ಈ ನಮ್ಮ ವೆಬಸೈಟನಿಂದ ಕಥೆ, ಕವನ, ಅಂಕಣಗಳನ್ನು ಕದ್ದು ಬೇರೆಡೆಗೆ ಪಬ್ಲಿಷ್ ಮಾಡಿ ಛಿಮಾರಿ ಹಾಕಿಸಿಕೊಳ್ಳುವ ಮುಂಚೆ ಇದನ್ನೊಮ್ಮೆ ಓದಿ…
ಗೆಳೆಯರೇ, ನಾನೀಗ ಹೇಳಲು ಹೊರಟಿರುವ ವಿಷಯ ನಿಮಗೆ ನೋವನ್ನುಂಟು ಮಾಡಬಹುದು. ಏಕೆಂದರೆ ನನಗೀಗ ನೋವಾಗಿದೆ. ಜೊತೆಗೆ ಅನ್ಯಾಯವಾಗಿದೆ. ಅಲ್ಲದೆ ಸುಮಾರು 5 ಲಕ್ಷದವರೆಗೆ ನಷ್ಟವಾಗಿದೆ. ಅದಕ್ಕಾಗಿ ನಾನೀಗ ಸುಮ್ಮನಿರಲಾರೆ. ಕರ್ನಾಟಕದಲ್ಲಿನ ಕೆಲವು ಕೆಲಸವಿಲ್ಲದ ಗೊಳ್ಳು ಲೇಖಕರು ನಾನು ಬರೆದ ಕಥೆ, ಕವನ, ಅಂಕಣಗಳನ್ನು ಕದಿಯುತ್ತಿದ್ದಾರೆ. ನನ್ನ ಆಫೀಸಿಯಲ್ ವೆಬಸೈಟ್ www.skkannada.com and www.roaringcreationsfilms.com ನಿಂದ ಕಥೆ, ಕವನಗಳನ್ನು ಕದ್ದು ತಮ್ಮ ಹೆಸರಾಕಿಕೊಂಡು ಅವುಗಳನ್ನು ಪ್ರತಿಲಿಪಿ, ಶೇರ್ ಚಾಟ್, Your Quote, ಫೇಸ್ಬುಕ, ಟ್ವಿಟರ, ಯೂಟ್ಯೂಬ್ ಮುಂತಾದ ಕಡೆಗಳಲ್ಲಿ ಮೂರು ಬಿಟ್ಟು ನಿರಂತರವಾಗಿ ಪ್ರಕಟಿಸುತ್ತಿದ್ದಾರೆ. ನನ್ನ ಕಥೆ ಕವನಗಳನ್ನು ಕದ್ದು ದೊಡ್ಡ ದೊಡ್ಡ ವೇದಾಂತಿಗಳಂತೆ ಬಿಲ್ಡಪ್ ಕೊಡುತ್ತಿದ್ದಾರೆ. ಬೆಕ್ಕು ಕಣ್ಮುಚ್ಚಿ ಹಾಲು ಕುಡಿಯಲು ಸಹ ಹೆದರುತ್ತದೆ. ಆದರೆ ಈ ಕಥೆಕವನ ಕಳ್ಳರು ರಾಜಾರೋಷವಾಗಿ ಕದ್ದು ಕವಿರತ್ನರಂತೆ ಫೋಸ್ ಕೊಡುತ್ತಿದ್ದಾರೆ. ಸಾಲದ್ದಕ್ಕೆ ವಿನಯದಿಂದ ಅದರ ಬಗ್ಗೆ ಕೇಳಿದ ನನ್ನ ಮೇಲೆ ಹರಿ ಹಾಯ್ದು ನನ್ನನ್ನು ಹೆದರಿಸಲು ಪ್ರಯತ್ನಿಸುತ್ತಿದ್ದಾರೆ. ಆದರೆ ಹೆದರಲು ನಾನೇನು ಒಂಟಿಯಾಗಿಲ್ಲ. ನನಗೆ ಹಣಬಲ, ಜನಬಲ, ಮನೋಬಲ, ತೋಳ್ಬಲ ಎಲ್ಲವೂ ಅವಶ್ಯಕತೆಗಿಂತ ಅಧಿಕವಾಗಿದೆ. ಈ ಖದೀಮರು ಬರೀ ನನ್ನ ಕಥೆಕವನಗಳನ್ನು ಮಾತ್ರ ಕದಿಯುತ್ತಿಲ್ಲ. ನನ್ನಂಥ ಎಷ್ಟೋ ಕಲಾವಿದರ ಪರಿಶ್ರಮವನ್ನು ಸ್ವಲ್ಪವೂ ನಾಚಿಕೆಯಿಲ್ಲದೆ ಕದಿಯುತ್ತಿದ್ದಾರೆ. ಜೊತೆಗೆ ಅದರಿಂದ ತಕ್ಕ ಮಟ್ಟಿಗೆ ಹಣವನ್ನು ಸಹ ಸಂಪಾದಿಸುತ್ತಿದ್ದಾರೆ.
ಈ ಕಳ್ಳ ಖದೀಮರ ಅಸಲಿ ಕಥೆ ಇಷ್ಟಕ್ಕೆ ಮುಗಿಯುವುದಿಲ್ಲ. ಇವರು ನನ್ನ ಕಥೆಕವನಗಳನ್ನು ಕದ್ದಂತೆ ಬೇರೆಯವರ ಫೋಟೋಗ್ರಾಫ್, ಪೆಂಟಿಂಗ್, ಡಿಸೈನ್ಸ, ಕ್ರಿಯೇಟಿವ್ ಆರ್ಟ್ಸ್ ಇತ್ಯಾದಿಗಳನ್ನು ಯಾವುದೇ ಮುಲಾಜಿಲ್ಲದೆ ಕದಿಯುತ್ತಿದ್ದಾರೆ. ಇವರಿಗೆ ಸ್ವಲ್ಪವೂ ನಾಚಿಕೆ, ಮಾನ, ಮರ್ಯಾದೆ, ಆತ್ಮಸಾಕ್ಷಿ ಸ್ವಲ್ಪವೂ ಇಲ್ಲ ಅನಿಸುತ್ತೆ. ನಾಚಿಕೆ ಅನ್ನೋದು ಇದ್ದಿದ್ದರೆ ಬೇರೆಯವರ ಕಥೆಕವನಗಳನ್ನು ತಮ್ಮ ಹೆಸರಿನೊಂದಿಗೆ ಪ್ರಕಟಿಸುವ ಕೀಳು ಬುದ್ಧಿ ಅವರಿಗೆ ಬರುತ್ತಿರಲಿಲ್ಲ. ಇವರ ವಿರುದ್ಧವಾಗಿ ಇವರನ್ನು ಸಾಕುತ್ತಿರುವ ಪ್ರತಿಲಿಪಿಕನ್ನಡ.ಕಾಮನೊಂದಿಗೆ ನಮ್ಮ ತಂಡದವರು ಈಮೇಲ್ ಮುಖಾಂತರ ಸಂಪರ್ಕಿಸಿದಾಗ ಅವರು ಸಕಾರಾತ್ಮಕವಾಗಿ ಸಹಕರಿಸಿ, ಬೇಗನೆ ಎಚ್ಚೆತ್ತುಕೊಂಡು ಜವಾಬ್ದಾರಿ ತೆಗೆದುಕೊಂಡು ಅವರನ್ನು ತಮ್ಮ ವೆಬಸೈಟನಿಂದ ಶಾಶ್ವತವಾಗಿ ಬ್ಯಾನ್ ಮಾಡುವ ಮೂಲಕ ಕಾಪಿರೈಟ್ ನಿಯಮಗಳನ್ನು ಗೌರವಿಸಿದ್ದಾರೆ. ಅದಕ್ಕಾಗಿ ಅವರನ್ನು ನಾನು ಗೌರವಿಸುತ್ತೇನೆ. ಆದರೆ ಅವರಿಗೆ ಗೊತ್ತಿಲ್ಲದಂತೆಯೇ ಎಷ್ಟೋ Copy Catಗಳು ಬೇರೆಯವರ ಕಂಟೆಂಟನ್ನು ಅಲ್ಲಿ ತಮ್ಮ ಹೆಸರಿನೊಂದಿಗೆ ಪ್ರಕಟಿಸಿ ಪ್ರತಿಲಿಪಿ ಸಂಸ್ಥೆಗೆ ಬಹಿರಂಗವಾಗಿ ಮಸಿ ಬಳಿಯುತ್ತಿದ್ದಾರೆ. ಇಂಥ Copy Catಗಳನ್ನು ಪೋಷಿಸದೆ ಪ್ರತಿಲಿಪಿ ಸಂಸ್ಥೆಯವರು ಕಾಪಿ ರೈಟ ನಿಯಮಗಳನ್ನು ಪಾಲಿಸುತ್ತಾರೆಂದು ನಾನು ಭಾವಿಸುವೆ ಮತ್ತು ಅವರಿಂದ ಅದನ್ನಷ್ಟನ್ನೇ ನೀರಿಕ್ಷಿಸುವೆ. ನಮ್ಮ ತಂಡ ಗೂಗಲ್ ಹಾಗೂ ಫೇಸ್ಬುಕ್ ಹೆಡ್ ಆಫೀಸಗಳಿಗೆ ಸಂಪರ್ಕಿಸಿ ಈ ಕಥೆಕವನ ಕಳ್ಳರ ಪೋಸ್ಟಗಳನ್ನು ಪ್ರತಿಲಿಪಿಕನ್ನಡ, ಪ್ರತಿಲಿಪಿ ಮಲಯಾಳಂ, Share Chat, Your Quote, Twitter ಹಾಗೂ Facebookನಿಂದ ಶಾಶ್ವತವಾಗಿ ಡಿಲಿಟ ಮಾಡಿಸುವಲ್ಲಿ ಯಶಸ್ವಿಯಾಗಿದೆ. ಆದರೆ ಕೆಲವರು ಅವುಗಳನ್ನು ತಿರುವು ಮುರುವು ಮಾಡಿ ಮತ್ತೆ ಪ್ರಕಟಿಸುತ್ತಿದ್ದಾರೆ. ಈ ಕಳ್ಳರು ಒಂದೆರಡು ವರ್ಷಗಳಿಂದ ಕದಿಯುತ್ತಾ ಬಂದಿದ್ದ ಕಂಟೆಂಟನ್ನು ಕೆಲವೇ ಕ್ಷಣಗಳಲ್ಲಿ ಡೀಲೀಟ್ ಮಾಡಿದ ಗೂಗಲ್ ಹಾಗೂ ಫೇಸ್ಬುಕನ ಇಂಟಲೆಕ್ಚುವಲ್ ಪ್ರಾರ್ಪಟಿ ರೈಟ್ಸ ಟೀಮನ್ನು ನಾನು ಶ್ಲಾಘಿಸುವೆ. ಕಾಪಿ ರೈಟ್ ನಿಯಮಗಳ ಉಲ್ಲಂಘನೆಯ ವಿಚಾರದಲ್ಲಿ ಫೇಸ್ಬುಕ್ ಮತ್ತು ಗೂಗಲ್ ತೆಗೆದುಕೊಂಡಿರುವ ದಿಟ್ಟ ನಿರ್ಧಾರವನ್ನು ನಾನು ತುಂಬು ಹೃದಯದಿಂದ ಅಭಿನಂದಿಸುವೆ.
ನಾನು ಐದು ವರ್ಷಗಳಿಂದ ಕನ್ನಡ ಸೇರಿದಂತೆ ಹಲವು ಭಾಷೆಗಳ ಕೆಲವು ದಿನಪತ್ರಿಕೆಗಳಲ್ಲಿ, ವಾರಪತ್ರಿಕೆಗಳಲ್ಲಿ ಹಾಗೂ ಮ್ಯಾಗಝೀನಗಳಲ್ಲಿ ಬರೆಯುತ್ತಿದ್ದೆ. ಆದರೆ ಈ ಮೂರು ವರ್ಷಗಳಿಂದ ನನ್ನ ಆಫೀಸಿಯಲ್ ಕನ್ನಡ ವೆಬಸೈಟ್ www.Skkannada.comನಲ್ಲಿ ನಿರಂತರವಾಗಿ ಹಾಗೂ ನಿಯತ್ತಾಗಿ ಕಥೆ, ಕವನ, ಅಂಕಣಗಳನ್ನು ಬರೆಯುತ್ತಿರುವೆ. ಅವೆಲ್ಲವೂ ಫೇಸ್ಬುಕ್ ಕಂಪನಿಯ ಸಹಯೋಗದೊಂದಿಗೆ ನನ್ನ ಫೇಸ್ಬುಕ್ ಪೇಜ್ “Director Satishkumar“ನಲ್ಲಿ ನಿರಂತರವಾಗಿ ಪ್ರಕಟವಾಗುತ್ತಿವೆ. ಅಲ್ಲಿಂದ ನನ್ನ ಕಂಟೆಂಟನ್ನು ಕದ್ದು ತಮ್ಮ ಹೆಸರಿನೊಂದಿಗೆ ಪ್ರತಿಲಿಪಿ ಕನ್ನಡ, ಪ್ರತಿಲಿಪಿ ಮಲಯಾಳಂ, Your Quote, Share Chat, Facebook, Twitter, Instagram, YouTube ಇತ್ಯಾದಿಗಳಲ್ಲಿ ಪ್ರಕಟಿಸುತ್ತಿದ್ದ 107 ಕಳ್ಳರನ್ನು ನಮ್ಮ ತಂಡ ಸಾಕ್ಷ್ಯಧಾರಗಳ ಸಮೇತ ರೆಡಹ್ಯಾಂಡಾಗಿ ಹಿಡಿದಿದೆ. ಈ ಕಳ್ಳರ ಮಾಹಿತಿಯನ್ನು ಸಂಬಂಧಪಟ್ಟ ವೆಬಸೈಟ್ ಹಾಗೂ ಸೋಸಿಯಲ್ ಮೀಡಿಯಾಗಳಿಗೆ ಒಪ್ಪಿಸಲಾಗಿದೆ. ಬೇರೆಯವರು ಬರೆದ ಕಥೆಕವನಗಳನ್ನು ಕದ್ದು ತಮ್ಮ ಹೆಸರಾಕಿಕೊಂಡು ಅದನ್ನು ಬೇಕಾಬಿಟ್ಟಿಯಾಗಿ ಬೇರೆಯೆಡೆ ಪ್ರಕಟಿಸುವುದು ಶುದ್ಧ ತಪ್ಪು. ಜೊತೆಗೆ ಅದು ಶಿಕ್ಷಾರ್ಹ ಅಪರಾಧ ಕೂಡ. ಅದಕ್ಕಾಗಿ ಇಂಥವರ ಮೇಲೆ ಕಾನೂನು ರೀತಿಯ ಕ್ರಮಗಳನ್ನು ಕೈಗೊಳ್ಳಲು ನಾನೀಗಾಗಲೆ ಪ್ರಾರಂಭಿಸಿದ್ದೇನೆ. ಶೀಘ್ರದಲ್ಲೇ ಈ ಕಳ್ಳರು ಒಂದು ಪಾಠ ಕಲಿಯುತ್ತಾರೆ. ನನ್ನ ವೆಬಸೈಟನಿಂದ ಕಥೆಕವನಗಳನ್ನು ಕದ್ದು ಅವುಗಳನ್ನು ನನ್ನ ಅನುಮತಿಯಿಲ್ಲದೆ ತಮ್ಮ ಹೆಸರಾಕಿಕೊಂಡು ಎಲ್ಲಡೆಗೆ ಪ್ರಕಟಿಸಿದ ಕೆಲವು ಕಳ್ಳರು ನಮ್ಮ ತಂಡಕ್ಕೆ ಸಾಕ್ಷಿ ಸಮೇತ ಸಿಕ್ಕಿ ಬಿದ್ದಿದ್ದಾರೆ. ಅವರ ಸಂಪೂರ್ಣ ಪಟ್ಟಿ ಇಲ್ಲಿದೆ. ಇವರು ನಿಮ್ಮ ಕಣ್ಣಿಗೆ ನನ್ನ ಕಂಟೆಂಟನೊಂದಿಗೆ ಬಿದ್ದರೆ ಅಲ್ಲೆ ಅವರಿಗೆ ಛೀಮಾರಿ ಹಾಕಿ. ಓದುಗ ಪ್ರಭುಗಳಾದ ನಿಮ್ಮಿಂದ ಈ ನಾಚಿಕೆಯಿಲ್ಲದ ನಾಲಾಯಕರು ಸ್ವಲ್ಪ ಪಾಠ ಕಲಿಯಲಿ. ನಂತರ ಕಾನೂನು ಸಂಬಂಧಪಟ್ಟವರಿಗೆ ಸೂಕ್ತವಾದ ರೀತಿಯಲ್ಲಿ ಪಾಠ ಕಲಿಸಿಯೇ ಕಲಿಸುತ್ತದೆ.
ನಮ್ಮ ಕಣ್ಣಿಗೆ ಬಿದ್ದ ಕಥೆಕವನ ಕಳ್ಳರ ಪಟ್ಟಿ ಇಲ್ಲಿದೆ ನೋಡಿ : CLICK HERE >
ಗೆಳೆಯರೇ, ನಾನು ನಿಮ್ಮನ್ನು ಗೌರವಿಸುತ್ತೇನೆ. ನೀವು ಧಾರಾಳವಾಗಿ ನನ್ನ ವೆಬಸೈಟಿಗೆ ಹಾಗೂ ಸೋಸಿಯಲ್ ಮೇಡಿಯಾ ಪೇಜಗಳಿಗೆ ಬನ್ನಿ. ನಿಮಗಿಷ್ಟಗಿರುವ ಕಂಟೆಂಟನ್ನು ಓದಿ. ಇಷ್ಟವಾದರೆ ನಿಮ್ಮ ಪ್ರೀತಿಪಾತ್ರರೊಡನೆ ಶೇರ್ ಮಾಡಿ. ನಿಮ್ಮ ಅನಿಸಿಕೆಗಳನ್ನು ಕಮೆಂಟ್ ಮಾಡಿ. ಸಾಮಾಜಿಕ ವಿಷಯಗಳ ಅಭಿವೃದ್ಧಿಯ ಬಗ್ಗೆ ಸಾಮಾಜಿಕ ಜಾಲತಾಣಗಳಲ್ಲಿ ಮಾತಾಡಿ. ಆದರೆ ಅದನ್ನೆಲ್ಲ ಬಿಟ್ಟು ನಾನು ಬರೆದ ಕಂಟೆಂಟಗೆ ನಿಮ್ಮ ಹೆಸರಾಕಿಕೊಂಡು ಅದನ್ನು ಬೇರೆಡೆಗೆ ಬೇಕಾಬಿಟ್ಟಿಯಾಗಿ ಪ್ರಕಟಿಸುವುದು ಸರಿಯಲ್ಲ. ಅದು ಕಾನೂನಿನ ಪ್ರಕಾರ ಶಿಕ್ಷಾರ್ಹ ಅಪರಾಧ. ನನ್ನ ಕಂಟೆಂಟನ್ನು ಕದ್ದು ಪ್ರಕಟಿಸಿ ನಂತರ ಕಾಪಿರೈಟ ಕಾನೂನು ಉಲ್ಲಂಘನೆಯಲ್ಲಿ ಸಿಕ್ಕು ಸುಮ್ಮನೆ ಒದ್ದಾಡಬೇಡಿ. ಈ ಎಚ್ಚರಿಕೆಯ ಮೇಲೆಯೂ ನೀವು ಈ ರೀತಿ ಮಾಡಿ ಬೇಡದನ್ನು ಮೈಮೇಲೆ ಎಳೆದುಕೊಂಡರೆ ಅದಕ್ಕೆ ಖಂಡಿತ ನಾನಂತೂ ಹೊಣೆಗಾರನಲ್ಲ. ಏಕೆಂದರೆ ತಪ್ಪು ಮಾಡಿದವರಿಗೆ ಶಿಕ್ಷೆ ವಿಧಿಸುವುದು ಕಾನೂನಿನ ಕೆಲಸ. ಅದಕ್ಕಾಗಿ ಈ ರೀತಿಯ ಕೆಲಸಗಳನ್ನು ಮಾಡದಿರಿ. ಇಲ್ಲಿ ತನಕ ನಾನು ನಿಮಗೆ ಯಾವುದೇ ಸಹಾಯ ಕೇಳಿಲ್ಲ. ಆದರೆ ಈಗ ಕೇಳುತ್ತಿರುವೆ. ನನ್ನ ಕಥೆಕವನಗಳನ್ನು ಕದ್ದು ಕಾನೂನಿನ ಕಪಿಮುಷ್ಟಿಯಲ್ಲಿ ಸಿಕ್ಕು ಒದ್ದಾಡಬೇಡಿ. ಈ ಕೋರಿಕೆಯನ್ನು ದಯಮಾಡಿ ಎಲ್ಲೆಡೆಗೆ ಬೆಂಕಿಯಂತೆ ಶೇರ್ ಮಾಡಿ ಮತ್ತು ಕಥೆ ಕವನಗಳನ್ನು ಕದಿಯುವ ನಾಲಾಯಕರಿಗೆ ತಕ್ಕ ಪಾಠ ಕಲಿಸಿ. ಏಕೆಂದರೆ ನಾನು ಬರೆಯೋ ಪ್ರತಿ ಅಕ್ಷರದ ಹಿಂದೆ ಪರ್ವತದಷ್ಟು ಪರಿಶ್ರಮವಿದೆ, ನಮ್ಮ ತಂಡದ ಹಗಲು ರಾತ್ರಿಗಳ ಪರಿಶ್ರಮವಿದೆ…. ನಿಮ್ಮ ಬೆಂಬಲ ಸದಾ ಹೀಗೆ ಇರಲಿ ಧನ್ಯವಾದಗಳು….
ಈ ಅಂಕಣ (Article) ನಿಮಗೆ ಇಷ್ಟವಾಗಿದ್ದರೆ ನಿಮ್ಮೆಲ್ಲ ಗೆಳೆಯರೊಡನೆ ಮತ್ತು ನೀವಿರುವ ಎಲ್ಲ ಕನ್ನಡ ಫೇಸ್ಬುಕ್ ಗ್ರೂಪಗಳಲ್ಲಿ ಇದನ್ನು ತಪ್ಪದೇ ಶೇರ್ (Share) ಮಾಡಿ. ಜೊತೆಗೆ ಪ್ರತಿದಿನ ಹೊಸಹೊಸ ಅಂಕಣಗಳನ್ನು, ಪ್ರೇಮಕಥೆಗಳನ್ನು, ಕವನಗಳನ್ನು ಉಚಿತವಾಗಿ ಓದಲು ತಪ್ಪದೆ ನನ್ನ ಫೇಸ್ಬುಕ್ ಪೇಜನ್ನು https://www.facebook.com/Directorsatishkumar/ (Director Satishkumar) ಲೈಕ್ ಮಾಡಿ.
Follow Me On : Facebook | Instagram | YouTube | Twitter
My Books : Kannada Books | Hindi Books | English Books
⚠ STRICT WARNING ⚠Content Rights :
ಈ ಅಂಕಣದ ಎಲ್ಲ ಹಕ್ಕುಗಳನ್ನು ಡೈರೆಕ್ಟರ್ ಸತೀಶಕುಮಾರ ಹಾಗೂ ರೋರಿಂಗ್ ಕ್ರಿಯೇಷನ್ಸ್ ಪ್ರೈವೇಟ್ ಲಿಮಿಟೆಡ್ ಕಂಪನಿ ವತಿಯಿಂದ ಸಂಪೂರ್ಣವಾಗಿ ಕಾಯ್ದಿರಿಸಲಾಗಿದೆ. ಡೈರೆಕ್ಟರ್ ಸತೀಶಕುಮಾರ ಅವರ ಅನುಮತಿಯಿಲ್ಲದೆ ಈ ಅಂಕಣದ ಯಾವುದೇ ಭಾಗವನ್ನು ಕಾಪಿ ಮಾಡುವಂತಿಲ್ಲ, ಬೇರೆ ಭಾಷೆಗಳಿಗೆ ಅನುವಾದಿಸುವಂತಿಲ್ಲ ಮತ್ತು ಇದನ್ನು ಬೇರೆಡೆಗೆ ಪ್ರಕಟಿಸುವಂತಿಲ್ಲ. ಯಾವುದೇ ಸಾಮಾಜಿಕ ಜಾಲತಾಣಗಳಲ್ಲಿ ಪೋಸ್ಟ್ ಮಾಡುವಂತಿಲ್ಲ. ಮುದ್ರಣ ಮಾಡುವಂತಿಲ್ಲ. ಒಂದು ವೇಳೆ ಯಾರಾದರೂ ಕಾಪಿ ರೈಟ್ಸ್ ನಿಯಮಗಳನ್ನು ಉಲ್ಲಂಘಿಸಿದರೆ ಅವರ ಮೇಲೆ ಸೂಕ್ತ ಕಾನೂನು ಕ್ರಮ ಕೈಗೊಳ್ಳಲಾಗುವುದು ಹಾಗೂ ಆಗಿರುವ ನಷ್ಟವನ್ನು ಅವರಿಂದಲೇ ವಸೂಲಿ ಮಾಡಲಾಗುವುದು.
All Rights of this article are fully reserved by Director Satishkumar and Roaring Creations Private Limited India. No part of this article can be copied, translated or re published anywhere without the written permission of Director Satishkumar. If such violation of copy rights found to us, then we legally punish to copy cats and recover our loss by them only.
© Director Satishkumar and Roaring Creations Private Limited, India.