೧) ರಾಜಾ?ರಾಣಿ?
ರಾಜಾ : ಎಲ್ಲ್ರೂ ಫಾಸ್ಟ್ ಜನರೇಶನ್ ಅಂತಾರಲ್ಲ ಏನ್ ಹಂಗಂದ್ರೆ?
ರಾಣಿ : ಈಗಿನ ಕಾಲದಲ್ಲಿ ಫೇಸ್ಬುಕಲ್ಲಿ ಲವ್ವಾಗಿ, ಟ್ವಿಟರನಲ್ಲಿ ನಿಶ್ಚಿತಾರ್ಥವಾಗಿ, ವಾಟ್ಸಪನಲ್ಲಿ ಮದ್ವೆಯಾಗಿ, ಗೂಗಲನಲ್ಲಿ ಮಕ್ಕಳಾಗೋ ಎಲ್ಲ ಸಾಧ್ಯತೆಗಳಿವೆ. ಇದೆ ಫಾಸ್ಟ್ ಜನರೇಶನ ಕಣೋ…!!
೨) ರಾಜಾ?ರಾಣಿ?
ರಾಣಿ : ಈಗಿನ ಕಾಲದ ಹುಡುಗರಿಗೆ ಷಹಜಾನನಂತೆ ತಾಜಮಹಲ್ ಕಟ್ಟೋಕೆ ಯಾಕ ಸಾಧ್ಯವಾಗ್ತಿಲ್ಲ?
ರಾಜಾ : ಷಹಜಾನ ಮಮ್ತಾಜ್ ಸತ್ತ ಮೇಲೆ ಅವಳ ಸವಿನೆನಪಿಗಾಗಿ ತಾಜಮಹಲ್ ಕಟ್ಟಿದ. ಆದ್ರೆ ಈಗಿನ ಹುಡ್ಗೀರು ನಿಯತ್ತಾಗಿ ಪ್ರೀತ್ಸೋ ಹುಡುಗರಿಗೆ ಕೈಕೊಟ್ಟು ಅವರ ಸಮಾಧಿ ಕಟ್ತಾರೆ. ಅಂದ್ಮೇಲೆ ತಾಜಮಹಲ್ ಕಟ್ಟೋಕೆ ಯಾವ ನಿಜವಾದ ಪ್ರೇಮಿ ಜೀವಂತವಾಗಿರ್ತಾನೆ?
೩) ರಾಜಾ?ರಾಣಿ?
ರಾಣಿ : ಯಾಕ ನೀನು ಇತ್ತೀಚಿಗೆ ದಿನಾ ಸ್ನಾನ ಮಾಡ್ತಿಲ್ಲ?
ರಾಜಾ : ನೀರು ಜೀವಜಲ ಅದ್ನ ಸುಮ್ನೆ ಹಾಳು ಮಾಡಬಾರದಂತ ಸ್ನಾನ ಮಾಡದೆ ಅದ್ನ ಉಳಿತಾಯ ಮಾಡ್ತಿದೀನಿ ಅಷ್ಟೇ.
ರಾಣಿ : ಏ ಬೇವರ್ಷಿ ದಿನಾ ಸ್ನಾನ ಮಾಡು. ಇಲ್ಲಾಂದ್ರೆ ಬರಬಾರದ ರೋಗಗಳು ಬಂದು ಬೇಗನೆ ಸತ್ತೋಗತ್ತಿಯಾ. ಕರ್ನಾಟಕದಲ್ಲಿ ಕಾವೇರಮ್ಮ, ಕೃಷ್ಣಮ್ಮ, ಭೀಮಮ್ಮ, ತುಂಗಭದ್ರಮ್ಮ ಅಂತಾ ನೂರಾರು ಅಮ್ಮಂದಿರೋವಾಗ ನೀರಿಗೇನು ಬರವಿಲ್ಲ. ನೀ ದಿನಾ ಸ್ನಾನ ಮಾಡು…
೪) ರಾಜಾ?ರಾಣಿ?
ರಾಜಾ : ನನಗೆ ಎಷ್ಟೇ ಕಷ್ಟ ಆದ್ರೂ ಅದ್ನ ತಡೆದುಕೊಳ್ಳೋ ತಾಳ್ಮೆ, ಶಕ್ತಿ ಇದೆ ಗೊತ್ತಾ?
ರಾಣಿ : ಹಾಗಾದರೆ ನಾನು ಬೇರೆಯವನನ್ನು ಮದ್ವೆಯಾಗ್ತೀನಿ. ನೀನು ಹುಚ್ಚನಾಗದೆ ಇದ್ದು ತೋರಿಸು. ಆಮೇಲೆ ಗೊತ್ತಾಗುತ್ತೆ ನಿನ್ನ ತಾಳ್ಮೆ ..!
೫) ರಾಜಾ?ರಾಣಿ?
ರಾಜಾ : ಇಂದಿನ ಪ್ರೇಮಿಗಳು ತಮ್ಮ ಪ್ರೀತಿಗೆ ಏನನ್ನು ಸಾಕ್ಷಿ ಎಂದು ಅಪ್ಪ ಅಮ್ಮನಿಗೆ ಹೇಳ್ತಾರೆ?
ರಾಣಿ : ಈಗ ಬಹುಪಾಲು ಜನ ಹೀಗೇ ಹೇಳ್ತಾರೆ
“ಉತ್ತರಕ್ಕೆ ಕಾಶಿ
ದಕ್ಷಿಣಕ್ಕೆ ಬನವಾಸಿ
ನನ್ನ ಮತ್ತು ಅವನ ಪ್ರೀತಿಗೆ ನನ್ನ ಹೊಟ್ಟೆಯಲ್ಲಿರುವ ಮಗುವೇ ಸಾಕ್ಷಿ”.
೬) ರಾಜಾ?ರಾಣಿ?
ಟೀಚರ್ : ನಮ್ಮ ಜೀವನದಲ್ಲಿ ಎಷ್ಟೇ ಕಷ್ಟಗಳು ಬಂದರೂ ಸಾವಿರಾರು ಸೋಲುಗಳು ಸವಾಲಾದರೂ ಕಂಗೆಡದೆ ಮನದಲ್ಲಿ ಆಶಾಜ್ಯೋತಿಯನ್ನು ಪ್ರತಿಷ್ಟಾಪಿಸಿ ಮುನ್ನಡೆಯಬೇಕು..
ರಾಜಾ : ನಮ್ಮ ಕಾಲೇಜ್ನಲ್ಲಿ ಆಶಾ ಮಾತ್ರ ಇದಾಳೆ. ಈ ಜ್ಯೋತಿಯನ್ನು ಎಲ್ಲಿಂದ ತರೋದು ಮಿಸ್..?
೭) ರಾಜಾ?ರಾಣಿ?
ರಾಣಿ : ನೀನು ನನ್ನ ನಿಜವಾಗಿಯೂ ಪ್ರೀತಿಸತ್ತಿಯಾ?
ರಾಜಾ ; ಹೌದು, ನಿನಗಾಗಿ ಏನ್ ಬೇಕಾದರೂ ಮಾಡ್ತೀನಿ..
ರಾಣಿ : ಹಾಗಾದ್ರೆ ನನ್ನಿಂದಲೇ ನಿನ್ನ ಬಾಳು ಬೆಳಗಬೇಕು. ನಾನಿಲ್ಲದೆ ನೀ ಬದುಕಲ್ಲ. ಆದ್ದರಿಂದ ನಾ ಹೇಳಿದಂಗೆಲ್ಲ ನೀ ಕೇಳಬೇಕು. ಹೋಗಿ ನನಗೊಂದು ಲೋಟ ಕಾಫಿ ಮಾಡ್ಕೊಂಡು ಬಾ ಸ್ವಲ್ಪ ತಲೆ ನೋಯ್ತಿದೆ. ನಂತ್ರ ಸ್ವಲ್ಪ ಕಾಲ ಒತ್ತೊವಂತೆ..
ರಾಜಾ : ಅಮ್ಮಣಿ ನಾ ನಿನ್ನ ಪ್ರೀತಿಸುತ್ತಿರೋದು ನಿಜ. ಹಾಗಂತಾ ನೀ ಹೇಳಿದಂಗೆಲ್ಲ ಕೇಳ್ಕೊಂಡು ಬಿದ್ದಿರೋಕೆ ಆಗಲ್ಲ. ಬದುಕೋಕೆ ಒಂದು ಹಿಡಿ ಹಿಟ್ಟು, ಮಾನ ಮುಚ್ಚೋಕೆ ಮೂರಡಿ ಬಟ್ಟೆ, ಉಸಿರಾಡೋಕೆ ಗಾಳಿ ಬೇಕು ನೀನಲ್ಲ. ನೀನಿಲ್ಲದೆ ನಾ ಬದುಕುವೆ.
ಅಜ್ಜಿಯ ಜಂಭದ ಕೋಳಿ ಕೂಗದಿದ್ರೂ ಬೆಳಗಾಗುತ್ತೆ,
ರಾಜಾ ಸತ್ರೂ ರಾಜ್ಯಭಾರ ನಡೆಯುತ್ತೆ,
ಜಂಭದ ಹುಡ್ಗೀರ ಪ್ರೀತಿ ಸಿಗದಿದ್ರು ಹುಡುಗರ ಬಾಳು ಬೆಳಗುತ್ತೆ….
೮) ರಾಜಾ?ರಾಣಿ?
ರಾಜಾ : ನೀವ್ ಹುಡ್ಗೀರು ತುಂಬಾ ಸ್ಲೀಮ್ ಆಗಿರತ್ತೀರಲ್ಲ ಏನೀದರ ಗುಟ್ಟು?
ರಾಣಿ : ಅದರಲ್ಲಿ ಮಹಾನ್ ಗುಟ್ಟೇನು ಇಲ್ಲ. ಆಗದವರನ್ನು ನೋಡಿ ಪದೇಪದೇ ಮೂಗು ಮುರಿದುಕೊಳ್ಳೊದು, ಆಗುವವರನ್ನು ನೋಡಿ ಸಿಕ್ಕಾಪಟ್ಟೆ ಕಣ್ಣು ಹೊಡೆಯುವುದು, ಸುಮ್ನೆ ಎಲ್ಲರಿಗೂ ಬೈಯ್ಯೋದು, ಯಾವಾಗಲೂ ಕೈಬೆರಳುಗಳನ್ನು ಮುರಿಯೋದು, ಕಾರಣವಿಲ್ಲದೆ ನಗೋದು ಇಲ್ಲಾ ಅಳೋದು ಇತ್ಯಾದಿ ಸುಲಭ ಯೋಗಾಸನಗಳನ್ನು ದಿನದ 24 ಗಂಟೆನೂ ಮಾಡ್ತಾ ಇರ್ತೀವಿ ಅಷ್ಟೇ …!!
೯) ರಾಜಾ?ರಾಣಿ?
ರಾಜಾ : ಬಾರು ಗಂಡ್ಮಕ್ಕಳ ತವರಾದ್ರೆ, ಹೆಣ್ಮಗಳ ತವರೂರು ಯಾವುದು?
ರಾಣಿ : ಬ್ಯೂಟಿ ಪಾರ್ಲರ್ ಕಣೋ..
ರಾಜಾ : ಬಾರು ಗ್ರೆಟೋ? ಅಥವಾ ಬ್ಯೂಟಿ ಪಾರ್ಲರ್ ಗ್ರೆಟೋ?
ರಾಣಿ : ಬ್ಯೂಟಿ ಪಾರ್ಲರ್ ಮುಖದ ಅಂದ ಹೆಚ್ಚಿಸುತ್ತೆ. ಆದ್ರೆ ಮನಸ್ಸಿನ ಭಾವನೆಗಳನ್ನು ಹಂಚಿಕೊಳ್ಳಲ್ಲ. ಬಾರು ಮನಸ್ಸಿನ ಭಾವನೆಗಳನ್ನು ಹಂಚಿಕೊಳ್ಳುತೆ. ಆದ್ರೆ ನಿಮ್ಮ ಅಂದಗೆಡಿಸುತ್ತೆ. ಆದ್ದರಿಂದ ಎರಡೂ ಗ್ರೇಟ್ ಅಲ್ಲ….
೧೦) ರಾಜಾ?ರಾಣಿ?
ರಾಜಾ : ಈಗಿನ ಕೆಲ ಹುಡ್ಗೀರು ತುಂಡು ತುಂಡಾದ ಬಟ್ಟೆಗಳನ್ನು ಧರಿಸಲು ಕಾರಣಗಳೇನಿರಬಹುದು?
ರಾಣಿ :
* ಅವರಿಗೆ ತುಂಬಾ ಬಡತನವಿರಬಹುದು.
* ಅವರು ಫ್ಯಾಷನ್ಗೆ ಫೀದಾ ಆಗಿರಬಹುದು.
* ಸೀರೆ ಉಟ್ಟರೆ ಹಳ್ಳಿ ಗೌರಮ್ಮ ಅಂತಾರೆ ಎಂಬ ಭಯ.
* ತುಂಬಾ ತೆಳ್ಳಗಿರುವುದರಿಂದ ಅವರ ಮೈಮೇಲೆ ಬಟ್ಟೆ ನಿಲ್ಲಲ್ಲ. ಒಂದು ವೇಳೆ ನಿಂತ್ರು ಹುಡುಗರು ಹಿಂದೆ ಬೀಳಲ್ಲ ಎಂಬ ಭಯ..
* ಹುಡುಗರು ಕುರಿಗಳಂತೆ ತಮ್ಮ ಹಿಂದೆ ಬರಲಿ ಎಂಬ ಅಶ್ಲೀಲ ಆಸೆ..
೧೧) ರಾಜಾ?ರಾಣಿ?
ರಾಜಾ : ನಿನ್ನಿಂದ ನಾನು ಹಾಳಾದೆ ಕಣೇ.
ರಾಣಿ : ನೀನು ಕೊಟ್ಟ ಮೊಬೈಲ್, ಚಿನ್ನದ ಬಳೆ ಇತ್ಯಾದಿಗಳನ್ನೆಲ್ಲ ಅರ್ಧಬೆಲೆಗೆ ಮಾರಿ ನಾನು ನಿನ್ನಿಂದಲೇ ಉದ್ಧಾರವಾದೆ ಕಣೋ…
೧೨) ರಾಜಾ?ರಾಣಿ?
ರಾಣಿ : ಪ್ರೇಮಿಗಳು ಹೆಚ್ಚಾಗಿ ಓಡೋಗಿ ಯಾಕೆ ಮದ್ವೆಯಾಗ್ತಾರೆ?
ರಾಜಾ : ವಯಸ್ಸಿಗೆ ಬರದವರ ನಡುವೆ “18-21” ನಿಯಮದ ಬೇಲಿ ಇರುವುದರಿಂದ ಮನೆಯಲ್ಲಿ ಮತ್ತು ರಿಜಿಸ್ಟ್ರಾರ್ ಆಫೀಸಿನಲ್ಲಿ ಒಪ್ಪಲ್ಲ. ಇನ್ನೂ ವಯಸ್ಸಿಗೆ ಬಂದವರ ಮದುವೆಗೆ ಜಾತಿ ಅಂತಸ್ತುಗಳ ಮುಳ್ಳು ಅಡ್ಡ ಬಂದಿರುತ್ತದೆ.
೧೩) ರಾಜಾ?ರಾಣಿ?
ರವಿ : ನಾನು ನಿನ್ನನ್ನು ಮನಸಾರೆ ಪ್ರೀತಿಸುತ್ತಿದ್ದೇನೆ.
ಸುವಿ : ಅದಕ್ಕೆ ನಾನೇನ್ ಮಾಡ್ಲಿ?
ರವಿ : ನೀನು ಸಹ ನನ್ನನ್ನು ಪ್ರೀತಿಸು.
ಸುವಿ : ಆಗಲ್ಲ. ಯಾಕಂದ್ರೆ ನಾನೀಗ ಡಬ್ಬಲ್ MA ಗ್ರ್ಯಾಜುಯೇಟ್.
ರವಿ : ಅಂದ್ರೆ?
ಸುವಿ : ಡಬ್ಬಲ್ MA = ಮದುವೆನು ಆಗಿದೆ + ಮಕ್ಕಳು ಆಗಿವೆ.
೧೪) ರಾಜಾ?ರಾಣಿ?
ಸಾವಿತ್ರಿ : ನಿಮ್ಮ ಯಜಮಾನ್ರು ಎಲ್ಲಿರುತ್ತಾರೆ?
ಗಾಯತ್ರಿ : ಬೆಳಿಗ್ಗೆ ಬಚ್ಚಲು ಮನೇಲಿ, ಮಧ್ಯಾಹ್ನ ಆಫೀಸಿನಲ್ಲಿ, ಸಾಯಂಕಾಲ ಬಾರಲ್ಲಿ ಮತ್ತು ರಾತ್ರಿಯೀಡಿ ಚರಂಡಿಯಲ್ಲಿರುತ್ತಾರೆ.
ಸಾವಿತ್ರಿ : ಮತ್ತೆ ನೀನು?
ಗಾಯತ್ರಿ : ಬೆಳಿಗ್ಗೆ ಅಡುಗೆ ಮನೇಲಿ, ಮಧ್ಯಾಹ್ನ ಪಕ್ಕದ ಮನೇಲಿ, ಸಾಯಂಕಾಲ ನಮ್ಮನೆ ಟಿವಿ ಮುಂದೆ ಮತ್ತು ರಾತ್ರಿ ಬೇರೆಯವರ ಬೆಡರೂಮ್ನಲ್ಲಿರುತ್ತೇನೆ.
೧೫) ರಾಜಾ?ರಾಣಿ?
ರಾಣಿ : ಪುನೀತ ರಾಜಕುಮಾರ ಅಭಿಮಾನಿಗಳಿಗೆ ಏನೆಂದು ಕರೆಯಬಹುದು?
ರಾಜಾ : ಅಣ್ಣಾಬಾಂಡ್ಸ್….
ರಾಣಿ : ಮತ್ತೆ ಮಾಲಾಶ್ರೀ ಅಭಿಮಾನಿಗಳಿಗೆ?
ರಾಜಾ : ಅಕ್ಕಾಬಾಂಡ್ಸ್….
೧೬) ರಾಜಾ?ರಾಣಿ?
ರಾಣಿ : ಹುಡುಗಿಯರಿಗೆ “ಕಳ್ಳಿ, ಮಳ್ಳಿ” ಎಂದೆಲ್ಲಾ ಕರೆಯುತ್ತಾರಲ್ಲ ಯಾಕೆ?
ರಾಜಾ : ಹುಡುಗಿಯರು ಹುಟ್ಟುವಾಗಲೇ ಹುಡುಗರನ್ನು ನಿಯಂತ್ರಣದಲ್ಲಿಟ್ಟುಕೊಳ್ಳುವ ಮಾಯಾವಿದ್ಯೆಯನ್ನು ಕಲಿತಿರುತ್ತಾರೆ. ಆದರೆ ಅದನ್ನು ಎಲ್ಲಿಯೂ ಅನಾವಶ್ಯಕವಾಗಿ ಪ್ರದರ್ಶಿಸದೇ, ಅವಶ್ಯಕತೆಯಿದ್ದಾಗ ಮಾತ್ರ ಯಾರಿಗೂ ಗೊತ್ತಾಗದಂತೆ ಬಳಸಿ ಜಯಗಳಿಸುತ್ತಾರೆ. ಅದಕ್ಕೆ ಅವರನ್ನು ಹಾಗೆ ಕರೆಯುತ್ತಾರೆ.
೧೭) ರಾಜಾ?ರಾಣಿ?
ರಾಣಿ : ಪಕ್ಕದ ಮನೆ ಆಂಟಿ ಯಾಕೆ ಅವರ ಗಂಡನಿಗೆ ಡೈವರ್ಸ ಕೊಟ್ಟರು?
ರಾಜಾ : ಅವರ ಗಂಡ ಅವರಿಗೆ ಹೆದರಿ ರಾತ್ರಿ ಬೆಡ್ರೂಮಿಗೆ ಬರುತ್ತಿರಲಿಲ್ಲವಂತೆ. ಅದಕ್ಕೆ ಅವರಿಗೆ ಮಕ್ಕಳಾಗಿರಲಿಲ್ಲ. ಇದರಿಂದ ಮನನೊಂದು ಡೈವರ್ಸ ಕೊಟ್ಟರು.
೧೮) ರಾಜಾ?ರಾಣಿ?
ರಾಜಾ : ನೀನು ತುಂಬಾ ಸುಂದರವಾಗಿದ್ದರೂ ಸಹ ಯಾಕೆ ನಿಮ್ಮನೆ ಕಡೆ ಪೋಲಿ ಹುಡುಗರ ದಂಡು ಸುಳಿಯೋದಿಲ್ಲ?
ರಾಣಿ : ನಮ್ಮನೆ ಗೇಟಿಗೆ “ನಾಯಿಯಿದೆ ಎಚ್ಚರಿಕೆ” ಎಂಬ ನಾಮಫಲಕದ ಬದಲಾಗಿ “ಹುಚ್ಚು ಹುಡುಗಿಯಿದ್ದಾಳೆ ಎಚ್ಚರಿಕೆ” ಎಂಬ ನಾಮಫಲಕವನ್ನು ನೇತಾಕಿದ್ದೇನೆ…
೧೯) ರಾಜಾ?ರಾಣಿ?
ರಾಜಾ : ಯಾಕೆ ನೀನು ನನ್ನ ಅನುಮತಿಯಿಲ್ಲದೆ ಇವತ್ತು ಕಾಲೇಜಿನಿಂದ ಬರುವಾಗ ಕಿಸ್ ಕೊಟ್ಟೆ?
ರಾಣಿ : ಏಕೆಂದರೆ ನೀನು ಹಾಕಿಕೊಂಡಿದ್ದ ಟೀ ಶರ್ಟ್ ಮೇಲೆ “Please Kiss Me” ಅಂತಾ ಬರೆದಿತ್ತು. ಡೌಟ್ ಇದ್ದರೆ ಶರ್ಟ್ ತೆಗೆದು ನೋಡಿಕೊ…
೨೦) ರಾಜಾ?ರಾಣಿ?
ರಾಣಿ : ಇತ್ತೀಚಿಗೆ ಹುಡುಗರು ಯಾಕೆ ಹೆಚ್ಚಾಗಿ ಗಡ್ಡ ಬಿಡುತ್ತಿದ್ದಾರೆ?
ರಾಜಾ : ತಮಗಿಂತ ತಮ್ಮ ಪ್ರೇಯಸಿಯರು ಮುದ್ದಾಗಿ ಸುಂದರವಾಗಿ ಕಾಣಲಿ ಎನ್ನೋ ವಿಶಾಲ ಮನೋಭಾವ ಅಷ್ಟೇ ..
೨೧) ರಾಜಾ?ರಾಣಿ?
ರಾಜಾ : ಇತ್ತೀಚಿಗೆ ಹುಡ್ಗೀರು ಯಾಕೆ ಮುಖ ಮುಚ್ಚಿಕೊಂಡು ಓಡಾಡುತ್ತಿದ್ದಾರೆ?
ರಾಣಿ : ಮುಖ ಮುಚ್ಚಿಕೊಂಡು ಬಾಯಫ್ರೇಂಡ್ ಜೊತೆ ಸುತ್ತಾಡಿದರೆ ಮನೆಯವರಿಗೆ ಬೇಗನೆ ಗೊತ್ತಾಗಲ್ಲ ಎಂಬ ಬುದ್ಧಿವಂತಿಕೆ ಇಲ್ಲವೇ ತಮ್ಮ ಮುಖ ಸುಂದರವಾಗಿಲ್ಲ ಅನ್ನೋ ಬೇಜಾರು ಇಲ್ಲವೇ ಪೋಲಿಗಳಿಂದ ಅಸಭ್ಯ ವರ್ತನೆಯನ್ನು ಎದುರಿಸಬೇಕಾಗುತ್ತದೆ ಎಂಬ ಗೊಂದಲಗಳಿಂದ ಮುಖ ಮುಚ್ಚಿಕೊಂಡು ಓಡಾಡುತ್ತಿದ್ದಾರೆ.
೨೨) ರಾಜಾ?ರಾಣಿ?
ರಾಣಿ : ಒಂದು ವೇಳೆ ನಿನಗೆ ಕೆಲಸ ಸಿಗದಿದ್ದರೆ ಕೆಲಸಕ್ಕಾಗಿ ಬೀದಿಬೀದಿ ಅಲೆಯುತ್ತಿಯಾ?
ರಾಜಾ : ಖಂಡಿತ ಕೆಲ್ಸಕ್ಕಾಗಿ ಅಲೆಯಲ್ಲ. ನಿನ್ನನ್ನು ಮದ್ವೆಯಾಗಿ ನಿನ್ನ ಸಂಬಳದಲ್ಲಿ ಆರಾಮಾಗಿ ಇರ್ತೀನಿ. ಒಂದು ವೇಳೆ ನೀ ನನ್ನ ಮದುವೆಯಾಗದಿದ್ರೆ ಏನಾದರೂ ಒಂದು ತರಲೆ ಕೆಲ್ಸ ಮಾಡಿ ಜೈಲು ಸೇರ್ತಿನಿ. ಜೈಲಲ್ಲಿ ಲಂಚ ಪಡೆಯದೆ ಕೆಲಸ, ಊಟ, ಆಶ್ರಯ ಎಲ್ಲಾ ಕೊಡ್ತಾರೆ …!!
೨೩) ರಾಜಾ?ರಾಣಿ?
ರಾಣಿ : ಹುಡುಗಿಯರನ್ನು ಯಾಕೆ ನಿಂಬೆ ಹಣ್ಣಿಗೆ ಹೋಲಿಸುತ್ತಾರೆ?
ರಾಜಾ : ನಾವು ಎಷ್ಟೇ ಪ್ರೀತಿ ಹಾಗೂ ವಿಶ್ವಾಸದಿಂದ ನಿಂಬೆ ಹಣ್ಣನ್ನು ಹಿಂಡಿದರೂ ಅದು ಹಾಲನ್ನು ಒಡೆದು ಹಾಕುತ್ತದೆ. ಅದೇ ರೀತಿಯಾಗಿ ನಾವು ಹುಡ್ಗೀರನ್ನು ಎಷ್ಟೇ ಪ್ರೀತಿಯಿಂದ ಪ್ರೀತಿಸಿದರೂ ಅವರು ಒಂದಲ್ಲ ಒಂದಿನ ಹುಡುಗರ ಹಾಲಿನಂತ ಹೃದಯವನ್ನು ಒಡೆದು ಹಾಕುತ್ತಾರೆ. ಅದಕ್ಕೆ ಹುಡುಗಿಯರನ್ನು ನಿಂಬೆ ಹಣ್ಣಿಗೆ ಹೋಲಿಸುತ್ತಾರೆ.
೨೪) ರಾಜಾ?ರಾಣಿ?
ರಾಜಾ : ಹುಡುಗರನ್ನು ಯಾಕೆ ಕಬ್ಬಿಗೆ ಹೋಲಿಸುತ್ತಾರೆ?
ರಾಣಿ : ನಾವು ಎಷ್ಟೇ ಕೋಪದಿಂದ ಕಬ್ಬನ್ನು ಗಾಣದೊಳಗೆ ಹಾಕಿದರೂ ಅದು ನಮಗೆ ಸಿಹಿ ಹಾಲನ್ನೆ ಕೊಡುತ್ತದೆ. ಅದೇ ರೀತಿಯಾಗಿ ಹುಡುಗರಿಗೆ ಹುಡುಗಿಯರು ಎಷ್ಟೇ ಕಷ್ಟ ಕೊಟ್ರು, ಬೀದಿಯಲ್ಲಿ ಬೈದು ಅವಮಾನ ಮಾಡಿದ್ರೂ ಸಹ ಅವರು ಹುಡುಗಿಯರಿಗೆ ಒಳ್ಳೆಯದನ್ನೇ ಬಯಸುತ್ತಾರೆ. ಮತ್ತಷ್ಟು ಪ್ರೀತಿಸುತ್ತಾರೆ. ಅದಕ್ಕೆ ಹುಡುಗರನ್ನು ಕಬ್ಬಿಗೆ ಹೋಲಿಸುತ್ತಾರೆ.
೨೫) ರಾಜಾ?ರಾಣಿ?
ರಾಜಾ : ಹುಡುಗಿಯರ ಮುಂದೆ ಹುಡುಗರು ಗಂಟೆಗಟ್ಟಲೆ ಕಣ್ಣೀರು ಹಾಕಿದ್ರೂ ಅವರ ಕಲ್ಲು ಹೃದಯ ಕರಗಲ್ಲ. ಆದ್ರೆ ಅದೇ ಹುಡ್ಗಿರು ಹುಡುಗರ ಮುಂದೆ ಒಂದೇ ಒಂದು ಮೊಸಳೆ ಕಣ್ಣೀರು ಹಾಕಿದರೆ ಸಾಕು ಹುಡುಗರ ಹೃದಯ ಕರಗಿ ನೀರಾಗಿ ನದಿಯಾಗಿ ಹರಿದು ಪ್ರೇಮಸಾಗರ ಸೇರಿಬಿಡುತ್ತೆ. ಹೀಗಿರುವಾಗ ನಾವೇಕೆ ಹುಡುಗಿಯರಿಗೆ ಸೂಕ್ಷ್ಮಹೃದಯಿಗಳು ಎನ್ನಬೇಕು?
ರಾಣಿ : ನಿನಗ್ಯಾರು ಹಾಗೆ ಕರೆಯೆಂದವರು. ಬೇಕಾದರೆ ನೀ ಹುಡುಗಿಯರಿಗೆ ಕಲ್ಲು ಹೃದಯದವರೆಂದು ಬಿರುದು ಕೊಡು. ಆದ್ರೆ ನನ್ನನ್ನು ಬಿಟ್ಟು …
೨೬) ರಾಜಾ?ರಾಣಿ?
ರಾಜಾ : ನಿನಗೆ ಜಾಸ್ತಿ ಖುಷಿಯಾಗಿ ಪ್ರೀತಿ ಹೆಚ್ಚಾದ್ರೆ ಏನ್ ಮಾಡ್ತೀಯಾ?
ರಾಣಿ : ನಮ್ಮ ಮನೇಲಿರೋ ನಾಯಿಮರಿಗೆ ನೂರು ಮುತ್ತು ಕೊಡ್ತೀನಿ.
ರಾಜಾ : ಜಾಸ್ತಿ ಕೋಪ ಬಂದ್ರೆ?
ರಾಣಿ : ನಿನಗೆ ಸರಿಯಾಗಿ ಜಾಡಿಸಿ ಒದಿತಿನಿ….
ಪ್ರೇಮಿಗಳ 26 ಪೋಲಿ ಮಾತುಗಳು…!! Love Talks in Kannada
ಈ ಅಂಕಣ (Article) ನಿಮಗೆ ಇಷ್ಟವಾಗಿದ್ದರೆ ನಿಮ್ಮೆಲ್ಲ ಗೆಳೆಯರೊಡನೆ ಮತ್ತು ನೀವಿರುವ ಎಲ್ಲ ಕನ್ನಡ ಫೇಸ್ಬುಕ್ ಗ್ರೂಪಗಳಲ್ಲಿ ಇದನ್ನು ತಪ್ಪದೇ ಶೇರ್ (Share) ಮಾಡಿ. ಜೊತೆಗೆ ಪ್ರತಿದಿನ ಹೊಸಹೊಸ ಅಂಕಣಗಳನ್ನು, ಪ್ರೇಮಕಥೆಗಳನ್ನು, ಕವನಗಳನ್ನು ಉಚಿತವಾಗಿ ಓದಲು ತಪ್ಪದೆ ನನ್ನ ಫೇಸ್ಬುಕ್ ಪೇಜನ್ನು https://www.facebook.com/Directorsatishkumar/ (Director Satishkumar) ಲೈಕ್ ಮಾಡಿ.
Follow Me On : Facebook | Instagram | YouTube | Twitter
My Books : Kannada Books | Hindi Books | English Books
⚠ STRICT WARNING ⚠Content Rights :
ಈ ಅಂಕಣದ ಎಲ್ಲ ಹಕ್ಕುಗಳನ್ನು ಡೈರೆಕ್ಟರ್ ಸತೀಶಕುಮಾರ ಹಾಗೂ ರೋರಿಂಗ್ ಕ್ರಿಯೇಷನ್ಸ್ ಪ್ರೈವೇಟ್ ಲಿಮಿಟೆಡ್ ಕಂಪನಿ ವತಿಯಿಂದ ಸಂಪೂರ್ಣವಾಗಿ ಕಾಯ್ದಿರಿಸಲಾಗಿದೆ. ಡೈರೆಕ್ಟರ್ ಸತೀಶಕುಮಾರ ಅವರ ಅನುಮತಿಯಿಲ್ಲದೆ ಈ ಅಂಕಣದ ಯಾವುದೇ ಭಾಗವನ್ನು ಕಾಪಿ ಮಾಡುವಂತಿಲ್ಲ, ಬೇರೆ ಭಾಷೆಗಳಿಗೆ ಅನುವಾದಿಸುವಂತಿಲ್ಲ ಮತ್ತು ಇದನ್ನು ಬೇರೆಡೆಗೆ ಪ್ರಕಟಿಸುವಂತಿಲ್ಲ. ಯಾವುದೇ ಸಾಮಾಜಿಕ ಜಾಲತಾಣಗಳಲ್ಲಿ ಪೋಸ್ಟ್ ಮಾಡುವಂತಿಲ್ಲ. ಮುದ್ರಣ ಮಾಡುವಂತಿಲ್ಲ. ಒಂದು ವೇಳೆ ಯಾರಾದರೂ ಕಾಪಿ ರೈಟ್ಸ್ ನಿಯಮಗಳನ್ನು ಉಲ್ಲಂಘಿಸಿದರೆ ಅವರ ಮೇಲೆ ಸೂಕ್ತ ಕಾನೂನು ಕ್ರಮ ಕೈಗೊಳ್ಳಲಾಗುವುದು ಹಾಗೂ ಆಗಿರುವ ನಷ್ಟವನ್ನು ಅವರಿಂದಲೇ ವಸೂಲಿ ಮಾಡಲಾಗುವುದು.
All Rights of this article are fully reserved by Director Satishkumar and Roaring Creations Private Limited India. No part of this article can be copied, translated or re published anywhere without the written permission of Director Satishkumar. If such violation of copy rights found to us, then we legally punish to copy cats and recover our loss by them only.
© Director Satishkumar and Roaring Creations Private Limited, India.