾರೆ ಎಂಬುದು ಗೊತ್ತಾದರೆ ನೀವು ಇಂತಹ ಸಂದರ್ಭಗಳಿಂದ ಸೇಫಾಗಬಹುದು. ಅದಕ್ಕಾಗಿ ಇವತ್ತಿನ ಎಪಿಸೋಡನಲ್ಲಿ “ಯಾಕೆ ನಿಮಗೆ ಪದೇಪದೇ ಮೋಸವಾಗ್ತಿದೆ?” ಎಂಬುದನ್ನು ನೋಡೊಣಾ. ಲೆಟ್ಸ ಬಿಗಿನ್.
ಜನ ಇಂಥದ್ದೆ ಕಾರಣಕ್ಕಾಗಿ ಮೋಸ ಮಾಡುತ್ತಾರೆ ಅಂತಾ ಎಗ್ಜಾಕ್ಟಾಗಿ ಹೇಳೊಕ್ಕಾಗಲ್ಲ. ಬೇರೆಬೇರೆ ಜನ ಬೇರೆಬೇರೆ ಕಾರಣಗಳಿಗಾಗಿ ಮೋಸ ಮಾಡುತ್ತಾರೆ. ಜನ ಸ್ವಾರ್ಥಕ್ಕಾಗಿ, ಸೇಡಿಗಾಗಿ, ಸಂಪತ್ತಿಗಾಗಿ, ಸೌಂದರ್ಯಕ್ಕಾಗಿ, ಸೆಕ್ಸಗಾಗಿ, ಸ್ವಾತಂತ್ರ್ಯಕ್ಕಾಗಿ, ಹಣಕ್ಕಾಗಿ, ಈಗೋಗಾಗಿ, ದುರಾಸೆಗಾಗಿ, ಜಲಸಿಗಾಗಿ, ಪ್ರೀತಿಗಾಗಿ, ದ್ವೇಷಕ್ಕಾಗಿ ಮೋಸ ಮಾಡುತ್ತಾರೆ. ಜನ ನಿಯತ್ತಿನ ಕೊರತೆಯಿಂದಾಗಿ, ಹತಾಶೆಯಿಂದಾಗಿ, ನೋವಿನಿಂದಾಗಿ ಮೋಸ ಮಾಡುತ್ತಾರೆ. ಜನ ಕೆಟ್ಟ ಪರಿಸ್ಥಿತಿಗಳಲ್ಲಿ ಸಿಲುಕಿದಾಗಲೂ ಬೇರೆಯವರಿಗೆ ಮೋಸ ಮಾಡುತ್ತಾರೆ. ಜನರಿಗೆ ನಿಮ್ಮಿಂದ ನೋವಾದಾಗ, ನಿರಾಸೆಯಾದಾಗ, ಅವಮಾನವಾದಾಗ, ಬೋರಾದಾಗ, ಏನಾದರೂ ಒಂದು ಕೊರತೆಯಾದಾಗ ಅವರು ನಿಮಗೆ ಮೋಸ ಮಾಡುತ್ತಾರೆ. ಅವರು ಬಯಸಿದ್ದು ನಿಮ್ಮಿಂದ ಸಿಗದಿದ್ದಾಗ, ನಿಮ್ಮ ಸಹಾಯ ಅವರಿಗೆ ಸಿಗದಿದ್ದಾಗ, ಅವರ ಆಸೆಗಳು ನಿಮ್ಮಿಂದ ಈಡೇರದಿದ್ದಾಗ ಅವರು ನಿಮಗೆ ಮೋಸ ಮಾಡುತ್ತಾರೆ. ಈ ರೀತಿ ಬೇರೆಬೇರೆ ಜನ ಬೇರೆಬೇರೆ ಕಾರಣಗಳಿಗಾಗಿ ಮೋಸ ಮಾಡುತ್ತಾರೆ. ಆದರೆ ಎಗ್ಜಾಕ್ಟಾಗಿ ನಿಮಗೆ ಯಾಕೆ ಮೋಸ ಮಾಡ್ತಾರೆ ಅನ್ನೋದಕ್ಕೆ ಕೇವಲ ಎರಡೇ ಎರಡು ಕಾರಣಗಳಿವೆ. ಅದರಲ್ಲಿ ಒಂದು – ನಿಮ್ಮ ಅತಿಯಾದ ಒಳ್ಳೆತನ. ಎರಡನೆಯದ್ದು – ನಿಮ್ಮ ವಿಕನೇಸ್.
Reason 1 : Your Goodness
ನೀವು ಬಹಳಷ್ಟು ಒಳ್ಳೆಯವರಾದರೆ ಜನ ನಿಮ್ಮನ್ನು ಮಿಸಯುಜ ಮಾಡಿಕೊಳ್ತಾರೆ. ಕೆಲವರು ನಿಮ್ಮ ಸಂಪತ್ತನ್ನು ಲೂಟಿ ಮಾಡಿದರೆ, ಕೆಲವರು ನಿಮ್ಮ ಸೌಂದರ್ಯವನ್ನು ಲೂಟಿ ಮಾಡುತ್ತಾರೆ. ನಿಮ್ಮನ್ನು ಅವರ ಸ್ವಾರ್ಥಕ್ಕಾಗಿ ಸಂಪೂರ್ಣವಾಗಿ ಬಳಸಿಕೊಂಡು ನಂತರ ನಿಮ್ಮನ್ನು ಬೀದಿಗೆ ಬೀಸಾಕುತ್ತಾರೆ. ನಿಮ್ಮಿಂದ ಎಷ್ಟಾಗುತ್ತೋ ಅಷ್ಟು ಸಹಾಯವನ್ನು ಪಡೆದುಕೊಂಡು ನಿಮ್ಮ ಸ್ನೇಹವನ್ನು ಕಟ ಮಾಡಿಕೊಳ್ಳುತ್ತಾರೆ. ನಿಮಗೆ ಎಮೋಷನಲಿ ಮೋಸ ಮಾಡಿ ನಿಮಗೆ ಹರ್ಟ ಮಾಡಿ, ನೀವೇ ಅವರಿಗೆ ಮೋಸ ಮಾಡಿರುವಿರಿ ಎಂಬಂತೆ ಬಿಲ್ಡಪ ಕೊಟ್ಟು ನಿಮಗೆ ಮತ್ತಷ್ಟು ಹರ್ಟ ಮಾಡುತ್ತಾರೆ. ಅದಕ್ಕಾಗಿ ಅವಶ್ಯಕತೆಗಿಂತ ಅಧಿಕವಾಗಿ ಯಾರಿಗೂ ಒಳ್ಳೆಯವರಾಗಬೇಡಿ, ಅವಶ್ಯಕತೆಗಿಂತ ಅಧಿಕವಾಗಿ ಯಾರಿಗೂ ಅವೇಲೇಬಲ ಆಗಬೇಡಿ. ಅವಶ್ಯಕತೆ ಎಷ್ಟಿದಿಯೋ ಅಷ್ಟೇ ಒಳ್ಳೆಯವರಾಗಿ, ಅವಶ್ಯಕತೆ ಎಷ್ಟಿದಿಯೋ ಅಷ್ಟೇ ಹೆಲ್ಪ ಮಾಡಿ. ಒಳ್ಳೆಯವರಾಗುವುದು ತಪ್ಪಲ್ಲ. ಆದರೆ ನಿಮಗೆ ಕೆಟ್ಟದನ್ನು ಮಾಡಿಕೊಳ್ಳುವಷ್ಟು ಒಳ್ಳೆಯರಾಗಬೇಡಿ. ನಿಮ್ಮ ಮನೆಗೆ ಬೆಂಕಿ ಹಚ್ಚಿ ಊರ ಜನರನ್ನು ಚಳಿಯಿಂದ ಕಾಪಾಡುವ ಮೂರ್ಖತನವನ್ನು ಮಾಡಬೇಡಿ. ಏಕೆಂದರೆ ಊರು ಉಪಕಾರವರಿಯಲ್ಲ ; ಹೆಣ ಸಿಂಗಾರವರಿಯಲ್ಲ.
Reason 2 : Your Weakness
ಈ ಜಗತ್ತಿನಲ್ಲಿ ಎಲ್ಲರೂ ದುರ್ಬಲರನ್ನೇ ದುರ್ಬಳಕೆ ಮಾಡಿಕೊಳ್ಳುತ್ತಾರೆ. ನಿಮ್ಮಲ್ಲಿ ಏನಾದರೂ ಒಂದು ವಿಕನೆಸ ಇದ್ದಾಗಲೇ ಜನ ನಿಮಗೆ ಬೇಗನೆ ಮೋಸ ಮಾಡುತ್ತಾರೆ.
ಉದಾಹರಣೆಗೆ : ನೀವು ತಿರುಗಿ ಬೀಳಲ್ಲ, ತಿರುಗೇಟ ಕೊಡಲ್ಲ ಅಂತಾನೆ ಕೆಲವರು ನಿಮ್ಮನ್ನು ವಂಚಿಸುತ್ತಾರೆ. ಬಡವರು, ಅಮಾಯಕರು, ದುರ್ಬಲರು ತಿರುಗಿ ಬೀಳಲ್ಲ, ಕೇಸ ಹಾಕಲ್ಲ ಅಂತಾನೆ ಅವರನ್ನು ಎಲ್ಲ ತರಹದಿಂದ ವಂಚಿಸುತ್ತಾರೆ, ಶೋಷಿಸುತ್ತಾರೆ.
ನಿಮ್ಮ ವಿಕನೆಸ ಏನು ಬೇಕಾದರೂ ಆಗಿರಬಹುದು. Lack of Money, Lack of Knowledge, Lack of Courage ಆಗಿರಬಹುದು. ನಿಮ್ಮ ಅತಿಯಾದ ಇನ್ನೊಸೆನ್ಸ, ಗುಡನೆಸ್ ಸಹ ನಿಮ್ಮ ವಿಕನೆಸ ಆಗಬಹುದು. ನಿಮ್ಮ ಬೇಜಾವಬ್ದಾರಿ, ಬಿಜಿ ಲೈಫ, ಈಗೋ, ಆ್ಯಂಗರ, ಬ್ಯಾಡ ಬಿಹೇವಿಯರ್, ಬ್ಯಾಡ್ ಹ್ಯಾಬಿಟ್ಸ, ಸ್ಟೂಪಿಡಿಟಿ ಸಹ ನಿಮ್ಮ ದೊಡ್ಡ ವಿಕನೆಸ ಆಗಿರಬಹುದು. ನೀವು ನಿಮ್ಮ ರಿಸ್ಪಾನ್ಸಿಬಿಲಿಟಿಯನ್ನು ನಿಭಾಯಿಸುವಲ್ಲಿ ಫೇಲ ಆದ್ರೆ ಅದು ನಿಮ್ಮ ವಿಕನೆಸ ಆಗಬಹುದು. ಸೋ ನಿಮ್ಮ ವಿಕನೆಸ ಏನು ಅಂತಾ ಪತ್ತೆ ಹಚ್ಚಿ ಮತ್ತು ಅದನ್ನು ಸರಿ ಮಾಡ್ಕೊಳಿ. ನೀವು ನಿಮ್ಮ ಲೈಫ ಪಾರ್ಟರನ ಮೆಂಟಲ, ಫಿಜಿಕಲ, ಫೈನಾನ್ಸಿಯಲ್, ಎಮೋಷನಲ್ ನೀಡ್ಸಗಳನ್ನು ಈಡೇರಿಸದಿದ್ದರೆ ಅದು ಕೂಡ ನಿಮ್ಮ ವಿಕನೆಸ ಆಗುತ್ತದೆ. ಆಗ ನಿಮ್ಮ ಲೈಫ ಪಾರ್ಟನರ ಸಹ ನಿಮಗೆ ಮೋಸ ಮಾಡಬಹುದು. ಅದಕ್ಕಾಗಿ ನಿಮ್ಮ ವಿಕನೆಸ್ಸನ್ನು ಪತ್ತೆ ಹಚ್ಚಿ.
ಬೇರೆಯವರಿಗೆ ಸಾಧ್ಯ ಅಂತಾನೆ ಅವರು ನಿಮಗೆ ಮೋಸ ಮಾಡುತ್ತಾರೆ. ನೀವೇ ಅಲರ್ಟಾಗಿದ್ದರೆ, ಸ್ಟ್ರಾಂಗ್ ಆಗಿದ್ದರೆ, ಅವಕಾಶ ಕೊಡದಿದ್ದರೆ ಅವರೇಗೆ ನಿಮಗೆ ಮೋಸ ಮಾಡ್ತಾರೆ? ಏನಾದರೂ ಒಂದು ಲೂಪಹೋಲ ಇದ್ದಾಗ ಮಾತ್ರ ಸೆಕ್ಯುರಿಟಿ ಸಿಸ್ಟಮನ್ನು ಕ್ರ್ಯಾಕ್ ಮಾಡಬಹುದು. ಅದೇ ರೀತಿ ನಿಮ್ಮಲ್ಲಿ ಏನೋ ಒಂದು ವಿಕನೆಸ ಇದ್ದಾಗ ಮಾತ್ರ ನಿಮಗೆ ಮೋಸ ಮಾಡಲು ಸಾಧ್ಯ. ಅದಕ್ಕಾಗಿ ನಿಮ್ಮ ವಿಕನೆಸ್ಸನ್ನು ಪತ್ತೆ ಹಚ್ಚಿ ಮತ್ತದನ್ನು ಸುಧಾರಿಸಿಕೊಳ್ಳಿ. ನಿಮ್ಮ ವಿಕನೆಸ ಬೇರೆಯವರಿಗಿಂತ ನಿಮಗೆ ಚೆನ್ನಾಗಿ ಗೊತ್ತಿರುತ್ತೆ. So correct it and Be Strong and be safe. ಧನ್ಯವಾದಗಳು….