ನನ್ನವನು : ಕನ್ನಡ ಪ್ರೇಮ ಕವನ – Kannada Real Love Poems – Prema Kavana

You are currently viewing ನನ್ನವನು : ಕನ್ನಡ ಪ್ರೇಮ ಕವನ – Kannada Real Love Poems – Prema Kavana

ಹಾಯ್, ನಾನು ಬೇಕಿದ್ದರೆ ಮೈಕ್ ಹಿಡಿದು ನಾಲ್ಕೈದು ಗಂಟೆ ಮಾತನಾಡಬಲ್ಲೆ. ಆದರೆ ನನಗೆ ರಾಜನಂತೆ (ಸತೀಶಕುಮಾರ) ಬರೆಯಲು ಬರಲ್ಲ. ಏಕೆಂದರೆ ನಾನು ದೊಡ್ಡ ಆಲಸಿ. ನಾನು ಅವನು ಬರೆದ ಎಲ್ಲ ಅಂಕಣಗಳನ್ನು, ಕವನಗಳನ್ನು, ಬುಕಗಳನ್ನು ಮಿಸ್ ಮಾಡದೇ ಓದುವೆ. ಏಕೆಂದರೆ ಅವನು ಬರೆಯುವುದೆಲ್ಲವೂ ನನಗಾಗಿಯೇ. ಅವನ ಅಕ್ಷರ ಲೋಕದಲ್ಲಿ ನಾನು ಸದಾ ಅಮರಳಾಗಿರುವೆ. ಅವನು ಬಹಳಷ್ಟು ಕೇಳಿಕೊಂಡಿರುವುದಕ್ಕೆ ಈ ಅಂಕಣವನ್ನು ಬರೆಯುವ ಸಾಹಸ ಮಾಡಿರುವೆ. ಅವನನ್ನು ರಾಜಾ ಎನ್ನುವ ಹಕ್ಕು ಈ ರಾಣಿಗಷ್ಟೇ ಇದೆ. ನನ್ನ ಈ ಮೊದಲ ಪ್ರಯತ್ನಕ್ಕೆ ಮೆಚ್ಚುಗೆ ಸಿಕ್ಕರೆ ಮುಂದೆ ಬರೆಯಲು ಪ್ರಯತ್ನಿಸುವೆ. ಇಲ್ಲವಾದರೆ ಇದೆ ಮೊದಲ ಪ್ರಯತ್ನ, ಇದೆ ಕೊನೆ ಪ್ರಯತ್ನ. ಯಾವುದಕ್ಕೂ ನಿಮ್ಮ ಪ್ರಾಮಾಣಿಕ ಫೀಡಬ್ಯಾಕ್ ಕೊಡಿ ನೋಡೋಣಾ…

Director Satishkumar

“ನನ್ನವನು ಪದಗಳಿಗೆ ಸಿಗದ ಗುಣದವನು. ಅವನನ್ನು ಪದಗಳಲ್ಲಿ ಬಂಧಿಸಿಡುವಷ್ಟು ಜಾಣೆಯಲ್ಲ ನಾನು…

ನನ್ನವನು ಸ್ವಲ್ಪ ಕೋಪಿಷ್ಟ. ಅವನಿಗೆ ಮೂಗಿನ ತುದಿಯಲ್ಲೇ ಕೋಪವಿದೆ‌. ಆದರೆ ಬೆಟ್ಟದಷ್ಟು ತಾಳ್ಮೆಯೂ ಅವನಿಗಿದೆ…

ನನ್ನವನು ಒಂಥರಾ ಅಡುಗೆ ಉಪ್ಪಿದ್ದಂತೆ‌. ಕೆಲವೊಂದಿಷ್ಟು ಸಲ ಅವನ ಇರುವಿಕೆ ಅರ್ಥವಾಗಲ್ಲ. ಅವನು ನನ್ನ ಬಳಿ ಇಲ್ಲದಿರುವಾಗ ಜೀವನದಲ್ಲಿ ಯಾವುದೇ ರುಚಿ ಇರುವುದಿಲ್ಲ…

ಅವನು ಒಂಥರಾ ಕಬ್ಬಿಣದಂತೆ. ಅವನನ್ನು ಹಾಳು ಮಾಡುವ ಸಾಮರ್ಥ್ಯ ಯಾರಿಗೂ ಇಲ್ಲ. ಆದರೆ ತುಕ್ಕಿಗೆ ಕಬ್ಬಿಣವನ್ನು ಸೈಲೆಂಟಾಗಿ ಹಾಳು ಮಾಡುವ ಸಾಮರ್ಥ್ಯವಿದೆ. ಅದಕ್ಕೆ ನಾನು ನನ್ನವನ ಬಳಿ ಅಹಂಕಾರ, ಕೋಪ, ಆಲಸಿತನ ಎಂಬ ತುಕ್ಕುಗಳು ಸುಳಿಯದಂತೆ ನೋಡಿಕೊಳ್ಳುವೆ‌‌…

ನನ್ನವನು ಕೋಟಿಗಳ ಒಡೆಯನಾದರೂ ನನ್ನ ಮುಂದೆ ಮಂಡಿಯೂರಿ ಕೂಡುವನು. ನಾ ಕರೆದುಕೊಂಡು ಹೋದಲ್ಲೆಲ್ಲ ನನ್ನೊಂದಿಗೆ ಸಾಮಾನ್ಯ ಪ್ರಜೆಯಂತೆ ಬರುವನು. ಆದರೆ ನನ್ನವನು ಸಾಮಾನ್ಯನಲ್ಲ. ಅವನು ಬರೀ ನನ್ನ ಆಸ್ತಿಯಲ್ಲ. ನಮ್ಮ ಭಾರತ ದೇಶದ ಆಸ್ತಿಯವನು…

ನನ್ನವನು ನಾನು ಅವನನ್ನು ಮುದ್ದಿಸಿ ಸಮಾಧಾನ ಮಾಡಲಿ ಅಂತಾನೆ ಕೆಲವು ಸಲ ಬೇಕಂತಲೇ ನನ್ನ ಮೇಲೆ ಮುನಿಸಿಕೊಳ್ಳುವನು. ಜೋರಾಗಿ ಅವನನ್ನು ಒಂದಸಲ ಅಪ್ಪಿಕೊಂಡರೆ ಸಾಕು ಅವನು ಎಲ್ಲ ಮರೆತು ನನ್ನೊಂದಿಗೆ ಪ್ರೀತಿಯಿಂದ ಮಾತಾಡುವನು…

ನನಗೆ ಎಷ್ಟೇ ಆಯಾಸವಾದರೂ, ನೋವಾದರೂ ಅವನೆದೆ ಮೇಲೆ ತಲೆಯಿಟ್ಟು ಮಲಗಿದರೆ ಸಾಕು ನನ್ನೆಲ್ಲ ನೋವು ಆಯಾಸ ಎಲ್ಲ ಆಟೋಮ್ಯಾಟಿಕ್ಕಾಗಿ ಮಾಯವಾಗುತ್ತವೆ. ನನ್ನ ಪೆನ್ ಕಿಲ್ಲರ್ ನನ್ನವನು…

Director Satishkumar

ನನ್ನವನು ಒಂಥರಾ ನೀರಿದ್ದಂತೆ. ಅವನು ಎಲ್ಲಿ ಬೇಕಾದರೂ, ಯಾರೊಂದಿಗೆ ಬೇಕಾದರೂ ಅಡಜಸ್ಟಾಗುತ್ತಾನೆ. ಏಕೆಂದರೆ ಅವನು ಜನರನ್ನು ಪ್ರೀತಿಸುತ್ತಾನೆ. ಬಡವ ಶ್ರೀಮಂತರೆನ್ನದೆ ಎಲ್ಲರೊಂದಿಗೆ ಬೆರೆಯುತ್ತಾನೆ‌…

ನನ್ನವನ ವ್ಯಕ್ತಿತ್ವ ಸಮುದ್ರದ ನೀರಿನಂತೆ. ನದಿ ನೀರು ಸಂಪೂರ್ಣವಾಗಿ ಕೊಳೆಯಾಗಬಹುದು. ಆದರೆ ಸಮುದ್ರದ ನೀರು ಕೊಳೆಯಾಗಲು ಸಾಧ್ಯವೇ ಇಲ್ಲ…

ನನ್ನವನು ಒಳ್ಳೆಯವರಿಗೆ ಬೆಳಕು ಕೋಡೊ ಸೂರ್ಯನಾದರೆ ಕೆಟ್ಟವರಿಗೆ ಬೀಸಿ ಮುಟ್ಟಿಸುವ ಸೂರ್ಯನಾಗಿರುವನು. ತನ್ನ ಗೆಳೆಯರು ಕಷ್ಟ ಅಂತಾ ಬಳಿ ಬಂದರೆ ತನ್ನನ್ನು ತಾನು ಅಡವಿಡುವ ಕರುಣಾಮಯಿ ನನ್ನವನು…

ಹಣಕ್ಕೆ ಎಲ್ಲ ಸಮಸ್ಯೆಗಳನ್ನು ಸಾಲ್ವ ಮಾಡುವ ಶಕ್ತಿಯಿದೆ. ಆದರೆ ಹಣದಿಂದ ಸಾಲ್ವ ಆಗದ ಸಮಸ್ಯೆಗಳನ್ನು ಸಾಲ್ವ ಮಾಡುವ ಶಕ್ತಿ ನನ್ನವನಿಗಿದೆ. ಹಣದಿಂದ ಕೊಂಡುಕೊಳ್ಳಲಾಗದ ವಸ್ತುಗಳನ್ನು ಸಂಪಾದಿಸುವ ಶಕ್ತಿ ನನ್ನವನಿಗಿದೆ…

ನಾನು ನನ್ನ ಜೀವನದಲ್ಲಿ ಸಂಪಾದಿಸಿದ ಅತಿ ದೊಡ್ಡ ಆಸ್ತಿಯೆಂದರೆ ಅದು ನನ್ನವನ ಪ್ರೀತಿ ಮತ್ತು ನಂಬಿಕೆ. ನನ್ನ ಜೀವನದ ಬೆಲೆ ಕಟ್ಟಲಾಗದ ಅತಿ ದೊಡ್ಡ ಆಸ್ತಿ ನನ್ನವನು. ನನ್ನ ಕನಸು, ಮನಸು, ಯಶಸ್ಸು ಎಲ್ಲವೂ ನನ್ನವನು…

ನನ್ನವನ ಬಗ್ಗೆ ಹೇಳಲು ಇನ್ನೂ ತುಂಬಾ ವಿಷಯಗಳಿವೆ. ಆದರೆ ಅವನು ನನ್ನವನು ಅಂತಾ ಖಾತ್ರಿಯಾದ ಖುಷಿಯಲ್ಲಿ ಪದಗಳು ಸಿಗುತ್ತಿಲ್ಲ. ಮತ್ತೆ ಟೈಮ ಸಿಕ್ಕಾಗ ನನ್ನ ಬಗ್ಗೆ, ನನ್ನವನ ಬಗ್ಗೆ, ನಮ್ಮ ಪ್ರೀತಿಯ ಬಗ್ಗೆ, ಸ್ನೇಹದ ಬಗ್ಗೆ ಹಾಗೂ ಸೋಶಿಯಲ್ ವಿಷಯಗಳ ಬಗ್ಗೆ ಮತ್ತೆ ಬರೆಯಲು ಪ್ರಯತ್ನಿಸುವೆ.‌‌..”

Director Satishkumar

    ಈ ಅಂಕಣ (Article) ನಿಮಗೆ ಇಷ್ಟವಾಗಿದ್ದರೆ ನಿಮ್ಮೆಲ್ಲ ಗೆಳೆಯರೊಡನೆ ಮತ್ತು ನೀವಿರುವ ಎಲ್ಲ ಕನ್ನಡ ಫೇಸ್ಬುಕ್ ಗ್ರೂಪಗಳಲ್ಲಿ ಇದನ್ನು ತಪ್ಪದೇ ಶೇರ್ (Share) ಮಾಡಿ. ಜೊತೆಗೆ ಪ್ರತಿದಿನ ಹೊಸಹೊಸ ಅಂಕಣಗಳನ್ನು, ಪ್ರೇಮಕಥೆಗಳನ್ನು, ಕವನಗಳನ್ನು ಉಚಿತವಾಗಿ ಓದಲು ತಪ್ಪದೆ ನನ್ನ ಫೇಸ್ಬುಕ್ ಪೇಜನ್ನು https://www.facebook.com/Directorsatishkumar/ (Director Satishkumar) ಲೈಕ್ ಮಾಡಿ.

Follow Me On : Facebook | Instagram | YouTube | Twitter

My Books : Kannada Books | Hindi Books | English Books

⚠ STRICT WARNING ⚠

Content Rights :

ಈ ಅಂಕಣದ ಎಲ್ಲ ಹಕ್ಕುಗಳನ್ನು ಡೈರೆಕ್ಟರ್ ಸತೀಶಕುಮಾರ ಹಾಗೂ ರೋರಿಂಗ್ ಕ್ರಿಯೇಷನ್ಸ್ ಪ್ರೈವೇಟ್ ಲಿಮಿಟೆಡ್ ಕಂಪನಿ ವತಿಯಿಂದ ಸಂಪೂರ್ಣವಾಗಿ ಕಾಯ್ದಿರಿಸಲಾಗಿದೆ. ಡೈರೆಕ್ಟರ್ ಸತೀಶಕುಮಾರ ಅವರ ಅನುಮತಿಯಿಲ್ಲದೆ ಈ ಅಂಕಣದ ಯಾವುದೇ ಭಾಗವನ್ನು ಕಾಪಿ ಮಾಡುವಂತಿಲ್ಲ, ಬೇರೆ ಭಾಷೆಗಳಿಗೆ ಅನುವಾದಿಸುವಂತಿಲ್ಲ ಮತ್ತು ಇದನ್ನು ಬೇರೆಡೆಗೆ ಪ್ರಕಟಿಸುವಂತಿಲ್ಲ. ಯಾವುದೇ ಸಾಮಾಜಿಕ ಜಾಲತಾಣಗಳಲ್ಲಿ ಪೋಸ್ಟ್ ಮಾಡುವಂತಿಲ್ಲ. ಮುದ್ರಣ ಮಾಡುವಂತಿಲ್ಲ. ಒಂದು ವೇಳೆ ಯಾರಾದರೂ ಕಾಪಿ ರೈಟ್ಸ್ ನಿಯಮಗಳನ್ನು ಉಲ್ಲಂಘಿಸಿದರೆ ಅವರ ಮೇಲೆ ಸೂಕ್ತ ಕಾನೂನು ಕ್ರಮ ಕೈಗೊಳ್ಳಲಾಗುವುದು ಹಾಗೂ ಆಗಿರುವ ನಷ್ಟವನ್ನು ಅವರಿಂದಲೇ ವಸೂಲಿ ಮಾಡಲಾಗುವುದು.

All Rights of this article are fully reserved by Director Satishkumar and Roaring Creations Private Limited India. No part of this article can be copied, translated or re published anywhere without the written permission of Director Satishkumar. If such violation of copy rights found to us, then we legally punish to copy cats and recover our loss by them only.

© Director Satishkumar and Roaring Creations Private Limited, India.

Rani

Entrepreneur and Producer at Roaring Creations Films.