ಪ್ರೀತಿಗೆ ಕಣ್ಣಿಲ್ಲ ಎಂಬ ಮಾತು ನಮ್ಮ ಮೆದುಳಿನಲ್ಲಿ ಅಚ್ಚಾಗಿ ಬಿಟ್ಟಿದೆ. ಹಳೇ ಕಾಲದಲ್ಲಿ ಮುಖ ನೋಡದೆ ಪ್ರೀತಿ ಮಾಡೋದಷ್ಟೇ ಅಲ್ಲದೆ ಮದ್ವೆ ಕೂಡ ಆಗುತ್ತಿದ್ದರು. ಆದ್ರೆ ಈಗ ಕಾಲ ಬಹಳ ಮುಂದೆ ಹೋಗಿದೆ. ಕಾಲದ ವೇಗಕ್ಕೆ ತಕ್ಕಂತೆ ಎಲ್ಲರೂ ಕಲ್ಪನೆ ಮೀರಿ ಬದಲಾಗಿದ್ದಾರೆ. ಎಲ್ಲರೂ ಈಗ ಮುದ್ದಾದ ಮುಖ ಮತ್ತು ಮಾದಕವಾದ ಮೈಯನ್ನು ನೋಡಿಯೇ ಪ್ರೀತಿಸಲು ಶುರು ಮಾಡುತ್ತಾರೆ. ಆದ್ರೆ ಸಾಚಾ ಎನಿಸಿಕೊಳ್ಳಲು ಸುಮ್ನೆ “ನಾ ನಿನ್ನ ಮನಸ್ಸು ನೋಡಿ ಪ್ರೀತಿಸುತ್ತಿದ್ದೇನೆ, ಮುಖ ನೋಡಿ ಅಲ್ಲ” ಎಂದು ಬುರಡೆ ಬಿಡುತ್ತಾರೆ. ಹುಡುಗರು ಸೌಂದರ್ಯವನ್ನು ಹುಡುಕಿದರೆ, ಹುಡುಗಿಯರು ಸಂಪತ್ತನ್ನು ಹುಡುಕುತ್ತಾರೆ. ಅದೇ ಕರಾಳ ಕಟು ಸತ್ಯ. ಅದರಲ್ಲಿ ತಪ್ಪೇನಿಲ್ಲ.
ಸರ್ಕಾರಿ ನೌಕರಿ ಇರೋ ಒಬ್ಬ ಮುದುಕನಿಗೆ ಸುಂದರವಾದ ಹುಡುಗಿಯನ್ನು ಆಕೆಯ ಮನೆಯವರು ಹೆಮ್ಮೆಯಿಂದ ಮದುವೆ ಮಾಡಿ ಕೊಡುತ್ತಾರೆ. ಆದರೆ ಆಕೆಗೆ ಇಷ್ಟವಾಗುವ ಸುಂದರವಾದ ಬಡ ಹುಡುಗನ ಜೊತೆ ಮದುವೆ ಮಾಡಲು ಖಂಡಿತ ಮುಂದಾಗಲ್ಲ. ಇದೇ ಒಂದು ಉದಾಹರಣೆ ಸಾಕು ಸೌಂದರ್ಯ ಮತ್ತು ಸಂಪತ್ತಿನ ಕಣ್ಣಾಮುಚ್ಚಾಲೆ ಆಟ ಅರ್ಥವಾಗಲು. ಪುರಾಣ ಕಾಲದಲ್ಲಿ ಮುಖ ನೋಡದೆ ಸಾವಿರಾರು ಪತ್ರ ಬರೆದು ಹತ್ರ ಆಗ್ತಿದ್ರು. ಆದ್ರೆ ಇವತ್ತು ಫೇಸ್ಬುಕಲ್ಲಿ ಫ್ರೇಂಡ್ಸಾಗಿ ಚಾಟಿಂಗ್ ಮಾಡಿ ಪ್ರೇಮಿಗಳಾಗುತ್ತಾರೆ. ಅರ್ಥವಿರದ, ಅರ್ಥವಾಗದ ವಿಷಯದ ಬಗ್ಗೆ ಅನಾವಶ್ಯಕವಾಗಿ ಬರೆಯುವ ಅವಶ್ಯಕತೆ ಇಲ್ಲ ಅನಿಸುತ್ತೆ. ಒಟ್ಟಿನಲ್ಲಿ ಪ್ರೀತಿಗೆ ಕಣ್ಣಿಲ್ಲ. ಆದ್ರೆ ಪ್ರೀತಿ ಕುರುಡಲ್ಲ. ಪ್ರೀತಿಗೆ ಕಣ್ಣಿರದಿದ್ದರೆ ಏನಂತೆ ಪ್ರೇಮಿಗಳಿಗೆ ಇದೆಯಲ್ಲ. ಪ್ರೇಮಿಗಳು ಜಗತ್ತನ್ನು ನೋಡುತ್ತಾರೆ ಎಂದ್ಮೇಲೆ ಖುದ್ದು ಪ್ರೀತಿಯೇ ಜಗತ್ತನ್ನು ನೋಡಿದಂತೆ. So ಪ್ರೀತಿ ಕುರುಡಲ್ಲ…
“ಈ ಪ್ರೀತಿ ಒಂದು ಮಹಾ ಕುರುಡು” ಎಂದರು
ಪ್ರೀತಿಗೆ ಮನಸಾರೆ ಮೋಸ ಮಾಡಿದವರು.
“ಪ್ರೀತಿಯಲ್ಲಿ ಬಿದ್ದರೆ ಬಾಳೇ ಬರಡು” ಎಂದರು
ಪ್ರೀತಿ ಉಳಿಸಿಕೊಳ್ಳಲಾಗದ ಅಸಹಾಯಕರು…
ರೋಮಿಯೋ-ಜ್ಯೂಲಿಯಟ್ ಸಾಯೋವಾಗ,
ಲೈಲಾ ಮಜನು ಲೋಕ ತ್ಯಜಿಸುವಾಗ,
ಪಾರುಗಾಗಿ ದೇವದಾಸ ಹುಚ್ಚನಾದಾಗ,
ಈ ಪ್ರೀತಿ ತನ್ನ ಅಕ್ಷಿಯನ್ನೇಕೆ ತೆರೆಯಲಿಲ್ಲ?
ಎಂದು ಕೇಳಿದರು ವಿರಹಿಗಳು…
“ಈ ಪ್ರೀತಿ ಒಂಥರಾ ಮಾಯಾಜಾಲವೇ?”
ಎಂದು ಪ್ರಶ್ನಿಸಿದರು ನವ ಪ್ರೇಮಿಗಳು.
“ಪ್ರೀತಿಗೆ ಮನಸ್ಸನ್ನು ಕೊಟ್ರೆ ಉಳಿಗಾಲವಿಲ್ಲ”
ಎಂದು ಹೆದರಿಸಿದರು ಭಗ್ನ ಪ್ರೇಮಿಗಳು…
ಪ್ರೀತಿಗೆ ಶರಣಾದೊಡೆ ಪ್ರೀತಿನೇ ಎಲ್ಲ,
ಪ್ರೀತಿ ಇರದಿದ್ದರೇ ಈ ಲೋಕವೇ ಇಲ್ಲ,
“ಪ್ರೀತಿಗೆ ಕಣ್ಣಿಲ್ಲ. ಆದರೆ ಪ್ರೀತಿ ಕುರುಡಲ್ಲ”.
ಕೇಳಿ ಪ್ರೇಮಿಗಳೇ ನನ್ನ ಮಾತು ಸುಳ್ಳಲ್ಲ…
ಈ ಅಂಕಣ (Article) ನಿಮಗೆ ಇಷ್ಟವಾಗಿದ್ದರೆ ನಿಮ್ಮೆಲ್ಲ ಗೆಳೆಯರೊಡನೆ ಮತ್ತು ನೀವಿರುವ ಎಲ್ಲ ಕನ್ನಡ ಫೇಸ್ಬುಕ್ ಗ್ರೂಪಗಳಲ್ಲಿ ಇದನ್ನು ತಪ್ಪದೇ ಶೇರ್ (Share) ಮಾಡಿ. ಜೊತೆಗೆ ಪ್ರತಿದಿನ ಹೊಸಹೊಸ ಅಂಕಣಗಳನ್ನು, ಪ್ರೇಮಕಥೆಗಳನ್ನು, ಕವನಗಳನ್ನು ಉಚಿತವಾಗಿ ಓದಲು ತಪ್ಪದೆ ನನ್ನ ಫೇಸ್ಬುಕ್ ಪೇಜನ್ನು https://www.facebook.com/Directorsatishkumar/ (Director Satishkumar) ಲೈಕ್ ಮಾಡಿ.
Follow Me On : Facebook | Instagram | YouTube | Twitter
My Books : Kannada Books | Hindi Books | English Books
⚠ STRICT WARNING ⚠Content Rights :
ಈ ಅಂಕಣದ ಎಲ್ಲ ಹಕ್ಕುಗಳನ್ನು ಡೈರೆಕ್ಟರ್ ಸತೀಶಕುಮಾರ ಹಾಗೂ ರೋರಿಂಗ್ ಕ್ರಿಯೇಷನ್ಸ್ ಪ್ರೈವೇಟ್ ಲಿಮಿಟೆಡ್ ಕಂಪನಿ ವತಿಯಿಂದ ಸಂಪೂರ್ಣವಾಗಿ ಕಾಯ್ದಿರಿಸಲಾಗಿದೆ. ಡೈರೆಕ್ಟರ್ ಸತೀಶಕುಮಾರ ಅವರ ಅನುಮತಿಯಿಲ್ಲದೆ ಈ ಅಂಕಣದ ಯಾವುದೇ ಭಾಗವನ್ನು ಕಾಪಿ ಮಾಡುವಂತಿಲ್ಲ, ಬೇರೆ ಭಾಷೆಗಳಿಗೆ ಅನುವಾದಿಸುವಂತಿಲ್ಲ ಮತ್ತು ಇದನ್ನು ಬೇರೆಡೆಗೆ ಪ್ರಕಟಿಸುವಂತಿಲ್ಲ. ಯಾವುದೇ ಸಾಮಾಜಿಕ ಜಾಲತಾಣಗಳಲ್ಲಿ ಪೋಸ್ಟ್ ಮಾಡುವಂತಿಲ್ಲ. ಮುದ್ರಣ ಮಾಡುವಂತಿಲ್ಲ. ಒಂದು ವೇಳೆ ಯಾರಾದರೂ ಕಾಪಿ ರೈಟ್ಸ್ ನಿಯಮಗಳನ್ನು ಉಲ್ಲಂಘಿಸಿದರೆ ಅವರ ಮೇಲೆ ಸೂಕ್ತ ಕಾನೂನು ಕ್ರಮ ಕೈಗೊಳ್ಳಲಾಗುವುದು ಹಾಗೂ ಆಗಿರುವ ನಷ್ಟವನ್ನು ಅವರಿಂದಲೇ ವಸೂಲಿ ಮಾಡಲಾಗುವುದು.
All Rights of this article are fully reserved by Director Satishkumar and Roaring Creations Private Limited India. No part of this article can be copied, translated or re published anywhere without the written permission of Director Satishkumar. If such violation of copy rights found to us, then we legally punish to copy cats and recover our loss by them only.
© Director Satishkumar and Roaring Creations Private Limited, India.