ನೀವು ಫೇಸ್ಬುಕ್, ಇನಸ್ಟಾಗ್ರಾಮ ಮತ್ತು ಯ್ಯುಟ್ಯೂಬ ಕಮೆಂಟ್ ಸೆಕ್ಷನಗಳಲ್ಲಿ ಕೆಲವೊಂದಿಷ್ಟು ಟಾಪಿಕಗಳ ಮೇಲೆ ಅಂಕಣ ಬರೆಯಿರಿ, ವಿಡಿಯೋ ಮಾಡಿ ಎಂದು ಕಮೆಂಟ್ ಮಾಡಿದ್ದೀರಿ. ಅವುಗಳಲ್ಲಿನ ಒಂದು ಟಾಪಿಕನ್ನು ನಾನೀ ಅಂಕಣದಲ್ಲಿ ಕವರ ಮಾಡುತ್ತಿರುವೆ. “ನಮ್ಮನ್ನು ನೋಡಿ ಗೇಲಿ ಮಾಡಿ ನಗುವವರ ಮುಂದೆ ಗೆಲ್ಲೊದು ಹೇಗೆ?” ಎಂದು ಕಮೆಂಟ್ ಮಾಡಿದ್ದೀರಿ. ಈ ಪ್ರಶ್ನೆಗೆ ನನ್ನ ಉತ್ತರ ಹೀಗಿದೆ ;
ನನಗೆ ಒಂದು ಮಾತನ್ನು ಕ್ಲಿಯರಾಗಿ ಹೇಳಿ, ಜನ ಯಾವ ಕಾರಣಕ್ಕೆ ಗೇಲಿ ಮಾಡಿ ನಗಲ್ಲ? ಯಾವ ಕಾರಣಕ್ಕೆ ಆಡ್ಕೊಳಲ್ಲ? ಜನ ಎಲ್ಲದಕ್ಕೂ ನಗ್ತಾರೆ, ಎಲ್ಲದಕ್ಕೂ ಆಡಿಕೊಳ್ತಾರೆ. ಜನ ನೀವು ಎದ್ರು ಆಡಿಕೊಳ್ತಾರೆ, ಬಿದ್ರು ಆಡಿಕೊಳ್ತಾರೆ, ಗೆದ್ರು ಆಡಿಕೊಳ್ತಾರೆ, ಸೋತ್ರು ಆಡಿಕೊಳ್ತಾರೆ. ನೀವ್ ಏನೇ ಮಾಡಿದ್ರೂ ಜನ ಆಡಿಕೊಳ್ತಾರೆ, ಕಿಂಡಲ್ ಮಾಡ್ತಾರೆ, ಕಮೆಂಟ್ ಮಾಡ್ತಾರೆ, ಕ್ರಿಟಿಸೈಜ್ ಮಾಡ್ತಾರೆ. ನೀವ ಒಳ್ಳೇ ಕೆಲ್ಸ ಮಾಡೋಕೆ ಹೋರಟ್ರೆ ಶತ್ರುಗಳು ತಾನಾಗಿಯೇ ಹುಟ್ಟಿಕೊಳ್ತಾರೆ. ಏಕೆಂದರೆ ತುಂಬಾ ಜನರಿಗೆ ಮಾಡೋಕೆ ಕೆಲ್ಸ ಇಲ್ಲ. ಇನ್ನು ಕೆಲ್ಸ ಇರೋರು ತಮ್ಮ ಕೆಲ್ಸಾನಾ ಸರಿಯಾಗಿ ಮಾಡಲ್ಲ. ಎಲ್ಲೆಡೆಗೆ ನಿರುದ್ಯೋಗ ತುಂಬಿ ತುಳುಕ್ತಿದೆ. ಅಲ್ಲದೇ ಜನರ ತಲೆಯಲ್ಲಿ ನೆಗೆಟಿವಿಟಿ ತುಂಬಾನೇ ಇದೆ.
ನಿರುದ್ಯೋಗ ಮತ್ತು ನೆಗೆಟಿವಿಟಿ ಈ ಎರಡು ಕಾರಣಗಳಿಂದ ಕೆಲವು ಜನ ಬೇರೆಯವರ ಬಗ್ಗೆ ಬೇಕಾಬಿಟ್ಟಿಯಾಗಿ ಮಾತಾಡಿ ಜೀವನ ತಳ್ಳುತ್ತಾರೆ. ತಮಗೆ ಸಂಬಂಧ ಪಡದ ವಿಷಯಗಳಲ್ಲಿ ಮೂಗು ತೂರಿಸುತ್ತಾರೆ, ಗಾಸಿಪಗಳನ್ನು ಹಬ್ಬಿಸುತ್ತಾರೆ. ಅದಕ್ಕೆ ಇಂಥವರ ಬಗ್ಗೆ ಜಾಸ್ತಿ ತಲೆ ಕೆಡಿಸಿಕೊಳ್ಳಬೇಡಿ. ಇಂಥವರನ್ನು ಜಸ್ಟ್ ನೆಗ್ಲೆಕ್ಟ ಮಾಡಿ. ನೀವು ನಿಮ್ಮ ಕೆಲಸದಲ್ಲಿ ಸರಿಯಾಗಿ ಫೋಕಸ್ ಮಾಡಿ. ಇಂಥ ಮೂರ್ಖರ ಮೂರ್ಖ ಪ್ರಶ್ನೆಗಳಿಗೆ, ಕೊಂಕು ನಗೆಗೆ ಮೌನವೇ ಸರಿಯಾದ ಪ್ರತ್ಯುತ್ತರ.
ಬೇರೆಯವರನ್ನು ಆಡಿಕೊಂಡು ಟೈಮಪಾಸ ಮಾಡುವ ನಿರುದ್ಯೋಗಿಗಳಿಗೆ ಯಾವುದೇ ಗುರಿಗಳಿರುವುದಿಲ್ಲ. ಆದರೆ ನಿಮಗೆ ನಿಮ್ಮದೇ ಆದ ಗುರಿಗಳಿವೆ. So ನಿಮಗೆ ನಿಮ್ಮ ಗುರಿ ಮಾತ್ರ ಕಾಣಿಸಬೇಕು. ನಿಮ್ಮ ಗುರಿ ಮೇಲೆ ನೀವು ಫೋಕಸ್ ಮಾಡಿ. ನಿಮ್ಮ ಕೆಲಸಗಳಿಂದ, ಸಾಧನೆಗಳಿಂದ ನಿಮ್ಮನ್ನು ನೋಡಿ ನಗುವವರ ಬಾಯಿಗೆ ಬೀಗ ಜಡಿಯಿರಿ. ನೀವು ಸಕ್ಸೆಸಫುಲ್ ಆದಾಗ ನಿಮ್ಮ ಹೆಟರ್ಸ ಸುಮ್ನೆ ಬಾಯ್ಮುಚ್ಚಿಕೊಂಡು ಸೈಡಲ್ಲಿರುತ್ತಾರೆ. ನಾಯಿ ಬೊಗಳುವುದರಿಂದ ದೇವಲೋಕ ಹಾಳಾಗಲ್ಲ. ಅವಮಾನದ ಸಿಟ್ಟನ್ನು ಅಸ್ತ್ರವಾಗಿ ಬಳಸಿಕೊಂಡು ಮೇಲೆ ಬನ್ನಿ. ನಿಮ್ಮ ಬಗ್ಗೆ ಕೆಟ್ಟದಾಗಿ ಮಾತಾಡುವವರಿಗೆ ನಿಮ್ಮ ಬೆಂಗಲಿಗರು ತಿರಗೇಟು ನೀಡಬೇಕು. ಆ ಮಟ್ಟಿಗೆ ನೀವು ಬೆಳೆಯಬೇಕು. ಈಗ ನಿಮ್ಮ ಪ್ರಶ್ನೆಗೆ ಸರಿಯಾದ ಉತ್ತರ ಸಿಕ್ಕಿದೆ ಅನ್ಕೋತ್ತಿನಿ. ನಿಮ್ಮ ಬಳಿ ಇನ್ನು ಯಾವುದಾದರೂ ಪ್ರಶ್ನೆಗಳಿದ್ದರೆ ಪ್ಲೀಸ್ ಅವುಗಳನ್ನು ನನಗೆ ಇನಸ್ಟಾಗ್ರಾಮಲ್ಲಿ ಡೈರೆಕ್ಟ ಮೆಸೇಜ್ ಮಾಡಿ. All The Best and Thanks you…
ಈ ಅಂಕಣ (Article) ನಿಮಗೆ ಇಷ್ಟವಾಗಿದ್ದರೆ ನಿಮ್ಮೆಲ್ಲ ಗೆಳೆಯರೊಡನೆ ಮತ್ತು ನೀವಿರುವ ಎಲ್ಲ ಕನ್ನಡ ಫೇಸ್ಬುಕ್ ಗ್ರೂಪಗಳಲ್ಲಿ ಇದನ್ನು ತಪ್ಪದೇ ಶೇರ್ (Share) ಮಾಡಿ. ಜೊತೆಗೆ ಪ್ರತಿದಿನ ಹೊಸಹೊಸ ಅಂಕಣಗಳನ್ನು, ಪ್ರೇಮಕಥೆಗಳನ್ನು, ಕವನಗಳನ್ನು ಉಚಿತವಾಗಿ ಓದಲು ತಪ್ಪದೆ ನನ್ನ ಫೇಸ್ಬುಕ್ ಪೇಜನ್ನು https://www.facebook.com/Directorsatishkumar/ (Director Satishkumar) ಲೈಕ್ ಮಾಡಿ.
Follow Me On : Facebook | Instagram | YouTube | Twitter
My Books : Kannada Books | Hindi Books | English Books
⚠ STRICT WARNING ⚠Content Rights :
ಈ ಅಂಕಣದ ಎಲ್ಲ ಹಕ್ಕುಗಳನ್ನು ಡೈರೆಕ್ಟರ್ ಸತೀಶಕುಮಾರ ಹಾಗೂ ರೋರಿಂಗ್ ಕ್ರಿಯೇಷನ್ಸ್ ಪ್ರೈವೇಟ್ ಲಿಮಿಟೆಡ್ ಕಂಪನಿ ವತಿಯಿಂದ ಸಂಪೂರ್ಣವಾಗಿ ಕಾಯ್ದಿರಿಸಲಾಗಿದೆ. ಡೈರೆಕ್ಟರ್ ಸತೀಶಕುಮಾರ ಅವರ ಅನುಮತಿಯಿಲ್ಲದೆ ಈ ಅಂಕಣದ ಯಾವುದೇ ಭಾಗವನ್ನು ಕಾಪಿ ಮಾಡುವಂತಿಲ್ಲ, ಬೇರೆ ಭಾಷೆಗಳಿಗೆ ಅನುವಾದಿಸುವಂತಿಲ್ಲ ಮತ್ತು ಇದನ್ನು ಬೇರೆಡೆಗೆ ಪ್ರಕಟಿಸುವಂತಿಲ್ಲ. ಯಾವುದೇ ಸಾಮಾಜಿಕ ಜಾಲತಾಣಗಳಲ್ಲಿ ಪೋಸ್ಟ್ ಮಾಡುವಂತಿಲ್ಲ. ಮುದ್ರಣ ಮಾಡುವಂತಿಲ್ಲ. ಒಂದು ವೇಳೆ ಯಾರಾದರೂ ಕಾಪಿ ರೈಟ್ಸ್ ನಿಯಮಗಳನ್ನು ಉಲ್ಲಂಘಿಸಿದರೆ ಅವರ ಮೇಲೆ ಸೂಕ್ತ ಕಾನೂನು ಕ್ರಮ ಕೈಗೊಳ್ಳಲಾಗುವುದು ಹಾಗೂ ಆಗಿರುವ ನಷ್ಟವನ್ನು ಅವರಿಂದಲೇ ವಸೂಲಿ ಮಾಡಲಾಗುವುದು.
All Rights of this article are fully reserved by Director Satishkumar and Roaring Creations Private Limited India. No part of this article can be copied, translated or re published anywhere without the written permission of Director Satishkumar. If such violation of copy rights found to us, then we legally punish to copy cats and recover our loss by them only.
© Director Satishkumar and Roaring Creations Private Limited, India.