Business Lesson – 6
ಹಾಯ್ ಗೆಳೆಯರೇ, ಹೊಸ ಬಿಜನೆಸ್ ಸ್ಟಾರ್ಟ ಮಾಡುವಾಗ ಎಲ್ಲರೂ ಒಂದಲ್ಲ ಒಂದು ತಪ್ಪನ್ನು ಮಾಡಿಯೇ ಮಾಡುತ್ತಾರೆ. ನಾನು ಸಹ ಕೆಲ ತಪ್ಪುಗಳನ್ನು ಮಾಡಿರುವೆ. ಅವುಗಳನ್ನು ಇವತ್ತಿನ ಎಪಿಸೋಡನಲ್ಲಿ ಶೇರ್ ಮಾಡುತ್ತಿರುವೆ. ಏಕೆಂದರೆ ನೀವು ಆ ತಪ್ಪುಗಳನ್ನು ಮಾಡಬಾರದು ಎಂಬ ಉದ್ದೇಶವಷ್ಟೇ. ನಾನು ಹೊಸ ಬಿಜನೆಸ್ ಸ್ಟಾರ್ಟ ಮಾಡುವಾಗ ಮಾಡಿದ ತಪ್ಪುಗಳು ಇಂತಿವೆ ;
Mistake – 1 : ಸರಿಯಾದ ಅಡ್ವಟೈಜಿಂಗ್ ಪ್ಲ್ಯಾನ್ ಮಾಡಿರಲಿಲ್ಲ.
ನಾವು ನಮ್ಮ ಬಿಜನೆಸ್ ಸ್ಟಾರ್ಟ ಮಾಡುವಾಗ ಬಿಜನೆಸ್ ರೆಜಿಸ್ಟ್ರೇಶನ್, ಬಿಜನೆಸ್ ಲಿಗಲೈಜೆಷನ, ಗವರ್ನಮೆಂಟ ಪರ್ಮಿಷನ್, ಲೀಗಲ್ ಅಡ್ವಜರಿ ಟೀಮ, ಫೈನಾನ್ಸಿಯಲ್ ಅಡ್ವಜರಿ ಟೀಮ, ಗುಡ್ ಕ್ವಾಲಿಟಿ ಇಕ್ವೀಪಮೆಂಟ, ಕಾಪಿರೈಟ್ಸ, ಪೇಟೆಂಟ್ಸ, ಟ್ರೆಡಮಾರ್ಕ ಇತ್ಯಾದಿಗಳ ಬಗ್ಗೆ ಸರಿಯಾಗಿ ಗಮನ ಹರಿಸಿ ಅಚ್ಚುಕಟ್ಟಾಗಿ ಮಾಡಿದ್ದೇವು. ಆದರೆ ನಾವು ಸರಿಯಾದ ಅಡ್ವಟೈಜಿಂಗ್ ಪ್ಲ್ಯಾನ ಮಾಡುವಲ್ಲಿ ವಿಫಲವಾದೆವು. ನಾವು ಹೆಚ್ಚಿನ ದುಡ್ಡನ್ನು ಆಫಲೈನ ಅಡ್ವಟೈಜಿಂಗನಲ್ಲಿ ವ್ಯರ್ಥ ಮಾಡಿದೆವು. ಆಫಲೈನ ಅಡ್ವಟೈಜಿಂಗನಿಂದಾಗಿ ನಮಗೆ ನಮ್ಮ ಆ್ಯಕ್ಯುರೇಟ ಕಸ್ಟಮರ್ಸಗಳನ್ನು ಟಾರ್ಗೆಟ ಮಾಡಲಾಗಲಿಲ್ಲ. ಅದಕ್ಕಾಗಿ ನಮಗೆ ಸ್ವಲ್ಪ ನಷ್ಟವಾಯಿತು. ಆದರೆ ನಾವೀಗ ಈ ತಪ್ಪನ್ನು ತಿದ್ದಿಕೊಂಡಿದ್ದೇವೆ. ಈಗ ನಾವು ನಮ್ಮ ಸೇಲ್ಸ ಆ್ಯಂಡ್ ಮಾರ್ಕೆಟಿಂಗಗಾಗಿ ಆನಲೈನ ಅಡ್ವಟೈಜಿಂಗನ್ನು ಮಾತ್ರ ಬಳಸುತ್ತಿದ್ದೇವೆ. ಇದರಿಂದ ನಮಗೆ ನಾವೆಂದುಕೊಂಡಂತೆ ಪ್ರೋಫಿಟಾಗಿದೆ. ಇದರ ಬಗ್ಗೆ ನೆಕ್ಸ್ಟ ಎಪಿಸೋಡನಲ್ಲಿ ಮತ್ತಷ್ಟು ಡಿಟೇಲಾಗಿ ಹೇಳುವೆ.
Mistake – 2 : ಫೇಕ್ ಫ್ರೆಂಡ್ಸಗಳನ್ನು ಟೀಮನಲ್ಲಿ ಸೇರಿಸಿಕೊಂಡಿದ್ದು.
ನಾವು ಬಿಜನೆಸ್ ಸ್ಟಾರ್ಟ ಮಾಡಿದಾಗ ನಮ್ಮ ಕೆಲವೊಂದಿಷ್ಟು ಕಾಲೇಜ ಫ್ರೆಂಡ್ಸಗಳನ್ನು ಅನಾವಶ್ಯಕವಾಗಿ ನಮ್ಮ ಟೀಮನಲ್ಲಿ ಸೇರಿಸಿಕೊಂಡು ಒಂದು ದೊಡ್ಡ ತಪ್ಪನ್ನು ಮಾಡಿದೆವು. ಇವರಿಗೆ ಮಾಡಲು ಯಾವುದೇ ಕೆಲಸವಿಲ್ಲ. ಅದಕ್ಕಾಗಿ ಗವರ್ನಮೆಂಟ ಜಾಬ್ ಸಿಗುವ ತನಕ ನಮ್ಮೊಂದಿಗೆ ಟೈಮಪಾಸ ಮಾಡಲು, ಬಿಟ್ಟಿ ಕ್ಯಾಮರಾ, ಕಂಪ್ಯೂಟರ್, ಕಾರ ಯುಜ ಮಾಡಿಕೊಳ್ಳಲು ನಮ್ಮ ಟೀಮಿಗೆ ಜಾಯಿನಾಗುತ್ತಿದ್ದಾರೆ, ಕೆಲಸ ಮಾಡಲು ಅಲ್ಲ ಎಂಬುದನ್ನು ಗುರ್ತಿಸುವಲ್ಲಿ ನಾವು ವಿಫಲವಾದೆವು. ಈ ಕೋತಿಗಳು ತಾವು ಕೆಡುವುದಲ್ಲದೇ ನಮ್ಮ ಇಡೀ ಟೀಮನ್ನು ಕೆಡಿಸುವ ಪ್ಲ್ಯಾನ ಮಾಡಿದ್ದರು. ಅದಕ್ಕಾಗಿ ನೀವು ಬಿಜನೆಸ್ ಸ್ಟಾರ್ಟ ಮಾಡಿದಾಗ ನಿಮ್ಮ ಕ್ಲಾಸಮೇಟ್ಸಗಳನ್ನು, ಫೇಕ್ ಫ್ರೆಂಡ್ಸಗಳನ್ನು ನಿಮ್ಮ ಟೀಮಲ್ಲಿ ಸೇರಿಸಿಕೊಳ್ಳಬೇಡಿ. ಅವರು ಹಣ ಹೂಡಿಕೆ ಮಾಡಿ ಬಿಜನೆಸ್ ಪಾರ್ಟನರ ಆಗಿದ್ದರೆ ಅಥವಾ ಒಳ್ಳೆ ಮನಸ್ಸಿನಿಂದ ಹೆಲ್ಪ್ ಮಾಡ್ತಿದ್ರೆ ಓಕೆ, ಏನು ಸಮಸ್ಯೆಯಿಲ್ಲ. ಆದರೆ ಸುಮ್ಮನೆ ಟೈಮಪಾಸಗಾಗಿ ಟೀಮಲ್ಲಿ ಜಾಯಿನಾಗುತ್ತಿದ್ದರೆ ಅವರನ್ನು ಸೇರಿಸಿಕೊಳ್ಳಬೇಡಿ. ಸೇರಿಸಿಕೊಂಡರೆ ತುಂಬಾ ನಷ್ಟವಾಗುತ್ತದೆ. ಈ ಟೈಮಪಾಸ ಫ್ರೆಂಡ್ಸಗಳನ್ನು ಸಂಪೂರ್ಣವಾಗಿ ಅವೈಡ ಮಾಡಿದ ದಿನದಿಂದಲೇ ನಮ್ಮ ಟೀಮಲ್ಲಿ ಒಂದು ಒಳ್ಳೇ ಬಾಂಡಿಂಗ ಮತ್ತು ಫ್ರೆಂಡ್ಲಿನೆಸ್ ಬೆಳೆಯಿತು. ಈಗ ನಮ್ಮ ಟೀಮ ಸಾಕಷ್ಟು ಫೀಟ್ ಆ್ಯಂಡ್ ಪವರಫುಲ್ಲಾಗಿದೆ.
Mistake – 3 : ಎಂಪ್ಲಾಯರ್ ಅಗ್ರಿಮೆಂಟನ್ನು ಮಾಡಿಕೊಳ್ಳಲು ತಡ ಮಾಡಿದ್ದು.
ನಾವು ನಮ್ಮ ಬಿಜನೆಸ್ಸನ್ನು ಸ್ಟಾರ್ಟ ಮಾಡಿದಾಗ ಆರಂಭದಲ್ಲಿಯೇ ಒಂದು ದೊಡ್ಡ ಸಮಸ್ಯೆ ಎದುರಾಯಿತು. ಅದನ್ನು ಬಗೆ ಹರಿಸುವುದರಲ್ಲಿ ಬಿಜಿಯಾಗಿ ನಾವು ಎಂಪ್ಲಾಯರ ಅಗ್ರಿಮೆಂಟನ್ನು ಮಾಡಿಕೊಳ್ಳಲು ಸ್ವಲ್ಪ ತಡ ಮಾಡಿದೆವು. ಅದಕ್ಕಾಗಿ ನಮ್ಮ ಕೆಲವು ಕೆಲಸಗಾರರು ನಮಗೆ ತಲೆ ನೋವಾದರು. ನಮ್ಮ ಕಂಪನಿ ಸೇರಿಕೊಂಡು ಕೆಲಸ ಕಲಿತು ಬೇರೆ ಕಂಪನಿಯಲ್ಲಿ ಕೆಲಸ ಮಾಡಲು ಪ್ರಾರಂಭಿಸಿದರು. ಜೊತೆಗೆ ನಮ್ಮ ಕೆಲವು ವರ್ಕಿಂಗ್ ಸ್ಟ್ರ್ಯಾಟರ್ಜಿಗಳನ್ನು ಲೀಕ್ ಮಾಡಿದರು. ಇದರಿಂದ ನಮ್ಮ ಕಂಪನಿ ಟ್ರೇನಿಂಗ್ ಸೆಂಟರ ಆಗೋ ಹಂತಕ್ಕೆ ತಲುಪಿತ್ತು. ಆದರೆ ನಾವೀಗ ಈ ತಪ್ಪನ್ನು ಸರಿಯಾಗಿ ತಿದ್ದಿಕೊಂಡಿದ್ದೇವೆ. ನಮ್ಮ ಕಂಪನಿಯಲ್ಲಿ ಕೆಲಸ ಮಾಡುವ ಎಲ್ಲರತ್ರಾನು ಎಂಪ್ಲಾಯರ್ ಅಗ್ರಿಮೆಂಟ ಮತ್ತು NDAಗಳಂಥ ಅಗ್ರಿಮೆಂಟಗಳಿಗೆ ಸಾಯಿನ ಮಾಡಿಸಿಕೊಂಡಿದ್ದೇವೆ. ಇದರಿಂದ ನಮ್ಮ ಕಂಪನಿಯ ಎಲ್ಲ ಸಕ್ಸೆಸ್ ಸೆಕ್ರೆಟ್ಸಗಳು ಸೆಕ್ರೆಟಾಗೇ ಇರುತ್ತವೆ. ಹೊರಗಡೆ ಲೀಕ ಆಗಲ್ಲ. ಅಲ್ಲದೆ ನಮ್ಮ ಎಂಪ್ಲಾಯರಗಳು ನಮ್ಮ ಕಾಂಪಿಟೇಟರ ಆಗಲ್ಲ ಮತ್ತು ನಮ್ಮ ಕಾಂಪಿಟೇಟರ್ ಜೊತೆ ಕೈ ಜೋಡಿಸಲ್ಲ. ಜೋಡಿಸಿದ್ರೆ ಅವರು ಜೀವನಪೂರ್ತಿ ಕಾನೂನಿನ ಸಲಾಕೆಯಿಂದ ಹೊಡೆಸಿಕೊಳ್ಳಬೇಕಾಗುತ್ತದೆ. ಸೋ ಗೆಳೆಯರೇ, ನೀವು ಬಿಜನೆಸ್ ಸ್ಟಾರ್ಟ ಮಾಡಿದಾಗ ಅಗತ್ಯವಿರುವ ಎಲ್ಲ ಅಗ್ರಿಮೆಂಟನ್ನು ಆದಷ್ಟು ಬೇಗನೆ ಮಾಡಿಕೊಳ್ಳಿ. ಲೇಟಾದಷ್ಟು ಬೇಡದ ಸಮಸ್ಯೆಗಳು ಸೃಷ್ಟಿಯಾಗುತ್ತವೆ.
Mistake – 4 : ಹಿತಶತ್ರುಗಳನ್ನು ಗುರ್ತಿಸುವಲ್ಲಿ ವಿಫಲವಾಗಿದ್ದು.
ನಾನು ಬಿಜನೆಸ್ ಸ್ಟಾರ್ಟ ಮಾಡಿದಾಗ ಮಾಡಿದ ಅತಿ ದೊಡ್ಡ ತಪ್ಪೆಂದರೆ ನನ್ನ ಹಿತಶತ್ರುಗಳನ್ನು ಗುರ್ತಿಸುವಲ್ಲಿ ವಿಫಲವಾದದ್ದು. ಬಿಜನೆಸ್ ಸ್ಟಾರ್ಟ ಮಾಡುವ ಖುಷಿಯಲ್ಲಿ ನಮ್ಮ ಟೀಮೆಲ್ಲ ಸಿಕ್ಕಾಪಟ್ಟೆ ಜೋಷಿನಲ್ಲಿತ್ತು. ಈ ಜೋಷಿನಲ್ಲಿ ನಾವು ನಮ್ಮ ಹಿತಶತ್ರುಗಳನ್ನು ಗುರ್ತಿಸುವಲ್ಲಿ ವಿಫಲವಾದೆವು. ಕೆಲವೊಂದಿಷ್ಟು ಗೆಳೆಯರು ಮತ್ತು ಸಂಬಂಧಿಕರು ನಮ್ಮಿಂದ ಲಾಭ ಪಡೆದುಕೊಂಡು ನಮ್ಮ ಬೆನ್ನಲ್ಲೇ ಚೂರಿ ಚುಚ್ಚಿದರು. ಇವರಲ್ಲಿ ಜಾಸ್ತಿ ನಂಬಿಕೆ ದ್ರೋಹ ಮಾಡಿದವರೆಂದರೆ ನನ್ನ ಸ್ವಂತ ಚಿಕ್ಕಪ್ಪ ಮತ್ತು ಚಿಕ್ಕಮ್ಮ. ನಾವು ಬಿಜನೆಸ್ ಸ್ಟಾರ್ಟ ಮಾಡೋಕೆ ಆಫೀಸ್ ಹುಡುಕತ್ತಿದಿವಿ ಅಂತಾ ಗೊತ್ತಾದಾಗ ಇವರಾಗೆ ಮನೆಗೆ ಬಂದು ನಮಗೆ “ನಮ್ಮ ಬಿಲ್ಡಿಂಗ್ ನಾಲ್ಕು ವರ್ಷದಿಂದ ಖಾಲಿಯಿದೆ. ಅಲ್ಲಿ ಯಾರು ಬಾಡಿಗೆಗೆ ಬರ್ತಿಲ್ಲ. ನೀವಿದನ್ನು ಬಳಸಿಕೊಳ್ಳಿ, ನಿಮ್ಮ ಬಿಜನೆಸ್ ಸಕ್ಸೆಸಫುಲ್ಲಾಗಿ ಸಾಗುವ ತನಕ ಬಾಡಿಗೆಯೇನ ಕೊಡೊದ ಬೇಡ” ಅಂತಾ ಫೋರ್ಸ ಮಾಡಿ ಹೇಳಿದರು. ಆಗ ಅವರಿಗೆ ಬೇಜಾರು ಮಾಡಲು ಇಷ್ಟವಿಲ್ಲದೆ ನಾವು ಅವರಿಗೆ ಬಾಡಿಗೆ ಕೊಟ್ಟು ಆ ಬಿಲ್ಡಿಂಗಲ್ಲಿ ಬಿಜನೆಸ್ ಸ್ಟಾರ್ಟ ಮಾಡಿದೆವು. ಆದರೆ ನಾವು ಬಿಜನೆಸ್ ಸ್ಟಾರ್ಟ ಮಾಡಿ ಒಂದು ವಾರ ಕೂಡ ಆಗಿರಲಿಲ್ಲ. ಯಾವುದೇ ಕಾರಣವಿಲ್ಲದೆ ಸದ್ಯಕ್ಕೆ ಬಿಲ್ಡಿಂಗ್ ಖಾಲಿ ಮಾಡಿ ಅಂತಾ ಜಗಳ ಮಾಡಿದ್ರು. ನಾವು ಬಿಲ್ಡಿಂಗ ಮೇಲೆ ಸಾಕಷ್ಟು ಖರ್ಚು ಮಾಡಿದ್ದೇವು. ಫರ್ನಿಚರ್ಸ ಹಾಗೂ ಗ್ಲಾಸ್ ಕ್ಯಾಬಿನ ಸೆಟ್ ಮಾಡಿದ್ದೇವು. ಸಿಟಿ ತುಂಬ ಬ್ಯಾನರ್ ಮತ್ತು ಬೋರ್ಡಗಳನ್ನು ಹಚ್ಚಿದ್ದೇವು. ಅಡ್ವಟೈಜಿಂಗ ಮಾಡಿದ್ದೇವು. ವಿಸಿಟಿಂಗ್ ಕಾರ್ಡ ಹಾಗೂ ಪಾಂಪ್ಲೆಟಗಳನ್ನು ಪ್ರಿಂಟ್ ಮಾಡಿ ಹಂಚಿದ್ದೇವು. ಇಷ್ಟೆಲ್ಲ ಮಾಡುವಾಗ ಸುಮ್ಮನಿದ್ದವರು ಸಡನ್ನಾಗಿ ಬಂದು ಬಿಲ್ಡಿಂಗ್ ಖಾಲಿ ಮಾಡಿ ಅಂತಾ ಜಗಳ ಮಾಡಿದರು. ನಮ್ಮತ್ರ ಬಿಲ್ಡಿಂಗ್ ಖಾಲಿ ಮಾಡೋದ ಬಿಟ್ಟು ಬೇರೆ ಯಾವುದೇ ಆಪ್ಶನಯಿರಲಿಲ್ಲ. ಏಕೆಂದರೆ ಸ್ವಂತ ಚಿಕ್ಕಪ್ಪ ಎಂಬ ಕಾರಣಕ್ಕಾಗಿ ನಾವು ರೆಂಟ ಅಗ್ರಿಮೆಂಟ ಮಾಡಿಕೊಂಡಿರಲಿಲ್ಲ. ನಮ್ಮತ್ರ ಅವರು ಬರೆದು ಕೊಟ್ಟ NOC ಇತ್ತು. ಅವರೊಂದಿಗೆ ನಮ್ಮ ಎಲ್ಲ ಸಂಬಂಧಿಕರು, ಫ್ಯಾಮಿಲಿ ಮೆಂಬರಗಳು ಸೇರಿಕೊಂಡಿದ್ದರು. ಅದಕ್ಕಾಗಿ ನಾವು ಕಾನೂನಾತ್ಮಕವಾಗಿ ಹೋರಾಡದೇ ಸುಮ್ಮನೆ ಆ ಬಿಲ್ಡಿಂಗ್ ಬಿಟ್ಟು ಪುಣೆಗೆ ಬಂದೆವು. ಇದರಿಂದ ನಮಗೆ ಟೊಟಲಾಗಿ 5 ಲಕ್ಷ ನಷ್ಟವಾಯಿತು. ಮತ್ತೆ ಬಿಜನೆಸ್ ರೀಸ್ಟಾರ್ಟ್ ಮಾಡೋಕೆ ನಮ್ಮತ್ರ ದುಡ್ಡಿರಲಿಲ್ಲ. ಆಗ ನನಗೆ ನನ್ನ ಬೈಕನ್ನು ಮಾರಬೇಕಾಯಿತು, ನನ್ನ ಪಾರ್ಟ್ನರಗೆ ಅವನ ಕಾರ ಮಾರಬೇಕಾಯಿತು, ಜೊತೆಗೆ ನನ್ನ ಫ್ರೆಂಡ್ ಕಡೆಯಿಂದ ಹಣ ತೆಗೆದುಕೊಂಡು ಬಿಜನೆಸ್ ರೀಸ್ಟಾರ್ಟ್ ಮಾಡಬೇಕಾಯಿತು.
ಅದಕ್ಕಾಗಿ ಗೆಳೆಯರೇ, ನಿಮ್ಮ ಹಿತಶತ್ರುಗಳಿಂದ ಸ್ವಲ್ಪ ಅಲ್ಲ ಬಹಳಷ್ಟು ಎಚ್ಚರವಾಗಿರಿ. ಅವರು ಪುಕ್ಸಟ್ಟೆ ಕೊಟ್ಟರೂ ಅವರಿಂದ ಯಾವುದೇ ಸಹಾಯವನ್ನು ತೆಗೆದುಕೊಳ್ಳಬೇಡಿ. ಏಕೆಂದರೆ ಕೆಲವು ವ್ಯಕ್ತಿಗಳ ದೇಹದಲ್ಲಿ ರಕ್ತವಿರಲ್ಲ, ಬರೀ ಕೊಳಕುತನವಿರುತ್ತದೆ.
ಓಕೆ ಗೆಳೆಯರೇ, ಇವಿಷ್ಟು ನಾನು ಬಿಜನೆಸ್ ಸ್ಟಾರ್ಟ ಮಾಡುವಾಗ ಮಾಡಿದ ತಪ್ಪುಗಳು. ಈ ತಪ್ಪುಗಳಿಂದ ನಾನು ಮತ್ತು ನನ್ನ ಬಿಜನೆಸ್ ಪಾರ್ಟನರ್ಸಗಳೆಲ್ಲ ಸಾಕಷ್ಟು ವಿಷಯಗಳನ್ನು ಕಲಿತುಕೊಂಡಿದ್ದೇವೆ. ಈಗ ನಮ್ಮ ಬಿಜನೆಸ್ಸಲ್ಲಿ ಅಂಥ ದೊಡ್ಡ ಪ್ರಾಬ್ಲೆಮ್ಸಗಳೇನಿಲ್ಲ. ಎಲ್ಲವೂ ಚೆನ್ನಾಗಿ ನಡೆದಿದೆ. ಚೆನ್ನಾಗಿ ಪ್ರೋಫಿಟ ಬರ್ತಿದೆ. ನಾವು ಖುಷಿಯಾಗಿದ್ದೇವೆ. ನೀವು ಬಿಜನೆಸ್ ಸ್ಟಾರ್ಟ ಮಾಡುವಾಗ ಮಾಡಿದ ತಪ್ಪುಗಳನ್ನು ಕಮೆಂಟ ಮಾಡಿ. ಇದರಿಂದ ಬೇರೆಯವರಿಗೆ ಮಾರ್ಗದರ್ಶನ ಸಿಗುತ್ತದೆ. All the best and thanks you…