ನಾವು ಸಮಯವನ್ನು ಸಂರಕ್ಷಿಸಿದರೆ ಅದು ನಮ್ಮನ್ನು ಸಂರಕ್ಷಿಸುತ್ತದೆ. ನಾವು ಸಮಯವನ್ನು ಗೌರವಿಸಿದರೆ ಅದು ನಮಗೆ ಒಂದಲ್ಲ ಒಂದಿನ ಗೌರವವನ್ನು ತಂದುಕೊಡುತ್ತದೆ. ಹೊತ್ತನ್ನು ಮುತ್ತಿಗೆ ಹೋಲಿಸಿ ಕಾರ್ಯನಿರತನಾಗು ಎಂಬ ಮಾತಿದೆ. ಸಮಯವೇ ಮಹಾ ಸಂಪತ್ತು. ಅದನ್ನು ನಾವು ಸರಿಯಾಗಿ ಬಳಸಿಕೊಳ್ಳಬೇಕು. ಅದನ್ನು ನಾವು ಸರಿಯಾಗಿ ಮ್ಯಾನೇಜ ಮಾಡಿಕೊಂಡು ಮುಂದೆ ಬರಬೇಕು. ನೀವು ಈ ಅಂಕಣವನ್ನು ಓದುತ್ತಿದ್ದೀರಿ ಎಂದರೆ ನಿಮಗೆ ಸಮಯದ ಮಹತ್ವ ಚೆನ್ನಾಗಿ ಗೊತ್ತಿದೆ ಎಂದರ್ಥ. ಸದ್ಯಕ್ಕೆ ಟೈಮ್ ಮ್ಯಾನೇಜಮೆಂಟಿನ ಕೊರತೆಯಿಂದಾಗಿ ಎಲ್ಲರ ಜೀವನ ಅಸ್ತವ್ಯಸ್ತವಾಗಿದೆ. ಅಸ್ತವ್ಯಸ್ತವಾಗಿರುವ ಜೀವನ ಸುವ್ಯವಸ್ಥಿತವಾಗಬೇಕೆಂದರೆ ನಾವು ಸರಿಯಾಗಿ ಸಮಯ ನಿರ್ವಹಣೆಯನ್ನು ಮಾಡಲೇಬೇಕು. ನಾವು ಸರಿಯಾಗಿ ಟೈಮ್ ಮ್ಯಾನೇಜಮೆಂಟ್ ಮಾಡಲೇಬೇಕು.
ಇವತ್ತು ಪ್ರತಿಯೊಬ್ಬರಿಗೂ ಟೈಮ್ ಮ್ಯಾನೇಜಮೆಂಟ ಮಾಡುವ ಅವಶ್ಯಕತೆ ತುಂಬಾನೆ ಇದೆ. ವಿದ್ಯಾರ್ಥಿಗಳಾಗಿರಬಹುದು, ಕೆಲಸಗಾರರಾಗಿರಬಹುದು ಅಥವಾ ಬಿಜನೆಸಮ್ಯಾನಗಳಾಗಿರಬಹುದು ಎಲ್ಲರೂ ಟೈಮ್ ಮ್ಯಾನೇಜಮೆಂಟನ್ನು ಕಲಿಯಲೇಬೇಕು. ಟೈಮ್ ಮ್ಯಾನೇಜಮೆಂಟ ಮಾಡುವುದರಿಂದ ನಮಗೆ ಹಲವಾರು ಪ್ರಯೋಜನಗಳಿವೆ.
ಉದಾಹರಣೆಗಾಗಿ ; ಸರಿಯಾಗಿ ಸಮಯವನ್ನು ನಿರ್ವಹಿಸುವುದರಿಂದ ನಮ್ಮ ಪ್ರೊಡಕ್ಟಿವಿಟಿ ಹೆಚ್ಚಾಗುತ್ತದೆ. ನಮ್ಮ ಪ್ರೊಡಕ್ಟಿವಿಟಿ ಹೆಚ್ಚಾದರೆ ನಮ್ಮ ಕೆಲಸದಲ್ಲಿ ನಮಗೆ ಬೇಗನೆ ಸಕ್ಸೆಸ್ ಸಿಗುತ್ತದೆ. ಟೈಮನ್ನು ಸರಿಯಾಗಿ ಮ್ಯಾನೇಜ್ ಮಾಡುವುದರಿಂದ ನಮಗೆ ನಮ್ಮ ಕೆಲಸಗಳನ್ನು ಮಾಡಲು ಹೆಚ್ಚಿಗೆ ಟೈಮ್ ಸಿಗುತ್ತದೆ. ನಮ್ಮ ಟೆನ್ಶನ್ ಹಾಗೂ ಸ್ಟ್ರೇಸ್ ದೂರಾಗುತ್ತವೆ. ನಮಗೆ ಹೆಚ್ಚಿನ ಅವಕಾಶಗಳು ಸಿಗುತ್ತವೆ. ಒಟ್ಟಾರೆಯಾಗಿ ಒಂದು ಉತ್ತಮ ಹ್ಯಾಪಿ ಲೈಫ್ ನಮ್ಮದಾಗುತ್ತದೆ.
ಈ “ಟೈಮನ್ನು ಸರಿಯಾಗಿ ಮ್ಯಾನೇಜ್ ಮಾಡುವುದು ಹೇಗೆ?” ಎಂಬುದನ್ನು ನೋಡುವುದಕ್ಕಿಂತ ಮುಂಚೆ ನಿಮ್ಮ ಟೈಮ್ ಎಲ್ಲಿ ಹಾಳಾಗುತ್ತಿದೆ ಎಂಬುದನ್ನು ಮೊದಲು ನೋಡೋಣ. ಏಕೆಂದರೆ ನಿಮಗೆ ಸಮಸ್ಯೆ ಎಲ್ಲಿದೆ ಎಂದು ಗೊತ್ತಾಗದಿದ್ದರೆ ನಿಮ್ಮಿಂದ ಸೋಲುಷನ್ ಕಂಡು ಹಿಡಿಯುವುದು ಹೇಗೆ ಸಾಧ್ಯ? ಒಂದು ನಿಮಿಷ ಈ ಅಂಕಣವನ್ನು ಪೌಜ್ (Pause) ಮಾಡಿ. ಕಣ್ಮುಚ್ಚಿ ಕುಳಿತುಕೊಂಡು “ನಿಮ್ಮ ಟೈಮ್ ಎಲ್ಲಿ ವ್ಯರ್ಥವಾಗುತ್ತಿದೆ? ಯಾರಿಂದ ವ್ಯರ್ಥವಾಗುತ್ತಿದೆ? ಹೇಗೆ ವ್ಯರ್ಥವಾಗುತ್ತಿದೆ?” ಎಂದು ಯೋಚಿಸಿ. ನಿಮಗೆ ನಿಮ್ಮ ಸಮಯ ಎಲ್ಲಿ ವ್ಯರ್ಥವಾಗುತ್ತಿದೆ ಎಂಬುದು ಅರಿವಾಗಿರುತ್ತದೆ. ಆದರೂ ನಾನು ನಿಮ್ಮ ಸಮಯ ವ್ಯರ್ಥವಾಗುವ ಕಾಮನ್ ಸಂಗತಿಗಳನ್ನು ಹೇಳುತ್ತೇನೆ.
ನಿಮ್ಮ ಟೈಮ್ ಎಲ್ಲಿ ವ್ಯರ್ಥವಾಗುತ್ತಿದೆ?
ಹೆಚ್ಚಾಗಿ ನಿಮ್ಮ ಸಮಯ ಬೇರೆಯವರನ್ನು ನಿಂದಿಸುವುದರಲ್ಲಿ, ಬೇರೆಯವರನ್ನು ಕ್ರಿಟಿಸೈಜ್ ಮಾಡುವುದರಲ್ಲಿ, ಬೇರೆಯವರ ಬಗ್ಗೆ, ಬೇಡದ ವಿಷಯಗಳ ಬಗ್ಗೆ ಗಾಸಿಪಗಳನ್ನು ಮಾಡುವಲ್ಲಿ ಹಾಳಾಗುತ್ತಿದೆ. ಅನಾವಶ್ಯಕ ವಾಗ್ವಾದಗಳಲ್ಲಿ, ರಾಜಕೀಯ ಸಂಗತಿಗಳ ಹಾಗೂ ಸಿನಿಮಾಗಳ ಬಿಸಿಬಿಸಿ ಚರ್ಚೆಯಲ್ಲಿ ನಿಮ್ಮ ಸಮಯ ವ್ಯರ್ಥವಾಗುತ್ತಿದೆ. ಸುಳ್ಳು ಸುದ್ದಿಗಳನ್ನು ಬಿತ್ತರಿಸುವ ನ್ಯೂಸ್ ಚಾನೆಲಗಳನ್ನು, ಗೊಳ್ಳು ಟಿವಿ ಶೋಗಳನ್ನು, ಸೀರಿಯಲಗಳನ್ನು ನೋಡುವುದರಲ್ಲಿ ನಿಮ್ಮ ಸಮಯ ವ್ಯರ್ಥವಾಗುತ್ತಿದೆ. ನೆಗೆಟಿವ್ ವ್ಯಕ್ತಿಗಳೊಂದಿಗೆ, ಗೊಳ್ಳು ಗೆಳೆಯರೊಂದಿಗೆ ಕೆಲಸವಿಲ್ಲದೆ ಊರ ತುಂಬ ಸುತ್ತಾಡುವುದರಲ್ಲಿ ನಿಮ್ಮ ಸಮಯ ವ್ಯರ್ಥವಾಗುತ್ತಿದೆ. ಮುಂಜಾನೆ ಎದ್ದಾಗಿನಿಂದ ಹಿಡಿದು ಮಧ್ಯರಾತ್ರಿ ಮಲಗುವ ತನಕ ಮೊಬೈಲನ್ನು, ಸೋಸಿಯಲ್ ಮೀಡಿಯಾಗಳನ್ನು ಬಳಸುವುದರಲ್ಲಿ ನಿಮ್ಮ ಅಮೂಲ್ಯ ಸಮಯದ ಕೊಲೆಯಾಗುತ್ತಿದೆ. ಸಂಬಂಧಪಡದ ವಿಷಯಗಳಲ್ಲಿ ಮೂಗು ತೂರಿಸುವುದರಲ್ಲಿ ನಿಮ್ಮ ಟೈಮ್ ವೇಸ್ಟಾಗುತ್ತಿದೆ. ನೀಲಿ ಚಿತ್ರಗಳನ್ನು ನೋಡುವುದರಲ್ಲಿ, ಹುಡುಕಾಡುವುದರಲ್ಲಿ ನಿಮ್ಮ ಸಮಯದ ಕಗ್ಗೊಲೆಯಾಗುತ್ತಿದೆ.
ಮೊಬೈಲನಲ್ಲಿ ಗಂಟೆಗಟ್ಟಲೆ ಮಾತನಾಡುವುದರಲ್ಲಿ, ಚಾಟಿಂಗ್, ಸೆ**ಟಿಂಗ್ ಇತ್ಯಾದಿಗಳನ್ನು ಮಾಡುವುದರಲ್ಲಿ ನಿಮ್ಮ ಸಮಯ ವ್ಯರ್ಥವಾಗುತ್ತಿದೆ. ಜನರನ್ನು ಜಡ್ಜ ಮಾಡುವುದರಲ್ಲಿ ನಿಮ್ಮ ಸಮಯ ವ್ಯರ್ಥವಾಗುತ್ತಿದೆ. ಮುಂಜಾನೆ ತಡವಾಗಿ ಏಳುವುದರಿಂದ ನಿಮ್ಮ ಸಮಯ ಹಾಳಾಗುತ್ತಿದೆ. ಪಬ್ಜಿಯಂಥ ವೀಡಿಯೋ ಗೇಮಗಳನ್ನು ಆಡುವುದರಲ್ಲಿ ನಿಮ್ಮ ಸಮಯ ವ್ಯರ್ಥವಾಗುತ್ತಿದೆ. ಪದೇಪದೇ ಫೇಸ್ಬುಕ್ ಹಾಗೂ ವಾಟ್ಸಾಪಗಳನ್ನು ನೋಡುವುದರಲ್ಲಿ ನಿಮ್ಮ ಸಮಯ ಹಾಳಾಗುತ್ತಿದೆ. ಬೇರೆಯವರ ಫೇಸ್ಬುಕ್ ಪ್ರೊಫೈಲನ್ನು ಕದ್ದು ನೋಡುವುದರಲ್ಲಿ ನಿಮ್ಮ ಸಮಯ ಹಾಳಾಗುತ್ತಿದೆ. ಫೇಸ್ಬುಕ್ ಹಾಗೂ ಇನಸ್ಟಾಗ್ರಾಮಲ್ಲಿ ಹುಡುಗಿಯರ ಫೋಟೋಗಳ ಕೆಳಗೆ “Nice, Super, Nice DP, ಬಾಬು, ಸೋನಾ ಇತ್ಯಾದಿಗಳನ್ನು ಕಮೆಂಟ್ ಮಾಡುವುದರಲ್ಲಿ ನಿಮ್ಮ ಸಮಯ ಕೊಲೆಯಾಗುತ್ತಿದೆ. ಸಿಗದವರನ್ನು ಪ್ರೀತಿಸುವುದರಲ್ಲಿ, ಬರದವರಿಗಾಗಿ ಕಾಯುವುದರಲ್ಲಿ ನಿಮ್ಮ ಸಮಯ ಹಾಳಾಗುತ್ತಿದೆ. ಯಾವುದೇ ನಿರ್ಧಾರಗಳನ್ನು ತೆಗೆದುಕೊಳ್ಳದೇ ಬರೀ ಯೋಚಿಸುವುದರಲ್ಲಿ ನಿಮ್ಮ ಸಮಯ ಹಾಳಾಗುತ್ತಿದೆ.
ಸದ್ಯಕ್ಕೆ ನಿಮಗೆ ನಿಮ್ಮ ಸಮಯ ಎಲ್ಲಿ ಪೋಲಾಗುತ್ತಿದೆ, ನಿಮ್ಮ ಟೈಮ್ ಎಲ್ಲಿ ಹಾಳಾಗುತ್ತಿದೆ ಎಂಬುದು ನಿಮಗರ್ಥವಾಗಿದೆ. ನಿಮ್ಮ ಸಮಯವನ್ನು ಸರಿಯಾಗಿ ಮ್ಯಾನೇಜ್ ಮಾಡಲು ಕೆಲವೊಂದಿಷ್ಟು ಬೆಸ್ಟ್ ಟಿಪ್ಸಗಳು ಇಲ್ಲಿವೆ ;
ವಿದ್ಯಾರ್ಥಿಗಳಿಗೆ, ಕೆಲಸಗಾರರಿಗೆ ಹಾಗೂ ಬಿಜನೆಸಮ್ಯಾನಗಳಿಗೆ ಬೆಸ್ಟ್ ಟೈಮ್ ಮ್ಯಾನೇಜಮೆಂಟ ಟಿಪ್ಸಗಳು – Best Time Management Tips for Students, Workers and Businessmen in Kannada
1) ಅನಾವಶ್ಯಕ ವಿಷಯಗಳಿಗೆ, ವ್ಯಕ್ತಿಗಳಿಗೆ ಬಾಯ್ ಹೇಳಿ. ನಿಮ್ಮ ಸಮಯವನ್ನು ಹಾಳು ಮಾಡುವ ಗೆಳೆಯರಿಗೆ ಬಾಯ್ ಹೇಳಿ. ನಿಮ್ಮ ಸಮಯವನ್ನು ಕೊಲ್ಲುತ್ತಿರುವ ಯುಜಲೆಸ್ ಆ್ಯಪ್ಸಗಳಿಗೆ ಬಾಯ್ ಹೇಳಿ. ಅನಾವಶ್ಯಕ ವಾದ-ವಿವಾದಗಳಿಗೆ, ಪ್ರಯೋಜನಕ್ಕೆ ಬಾರದ ರಾಜಕೀಯ ಹಾಗೂ ಸಿನಿಮಾ ಚರ್ಚೆಗಳಿಗೆ ಬಾಯ್ ಹೇಳಿ.
2) ನಿಮ್ಮನ್ನು ಡಿಸ್ಟರ್ಬ್ ಮಾಡುತ್ತಿರುವ ಎಲ್ಲ ಡಿಸ್ಟ್ರ್ಯಾಕ್ಷನ್ಸಗಳನ್ನು ಡಿಲೀಟ್ ಮಾಡಿ. ಉದಾಹರಣೆಗೆ : ಮೊಬೈಲ್ ಫೋನ್, ಫ್ರೆಂಡ್ಸ್, ಸೋಸಿಯಲ್ ಮೀಡಿಯಾ, ವಿಡಿಯೋ ಗೇಮ್ಸ, ಡೇಟಿಂಗ್ ಆ್ಯಪ್ಸ, ಗರ್ಲಫ್ರೆಂಡ್ಸ ಇತ್ಯಾದಿಗಳನ್ನು ಡೀಲಿಟ ಮಾಡಿ. ನಿಮ್ಮ ಬ್ರೇನನ್ನು ಸರಿಯಾಗಿ ಟ್ರೇನ್ ಮಾಡಿ. ನಿಮ್ಮ ಭಾವನೆಗಳನ್ನು ನಿಯಂತ್ರಿಸಿ. Control your emotions. ನಿಮ್ಮ ಸಮಯವನ್ನು ಹಾಳು ಮಾಡುತ್ತಿರುವ ಎಲ್ಲ ಕೆಟ್ಟ ಹವ್ಯಾಸಗಳನ್ನು, ಚಟಗಳನ್ನು ಬಿಟ್ಟು ಬಿಡಿ.
ಉದಾಹರಣೆಗೆ : ಪೋ*****ಗಳನ್ನು ನೋಡುವುದು, ಹಾನಿಕಾರಕ ವೀಡಿಯೋ ಗೇಮಗಳನ್ನು ಆಡುವುದು, ಫೇಸ್ಬುಕಲ್ಲಿ ಪ್ರೇಯಸಿಯರನ್ನು ಹುಡುಕೋದು, ಬೇರೆಯವರ ವಾಟ್ಸಾಪ ಸ್ಟೇಟಸ್ ನೋಡುತ್ತಾ ಕೂಡುವುದು ಇತ್ಯಾದಿ.
3) ನಿಮ್ಮ ದಿನವನ್ನು ಸಕ್ಸೆಸಫುಲ್ಲಾಗಿ ಪ್ರಾರಂಭಿಸಿ. ಬೇಗನೆ ಮಲಗಿ, ಬೇಗನೆ ಎದ್ದೇಳಿ. ಚೆನ್ನಾಗಿ ನಿದ್ರೆ ಮಾಡಿ. ಸುರ್ಯೋದಯಕ್ಕಿಂತ ಮುಂಚೆಯೆದ್ದು ನಿಮ್ಮ ದಿನವನ್ನು ಸಕ್ಸೆಸಫುಲ್ಲಾಗಿ ಪ್ರಾರಂಭಿಸಿ. ದಿನಾಲು ಯೋಗಾಭ್ಯಾಸ ಮಾಡಿ, ಎಕ್ಸರಸೈಜ ಮಾಡಿ. ನಿಮ್ಮ ಆಲಸ್ಯವನ್ನು ಸಾಯಿಸಿ. ಮೆಂಟಲಿ ಹಾಗೂ ಫಿಜಿಕಲಿ ಫಿಟ್ ಆಗಿರಿ.
4) ಫರಫೆಕ್ಟಾಗಿ ಪ್ಲ್ಯಾನಿಂಗ್ ಮಾಡಿ. ನಿಮ್ಮ ಸಮಯವನ್ನು ಸಣ್ಣಸಣ್ಣ ಶೆಡ್ಯೂಲಗಳಲ್ಲಿ ಡಿವೈಡ್ ಮಾಡಿ. ಮೊದಲು ಸಣ್ಣ ಗುರಿಗಳನ್ನು ಸೆಟ್ ಮಾಡಿ ಮತ್ತು ಅವುಗಳನ್ನು ನಿಗದಿತ ಅವಧಿಯೊಳಗೆ ಪೂರ್ಣಗೊಳಿಸಿ. ನಿಮ್ಮ ಗುರಿಗಳನ್ನು ಆ್ಯಕುರೇಟಾಗಿ ಸೆಟ್ ಮಾಡಿ. ಸಣ್ಣಸಣ್ಣ ಟಾರ್ಗೆಟಗಳನ್ನು ಹಾಕಿಕೊಳ್ಳಿ. ನಿಮ್ಮ ಟಾರ್ಗೆಟಗಳನ್ನು ಯಾವಾಗ ಕಂಪ್ಲೀಟ್ ಮಾಡ್ತಿರಾ? ಹೇಗೆ ಮಾಡ್ತೀರಾ? ಎಷ್ಟೋತ್ತಿಗೆ ಮಾಡ್ತಿರಾ? ಅನ್ನೋದನ್ನ ಮೊದಲೇ ಸರಿಯಾಗಿ ಡಿಸೈಡ್ ಮಾಡಿ. ನಿಮ್ಮ ಟಾರ್ಗೆಟಗಳಿಗೆ ಟೈಮ್ ಲಿಮಿಟನ್ನ ಹಾಕಿ. ಬರೀ ಟಾರ್ಗೆಟಗಳನ್ನು ಹಾಕಿಕೊಂಡೇನು ಪ್ರಯೋಜನವಿಲ್ಲ. ಅವುಗಳನ್ನು ನಿಗದಿತ ಅವಧಿಯ ಒಳಗೆ ಮಾಡಿ ಮುಗಿಸಿ.
5) ನಿಮಗೆ ಯಾವುದು ಮುಖ್ಯ, ಯಾವುದು ಮುಖ್ಯವಲ್ಲ ಎಂಬುದನ್ನು ನಿರ್ಧರಿಸಿ. Decide what is important to you and what is not. ನಿಮ್ಮ ಟಾರ್ಗೆಟಗಳ ಬಗ್ಗೆ ಕ್ಲಿಯರ್ ಮೈಂಡಸೆಟನ್ನು ಬೆಳೆಸಿಕೊಳ್ಳಿ. ನಿಮಗೆ ಏನು ಬೇಕು? ಏನು ಮಾಡಬೇಕು? ಎಂಬುದು ಗೊತ್ತಿಲ್ಲದಿದ್ದರೂ ಏನು ಬೇಡ? ಏನು ಮಾಡಬಾರದು? ಎಂಬುದು ನಿಮಗೆ ಗೊತ್ತಿರಬೇಕು. 80-20 ಪ್ರಿನ್ಸಿಪಲನ್ನು ನಿಮ್ಮ ಜೀವನದಲ್ಲಿ, ಬಿಜನೆಸಲ್ಲಿ ಅಳವಡಿಸಿಕೊಳ್ಳಿ. ನಾವು ಮಾಡುವ ಪ್ರಯತ್ನಗಳಲ್ಲಿ, ಕೇವಲ 20% ಪ್ರಯತ್ನಗಳ ಮೂಲಕ ನಮಗೆ 80% ರಿಜಲ್ಟ ಸಿಗುತ್ತದೆ. ನಿಮ್ಮ ಕೆಲಸದಲ್ಲಿ ಆ 20% ಕೆಲಸ ಯಾವುದೆಂದು ಪತ್ತೆ ಹಚ್ಚಿ ಮತ್ತು ಅದನ್ನು ಸರಿಯಾಗಿ ಮಾಡಿ. ಸಾಧ್ಯವಾದಷ್ಟು ಮಲ್ಟಿ ಟಾಸ್ಕಿಂಗನ್ನು ಅವೈಡ್ ಮಾಡಿ. ಏಕೆಂದರೆ ಒಂದೇ ಸಮಯಕ್ಕೆ ನಾಲ್ಕೈದು ಕೆಲಸಗಳನ್ನು ಮಾಡುವುದರಿಂದ ಯಾವ ಕೆಲಸವೂ ಸರಿಯಾಗಿ ಆಗಲ್ಲ. ಕ್ವಾಲಿಟಿ ಮುಖ್ಯವೇ ಹೊರತು ಕ್ವಾಂಟಿಟಿಯಲ್ಲ.
6) ಫರಫೆಕ್ಟ ಟೈಮಗಾಗಿ, ಫರಫೆಕ್ಷನಗಾಗಿ ಅಥವಾ ಮೊಟಿವೇಷನಗಾಗಿ ಕಾಯುತ್ತಾ ಕುಳಿತುಕೊಳ್ಳಬೇಡಿ. ಒಳ್ಳೆ ಕಾಲ, ಕೆಟ್ಟ ಕಾಲ ಅಂತಾ ಏನಿರಲ್ಲ. ಎಲ್ಲ ಒಳ್ಳೇ ಕೆಲಸಗಳಿಗೆ ಎಲ್ಲ ಸಮಯ ಒಳ್ಳೆಯದೇ ಆಗಿರುತ್ತದೆ. ಆದ್ದರಿಂದ ಒಳ್ಳೇ ಸಮಯಕ್ಕೆ ಕಾದು ಸಮಯವನ್ನು ವ್ಯರ್ಥ ಮಾಡಬೇಡಿ. ಜಸ್ಟ್ ಕೆಲಸ ಮಾಡಲು ಪ್ರಾರಂಭಿಸಿ. ನೀವು ಹಂತಹಂತವಾಗಿ ಎಲ್ಲವನ್ನೂ ಕಲಿತುಕೊಳ್ಳುತ್ತೀರಿ. ಕೈಯಲ್ಲಿರೋದನ್ನ ಮೊದಲು ಮಾಡಿ. ಅದನ್ನು ಬಿಟ್ಟು ಪಾಸ್ಟ್ ಹಾಗೂ ಫ್ಯುಚರಗಳಲ್ಲಿ ಒದ್ದಾಡಬೇಡಿ. ಪ್ರಜೆಂಟ್ ಚೆನ್ನಾಗಿದ್ರೆ, ಫ್ಯುಚರ್ ತಾನಾಗಿಯೇ ಚೆನ್ನಾಗಿರುತ್ತದೆ. ಅದಕ್ಕಾಗಿ ಕೈಯಲ್ಲಿರೋ ಕೆಲಸವನ್ನು ಮೊದಲು ಮಾಡಿ ಮುಗಿಸಿ. ನಿಮ್ಮನ್ನು ನಿಮ್ಮ ಕೆಲಸಕ್ಕೆ ಕಮಿಟ್ ಮಾಡಿಕೊಳ್ಳಿ.
ಗೆಳೆಯರೇ, ಟೈಮನ್ನು ಎಫೆಕ್ಟಿವ ಆಗಿ ಮ್ಯಾನೇಜ್ ಮಾಡಿ. ಒಂದ್ಸಲ ಕಾಲ ಕಳೆದು ಹೋದರೆ ಅದು ಮತ್ತೆ ಸಿಗಲ್ಲ. ಕಾಲ ಯಾರಿಗೂ ಕಾಯುವುದಿಲ್ಲ. ಈಗಲೇ ಸುಧಾರಿಸಿಕೊಂಡು ಸಕ್ಸೆಸಫುಲ್ ವ್ಯಕ್ತಿಗಳಾಗಿ. All the Best and Thanks…
ಈ ಅಂಕಣ (Article) ನಿಮಗೆ ಇಷ್ಟವಾಗಿದ್ದರೆ ನಿಮ್ಮೆಲ್ಲ ಗೆಳೆಯರೊಡನೆ ಮತ್ತು ನೀವಿರುವ ಎಲ್ಲ ಕನ್ನಡ ಫೇಸ್ಬುಕ್ ಗ್ರೂಪಗಳಲ್ಲಿ ಇದನ್ನು ತಪ್ಪದೇ ಶೇರ್ (Share) ಮಾಡಿ. ಜೊತೆಗೆ ಪ್ರತಿದಿನ ಹೊಸಹೊಸ ಅಂಕಣಗಳನ್ನು, ಪ್ರೇಮಕಥೆಗಳನ್ನು, ಕವನಗಳನ್ನು ಉಚಿತವಾಗಿ ಓದಲು ತಪ್ಪದೆ ನನ್ನ ಫೇಸ್ಬುಕ್ ಪೇಜನ್ನು https://www.facebook.com/Directorsatishkumar/ (Director Satishkumar) ಲೈಕ್ ಮಾಡಿ.
Follow Me On : Facebook | Instagram | YouTube | Twitter
My Books : Kannada Books | Hindi Books | English Books
⚠ STRICT WARNING ⚠Content Rights :
ಈ ಅಂಕಣದ ಎಲ್ಲ ಹಕ್ಕುಗಳನ್ನು ಡೈರೆಕ್ಟರ್ ಸತೀಶಕುಮಾರ ಹಾಗೂ ರೋರಿಂಗ್ ಕ್ರಿಯೇಷನ್ಸ್ ಪ್ರೈವೇಟ್ ಲಿಮಿಟೆಡ್ ಕಂಪನಿ ವತಿಯಿಂದ ಸಂಪೂರ್ಣವಾಗಿ ಕಾಯ್ದಿರಿಸಲಾಗಿದೆ. ಡೈರೆಕ್ಟರ್ ಸತೀಶಕುಮಾರ ಅವರ ಅನುಮತಿಯಿಲ್ಲದೆ ಈ ಅಂಕಣದ ಯಾವುದೇ ಭಾಗವನ್ನು ಕಾಪಿ ಮಾಡುವಂತಿಲ್ಲ, ಬೇರೆ ಭಾಷೆಗಳಿಗೆ ಅನುವಾದಿಸುವಂತಿಲ್ಲ ಮತ್ತು ಇದನ್ನು ಬೇರೆಡೆಗೆ ಪ್ರಕಟಿಸುವಂತಿಲ್ಲ. ಯಾವುದೇ ಸಾಮಾಜಿಕ ಜಾಲತಾಣಗಳಲ್ಲಿ ಪೋಸ್ಟ್ ಮಾಡುವಂತಿಲ್ಲ. ಮುದ್ರಣ ಮಾಡುವಂತಿಲ್ಲ. ಒಂದು ವೇಳೆ ಯಾರಾದರೂ ಕಾಪಿ ರೈಟ್ಸ್ ನಿಯಮಗಳನ್ನು ಉಲ್ಲಂಘಿಸಿದರೆ ಅವರ ಮೇಲೆ ಸೂಕ್ತ ಕಾನೂನು ಕ್ರಮ ಕೈಗೊಳ್ಳಲಾಗುವುದು ಹಾಗೂ ಆಗಿರುವ ನಷ್ಟವನ್ನು ಅವರಿಂದಲೇ ವಸೂಲಿ ಮಾಡಲಾಗುವುದು.
All Rights of this article are fully reserved by Director Satishkumar and Roaring Creations Private Limited India. No part of this article can be copied, translated or re published anywhere without the written permission of Director Satishkumar. If such violation of copy rights found to us, then we legally punish to copy cats and recover our loss by them only.
© Director Satishkumar and Roaring Creations Private Limited, India.